371 (ಜೆ) ಅನುಷ್ಠಾನದಲ್ಲಿ ಹಿಂದುಳಿದ ಸರ್ಕಾರ; 27,735 ಹುದ್ದೆಗಳ ಭರ್ತಿಗೆ ಇನ್ನೂ ಕೂಡಿ ಬಂದಿಲ್ಲ ಕಾಲ

ಬೆಂಗಳೂರು; ಭಾರತ ಸಂವಿಧಾನದ ಅನುಚ್ಛೇಧ 371(ಜೆ) ಅಡಿ ನೇರ ನೇಮಕಾತಿಯಡಿಯಲ್ಲಿ ಇನ್ನೂ 27,735 ಹುದ್ದೆಗಳನ್ನು ಭರ್ತಿ ಮಾಡಲು ಬಾಕಿ ಇದೆ. ಈ ಪೈಕಿ ಕರ್ನಾಟಕ ಲೋಕಸೇವಾ ಆಯೋಗದಲ್ಲಿ 3,189 ಹುದ್ದೆಗಳು ಬಾಕಿ ಇವೆ.

 

ಅನುಚ್ಚೇಧ 371(ಜೆ) ಅನ್ವಯ ಸ್ಥಳೀಯ ವೃಂದದಲ್ಲಿ ನೇರ ನೇಮಕಾತಿ, ಮುಂಬಡ್ತಿ, ಕೆಪಿಎಸ್‌ಸಿ, ಕೆಇಎ ಸೇರಿದಂತೆ ಇನ್ನಿತರೆ ನೇಮಕಾತಿ ಸಂಸ್ಥೆಗಳಲ್ಲಿ ಬಾಕಿ ಇರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ 2022ರ ಆಗಸ್ಟ್‌ 3ರಂದು ಸಚಿವ ಸಂಪುಟದ ಉಪ ಸಮಿತಿ ಸಭೆಗೆ ಯೋಜನಾ ಇಲಾಖೆಯು ಸಲ್ಲಿಸಿರುವ ವಿಷಯ ಟಿಪ್ಪಣಿಯಲ್ಲಿ 27, 735 ಹುದ್ದೆಗಳು ನೇರ ನೇಮಕಾತಿಗೆ ಬಾಕಿ ಇರುವುದನ್ನು ಪ್ರಸ್ತಾಪಿಸಲಾಗಿದೆ.

 

ಆಗಸ್ಟ್‌ 3ರಂದು ನಡೆಯಲಿರುವ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ನೇರ ನೇಮಕಾತಿ, ಮುಂಬಡ್ತಿಯಿಂದ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ, ಹೈದ್ರಾಬಾದ್‌ ಕರ್ನಾಟಕ ಪ್ರದೇಶಕ್ಕೆ ನೀಡಿರುವ ವಿಶೇಷ ಸ್ಥಾನಮಾನದಡಿಯಲ್ಲಿ ಹೊರಡಿಸಿರುವ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶಿಸಲಾಗುತ್ತದೆ.

 

ಸಚಿವ ಸಂಪುಟ ಉಪ ಸಮಿತಿಗೆ ಸಲ್ಲಿಸಿರುವ ವಿಷಯ ಟಿಪ್ಪಣಿಯ ಪ್ರತಿ ಮತ್ತು ಇಲಾಖಾವಾರು ಬಾಕಿ ಹುದ್ದೆಗಳ ಅಂಕಿ ಅಂಶಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಅನುಚ್ಛೇಧ 371( ಜೆ) ಅನ್ವಯ ಸ್ಥಳೀಯ ವೃಂದದಲ್ಲಿ ನೇರ ನೇಮಕಾತಿ ಅಡಿಯಲ್ಲಿ ಒಟ್ಟು 83,688 ಹುದ್ದೆಗಳನ್ನು ಗುರುತಿಸಲಾಗಿದೆಯಾದರೂ ಈ ಪೈಕಿ ಇದುವರೆಗೂ 57,953 ಹುದ್ದೆಗಳನ್ನಷ್ಟೇ ಭರ್ತಿ ಮಾಡಲಾಗಿದೆ. ಒಟ್ಟು 25,735 ಹುದ್ದೆಗಳನ್ನು ಭರ್ತಿ ಮಾಡಲು ಬಾಕಿ ಇದೆ ಎಂಬುದು ವಿಷಯ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಯೋಜನಾ ಇಲಾಖೆಯು ಸಲ್ಲಿಸಿರುವ ವಿಷಯ ಟಿಪ್ಪಣಿ ಪ್ರತಿ

 

ಇದರಲ್ಲಿ ಕೆಪಿಎಸ್‌ಸಿಯಲ್ಲಿ 3,189, ಕೆಎಇ ಮತ್ತು ಇತರೆ ನೇಮಕಾತಿ ಸಂಸ್ಥೆಗಳಲ್ಲಿ 9,309 ಹುದ್ದೆಗಳು ಬಾಕಿ ಇವೆ. ಇದರ ಹೊರತಾಗಿಯೂ ಇನ್ನು ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗದೇ 12,846 ಹುದ್ದೆಗಳು ಬಾಕಿ ಇವೆ. ಅದೇ ರೀತಿ ಮುಂಬಡ್ತಿಯಿಂದ ಭರ್ತಿ ಮಾಡಬೇಕಿರುವ ಒಟ್ಟು 32, 284 ಹುದ್ದೆಗಳ ಪೈಕಿ 22,603 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಈ ವಿಭಾಗದಲ್ಲಿ ಇನ್ನೂ 9,667 ಹುದ್ದೆಗಳಿಗೆ ಮುಂಬಡ್ತಿಯಿಂದ ತುಂಬಬೇಕಿದೆ ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

2,161 ಹುದ್ದೆಗಳನ್ನೇ ಮುಚ್ಚಿಟ್ಟ ಕೆಪಿಎಸ್‌ಸಿ; ಹೈ.ಕ. ಭಾಗಕ್ಕೆ ಮತ್ತೊಂದು ದ್ರೋಹ

ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ 371(ಜೆ) ಅನ್ವಯ ಸ್ಥಳೀಯ ವೃಂದದಲ್ಲಿ ನೇರ ನೇಮಕಾತಿ ಅಡಿಯಲ್ಲಿ 6,.974 ಹುದ್ದೆಗಳು ಬಾಕಿ ಇವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 3,056, ಸಾರಿಗೆ ಇಲಾಖೆಯಲ್ಲಿ 2,250, ಉನ್ನತ ಶಿಕ್ಷಣ ಇಲಾಖೆಯಲ್ಲಿ 1,773, ಇಂಧನ ಇಲಾಖೆಯಲ್ಲಿ 1,584, ನಗರಾಭಿವೃದ್ದಿ ಇಲಾಖೆಯಲ್ಲಿ 1,273 ಹುದ್ದೆಗಳು ಬಾಕಿ ಇವೆ.

 

ಅದೇ ರೀತಿ ಪ್ರಾಥಮಿಕ ಪ್ರೌಢಶಿಕ್ಷಣ ಇಲಾಖೆಯಲ್ಲಿ 2,044, ಇಂಧನ ಇಲಾಖೆಯಲ್ಲಿ 1,419 ಹುದ್ದೆಗಳನ್ನು ಮುಂಬಡ್ತಿಯಿಂದ ಭರ್ತಿ ಮಾಡಿಕೊಳ್ಳಬೇಕಿದೆ. ಕೆಇಎ ಮತ್ತು ಇತರೆ ನೇಮಕಾತಿ ಸಂಸ್ಥೆಗಳಲ್ಲಿ ಬಾಕಿ ಇರುವ ಹುದ್ದೆಗಳ ಪೈಕಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ 5,050, ಸಾರಿಗೆ ಇಲಾಖೆಯಲ್ಲಿ 1,595, ಹುದ್ದೆಗಳು ಬಾಕಿ ಇವೆ. ಕೆಪಿಎಸ್ಸಿಯಲ್ಲಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ 439, ಉನ್ನತ ಶಿಕ್ಷಣ ಇಲಾಖೆಯಲ್ಲಿ 354, ನಗರಾಭಿವೃದ್ಧಿ ಇಲಾಖೆಯಲ್ಲಿ 384 ಹುದ್ದೆಗಳು ಬಾಕಿ ಇರುವುದು ತಿಳಿದು ಬಂದಿದೆ.

ಬ್ಯಾಕ್‌ಲಾಗ್‌ ಕುರಿತಂತೆ 2022ರ ಮೇ 7ರಂದು ಸಚಿವ ಬಿ ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ಸಭೆ ನಡೆದಿತ್ತು.

 

ಬಾಕಿ ಇರುವ ಮುಂಬಡ್ತಿ ಹುದ್ದೆಗಳನ್ನು 2022ರ ಮೇ ಅಂತ್ಯದೊಳಗೆ ಮತ್ತು ಬಾಕಿ ಇರುವ ನೇರ ನೇಮಕಾತಿ ಹುದ್ದೆಗಳನ್ನು ಜುಲೈ 2022ರ ಅಂತ್ಯದೊಳಗೆ ಭರ್ತಿ ಮಾಡಲು ಸಮಯಾವಕಾಶ ನೀಡಲಾಗಿತ್ತು.

the fil favicon

SUPPORT THE FILE

Latest News

Related Posts