ಯುವ ನಿಧಿ ಯೋಜನೆ; 6,641 ನಿರುದ್ಯೋಗಿಗಳ ಅನರ್ಹಗೊಳಿಸಿದ ಯುಯುಸಿಎಂಎಸ್ ತಂತ್ರಾಂಶ

ಬೆಂಗಳೂರು;  ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೋಮಾ ಪದವಿದಾರರು ನಿರುದ್ಯೋಗ ಭತ್ಯೆ ಪಡೆಯಲು  ಯುವನಿಧಿ ಯೋಜನೆಗಾಗಿ  ಸಲ್ಲಿಸಿದ್ದ ಅರ್ಜಿಗಳನ್ನು  ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್‌) ತಂತ್ರಾಂಶದ ಮೂಲದ 6,641 ಅರ್ಜಿಗಳನ್ನು ಅನರ್ಹಗೊಳಿಸಿರುವುದು ಇದೀಗ ಬಹಿರಂಗವಾಗಿದೆ.

 

ಯುಯುಸಿಎಂಎಸ್‌ ತಂತ್ರಾಂಶವೇ ಹಲವು ಲೋಪಗಳಿಂದ ಕೂಡಿವೆ. ಅಂಕಪಟ್ಟಿಗೆ ಸುರಕ್ಷತೆ ಒದಗಿಸಿ, ನಕಲು ದಂಧೆಗೆ ಕೊನೆ ಹಾಡಲು ಪರಿಚಯಿಸಿದ್ದ ಡಿಜಿಟಲ್‌ ವ್ಯವಸ್ಥೆಯಾಗಿರುವ ಯುಯುಸಿಎಂಎಸ್‌ನಲ್ಲಿಯೇ ಹತ್ತಾರು ತಾಂತ್ರಿಕ ತೊಂದರೆಗಳು ಉದ್ಭವಿಸಿವೆ.

 

ಅಲ್ಲದೆ ಇದೇ ತಂತ್ರಾಂಶದಿಂದ ಸಾವಿರಾರು ವಿದ್ಯಾರ್ಥಿಗಳ ಅಂಕಪಟ್ಟಿಗಳಿಂದ ಅಂಕಗಳೇ ನಾಪತ್ತೆಯಾಗಿದ್ದವು.

 

ಇಂತಹ ತಂತ್ರಾಂಶದ ಮೂಲಕ 6,641 ನಿರುದ್ಯೋಗಿ ಪದವೀಧರರನ್ನು ಯುವ ನಿಧಿ ಯೋಜನೆಯಿಂದಲೇ ಅನರ್ಹಗೊಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

 

ಅಲ್ಲದೇ ಐಟಿ ಮತ್ತಿ ಜಿಎಸ್‌ಟಿ ವ್ಯಾಪ್ತಿಗೊಳಪಡುವ   268 ನಿರುದ್ಯೋಗಿಗಳನ್ನೂ ಯುವ ನಿಧಿ ಯೋಜನೆಯಿಂದಲೇ ಅನರ್ಹಗೊಳಿಸಲಾಗಿದೆ. ಅದೇ ರೀತಿ ಋಣಾತ್ಮಕವಾಗಿ ಸ್ವಯಂ ಘೋಷಣೆ ಸಲ್ಲಿಸಿದ್ದ  34,670 ಮಂದಿಯನ್ನು ಯೋಜನೆಯಿಂದ ಹೊರಗಿಡಲಾಗಿದೆ.

 

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ್ದ  ಪದವೀಧರರು ಮತ್ತು ಡಿಪ್ಲೋಮಾದಾರರ ಪೈಕಿ  ಶೇ. 46.65ರಷ್ಟು ಯುವಜನರು ಅರ್ಹರಾಗಿರುವುದಿಲ್ಲ ಎಂದು ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಮೀಕ್ಷೆ ವರದಿಯು ಇತ್ತೀಚೆಗಷ್ಟೇ  ಹೊರಗೆಡವಿತ್ತು. ಇದರ ಬೆನ್ನಲ್ಲೇ ಇದೀಗ ಯುಯುಸಿಎಂಎಸ್‌, ಐಟಿ ಜಿಎಸ್‌ಟಿ ಪರಿಶೀಲನೆ ವೇಳೆಯಲ್ಲಿ ಈ ಯೋಜನೆಯಿಂದ ಅನರ್ಹಗೊಂಡವರ ಅಂಕಿ ಸಂಖ್ಯೆಗಳು ಮುನ್ನೆಲೆಗೆ ಬಂದಿವೆ.

 

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು 2022-23, 2023-24 ಮತ್ತು 2024-25ನೇ ಸಾಲಿಗೆ ಸಂಬಂಧಿಸಿದಂತೆ ಆರ್ಥಿಕ ಪ್ರಗತಿ ಕುರಿತು ಸಭೆ ನಡೆದಿತ್ತು. ಈ ಸಭೆಯಲ್ಲಿ ಯುವ ನಿಧಿ ಯೋಜನೆಯ ಕುರಿತೂ ಚರ್ಚೆ ನಡೆದಿದೆ. ಈ ಸಭೆಯಲ್ಲಿ ಅಧಿಕಾರಿಗಳು ಮಂಡಿಸಿದ್ದ ಟಿಪ್ಪಣಿ ಮತ್ತು ಅಂಕಿ ಸಂಖ್ಯೆಗಳ ವಿವರಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಯುವ ನಿಧಿ ಯೋಜನೆಗೆ 2025ರ ಜನವರಿ 6ರ ಅಂತ್ಯಕ್ಕೆ ಒಟ್ಟಾರೆ 1,97,060 ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ 1,61,883 ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ  216.38 ಕೊಟಿ ರು. ಮೊತ್ತದ ನಿರುದ್ಯೋಗ ಭತ್ಯೆ ಪಾವತಿಸಿರುವುದು ತಿಳಿದು ಬಂದಿದೆ.

 

 

ಅದೇ ರೀತಿ ಯುವ ನಿಧಿ ಯೋಜನೆಗೆ ತಾತ್ಕಾಲಿಕ ಪ್ರಮಾಣ ಪತ್ರಗಳನ್ನು (ಪಿಡಿಸಿ) ವಿವಿಧ ವಿಶ್ವವಿದ್ಯಾಲಯಗಳಿಂದ ಹಾಗೂ ಬೋರ್ಡ್‌ಗಳಿಂದ ನ್ಯಾಡ್‌ ಪೋರ್ಟಲ್‌ನಲ್ಲಿ ಅಪ್‌ಲೋಡ ಮಾಡುವುದು ಕಡ್ಡಾಯ. ಈ ಪೋರ್ಟಲ್‌ ಮೂಲಕ 2023ರಲ್ಲಿ 4,88,112, 2024ರಲ್ಲಿ 2,96,697 ಮಂದಿ ತಾತ್ಕಾಲಿಕ ಪದವಿ ಪ್ರಮಾಣ ಪತ್ರ ಪಡೆದವರು ನೋಂದಣಿ ಮಾಡಿಸಿದ್ದರು.

 

 

ಅದೇ ರೀತಿ 2023ರಲ್ಲಿ 38,511 ಮಂದಿ, 2024ರಲ್ಲಿ 3,29,529 ಮಂದಿ ಡಿಪ್ಲೋಮಾ  ಪ್ರಮಾಣ ಪತ್ರ ಪಡೆದವರು ಸೇರಿದಂತೆ ಒಟ್ಟಾರೆ ಎರಡು ವರ್ಷದಲ್ಲಿ 8,56,152 ಮಂದಿ ಅಭ್ಯರ್ಥಿಗಳ  ವಿವರಗಳನ್ನು ನ್ಯಾಡ್‌ ಪೋರ್ಟಲ್‌ನಲ್ಲಿ ಇಂಡೀಕರಿಸಿರುವುದು ಗೊತ್ತಾಗಿದೆ.

 

ಶೇ.45.33ರಷ್ಟು 2023ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೋಮಾ ಪಡೆದವರು ಕುಟುಂಬದವರಲ್ಲಿ ಒಬ್ಬರು ಇರುತ್ತಾರೆ ಎಂದು ತಿಳಿಸಿರುತ್ತಾರೆ. ಶೇ.42.03ರಷ್ಟು ಯೋಜನೆಗೆ ನೋಂದಾಯಿಸಿರುತ್ತಾರೆ. ಶೇ.46.65ರಷ್ಟು ಯುವಜನರು ಯೋಜನೆಗೆ ಅರ್ಹರಾಗಿರುವುದಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ನಡೆಸಿದ್ದ ಸಮೀಕ್ಷಾ ವರದಿಯಲ್ಲಿ ವಿವರಿಸಲಾಗಿತ್ತು.

 

ಯುವನಿಧಿ ಯೋಜನೆಗೆ ಶೇ. 46.65ರಷ್ಟು ಯುವಜನರು ಅನರ್ಹ; ಸಮೀಕ್ಷೆ ವರದಿ

 

ಪದವೀಧರರಿಗೆ ನಿರುದ್ಯೋಗಿ ಭತ್ಯೆ ನೀಡುವ ಯುವ ನಿಧಿ ಯೋಜನೆಗೆ ಮಾರ್ಚ್‌ 13ರ ಅಂತ್ಯಕ್ಕೆ ಒಟ್ಟು 2,409 ಅರ್ಜಿಗಳು ತಿರಸ್ಕೃತಗೊಂಡಿವೆ. ಈ ಪೈಕಿ 1,645 ಫಲಾನುಭವಿಗಳ ಆಧಾರ್‌ ಸಂಖ್ಯೆಯು ಬ್ಯಾಂಕ್‌ ಖಾತೆಯೊಡನೆ ಸೀಡ್‌ ಆಗಿರದ ಕಾರಣ ನೇರ ನಗದು ವರ್ಗಾವಣೆ ಆಗಿರಲಿಲ್ಲ.

 

ಯುವ ನಿಧಿ; 2,409 ಅರ್ಜಿಗಳು ತಿರಸ್ಕೃತ, ಮೂರು ತಿಂಗಳಲ್ಲಿ 15.89 ಕೋಟಿ ನಿರುದ್ಯೋಗ ಭತ್ಯೆ ಪಾವತಿ

 

ಯುವ ನಿಧಿ ಯೋಜನೆಯಡಿ ಪದವಿಧರರಿಗೆ/ಸ್ನಾತಕೋತ್ತರ ಪದವೀಧರರಿಗೆ ಪ್ರತಿ ತಿಂಗಳು 3,000 ರು ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗೆ ಪ್ರತಿ ತಿಂಗಳು 1,500 ರು. ನಿರುದ್ಯೋಗ ಭತ್ಯೆ ಯೋಜನೆಯಡಿ ಒಟ್ಟಾರೆ 1,43,549 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ಧಾರೆ. ಈ ಪೈಕಿ ನ್ಯಾಡ್‌ ಪೋರ್ಟಲ್‌ನಲ್ಲಿ 38,511 ಅಭ್ಯರ್ಥಿಗಳು ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಅಪ್‌ಲೋಡ್‌ ಮಾಡಿದ್ದರು.

 

ಯುವನಿಧಿ ಚಾಲನೆ ಸಮಾರಂಭಕ್ಕೆ ಕಡ್ಡಾಯವಾಗಿ ಹಾಜರಾಗಿ, ಗೈರಾದರೇ ಕಠಿಣ ಶಿಸ್ತು ಕ್ರಮ; ಸಿಮ್ಸ್‌ ನಿರ್ದೇಶಕರ ಎಚ್ಚರಿಕೆ

 

2023ರ ಡಿಸೆಂಬರ್‍‌ ಅಂತ್ಯಕ್ಕೆ 2,617 ಅಭ್ಯರ್ಥಿಗಳು 0.79 ಕೋಟಿ ರು., ಜನವರಿ 2024ರಲ್ಲಿ 21,858 ಅಭ್ಯರ್ಥಿಗಳು 6.56 ಕೋಟಿ ರು., ಫೆಬ್ರುವರಿಯ್ಲಿ 28,926 ಅಭ್ಯರ್ಥಿಗಳು 8.55 ಕೋಟಿ ರು ಸೇರಿ ಒಟ್ಟಾರೆ 15.89 ಕೋಟಿ ರು.ಮೊತ್ತದ ನಿರುದ್ಯೋಗ ಭತ್ಯೆ ಪಡೆದಿದ್ದರು.

 

ಯುವನಿಧಿ; ಅಂತಿಮಗೊಳ್ಳದ ರೂಪುರೇಷೆ, 5.29 ಲಕ್ಷ ಪದವೀಧರರಿಗೆ ವಾರ್ಷಿಕ 444.49 ಕೋಟಿ ರು ಅಂದಾಜು

38,511 ಅಭ್ಯರ್ಥಿಗಳ ಪೈಕಿ ತಾಂತ್ರಿಕ ಶಿಕ್ಷಣ ಇಲಾಖೆಯು 16,863, ಪ್ಯಾರಾ ಮೆಡಿಕಲ್‌ ಬೋರ್ಡ್‌ 10,254, ಜಿಟಿಟಿಸಿ 825, ಕರ್ನಾಟಕ ನರ್ಸಿಂಗ್‌ ಡಿಪ್ಲೋಮಾ ಪರೀಕ್ಷಾ ಮಂಡಳಿಯು 6,769, ಡಿ ಫಾರ್ಮಾದ 3,800 ಅಭ್ಯರ್ಥಿಗಳಿದ್ದಾರೆ.ಪದವೀಧರರ ಪೈಕಿ 4,84,981 ಅಭ್ಯರ್ಥಿಗಳು ಸೇರಿ ಒಟ್ಟಾರೆ 5,23, 492 ಅಭ್ಯರ್ಥಿಗಳ ಪ್ರಮಾಣ ಪತ್ರಗಳು ನ್ಯಾಡ್‌ ಪೋರ್ಟಲ್‌ನಲ್ಲಿ ಅಪ್ಲೋಡ್‌ ಆಗಿತ್ತು.

 

SUPPORT THE FILE

Latest News

Related Posts