ಪ್ರಗತಿ ಕುಂಠಿತ; ಜಲಸಂಪನ್ಮೂಲ, ಕೃಷಿ ಸೇರಿ 13 ಇಲಾಖೆಗಳಿಗೆ ಶೇ. 40ಕ್ಕಿಂತ ಕಡಿಮೆ ಅನುದಾನ ಬಿಡುಗಡೆ

photo credit;deccan hearald

ಬೆಂಗಳೂರು; ಜಲಸಂಪನ್ಮೂಲ ಸೇರಿದಂತೆ ಒಟ್ಟು 13 ಇಲಾಖೆಗಳಿಗೆ 2022-23ನೇ ಸಾಲಿನಲ್ಲಿ ನಿಗದಿಪಡಿಸಿದ್ದ ಒಟ್ಟು 81,627.03 ಕೋಟಿ ರು ಪೈಕಿ ಸೆಪ್ಟಂಬರ್‌ ಅಂತ್ಯಕ್ಕೆ ಕೇವಲ 21,698.64 ಕೋಟಿ ರು. ಮಾತ್ರ ಬಿಡುಗಡೆ ಮಾಡಿದೆ. ಇದು ಒಟ್ಟು ಅನುದಾನದಲ್ಲಿ ಶೇ. 40ಕ್ಕಿಂತ ಕಡಿಮೆ ಬಿಡುಗಡೆ ಮಾಡಲಾಗಿದೆ. ಬಿಡುಗಡೆಗೆ ಇನ್ನೂ 59, 928.39 ಕೋಟಿ ರು. ಬಾಕಿ ಉಳಿಸಿಕೊಂಡಿದೆ.

 

2022-23ನೇ ಸಾಲಿನ ಆಯವ್ಯಯದಲ್ಲಿ ನಿಗದಿಪಡಿಸಿದ್ದ ಒಟ್ಟು ಅನುದಾನಕ್ಕೆ ಸೆಪ್ಟಂಬರ್‌ 2022ರ ಅಂತ್ಯಕ್ಕೆ ಒಟ್ಟು ವೆಚ್ಚ ಮಾಡಿರುವ ಕುರಿತು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಇಲಾಖೆಗಳು ಮಾಡಿರುವ ವೆಚ್ಚದ ವಿವರಗಳು ಬಹಿರಂಗವಾಗಿವೆ.  ತುಲನಾತ್ಮಕ ವೆಚ್ಚದ ವಿವರಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಕೃಷಿ ಇಲಾಖೆ ಸೇರಿದಂತೆ ಒಟ್ಟು 13 ಇಲಾಖೆಗಳಿಗೆ ಶೇ.40ಕ್ಕಿಂತ ಕಡಿಮೆ ಬಿಡುಗಡೆಯಾಗಿದೆ. ನಗರಾಭಿವೃದ್ಧಿ ಇಲಾಖೆಗೆ ನಿಗದಿಪಡಿಸಿದ್ದ ಒಟ್ಟು 23,191.32 ಕೋಟಿ ರು. ಪೈಕಿ ಸೆಪ್ಟಂಬರ್‌ ಅಂತ್ಯಕ್ಕೆ ಕೇವಲ 5,315.20 ಕೋಟಿ ರು. ಮಾತ್ರ ಬಿಡುಗಡೆಯಾಗಿದೆ. ಇನ್ನೂ 17,876.12 ಕೋಟಿ ರ. ಬಿಡುಗಡೆಗೆ ಬಾಕಿ ಉಳಿಸಿಕೊಂಡಿದೆ. ಅದೇ ರೀತಿ ಜಲ ಸಂಪನ್ಮೂಲ ಇಲಾಖೆಯಲ್ಲಿ 20,815.53 ಕೋಟಿ ರು. ಪೈಕಿ 6,171.16 ಕೋಟಿ ರು. ಬಿಡುಗಡೆ ಮಾಡಿ 14,644.42 ಕೋಟಿ ರು. ಬಾಕಿ ಉಳಿಸಿಕೊಂಡಿದೆ.

 

ವಿಶೇಷವೆಂದರೆ ಕೆಲವು ಇಲಾಖೆಗಳಿಗೆ ಕಡಿಮೆ ಬಿಡುಗಡೆಯಾಗಿದ್ದರೂ ಹೆಚ್ಚಿನ ವೆಚ್ಚವನ್ನು ಮಾಡಿವೆ. ಒಟ್ಟು 13 ಇಲಾಖೆಗಳಿಗೆ 21,698.64 ಕೋಟಿ ರು. ಬಿಡುಗಡೆಯಾಗಿದ್ದರೆ ಸೆಪ್ಟಂಬರ್‌ ಅಂತ್ಯಕ್ಕೆ 25,549.97 ಕೋಟಿ ರು ವೆಚ್ಚವಾಗಿದೆ. 3,851.33 ಕೋಟಿ ರು.ಹೆಚ್ಚುವರಿ ವೆಚ್ಚ ಮಾಡಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ 4,190.18 ಕೋಟಿ ರು., 1,056.53 ಕೋಟಿ ರು. ಹೆಚ್ಚಿನ ವೆಚ್ಚವಾಗಿದೆ.

 

ಲೋಕೋಪಯೋಗಿ ಇಲಾಖೆಗೆ 9,865.97 ಕೋಟಿ ರು ಅನುದಾನದ ಪೈಕಿ 3,372.70 ಕೋಟಿ ರು. ಬಿಡಗುಡೆಯಾಗಿದೆ. ಇದು ಶೇ.34.19ರಷ್ಟಿದೆ. ಈ ಪೈಕಿ 3,118.54 ಕೋಟಿ ರು (ಶೇ.31.61) ವೆಚ್ಚವಾಗಿದೆ. ಹಿಂದುಳಿದ ವರ್ಗಗಳ ಇಲಾಖೆಗೆ 2,597.71 ಕೋಟಿ ರು ಪೈಕಿ 837.07 ಕೋಟಿ ರು. ಬಿಡುಗಡೆಯಾಗಿದ್ದರೆ (ಶೇ. 35.09) ಇದರಲ್ಲಿ 524.23 ಕೋಟಿ ರು (ಶೆ.20.18) ವೆಚ್ಚವಾಗಿದೆ.

 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 229.08 ಕೋಟಿ ರು. ಪೈಕಿ 80.34 ಕೋಟಿ ರು. ಬಿಡುಗಡೆಯಾಗಿದ್ದು ಇದರಲ್ಲಿ 39.96 ಕೋಟಿ ರು. ವೆಚ್ಚವಾಗಿದೆ. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ 1,141.91 ಕೋಟಿ ರು. ಪೈಕಿ 325.02 ಕೋಟಿ ರು. ಬಿಡುಗಡೆಯಾಗಿದ್ದು ಇದರಲ್ಲಿ 283.62 ಕೋಟಿ ರು. ವೆಚ್ಚವಾಗಿದೆ. ಆಹಾರ ಇಲಾಖೆಗೆ 2,983.42 ಕೋಟಿ ರು. ಪೈಕಿ 805.81 ಕೋಟಿ ರು ಬಿಡುಗಡೆಯಾಗಿದ್ದು ಇದರಲ್ಲಿ 613.74 ಕೋಟಿ ರು. ವೆಚ್ಚವಾಗಿದೆ.

 

ಪ್ರವಾಸೋದ್ಯಮ ಇಲಾಖೆಗೆ ಬಿಡುಗಡೆಯಾಗಿದ್ದ 78.07 ಕೋಟಿ ರು.ನಲ್ಲಿ 43.29 ಕೋಟಿ ರು ಮಾತ್ರ ವೆಚ್ಚವಾಗಿದ್ದು 34.78 ಕೋಟಿ ರು. ವೆಚ್ಚಕ್ಕೆ ಬಾಕಿ ಇರಿಸಿಕೊಂಡಿದೆ. ಆಹಾರ ಇಲಾಖೆಗೆ ಬಿಡುಗಡೆಯಾಗಿದ್ದ 805.81 ಕೋಟಿ ರು. ಪೈಕಿ 613.74 ಕೋಟಿ ರು. ವೆಚ್ಚವಾಗಿದ್ದು 192.07 ಕೋಟಿ ರು. ಬಾಕಿ ಇದೆ. ಹಿಂದುಳಿದ ವರ್ಗಗಳ ಇಲಾಖೆಯು 837.07 ಕೋಟಿ ರು. ಪೈಕಿ 524.23 ಕೋಟಿ ರು. ವೆಚ್ಚ ಮಾಡಿ 312.84 ಕೋಟಿ ರು. ಬಾಕಿ ಉಳಿಸಿಕೊಂಡಿದೆ.

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನಿಗದಿಪಡಿಸಿದ್ದ 1,509.07ಕೋಟಿ ರು.ಪೈಕಿ 598.64 ಕೋಟಿ ರು. ಬಿಡುಗಡೆಯಾಗಿತ್ತು. ಇದು ಒಟ್ಟು ಅನುದಾನಕ್ಕೆ ಶೇ.39.67ರಷ್ಟಿತ್ತು. 598.64 ಕೋಟಿ ರು ಪೈಕಿ ಸೆಪ್ಟಂಬರ್‌ ಅಂತ್ಯಕ್ಕೆ 452.60 ಕೋಟಿ ರು. ವೆಚ್ಚವಾಗಿತ್ತು. ಇದು ಒಟ್ಟು ಅನುದಾನಕ್ಕೆ ಶೇ.29.99ರಷ್ಟಿತ್ತು ಎಂಬುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

 

ಪ್ರಧಾನಮಂತ್ರಿ ಕೃಷಿ ಸಂಚಯಿ ಯೋಜನೆಯಡಿ 511.00 ಕೋಟ ರು. ಅನುದಾನದಲ್ಲಿ ಇದುವರೆಗೆ ಕೇವಲ 89.44 ಕೋಟಿ ರು. ಮಾತ್ರ ವೆಚ್ಚವಾಗಿರುವುದು ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಕೇಂದ್ರ ಪುರಸ್ಕೃತ ಹಲವು ಯೋಜನೆಗಳಲ್ಲಿ ಅನುದಾನವೂ ನಿಗದಿತ ಗುರಿಯಂತೆ ವೆಚ್ಚವಾಗಿತ್ತು.

 

ಅಲ್ಲದೇ 2020-21ನೇ ಸಾಲಿನಲ್ಲಿ ಶೇ. 44.79ರಷ್ಟು ಅನುದಾನ ಬಿಡುಗಡೆಯಾಗಿದ್ದರೇ 2022-23ನೇ ಸಾಲಿನಲ್ಲಿ ಕಳೆದ ವರ್ಷಕ್ಕಿಂತಲೂ ಕಡಿಮೆ ಅಂದರೆ ಶೇ. 29ರಷ್ಟು ಮಾತ್ರ (ಆಗಸ್ಟ್‌ ಅಂತ್ಯಕ್ಕೆ) ಬಿಡುಗಡೆಯಾಗಿತ್ತು. ಕೇಂದ್ರವು ಸಕಾಲದಲ್ಲಿ ತನ್ನ ಪಾಲಿನ ಮೊದಲನೇ ಕಂತಿನ ಅನುದಾನವನ್ನು ನಿರೀಕ್ಷಿತ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಇನ್ನು 2022-23ನೇ ಸಾಲಿನಲ್ಲಿ ಒಟ್ಟು ಅನುದಾನ 2,42,759 ಕೋಟಿ ರು. ಪೈಕಿ ಸೆಪ್ಟಂಬರ್‌ ಅಂತ್ಯಕ್ಕೆ 106,030 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ 89,776.37 ಕೋಟಿ ರು. ವೆಚ್ಚವಾಗಿದೆ. ಒಟ್ಟು ಅನುದಾನಕ್ಕೆ ಶೇ. 37ರಷ್ಟು ಮಾತ್ರ ಪ್ರಗತಿಯಾಗಿದೆ. ಉತ್ಪಾದಕ ವೆಚ್ಚದಲ್ಲಿಯೂ 1,28,369 ಕೋಟಿ ರು. ಅನುದಾನದ ಪೈಕಿ ಸೆಪ್ಟಂಬರ್‌ ಅಂತ್ಯಕ್ಕೆ 51,081 ಕೋಟಿ ರು. ಬಿಡುಗಡೆಯಾಗಿತ್ತು. ಇದರಲ್ಲಿ 48,966 ಕೋಟಿ ರು. ವೆಚ್ಚವಾಗಿದೆ. ಇದು ಒಟ್ಟು ಉತ್ಪಾದಕ ಅನುದಾನಕ್ಕೆ ಶೇ. 33ರಷ್ಟು ಪ್ರಗತಿಯಾಗಿದೆ.

 

ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ 2022-23ನೇ ಸಾಲಿನ ಒಟ್ಟು ಅನುದಾನದ 22,421 ಕೋಟಿ ರು. ಪೈಕಿ ಸೆಪ್ಟಂಬರ್‌ ಅಂತ್ಯಕ್ಕೆ 7,099 ಕೋಟಿ ರು. ಬಿಡುಗಡೆಯಾಗಿದೆ. ಇರಲ್ಲಿ 5,212 ಕೋಟಿ ರು. ವೆಚ್ಚವಾಗಿದೆ. ಒಟ್ಟು ಅನುದಾನಕ್ಕೆ ಶೇ.23.25ರಷ್ಟು ಪ್ರಗತಿಯಾಘಿದೆ. 2021-22ನೇ ಸಾಲಿನಲ್ಲಿಯೂ ಇದೇ ಸಮಯದಲ್ಲಿ ಶೇ.27.95ರಷ್ಟು ಪ್ರಗತಿಯಾಗಿತ್ತು.

 

ಗಿರಿಜನ ಉಪಯೋಜನೆಯಡಿಯಲ್ಲಿ ಒಟ್ಟು 9,162 ಕೋಟಿ ರು ಪೈಕಿ ಸೆಪ್ಟಂಬರ್‌ ಅಂತ್ಯಕ್ಕೆ 2,690 ಕೋಟಿ ರು.ಬಿಡುಗಡೆಯಾಗಿತ್ತು. ಇದರಲ್ಲಿ 2,494 ಕೋಟಿ ವೆಚ್ಚವಾಗಿದೆ. ಒಟ್ಟು ಅನುದಾನಕ್ಕೆ ಶೇ.27.22ರಷ್ಟು ಪ್ರಗತಿಯಾಗಿದೆ. ಕಳೆದ 2021-22ನೇ ಸಾಲಿನಲ್ಲಿಯೂ ಇದೇ ಸಮಯದಲ್ಲಿ ಶೇ.24.70ರಷ್ಟು ಪ್ರಗತಿಯಾಗಿತ್ತು ಎಂದು ನಡವಳಿಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts