ಬಡ್ಡಿ ಸಹಾಯಧನ ಕಡಿಮೆ; ಕೃಷಿ ಸಾಲ ವಿತರಣೆಗೆ ಸಿಗದ ಪೂರಕ ಸ್ಪಂದನೆ, ಸರ್ಕಾರಕ್ಕೆ ಹೊಸ ತಲೆನೋವು

ಬೆಂಗಳೂರು; ತಮ್ಮ ಸ್ವಂತ ಬಂಡವಾಳದಲ್ಲಿ ವಿತರಿಸಿದ ಕೃಷಿ ಸಾಲಗಳಿಗೆ ಸರ್ಕಾರ ನಿಗದಿಪಡಿಸುವ ಬಡ್ಡಿ ಸಹಾಯ ಧನ ಕಡಿಮೆಯಾಗುತ್ತಿದೆ. ಇದರಿಂದ ಕೃಷಿ ಸಾಲದಿಂದ ಆದಾಯ ಕಡಿಮೆ ಆಗುತ್ತಿದೆ. ಕೃಷಿಯೇತರ ಸಾಲದಿಂದ ಮಾತ್ರ ಬ್ಯಾಂಕ್‌ಗಳನ್ನು ನಡೆಸಲು ಸಾಧ್ಯವಾಗುತ್ತಿದೆ ಎಂದು ಬಹುತೇಕ ಡಿಸಿಸಿ ಬ್ಯಾಂಕ್‌ಗಳು ಆರ್ಥಿಕ ಸಂಕಷ್ಟವನ್ನು ಸರ್ಕಾರದ ಮುಂದೆ ತೆರೆದಿಟ್ಟಿವೆ.

 

ಅಲ್ಲದೇ 2022-23ನೇ ಸಾಲಿಗೆ ಡಿಸಿಸಿ ಬ್ಯಾಂಕ್, ಪ್ಯಾಕ್ಸ್‌ಗಳ ಮೂಲಕ ವಿತರಿಸಿದ ಮಧ್ಯಮಾವಧಿ,ದೀರ್ಘಾವಧಿ ಕೃಷಿ ಸಾಲಗಳಿಗೆ ಶೆ.7.90ರ ಬಡ್ಡಿ ಸಹಾಯ ಧನ ನಿಗದಿಪಡಿಸಿದಂತೆ 2023-24ನೇ ಸಾಲಿಗೆ ವಿತರಿಸಿದ ಸಾಲಗಳಿಗೂ ಸಹ  ನಿಗದಿಪಡಿಸಬೇಕು ಎಂಬ ಬೇಡಿಕೆಯ ಪ್ರಸ್ತಾವನೆ ಸಲ್ಲಿಸಿದೆ.

 

ಗ್ಯಾರಂಟಿ ಯೋಜನೆಗಳಿಂದಾಗಿ ಸಂಪನ್ಮೂಲ ಕ್ರೋಢೀಕರಣ ಮತ್ತು ಸಾಲ ಎತ್ತುವಳಿ ಸಂಬಂಧ ರಾಜ್ಯ ಕಾಂಗ್ರೆಸ್‌ ಸರ್ಕಾರವು ಚಿಂತಿತವಾಗಿದೆ. ರಾಜ್ಯದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುತ್ತಿರುವ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿಯಲ್ಲಿ ಹೆಚ್ಚಳ ಮಾಡಲಾಗುವುದು ಎಂದು ಆಯವ್ಯಯದಲ್ಲಿ ಘೋಷಿಸಿದೆ. ಇದರ ಬೆನ್ನಲ್ಲೇ ಇದೀಗ ಡಿಸಿಸಿ ಬ್ಯಾಂಕ್‌ಗಳು ಇರಿಸಿರುವ ಬೇಡಿಕೆಗಳು ಸರ್ಕಾರಕ್ಕೆ ಇನ್ನಷ್ಟು  ಆರ್ಥಿಕ ಸಂಕಷ್ಟಕ್ಕೆ ದೂಡಲಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿವೆ.

 

2023-24ನೇ ಸಾಲಿಗೆ ರಾಜ್ಯದ ರೈತರಿಗೆ ಪತ್ತಿನ ಸಹಕಾರಿ ಸಂಸ್ಥೆಗಳು ಶೂನ್ಯ ಬಡ್ಡಿ ದರ ಅನ್ವಯವಾಗುವಂತೆ 5 ಲಕ್ಷ ರು.ಗಳವರೆಗೆ ಅಲ್ಪಾವಧಿ ಕೃಷಿ ಸಾಲ ಮತ್ತು 2 ಲಕ್ಷ ರು.ಗಳವರೆಗೆ ಪಶು ಸಂಗೋಪನೆ ಹಾಗೂ ಮೀನುಗಾರಿಕೆ ದುಡಿಯುವ ಬಂಡವಾಳಸಾಲ ವಿತರಿಸುವುದು ಸೇರಿದಂತೆ 15 ಲಕ್ಷ ರು.ವರೆಗೆ ಶೇ.3ರ ಬಡ್ಡಿ ದರ ಅನ್ವಯವಾಗುವಂತೆ ಸಾಲ ವಿತರಿಸಲು ಸಹಕಾರ ಸಂಘಗಳ ನಿಬಂಧಕರು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಡಿಸಿಸಿ ಬ್ಯಾಂಕ್‌ಗಳ ಆರ್ಥಿಕ ಸಂಕಷ್ಟಗಳನ್ನು ವಿವರಿಸಲಾಗಿದೆ.

 

ಸಹಕಾರ ಸಂಘಗಳ ನಿಬಂಧಕರು 2023ರ ಆಗಸ್ಟ್‌ 2ರಂದು ಸಲ್ಲಿಸಿರುವ 4 ಪುಟದ ಪ್ರಸ್ತಾವನೆಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

‘ಬಡ್ಡಿ ಸಹಾಯ ಧನ ಕಡಿಮೆಯಾಗುತ್ತಿರುವುದರಿಂದ ಹೆಚ್ಚು ಕೃಷಿ ಸಾಲವನ್ನು ವಿತರಿಸಲು ಪೂರಕವಾಗಿ ಸ್ಪಂದಿಸುತ್ತಿಲ್ಲ. ಇದಕ್ಕೆ ಪೂರಕವಾಗಿ ಆರ್ಥಿಕ ಇಲಾಖೆಯು 2022-23ನೇ ಸಾಲಿಗೆ ಬಡ್ಡಿ ಸಹಾಯ ಧನ ನಿಗದಿಪಡಿಸುವಾಗ ಡಿಸಿಸಿ ಬ್ಯಾಂಕ್‌ಗಳ ವ್ಯವಹಾರ ವೆಚ್ಚವನ್ನು ಶೇ.1.75ರಿಂದ ಶೇ.1.50ಕ್ಕೆ ಕಡಿಮೆ ಮಾಡಿ ಬ್ಯಾಂಕ್‌ಗಳು ವೆಚ್ಚವನ್ನು ಕಡಿಮೆ ಮಾಡಲು ಸೂಚಿಸಿವೆ,’ ಎಂದು ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್‌ ರಾಜೇಂದ್ರ ಅವರು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮುಂದಿರಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಡಿಸಿಸಿ ಬ್ಯಾಂಕ್‌ಗಳ ವಾಸ್ತವ ವೆಚ್ಚದ ಅಧಾರದ ಮೇಲೆ ಡಿಸಿಸಿ ಬ್ಯಾಂಕ್‌ಗಳ ಆಡಳಿತ ವೆಚ್ಚ ಸುಮಾರ ಶೇ. 2ಕ್ಕಿಂತ ಹೆಚ್ಚಿದೆ. ವ್ಯವಹಾರ ವೆಚ್ಚ ಅಂದರೆ ವೇತನ ಮತ್ತು ದೈನಂದಿನ ವೆಚ್ಚ ಶೇ.1.76ರಷ್ಟಿದೆ. ದೇಶದ ಇತರೆ ಬ್ಯಾಂಕ್‌ಗಳಗಳನ್ನು ಪರಿಶೀಲಿಸಿದಾಗ 2023ರ ಅಂತ್ಯಕ್ಕೆ ಎಸ್‌ಬಿಐ ಶೇ.1.77, ಇಂಡಿಯನ್‌ ಬ್ಯಾಂಕ್‌ ಶೆ.1.70, ಸಿಂಡಿಕೇಟ್‌ ಬ್ಯಾಂಕ್‌ ಶೆ.1.94ರಷ್ಟಿದೆ. ಡಿಸಿಸಿ ಬ್ಯಾಂಕ್‌ಗಳದ್ದು ಇದಕ್ಕಿಂತಲೂ ಕಡಿಮೆ ಇದೆ ಎಂದು ಉಲ್ಲೇಖಿಸಲಾಗಿದೆ.

 

ಸಹಕಾರಿ ಕೃಷಿ ಸಾಲ ವಿತರಣೆಯಲ್ಲಿ ಮೂರು ಹಂತದ ವ್ಯವಸ್ಥೆ ಇದೆ. ಪ್ಯಾಕ್ಸ್‌ಗಳ ಮೇಲೆ ಶೇ.2ರಷ್ಟು ಆಡಳಿತ ವೆಚ್ಚ ರಾಜ್ಯಕ್ಕೆ ಹೆಚ್ಚಿನ ಹೊರೆಯಾದರೂ ಸಹ ಸಹಕಾರ ಕ್ಷೇತ್ರದಲ್ಲಿ ತಲಾ ಸಾಲ ವಿತರಣೆ ರು. 0.74 ಲಕ್ಷ ರಗಳಿದ್ದು, ವಾಣಿಜ್ಯ ಬ್ಯಾಂಕ್‌ಗಳ ತಲಾ ಕೃಷಿ ಸಾಲ ವಿತರಣೆ 2.00 ಲಕ್ಷ ರುಗಳಿಗಿಂತ ಹೆಚ್ಚಾಗಿದೆ. ರೈತರ ಮನೆ ಬಾಗಿಲಿಗೆ ಸಾಲ ಮತ್ತು ಇತರೆ ಸೇವೆಗಳನ್ನು ಒದಗಿಸುತ್ತಿವೆ. ಆದ್ದರಿಂದ ಡಿಸಿಸಿ ಬ್ಯಾಂಕ್‌ಗಳ ವ್ಯವಹಾರ ವೆಚ್ಚವನ್ನು ಶೇ.0.25ರಷ್ಟು ಕಡಿತ ಮಾಡದೇ ಈ ಮೊದಲು ಇದ್ದಂತೆ ಶೇ.1.75ಕ್ಕೆ ಪರಿಗಣಿಸಲು ಕೋರಿವೆ.

 

2022-23ನೇ ಸಾಲಿನಲ್ಲಿ ವಿತರಿಸಿದ ಸಾಲಗಳು 2023-24ರಲ್ಲಿ ವಸೂಲಾಗಲಿವೆ. ಸುಮಾರು ಶೇ.50ರಷ್ಟು ಮೊತ್ತ ಮಾರ್ಚ್‌ 2023ಕ್ಕೆ ಇದ್ದ ಠೇವಣಿಗಳ ಬಡ್ಡಿ ದರಕ್ಕೆ ಮತ್ತು ಶೇ. 50ರಷ್ಟು ಮೊತ್ತ 2023-24ರಲ್ಲಿ ಠೇವಣಿಗಳ ದರಕ್ಕೆ ಬದಲಾಗಲಿದೆ.

 

21 ಡಿಸಿಸಿ ಬ್ಯಾಂಕ್‌ಗಳ ಪೈಕಿ ಮೈಸೂರು ಡಿಸಿಸಿ ಬ್ಯಾಂಕ್‌ ಮಾತ್ರ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಠೇವಣಿಗಳ ಬಡ್ಡಿ ದರವನ್ನು ಕಡಿಮೆ ಮಾಡಿದೆ. ಉಳಿದ ಎಲ್ಲಾ ಬ್ಯಾಂಕ್‌ಗಳು ಸಹ ಶೇ. 0.25ರಿಂದ ಶೇ.1.50ರವರೆಗೆ ಹೆಚ್ಚಿಗೆ ಮಾಡಿವೆ.

 

ಸರಾಸರಿ ಹೆಚ್ಚಿಗೆ ಆಗುವ ಬಡ್ಡಿ ದರವನ್ನು ಶೇ.0.50ಕ್ಕೆ ಪರಿಗಣಿಸಿದಲ್ಲಿ 2023-24ರ ಅವಧಿಗೆ ಇದರ ಶೇ.50ರಷ್ಟು ಸೇ.0.25ನ್ನು ಹೆಚಚಿನ ಬಡ್ಡಿಯನ್ನು 2022-23ನೇ ಸಾಲಿನ ಸರಾಸರಿ ಬಡ್ಡಿಗೆ ಸೇರಿಸಿದೆ ಎಂದು ವಿವರಿಸಿದ್ದಾರೆ.

 

ಆರ್‍‌ಬಿಐ ಎಂಸಿಎಲ್‌ಆರ್‍‌ ನಿಯಮದಂತೆ ಸಾಲ ವಿತರಣೆಯಲ್ಲಿ ಬಡ್ಡಿ ದರಗಳನ್ನು ನಿಗದಿಪಡಿಸಲು ಬ್ಯಾಂಕ್‌ಗಳು return on networthಗೆ ಅನುಗುಣವಾಗಿ ಲಾಭಾಂಶವನ್ನು ಸಹ ಸೇಋಇಸಲು ತಿಳಿಸಿವೆ. ಇದರ ಅನ್ವಯ ಶೇ.0.30ರಷ್ಟು ಹೆಚ್ಚ ಲಾಭಾಂಶವನ್ನು ಬಡ್ಡಿ ಸಹಾಯ ಧನದಲ್ಲಿ ಸೇರಿಸಬೇಕಿರುತ್ತದೆ. ಮತ್ತು negative carry on crrಗೆ ಸಹ ಹೆಚ್ಚಿನ ಬಡ್ಡಿ ಸೇರಿಸಲು ತಿಳಿಸಿವೆ. ಇದರ ಅನ್ವಯ ಪ್ರಸ್ತುತ ಸಿಆರ್‍‌ಆರ್‍‌ ಶೇ.4.5ರಷ್ಟಿದ್ದು ಇದರಿಂದ ನಷ್ಟವಾಗುವ ದರ ಶೇ.0.26ರಷ್ಟರಲಿದೆ.

 

ಒಟ್ಟಾರೆ cost of fund ಗೆ ಹೆಚ್ಚಿನ ಸಿಡಿ ಪ್ರಮಾಣ ಇರುವುದರಿಂದ ತನ್ನ ಠೇವಣಿಗಳ ವೆಚಚಕ್ಕೆ ಮಾತ್ರ ಲಾಭಾಂಶ ಮತ್ತು ಸಿಆರ್‍‌ಆರ್‍‌ ನಷ್ಟ ಸೇರಿಸ್ದು ಇದರಿಂದ ಡಿಸಿಸಿ ಬ್ಯಾಂಕ್‌ಗಳಿಗೆ ಶೇ.0.27ರಷ್ಟು ಹೆಚ್ಚಿನ ಬಡ್ಡಿ ಮಾತ್ರ ಪರಿಗಣಿಸಲಾಗಿದೆ.

 

ಸರ್ಕಾರದ ಯೋಜನೆಯಿಂದ ಡಿಸಿಸಿ ಬ್ಯಾಂಕ್‌ಗಳು ರೈತರಿಂದ ಯಾವುದೇ ಬಡ್ಡಿ ವಸೂಲು ಮಾಡದೇ ಸರ್ಕಾರದಿಂದ ಬಿಡುಗಡೆಯಾಗುವ ಬಡ್ಡಿ ಸಹಾಯ ಧನವನ್ನೇ ಅವಲಂಬಿಸಿದೆ. ತ್ರೈಮಾಸಿಕ ಸಾಲ ವಸೂಲಾತಿ ಆಧಾರವಾಗಿ ಬಿಲ್‌ ಸಲ್ಲಿಸಲು ಷರತ್ತು ಇರುವ ಕಾಋಣ ರೈತರು ಸಾಲ ಮರು ಪಾವತಿಸಿದ ದಿನಾಂಕದಿಂದ ಸುಆರು 6 ತಿಂಗಳವರೆಗೆ ಬಿಲ್‌ ತಯಾರಿಸಲು ಕಾಲಾವಕಾಶ ತೆಗೆದುಕೊಳ್ಳುತ್ತಿದೆ ಎಂದು ವಾಸ್ತವತೆಯನ್ನು ಪ್ರಸ್ತಾವನೆಯಲ್ಲಿ ತೆರೆದಿಟ್ಟಿವೆ.

 

ಇದಲ್ಲದೇ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ಈ ವರ್ಗದ ರೈತರ ಅನುಪಾತಕ್ಕಿಂತ ಹೆಚ್ಚಿನ ಆಯವ್ಯಯ ಅವಕಾಶ ಕಲ್ಪಿಸಲಾಗುತ್ತಿದೆ. ಹೀಗಾಗಿ ಅನುದಾನವು ಸರ್ಕಾರಕ್ಕೆ ಮರಳಿಸಲಾಗುತ್ತಿದೆ. ಇದಕ್ಕೆ ಪೂರವಕಾಗಿ ಸಾಮಾನ್ಯ ಶೀರ್ಷಿಕೆಯಲ್ಲಿ ಅನುದಾನ ಒದಗಿಸುತ್ತಿಲ್ಲ.

 

ಇದರಿಂದ ಡಿಸಿಸಿ ಬ್ಯಾಂಕ್‌ಗಳು ಸುಮಾರು ಒಂದು ವರ್ಷದ ನಂತರ ಬಡ್ಡಿ ಸಹಾಯ ಧನ ಪಡೆಯುತ್ತಿದ್ದು ಇದರಿಂದ ಶೇ.5.7ರ ಬಡ್ಡಿ ಸಹಾಯ ಧನ ದರಕ್ಕೆ ಶೇ. 7ರ ಬಡ್ಡಿ ದರದಲ್ಲಿ 0.40ರಷ್ಟು ಬಡ್ಡಿ ನಷ್ಟವಾಗುತ್ತಿದೆ. ಇದನ್ನು ಸರಿದೂಗಿಸಲು ಸರ್ಕಾರವು ಬಡ್ಡಿ ಸಹಾಯ ಧನ ದರದಲ್ಲಿ ಶೆ.0.40ರಷ್ಟು ಹೆಚ್ಚಿಗೆ ಮಾಡಬೇಕಿದೆ. ಅಥವಾ ಸರ್ಕಾರ ಆಯಾ ವರ್ಷದಲ್ಲಿ ಅವಕಾಶ ಕಲ್ಪಿಸಿದ ಸಂಪೂರ್ಣ ಮೊತ್ತವನ್ನು ವರ್ಷದ ಪ್ರಾರಂಭದಲ್ಲಿಯೇ ಡಿಸಿಸಿ ಬ್ಯಾಂಕ್‌ಗಳ ಅಂದಾಜು ಬಿಲ್‌ಗಳ ಆಧಾರದ ಮೇಲೆ ಅನುದಾನ ನೀಡಬಹುದಾಗಿದೆ.

 

ನಬಾರ್ಡ್‌ ರಿಯಾಯಿತಿ ಬಡ್ಡಿ ದರ ಪುನರ್ಧನದ ಮಿತಿಯನ್ನು 3.00 ಲಕ್ಷ ರು.ಗಳವರೆಗೆ ವಿತರಿಸಿದ ಸಾಲಗಳಿಗೆ ಮಾತ್ರ ನೀಡಲಿದೆ. 3.00 ಲಕ್ಷ ರು.ಗಳಿಂದ 5.00 ಲಕ್ಷ ರವರೆಗಿನ ಸಾಶಲಗಳಿಗೆ ಹೆಚಚಿನ ಬಡ್ಡಿ ದರದ ಸಾಲದ ಮಿತಿಯನ್ನು ಉಪಯೋಗಿಸಿಕೊಳ್ಳಬೇಕಿದೆ. ಆದ್ದರಿಂದ ಸಹಕಾರ ಸಂಘಗಳು 3.00 ಲಕ್ಷ ರುಗಳಿಂದ 5 ಲಕ್ಷ ರುಗಳವರೆಗೆ ವಿತರಿಸುವ ಸಾಲಗಳಿಗೆ ಬಂಡವಾಳವನ್ನು ನಬಾಢ್, ಅಪೆಕ್ಸ್‌, ಡಿಸಿಸಿ ಬ್ಯಾಂಕ್‌ಗಳು ತಲಾ ಶೇ.33.33ರಷ್ಟು ಭರಿಸಬಹುದು ಎಂದು ಅಂದಾಜಿಸಬಹುದು ಎಂದೂ ಸಲಹೆ ನೀಡಿವೆ.

 

ಹೀಗಾಗಿ ಇವುಗಳಿಗೆ ಬಡ್ಡಿಯು ಕ್ರಮವಾಗಿ ಶೇ.8.50, ಶೆ.7.75 ಮತ್ತು ಶೇ.6.24 ಇದ್ದು ಸರಾಸರಿ ಬಡ್ಡಿ ದರ ಶೇ.7.49 ಆಗಲಿದೆ. ಇದರ ಮೇಲೆ ಕೇಂದ್ರ ಸರ್ಕಾರದಿಂದ ಶೇ.1.50ರ ಬಡ್ಡಿ ಸಬ್‌ ವೆಷನ್‌ ಮತ್ತು ಶೆ.3ರ ಪ್ರೋತ್ಸಾಹ ಧನ ನೀಡದೇ ಇರುವುದರಿಂದ ಇವುಗಳನ್ನ ವೈಟೆಡ್‌ ಮಾಡಿದ್ದಲ್ಲಿ ಸರಾಸರಿ ಶೇ.2.06 ಬಡ್ಡಿ ಸಹಾಯ ಧನವನ್ನು ಹೆಚ್ಚುವರಿಯಾಗಿ ನಿಗದಿಪಡಿಸಬೇಕಿದೆ.

 

2023-24ನೇ ಸಾಲಿಗೆ ಕೃಷಿ ಸಾಲಗಳ ಗುರಿ ಮತ್ತು ಷರತ್ತುಗಳನ್ನು ನಿಗದಿಪಡಿಸಿ ಸರ್ಕಾರಿ ಅಧೇಶ ಹೊರಡಿಸಲು ಅಲ್ಪಾವಧಿ ಕೃಷಿ ಸಾಲ ಮತ್ತು ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲಗಳಿಗೆ ಪ್ರತ್ಯೇಕವಾಗಿ ಆದೇಶ ಹೊರಡಿಸಬೇಕು. 2023-24ನೇ ಸಾಲಿಗೆ 3.00 ಲಕ್ಷ ರು.ಗಳವರೆಗಿನ ಅಲ್ಪಾವಧಿ ಕೃಷಿ ಸಾಲಗಳಿಗೆ ಶೆ.7.20, ಮತ್ತು 3 ಲಕ್ಷದಿಂದ 5 ಲಕ್ಷವರೆಗಿನ ಸಾಲಗಳಿಗೆ ಶೇ.12.20ರ ಬಡ್ಡಿ ಸಹಾಯ ಧನ ದವನ್ನು ಪ್ರಸ್ತಾವಿಕವಾಗಿ ನಿಗದಿಪಡಿಸಬೇಕು. ಈ ಪೈಕಿ ಪ್ಯಾಕ್ಸ್‌ಗಳಿಗೆ ಶೇ.2ರ ಮಾರ್ಜಿನ್‌ ಹಂಚಿಕೆ ಮಾಡಬೇಕು ಎಂದು ಕೋರಿವೆ.

 

2022-23ನೇ ಸಾಲಿಗೆ ಅಲ್ಪಾವಧಿ ಕೃಷಿ ಸಾಲಗಳಿಗೆ ಡಿಸಿಸಿ ಬ್ಯಾಂಕ್‌ಗಳ ವ್ಯವಹಾರ ವೆಚ್ಚವನ್ನು ಶೇ.1.50ರ ಬದಲಿಗೆ ಕನಿಷ್ಠ ಶೇ.1.75ರಷ್ಟು ಪರಿಗಣಿಸಿ ಸೇ.7.20ರ ಬಡ್ಡಿ ಸಹಾಯ ಧನ ನಿಗದಿಪಡಿಸಬೇಕು. ಈ ಪೈಕಿ ಪ್ಯಾಕ್ಸ್‌ಗಳಿಗೆ ಶೇ. 2ರ ಮಾರ್ಜಿನ್‌ ಹಂಚಿಕೆ ಮಾಡಬೇಕು.

 

2022-23ನೇ ಸಾಲಿಗೆ ಡಿಸಿಸಿ ಬ್ಯಾಂಕ್, ಪ್ಯಾಕ್ಸ್‌ಗಳ ಮೂಲಕ ವಿತರಿಸಿದ ಮಧ್ಯಮಾವಧಿ,ದೀರ್ಘಾವಧಿ ಕೃಷಿ ಸಾಲಗಳಿಗೆ ಶೆ.7.90ರ ಬಡ್ಡಿ ಸಹಾಯ ಧನ ನಿಗದಿಪಡಿಸ, ಈ ಪೈಖಿ ಪ್ಯಾಕ್ಸ್‌ಗಳಿಗೆ ಶೆ.2ರ ಮಾರ್ಜಿನ್‌ ಹಂಚಿಕೆ ಮಾಡಬೇಕು. ಇದೇ ಬಡ್ಡಿ ಸಹಾಯಧನ ದರವನ್ನು 2023-24ನೇ ಸಾಲಿಗೆ ವಿತರಿಸಿದ ಸಾಲಗಳಿಗೂ ಸಹ ಪ್ರಸ್ತಾವಿಕವಾಗಿ ನಿಗದಿಪಡಿಸಲು ಪ್ರಸ್ತಾವನೆ ಸಲ್ಲಿಸಿದೆ.

 

2023-24ನೇ ಸಾಲಿ ಆಯವ್ಯಯದಲ್ಲಿ ರಾಜ್ಯದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುತ್ತಿರುವ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿಯಲ್ಲಿ ಹೆಚ್ಚಳ ಮಾಡಲಾಗುವುದು. ಪ್ರಸಕ್ತ ಸಾಲಿನಲ್ಲಿ 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25,000 ಕೋಟಿ ರು.ಗಳಷ್ಟು ಸಾಲ ವಿತರಣೆ ಮಾಡುವ ಗುರಿಯನ್ನೂ ಹೊಂದಿದೆ ಎಂದು ಘೋಷಿಸಿದೆ.

 

2022-23ನೇ ಸಾಲಿಗೆ 32.36 ಲಕ್ಷ ರೈತರಿಗೆ 22,337 ಕೋಟಿ ರು. ಅಲ್ಪಾವಧಿ ಬೆಳೆ ಸಾಲ ಮತ್ತು 0.64 ಲಕ್ಷ ರೈತರಿಗೆ 1,663 ಕೋಟಿ ಮಧ್ಯಮಾವಧಿ/ದೀರ್ಘಾವಧಿ ಸಾಲ ವಿತರಿಸಲು ಗುರಿ ಹೊಂದಿದೆ. ಮಾರ್ಚ್‌ ಅಂತ್ಯಕ್ಕೆ ಸಹಕಾರ ಸಂಘಗಳು ಪ್ಯಾಕ್ಸ್‌ ಬಂಡವಾಳ ಒಳಗೊಂಡಂತೆ 29.57 ಲಕ್ಷ ರೈತರಿಗೆ 21,868 ಕೋಟಿ ಬೆಳೆ ಸಾಲ ಮತ್ತು 54,264 ರೈತರಿಗೆ 1,661.30 ಕೋಟಿ ರು. ಗಳ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ವಿತರಿಸಿ ಶೇ.98.04ಷ್ಟು ಪ್ರಗತಿ ಸಾಧಿಸಿದೆ.

 

2023-24ನೇ ಸಾಲಿನಲ್ಲಿ 34.40 ಲಕ್ಷ ರೈತರಿಗೆ 23,300 ಕೋಟಿ ರು.ಗಳ ಅಲ್ಪಾವಧಿ ಕೃಷಿ ಸಾಲ ಮತ್ತು 0.64 ಲಕ್ಷ ರೈತರಿಗೆ 1,700 ಕೋಟಿ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ ಒಟ್ಟು 35 ಲಕ್ಷ ರೈತರಿಗೆ 25,000 ಕೋಟಿ ರು. ಕೃಷಿ ಸಾಲ ವಿತರಿಸಲು ಗುರಿಗೆ ಅನುಮೋದನೆ ನೀಡಲು ಕೋರಿದೆ.

the fil favicon

SUPPORT THE FILE

Latest News

Related Posts