ಯುವನಿಧಿ ಯೋಜನೆಗೆ ಶೇ. 46.65ರಷ್ಟು ಯುವಜನರು ಅನರ್ಹ; ಸಮೀಕ್ಷೆ ವರದಿ

ಬೆಂಗಳೂರು;  ಪದವೀಧರರು ಮತ್ತು ಡಿಪ್ಲೋಮಾದಾರರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಗೆ ಶೇ. 46.65ರಷ್ಟು ಯುವಜನರು ಅರ್ಹರಾಗಿರುವುದಿಲ್ಲ ಎಂದು ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಮೀಕ್ಷೆ ವರದಿಯು ಹೊರಗೆಡವಿದೆ.

 

ಐದು ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿರುವ ಹಾಗೂ ಗ್ಯಾರಂಟಿಗಳನ್ನು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ನಡೆಸಿದ್ದ ಸಭೆಯಲ್ಲಿ ಸಮೀಕ್ಷೆಯ ವಿವರಗಳನ್ನು ಅಧಿಕಾರಿಗಳು ಹಂಚಿಕೊಂಡಿದ್ದಾರೆ.

 

ಪ್ರಾಧಿಕಾರದ ಅಧ್ಯಕ್ಷ ಹೆಚ್‌ ಎಂ ರೇವಣ್ಣ ಅಧ್ಯಕ್ಷತೆಯಲ್ಲಿ 2024ರ ಮಾರ್ಚ್‌ 14ರಂದು ಸಭೆ ನಡೆದಿತ್ತು. ರಾಜ್ಯಾದ್ಯಂತ ನಡೆಯುತ್ತಿರುವ ಗ್ಯಾರಂಟಿ ಸಮೀಕ್ಷೆ ಪ್ರಗತಿ ಕುರಿತು ಈ ಸಭೆಯಲ್ಲಿ ವಿಶ್ಲೇಷಣೆ ನಡೆಸಿದೆ. ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ನಡೆಸಿದ್ದ ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಶೇ.45.33ರಷ್ಟು 2023ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೋಮಾ ಪಡೆದವರು ಕುಟುಂಬದವರಲ್ಲಿ ಒಬ್ಬರು ಇರುತ್ತಾರೆ ಎಂದು ತಿಳಿಸಿರುತ್ತಾರೆ. ಶೇ.42.03ರಷ್ಟು ಯೋಜನೆಗೆ ನೋಂದಾಯಿಸಿರುತ್ತಾರೆ. ಶೇ.46.65ರಷ್ಟು ಯುವಜನರು ಯೋಜನೆಗೆ ಅರ್ಹರಾಗಿರುವುದಿಲ್ಲ. ಶೇ.31.71ರಷ್ಟು ನೋಂದಣಿ ಪ್ರಕ್ರಿಯೆ ಸುಲಭವಾಗಿದೆ ಎಂದು ತಿಳಿಸಿರುವುದು ಗೊತ್ತಾಗಿದೆ.

 

ಶೇ.72.58ರಷ್ಟು ಯುವ ನಿಧಿ ಹಣದಿಂದಾಗಿ ಒತ್ತಡ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಶೇ.37ರಷ್ಟು ಹಣ ಬಂದಿದೆ ಎಂದು ತಿಳಿಸಿರುತ್ತಾರೆ. ಈ ಪೈಕಿ ಶೇ.20.51ರಷ್ಟು ಯುವ ಜನ ಹಣವನ್ನು ಅರ್ಜಿಗಳು ಮತ್ತು ಪರೀಕ್ಷೆಯ ಉಪಯೋಕ್ಕಾಗಿ, ಶೇ. 19.72ಸರಷ್ಟು ಬ್ಯಾಂಕ್‌ ಖಾತೆಯಲ್ಲಿ ಉಳಿಸಿಕೊಳ್ಳುತ್ತಾರೆ ಎಂದು ಹೇಳಲಾಗಿದೆ.

 

ಶೇ. 19.08ರಷ್ಟು ಕುಟುಂಬಕ್ಕೆ ನೀಡುತ್ತಾರೆ. ಶೇ.17.91ರಷ್ಟು ಕಾಲೇಜು, ತರಬೇತಿ ಶುಲ್ಕಕ್ಕಾಗಿ ಹಾಗೂ ಶೇ. 26.76ರಷ್ಟು ಇತರೆ ಉದ್ದೇಶಕ್ಕಾಗಿ ಬಳಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

 

ಪದವೀಧರರಿಗೆ ನಿರುದ್ಯೋಗಿ ಭತ್ಯೆ ನೀಡುವ ಯುವ ನಿಧಿ ಯೋಜನೆಗೆ ಮಾರ್ಚ್‌ 13ರ ಅಂತ್ಯಕ್ಕೆ ಒಟ್ಟು 2,409 ಅರ್ಜಿಗಳು ತಿರಸ್ಕೃತಗೊಂಡಿವೆ. ಈ ಪೈಕಿ 1,645 ಫಲಾನುಭವಿಗಳ ಆಧಾರ್‌ ಸಂಖ್ಯೆಯು ಬ್ಯಾಂಕ್‌ ಖಾತೆಯೊಡನೆ ಸೀಡ್‌ ಆಗಿರದ ಕಾರಣ ನೇರ ನಗದು ವರ್ಗಾವಣೆ ಆಗಿಲ್ಲ.

ಯುವ ನಿಧಿ; 2,409 ಅರ್ಜಿಗಳು ತಿರಸ್ಕೃತ, ಮೂರು ತಿಂಗಳಲ್ಲಿ 15.89 ಕೋಟಿ ನಿರುದ್ಯೋಗ ಭತ್ಯೆ ಪಾವತಿ

ಯುವ ನಿಧಿ ಯೋಜನೆಯಡಿ ಪದವಿಧರರಿಗೆ/ಸ್ನಾತಕೋತ್ತರ ಪದವೀಧರರಿಗೆ ಪ್ರತಿ ತಿಂಗಳು 3,000 ರು ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗೆ ಪ್ರತಿ ತಿಂಗಳು 1,500 ರು. ನಿರುದ್ಯೋಗ ಭತ್ಯೆ ಯೋಜನೆಯಡಿ ಒಟ್ಟಾರೆ 1,43,549 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ಧಾರೆ. ಈ ಪೈಕಿ ನ್ಯಾಡ್‌ ಪೋರ್ಟಲ್‌ನಲ್ಲಿ 38,511 ಅಭ್ಯರ್ಥಿಗಳು ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಅಪ್‌ಲೋಡ್‌ ಮಾಡಿದ್ದಾರೆ.

 

ಇದಕ್ಕೆ ಸಂಬಂಧಿಸಿದಂತೆ ಇಲಾಖೆಯ ಅಂಕಿ ಅಂಶಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ವಿವಿಧ ಹಂತಗಳಲ್ಲಿ ಒಟ್ಟಾರೆ 2,409 ಅಭ್ಯರ್ಥಿಗಳ ಅರ್ಜಿಗಳು ತಿರಸ್ಕೃತಗೊಂಡಿವೆ. ಆಧಾರ ಸಂಖ್ಯೆಯು ಬ್ಯಾಂಕ್‌ ಖಾತೆಯೊಡನೆ ಸೀಡ್‌ ಆಗಿರದ ಕಾರಣ 1,645 ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಯಾಗಿಲ್ಲ ಎಂಬುದು ತಿಳಿದು ಬಂದಿದೆ.

 

ಮಾರ್ಚ್‌ ತಿಂಗಳಲ್ಲಿ 62,995 ಪದವೀಧರರಿಗೆ 18.90 ಕೋಟಿ ರು, ಮತ್ತು 2,010 ಡಿಪ್ಲೋಮಾದಾರರಿಗೆ .30 ಕೋಟಿ ರು ಸೇರಿದಂತೆ ಒಟ್ಟಾರೆ 65,005 ಫಲಾನುಭವಿ ಅಭ್ಯರ್ಥಿಗಳಿಗೆ 19.20 ಕೋಟಿ ರು. ವೆಚ್ಚವಾಗಲಿದೆ ಎಂದು ತಿಳಿದು ಬಂದಿದೆ.

 

2023ರ ಡಿಸೆಂಬರ್‍‌ ಅಂತ್ಯಕ್ಕೆ 2,617 ಅಭ್ಯರ್ಥಿಗಳು 0.79 ಕೋಟಿ ರು., ಜನವರಿ 2024ರಲ್ಲಿ 21,858 ಅಭ್ಯರ್ಥಿಗಳು 6.56 ಕೋಟಿ ರು., ಫೆಬ್ರುವರಿಯ್ಲಿ 28,926 ಅಭ್ಯರ್ಥಿಗಳು 8.55 ಕೋಟಿ ರು ಸೇರಿ ಒಟ್ಟಾರೆ 15.89 ಕೋಟಿ ರು.ಮೊತ್ತದ ನಿರುದ್ಯೋಗ ಭತ್ಯೆ ಪಡೆದಿರುವುದು ಗೊತ್ತಾಗಿದೆ.

 

ಯುವನಿಧಿ; ಅಂತಿಮಗೊಳ್ಳದ ರೂಪುರೇಷೆ, 5.29 ಲಕ್ಷ ಪದವೀಧರರಿಗೆ ವಾರ್ಷಿಕ 444.49 ಕೋಟಿ ರು ಅಂದಾಜು

38,511 ಅಭ್ಯರ್ಥಿಗಳ ಪೈಕಿ ತಾಂತ್ರಿಕ ಶಿಕ್ಷಣ ಇಲಾಖೆಯು 16,863, ಪ್ಯಾರಾ ಮೆಡಿಕಲ್‌ ಬೋರ್ಡ್‌ 10,254, ಜಿಟಿಟಿಸಿ 825, ಕರ್ನಾಟಕ ನರ್ಸಿಂಗ್‌ ಡಿಪ್ಲೋಮಾ ಪರೀಕ್ಷಾ ಮಂಡಳಿಯು 6,769, ಡಿ ಫಾರ್ಮಾದ 3,800 ಅಭ್ಯರ್ಥಿಗಳಿದ್ದಾರೆ.ಪದವೀಧರರ ಪೈಕಿ 4,84,981 ಅಭ್ಯರ್ಥಿಗಳು ಸೇರಿ ಒಟ್ಟಾರೆ 5,23, 492 ಅಭ್ಯರ್ಥಿಗಳ ಪ್ರಮಾಣ ಪತ್ರಗಳು ನ್ಯಾಡ್‌ ಪೋರ್ಟಲ್‌ನಲ್ಲಿ ಅಪ್ಲೋಡ್‌ ಆಗಿರುವುದು ತಿಳಿದು ಬಂದಿದೆ.

 

ವಿಟಿಯುನಲ್ಲಿ 49,961, ಗುಲ್ಬರ್ಗಾ ವಿವಿಯಲ್ಲಿ 46,448, ರಾಜೀವ್‌ಗಾಂಧಿ ಆರೋಗ್ಯ ವಿವಿ 36,494, ಬೆಂಗಳೂರು ವಿವಿ 27,440, ಮೈಸೂರು ವಿವಿ 20,500, ಬೆಂಗಳೂರು ನಗರ ವಿವಿ 20,159, ಮಂಗಳೂರು ವಿವಿ 19,092, ಬೆಂಗಳೂರು ಉತ್ತರ 17,458, ಕರ್ನಾಟಕ ವಿವಿ ಧಾರವಾಡ 17,009, ವಿಜಯನಗರ ಕೃಷ್ಣದೇವರಾಯ ವಿವಿ 15,738, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ 15,571, ಕುವೆಂಪು ವಿವಿ 15,277, ದಾವಣಗೆರೆ ವಿವಿ 14,982, ತುಮಕೂರು ವಿವಿ 11,711, ಕರ್ನಾಟಕ ರಾಜ್ಯ ಮುಕ್ತ ವಿವಿ 8,823, ಕ್ರೈಸ್ಟ್‌ ವಿವಿ 8,460, ಜೈನ್‌ ವಿವಿ 7,815, ಮಣಿಪಾಲ್ ಅಕಾಡೆಮಿ ಆಫ್‌ ಹೈಯರ್‍‌ ಎಜುಕೇಷನ್‌ 6,512, ಕರ್ನಾಟಕ ಕಾನೂನು ವಿವಿ 4,729, ರೇವಾ ವಿವಿ 4,120 ವಿದ್ಯಾರ್ಥಿಗಳ ವಿವರಗಳನ್ನು ಒದಗಿಸಿದೆ.

 

ಅದೇ ರೀತಿ ಪಿಇಎಸ್‌ನಲ್ಲಿ 3,918, ಪ್ರೆಸಿಡೆನ್ಸಿ ವಿವಿ 3,693, ಜೆಎಸ್‌ಎಸ್‌ ಅಕಾಡೆಮಿ ಆಫ್‌ ಹೈಯರ್‍‌ ಎಜುಕೇಷನ್‌ನಲ್ಲಿ 2,751, ಯೇನಪೋವದಲ್ಲಿ 2,252, ಸುರತ್ಕಲ್‌ನ ಎನ್‌ಐಐಟಿಯಲ್ಲಿ 2,008, ದಯಾನಂದ ಸಾಗರ್‍‌ ವಿವಿಯಲ್ಲಿ 1,857, ಎಂ ಎಸ್‌ ರಾಮಯ್ಯ ವಿವಿ 1,834, ಶರಣಬಸವ ವಿವಿ 1,631, ಕೆಎಲ್‌ಇ ಬೆಳಗಾವಿಯಲ್ಲಿ 1,535, ನಿಟ್ಟೆ ಮಂಗಳೂರು 1,254, ಬೆಂಗಳೂರು ಕೃಷಿ ವಿವಿಯಲ್ಲಿ 1,251, ಜೆಎಸ್‌ಎಸ್‌ ವಿಜ್ಞಾನ ಮತ್ತು ತಾಂತ್ರಿಕ ವಿವಿ 1,090, ಅಲೈಯನ್ಸ್‌ ವಿವಿ 1,042, ಸಿದ್ದಾರ್ಥ ಅಕಾಡೆಮಿ ಹೈಯರ್‍‌ ಎಜುಕೇಷನ್‌ 986, ಆದಿಚುಂಚನಗಿರಿ ವಿಇ 970, ಧಾರವಾಡ ಕೃಷಿ ವಿವಿ 952, ಐಐಎಸ್ಸಿ ಬೆಂಗಳೂರು 930, ಸಿಎಂಆರ್‍‌ ವಿವಿ 928, ಮಂಡ್ಯ ವಿವಿ 838, ಶ್ರೀನಿವಾಸ ವಿವಿ 799, ಗಾರ್ಡನ್‌ ಸಿಟಿ ವಿವಿ 737 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ಯುವನಿಧಿ ಚಾಲನೆ ಸಮಾರಂಭಕ್ಕೆ ಕಡ್ಡಾಯವಾಗಿ ಹಾಜರಾಗಿ, ಗೈರಾದರೇ ಕಠಿಣ ಶಿಸ್ತು ಕ್ರಮ; ಸಿಮ್ಸ್‌ ನಿರ್ದೇಶಕರ ಎಚ್ಚರಿಕೆ

 

ಹಾಗೆಯೇ ಬಾಗಲಕೋಟೆಯ ತೋಟಗಾರಿಕೆ ವಿವಿಯಲ್ಲಿ 663, ಪಶುವೈದ್ಯಕೀಯ ಮೀನುಗಾರಿಕೆ ವಿವಿಯ 55, ನೃಪತುಂಗ ವಿವಿ 510, ಕೇಂದ್ರೀಯ ವಿವಿ 508, ಸಂಸ್ಕೃತ ವಿವಿ 507, ಅಜೀಂ ಪ್ರೇಮ್‌ ಜಿ ವಿವಿ 506, ಶಿವಮೊಗ್ಗ ಕೃಷಿ ವಿವಿ 496, ಖ್ವಾಜಾ ಬಂದೇ ನವಾಜ್‌ ವಿವಿ 411, ದೇವರಾಜ ಅರಸ್‌ ಅಕಾಡೆಮಿ ಆಫ್‌ ಹೈಯರ್‍‌ ಎಜುಕೇಷನ್‌ 400, ಬಿಎಲ್‌ಡಿಇ ವಿವಿ 356, ಬೆಂಗಳೂರಿನ ಇಂಟರ್‍‌ ನ್ಯಾಷನಲ್‌ ಇನ್ಸಿಟಿಟ್ಯೂಟ್‌ ಆಫ್‌ ಇನ್ಪರ್ಮಶನ್‌ ಟೆಕ್ನಾಲಜಿ 332, ಧರ್ಮಸ್ಥಳ ಮಂಜುನಾಥ ವಿವಿ 229, ಕರ್ನಾಟಕ ಪಂಚಾಯತ್‌ರಾಜ್‌ ವಿವಿ 229, ನಿಮ್ಹಾನ್ಸ್‌ 170, ಸ್ವಾಮಿ ವಿವೇಕಾನಂದ ಯೋಗ ಅನುಶಾಸನ ಸಂಸ್ಥೆ 160, ಶ್ರೀ ಸತ್ಯಸಾಯಿ ಯುನಿವರ್ಸಿಟಿ ಆಫ್‌ ಹ್ಯೂಮನ್‌ ಎಕ್ಸ್‌ಲೆನ್ಸ್‌ 123, ಜವಾಹರ್‍‌ಲಾಲ್‌ ನೆಹರು ಸೆಂಟರ್‍‌ ಆಫ್‌ ಅಡ್ವಾನ್ಸ್ಡ್ ಸೈಂಟಿಫೀಕ್‌ ರೀಸರ್ಚ್‌ 83, ರೈ ಟೆಕ್ನಾಲಜಿ 77, ಡಾ ಬಿ ಆರ್‍‌ ಅಂಬೇಡ್ಕರ್‍‌ ಆಫ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ವಿವಿ 41, ಗಂಗೂಬಾಯಿ ಸಂಗೀತ ವಿವಿ 16, ಸ್ವಾಯತ್ತ ಕಾಲೇಜುಗಳು 37,747 ವಿದ್ಯಾರ್ಥಿಗಳ ವಿವರಗಳನ್ನು ನ್ಯಾಡ್‌ ಪೋರ್ಟಲ್‌ನಲ್ಲಿ ಅಪ್ಲೋಡ್‌ ಮಾಡಿರುವುದು ಗೊತ್ತಾಗಿದೆ.

 

ಇನ್ನು ಫೆಬ್ರುವರಿ ಅಂತ್ಯಕ್ಕೆ 5,561 ಅಭ್ಯರ್ಥಿಗಳು, ಮಾರ್ಚ್‌ 13ರ ಅಂತ್ಯಕ್ಕೆ 3,675 ಆಭ್ಯರ್ಥಿಗಳೂ ಸ್ವಯಂ ಘೋಷಣೆ ನೀಡಿಲ್ಲ. ಯುವ ನಿಧಿ ಯೋಜನೆಗೆ ಜಿಲ್ಲಾವಾರು ಪಟ್ಟಿಯಲ್ಲಿ ಬೆಳಗಾವಿಯಲ್ಲಿ 13,326, ಬೆಂಗಳೂರು ನಗರ 10,363, ಕಲ್ಬುರ್ಗಿಯಲ್ಲಿ 9,583, ರಾಯಚೂರು 9,323 ನೋಂದಣಿ ಆಗಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts