ಬಿಎಸ್‌ವೈ, ನಿರಾಣಿ ವಿರುದ್ಧ ಭೂಹಗರಣ ಆರೋಪ; ಹೆಗ್ಡೆ ಅವಧಿಯಿಂದಲೂ ತನಿಖೆ ತೆವಳಿಕೆ

photo credit;tv9

ಬೆಂಗಳೂರು; ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ನಡೆದಿದೆ ಎನ್ನಲಾದ 200 ಎಕರೆ ಭೂಮಿ ಹಂಚಿಕೆ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಮುರುಗೇಶ್‌ ನಿರಾಣಿ ಮತ್ತಿತರರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು 2010ರಲ್ಲೇ ಸಲ್ಲಿಕೆಯಾಗಿದ್ದ ದೂರನ್ನು 12 ವರ್ಷವಾದರೂ ಲೋಕಾಯುಕ್ತ ತನಿಖಾಧಿಕಾರಿಗಳು ಇನ್ನೂ ತನಿಖೆಯನ್ನೇ ಪೂರ್ಣಗೊಳಿಸಿಲ್ಲ.

 

ಈ ಪ್ರಕರಣದ ಕುರಿತು ವಿಧಾನ ಪರಿಷತ್‌ನ ಅಂದು ಪ್ರತಿಪಕ್ಷ ನಾಯಕರಾಗಿದ್ದ ವಿ ಎಸ್‌ ಉಗ್ರಪ್ಪ ಮತ್ತು ಕಾಂಗ್ರೆಸ್‌ ಮುಖಂಡ ಬಿ ಎಲ್‌ ಶಂಕರ್‌ ಅವರು ದಾಖಲೆ ಸಮೇತ ಸಲ್ಲಿಸಿದ್ದ ದೂರನ್ನು ನೋಂದಾಯಿಸಿಕೊಂಡಿದ್ದ ಲೋಕಾಯುಕ್ತ ಸಂಸ್ಥೆಯು 12 ವರ್ಷಗಳಿಂದಲೂ ತನಿಖೆ ಹಾದಿಯಲ್ಲಿ ಈಗಲೂ ತೆವಳುತ್ತಲೇ ಇರುವುದು ಗೊತ್ತಾಗಿದೆ.

 

ದೂರಿನ ಕುರಿತು ಮಾಹಿತಿಯೇ ಇಲ್ಲವೆಂದು ಸ್ವತಃ ದೂರುದಾರ ವಿ ಎಸ್‌ ಉಗ್ರಪ್ಪ ಮತ್ತು ಬಿ ಎಲ್‌ ಶಂಕರ್‌ ಅವರು ನೈಜ ಹೋರಾಟಗಾರರ ವೇದಿಕೆಯ ಹೆಚ್‌ ಎಂ ವೆಂಕಟೇಶ್‌ ಅವರೊಂದಿಗಿನ ಸಂಭಾಷಣೆಯಲ್ಲಿ ಹೇಳಿರುವ ಬೆನ್ನಲ್ಲೇ ಲೋಕಾಯುಕ್ತ ಸಂಸ್ಥೆಯ ತನಿಖೆಯಲ್ಲಿ ಆಗಿರುವ ವಿಳಂಬವೂ ಮುನ್ನೆಲೆಗೆ ಬಂದಿದೆ.

 

ಈ ದೂರು ದಾಖಲಾದಾಗ ನಿವೃತ್ತ ನ್ಯಾಯಮೂರ್ತಿ ಎನ್‌ ಸಂತೋಷ್‌ ಹೆಗ್ಡೆ ಅವರು ಲೋಕಾಯುಕ್ತರಾಗಿದ್ದರು. ಇವರ ನಂತರ ಭಾಸ್ಕರರಾವ್‌, ವಿಶ್ವನಾಥ್ ಶೆಟ್ಟಿ ಅವರು ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಈ ಮೂವರ ಅವಧಿಯಲ್ಲಿಯೂ ಬಿ ಎಸ್‌ ಯಡಿಯೂರಪ್ಪ ಮತ್ತಿತರರ ವಿರುದ್ಧ 200 ಎಕರೆ ಭೂ ಹಗರಣ ಕುರಿತಾದ ದೂರಿನ ವಿಚಾರಣೆ ಕಡತಕ್ಕೆ ಧೂಳು ಮೆತ್ತಿಕೊಂಡಿತ್ತು.

 

ಲೋಕಾಯುಕ್ತ ಸಂಸ್ಥೆಗೆ 2010ರ ಡಿಸೆಂಬರ್‌ 3ರಂದು ಸಲ್ಲಿಕೆಯಾಗಿದ್ದ ದೂರನ್ನು ಹೆಚ್ಚುವರಿ ವಿಚಾರಣಾಧಿಕಾರಿಗಳಿಗೆ (1) ರವಾನಿಸಲಾಗಿತ್ತು. ಈ ದೂರನ್ನು 2011ರ ಜನವರಿ 14ರಂದು ಪರಿಶೀಲನೆಗಿರಿಸಲಾಗಿತ್ತು. ಇದಾಗಿ 3 ವರ್ಷದ ನಂತರ ಅಂದರೆ 2014ರ ನವೆಂಬರ್‌ 15ರಂದು ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗಿತ್ತು.

 

ನ್ಯಾಯಮೂರ್ತಿ ಪದ್ಮರಾಜ್‌ ಅವರ ಸಮಿತಿ ನೀಡಿದ್ದ ವರದಿಯನ್ನಾಧರಿಸಿ 2014ರ ಡಿಸೆಂಬರ್‌ 31ರಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಕಳಿಸಲಾಗಿತ್ತು. 2015ರ ಜನವರಿ 08ರಂದು ನಗರಾಭಿವೃದ್ಧಿ ಇಲಾಖೆಯ ವರದಿಗಾಗಿ ಎದುರು ನೋಡುತ್ತಿತ್ತು. 2010ರ ಡಿಸೆಂಬರ್‌ 3ರಂದು ಸಲ್ಲಿಕೆಯಾಗಿದ್ದ ದೂರನ್ನು ನಾಲ್ಕು ವರ್ಷಗಳವರೆಗೆ ಕೆವಲ ಇಲಾಖೆ ಮತ್ತು ಲೋಕಾಯುಕ್ತ ಸಂಸ್ಥೆಯ ವಿಚಾರಣಾಧಿಕಾರಿಗಳ ಹಂತದಲ್ಲೇ ಕಾಲಹರಣ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ದೂರಿನ ವಿಚಾರಣೆಯ ಪ್ರಗತಿಯ ಕಾಲಾನುಕ್ರಮದ ನೋಟ (ಆಧಾರ;ಲೋಕಾಯುಕ್ತ ಜಾಲತಾಣ)

 

2015ರಿಂದ 2022ರವರೆಗೆ ಅಂದರೆ 7 ವರ್ಷಗಳವರೆಗೆ ಈ ಪ್ರಕರಣದ ಕುರಿತು ಲೋಕಾಯುಕ್ತ ಸಂಸ್ಥೆಯು ತನಿಖೆ ಹಾದಿಯಲ್ಲಿ ಒಂದೇ ಒಂದು ಹೆಜ್ಜೆಯನ್ನಿರಿಸಿಲ್ಲ. ಈ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿದ್ದರ ಬೆನ್ನಲ್ಲೇ ನೈಜ ಹೋರಾಟಗಾರರ ವೇದಿಕೆಯ ಹೆಚ್‌ ಎಂ ವೆಂಕಟೇಶ್‌ ಅವರು ಹಾಲಿ ಲೋಕಾಯುಕ್ತ ಬಿ ಎಸ್ ಪಾಟೀಲ್‌ ಅವರಿಗೆ ಪತ್ರ ಬರೆದು ದೂರಿನ ವಿಚಾರಣೆಯಲ್ಲಿ ಆಗಿರುವ ವಿಳಂಬವನ್ನು ಸಾರ್ವಜನಿಕ ಹಿತಾಸಕ್ತಿ ಮತ್ತು ಲೋಕಾಯುಕ್ತದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದರು.

ಬಿಎಸ್‌ವೈ,ಶೋಭಾ,ನಿರಾಣಿ,ಈಶ್ವರಪ್ಪ,ಅಶೋಕ್‌ ವಿರುದ್ಧದ ದೂರು; ಹತ್ತು ವರ್ಷವಾದರೂ ಮುಗಿಯದ ಲೋಕಾ ತನಿಖೆ

 

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಲೋಕಾಯುಕ್ತ ಬಿ ಎಸ್ ಪಾಟೀಲ್‌ ಅವರು 2015ರಿಂದ 7 ವರ್ಷಗಳವರೆಗೆ ಕಡತಕ್ಕೆ ಮೆತ್ತಿಕೊಂಡಿದ್ದ ಧೂಳನ್ನು ಕೊಡವಿದ್ದಾರೆ. ಅಲ್ಲದೇ 2022ರ ಜೂನ್‌ 24, ಜೂನ್‌ 27 ಮತ್ತು ಡಿಸೆಂಬರ್‌ 20ರವರೆಗೂ ಕಡತವನ್ನು ತಮ್ಮ ಬಳಿ ಇರಿಸಿಕೊಂಡಿರುವುದು ಲೋಕಾಯುಕ್ತ ಸಂಸ್ಥೆಯ ಅಧಿಕೃತ ಜಾಲತಾಣದಿಂದ ತಿಳಿದು ಬಂದಿದೆ.

 

ಕೆಐಎಡಿಬಿಯ ಉನ್ನತ ಅಧಿಕಾರಸ್ಥ ಸಮಿತಿಯಿಂದ 2008ರ ನವೆಂಬರ್‌ನಲ್ಲಿ ಬಾಗಲಕೋಟೆಯ ಮುಧೋಳದಲ್ಲಿ ಸಿಮೆಂಟ್‌ ಕೈಗಾರಿಕೆಗಾಗಿ 200 ಎಕರೆಯನ್ನು ಮುರುಗೇಶ್‌ ಆರ್‌ ನಿರಾಣಿ ಅವರು ಹಂಚಿಕೆ ಮಾಡಿಸಿಕೊಂಡು ಅಧಿಕಾರ ದುರಪಯೋಗಪಡಿಸಿಕೊಂಡಿದ್ದರು ಎಂದು ವಿ ಎಸ್‌ ಉಗ್ರಪ್ಪ, ಬಿ ಎಲ್‌ ಶಂಕರ್‌ ಅವರು ಲೋಕಾಯುಕ್ತ ಮೆಟ್ಟಿಲೇರಿದ್ದರು. ಈ ಸಂಬಂಧ ತಮ್ಮ ಬಳಿ ದಾಖಲೆಗಳಿವೆ ಎಂದೂ ವಿ ಎಸ್ ಉಗ್ರಪ್ಪ, ಬಿ ಎಲ್‌ ಶಂಕರ್‌ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

 

ಅಲ್ಲದೇ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳೂರಿನ ತಣ್ಣೀರುಬಾವಿಯಲ್ಲಿ 56 ಎಕರೆ ಭೂಮಿಯನ್ನು ಪ್ರಕಾಶ್‌ ಶೆಟ್ಟಿ ಅವರ ಹೆಸರಿಗೆ ಡಿ ನೋಟಿಫಿಕೇಷನ್‌ ಮಾಡಿದ್ದರು. ಈ ಪ್ರಕರಣದಲ್ಲಿ ಇಂಧನ ಸಚಿವರಾಗಿದ್ದ ಹಾಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ವಿರುದ್ಧವೂ ದೂರು ಸಲ್ಲಿಸಿದ್ದ ವಿ ಎಸ್‌ ಉಗ್ರಪ್ಪ, ಬಿ ಎಲ್ ಶಂಕರ್‌, ಅಪ್ಪಾಜಿನಾಡಗೌಡ ಅವರು ಶೋಭಾ ಕರಂದ್ಲಾಜೆ ಅವರನ್ನೂ ಪ್ರತಿವಾದಿಯನ್ನಾಗಿಸಿದ್ದರು. ಈ ಕುರಿತು ಟೈಮ್ಸ್‌ ಆಫ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆಗಳಲ್ಲಿ 2010ರ ಡಿಸೆಂಬರ್‌ 4ರಂದು ವರದಿ ಪ್ರಕಟವಾಗಿದ್ದನ್ನು ಸ್ಮರಿಸಬಹುದು

 

ಆ ನಂತರ ದೂರು ಸಲ್ಲಿಸಿರುವ ಮಾಹಿತಿಯೇ ತಮಗಿಲ್ಲವೆಂದು ವಿ ಎಸ್ ಉಗ್ರಪ್ಪ ಮತ್ತು ಬಿ ಎಲ್‌ ಶಂಕರ್‌ ಅವರು ಹೆಚ್‌ ಎಂ ವೆಂಕಟೇಶ್‌ ಅವರೊಂದಿಗೆ ನಡೆಸಿದ್ದ ಸಂಭಾಷಣೆಯಲ್ಲಿ ಹೇಳಿದ್ದರು.

ಬಿಎಸ್‌ವೈ ವಿರುದ್ಧ ದೂರೇ ಸಲ್ಲಿಸಿಲ್ಲವೆಂದು ಸಿಟ್ಟಿಗೆದ್ದ ಉಗ್ರಪ್ಪ, ನೆನಪಿಲ್ಲವೆಂದ ಶಂಕರ್‌

 

ಏನದು ಪ್ರಕರಣ?

 

ಕೆಐಎಡಿಬಿಯ ಉನ್ನತ ಅಧಿಕಾರಸ್ಥ ಸಮಿತಿಯಿಂದ 2008ರ ನವೆಂಬರ್‌ನಲ್ಲಿ ಬಾಗಲಕೋಟೆಯ ಮುಧೋಳದಲ್ಲಿ ಸಿಮೆಂಟ್‌ ಕೈಗಾರಿಕೆಗಾಗಿ 200 ಎಕರೆಯನ್ನು ಮುರುಗೇಶ್‌ ಆರ್‌ ನಿರಾಣಿ ಅವರು ಹಂಚಿಕೆ ಮಾಡಿಸಿಕೊಂಡು ಅಧಿಕಾರ ದುರಪಯೋಗಪಡಿಸಿಕೊಂಡಿದ್ದರು ಎಂದು ವಿ ಎಸ್‌ ಉಗ್ರಪ್ಪ, ಬಿ ಎಲ್‌ ಶಂಕರ್‌ ಅವರು ಲೋಕಾಯುಕ್ತ ಮೆಟ್ಟಿಲೇರಿದ್ದರು. ಈ ಸಂಬಂಧ ತಮ್ಮ ಬಳಿ ದಾಖಲೆಗಳಿವೆ ಎಂದೂ ವಿ ಎಸ್ ಉಗ್ರಪ್ಪ, ಬಿ ಎಲ್‌ ಶಂಕರ್‌ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

 

ಅಲ್ಲದೇ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳೂರಿನ ತಣ್ಣೀರುಬಾವಿಯಲ್ಲಿ 56 ಎಕರೆ ಭೂಮಿಯನ್ನು ಪ್ರಕಾಶ್‌ ಶೆಟ್ಟಿ ಅವರ ಹೆಸರಿಗೆ ಡಿ ನೋಟಿಫಿಕೇಷನ್‌ ಮಾಡಿದ್ದರು. ಈ ಪ್ರಕರಣದಲ್ಲಿ ಇಂಧನ ಸಚಿವರಾಗಿದ್ದ ಹಾಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ವಿರುದ್ಧವೂ ದೂರು ಸಲ್ಲಿಸಿದ್ದ ವಿ ಎಸ್‌ ಉಗ್ರಪ್ಪ, ಬಿ ಎಲ್ ಶಂಕರ್‌, ಅಪ್ಪಾಜಿನಾಡಗೌಡ ಅವರು ಶೋಭಾ ಕರಂದ್ಲಾಜೆ ಅವರನ್ನೂ ಪ್ರತಿವಾದಿಯನ್ನಾಗಿಸಿದ್ದರು. ಈ ಕುರಿತು ಟೈಮ್ಸ್‌ ಆಫ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆಗಳಲ್ಲಿ 2010ರ ಡಿಸೆಂಬರ್‌ 4ರಂದು ವರದಿ ಪ್ರಕಟವಾಗಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts