Friday | October 16, 2026 |

ಸರ್ಕಾರಿ, ಗೋಮಾಳ ಜಮೀನು ಕಬಳಿಕೆ; ಸಿಓಡಿ ತನಿಖೆಗೆ ಚಿಂತನೆ, ಪೋಡಿ, ಖಾತೆ, ಕ್ರಯ ಮಾಡದಂತೆ ನಿರ್ದೇಶನ

ಬೆಂಗಳೂರು; ಬೆಂಗಳೂರು ನಗರ ಜಿಲ್ಲೆ, ರಾಮನಗರ, ಹೊಸಕೋಟೆ ಮತ್ತು ಹೊರಭಾಗಗಳಲ್ಲಿ ಸಾವಿರಾರು ಕೋಟಿ ರು. ಬೆಲೆ ಬಾಳುವ ಸರ್ಕಾರಿ ಜಮೀನು ಮತ್ತು ಗೋಮಾಳ ಸ್ವತ್ತುಗಳನ್ನು ಭೂಗಳ್ಳರು ಕಬಳಿಸಿರುವ ಸಂಬಂಧ ರಾಜ್ಯ ಕಾಂಗ್ರೆಸ್‌ ಸರ್ಕಾರವು ಸಿಐಡಿ ತನಿಖೆಗೆ ವಹಿಸಲು ಚಿಂತನೆ ನಡೆಸುತ್ತಿದೆ.

 

ಕಂದಾಯ ಭೂಮಿ ಕಬಳಿಕೆ ಮಾಡಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯು ಇನ್ನೂ ತಾರ್ಕಿಕ ಅಂತ್ಯಕ್ಕೆ ತಲುಪಿಲ್ಲ. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು 21 ವರ್ಷಗಳ ಹಿಂದೆ ಸರ್ಕಾರವು ನೀಡಿದ್ದ ಭರವಸೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ಆದರೂ ವಿಧಾನಮಂಡಲದ ಸರ್ಕಾರಿ ಭರವಸೆಗಳ ಸಮಿತಿಯು ಈ ಎಲ್ಲಾ ಭರವಸೆಗಳನ್ನು ಮುಕ್ತಾಯಗೊಳಿಸಿತ್ತು.  ಸರ್ಕಾರವು ವಿಧಾನಪರಿಷತ್ತಿನ ಅರ್ಜಿ ಸಮಿತಿಯಲ್ಲಿ ( ಅರ್ಜಿ ಸಂಖ್ಯೆ;60/2020)  ಈ ಕುರಿತು ಪರಿಶೀಲನೆ ಬಾಕಿ ಇದೆ. ಇದೀಗ ಈ ಎಲ್ಲಾ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲು ಸರ್ಕಾರವು ಮುಂದಾಗಿರುವುದು ಮುನ್ನೆಲೆಗೆ ಬಂದಿದೆ.

 

ಈ ಕುರಿತು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್‍‌ ಕುಮಾರ್‍‌ ಕಟಾರಿಯಾ ಅವರು 2023ರ ನವೆಂಬರ್‍‌ 27ರಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಪತ್ರವನ್ನು (ಸಂಖ್ಯೆ; ಆರ್‍‌ಡಿ 24 ಎಲ್‌ಜಿಬಿ 2023, ದಿನಾಂಕ 27-11-2023)  ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

ಸರ್ಕಾರಿ ಜಮೀನುಗಳನ್ನು ಮತ್ತು ಗೋಮಾಳದ ಸ್ವತ್ತುಗಳನ್ನು ಭೂ ಗಳ್ಳರು ಕಬಳಿಸಿರುವ ಪ್ರಕರಣಗಳ ಕುರಿತು   ವಿಧಾನ ಪರಿಷತ್ತಿನ ಅರ್ಜಿ ಸಮಿತಿಯಲ್ಲಿ ಅರ್ಜಿಯು ವಿಚಾರಣೆಗೆ ಬಾಕಿ ಇದೆ. ಅರ್ಜಿಯಲ್ಲಿ ಉಲ್ಲೇಖಿಸಿರುವ ಸರ್ವೆ ನಂಬರ್‍‌ಗಳನ್ನು ಸಿಐಡಿ ತನಿಖೆಗೆ ವಹಿಸಲು ಪರಿಶೀಲನೆ ನಡೆಸಲಾಗುತ್ತಿದೆ. ಈ ಹಂತದಲ್ಲಿ ಸರ್ವೆ ನಂಬರ್‍‌ಗಳ ಯಥಾ ಸ್ಥಿತಿಯಲ್ಲಿಯೇ ಮುಂದುವರೆದು ಯಾವುದೇ ಶಾಸನಬದ್ಧ ಕಾರ್ಯಗಳಾದ ಪೋಡಿ/ಕ್ರಯ/ಖಾತೆ ಬದಲಾವಣೆ ಮತ್ತು ಇನ್ನಿತರೆ ಕ್ರಮಗಳನ್ನು ಕಾರ್ಯಗತಗೊಳಿಸದೇ ಇರುವುದು ಸೂಕ್ತ ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ನೀಡಿರುವುದು ಪತ್ರದಿಂದ ಗೊತ್ತಾಗಿದೆ.

 

 

ಕಂದಾಯ ಭೂಮಿ ಕಬಳಿಕೆ ಪ್ರಕರಣಗಳ ಸಂಬಂಧ ವಿ ಸೋಮಣ್ಣ, ಆರಗ ಜ್ಞಾನೇಂದ್ರ, ಎಂ ಟಿ ಬಿ ನಾಗರಾಜ್‌ ಮತ್ತು ಆರ್‌ ರೋಶನ್‌ ಬೇಗ್‌ ಅವರು 21 ವರ್ಷಗಳ ಹಿಂದೆ (1998, 2002, 2003 ಮತ್ತು 2005ರಲ್ಲಿ ) ಕೇಳಿದ್ದ ಚುಕ್ಕೆ ರಹಿತ ಪ್ರಶ್ನೆಗಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು.

 

ಈ ಕುರಿತು ಸರ್ಕಾರಿ ಭರವಸೆಗಳ ಸಮಿತಿಯು ಅಂದಿನಿಂದಲೂ ಕಾಯ್ದಿರಿಸುತ್ತಿತ್ತು. ಆದರೀಗ ಈ ಎಲ್ಲಾ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ನೀಡಿರುವ ಲಿಖಿತ ಮತ್ತು ಮೌಖಿಕ ಹೇಳಿಕೆಯನ್ನು ಆಧರಿಸಿ ಉಡುಪಿ ಶಾಸಕ ಕೆ ರಘುಪತಿ ಭಟ್‌ ಅಧ್ಯಕ್ಷತೆಯಲ್ಲಿರುವ ಸರ್ಕಾರಿ ಭರವಸೆಗಳ ಸಮಿತಿಯು ಈ ಎಲ್ಲಾ ಭರವಸೆಗಳನ್ನೂ ಮುಕ್ತಾಯಗೊಳಿಸಿದೆ. ಈ ಕುರಿತು 2022ರ ಮಾರ್ಚ್‌ 21ರಂದು ನಡೆದ ಅಧಿವೇಶನದಲ್ಲಿ ಸರ್ಕಾರಿ ಭರವಸೆಗಳ ಸಮಿತಿಯ ಹನ್ನೆರಡನೇ ವರದಿಯನ್ನು ಮಂಡಿಸಿತ್ತು.

 

ಆದರೆ ವಾಸ್ತವದಲ್ಲಿ ಕಂದಾಯ ಭೂಮಿ ಕಬಳಿಕೆ ಪ್ರಕರಣಗಳ ಕುರಿತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನೇನೂ ಕೈಗೊಂಡಿಲ್ಲ. ಅಲ್ಲದೆ ಕಬಳಿಕೆ ಅಗಿರುವ ಭೂಮಿಯನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರದ ವಶಕ್ಕೆ ಪಡೆದಿಲ್ಲ. ಆದರೂ ಅಧಿಕಾರಿಗಳು ನೀಡಿದ್ದ ಲಿಖಿತ ವಿವರಣೆಯನ್ನೇ ಆಧಾರವಾಗಿಟ್ಟುಕೊಂಡು ಎಲ್ಲಾ ಭರವಸೆಗಳನ್ನೂ ಮುಕ್ತಾಯಗೊಳಿಸಿರುವುದು ಅಚ್ಚರಿ ಮೂಡಿಸಿತ್ತು.

 

ಬೆಂಗಳೂರು ನಗರದ ಸುತ್ತಮುತ್ತ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಜಮೀನನ್ನು ಅನಧಿಕೃತವಾಗಿ ಕಬಳಿಸಲಾಗಿತ್ತು. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ ಇದ್ದ 1,22,918 ಎಕರೆ ಸರ್ಕಾರಿ ಜಮೀನಿನ ಪೈಕಿ 33, 877 ಎಕರೆ ಜಮೀನು ಒತ್ತುವರಿಯಾಗಿತ್ತು. ಈ ಕುರಿತು ಎ ಟಿ ರಾಮಸ್ವಾಮಿ ಅಧ್ಯಕ್ಷತೆಯ ಜಂಟಿ ಸದನ ಸಮಿತಿ ವರದಿ ನೀಡಿತ್ತು.

 

ಸರ್ಕಾರಿ ಭರವಸೆಗಳ ಸಮಿತಿ ನೀಡಿರುವ ವರದಿ ಪ್ರತಿ

 

ವರದಿ ನೀಡಿದ ನಂತರ ಒತ್ತುವರಿ ತೆರವುಗೊಳಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದ ಸರ್ಕಾರವು 2021ರ ಜೂನ್‌ ಅಂತ್ಯಕ್ಕೆ 16, 193.25 ಎಕರೆ ಜಮೀನನಷ್ಟೇ ಒತ್ತುವರಿಯಿಂದ ತೆರವುಗೊಳಿಸಿದೆ. ಇನ್ನೂ 17, 684 ಎಕರೆಯನ್ನು ಒತ್ತುವರಿಯಿಂದ ತೆರವುಗೊಳಿಸಲು ಬಾಕಿ ಇದೆ ಎಂಬುದು ಭರವಸೆ ಸಮಿತಿಯು 12ನೇ ವರದಿಯಲ್ಲಿ ವಿವರಿಸಲಾಗಿತ್ತು.

 

ಸರ್ಕಾರಿ ಜಮೀನುಗಳ ತೆರವಿಗಾಗಿ ರಾಜ್ಯ ಸರ್ಕಾರವು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ರಚಿಸಿದೆ. ಭೂ ಒತ್ತುವರಿಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಲನ್ನು ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆಯೇ ವಿನಃ ಭೂ ಕಬಳಿಕೆ ಅವಧಿಯಲ್ಲಿ ಕರ್ತವ್ಯಲೋಪವೆಸಗಿದ್ದ ಐಎಎಸ್‌, ಕೆಎಎಸ್‌ ಸೇರಿದಂತೆ ಇನ್ನಿತರೆ ವೃಂದದ ಅಧಿಕಾರಿಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಹೀಗಾಗಿ ಭರವಸೆ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೂ ಶಾಸಕ ಕೆ ರಘುಪತಿ ಭಟ್‌ ಅಧ್ಯಕ್ಷತೆಯ ಸರ್ಕಾರಿ ಭರವಸೆಗಳ ಸಮಿತಿಯು ಹಿಂದಿನ ಭರವಸೆಗಳನ್ನು ಮುಕ್ತಾಯಗೊಳಿಸಿತ್ತು.

 

‘ಖಾಸಗಿ ಬಡಾವಣೆ ಮಾಡಲು ಭೂ ಒತ್ತುವರಿಯಾಗಿರುವುದು ಅಥವಾ ಅನಧಿಕೃತ ಮಳಿಗೆ ತೆರೆಯಲಾಗಿದ್ದರೆ ಅಂತಹವುಗಳನ್ನು ನಿರ್ದಾಕ್ಷ್ಯಿಣ್ಯವಾಗಿ ತೆರವು ಮಾಡಲಾಗುವುದು. ಶೇ. 50ರಷ್ಟು ಅಕ್ರಮ ಭೂ ಒತ್ತುವರಿ ತೆರವು ಮಾಡಲಾಗಿದೆಯೆಂದು ಇಲಾಖಾಧಿಕಾರಿಗಳು ಸಮಿತಿಗೆ ಲಿಖಿತ ಮತ್ತು ಮೌಖಿಕವಾಗಿ ತಿಳಿಸಿದ್ದನ್ನು ಸಮಿತಿಯು ಚರ್ಚಿಸಿದೆ. ಬಾಕಿ ಇರುವ ಅಕ್ರಮ ಭೂ ಒತ್ತುವರಿಯನ್ನು ಕಾಲಮಿತಿಯೊಳಗೆ ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿ ಈ ಎಲ್ಲಾ ಭರವಸೆಗಳನ್ನು 2021ರ ಸೆ.9ರ 2ರಂದು ಮುಕ್ತಾಯಗೊಳಿಸಿತು,’ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.

 

ಮೂಲ ದಾಖಲೆಗಳಿಲ್ಲದೆಯೇ ಜೆರಾಕ್ಸ್‌ ಪ್ರತಿ ಆಧಾರದ ಮೇಲೆ ಹಕ್ಕು ದಾಖಲೆ ಮಾಡಿದ್ದ ಪ್ರಕರಣಗಳನ್ನು ಹೊರಗೆಳೆದಿದ್ದ ಆರ್‌ ಅಶೋಕ್‌, ನಕಲಿ ದಾಖಲೆಗಳ ಆಧರಿಸಿಯೇ  ಜಾಲ ಹೋಬಳಿಯ 15 ಎಕರೆ ಜಮೀನು ಪರಭಾರೆ ಆಗಿದ್ದನ್ನು ಬಯಲು ಮಾಡಿದ್ದರು.

 

ರಾಮನಗರ ತಾಲೂಕು ಬಿಡದಿ ಹೋಬಳಿಯಲ್ಲಿ ಖಾಸಗಿ ಸಂಸ್ಥೆಗಳು ಸರ್ಕಾರಕ್ಕೆ ಮೋಸ ಮಾಡಿ 28 ಎಕರೆ 34 ಗುಂಟೆ ವಿಸ್ತೀರ್ಣದ ಜಮೀನು ವಶಪಡಿಸಿಕೊಂಡಿದ್ದ ಪ್ರಕರಣಗಳ ಬಗ್ಗೆ ಮತ್ತೊಬ್ಬ ಹಾಲಿ ಸಚಿವ ಜಗದೀಶ್‌ ಶೆಟ್ಟರ್‌ ಅವರು 2003ರ ಆಗಸ್ಟ್‌ 4ರಂದು ಚುಕ್ಕೆ ರಹಿತ ಪ್ರಶ್ನೆ(ಸಂಖ್ಯೆ5227)ಯನ್ನು ಸದನದಲ್ಲಿ ಮಂಡಿಸಿದ್ದರು.

 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ, ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು 2014ರ ಜನವರಿ 1ರಂದು ಆದೇಶಿಸಿತ್ತು. ಆದರೆ ಅಧಿಕಾರಿಗಳು ಭೌತಿಕವಾಗಿ ವಶಕ್ಕೆ ಪಡೆಯದೆಯೇ ದಾಖಲೆಗಳಲ್ಲಿ ಮಾತ್ರ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ನಮೂದಿಸಿದ್ದರು.

 

ಅದೇ ರೀತಿ ವಿ ಸೋಮಣ್ಣ, ಆರ್‌ ಅಶೋಕ್‌ ಮತ್ತು ಅರಗ ಜ್ಞಾನೇಂದ್ರ ಜಂಟಿಯಾಗಿ ಬೆಂಗಳೂರು ನಗರದ ಸುತ್ತಮುತ್ತ ಭೂ ಕಬಳಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ 2005ರ ಜುಲೈ 4ರಂದು ಚುಕ್ಕೆ ರಹಿತ ಪ್ರಶ್ನೆಯನ್ನು ( ಸಂಖ್ಯೆ 4001-4003-4223-4313) ಸದನದಲ್ಲಿ ಮಂಡಿಸಿದ್ದರು. ಬೆಂಗಳೂರು ನಗರ ಸುತ್ತಮುತ್ತ ನಡೆದಿರುವ ಭೂ ಕಬಳಿಕೆಯಲ್ಲಿ ಶಾಮೀಲಾದ ಸುಮಾರು 79 ಅಧಿಕಾರಿಗಳ ವಿರುದ್ಧ  ಇಲಾಖೆ ವಿಚಾರಣೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಸದನದಲ್ಲಿ ಆರೋಪಿಸಿದ್ದನ್ನು ಸ್ಮರಿಸಬಹುದು.

Hot this week

ಅಪೆಕ್ಸ್ ಬ್ಯಾಂಕ್‌ನಲ್ಲಿ 1,000 ಕೋಟಿ ಹಗರಣ; ಹೈಕೋರ್ಟ್‌ನಲ್ಲಿ ಪಿಐಎಲ್‌, ಸರ್ಕಾರಕ್ಕೆ ಎದುರಾಗಲಿದೆಯೇ ಸಂಕಷ್ಟ?

ಬೆಂಗಳೂರು; ಕೃಷಿಗೆ ಸಂಬಂಧಿಸದ ಉದ್ದೇಶಗಳಿಗಾಗಿ ಸಾಲ ಮಂಜೂರಾತಿ,  ಈಗಾಗಲೇ ಅನುತ್ಪಾದಕ ಆಸ್ತಿಗಳೆಂದು (Non-Performing...

ರೈಲ್ವೇ- ವಿಮಾನ ಭತ್ಯೆ; 15ನೇ ವಿಧಾನಸಭೆಯ ಶಾಸಕರಿಗೆ 16.32 ಕೋಟಿ ಮರು ಪಾವತಿ

ಬೆಂಗಳೂರು; ಹದಿನೈದನೇ ವಿಧಾಸಭೆ ಅವಧಿಯಲ್ಲಿ ರಾಜ್ಯದ 224 ಶಾಸಕರು  16.32 ಕೋಟಿಯಷ್ಟು...

ಆರ್ಥಿಕ ಸ್ಥಿತಿ ಬಹಿರಂಗಪಡಿಸಿ ಕೋಲಾಹಲ ಎಬ್ಬಿಸಿದ್ದ ಅನಧಿಕೃತ ಟಿಪ್ಪಣಿಯ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

ಬೆಂಗಳೂರು; ರಾಜ್ಯ ಸರ್ಕಾರವು ₹2 ಲಕ್ಷ ಕೋಟಿಗೂ ಹೆಚ್ಚಿನ ಕಾಮಗಾರಿಗಳ ಬಾಕಿ...

ಸ್ಟಿಂಗ್ ಆಪರೇಷನ್‌; ಅಸಲು ದಾವೆ ಬೆನ್ನಲ್ಲೇ ಪೊಲೀಸ್‌ ಆಯುಕ್ತರಿಗೂ ದೂರು ಸಲ್ಲಿಸಿ ಯಾವ ಭಯವೂ ನನಗಿಲ್ಲವೆಂದ ಸಿದ್ದರಾಮಯ್ಯ

ಬೆಂಗಳೂರು; ಯೂ ಟ್ಯೂಬ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು...

21 ಪ್ಯಾಕೇಜ್‌ ಟೆಂಡರ್; ಶೇ. 5 ಪ್ರೀಮಿಯಂ ಮೀರಿದ್ದರೂ ಪರಿಶೀಲನೆ ಸಮಿತಿ ರಚಿಸಲು ಆಕ್ಷೇಪ ಎತ್ತಿದ್ದ ಡಿಕೆಶಿ

ಬೆಂಗಳೂರು;  ಜಿಬಿಎ ವ್ಯಾಪ್ತಿಯಲ್ಲಿ  ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ...
Please Scan to make Your Contribution

Topics

ಅಪೆಕ್ಸ್ ಬ್ಯಾಂಕ್‌ನಲ್ಲಿ 1,000 ಕೋಟಿ ಹಗರಣ; ಹೈಕೋರ್ಟ್‌ನಲ್ಲಿ ಪಿಐಎಲ್‌, ಸರ್ಕಾರಕ್ಕೆ ಎದುರಾಗಲಿದೆಯೇ ಸಂಕಷ್ಟ?

ಬೆಂಗಳೂರು; ಕೃಷಿಗೆ ಸಂಬಂಧಿಸದ ಉದ್ದೇಶಗಳಿಗಾಗಿ ಸಾಲ ಮಂಜೂರಾತಿ,  ಈಗಾಗಲೇ ಅನುತ್ಪಾದಕ ಆಸ್ತಿಗಳೆಂದು (Non-Performing...

ರೈಲ್ವೇ- ವಿಮಾನ ಭತ್ಯೆ; 15ನೇ ವಿಧಾನಸಭೆಯ ಶಾಸಕರಿಗೆ 16.32 ಕೋಟಿ ಮರು ಪಾವತಿ

ಬೆಂಗಳೂರು; ಹದಿನೈದನೇ ವಿಧಾಸಭೆ ಅವಧಿಯಲ್ಲಿ ರಾಜ್ಯದ 224 ಶಾಸಕರು  16.32 ಕೋಟಿಯಷ್ಟು...

ಆರ್ಥಿಕ ಸ್ಥಿತಿ ಬಹಿರಂಗಪಡಿಸಿ ಕೋಲಾಹಲ ಎಬ್ಬಿಸಿದ್ದ ಅನಧಿಕೃತ ಟಿಪ್ಪಣಿಯ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

ಬೆಂಗಳೂರು; ರಾಜ್ಯ ಸರ್ಕಾರವು ₹2 ಲಕ್ಷ ಕೋಟಿಗೂ ಹೆಚ್ಚಿನ ಕಾಮಗಾರಿಗಳ ಬಾಕಿ...

ಸ್ಟಿಂಗ್ ಆಪರೇಷನ್‌; ಅಸಲು ದಾವೆ ಬೆನ್ನಲ್ಲೇ ಪೊಲೀಸ್‌ ಆಯುಕ್ತರಿಗೂ ದೂರು ಸಲ್ಲಿಸಿ ಯಾವ ಭಯವೂ ನನಗಿಲ್ಲವೆಂದ ಸಿದ್ದರಾಮಯ್ಯ

ಬೆಂಗಳೂರು; ಯೂ ಟ್ಯೂಬ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು...

21 ಪ್ಯಾಕೇಜ್‌ ಟೆಂಡರ್; ಶೇ. 5 ಪ್ರೀಮಿಯಂ ಮೀರಿದ್ದರೂ ಪರಿಶೀಲನೆ ಸಮಿತಿ ರಚಿಸಲು ಆಕ್ಷೇಪ ಎತ್ತಿದ್ದ ಡಿಕೆಶಿ

ಬೆಂಗಳೂರು;  ಜಿಬಿಎ ವ್ಯಾಪ್ತಿಯಲ್ಲಿ  ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ...

ಪ್ರಭಾವಿ ನಾಯಕನ ವಿರುದ್ಧ ಸ್ಟಿಂಗ್ ಕಾರ್ಯಾಚರಣೆ; ನ್ಯಾಯಾಂಗ ತನಿಖೆಗೆ ಹೈಕೋರ್ಟ್‌, ಬಾಲ ನ್ಯಾಯಮಂಡಳಿ ಮೆಟ್ಟಿಲೇರಿದ ನೈಜ ಹೋರಾಟಗಾರರ ವೇದಿಕೆ

ಬೆಂಗಳೂರು; ಯೂ ಟ್ಯೂಬ್‌ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ  ‘ಹನಿಟ್ರ್ಯಾಪ್’ ಪ್ರಕರಣದ...

ಸ್ಟಿಂಗ್ ಆಪರೇಷನ್‌; ಮಾಧ್ಯಮಗಳ ವಿರುದ್ಧ ತಡೆಯಾಜ್ಞೆಗೆ ಸಿದ್ದರಾಮಯ್ಯ ಎಂಬುವರಿಂದ ಅಸಲು ದಾವೆ ದಾಖಲು, ನಾಳೆಯೇ ಅರ್ಜಿ ವಿಚಾರಣೆ

ಬೆಂಗಳೂರು;  ರಾಜ್ಯ ರಾಜಕಾರಣದಲ್ಲಿ ಬಹು ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಬಗ್ಗೆ...

ಅಕ್ರಮ ಖಾತೆ, ಅನರ್ಹರಿಗೆ 79.28 ಕೋಟಿ ರು ಪರಿಹಾರ; ಕೆಎಎಸ್ ಅಧಿಕಾರಿ ವಿರುದ್ಧದ ಮೊದಲ ವಿಚಾರಣೆಯಲ್ಲೇ ಲೋಪ, ಮರು ವಿಚಾರಣೆಗೆ ಆದೇಶ

ಬೆಂಗಳೂರು; ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ 54 ಎಕರೆಗೆ...

Related Articles

Popular Categories

error: Content is protected !!