‘ದೊಡ್ಡ ಪ್ರಮಾಣದಲ್ಲಿ 2023-2028ರವರೆಗೆ ಆಯ್ಕೆಯಾಗಿ ಬಂದಿದ್ದೇವೆ, ನಮ್ಮ ಪರಿಸ್ಥಿತಿ ಏನು?’

ಬೆಂಗಳೂರು; ‘ಬಹಳ ದೊಡ್ಡ ಪ್ರಮಾಣದಲ್ಲಿ 2023-2028ರವರೆಗೆ ಆಯ್ಕೆಯಾಗಿ ಬಂದಿದ್ದೇವೆ. ನಮ್ಮ ಪರಿಸ್ಥಿತಿ ಏನು?’

 

ಹೀಗೆಂದು ಪ್ರಶ್ನಿಸಿ ಆತಂಕವನ್ನು ಹೊರಹಾಕಿರುವುದು ಕಾಂಗ್ರೆಸ್‌ ಶಾಸಕ ಹಾಗೂ ವಿಧಾನಸಭೆಯ ಅಂದಾಜು ಸಮಿತಿ ಸದಸ್ಯ ಜೆ ಟಿ ಪಾಟೀಲ್‌ ಅವರು.

 

ಸಂದರ್ಭ; ಲೋಕೋಪಯೋಗಿ ಇಲಾಖೆ ಹಾಗೂ ಅದರ ಅಧೀನದಲ್ಲಿ ಬರುವ ಅಂಗ ಸಂಸ್ಥೆಗಳಿಂದ ಅನುಷ್ಠಾನಗೊಳಿಸಿರುವ ಮತ್ತು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು, ಕಾಮಗಾರಿಗಳು ಮತ್ತು ಅಂದಾಜುಗಳ ಕುರಿತು ಇಲಾಖೆ ಮುಖ್ಯಸ್ಥರೊಂದಿಗೆ ಮುಂದುವರೆದ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

 

ಗ್ಯಾರಂಟಿಗಳ ಅನುಷ್ಟಾನಕ್ಕೆ ಅತೀ ಹೆಚ್ಚು ಮೊತ್ತವನ್ನು ನೀಡಿರುವ ಕಾರಣ ಲೋಕೋಪಯೋಗಿ ಇಲಾಖೆಯೂ ಸೇರಿದಂತೆ ಹಲವು ಇಲಾಖೆಗಳ ಮುಂದುವರೆದ ಕಾರ್ಯಕ್ರಮ ಮತ್ತು ಕಾಮಗಾರಿಗಳ ಮೇಲೆ ಭಾರೀ ಹೊಡೆತ ಬಿದ್ದಿದೆ. ಇದಕ್ಕೆ ಜೆ ಟಿ ಪಾಟೀಲ್‌ ಅವರು ವಿಧಾನಸಭೆಯ ಅಂದಾಜು ಸಮಿತಿ ಸಭೆಯಲ್ಲಿ ಹೊರ ಹಾಕಿರುವ ಆತಂಕವೇ ಸಾಕ್ಷಿ.

 

ಯಶವಂತರಾಯಗೌಡ ವಿಠಲ ಗೌಡ ಪಾಟೀಲ ಅಧ್ಯಕ್ಷತೆಯ ಅಂದಾಜು ಸಮಿತಿಯು 2024ರ ಜನವರಿ 29ರಂದು ಸಭೆ ನಡೆದಿತ್ತು. ಈ ಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಆದಿಯಾಗಿ ಸಮಿತಿಯ ಹಲವು ಸದಸ್ಯರು ರಸ್ತೆ ಕಾಮಗಾರಿ ಸೇರಿದಂತೆ ಇನ್ನಿತರೆ ವಿಭಾಗಗಳಲ್ಲಿ ಅನುದಾನ ಕಡಿಮೆ ಆಗಿರುವುದು, ಗುತ್ತಿಗೆದಾರರಿಗೆ ಬಿಲ್‌ ಬಾಕಿ ಉಳಿಸಿಕೊಂಡಿರುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.

 

ಅನುದಾನ ಕೊರತೆಯಾಗಿದ್ದರೂ ಹೆಚ್ಚುವರಿ ಅನುದಾನ ಕೋರದೇ ಇರುವ ಅಧಿಕಾರಿಗಳನ್ನು ಸಮಿತಿ ಸದಸ್ಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಜನವರಿ 29ರಂದು ನಡೆದಿದ್ದ ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಲೋಕೋಪಯೋಗಿ ಇಲಾಖೆಯಲ್ಲಿ 10,000 ಕೋಟಿ ರು. ಬಿಲ್‌ ಬಾಕಿ ಇವೆ. ಬಾಕಿ ಬಿಲ್‌ ಪಾವತಿಯಾಗದ ಕಾರಣ ಗುತ್ತಿಗೆದಾರರು ಆತಂಕಕ್ಕೆ ಒಳಗಾಗಿರುವುದನ್ನೂ ಸಹ ಸಮಿತಿ ಸದಸ್ಯರು ಚರ್ಚಿಸಿರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.

 

ಅದೇ ರೀತಿ ವಿಶೇಷ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಲೋಕೋಪಯೋಗಿ ಇಲಾಖೆಗೆ ಬಿಡಿಗಾಸೂ ನೀಡಿಲ್ಲ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 25 ಕೋಟಿ ರು. ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರಾದರೂ ಇದುವರೆಗೂ ನಯಾಪೈಸೆಯನ್ನೂ ಒದಗಿಸಿಲ್ಲ ಎಂದು ಖುದ್ದು ಇಲಾಖೆಯ ಪ್ರಧಾನ ಕಾರ್ಯದರ್ಶಿಯೇ ಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.

 

ಸಭೆಯಲ್ಲಿ ನಡೆದಿರುವ ಚರ್ಚೆಯ ನಡವಳಿಯನ್ನು ‘ದಿ ಫೈಲ್‌’ ಯಥಾವತ್ತಾಗಿ ಇಲ್ಲಿ ಪ್ರಕಟಿಸಿದೆ.

 

ಪ್ರಧಾನ ಕಾರ್ಯದರ್ಶಿ; 2,256 ಕೋಟಿ ರು ಮೊತ್ತದ ಮುಂದುವರೆದ ಕಾಮಗಾರಿ ಇದೆ. ಕೆಆರ್‍‌ಡಿಸಿಎಲ್‌ನಲ್ಲಿ 655 ಕೋಟಿ ರು. ಅನುದಾನ, 4,850 ಕೋಟಿ ರು ಮುಂದುವರೆದ ಕಾಮಗಾರಿ ಇದೆ. ಕೆ ಶಿಪ್‌ನಲ್ಲಿ 1,560 ಕೋಟಿ ರು. ಅನುದಾನ, 4,045 ಕೋಟಿ ರು. ಮುಂದುವರೆದ ಕಾಮಗಾರಿ ಇದೆ. ಸಿಆರ್‍‌ಎಫ್‌ನಲ್ಲಿ 502 ಕೋಟಿ ರು., 8,026 ಕೋಟಿ ರು. ಮುಂದುವರೆದ ಕಾಮಗಾರಿ ಇದೆ.

 

ಕಟ್ಟಡಗಳಿಗೆ ಸಂಬಂಧಿಸಿದಂತೆ ಅಪೆಂಡಿಕ್ಸ್‌ -ಇ ನಲ್ಲಿ 353 ಕೋಟಿ ರು. ಅನುದಾನ ಇದೆ. 1,657 ಕೋಟಿ ರು. ಕೆಲಸ ನಡೆಯುತ್ತಿದೆ. ರಸ್ತೆ ಸುರಕ್ಷತಾ ಕಾಮಗಾರಿಯಲ್ಲಿ 275 ಕೋಟಿ ರು. ಅನುದಾನ, 545 ಕೋಟಿ ರು. ಮುಂದುವರೆದ ಕಾಮಗಾರಿ ಇದೆ. ಎಸ್‌ಡಿಪಿಗೆ ಅನುದಾನ ಒದಗಿಸಿಲ್ಲ. 396 ಕೋಟಿ ರು. ಮುಂದುವರೆದ ಕಾಮಗಾರಿ ಇದೆ. ನಬಾರ್ಡ್‌ನಲ್ಲಿ 150 ಕೋಟಿ ರು. ಅನುದಾನವಿದೆ.

 

425 ಕೋಟಿ ರು. ಗಳಿಗೆ ಮುಂದುವರೆದ ಕಾಮಗಾರಿ ಇದೆ. ಭೂ ಸ್ವಾಧೀನಕ್ಕೆ 320 ಕೋಟಿ ರು. ಅನುದಾನವಿದೆ. ಆದರೂ 1,784 ಕೋಟಿ ರು. ಬೇಕಿದೆ. ವಿವಿಧ ಹಂತಗಳಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಎಸ್‌ಸಿಪಿ ಮತ್ತು ಟಿಎಸ್‌ಪಿಯಲ್ಲಿ 52 ಕೋಟಿ ರು. ಅನುದಾನವಿದೆ. 822 ಕೋಟಿ ರು.ಮೊತ್ತದ ಕಾಮಗಾರಿಗಳು ಮುಂದುವರೆಯುತ್ತಿವೆ. ಎಸ್‌ಸಿಪಿ ಮತ್ತು ಟಿಎಸ್‌ಪಿಯಲ್ಲಿ 26 ಕೋಟಿ ರು. ಅನುದಾನ, 186 ಕೋಟಿ ರು.ಗಳಿಗೆ ಮುಂದುವರೆದ ಕಾಮಗಾರಿ ಮುಗಿದಿದೆ.

 

ಕೇಂದ್ರದ ಯೋಜನೆಯಲ್ಲಿ 1,315 ಕೋಟಿ ರು.ಇದೆ. 1,415 ಕೋಟಿ ರು. ಒದಗಿಸಲಾಗುತ್ತಿದೆ. 4 ಭಾಗವಾಗಿ ನೀಡಿದ್ದಾರೆ. ಇದನ್ನು ಕೆಎಚ್‌ಪಿಗೆ ಉಪಯೋಗಿಸಿದ್ದೇವೆ. ರಾಯಚೂರು ಮತ್ತು ಸಿಂಧನೂರಿನದು ಟೆಂಡರ್‍‌ ಪ್ರಕ್ರಿಯೆಯಲ್ಲಿದೆ. ಸಚಿವ ಸಂಪುಟದ ಅನುಮೋದನೆ ತೆಗೆದುಕೊಳ್ಳಬೇಕು. 155 ಕೋಟಿ ರು.ಗಳನ್ನು ಕೆಆರ್‍‌ಡಿಸಿಎಲ್‌ಗೆ ಒದಗಿಸಿರುವ ಅನುದಾನವನ್ನು ನಾವು ಉಪಯೋಗಿಸಿರುತ್ತೇವೆ. ಎಸ್‌ಡಿಪಿಗೆ ಅನುದಾನವಿಲ್ಲ. ಆದರೆ 5 ಹಾಸ್ಟೆಲ್‌ ಕಾಮಗಾರಿಗಳ ಕಾಮಗಾರಿ ನಡೆಯುತ್ತಿವೆ. ಇದಕ್ಕೆ ಫ್ರೀ ಬಜೆಟ್‌ನಲ್ಲಿ ಅನುದಾನ ಕೇಳಿರುತ್ತೇವೆ. ಆದರೆ ಅಲೋಕೇಟ್‌ ಮಾಡಿರುವುದಿಲ್ಲ.

 

ಅಧ್ಯಕ್ಷರು; ನಿಮ್ಮ ಪ್ರಯಾರೀಟೀಸ್‌ ಏನು, ಪೆಂಡಿಂಗ್‌ ಬಿಲ್‌ ಹೇಗೆ ಕ್ಲಿಯರ್‍‌ ಮಾಡುತ್ತೀರಿ, ಇವತ್ತು ಬಜೆಟ್‌ ಚರ್ಚೆ ಇದೆ ಎಂದು ಹಣಕಾಸು ಇಲಾಖೆಯುವರು ಬಂದಿಲ್ಲ. 3/1 ಅನುದಾನ ಇಟ್ಟುಕೊಂಡು ಕೆಲಸ ಮಾಡಿಸಬೇಕು. ವೈಲೇಷನ್‌ ಕಾಣಿಸುತ್ತದಲ್ಲವೇ?

 

ಪ್ರ.ಕಾರ್ಯದರ್ಶಿ; ಅಪೆಂಡಿಕ್ಸ್‌-ಇ ಬಿಟ್ಟರೆ ಉಳಿದಿದ್ದಲ್ಲಿ ರಿಸ್ಟ್ರಿಕ್ಷನ್ಸ್‌ ಇದೆ. ಹಣಕಾಸು ಇಲಾಖೆಯವರ ಅನುಮೋದನೆ ತೆಗೆದುಕೊಂಡು ಮಾಡುತ್ತೇವೆ.

 

ಅಧ್ಯಕ್ಷರು; ಹಣಕಾಸು ಇಲಾಖೆಯವರು ತಪ್ಪು ಮಾಡಿದರೇ ಒಪ್ಪಿಕೊಳ್ಳಬೇಕೇ? ಪೆಂಡಿಂಗ್‌ ಕ್ಲಿಯರ್‍‌ ಮಾಡದಿದ್ದರೇ ಮುಂದೆ ತೊಂದರೆ ಆಗುತ್ತದೆ. ಪೊಲಿಟಿಕಲ್ ಮೇಲೆ ಮಾಡಿಕೊಂಡು ಹೋದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ರೀತಿಯಾದರೇ ಸಾರ್ವಜನಿಕರಿಗೆ ಹೇಗೆ ಸರ್ವೀಸ್‌ ಕೊಡುತ್ತೀರಿ. ಬೇಸಿಕ್‌ ಆಗಿ ನಿಮ್ಮ ಜವಾಬ್ದಾರಿ ಇರುತ್ತದೆ.

 

ಪ್ರ.ಕಾರ್ಯದರ್ಶಿ; ಒಂದು ವರ್ಷ ಹೆಚ್ಚಿಗೆ ಅನುದಾನ ಕೊಟ್ಟರೆ ಸರಿ ಹೋಗುತ್ತದೆ. ನಾವು ಮುಂದಿನ ವರ್ಷದ ಬಜೆಟ್‌ಗೆ 2000 ಕೋಟಿ ರು.ಗಳನ್ನು ಹೆಚ್ಚಿಗೆ ಕೊಡಿ ಎಂದು ಕೇಳಿರುತ್ತೇವೆ.

 

ಕೆ ಎಂ ಶಿವಲಿಂಗೇಗೌಡ; 5054ರಲ್ಲಿ ಯಾವ್ಯಾವ ವರ್ಷ ಎಷ್ಟೆಷ್ಟು ಮಂಜೂರಾತಿ ಕೊಟ್ಟಿರುತ್ತೀರಿ, ಈ ಸರ್ಕಾರ ಬಂದ ಮೇಲೆ ಎಷ್ಟು ಮಂಜೂರಾತಿ ಕೊಟ್ಟಿರುತ್ತೀರಿ

 

ಪ್ರ.ಕಾರ್ಯದರ್ಶಿ; ಈ ವರ್ಷ ಯಾವುದು ಕೊಟ್ಟಿಲ್ಲ. 10,000 ಕೋಟಿ ರ. ಪೆಂಡಿಂಗ್‌ ಉಳಿಯುತ್ತದೆ.

 

ಕೆ ಎಂ ಶಿವಲಿಂಗೇಗೌಡ; ಆಯವ್ಯಯದ ಅಯ ತಪ್ಪಿದಾಗ ನಿಮ್ಮನ್ನು ಪ್ರಶ್ನೆ ಮಾಡುವುದಕ್ಕೆ ಈ ಕಮಿಟಿ ಇರುವುದು. ಸಮಿತಿಯಲ್ಲಿ ನಿರ್ಣಯಗಳು ಆದರೆ ಬಹಳ ಕಷ್ಟವಾಗುತ್ತದೆ. ಮೂರು ವರ್ಷದಿಂದ 10,000 ಕೋಟಿ ರು.ಗಳ ಪೆಂಡಿಂಗ್‌ ಬಿಲ್ಸ್‌ ಇದೆ. ಹೆಚ್ಚುವರಿ ಬಜೆಟ್ ಕೇಳುವುದು ನಮ್ಮ ಜವಾಬ್ದಾರಿಯಾಗಿರಬೇಕಾಗಿತ್ತಲ್ಲವೇ? ನೀವು ಗಾತ್ರವನ್ನ ಹೇಗೆ ತಗ್ಗಿಸುತ್ತೀರಿ.

 

ಗುತ್ತಿಗೆದಾರರು ಪೆಂಡಿಂಗ್‌ ಬಿಲ್‌ಗೆ ಕಾಯುತ್ತಿದ್ದಾರೆ. ನೀವು ಅನುಮೋದನೆ ಕೊಟ್ಟಿರುವುದಕ್ಕೆ ಕೆಲಸ ಮಾಡಿರುತ್ತಾರೆ. ಎಲ್‌ಒಸಿ ಬಿಡುಗಡೆ ಆಗಬೇಕು. ಯಾವುದೇ ಇಲಾಖೆಗೆ ಕರೆದು ಬುದ್ಧಿ ಹೇಳುವ ಅಧಿಕಾರ ಈ ಸಮಿತಿಗೆ ಇದೆ. ನೀವು ಧೈಯೋದ್ದೇಶಗಳನ್ನು ಇಟ್ಟುಕೊಂಡು ಕೆಲಸ ಮಾಡಬೇಕಾಗುತ್ತದೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಾಗುತ್ತದೆ.

 

ಗುತ್ತಿಗೆದಾರರಿಂದ ತಪ್ಪಾಗಿರುವುದರಿಂದ ಅವರು ಸುಮ್ಮನೆ ಕುಳಿತಿರುತ್ತಾರೆ. 2,000 ಕೋಟಿಗಳನ್ನು ಹೆಚ್ಚುವರಿ ಕೇಳಿರುತ್ತೇವೆಂದು ಹೇಳಿರುತ್ತೀರಿ, ಅಷ್ಟು ಕೊಟ್ಟರೆ ಹೇಗೆ ಸಮಸ್ಯೆ ಬಗೆಹರಿಯುತ್ತದೆ, ಈಗಿನ ಶಾಸಕರು ತಮಗೂ ಕೆಲಸಕ್ಕೆ ಅನುದಾನ ಕೊಡಿ ಎಂದು ಕೇಳುತ್ತಾರೆ. ಪ್ರತಿ ಶಾಸಕರಿಗೆ 25 ಕೋಟಿ ರು.ಗಳನ್ನು ಅಪೆಂಡಿಕ್ಸ್‌-ಇ ನಲ್ಲಿ ಕೊಡುತ್ತೇವೆಂದು ಹೇಳಿರುತ್ತಾರೆ. 5,3,2 ಕೋಟಿ ರು.ಗಳ ಪೆಂಡಿಂಗ್‌ ಇವೆ ಎಂದು ರೋಡಿನಲ್ಲಿ ನಿಂತು ಗುತ್ತಿಗೆದಾರರು ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ನಾವು ಸಲಹೆ ಕೊಡುತ್ತೇವೆ. ಈ ಬಜೆಟ್‌ನಲ್ಲ ಹೆಚ್ಚುವರಿ ಅನುದಾನ ಕೇಳಿ.

 

ಪ್ರ. ಕಾರ್ಯದರ್ಶಿ; ಪ್ರತಿ ಶಾಸಕರಿಗೆ 25 ಕೋಟಿ ರು.ಗಳನನು ಕೊಡುತ್ತೇವೆ ಎಂದು ಹೇಳಿರುತ್ತಾರೆ. 1,300 ಕಿ ಮೀ ರಸ್ತೆಗೆ ಅನುಮೋದನೆ ಆಗಿದೆ. ಇದರ ಪಟ್ಟಿ ಕೊಡಲಾಗಿದೆ.

 

ಕೆ ಎಂ ಶಿವಲಿಂಗೇಗೌಡ; ಪಟ್ಟಿಯನ್ನು ತಯಾರು ಮಾಡಿಕೊಡಲಾಗಿದೆ. 5054ಕ್ಕೆ ಸಂಬಂಧಿಸಿದಂತೆ ಪಟ್ಟಿಯನ್ನು ಕೊಟ್ಟಿರುವುದಿಲ್ಲ.

 

ಐಎಫ್‌ಎ; ಎಸ್‌ಎಡಿಪಿ ಒಂದು ಭಾಗ. ಮುಖ್ಯಮಂತ್ರಿಯವರು ಲೋಕೋಪಯೋಗಿ ಇಲಾಖೆಗೆ ಸ್ಪೆಷಲ್‌ ಗ್ಯ್ರಾಂಟ್‌ ಎಂದು 25 ಕೋಟಿ ಕೊಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಆದರೆ ಇನ್ನೂ ಅನುದಾನ ಇಲಾಖೆಗೆ ಬಂದಿರುವುದಿಲ್ಲ. ಶಾಸಕರ ವಿವೇಚನೆಗೆ ಬಿಡಲಾಗಿದೆ.

 

ಅಧ್ಯಕ್ಷರು; ಹೆಡ್‌ ಅಫ್‌ ಅಕೌಂಟ್‌ ಇರುತ್ತದೆ. ಎಲ್ಲಾ ಶಾಸಕರು 25 ಕೋಟಿ ಕೊಡಬೇಕೆಂದರೆ ನೇಚರ್‍‌ ಆಫ್‌ ವರ್ಕ್ ಬೇರೆ ಬೇರೆ ಇರುತ್ತದೆ. ಶಾಸಕರ ವಿವೇಚನೆಗೆ ಬಿಟ್ಟಿದ್ದಾರೆ ಎಂದರೇ ಹೇಗೆ? ಅದನ್ನು ಕ್ಲಾರಿಫೈ ಮಾಡಿ

 

ಸಿಇ; ಅಪೆಂಡಿಕ್ಸ್‌ – ಇ ಯನ್ನು ಕೊಟ್ಟಿದ್ದಾರೆ.

 

ಅಧ್ಯಕ್ಷರು; ಹೊಸದಾಗಿ ರಸ್ತೆ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕು. ಆದರೆ ಹಳೇ ರಸ್ತೆ ಕಾಮಗಾರಿಗಳನ್ನು ಮೊದಲು ಕ್ಲಿಯರ್‍‌ ಮಾಡಬೇಕಾಗುತ್ತದೆ. ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಯವರನ್ನು ಅಧಿವೇಶನ ಮೊದಲೇ ಏಕೆ ಕರೆದು ಚರ್ಚೆ ಮಾಡುತ್ತಿದ್ದೇವೆ ಎಂದರೆ ಇಲಾಖೆಗಳಲ್ಲಿ ಏನಾದರೂ ಅನುದಾನದ ಬೇಡಿಕೆ ಹಾಗೂ ಆತಂಕಗಳು ಇದ್ದರೇ ಅದನ್ನು ಚರ್ಚೆ ಮಾಡಿ. ಬಜೆಟ್‌ ಪೂರ್ವ ಚರ್ಚೆಯಲ್ಲಿ ಅಧಿಕಾರಿಗಳಿಗೆ ಮನವರಿಕೆ ಮಾಡಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಭೆಗೆ ಕರೆಸಲಾಗಿದೆ.

 

10,000 ಕೋಟಿ ಕ್ಯಾರಿ ಫಾರ್ವರ್ಡ್‌ ಬಿಟ್ಟು ಮಾಡುತ್ತಿದ್ದಾರೆ. ಹೊಸ ಕಾಮಗಾರಿಗಳಿಗೆ ಪ್ರಯಾರಿಟಿ ಇಲ್ಲದಿದ್ದರೆ ಬಿಟ್ಟು ಬಿಡಿ. ಅಥವಾ ಬೇರೆ ವಿಧಾನವನ್ನು ಹುಡುಕಿ. ಯಾವುದಾದರೂ ಎಸೆನ್ಷಿಯಲ್‌ ಇರುವುದನ್ನು ಹುಡುಕಿ. ನ್ಯಾಷನಲ್‌ ವೇಸ್ಟ್‌ ಮಾಡುತ್ತಿದ್ದಾರೆ. ರಸ್ತೆ ಕಾಮಗಾರಿಗಳಿಗಾಘಿ ಹಣವನ್ನು ವಿನಿಯೋಗಿಸಿ ಬೇಡವೆಂದು ಹೇಳುತ್ತಿಲ್ಲ. ನಮ್ಮ ಅವಶ್ಯಕತೆಗೆ ಅನುಗುಣವಾಗಿ ನೋಡಿಕೊಳ್ಳಬೇಕಾಗುತ್ತದೆ. ಆರ್ಥಿಕ ಸ್ಥಿತಿಗತಿಯನ್ನು ಗಮನಹರಿಸದೇ ಇದ್ದರೇ ಐಎಎಸ್‌ ಅಧಿಕಾರಿಗಳನ್ನು ಏಕೆ ನೇಮಕ ಮಾಡಬೇಕು?

 

ಒಂದು ಹಂತಕ್ಕೆ ಬರದಿದ್ದರೇ ಇವುಗಳಿಗೆಲ್ಲಾ ಕೊನೆ ಇರುವುದಿಲ್ಲ. ಇದಕ್ಕೆ ಯಾರನ್ನು ರೆಸ್ಪಾನಿಸ್‌ಬಲ್‌ ಎಂದು ಮಾಡಬೇಕು? ಈ ರೀತಿ ಆದರೆ ಸಿಸ್ಟಂ ಅನ್ನು ಹೇಗೆ ರನ್‌ ಮಾಡುವುದು? ಹೊಸದಾಗಿ ಏನಾದರೂ ಚಿಂತನೆ ಮಾಡುವುದು ಇದ್ದರೆ ಹೇಳಿ. ಇದಕ್ಕೆ ಎಲ್ಲಾದರೂ ಒಂದು ಕಡೆ ಪರಿಹಾರ ಮಾಡುವುದಾದರೆ ಹೇಳಿ. ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆ ಬಹಳ ಮುಖ್ಯವಾದ ಇಲಾಖೆಗಳು. ಜನರಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್‌ ಬಹಳ ಅವಶ್ಯಕವಾಗಿ ಬೇಕಾಗಿರುವಂತದ್ದು. ಬೇರೆ ಬೇರೆ ರಾಜ್ಯಗಳಲ್ಲಿ ಯಾವ ರೀತಿ ಪ್ರಾಕ್ಟೀಸ್‌ ಮಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಈ ಸಂಬಂಧವಾಗಿ ಮೊದಲು ಮುಖ್ಯಮಂತ್ರಿಯವರ ಕಡೆಯಿಂದ ಪತ್ರವನ್ನು ಹಾಕಿಸೋಣ. ಅಡಿಷನಲ್‌ ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ.

 

ಜೆ ಟಿ ಪಾಟೀಲ್‌; ಎಫ್‌ ಡಿ ಅವರ ಪರ್ಮಿಷನ್‌ ತೆಗೆದುಕೊಂಡು ಹೆಚ್ಚುವರಿಯಾಗಿ ಮಾಡಿದ್ದೇವೆ ಎಂದು ಹೇಳಿದ್ದೀರಿ. ಎಫ್‌ ಡಿ ಅವರು ತಮ್ಮ ಸಹಾಯಕ್ಕೆ ಬರಬೇಕಲ್ಲವೇ? ಎಸ್ಕೇಪ್‌ ಆಗುವುದಕ್ಕೆ ಈ ರೀತಿ ಹೇಳಿದ್ದೀರಾ?

 

ಪ್ರ.ಕಾರ್ಯದರ್ಶಿ; ವಾಸ್ತವಾಂಶ ಹೇಳಿದ್ದೇವೆ

 

ಜೆ ಟಿ ಪಾಟೀಲ್‌; ಜನಪ್ರತಿನಿಧಿಗಳಾಗಿ ನಾವು ಜನರಿಗೆ ಉತ್ತರ ನೀಡಬೇಕಾಗುತ್ತದೆ. ಬಹಳ ದೊಡ್ಡ ಪ್ರಮಾಣದಲ್ಲಿ 2023-2028ರವರೆಗೆ ಆಯ್ಕೆಯಾಗಿ ಬಂದಿದ್ದೇವೆ. ನಮ್ಮ ಪರಿಸ್ಥಿತಿ ಏನು?

 

ಅಧ್ಯಕ್ಷರು; ಜೆ ಟಿ ಪಾಟೀಲ್ ಅವರು ಹೇಳಿದ್ದು ಸರಿ ಇದೆ. ಎಲ್ಲೇ ರಸ್ತೆಗಳು ಹಾಳಾಗಿವೆ ಕೆಲವು ಕಡೆ ಡೆವಲೆಪ್‌ ಆಗಿದೆ. ರಸ್ತೆ ಕಾಮಗಾರಿಗಳು ಪೊಲಿಟಿಕಲ್‌ ಪವರ್‍‌ನಿಂದ ಸುಧಾರಣೆ ಆಗುತ್ತವೆ ಎಂದು ಇದೆ. ಪ್ರಮುಖವಾಗಿ ಎಲ್ಲಾ ರಸ್ತೆಗಳು ಡೆವಲೆಪ್‌ ಆಗಬೇಕು. ಪೊಲಿಟಿಕಲ್‌ ಹೆಲ್ಪ್‌ ಕೂಡ ಇರಲಿ. ಜನಪ್ರತಿನಿಧಿಗಳ ಕ್ಷೇತ್ರಗಳಲ್ಲಿ ರಸ್ತೆ ಕಾಮಗಾರಿಗಳನ್ನು ಮಾಡಲಿಲ್ಲವೆಂದರೆ ಹೇಗೆ?

 

ಬ್ಲಾಕ್‌ ಕಾಟನ್‌ ಸಾಯಿಲ್‌ ಇರುವ ಪ್ರದೇಶಗಳಾದ ಬಾಗಲಕೋಟೆ, ಬಿಜಾಪುರ, ಬೆಳಗಾಂ, ಗುಲ್ಬರ್ಗಾ ರಸ್ತೆ ಹೆದ್ದಾರಿಗಳಲ್ಲಿ ಹೆವಿ ಮೋಟಾರ್‍‌ ವೆಹಿಕಲ್ ಮೂವ್‌ಮೆಂಟ್‌ ಇದೆ. ಎಲ್ಲಿ ಹೆವಿ ವೆಹಿಕಲ್‌ ಮೂವ್‌ಮೆಂಟ್‌ ಇದೆ, ಅಲ್ಲಿನ ರಸ್ತೆ ಕಾಮಗಾರಿಗಳಿಗೆ ಬೇರೆ ರೀತಿಯಲ್ಲಿ ಅನುದಾನ ಒದಗಿಸುವುದು. ಎಲ್ಲಿ ಕಡಿಮೆ ಲೋಡ್‌ ವೆಹಿಕಲ್‌ ಮೂವ್‌ಮೆಂಟ್‌ ಇದೆ, ಅಲ್ಲಿ ಅವಶ್ಯಕತೆ ಇಲ್ಲ.

the fil favicon

SUPPORT THE FILE

Latest News

Related Posts