ಬೆಂಗಳೂರು; ಮೈಸೂರು ನಗರದಲ್ಲಿರುವ ವಕ್ಫ್ ಆಸ್ತಿಯನ್ನು ಮಜಲಿಸ್-ಎ-ರಿಫಾಬುಲ್- ಮುಸ್ಲಿಮೀನ್ ಸಂಸ್ಥೆಗೆ ಗುತ್ತಿಗೆ ಪತ್ರ ನೀಡುವ ಮುನ್ನ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಯಾವುದೇ ಅನುಮೋದನೆ, ಮಂಜೂರಾತಿಯನ್ನು ಪಡೆದಿರಲಿಲ್ಲ ಎಂಬ ಸಂಗತಿಯನ್ನು ಉಪ ಲೋಕಾಯುಕ್ತರಾಗಿದ್ದ ಎನ್ ಆನಂದ್ ಅವರು ಬಯಲು ಮಾಡಿರುವುದು ಇದೀಗ ಬಹಿರಂಗವಾಗಿದೆ.
ವಕ್ಫ್ ಆಸ್ತಿ ದುರುಪಯೋಗ, ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಉಪ ಲೋಕಾಯುಕ್ತ ಎನ್ ಆನಂದ್ ಅವರು ನೀಡಿರುವ ತನಿಖಾ ವರದಿಯಲ್ಲಿ ಹಲವು ಮೈಸೂರಿನ ಹಲವು ಪ್ರಕರಣಗಳ ಕುರಿತು ವಿವರಗಳಿವೆ. ಈ ವರದಿಯನ್ನು ‘ದಿ ಫೈಲ್’ ಆರ್‍ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ಉಪ ಲೋಕಾಯುಕ್ತರ ತನಿಖಾ ವರದಿಯಲ್ಲಿ ಉಲ್ಲೇಖವಾಗಿರುವ ಮಜಲಿಸ್-ಎ-ರಿಫಾಬುಲ್- ಮುಸ್ಲಿಮೀನ್ ಸಂಸ್ಥೆಯ ಪ್ರಕರಣದ ಕುರಿತು ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ಸಲ್ಲಿಸಿದ್ದ ವರದಿಯಲ್ಲಿಯೂ ಪ್ರಸ್ತಾಪವಾಗಿದೆ.
ವಕ್ಫ್ ಆಸ್ತಿಯನ್ನು ಮಜಲಿಸ್-ಎ-ರಿಫಾಬುಲ್- ಮುಸ್ಲಿಮೀನ್ ಸಂಸ್ಥೆಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಇದೊಂದು ನೋಂದಾಯಿತವಲ್ಲದ ಗುತ್ತಿಗೆ ಪತ್ರವಾಗಿತ್ತು. ಇದಕ್ಕೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಮಂಜೂರಾತಿ ಪಡೆದಿಲ್ಲ.
ಪ್ರಸ್ತುತ (ವರದಿ ಸಲ್ಲಿಸಿದ ವರ್ಷ) ಈ ಆಸ್ತಿಯು ಇಕ್ರಾ ಫೌಂಡೇಷನ್ ಎಜುಕೇಷನಲ್ ವೆಲ್‌ಫೇರ್ ಮತ್ತು ಚಾರಿಟಬಲ್ ಟ್ರಸ್ಟ್‌ನ ಸ್ವಾಧೀನದಲ್ಲಿದೆ. ಇದು ಹುಡಾ ಪಬ್ಲಿಕ್ ಶಾಲೆಯನ್ನು ಮುನ್ನೆಡೆಸುತ್ತಿದೆ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
‘ನೋಂದಾಯಿಸದ ಗುತ್ತಿಗೆ ಪತ್ರದ ಅಡಿಯಲ್ಲಿ 30 ವರ್ಷಗಳ ಅವಧಿಗೆ ಗುತ್ತಿಗೆಯು ಕಾನೂನಿನ ದೃಷ್ಟಿಯಲ್ಲಿ ಮಾನ್ಯವಾಗಿಲ್ಲ. ವಕ್ಫ್ ಕಾಯಿದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ವಕ್ಫ್ ಆಸ್ತಿಯನ್ನು ಮರು ಸ್ವಾಧೀನಪಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು,’ ಎಂದು ಉಪ ಲೋಕಾಯುಕ್ತ ಆನಂದ್ ಅವರು ತಮ್ಮ ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.
ಅನ್ವರ್ ಮಾಣಿಪ್ಪಾಡಿ ಅವರು ಸಲ್ಲಿಸಿದ್ದ ವರದಿಯಲ್ಲಿಯೂ ಈ ಪ್ರಕರಣದ ಬಗ್ಗೆ ಉಲ್ಲೇಖಿಸಲಾಗಿದೆ. ಮಜಲೀಸ್-ಎ-ರಿಫಾಬುಲ್ ಮುಸ್ಲಿಮೀನ್ 1965ರಲ್ಲಿಯೇ ಅಧಿಸೂಚಿತವಾದ ಒಂದು ವಕ್ಫ್ ಆಸ್ತಿಯಾಗಿದೆ. ಇದಕ್ಕೆ ಗೌಸಿಯಾ ಮಂಜಿಲ್, ಅಪ್ನಾ ಘರ್, ರಿಫಾ, ವಾಣಿಜ್ಯ ಸಂಕೀರ್ಣ, ಫೂಲ್ವಾರಿ, ಹೊಸ ಸಯ್ಯಾಜಿರಾವ್ ರಸ್ತೆ ಮತ್ತು ಅಕ್ಬರ್ ರಸ್ತೆಯಲ್ಲಿ ಮಜಿದ್ ಎ ಬಗ್ಬಾನ್ ಎದುರಿಗಿರುವ ಖಾಲಿ ಜಾಗಗಳನ್ನು ದತ್ತಿಯಾಗಿ ನೀಡಲ್ಪಟ್ಟಿವೆ. ಇದಕ್ಕೆ ಮಾಜಿ ಸಚಿವ ಅಜೀಜ್ ಸೇಠ್ ಅವರು ಇದಕ್ಕೆ ಮುತವಲ್ಲಿ ಆಗಿದ್ದರು ಎಂದು ವಿವರಿಸಲಾಗಿದೆ.
ಇದೇ ಪ್ರಕರಣದಲ್ಲಿ ಪಾವತಿಯಾಗಿರುವ ಪರಿಹಾರದ ಮೊತ್ತದ ಬಗ್ಗೆಯೂ ಉಪ ಲೋಕಾಯುಕ್ತ ಎನ್ ಆನಂದ್ ಅವರ ತನಿಖಾ ತಂಡವು ಬೆಳಕು ಚೆಲ್ಲಿದೆ.
ವಕ್ಫ್‌ಗೆ ಸೇರಿದ್ದ 1 ಎಕರೆ 4 ಗುಂಟಾ ಭೂಮಿಯನ್ನು ಕಂದಾಯ ಇಲಾಖೆಯು ಮೈಸೂರು ಮಹಾನಗರ ಪಾಲಿಕೆಯ ಪರವಾಗಿ ಸ್ವಾಧೀನಪಡಿಸಿಕೊಂಡಿತ್ತು. ಮತ್ತು ಇದಕ್ಕೆ 9,82,637.35 ರ ಪರಿಹಾರವನ್ನು ಅಂದಿನ ಮುತವಲ್ಲಿ ಆಗಿದ್ದ ಜನಾಬ್ ಅಜೀಜ್ ಸೇಠ್ ಅವರ ಖಾತೆಗೆ ಬಿಡುಗಡೆ ಮಾಡಿತ್ತು.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಲಭ್ಯವಾದ ಮಾಹಿತಿ ಮತ್ತು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಅಜೀಜ್ ಸೇಟ್ ಅವರ ಪತ್ರವನ್ನು ಒದಗಿಸಿದೆ. ಇದರ ಪ್ರಕಾರ, 9,46,000 ಪರಿಹಾರವನ್ನು ಕರ್ನಾಟಕ ಬ್ಯಾಂಕ್ ಮೈಸೂರಿನ ಖಾತೆ ಸಂಖ್ಯೆ (11777) ಗೆ ಜಮಾ ಮಾಡಲಾಗಿತ್ತು. ಈ ಖಾತೆಯು ಅಂದೆ ಶಾ ವಾಲಿ ಮಕಾನ್ ಅವರ ಮುತವಲ್ಲಿ ಅವರ ಹೆಸರಿನಲ್ಲಿತ್ತು.
ಈ ಪರಿಹಾರವನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಖಾತೆಗೆ ಜಮಾ ಮಾಡಬೇಕಿತ್ತು. ಆದರೆ ರಿಫಾಹುಲ್ ಮುಸ್ಲಿಮೀನ್ ಎಜುಕೇಶನಲ್ ಟ್ರಸ್ಟ್‌ನ ಕೋರಿಕೆಯ ಮೇರೆಗೆ ಅಜೀಜ್ ಸೇಠ್ ಅವರು ಈ ಪರಿಹಾರದ ಮೊತ್ತವನ್ನು ಸಾಲವಾಗಿ ರಿಫಾಹುಲ್ ಮುಸ್ಲಿಮೀನ್ ಶೈಕ್ಷಣಿಕ ಟ್ರಸ್ಟ್‌ಗೆ ಸಾಲದ ರೂಪದಲ್ಲಿ ಬಿಡುಗಡೆ ಮಾಡಿದ್ದರು. ಅದನ್ನು 6 ಕಂತುಗಳಲ್ಲಿ ಮರು ಪಾವತಿಸಬೇಕಿತ್ತು. ಆದರೆ ಅಜೀಜ್ ಸೇಟ್ ಅವರು ಈ ಸಾಲವನ್ನು ದೇಣಿಗೆಯಾಗಿ ಮುಚ್ಚಿಡಲು ನಿರ್ಧರಿಸಿದ್ದರು. ಹೀಗಾಗಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಪಡೆದ ಪರಿಹಾರವನ್ನು ಮುತವಲ್ಲಿ ಅಜೀಜ್ ಸೇಟ್ ಅವರು ರಿಫಾಹುಲ್ ಮುಸ್ಲಿಮೀನ್ ಎಜುಕೇಶನಲ್ ಟ್ರಸ್ಟ್ ಗೆ ದಾನ ಮಾಡಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಈ ಮೇಲಿನ ವ್ಯವಹಾರಗಳ ಬಗ್ಗೆ ಅಭಿಪ್ರಾಯ ನೀಡಿತ್ತು. ವಕ್ಫ್ ಮಂಡಳಿಯ ಒಪ್ಪಿಗೆಯಿಲ್ಲದೆ ಮುತವಲ್ಲಿ ಸಾಲ ಮಂಜೂರು ಮಾಡಿರುವುದು ಕಾನೂನುಬಾಹಿರ. ಸಾಲವನ್ನು ದೇಣಿಗೆಯಾಗಿ ಪರಿವರ್ತಿಸುವುದು ಸಹ ಕಾನೂನುಬಾಹಿರವಾಗಿದೆ ಎಂದು ಹೇಳಿತ್ತು.
ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್, ಈ ಪರಿಹಾರದ ಮೊತ್ತವನ್ನು ವಸೂಲಿ ಮಾಡಲು ಮತ್ತು ಮುತವಲ್ಲಿಯನ್ನು ತೆಗೆದುಹಾಕಲು ನಿರ್ಧಾರ ಕೈಗೊಂಡಿತ್ತು. ಸಾಲದ ಮೊತ್ತವನ್ನು ವಸೂಲು ಮಾಡಬೇಕು ಎಂದು 1997ರ ಮಾರ್ಚ್ 11ರಂದು ರಿಫಾಹುಲ್ ಮುಸ್ಲಿಮೀನ್ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿಗೆ ನೋಟಿಸ್ ನೀಡಿತ್ತು. ಅದರ ನಂತರ, ಈ ವಿಷಯವನ್ನು ಮುಂದುವರಿಸಲಾಗಿಲ್ಲ. ಮತ್ತು ವಕ್ಫ್ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡ ಮೇಲೆ ನೀಡಲಾದ ಪರಿಹಾರವು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ತಲುಪಲಿಲ್ಲ. ಮತ್ತೊಂದೆಡೆ, ವಕ್ಫ್ ಕಾಯಿದೆಯ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆಯಾಗಿತ್ತು ಎಂದು ವಿವರಿಸಲಾಗಿದೆ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ರಿಫಾಹುಲ್ ಮುಸ್ಲಿಮೀನ್ ಎಜುಕೇಶನಲ್ ಟ್ರಸ್ಟ್‌ನ ಕಾರ್ಯದರ್ಶಿಯಿಂದ ಮೊತ್ತವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು. ಮಾಜಿ ಮುತವಳ್ಳಿ ಅಜೀಜ್ ಸೇಟ್ ಅವರ ನಿಧನದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಯಾವುದೇ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುವುದಿಲ್ಲ.
ಆದರೂ ಅವರು ಈ ಹಿಂದೆ ನಡೆದಿರುವ ಪ್ರಕ್ರಿಯೆಗೆ ಕಾರಣರಾಗಿದ್ದರು, ವಾಸ್ತವವಾಗಿ ಅದನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಖಾತೆಗೆ ಜಮಾ ಮಾಡಬೇಕಾಗಿತ್ತು. ಈ ಬಗ್ಗೆ ವಕ್ಫ್ ಮಂಡಳಿಯು ಕ್ರಮ ಕೈಗೊಳ್ಳಬೇಕು ಎಂದು ಆನಂದ್ ಅವರು ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.
ಬೀದರ್‍ನ ಅಲಿಯಾಬಾದ್, ಗುಲ್ಲೇರ್ ಹವೇಲಿ ಸೇರಿದಂತೆ ಇನ್ನಿತರೆಡೆಗಳಲ್ಲಿನ ವಕ್ಫ್ ಆಸ್ತಿಯು ಅಪಾರ ಪ್ರಮಾಣದಲ್ಲಿ ಅತಿಕ್ರಮಣಕ್ಕೆ ಒಳಗಾಗಿದ್ದರೂ ಸಹ ಉಪ ಲೋಕಾಯುಕ್ತ ಎನ್ ಆನಂದ್ ಅವರಿಗೇ ಜಿಲ್ಲಾ ವಕ್ಫ್ ಅಧಿಕಾರಿಗಳು ಸೂಕ್ತ ದಾಖಲೆಗಳನ್ನು ನೀಡಿರಲಿಲ್ಲ.
ಅಲ್ಲದೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯು ಸಹ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ವಕ್ಫ್ ಆಸ್ತಿಯ ಅತಿಕ್ರಮಣ ಅಥವಾ ಅಕ್ರಮ ಒತ್ತುವರಿ ಬಗ್ಗೆ ತಿಳಿಸಲು ತಲೆಕೆಡಿಸಿಕೊಂಡಿರಲಿಲ್ಲ. ಹಾಗೂ ಜಿಲ್ಲಾ ವಕ್ಫ್ ಅಧಿಕಾರಿಗಳು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಪರಿಹಾರವನ್ನು ಪಾವತಿಸಿರುವ ಬಗ್ಗೆಯೂ ಯಾವುದೇ ದಾಖಲೆಗಳನ್ನು ಸಲ್ಲಿಸಿರಲಿಲ್ಲ ಎಂಬುದನ್ನೂ ಸಹ ಉಪ ಲೋಕಾಯುಕ್ತರ ತನಿಖಾ ವರದಿಯು ಬಯಲಿಗೆಳೆದಿದೆ.
ಅಪಾರ ಪ್ರಮಾಣದಲ್ಲಿ ವಕ್ಫ್ ಆಸ್ತಿ ಅತಿಕ್ರಮಣ; ಉಪ ಲೋಕಾಯುಕ್ತರಿಗೂ ದಾಖಲೆಗಳನ್ನು ನೀಡಿರಲಿಲ್ಲ
ಬೀದರ್ ತಾಲೂಕಿನ ಹಲವು ಗ್ರಾಮಗಳಲ್ಲಿರುವ ವಕ್ಫ್ ಆಸ್ತಿಯನ್ನು ಸಂರಕ್ಷಿಸಬೇಕಿದ್ದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯೂ ಸಹ ಕೆಲವು ವ್ಯಕ್ತಿಗಳಿಗೆ ಅನಗತ್ಯವಾಗಿ ರಿಯಾಯಿತಿ ನೀಡಿದೆ. ಮತ್ತು ನಿಯಮಬಾಹಿರವಾಗಿ ವಕ್ಫ್ ಆಸ್ತಿಯನ್ನು ಧಾರೆಯೆರೆದು ಕೊಟ್ಟಿರುವುದನ್ನೂ ಉಪ ಲೋಕಾಯುಕ್ತರ ತನಿಖಾ ತಂಡವು ಪತ್ತೆ ಹಚ್ಚಿದೆ
ವಕ್ಫ್ ಆಸ್ತಿ ದುರ್ಬಳಕೆ, ಒತ್ತುವರಿ; ತನಿಖಾ ವರದಿ ನೀಡಿದ್ದ ದಿನದಂದೇ ತನಿಖೆ ಆದೇಶವೂ ರದ್ದು
ವಿಶೇಷವೆಂದರೇ ಇದೇ ಪ್ರಕರಣದ ಕುರಿತು ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿಯೂ ವಿವರಿಸಲಾಗಿದೆ. ‘ಇದೊಂದು ಗಂಭೀರವಾದ ವಿಷಯವಾಗಿದೆ. ಸಿಐಡಿ ಮೂಲಕ ಕೂಲಂಕುಷವಾಗಿ ಹಾಗೂ ಸಮರ್ಪಕವಾಗಿ ವಿಚಾರಣೆ ನಡೆಸಬೇಕು. ಈ ಅಕ್ರಮದಲ್ಲಿ ಭಾಗಿಯಾಗಿರುವ ಕಂದಾಯ ಮತ್ತು ವಕ್ಫ್ ಮಂಡಳಿಯ ಸಂಬಂಧಿತ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕು,’ ಎಂದು ಶಿಫಾರಸ್ಸು ಕೂಡ ಮಾಡಿತ್ತು.
‘ವೈಯಕ್ತಿಕ ಹಿತಾಸಕ್ತಿ, ಶೋಕಿ, ಹುಚ್ಚಾಟ’ದಿಂದ ವಕ್ಫ್ ಆಸ್ತಿ ದುರ್ಬಳಕೆ; ಮುಚ್ಚಿಟ್ಟಿದ್ದ ಲೋಕಾ ತನಿಖಾ ವರದಿ ಬಹಿರಂಗ
‘ಈ ವ್ಯಕ್ತಿಗಳಿಗೆ ಹೇಗೆ ಕಟ್ಟಡ ನಿರ್ಮಾಣ ಮಾಡಲು ಮತ್ತು ಇಷ್ಟು ವಿಸ್ತಾರವಾದ ಭೂಮಿಯನ್ನು ಒತ್ತುವರಿ ಮಾಡಲು ಅವಕಾಶ ನೀಡಿದರು ಎಂಬುದನ್ನು ಜಿಲ್ಲಾ ವಕ್ಫ್ ಅಧಿಕಾರಿ ಮತ್ತು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರು ವಿವರಿಸುವ ಸ್ಥಿತಿಯಲ್ಲಿರಲಿಲ್ಲ,’ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.