Saturday | April 11, 2026 |

ಟೂಲ್‌ಕಿಟ್‌ ಖರೀದಿ ಹಗರಣ; ಕರಾರು ಪತ್ರಕ್ಕೆ ತಡವಾಗಿ ಸಹಿ, ಸೂಚನೆಯನ್ನೂ ಪಾಲಿಸದ ಇಲಾಖೆ

ಬೆಂಗಳೂರು; ರಾಜ್ಯದ ಕೈಗಾರಿಕೆ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತರಬೇತಿದಾರರಿಗೆ ಟೂಲ್‌ಕಿಟ್‌ ಖರೀದಿ ಸಂಬಂಧ ಮಾಡಿಕೊಂಡಿದ್ದ ಕರಾರು ಪತ್ರಕ್ಕೆ ತಡವಾಗಿ ಸಹಿ ಹಾಕಿದ್ದರು ಎಂಬುದು ಇದೀಗ ಬಹಿರಂಗವಾಗಿದೆ. ಕರಾರು ಪತ್ರಕ್ಕೆ ತಡವಾಗಿ ಸಹಿ ಹಾಕಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಟೂಲ್‌ ಕಿಟ್‌ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ‌ ಜನರನ್ನು ಸಚಿವ ಅಶ್ವಥ್‌ ನಾರಾಯಣ್‌ ವಂಚಿಸುತ್ತಿದ್ದಾರೆ ಎಂಬ ಆರೋಪ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ವಿತರಿಸಲು ಕರೆದಿದ್ದ ಟೆಂಡರ್‌ನಲ್ಲಿ ತಮ್ಮ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪವನ್ನು ಸಚಿವ ಅಶ್ವಥ್‌ನಾರಾಯಣ್‌ ಅವರು ನಿರಾಕರಿಸಿರುವ ಬೆನ್ನಲ್ಲೇ ಕರಾರು ಪತ್ರಕ್ಕೆ ತಡವಾಗಿ ಸಹಿ ಹಾಕಿರುವುದು ಮುನ್ನೆಲೆಗೆ ಬಂದಿದೆ. ಈ ಸಂಬಂಧ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾರ್ಯಕ್ರಮದಡಿ ಉಚಿತ ವಿತರಿಸಸುವ ಕಾರ್ಯಕ್ರಮದಡಿ 2021-22ರಲ್ಲಿ ಹಂಚಿಕೆಯಾಗಿದ್ದ 16.67 ಕೋಟಿ ರು.ಗಳನ್ನು ಮೇ 2022ರೊಳಗೇ ವೆಚ್ಚ ಮಾಡಬೇಕು ಎಂಬ ಸೂಚನೆಯನ್ನು ಇಲಾಖೆಯು ಪಾಲಿಸಿರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಟೂಲ್‌ಕಿಟ್‌ ಮತ್ತು ಲೇಖನ ಸಾಮಗ್ರಿಗಳು ನಿಗದಿತ ಅವಧಿಯಲ್ಲಿ ಸರಬರಾಜಾಗದೇ ವಿಳಂಬವಾಗಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಟೂಲ್‌ಕಿಟ್‌ ಖರೀದಿ ಸಂಬಂಧ ಇಲಾಖೆಯಲ್ಲಿನ ಕಡತದ ಹಾಳೆ

 

‘ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆಯವರು ಪ್ರಸ್ತಾಪಿತ ಲೆಕ್ಕ ಶೀರ್ಷಿಕೆಯಡಿ ಹಂಚಿಕೆಯಾಗಿದ್ದ 16.67 ಕೋಟಿಯ ಮೊತ್ತವನ್ನು ತಮ್ಮ ಉಳಿತಾಯಖಾತೆಗೆ ಜಮೆ ಮಾಡಿಕೊಂಡಿರುತ್ತಾರೆ. ಆದರೆ ಟೂಲ್‌ ಕಿಟ್‌ ಖರೀದಿಗೆ ಸಂಬಂಧ ಆಯುಕ್ತರು ತಡವಾಗಿ ಅಂದರೆ ದಿನಾಂಕ 27.06.2022ರಂದು ಕರಾರುಪತ್ರಕ್ಕೆ ಸಹಿ ಹಾಕಿದ್ದು, ಇಷ್ಟು ವಿಳಂಬವಾಗಿ ಕರಾರಿಗೆ ಸಹಿ ಹಾಕಲು ಕಾರಣವೇನೆಂಬುದರ ಬಗ್ಗೆ ಮಾಹಿತಿ ನೀಡಿರುವುದಿಲ್ಲ. ಬದಲಾಗಿ ತಮ್ಮ ಖಾತೆಗೆ ಜಮಾ ಮಾಡಿಕೊಂಡಿರುವ ಮೊತ್ತವನ್ನು ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದವರೆಗೂ ಅವಧಿ ವಿಸ್ತರಣೆಗೆ ಮಾಡುವಂತೆ ಕೋರಿರುತ್ತಾರೆ,’ ಎಂದು ಇಲಾಖೆ ಅಧಿಕಾರಿಗಳು ಟಿಪ್ಪಣಿ ಹಾಳೆಯಲ್ಲಿ ನಮೂದಿಸಿದ್ದಾರೆ.

 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾರ್ಯಕ್ರಮದಡಿ ಉಚಿತ ವಿತರಿಸಸುವ ಕಾರ್ಯಕ್ರಮವು 2021-22ನೇ ಸಾಲಿಗೆ ಸಂಬಂಧಿಸಿದ್ದಾಗಿದೆ. ಅಲ್ಲದೆ ಈಗಾಗಲೇ ವಿಳಂಬವೂ ಆಗಿದೆ. ಆದರೆ ಕಾರ್ಯಕ್ರಮವನ್ನು ಪೂರ್ಣಗೊಳಿಸಲು ಆಯುಕ್ತರು ಕೋರಿರುವಂತೆ ಪ್ರಸ್ತುತ ಆರ್ಥಿಕ ವರ್ಷದ ಅಂತ್ಯದವರೆಗೆ ಅವಕಾಶ ನೀಡುವುದು ಸೂಕ್ತವಲ್ಲ. ಆದ್ದರಿಂದ 2021-22ನೇ ಸಾಲಿನಲ್ಲಿ ಎಸ್‌ ಸಿ ಪಿ/ಟಿಎಸ್‌ಪಿ ಯೋಜನೆಯಡಿ ಹಂಚಿಕೆಯಾಗಿದ್ದ ಹಾಗೂ ಪ್ರಸ್ತುತ ಆಯುಕ್ತರ ಉಳಿತಾಯ ಖಾತೆಗೆ ಜಮೆ ಮಾಡಿರುವ 16.67 ಕೋಟಿ ಮೊತ್ತವನ್ನು ವೆಚ್ಚ ಮಾಡುವ ಅವಧಿಯನ್ನು 2022ರ ಅಗಸ್ಟ್‌ ಅಂತ್ಯದವರೆಗೆ ವಿಸ್ತರಿಸುವಂತೆ ಆರ್ಥಿಕ ಇಲಾಖೆಯನ್ನು ಕೋರಬಹುದು ಎಂದೂ ಇಲಾಖಾಧಿಕಾರಿಗಳು ಅಭಿಪ್ರಾಯ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಟೂಲ್‌ಕಿಟ್‌ ಖರೀದಿಗೆ ಸಂಬಂಧಿಸಿದಂತೆ ಇಂಟೆಲಿಕ್‌ ಸಿಸ್ಟಂನೊಂದಿಗೆ 2022ರ ಜೂನ್‌ 27ರಂದು ಕರಾರುಪತ್ರವನ್ನು ಸಹಿ ಮಾಢಿ ಸರಬರಾಜುದಾರರಿಗೆ ನೀಡಲಾಗಿತ್ತು. 2022ರ ಜೂನ್‌ 29ರಂದು ಆಟೋಮೊಬೈಲ್‌ ಮತ್ತು ಎಲೆಕ್ಟ್ರಾನಿಕ್‌ ಮೆಕಾನಿಕ್‌ ಸೆಕ್ಟರ್‌ಗಳ ಪೂರ್ವ ರವಾನೆ ಪರಿಶೀಲನೆ ಮಾಡಲಾಗಿತ್ತು. ಉಳಿದ ಸೆಕ್ಟರ್‌ಗಳನ ಪರಿಶೀಲನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ 2022ರ ಜುಲೈ ಮೊದಲ ವಾರದಲ್ಲಿ ಟೂಲ್‌ಕಿಟ್‌ಗಳನ್ನು ಎಲ್ಲಾ ನೋಡಲ್‌ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಗಳಿಗೆ ಸರಬರಾಜು ಮಾಡಲಾಗುವುದು ಎಂದು ಕಂಪನಿಯು 2022ರ ಮೇ 30ರಂದು ಬರೆದಿದ್ದ ಪತ್ರದಲ್ಲಿ ತಿಳಿಸಿತ್ತು.

 

ಟೂಲ್‌ಕಿಟ್‌ ಮತ್ತು ಲೇಖನ ಸಾಮಗ್ರಿಗಳ ಖರೀದಿಸಿ ಉಚಿತವಾಗಿ ವಿತರಿಸುವ ಉದ್ದೇಶದಿಂದ ಕರೆದಿದ್ದ ಟೆಂಡರ್‌ ಬಗ್ಗೆ ದೂರು ಸ್ವೀಕೃತವಾಗಿತ್ತು. ಹೀಗಗಿ ಅದನ್ನು ರದ್ದುಪಡಿಸಿ ಮರು ಟೆಂಡರ್‌ ಕರೆಯಲಾಗಿತ್ತು. ಹೀಗಾಗಿ ಇದನ್ನು ಇತ್ಯರ್ಥಪಡಿಸಲು ಸಾಕಷ್ಟು ಸಮಯ ವ್ಯರ್ಥವಾಗಿತ್ತು.

 

ಇದಾದ ನಂತರ ಯಶಸ್ವಿ ಬಿಡ್‌ದಾರರು ಟೂಲ್‌ಕಿಟ್‌ಗಳನ್ನು ಸರಬರಾಜು ಮಾಡಲು ಹಾಗೂ ಬಿಲ್‌ಗಳನ್ನು ಪರಿಶೀಲಿಸಿ ಸರಬರಾಜುದಾರರಿಗೆ ಮೊತ್ತ ಪಾವತಿಸಲು ಸಾಕಷ್ಟು ಸಮಯಾವಕಾಶ ಅಗತ್ಯವಿತ್ತು. ಹೀಗಾಗಿ 202ರ ಮೇ ಅಂತ್ಯದೊಖಗೆ ವೆಚ್ಚ ಮಾಡಲು ಆರ್ಥಿಕ ಇಲಾಖೆ ಸಹಮತಿ ಕೋರಿತ್ತು. ಇದಕ್ಕೆ ಆರ್ಥಿಕ ಇಲಾಖೆಯು 2022ರ ಮಾರ್ಚ್ 10ರಂದು ಸಹಮತಿ ವ್ಯಕ್ತಪಡಿಸಿತ್ತು ಎಂಬ ಅಂಶ ಟಿಪ್ಪಣಿ ಹಾಳೆಯಲ್ಲಿ ನಮೂದಿಸಲಾಗಿದೆ.

Hot this week

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ; ಅಧಿಕಾರಿಗಳ ವಿರುದ್ಧ ದಾಖಲಾಗದ ಎಫ್‌ಐಆರ್, ವರದಿ ಸಲ್ಲಿಸಲು ಸೂಚನೆ

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ತವರು ಕ್ಷೇತ್ರದಲ್ಲಿ...

13 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ; ಗುತ್ತಿಗೆದಾರರ ಸಂಘದಿಂದ ಮತ್ತೊಂದು ಪತ್ರ, ಕೋರ್ಟ್‌ ಕದ ತಟ್ಟಿದ ಗುತ್ತಿಗೆದಾರರು

ಬೆಂಗಳೂರು;  ಮಹಾತ್ಮಗಾಂಂಧಿ ನಗರ ವಿಕಾಸ ಯೋಜನೆ -1 ರ ಅಡಿಯಲ್ಲಿ ಕಾಮಗಾರಿ...

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

ತರಕಾರಿ ಬೀಜಗಳ ಕಿಟ್ ವಿತರಣೆ; ದಾಸ್ತಾನು ಇಲ್ಲದ ಏಜೆನ್ಸಿಗೆ 4 ಜಿ ವಿನಾಯಿತಿ, ಬಹುಕೋಟಿ ಅಕ್ರಮ, ಭ್ರಷ್ಟಾಚಾರ ಸುಳಿಯಲ್ಲಿ ಸರ್ಕಾರ?

ಬೆಂಗಳೂರು; 2023-24 ಮತ್ತು 2025-26ನೇ ಸಾಲಿನವರೆಗೆ  ತೋಟಗಾರಿಕೆ ಇಲಾಖೆಯು ಜಾರಿಗೊಳಿಸಿದ್ದ  ...

Topics

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

13,646.51 ಕೋಟಿ ಹೆಚ್ಚುವರಿ ವೆಚ್ಚ; ಗೃಹ ಲಕ್ಷ್ಮಿಯದ್ದೇ ಸಿಂಹಪಾಲು, ಹೆಚ್ಚುವರಿ ಖರ್ಚಿಗೆ ಕಾರಣಗಳೇ ಇಲ್ಲ, ಸಿಎಜಿ ಆಕ್ಷೇಪ

ಬೆಂಗಳೂರು;  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು 2024-25ನೇ ಸಾಲಿನಲ್ಲಿ ...

2,298 ಕೋಟಿ ರು ಮೊತ್ತದ ಬಿಲ್‌ ಬಾಕಿ; 276 ಕಾಮಗಾರಿ ಅಪೂರ್ಣ, ಬೊಕ್ಕಸ ಬರಿದಾಯಿತೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿದ್ದ  ಕಾಮಗಾರಿಗಳು ನಿಗದಿತ ಅವಧಿಯಲ್ಲಿ...

ಪುಸ್ತಕಗಳ ಖರೀದಿಯಲ್ಲಿ ವಂಚನೆ, ಭ್ರಷ್ಟಾಚಾರ ಆರೋಪ;ಎಚ್ ಟಿ ಪೋತೆ ಅವರ ವಿರುದ್ಧ ಕ್ರಮಕ್ಕೆ ಮೀನಮೇಷ

ಬೆಂಗಳೂರು;  ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ...

Related Articles

Popular Categories

error: Content is protected !!