‘ಸರ್ಕಾರಿ ನಿವೇಶನಗಳು ಯಾರಪ್ಪನ ಅಸ್ತಿ?; ‘ದಿ ಫೈಲ್‌’ ದಾಖಲೆ ಹಿಡಿದು ಪ್ರಶ್ನಿಸಿದ ಹರಿಪ್ರಸಾದ್‌

ಬೆಂಗಳೂರು; ಕರ್ನಾಟಕ  ನೀರಾವರಿ ನಿಗಮಕ್ಕೆ ಸೇರಿದ 2 ಎಕರೆಯನ್ನು ಬಿಜೆಪಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ನೋಂದಣಿ ಮಾಡಿಕೊಡಲು ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ  ಟಿ ಡಿ ಮೇಘರಾಜ್‌ ಅವರು ಬರೆದಿದ್ದ ಪತ್ರ ಮತ್ತು ನೀರಾವರಿ ನಿಗಮವು ಈ ಸಂಬಂಧ ನೀಡಿರುವ ತಾತ್ವಿಕ ಅನುಮೋದನೆಯನ್ನು ‘ದಿ ಫೈಲ್‌’ ಹೊರಗೆಡವಿದ ದಾಖಲೆ ಆಧರಿಸಿ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಅವರು ಬಿಜೆಪಿ ಧೋರಣೆ ವಿರುದ್ಧ ಕಿಡಿ ಕಾರಿದ್ದಾರೆ.

 

ರಾಜಕೀಯ ಕ್ಷೇತ್ರದ ಸ್ಥಿತಿಗತಿ ಅಧ್ಯಯನ, ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ ಶಿವಮೊಗ್ಗದ ಅಲ್ಕೋಳದ ಗ್ರಾಮದಲ್ಲಿ 2 ಎಕರೆಯನ್ನು ನೀಡುವ ಕುರಿತು ಕರ್ನಾಟಕ ನೀರಾವರಿ ನಿಗಮವು ತಾತ್ವಿಕ ಅನುಮೋದನೆ ನೀಡಿರುವ ಕುರಿತು ‘ದಿ ಫೈಲ್‌’ ವರದಿ 2022ರ ಜುಲೈ 26 ರಂದು ಪ್ರಕಟಿಸಿತ್ತು.

 

ನೀರಾವರಿ ನಿಗಮದ 2 ಎಕರೆ ನಿವೇಶನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ನೋಂದಣಿ; ಬಿಜೆಪಿ ಜಿಲ್ಲಾಧ್ಯಕ್ಷರ ಪತ್ರ

ಈ ವರದಿ ಆಧರಿಸಿ   ಸರಣಿ ಟ್ವೀಟ್‌ಗಳನ್ನು ಮಾಡಿರುವ ಹರಿಪ್ರಸಾದ್‌ ಅವರು ‘ದಿ ಫೈಲ್‌’ ಬಹಿರಂಗಪಡಿಸಿದ ದಾಖಲೆಗಳನ್ನಿಡಿದು ‘ಈಗ ಸರ್ಕಾರಿ ನಿವೇಶನವನ್ನು ಜೆಪಿ ನಡ್ಡಾ ಅವರಿಗೂ ನೀಡಿ ಅಕ್ರಮದ ಪಾಲನ್ನು ಬಳುವಳಿಯಾಗಿ ನೀಡಲು ಹೊರಟಿದೆ,’ ಎಂದು ಟೀಕಿಸಿದ್ದಾರೆ.

 

 

 

ಶಿಕ್ಷಣ ಸಂಸ್ಥೆ ಹೆಸರಿನಲ್ಲಿ ಆರ್‌ಎಸ್‌ಎಸ್‌ನ ರಾಷ್ಟ್ರೋತ್ಥಾನಗಳಿಗೆ ಎಕರೆಗಳಷ್ಟು ಭೂಮಿಯನ್ನು ಸರ್ಕಾರವೇ ಈಗಾಗಲೇ ಮಂಜೂರು ಮಾಡಿದೆ. ನೀರಾವರಿ ನಿಗಮವು 2 ಎಕರೆ ಜಮೀನು ಮಂಜೂರು ಮಾಡಲು ಸರ್ಕಾರ ಅನುಮೋದನೆ ನೀಡಿರುವುದನ್ನು ವಾಪಸ್‌ ಪಡೆಯದಿದ್ದರೇ ಹೋರಾಟ ಎದುರಿಸಬೇಕಾಗುತ್ತದೆ,’ ಎಂದೂ ಟ್ವಿಟರ್‌ನಲ್ಲಿ ಎಚ್ಚರಿಸಿದ್ದಾರೆ.

 

ಅಲ್ಲದೇ ಮುಧೋಳದಲ್ಲಿ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಿಸಲು ಸಮಾಜ ಕಲ್ಯಾಣ ಇಲಾಖೆಯು ಕಾಯ್ದಿರಿಸಿದ್ದ ನಿವೇಶನದಲ್ಲಿ ಬಿಜೆಪಿ ಕಚೇರಿ ಕಟ್ಟಡ ನಿರ್ಮಿಸಲು ವರದಿ ಕೇಳಿದ್ದನ್ನೂ ‘ದಿ ಫೈಲ್‌’ ದಾಖಲೆ ಸಮೇತ ಬಹಿರಂಗಪಡಿಸಿತ್ತು.

ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪರಿಶಿಷ್ಟರ ವಿದ್ಯಾರ್ಥಿ ನಿಲಯಕ್ಕೆ ಮೀಸಲಾದ ನಿವೇಶನ!; ಕಾರಜೋಳರ ಒತ್ತಡ?

 

ಈ ವರದಿ ಆಧರಿಸಿ ಬಿ ಕೆ ಹರಿಪ್ರಸಾದ್‌  ಟ್ವೀಟ್‌ ಮಾಡಿದ್ದಾರೆ.

 

‘ಬಿಜೆಪಿ ಕಚೇರಿಗಳನ್ನು ಸರ್ಕಾರಿ ಜಾಗದಲ್ಲಿ ಕಟ್ಟಲು ಅದೇನು ಪಿತ್ರಾರ್ಜಿತ ಆಸ್ತಿಯಲ್ಲ. ಮುಧೋಳದಲ್ಲಿ ಪರಿಶಿಷ್ಟ ವಿದ್ಯಾರ್ಥಿ ನಿಲಯ ಕಟ್ಟಲು ಮೀಸಲಿಟ್ಟ ಜಾಗ ಹಾಗೂ ಶಿವಮೊಗ್ಗ ನೀರಾವರಿ ನಿಗಮದ 2 ಎಕರೆ ಭೂಮಿ ಬಿಜೆಪಿ ಕಚೇರಿಗಳನ್ನು ಕಟ್ಟಡಲು ಅಕ್ರಮವಾಗಿ ಅನುಮೋದನೆ ನೀಡಲಾಗಿದೆ. ಸರ್ಕಾರಿ ನಿವೇಶನಗಳು ಯಾರಪ್ಪನ ಆಸ್ತಿ ಎಂದು ಅವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

the fil favicon

SUPPORT THE FILE

Latest News

Related Posts