ಮೂಡಾ ಕೈ ಚಳಕ; ಎಸ್‌ಬಿಎಂ ಹೌಸಿಂಗ್‌ ಸೊಸೈಟಿಯ ನಿವೇಶನಗಳ ಸಂಖ್ಯೆಯಲ್ಲಿ ಹೆಚ್ಚಳ

ಬೆಂಗಳೂರು; ಮೈಸೂರಿನ ಬೋಗಾದಿ ಸುತ್ತಮುತ್ತ ಜಮೀನಿನ ಮಾಲೀಕತ್ವದ ದಾಖಲೆಗಳಿಲ್ಲದಿದ್ದರೂ ಮೂಡಾವು ಹೆಚ್ಚುವರಿಯಾಗಿ ವಿಸ್ತೀರ್ಣ ಸೇರಿಸಿ ವಸತಿ ವಿನ್ಯಾಸವನ್ನು ನಿಯಮಬಾಹಿರವಾಗಿ ನಾಲ್ಕೈದು ಬಾರಿ ಮಾರ್ಪಾಟು ಮಾಡಿತ್ತು.

 

ಅಲ್ಲದೇ ವಿನ್ಯಾಸ ಅನುಮೋದನೆ ಸಂದರ್ಭದಲ್ಲಿ ಉದ್ಯಾನ ವಿಸ್ತೀರ್ಣ ಕಡಿತಗೊಳಿಸಿ ನಿಯಮಬಾಹಿರವಾಗಿ ಮಾರ್ಪಡುಗೊಳಿಸಿದ್ದರಿಂದಲೇ ನಿವೇಶನಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿತ್ತು ಎಂಬುದನ್ನು ತಾಂತ್ರಿಕ ಸಮಿತಿಯು ಪತ್ತೆ ಹಚ್ಚಿದೆ.

 

ಮೂಡಾ ವ್ಯಾಪ್ತಿಯಲ್ಲಿ ಬದಲಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿರುವ ಭಾರೀ ಅಕ್ರಮ ಪ್ರಕರಣಗಳನ್ನು ಪ್ರತಿಪಕ್ಷ ಬಿಜೆಪಿಯು ರಾಜ್ಯ ಕಾಂಗ್ರೆಸ್‌ ಸರ್ಕಾರದ ಮೇಲೆ ಮುಗಿಬಿದ್ದಿರುವ ಬೆನ್ನಲ್ಲೇ ಎಸ್‌ಬಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆ ರಚನೆ ಹಿಂದೆ ನಡೆದಿದ್ದ ಹಲವು ನಿಯಮಬಾಹಿರ ಚಟುವಟಿಕೆಗಳು ಮುನ್ನೆಲೆಗೆ ಬಂದಿವೆ.

 

ತಾಂತ್ರಿಕ ಸಮಿತಿಯು ನೀಡಿರುವ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಗೃಹ ನಿರ್ಮಾಣ ಸಹಕಾರ ಸಂಘದಿಂದ ಬೋಗಾದಿ ಗ್ರಾಮದ ಸರ್ವೆ ನಂಬರ್‍‌ 49, 50, 281, 282, 286, 312 ಮತ್ತು322ರಲ್ಲಿ ಪ್ರಾಧಿಕಾರದಿಂದ ಅಕ್ರಮ ವಿನ್ಯಾಸ ನಕ್ಷೆ ಅನುಮೋದನೆ ಪಡೆದುಕೊಂದಿದೆ. ಇದರಿಂದ ಪ್ರಾಧಿಕಾರಕ್ಕೆ ಕೋಟ್ಯಂತರ ರುಪಾಯಿ ನಿಗದಿತ ಶುಲ್ಕ ಪಾವತಿಸದೇ ವಂಚನೆಯಾಗಿದೆ. ಹಾಗೂ ಬಡಾವಣೆಯಲ್ಲಿ ನಾಗರಿಕ ಸೌಲಭ್ಯ ಕಲ್ಪಿಸದೇ ಇದ್ದರೂ ಶೇ.100ರಷ್ಟು ನಿವೇಶನ ಬಿಡುಗಡೆ ಮಾಡಲಾಗಿದೆ. ಎಂದು ದೂರು ಸಲ್ಲಿಕೆಯಾಗಿತ್ತು.

ಬದಲಿ ನಿವೇಶನ ಹಂಚಿಕೆ ಹಿಂದಿನ ಕರಾಮತ್ತು ಬಯಲು; ನಕ್ಷೆಯಿಲ್ಲ, ಭೂ ಪರಿಹಾರದ ವಿವರಗಳೂ ಇಲ್ಲ

ಹಾಗೆಯೇ ಇದೇ ಬಡಾವಣೆಯಲ್ಲಿ ಸಿಎ ನಿವೇಶನಗಳ ಒತ್ತುವರಿ, ಉದ್ಯಾನದಲ್ಲಿ ಅಕ್ರಮವಾಗಿ ನಿವೇಶನಗಳ ರಚನೆ, ಸಾರ್ವಜನಿಕ ರಸ್ತೆ, ಬಂಡಿದಾರಿ, ರಾಜಕಾಲುವೆ ಒತ್ತುವರಿ, ಸರ್ಕಾರಿ ಗೋಮಾಳ, ಪ್ರಾಧಿಕಾರಕ್ಕೆ ಪ್ರೋರೇಟಾ ಶುಲ್ಕ, ಇಟಿಪಿ ಶುಲ್ಕ, ಸ್ಲಂ ಸೆಸ್‌ ಇತ್ಯಾದಿ ಶುಲ್ಕಗಳ ಪಾವತಿಸದೇ ವಂಚನೆಯಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.
ಈ ದೂರಿನ ಕುರಿತು ತಾಂತ್ರಿಕ ಸಮಿತಿಯು ವಿಸ್ತೃತವಾಗಿ ತನಿಖೆ ನಡೆಸಿದೆ.

ನಿಯಮ ಮೀರಿ 250 ಕೋಟಿ ನಿಶ್ಚಿತ ಠೇವಣಿ; ಮೂಡಾ ಅಕ್ರಮ ಪತ್ತೆ ಹಚ್ಚಿದ ತಾಂತ್ರಿಕ ಸಮಿತಿ

1997ರ ಮೇ 16ಂದು ಅನುಮೋದನೆಯಾಗಿದ್ದ ಚಾಲ್ತಿ ಮಹಾ ಯೋಜನೆಯ ವಲಯ ನಿಯಮಾವಳಿಯಂತೆ ಉದ್ಯಾನಕ್ಕಾಗಿ ಕನಿಷ್ಠ ಶೇ. 15 ಮತ್ತು ವಸತಿಗಾಗಿ ಗರಿಷ್ಠ ಶೇ.55ರಷ್ಟು ಕಾಯ್ದಿರಿಸಿ ವಿನ್ಯಾಸ ಅನುಮೋದನೆ ನೀಡಬೇಕಿತ್ತು. ಉದ್ಯಾನ ಜಾಗವನ್ನು ವಲಯ ನಿಯಮಾವಳಿಗಳಿಗೆ ವ್ಯತಿರಿಕ್ತವಾಗಿ ಕಡಿತಗೊಳಿಸಲಾಗಿದೆ.

848 ನಿವೇಶನ ಬಿಡುಗಡೆ; ಮೂಡಾದಿಂದ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರ ವ್ಯಾಪ್ತಿ ಅತಿಕ್ರಮಣ

ನಿಯಮಬಾಹಿರವಾಗಿ ಮಹಾ ಯೋಜನೆಯನ್ನು ನಾಲ್ಕನೇ ಬಾರಿಗೆ ಮಾರ್ಪಡಿಸಲಾಗಿತ್ತು. ಅಲ್ಲದೇ ಭೂ ಉಪಯೋಗ ವಿಸ್ತೀರ್ಣ ಕ್ಷೇತ್ರದ ವಿಶ್ಲೇಷಣೆ ವಿವರಗಳನ್ನೂ ನಮೂದಿಸಿರಲಿಲ್ಲ ಎಂಬ ಅಂಶವನ್ನು ತಾಂತ್ರಿಕ ಸಮಿತಿಯು ಬಹಿರಂಗಗೊಳಿಸಿದೆ.

 

‘ವಿನ್ಯಾಸ ಅನುಮೋದನೆ ಸಂದರ್ಭದಲ್ಲಿ ಉದ್ಯಾನ ವಿಸ್ತೀರ್ಣ ಕಡಿತಗೊಳಿಸಿ ನಿಯಮಬಾಹಿರವಾಗಿ ಮಾರ್ಪಡಿಸಿರುವುದರಿಂದ ಹಾಗೂ ವಸತಿಗಾಗಿ ವಿಸ್ತೀರ್ಣವನ್ನು ಶೇ.50ಕ್ಕೆ ಹೆಚ್ಚಿಸಿರುವುದರಿಂದ ನಿವೇಶನಗಳ ಸಂಖ್ಯೆಯಲ್ಲಿ 1,378ರಿಂದ 1500ರವರೆಗೆ ಹೆಚ್ಚಳವಾಗಿರುವುದು ಕಂಡುಬಂದಿರುತ್ತದೆ,’ ಎಂದು ತಾಂತ್ರಿಕ ಸಮಿತಿಯು ತನ್ನ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಒಂದೇ ದಿನದಲ್ಲಿ 10 ನಿವೇಶನ ಬಿಡುಗಡೆ; ದೃಢೀಕೃತ ಪ್ರಮಾಣಪತ್ರವಿಲ್ಲ, ಅನುಮೋದನೆಯೂ ಇಲ್ಲ

ಹಾಗೆಯೇ ಮೈಸೂರು-ನಂಜನಗೂಡು ಸ್ಥಳೀಯ ಯೋಜನಾ ಪ್ರದೇಶಕ್ಕೆ ಅಂತಿಮ ಅನುಮೋದನೆಯಾದ ಪರಿಷ್ಕೃತ ವ್ಯಾಪಕಾಭಿವೃದ್ಧಿ ಯೋಜನೆಯಲ್ಲಿ ಪ್ರಶ್ನಿತ ಜಮೀನುಗಳಲ್ಲಿ ಉದ್ಯಾನ ಮತ್ತು ನಾಗರಿಕ ಸೌಲಭ್ಯಕ್ಕಾಗಿ ಭೂ ಉಪಯೋಗ ನಕ್ಷೆಯಲ್ಲಿ ಗುರುತಿಸಿತ್ತು. ಅದರಂತೆ ಈ ಜಾಗಗಳನ್ನು ವಿನ್ಯಾಸ ನಕ್ಷೆಯಲ್ಲಿ ಯಥಾರೀತಿ ಅಳವಡಿಸದೇ ವ್ಯತಿರಿಕ್ತವಾಗಿ ವಿನ್ಯಾಸವನ್ನು ಪರಿಷ್ಕರಿಸಿ ಅನುಮೋದಿಸಿರುವುದನ್ನೂ ತಾಂತ್ರಿಕ ಸಮಿತಿಯು ಪತ್ತೆ ಹಚ್ಚಿದೆ.

 

ಪ್ರಕರಣದ ಹಿನ್ನೆಲೆ

 

1987ರ ಜನವರಿ 31ರಲ್ಲಿ ಮೈಸೂರು ಜಿಲ್ಲೆಯ ಅಂದಿನ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ಕೆ ಹೆಚ್‌ ಗೋಪಾಲಕೃಷ್ಣ ಗೌಡ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಭೂ ಸ್ವಾಧೀನ ಕುರಿತು ಜಿಲ್ಲಾ ಮಟ್ಟದ ಪರಿಶೀಲನೆ ಸಭೆ ನಡೆಸಿದ್ದರು.

ಜ್ಞಾನಗಂಗಾ ಸೊಸೈಟಿಗೆ 848 ನಿವೇಶನ; ನ್ಯಾಯಾಲಯದ ಪ್ರಕರಣಗಳನ್ನೇ ಮರೆಮಾಚಿದ್ದ ಮೂಡಾ?

ಇದರಲ್ಲಿ ಎಸ್‌ಬಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ 150 ಎಕರೆ ಜಮೀನನ್ನು ಭೂ ಸ್ವಾಧೀನಪಡಿಸಿಕೊಳ್ಳಲು ಅನುಮತಿ ನೀಡಲಾಗಿತ್ತು. 150 ಎಕರೆ ವಿಸ್ತೀರ್ಣ ಜಮೀನಿನಲ್ಲಿ ವಿವಿಧ ಅಳತೆಯ 1,300 ನಿವೇಶನಗಳನ್ನು ಹಂಚಿಕೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

 

1994ರಲ್ಲಿ 75.14 ಎಕರೆ ಜಮೀನನ್ನು ಭೂ ಸ್ವಾಧೀನಪಡಿಸಿ ಹಸ್ತಾಂತರಿಸಲಾಗಿತ್ತು. 1990ರಲ್ಲಿ 59 ಎಕರೆ 34 ಗುಂಟೆ ಸೇರಿ ಒಟ್ಟು 135 ಎಕರೆ 8 ಗುಂಟೆ ವಿಸ್ತೀರ್ಣದ ಜಮೀನು ಭೂಸ್ವಾಧೀನಪಡಿಸಿ ಹಸ್ತಾಂತರ ಮಾಡಲಾಗಿತ್ತು.

ಭೂಸ್ವಾಧೀನವಿಲ್ಲದೇ ರಿಂಗ್‌ ರೋಡ್‌ಗೆ ಜಮೀನು ಬಳಕೆ; ಸಿಎಂ ಆಪ್ತನ ದೊಡ್ಡಮ್ಮನಿಗೂ ಬದಲಿ ನಿವೇಶನ

1993ರ ಅಕ್ಟೋಬರ್‍‌ 5ರಂದು 135 ಎಕರೆ ವಿಸ್ತೀರ್ಣದ ಜಮೀನನ್ನು ಎಸ್‌ಬಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ವ್ಯವಸಾಯ ವಲಯದಿಂದ ವಸತಿ ಉಪಯೋಗಕ್ಕೆ ಭೂ ಬದಲಾವಣೆ ಮಾಡಲು ರೂಪುರೇಷೆ ಅನುಮೋದಿಸುವಾಗ ಪರಿಷ್ಕೃತ ವ್ಯಾಪಕಾಭಿವೃದ್ಧಿ ಯೋಜನೆಯಲ್ಲಿ ತೋರಿಸಿರುವ ಕಡೆಯೇ ಉದ್ಯಾನಕ್ಕೆ ಜಾಗ ಬಿಡಬೇಕಿತ್ತು. ಹಾಗೂ ಸರ್ಕಾರವು ಪರಿಷ್ಕೃತಗೊಳಿಸಿರುವ ಭೂ ಉಪಯೋಗ ಬದಲಾವಣೆ ಶುಲ್ಕವನ್ನು ಸದರಿ ಪ್ರಕರಣಕ್ಕೆ ಅನ್ವಯಿಸುವುದನ್ನು ವಿಧಿಸಿ ಸರ್ಕಾರ ಒಪ್ಪಿಗೆ ಕೊಟ್ಟಿತ್ತು.

ಜೆಎಸ್‌ಎಸ್‌ ಹೌಸಿಂಗ್‌ ಸೊಸೈಟಿಗೆ ಬದಲಿ ಜಾಗ; 20 ವರ್ಷ ಬಾಕಿ ಇದ್ದ ಪ್ರಸ್ತಾವನೆಗೆ ಅಸ್ತು, ನಿಯಮಮೀರಿ ಮಂಜೂರು

ನಗರ ಯೋಜನಾ ಶಾಖೆಯಿಂದ ಯಾವುದೇ ಶುಲ್ಕ ವಸೂಲಾತಿ ಮಾಡದೇ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟವುಂಟಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಮೂಡಾ ಕೈ ಚಳಕ; ಎಸ್‌ಬಿಎಂ ಹೌಸಿಂಗ್‌ ಸೊಸೈಟಿಯ ನಿವೇಶನಗಳ ಸಂಖ್ಯೆಯಲ್ಲಿ ಹೆಚ್ಚಳ

 

ಹಾಗೆಯೇ 135 ಎಕರೆ 08 ಗುಂಟೆ ವಿಸ್ತೀರ್ಣದಲ್ಲಿ 1,305 ವಿವಿಧ ಮಾದರಿ ನಿವೇಶನಗಳ ವಸತಿ ಬಡಾವಣೆ ವಿನ್ಯಾಸ ನಕ್ಷೆ ಅನುಮೋದನೆಯ ಶುಲ್ಕ ಪಾವತಿಸಿಕೊಂಡಿಲ್ಲ. ನಗರ ಯೋಜನಾ ಶಾಖೆಯ ಕೈ ಚಳಕದಿಂದ ಹೆಚ್ಚುವರಿಯಾಗಿ 73 ನಿವೇಶನಗಳು ಸೃಷ್ಟಿಯಾಗಿತ್ತು.

ಒಟ್ಟಾರೆ 135 ಎಕರೆ 8 ಗುಂಟೆ ವಿಸ್ತೀರ್ಣದ ಮಾರ್ಪಾಡು ವಿನ್ಯಾಸ ನಕ್ಷೆಯಲ್ಲಿ 2004ರಲ್ಲಿ ನಿವೇಶನಗಳ ಸಂಖ್ಯೆಯನ್ನು 1,500ಕ್ಕೆ ವಿಸ್ತರಿಸಿ ಹೆಚ್ಚುವರಿಯಾಗಿ 195 ನಿವೇಶನಗಳನ್ನು ಸೃಷ್ಟಿಸಿ ಭಾರೀ ಅಕ್ರಮ ಎಸಗಲಾಗಿದೆ ಎಂದು ದೂರಲಾಗಿತ್ತು.

the fil favicon

SUPPORT THE FILE

Latest News

Related Posts