ಎಂಎಸ್‌ಪಿ ನೀಡಿದರೂ ರೈತರ ಆದಾಯ ಮಾತ್ರ ದುಪ್ಟಟ್ಟು ಆಗಲೇ ಇಲ್ಲ; ಸಂಶೋಧನಾ ವರದಿ

ಬೆಂಗಳೂರು: ಮಾರುಕಟ್ಟೆಗಳ ಏರಿಳಿತಕ್ಕೆ ಸಂಬಂಧಿಸಿದಂತೆ ಎಂಎಸ್‌ಪಿಯನ್ನು ಜಾರಿಗೆ ತಂದರೂ  ಉತ್ತಮವಾಗಿ  ಕೃಷಿ ಆದಾಯವನ್ನು ತಂದುಕೊಡುವುದಿಲ್ಲ ಎಂಬ ಸಂಗತಿಯನ್ನು ಹಲವು ಸಂಶೋಧನೆಗಳು ಹೊರಗೆಡವಿವೆ.

 

ಹರಿಯಾಣ ಮತ್ತು ಪಂಜಾಬ್‌ ಗಡಿಗಳಲ್ಲಿ ರೈತರು ಸಮಾವೇಶಗೊಂಡಿರುವ ಬೆನ್ನಲ್ಲೇ ಎಂಎಸ್‌ಪಿ ಜಾರಿಯಿಂದ ಕೃಷಿ ಆದಾಯವು ದುಪ್ಟಟ್ಟು ಆಗಿಲ್ಲ ಎಂದು ಹೇಳಿರುವ ಸಂಶೋಧನಾ ವರದಿಗಳು ಮುನ್ನೆಲೆಗೆ ಬಂದಿವೆ.

 

ಸಂಶೋಧನಾ ವರದಿಯನ್ನು ಆಧರಿಸಿ ಇಂಡಿಯಾ ಸ್ಪೆಂಡ್‌ ಜಾಲತಾಣವು ಪ್ರಕಟಿಸಿರುವ ವರದಿ ಆಯ್ದ ಭಾಗವನ್ನು   ಇಲ್ಲಿ ಕೊಡಲಾಗಿದೆ.

 

 

ಪಂಜಾಬ್ ಮತ್ತು ಹರಿಯಾಣದ ರೈತರು ಫೆಬ್ರವರಿ 13 ರಿಂದ ದೆಹಲಿಯ ಪಂಜಾಬ್ ಮತ್ತು ಹರಿಯಾಣ ಗಡಿಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ಹಿಂದೆ 2021ರಲ್ಲಿ ರೈತರು ಹೋರಾಟ ನಡೆಸಿದ ಪರಿಣಾಮವಾಗಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಒತ್ತಡಕ್ಕೆ ಸಿಲುಕಿತ್ತು.  ಈ ಸಾರಿ ರೈತರ ಪ್ರಮುಖ ಬೇಡಿಕೆ ಎಂದರೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ಮಾಡುವುದು. ಅಂದರೆ ಸರ್ಕಾರ ಖರೀದಿ ಮಾಡುವ ಕೃಷಿ ಉತ್ಪನ್ನಕ್ಕೆ ಕನಿಷ್ಠ ಬೆಂಬಲ ಬೆಲೆ ನೀಡುವುದು.

 

ಎಂಎಸ್‌ಪಿಯನ್ನು ಸ್ವಾಮಿನಾಥನ್ ಸಮಿತಿ ಶಿಫಾರಸು ಕೃಷಿ ವೆಚ್ಚ ಮತ್ತು ಕೃಷಿ ವೆಚ್ಚದ ಮೇಲೆ ಶೇ.೫೦ರಷ್ಟು ಸೇರ್ಪಡೆ ಮಾಡಿ ಪಾವತಿಸುವುದು. ಇತರೆ ಬೇಡಿಕೆಗಳು ಎಂದರೆ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, ಪ್ರತಿದಿನದ ಕನಿಷ್ಠ ಕೂಲಿ ರೂ. 700 ಮತ್ತು 200 ಕೂಲಿ ದಿನಗಳ ಖಾತರಿ. ಫೆಬ್ರವರಿ 19ರಂದು ರೈತ ಸಂಘಟನೆಗಳು ಬೇಳೆ ಕಾಳುಗಳು, ಹತ್ತಿ ಮತ್ತು ಜೋಳವನ್ನು ಐದು ವರ್ಷಗಳ ಗುತ್ತಿಗೆ ಮೇಲೆ ಖರೀದಿಸುವುದನ್ನು ತಿರಸ್ಕರಿಸಿದವು. ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದವು.

 

23 ಉತ್ಪನ್ನಗಳಿಗೆ ಎಂಎಸ್‌ಪಿ ಮತ್ತು ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ನೀಡಲು ಕಾನೂನು ರೂಪಿಸಬೇಕೆಂದು ಆಗ್ರಹಿಸಿದ್ದಾರೆ. ಎರಡು ದಿನಗಳ ನಂತರ ರೈತರ ಜಾಥಾವನ್ನು ಟಿಯರ್ ಗ್ಯಾಸ್‌ಗಳನ್ನು ಸಿಡಿಸಿ ತಾತ್ಕಾಲಿಕವಾಗಿ ತಡೆದರು. ಈ ಪ್ರತಿಭಟನೆಯಲ್ಲಿ 22 ವರ್ಷದ ಕಾರ್ಯಕರ್ತ ಶುಭ್‌ಕರಣ್ ಸಿಂಗ್ ತಲೆಗೆ ತೀವ್ರವಾಗಿ ಗಾಯವಾಗಿದ್ದರಿಂದ ಮೃತಪಟ್ಟರು.

 

ಹಲವು ವರ್ಷಗಳಿಂದಲೂ ಲಾಭದಾಯಕ ಆದಾಯ ಇಲ್ಲದಿರುವುದು ಆತಂಕಕಾರಿ ವಿಷಯವಾಗಿದೆ. 2016 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 2022ರ ವೇಳೆಗೆ ಕೃಷಿ ಆದಾಯವನ್ನು ದುಪ್ಪಟ್ಟುಗೊಳಿಸುತ್ತೇವೆ ಎಂದು ಪ್ರಕಟಿಸಿದ್ದರು. 2018ರಲ್ಲೂ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಕೃಷ ನಮ್ಮ ಸರ್ಕಾರದ “ಮೊದಲ ಆದ್ಯತೆ” ಎಂದು ಹೇಳಿದ್ದರು. ಮತ್ತು ಕೆಲವು ಪ್ರದೇಶಗಳಲ್ಲಿ ರೈತರು ಲಾಭದಾಯಕ ಬೆಲೆ ಪಡೆಯುತ್ತಿಲ್ಲ. ರೈತರ ಫಸಲಿಗೆ ದುಪ್ಪಟ್ಟು ಆದಾಯ ಗಳಿಸುವುದಕ್ಕೆ ಸಂಬಂಧಿಸಿದಂತೆ ಅಂತರ ಸಚಿವಾಲಯದ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ತನ್ನ ವರದಿಯನ್ನು ಸಲ್ಲಿಸಿತು ಆದರೆ ರೈತರ ಅದಾಯ ಮಾತ್ರ ದುಪ್ಟಟ್ಟು ಆಗಲೇ ಇಲ್ಲ.

 

 

ಕೃಷಿ ಉತ್ಪನ್ನ ಸೇರಿದಂತೆ ಕಳೆದ ಹಲವು ವರ್ಷಗಳಿಂದ ದೇಶಾದ್ಯಂತ ಹಲವಾರು ಹೋರಾಟಗಳು ನಡೆದಿವೆ. ಆದರೆ ಗೋಧಿ ಮತ್ತು ಅಕ್ಕಿ ಅಪಾರ ಪ್ರಮಾಣದಲ್ಲಿ ಬೆಳೆದಿರುವ ಹಂಗಾಮುಗಳಲ್ಲಿಯೂ ಕೃಷ ಆದಾಯ ಏರಿಕೆ ಕಂಡಿಲ್ಲ. ಈ ಎರಡು ಬೆಳೆಗಳು ಎಂಎಸ್‌ಪಿ ಅಡಿಯಲ್ಲಿ ಅತಿ ಹೆಚ್ಚು ಸಂಗ್ರಹಿಸುವ ಧಾನ್ಯಗಳಾಗಿವೆ.

 

ತಜ್ಞರು ಹೇಳುವುದೇನೆಂದರೆ ಮಾರುಕಟ್ಟೆಗಳ ಏರಿಳಿತಕ್ಕೆ ಸಂಬಂಧಿಸಿದಂತೆ ಎಂಎಸ್‌ಪಿಯನ್ನು ಜಾರಿಗೆ ತಂದರೂ ಈ ಎಂಎಸ್‌ಪಿ ಒಂದೇ ಉತ್ತಮ ಕೃಷಿ ಆದಾಯವನ್ನು ತಂದುಕೊಡುವುದಿಲ್ಲ. ಹಲವು ಸೇವೆಗಳನ್ನು ಕಲ್ಪಿಸುವುದರಿಂದ ಮಾತ್ರವೇ ರೈತರ ಆದಾಯದಲ್ಲಿ ಏರಿಕೆ ಕಾಣಲಿದೆ. ಮತ್ತು ಅವರು ವೈವಿಧ್ಯಮಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ಸಿಗಲಿದೆ.

 

ಹಲವು ಯೋಜನೆಗಳು ಅಗತ್ಯ

 

ಸದ್ಯಕ್ಕೆ ಸರ್ಕಾರ 22  ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡುತ್ತಿದೆ. ಕಬ್ಬಿಗೆ ಮಾತ್ರ ಎಫ್‌ಆರ್‌ಪಿ ದರವನ್ನು ನೀಡಲಾಗುತ್ತಿದೆ. ಅತಿ ಹೆಚ್ಚು ಸಂಗ್ರಹಣೆ ಮಾಡುವುದು ಅಕ್ಕಿ ಮತ್ತು ಗೋಧಿ. ಈ ಎರಡೂ ಉತ್ಪನ್ನಗಳನ್ನು ಸರ್ಕಾರ ಪಿಡಿಎಸ್‌ಗೆ ಖರೀದಿ ಮಾಡುತ್ತದೆ. ಇದನ್ನು ಕೆಲವು ರಾಜ್ಯಗಳಾದ ಪಂಜಾಬ್, ಹರಿಯಾಣ ಮತ್ತು ಮಧ್ಯಪ್ರದೇಶಗಳಿಂದ ಸಂಗ್ರಹಿಸುತ್ತದೆ. 2022-23 ನೇ ಸಾಲಿನ ಖಾರಿಫ್ ಹಂಗಾಮಿನ ಶೇ.40 ರಷ್ಟು ಪಾವತಿಯನ್ನು ಪಂಜಾಬ್ ಮತ್ತು ಹರಿಯಾಣ ರೈತರಿಗೆ ಮಾಡಲಾಗಿದೆ.

 

ಸರ್ಕಾರ ಕೃಷಿ ವೆಚ್ಚ ಮತ್ತು ದರಗಳ ಆಯೋಗ (ಸಿಎಸಿಪಿ) ಶಿಫಾರಸಿನ ಮೇಲೆ ಬೆಂಬಲ ಬೆಲೆಯನ್ನು ಪಾವತಿಸುತ್ತದೆ. ಈ ಸಮಿತಿ ಬಿತ್ತನೆ ಬೀಜದ ದರ, ರಸಗೊಬ್ಬರ ಮತ್ತಿತರ ವೆಚ್ಚಗಳ ಆಧಾರದಲ್ಲಿ ದರಗಳನ್ನು ನಿಗದಿಪಡಿಸುತ್ತದೆ. (ಎ2) ವೆಚ್ಚ ಮತ್ತು ರೈತರು ಮಾಡಿದ ವೆಚ್ಚ ಮತ್ತು ಕುಟುಂಬ ಕಾರ್ಮಿಕರ ಕೂಲಿಯನ್ನು ಲೆಕ್ಕ ಇದು ರೈತರಿಂದ ಆಗುವ ವೆಚ್ಚವಾಗಿದೆ. ಆದರೆ ಕೃಷಿಕರ ರಾಷ್ಟ್ರೀಯ ಆಯೋಗ, ಸ್ವಾಮಿನಾಥನ್ ಆಯೋಗ ಎಂತಲೂ ಕರೆಯಲಿದ್ದು ಈ ಸಂಸ್ಥೆ ಕೃಷಿ ವೆಚ್ಚದ ಮೇಲೆ ಶೇ.50ರಷ್ಟು ಹೆಚ್ಚಿಗೆ ನೀಡಲು ಶಿಫಾರಸು ಮಾಡಿದೆ. ಇದು ಎ2+ಎಫ್‌ಎಲ್ ವೆಚ್ಚ ಮತ್ತು ಸ್ವಂತ ಭೂಮಿಯ ಬಾಡಿಗೆ ಸೇರಿದಂತೆ ನೀಡಬೇಕೆಂದು ರೈತರು ಕಾನೂನು ಮಾಡಬೇಕೆಂದದು ಬೇಡಿಕೆ ಇಟ್ಟಿದ್ದಾರೆ. ಆದರೆ ಸರ್ಕಾರ  ಹೇಳುವುದೇನೆಂದೆ ಸಿಎಸಿಪಿ ಶಿಫಾರಸು ಕೃಷಿ ವೆಚ್ಚದ ಶೇ.1.5 ರಷ್ಟಿದೆ ಎಂಬುದು ಸರ್ಕಾರದ ಪ್ರತಿಪಾದನೆಯಾಗಿದೆ.

 

ಸರ್ಕಾರದ ಈಗಿನ ಲೆಕ್ಕಾಚಾರ ಮತ್ತು ಸಿ2+50 ಬೆಳೆಗಳ ಆಧಾರದಲ್ಲಿ ಬದಲಾಗುತ್ತದೆ. ಉದಾಹರಣೆಗೆ ಗೋಧಿಗೆ ಎಂಎಸ್‌ಪಿ ದರ ಒಂದು ಕ್ವಿಂಟಾಲ್‌ಗೆ ರೂ. 203 ಆಗಿದೆ. 2017-18 ರ ಮಾನ್ಸೂನ್ ಬೆಳೆಗೆ ಗೋಧಿ ಸಂಗ್ರಹಣೆಗೆ ರೈತರಲ್ಲಿ ವಿಶ್ವಾಸ ತುಂಬಬೇಕು ಎಂದು ಸಿಎಸಿಪಿ ಸಲಹೆ ನೀಡಿದೆ. ಈ ಕುರಿತಂತೆ ಕಾನೂನು ಜಾರಿಗೆ ತರಬೇಕಾಗಿದೆ. “ಎಂಎಸ್‌ಪಿ ದರದಲ್ಲಿ ಮಾರಾಟ ಮಾಡುವ ಹಕ್ಕು” ಜಾರಿಗೆ ತರಬೇಕು ಎಂದು ಹೇಳಿದೆ.

 

ಪರಿಸ್ಥಿತಿಗೆ ಅನುಗುಣವಾಗಿ ರೈತರ ಮನೆಯಲ್ಲಿರುವ ಜನಸಂಖ್ಯೆ, ಭೂಮಿ ವಿಸ್ತೀರ್ಣ, ಜಾನುವಾರುಗಳು ವರದಿ ಆಧಾರದಲ್ಲಿ ತಿಂಗಳ ಸರಾಸರಿ ಆದಾಯ ರೂ. 10, 218  ಆಗಿದೆ. ಈ ಪೈಕಿ ಶೇ.40 ರಷ್ಟು ಕೃಷಿಯಿಂದ ಗಳಿಸುವ ಕೂಲಿ. ದೇಶಾದ್ಯಂತ ಹಲವಾರು ವಿಧಗಳಿವೆ. ಬಿಹಾರ ಉತ್ತರ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ, ಪ.ಬಂಗಾಳ ಮತ್ತು ಚತ್ತೀಸ್‌ಘಢಕ್ಕೆ ಹೋಲಿಸಿದರೆ ಪಂಜಾಬ್ ದುಪ್ಪಟ್ಟು ಆದಾಯ ಗಳಿಸುತ್ತಿದೆ.

 

ಕೃಷಿ ಏನೇನೂ ಸಾಲದು ಎಂದು ಕೃಷಿ ತಜ್ಞರು ಹೇಳಿದ್ದಾರೆ. ಗ್ಯಾರಂಟಿ ದರ ನೀಡುವುದಕ್ಕೋಸ್ಕರ ಎಂಎಸ್‌ಪಿಯನ್ನು ಜಾರಿಗೆ ತರಬೇಕು. ಏಕೆಂದರೆ ದೇಶದಲ್ಲಿ ಶೇ.14ರಷ್ಟು ರೈತರು ಮಾತ್ರ ಬೆಂಬಲ ಬೆಲೆಯನ್ನು ಪಡೆಯುತ್ತಿದ್ದಾರೆ ಎಂದು ಕೃಷಿ ನೀತಿ ತಜ್ಞರಾದ ದೇವಿಂದರ್ ಶರ್ಮ. ಇದರ ಅರ್ಥ ಶೇ.86 ರಷ್ಟು ರೈತರು ಮಾರುಕಟ್ಟೆ ಮೇಲೆ ಅವಲಂಬಿತರಾಗಿದ್ದಾರೆ. ಮಾರುಕಟ್ಟೆಗಳು ಲಾಭದಾಯಕ ದರ ನೀಡಿದ್ದಲ್ಲಿ ರೈತರು ಏಕೆ ಪ್ರತಿಭಟನೆ ಮಾಡುತ್ತಾರೆ.

 

1960 ರಲ್ಲಿ ಎಂಎಸ್‌ಪಿ ಮತ್ತು ಸಂಗ್ರಹಣೆ ಶುರು ಮಾಡಿದಾಗ ಈ ಆಹಾರ ಸಬ್ಸಿಡಿ ನೀಡುತ್ತಿದ್ದದು ಗ್ರಾಹಕರಿಗೆ ರೈತರಿಗೆ ಅಲ್ಲ. ಇದರ ಹಿಂದಿನ ಲಾಜಿಕ್ ಏನೆಂದರೆ ಈ ಸಬ್ಸಿಡಿಗಳ ಮೂಲಕ ಕೈಗಾರಿಕಾ ಬೆಳವಣಿಗೆಗೆ ಬೆಂಬಲ ನೀಡುವುದು ಎಂದು ಕೃಷಿ ಸುಸ್ಥಿರ ಬೆಳವಣಿಗೆ ಕೇಂದ್ರದ ಕಾರ್ಯಕಾರಿ ನಿರ್ದೇಶಕರಾದ ಜಿ.ವಿ.ರಾಮಾಂಜನೇಯಲು ಹೇಳಿದ್ದಾರೆ. ಹಲವು ದಶಕಗಳ ಕಳೆದಿದ್ದು ಕೃಷಿಯಲ್ಲಿ ಸಾಕಷ್ಟು ಬದಲಾವಣೆಗೆ ಕಂಡಿವೆ. ಹಾಗಿದ್ದರೂ ಈ ಪ್ರೋತ್ಸಾಹ ನೀಡುವ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

 

ಎಂಎಸ್‌ಪಿ ಬೆಳೆ ಬದಲಾವಣೆಗಳಿಗೆ ಕಾರಣವಾಗಲಿದೆ ವಿನಹ ಮಾರುಕಟ್ಟಯನ್ನು ಬದಲಾಯಿಸುವುದಿಲ್ಲ. ಮತ್ತು ಸರ್ಕಾರಗಳು ವಿವಿಧ ರೀತಿಯಲ್ಲಿ ಪ್ರೋತ್ಸಾಹ ನೀಡಬೇಕು. ಇದರಿಂದ ಅವರು ಲಾಭದಾಯಕ ಆದಾಯವನ್ನು ಪಡೆಯಲಿದ್ದಾರೆ.

 

ಗ್ಯಾರಂಟಿ ದರವನ್ನು ನೀಡಿದರೆ ಅವರಿಗೆ ಲಾಭ ಬರುತ್ತದೆ ಎಂದು ಕೃಷಿಕರು ಭಾವಿಸಿದ್ದಾರೆ. ಅವರು ವಾಸ್ತವವಾಗಿ ಕೇಳುವುದು ಗ್ಯಾರಂಟಿ ಆದಾಯವನ್ನು ಎಂದು ರಾಮಾಂಜನೇಯಲು ಹೇಳುತ್ತಾರೆ.

 

ಈಗಿನ ಸಂದರ್ಭದಲ್ಲಿ ಉತ್ಪಾದನೆ ವೆಚ್ಚ+50 ದರ ನೀಡಿದರೂ ರೈತರು ಹೆಚ್ಚು ಆದಾಯ ಬರುವ ಬೆಳೆಗಳತ್ತಲೇ ನೋಟ ಹರಿಸುತ್ತಾರೆ. ಇದರಿಂದ ಉತ್ಪಾದಕತೆಯಲ್ಲಿ ಅಸಮತೋಲನ ಕಂಡುಬರಲಿದೆ.

 

ಗ್ಯಾರಂಟಿ ದರಗಳನ್ನು ನೀಡಲು ಎರಡು ಸ್ವಯಂ-ಮಾಡಿಕೊಳ್ಳುವ ಮೆಕಾನಿಸಂಗಳು ಇವೆ ಎಂದು ರೈತರ ಹಕ್ಕುಗಳ ಕಾರ್ಯಕರ್ತರಾದ ಕವಿತಾ ಕುರುಗಂತಿ ಹೇಳುತ್ತಾರೆ.

 

ಹೂಡಿಕೆ ವೆಚ್ಚ ಸಿ 2 ಕಡಿಮೆ ಮಾಡಲು ಸರ್ಕಾರ ಪ್ರೋತ್ಸಾಹ ನೀಡಬೇಕು. ಇದು ಸಾರ್ವಜನಿಕ ವೆಚ್ಚವಾಗಲಿದೆ. ಇದರಿಂದ ಕಡಿಮೆ ವೆಚ್ಚದಲ್ಲಿ ಕೃಷಿ ಮಾಡುವುದನ್ನು ಉತ್ತೇಜಿಸಬಹುದು ಎಂದು ಅವರು ಹೇಳುತ್ತಾರೆ. ಇದು ರೈತ ವಿರೋಧಿ ಮುಕ್ತ ವಾಣಿಜ್ಯಕ್ಕೆ ಕಾರಣವಾಗಲಿದೆ. ಇದರಿಂದ ವಿದೇಶಗಳ ಸಬ್ಸಿಡಿ ಹೊಂದಿರುವ ಆಹಾರ ಧಾನ್ಯಗಳು ಯಥೇಚ್ಚವಾಗಿ ಡಂಪ್ ಆಗಲಿದೆ. ಭಾರಿ ಪ್ರಮಾಣದಲ್ಲಿ ದರ ಕುಸಿತ ಕಂಡುಬರಲಿದೆ. ಹೀಗಾದಲ್ಲಿ ಇದರ ಹೊಣೆಯನ್ನು ಸರ್ಕಾರವೇ ಭರಿಸಬೇಕಾಗುತ್ತದೆ.

 

ಲಾಭದಾಯಕ ಕೃಷಿಗೆ ಇನ್‌ಪುಟ್ ಮತ್ತು ಔಟ್‌ಪುಟ್ ಬೆಂಬಲ ಬೇಕಾಗಿದೆ. ಉತ್ತಮ ಮತ್ತು ಹೆಚ್ಚು ವೈವಿಧ್ಯಮಯ ಬೆಳೆಗಳು, ಜೈವಿಕವಾಗಿ ಸುಸ್ಥಿರ ಕೃಷಿ, ಜಾನುವಾರುಗಳು, ನೇರ ಆದಾಯ ಬೆಂಬಲ ಮತ್ತು ಸಂಶೋಧನೆಗೆ ಹೆಚ್ಚು ಪ್ರೋತ್ಸಾಹ ಬೇಕಾಗುತ್ತದೆ.

 

ಮೂಲ ಲೇಖಕರು; ಶ್ರೀಹರಿ ಪಾಲಿಯತ್‌

 

ಕೃಪೆ; ಇಂಡಿಯಾ ಸ್ಪೆಂಡ್‌

the fil favicon

SUPPORT THE FILE

Latest News

Related Posts