ಆರ್ಡರ್ಲಿ ಹಿಂಪಡೆದಿದ್ದರೂ ಮುಂದುವರೆಸಲು ಮೂವರು ನಿವೃತ್ತ ಐಪಿಎಸ್‌ ಅಧಿಕಾರಿಗಳ ಕೋರಿಕೆ

ಬೆಂಗಳೂರು; ರಾಜ್ಯ ಬಿಜೆಪಿ ಮುಖಂಡರೂ ಅಗಿರುವ ನಿವೃತ್ತ ಐಪಿಎಸ್‌ ಪೊಲೀಸ್‌ ಅಧಿಕಾರಿ ಭಾಸ್ಕರರಾವ್‌ ಸೇರಿದಂತೆ ಮೂವರು ನಿವೃತ್ತ ಐಪಿಎಸ್‌ ಅಧಿಕಾರಿಗಳು ತಮ್ಮ ಮನೆಯಲ್ಲಿ ಕೆಲಸ ಮಾಡಲು ಪೊಲೀಸ್‌ ಸಿಬ್ಬಂದಿಗಳನ್ನು ಮುಂದುವರೆಸಬೇಕು ಎಂಬ ಕೋರಿಕೆ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

 

ರಾಜ್ಯದ ನಿವೃತ್ತ ಐಪಿಎಸ್‌ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿರುವ ಆರ್ಡಲಿಗಳನ್ನು ಹಿಂಪಡೆದು ಈಗಾಗಲೇ ಆದೇಶ ಹೊರಡಿಸಲಾಗಿದೆ. ಆದರೂ ಈ ಮೂವರು ನಿವೃತ್ತ ಐಪಿಎಸ್‌ ಅಧಿಕಾರಿಗಳು ಆರ್ಡಲಿಗಳನ್ನು ಮುಂದುವರೆಸಬೇಕು ಎಂದು ಸಲ್ಲಿಸಿರುವ ಕೋರಿಕೆಯು ಚರ್ಚೆಗೆ ಗ್ರಾಸವಾಗಿದೆ.

 

ನಿವೃತ್ತ ಪೊಲೀಸ್‌ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಸಿಬ್ಬಂದಿಯನ್ನು ಹಿಂಪಡೆಯಲು 2023ರ ಡಿಸೆಂಬರ್‍‌ 11ರಂದು ಒಳಾಡಳಿತ ಇಲಾಖೆಯು ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ವಿವಿಧ ಕಾರಣಗಳನ್ನು ಮುಂದಿರಿಸಿ ಮೂವರು ನಿವೃತ್ತ ಐಪಿಎಸ್‌ ಅಧಿಕಾರಿಗಳ ಮನೆಯಲ್ಲಿ ಆರ್ಡಲಿಗಳನ್ನು ಮುಂದುವರೆಸಲು ಕೋರಿಕೆ ಸಲ್ಲಿಸಿರುವುದು ಮುನ್ನೆಲೆಗೆ ಬಂದಿದೆ.

 

ನಿವೃತ್ತ ಐಪಿಎಸ್‌ ಪೊಲೀಸ್‌ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಹಿಂಪಡೆಯುವ ಕುರಿತು ಡಿಐಜಿ ಸೌಮೇಂದು ಮುಖರ್ಜಿ ಅವರು ಎಲ್ಲಾ ಘಟಕಾಧಿಕಾರಿಗಳಿಗೆ 2023ರ ಡಿಸೆಂಬರ್‍‌ 19ರಂದು ಹಿಂಬರಹ ಹೊರಡಿಸಿದ್ದಾರೆ. 2023ರ ಡಿಸೆಂಬರ್‍‌ 11ರಂದು ಹೊರಡಿಸಿರುವ ಅದೇಶವನ್ನು ಪಾಲಿಸಬೇಕು ಮತ್ತು ಈ ಕುರಿತು ಸೂಕ್ತ ಕ್ರಮ ವಹಿಸಬೇಕು, ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ್ದಾರೆ.

 

ಸೌಮೆಂದು ಮುಖರ್ಜಿ ಅವರು ಹೊರಡಿಸಿರುವ ಹಿಂಬರಹದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಭಾಸ್ಕರರಾವ್‌ ನಿವೃತ್ತಿ ಐಪಿಎಸ್‌ ಅವರು ದೂರವಾಣಿ ಮುಖಾಂತರ ಕರೆ ಮಾಡಿ ತಾನು ಏಪ್ರಿಲ್‌ ತಿಂಗಳಿನಲ್ಲಿ ಅಷ್ಟೇ ಸ್ವ ಇಚ್ಛಾ ನಿವೃತ್ತಿ ಹೊಂದಿದ್ದರೂ ಸಹ ತಾಂತ್ರಿಕವಾಗಿ ಇಲಾಖೆಯಲ್ಲಿಯೇ ಮುಂದುವರೆದಿರುವುದಾಗಿ ತಿಳಿಸಿ ಈ ಸಂಬಂಧ ಇನ್ನೂ ಕೆಲ ದಿನಗಳವರೆಗೆ ಆರ್ಡಲಿಗಳನ್ನು ಮುಂದುವರೆಸುವಂತೆ ಕೋರಿರುತ್ತಾರೆ ಎಂಬ ಅಂಶವನ್ನು ಒಳಾಡಳಿತ ಇಲಾಖೆಯು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

 

ಕರ್ನಾಟಕ ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಹೆಚ್‌ ಸಿ ಕಿಶೋರ್‍‌ ಚಂದ್ರ. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ತಮ್ಮ ಸುರಕ್ಷಾ ಕರ್ತವ್ಯ ನಿಮಿತ್ತ ಮುಂದುವರೆಸುವಂತೆ ಕೋರಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.

 

‘ಉಳಿದಂತೆ ಇತರೆ ನಿವೃತ್ತ ಐಪಿಎಸ್‌ ಅಧಿಕಾರಿಗಳ ಮನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಸಿಬ್ಬಂದಿಗಳನ್ನು ಹಿಂಪಡೆಯಲಾಗಿದೆ,’ ಎಂಬ ಮಾಹಿತಿಯನ್ನು ಸ%B

the fil favicon

SUPPORT THE FILE

Latest News

Related Posts