ಕೋವಿಡ್‌ ರೋಗಿಗಳಿಂದ ಅಧಿಕ ಶುಲ್ಕ ವಸೂಲಿ; 3.54 ಕೋಟಿ ರು ಪೈಕಿ 1.00 ಕೋಟಿಯಷ್ಟೇ ಮರುಪಾವತಿ

photo credit;firstpost

ಬೆಂಗಳೂರು; ಕೋವಿಡ್‌ ರೋಗಿಗಳಿಂದ ಸರ್ಕಾರ ಸೂಚಿಸಿದ್ದ ಶುಲ್ಕಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಒಟ್ಟು 3. 54 ಕೋಟಿ ರು. ಶುಲ್ಕ ವಸೂಲಿ ಮಾಡಿದ್ದ 246 ಆಸ್ಪತ್ರೆಗಳ ಪೈಕಿ ಕೇವಲ 70 ಆಸ್ಪತ್ರೆಗಳು 1.00 ಕೋಟಿ ರು.ಗಳನ್ನಷ್ಟೇ ರೋಗಿಗಳಿಗೆ ಮರು ಪಾವತಿಸಿರುವುದು ಇದೀಗ ಬಹಿರಂಗವಾಗಿದೆ.

 

ಖಾಸಗಿ ಅಸ್ಪತ್ರೆಗಳು ವಸೂಲಿ ಮಾಡಿದ್ದ ಪಟ್ಟಿ ಮತ್ತು ಇದುವರೆಗೂ ರೋಗಿಗಳಿಗೆ ಮರು ಪಾವತಿಸಿರುವ ಪಟ್ಟಿಯನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಮಾಹಿತಿ ಪಡೆದುಕೊಂಡಿದೆ.

 

ಸುವರ್ಣ ಆರೋಗ್ಯ ಟ್ರಸ್ಟ್‌ 2022ರ ಮೇ 7ರಂದು ನೀಡಿರುವ ಮಾಹಿತಿ ಪ್ರಕಾರ 70 ಆಸ್ಪತ್ರೆಗಳಿಂದ 1.00 ಕೋಟಿ ರು.ಗಳನ್ನಷ್ಟೇ ರೋಗಿಗಳಿಗೆ ಮರು ಪಾವತಿಸಿದೆ. ಮರು ಪಾವತಿಗೆ ಬಾಕಿ ಉಳಿಸಿಕೊಂಡಿರುವ ಉಳಿದ ಆಸ್ಪತ್ರೆಗಳ ಪಟ್ಟಿ ಮತ್ತು ವಸೂಲಿ ಮಾಡಿರುವ ಆಧಿಕ ಶುಲ್ಕದ ಮೊತ್ತದ ಪಟ್ಟಿಯನ್ನು ಒದಗಿಸಿಲ್ಲ.

 

ಅಲ್ಲದೆ ಡಾ ದೇವಿಶೆಟ್ಟಿ ಮುಖ್ಯಸ್ಥರಾಗಿರುವ ನಾರಾಯಣ ಹೃದಯಾಲಯ ಸಮೂಹದ ಆಸ್ಪತ್ರೆಗಳೂ ಸೇರಿದಂತೆ ಅಧಿಕ ಶುಲ್ಕ ವಸೂಲಿ ಮಾಡಿರುವ ಯಾವ ಆಸ್ಪತ್ರೆಗಳ ವಿರುದ್ಧವೂ ಒಂದೇ ಒಂದು ಕ್ರಮ ಕೈಗೊಂಡಿಲ್ಲ. ರೋಗಿಗಳಿಗೆ ಹಣವನ್ನು ಮರು ಪಾವತಿಸಿ ಕೈತೊಳೆದುಕೊಂಡಿರುವುದು ಆರ್‌ಟಿಐ ಮಾಹಿತಿಯಿಂದ ತಿಳಿದು ಬಂದಿದೆ.

 

‘ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ರೋಗಿಗಳಿಗೆ ಹಣ ಮರುಪಾವತಿ ಮಾಡದಿರುವ ಕೋವಿಡ್‌ 19 ಪ್ರಕರಣಗಳ ಬಗ್ಗೆ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಹಾಗೂ ರೋಗಿಗಳು, ಸಹಾಯಕರ ಸಮ್ಮುಖದಲ್ಲಿ ಎಸ್‌ಎಎಸ್‌ಟಿ ಕಚೇರಿಯಲ್ಲಿ ವಿಚಾರಣೆ ನಡೆಸಿ ರೋಗಿಗಳಿಗೆ ಹಣ ಮರು ಪಾವತಿಸಲು ಕ್ರಮವಹಿಸಲಾಗಿದೆ. ಬೆಂಗಳೂರು ಹೊರತುಪಡಿಸಿದ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ರೋಗಿಗಳಿಗೆ ಹಣ ಮರುಪಾವತಿ ಮಾಡದಿರುವ ಕೋವಿಡ್‌ 19 ಪ್ರಕರಣಗಳ ಬಗ್ಗೆ ಸಂಬಂಧಪಟ್ಟ ಜಿಲ್ಲಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಹಾಗೂ ರೋಗಿಗಳು, ಸಹಾಯಕರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಕುಂದುಕೊರತೆ ಪರಿಹಾರ ಸಮಿತಿ ಸಭೆಯಲ್ಲಿ ವಿಚಾರಣೆ ನಡೆಸಿ ರೋಗಿಗಳಿಗೆ ಹಣ ಮರುಪಾವತಿಸಲು ಕ್ರಮವಹಿಸಲಾಗಿರುತ್ತದೆ,’ ಎಂದು ಮಾಹಿತಿಯಲ್ಲಿ ವಿವರಿಸಲಾಗಿದೆ.

 

 

ಅಧಿಕ ಶುಲ್ಕ ವಸೂಲಿ ಮಾಡಿ ನಂತರ ರೋಗಿಗಳಿಗೆ ಮರುಪಾವತಿಸಿರುವ ಪಟ್ಟಿ

 

ಅದೇ ರೀತಿ ರೋಗಿಗಳ ವೈಯಕ್ತಿಕ ವಿಷಯಗಳನ್ನು ಒಳಗೊಂಡಿದೆ ಎಂಬ ಕಾರಣವನ್ನು ಮುಂದಿರಿಸಿ ನಿಗದಿಗಿಂತ ಅದಿಕ ಶುಲ್ಕ ವಸೂಲು ಮಾಡಿರುವ ಆಸ್ಪತ್ರೆಗಳಿಗೆ ನೀಡಿರುವ ನೋಟಿಸ್‌ಗಳನ್ನು ಆರ್‌ಟಿಐ ಅಡಿಯಲ್ಲಿ ನೀಡಲು ಟ್ರಸ್ಟ್‌ ನಿರಾಕರಿಸಿದೆ.

 

ಅಧಿಕ ಶುಲ್ಕ ವಸೂಲಿ ಮಾಡಿ ರೋಗಿಗಳಿಗೆ ಮರು ಪಾವತಿ ಮಾಡಿರುವ ಆಸ್ಪತ್ರೆಗಳ ಪಟ್ಟಿಯಲ್ಲಿ ನಾರಾಯಣ ಹೃದಯಾಲಯ, ನಾರಾಯಣ ಸೂಪರ್‌ ಸ್ಪೆಷಾಲಿಟಿ, ಶಾಸಕ ಶಾಮನೂರು ಶಿವಶಂಕರಪ್ಪ ಒಡೆತನದ ಎಸ್‌ ಎಸ್‌ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ಸ್‌, ಕಾಂಗ್ರೆಸ್‌ನ ಮತ್ತೊಬ್ಬ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್‌ ಅವರ ಕುಟುಂಬ ಒಡೆತನದ ಸಿದ್ಧಾರ್ಥ್ ಸಮೂಹದ ವೈದ್ಯಕೀಯ ಆಸ್ಪತ್ರೆ, ಮಾಜಿ ಸಚಿವ ಎಂ ಬಿ ಪಾಟೀಲ್‌ ಕುಟುಂಬ ಒಡೆತನದ ಬಿಎಲ್‌ಡಿಇ ವಿಶ್ವವಿದ್ಯಾಲಯ ಬಿ ಎಂ ಪಾಟೀಲ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆ, ಎಸ್‌ಡಿಎಂ ಕಾಲೇಜ್‌ ಆಫ್‌ ಮೆಡಿಕಲ್‌ ಸೈನ್ಸ್‌ಸ್‌ ಹಾಸ್ಪಿಟಲ್‌, ಅಗಡಿ, ಆಸ್ತರ್‌ ಸಿಎಂಐ, ಎಂವಿಜೆ ಆಸ್ಪತ್ರೆಯೂ ಇವೆ.

 

ಈ ಪೈಕಿ ನಾರಾಯಣ ಹೃದಯಾಲಯ ಪ್ರೈವೈಟ್‌ ಹಾಸ್ಪಿಟಲ್‌ 45,800 ರು., ನಾರಾಯಣ ಸೂಪರ್‌ ಸ್ಪೆಷಾಲಿಟಿ ಹಾಸ್ಪಿಟಲ್‌ ಮಲ್ಲೇಶ್ವರಂ 75,000 ರು., ಎಸ್‌ಡಿಎಂ ಕಾಲೇಜ್‌ ಆಫ್‌ ಮೆಡಿಕಲ್‌ ಸೈನ್ಸ್‌ಸ್‌ ಅಂಡ್‌ ಹಾಸ್ಟಿಟಲ್‌ 32,387 ರು., ಎಸ್‌ ಎಸ್‌ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ಸ್‌ ಅಂಡ್‌ ಹಾಸ್ಪಿಟಲ್‌ 1,07,000 ರು., ಜಿಂದಾಲ್‌ ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ ಹಾಸ್ಟಿಟಲ್‌ 1,40,000 ರು, ಬಿ ಎಂ ಪಾಟೀಲ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆ 6,90,618 ರು., ಮಣಿಪಾಲ್‌ ಆಸ್ಪತ್ರೆಯು 6,47,202 ರು. ಗಳನ್ನು ರೋಗಿಗಳಿಗೆ ಮರು ಪಾವತಿಸಿರುವುದು ಪಟ್ಟಿಯಿಂದ ಗೊತ್ತಾಗಿದೆ.

 

ಆಸ್ಪತ್ರೆಗಳು ಮರುಪಾವತಿಸಿರುವ ಪಟ್ಟಿ

 

ಇನ್ನುಳಿದಂತೆ ಅಗಡಿ ಆಸ್ಪತ್ರೆ 40,738 ರು., ಚಿಕ್ಕಬಳ್ಳಾಪುರದ ಅನನ್ಯ ಸ್ಪೆಷಾಲಿಟಿ ಆಸ್ಪತ್ರೆ 5,96, 461 ರು., ಎ ಎಲ್‌ ಅನ್ಸಾರ್‌ ಆಸ್ಪತ್ರೆ 32,100 ರು., ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೊಲೋ ಆಸ್ಪತ್ರೆ 10,000 ರು., ಆರೋಗ್ಯ ಆಧಾರ ಆಸ್ಪತ್ರೆ 3,35,000 ರು., ಆಸ್ತರ್‌ ಸಿಎಂಐ ಆಸ್ಪತ್ರೆ 30,955 ರು., ಆಸ್ತರ್‌ ಆರ್‌ವಿ ಆಸ್ಪತ್ರೆ 750 ರು., ಅಶ್ವಿನಿ ಆಯುರ್ವೇದ ಮೆಡಿಕಲ್‌ ಕಾಲೇಜು 3,64, 818 ರು., ಬೆಂಗಳೂರು ಬ್ಯಾಪಿಸ್ಟ್‌ ಆಸ್ಪತ್ರೆ 2,00,030 ರು., ಬೆಂಗಳೂರು ಇನ್ಸಿಟಿಟ್ಯೂಟ್‌ ಆಫ್‌ ಗ್ರಾಸ್ಟ್ರೋಎಂಟ್ರಾಲಜಿ 36,610 ರು., ಬಸವೇಶ್ವರ ಟೀಚಿಂಗ್‌ ಜನರಲ್‌ ಆಸ್ಪತ್ರೆ 90,000 ರು., ಬಿಜಿಎಸ್‌ ಗ್ಲೋಬಲ್‌ ಇನ್ಸಿಟಿಟ್ಯೂಟ್‌ ಸೈನ್ಸ್‌ಸ್‌ ಅಂಡ್‌ ಹಾಸ್ಪಿಟಲ್‌ 82, 172 ರು., ಭಗವಾನ್‌ ಮಹಾವೀರ್‌ ಜೈನ್‌ 69,500 ರು.,

 

 

ಮೈಸೂರಿನ ಭವಾನಿ ಆಸ್ಪತ್ರೆ 4,19,928 ರು, ಬಿಎಚ್‌ಎಸ್‌ ಲೇಕ್‌ ವ್ಯೂ ಹಾರ್ಟ್ ಅಂಡ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ 75,000 ರು., ಬಿಎಲ್‌ಡಿಇ ಯುನಿವರ್ಸಿಟಿ ಶ್ರೀ ಬಿ ಎಂ ಪಾಟೀಲ್‌ಮೆಡಿಕಲ್‌ಕಾಲೇಜು ಅಸ್ಪತ್ರೆ 6,90,618, ಚೌಧರಿ ಆಸ್ಪತ್ರೆ 6,63,780, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಸರ್ಜಾಪುರ ರಸ್ತೆ 3,500, ಕೊಲಂಬಿಯಾ ಏಷ್ಯಾ ಆಸ್ಪತ್ರೆ ಹೆಬ್ಬಾಳ 3,78,741, ಕೊಲಂಬಿಯಾ ಏಷ್ಯಾ ಆಸ್ಪತ್ರೆ ಯಶವಂತಪುರ 97,460, ದಾನೇಶ್ವರಿ ಮಲ್ಟಿ ಸ್ಪೆಷಾಲಿಟಿ ಹೆಲ್ತ್‌ಕೇರ್‌ 2, 13,000, ಡಾ ಚಂದ್ರಮ್ಮ ದಯಾನಂದ್‌ಸಾಗರ್‌ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ 25,000, ಫೋರ್ಟೀಸ್‌ಆಸ್ಪತ್ರೆ ರಾಜಾಜಿನಗರ 14,000, ಹೆಚ್‌ಬಿಎಸ್‌ ಹಾಸ್ಪಿಟಲ್‌ಟ್ರಸ್ಟ್‌ 3,15,000,

 

 

ಹುಬ್ಬಳ್ಳಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ, ಹುಬ್ಬಳ್ಳಿ 35,000, ಜಗದ್ಗುರು ಶ್ರೀ ಶಿವರಾತ್ರೀಶ್ವರ ಆಸ್ಪತ್ರೆ 30,000, ಜಿಂದಾಲ್‌ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ 1,40,000, ಜಸ್ಟೀಸ್‌ಕೆ ಎಸ್‌ಹೆಗ್ಡೆ ಚಾರಿಟಬಲ್‌ಆಸ್ಪತ್ರೆ 66,799, ಕಾಮಾಕ್ಷಿ ಆಸ್ಪತ್ರೆ ಯುನಿಟ್‌-(2 ) 10,000, ಕಣಚೂರು ಹಾಸ್ಟಿಟಲ್‌ಅಂಡ್‌ರೀಸರ್ಚ್ ಸೆಂಟರ್‌ 6,895, ಕಿಮ್ಸ್‌ ಹಾಸ್ಪಟಿಲ್‌ಅಂಡ್‌ರೀಸರ್ಚ್ ಸೆಂಟರ್‌ 50,000, ಕಿಮ್ಸ್‌ ಬೆಂಗಳೂರು 3,65,700, ಮಲ್ಲಿಗೆ ಮೆಡಿಕಲ್‌ ಸೆಂಟರ್‌ ಪ್ರೈವೈಟ್‌ಲಿಮಿಟೆಡ್‌ 32,297, ಮಣಿಪಾಲ್‌ಆಸ್ಪತ್ರೆ, ಬೆಂಗಳೂರು 6,47,202,

 

ಮೆಡಿಕೋಸ್ಕೋಪ್‌ಚೆಸ್ಟ್‌ಅಂಡ್‌ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ 2,19,637, ಎಂವಿಜೆ ಮೆಡಿಕಲ್‌ಕಾಲೇಜು ಅಂಡ್‌ರೀಸರ್ಚ್‌ಹಾಸ್ಪಿಟಲ್ 30,000, ನಂಜಪ್ಪ ಆಸ್ಪತ್ರೆ 76,468, ನಾರಾಯಣ ಹೃದಯಾಲಯ ಹಾಸ್ಪಿಟಲ್‌ ಮಲ್ಲೇಶ್ವರಂ 45,800, ನಾರಾಯಣ ಸೂಪರ್‌ಸ್ಪೆಷಾಲಿಟಿ ಹಾಸ್ಪಟಿಲ್‌ಮಲ್ಲೇಶ್ವರಂ ಬೆಂಗಳೂರು 75,000, ನವಚೇತನ ಹಾಸ್ಟಿಟಲ್‌ಬೆಂಗಳೂರು 35,145, ನಿನಾದ್‌ಪೃಥ್ವಿ ಸೂಪರ್‌ಸ್ಪೆಷಾಲಿಟಿ ಹಾಸ್ಟಿಟಲ್‌ 68,803, ಪೀಪಲ್‌ಟ್ರೀ ಹಾಸ್ಟಿಟಲ್‌ 81,600, ಪ್ರಣವ್‌ಹಾಸ್ಪಿಟಲ್‌ 96,500

 

ಪ್ರಶಾಂತ್‌ ಹಾಸ್ಟಿಟಲ್‌ 1,73,500, ಪೃಥ್ವಿ ಕೋವಿಡ್‌ ಹಾಸ್ಟಿಟಲ್‌ತುಮಕೂರು 37, 253, ರಾಮಯ್ಯ ಹರ್ಷ ಹಾಸ್ಪಿಟಲ್‌ ನೆಲಮಂಗಲ 25,000, ರಂಗದುರೈ ಮೆಮೋರಿಯಲ್‌ ಹಾಸ್ಪಿಟಲ್‌ 46, 886, ಎಸ್‌ ಎಸ್‌ ಇನ್ಸಿಟಿಟ್ಯೂಟ್‌ ಮೆಡಿಕಲ್‌ಸೈನ್ಸ್‌ಸ್‌ ರೀಸರ್ಚ್‌ಸೆಂಟರ್‌ 1,07,000, ಸಕ್ರಾ ಆಸ್ಪತ್ರೆ 3, 06, 993, ಸತ್ಯಸಾಯಿ ಆರ್ಥೋಪೆಡಿಕ್‌ ಅಂಡ್‌ ಮಲ್ಟಿಸ್ಪೆಷಾಲಿಟಿ ಹಾಸ್ಟಿಟಲ್‌ 25, 377, ಎಸ್‌ಡಿಎಂ ಕಾಲೇಜ್‌ ಆಫ್‌ ಮೆಡಿಕಲ್‌ ಸೈನ್ಸ್‌ ಅಂಡ್‌ ಹಾಸ್ಟಿಟಲ್‌ 32, 387, ಎಸ್‌ಡಿಎಸ್‌ಟಿಆರ್‌ಸಿ ಆರ್‌ಜಿಐಸಿಡಿ 7,000, ಶಕುಂತಲಾ ಗ್ರಾಮೀಣ್‌ ಹಾಸ್ಟಿಟಲ್‌ 1,51,000, ಶಿಫಾ ಹಾಸ್ಟಿಟಲ್‌ 11, 859,

 

ಶ್ರೀ ಭಾಗ್ಯವಂತಿ ಮಲ್ಟಿಸ್ಪೆಷಾಲಿಟಿ 3,20,000, ಶ್ರೀದೇವಿ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ಸೈನ್ಸ್‌ ಅಂಡ್‌ ರೀಸರ್ಚ್‌ ಹಾಸ್ಪಿಟಲ್‌ 5,83,539, ಎಸ್‌ಎನ್‌ಎಂಸಿ ಎಚ್‌ಎಸ್‌ಕೆ ಹಾಸ್ಪಟಿಲ್‌ 4, 158, ಶ್ರೀ ಸಿದ್ಧಾರ್ಥ ಮೆಡಿಕಲ್‌ ಕಾಲೇಜ್‌ ಅಂಡ್‌ ರೀಸರ್ಚ್‌ ಸೆಂಟರ್‌ ತುಮಕೂರು 76,112, ಶ್ರೀ ಆದಿಚುಂಚನಗಿರಿ ಹಾಸ್ಪಿಟಲ್‌ ಅಂಡ್‌ ರೀಸರ್ಚ್‌ ಸೆಂಟರ್‌ 9,100, ಶ್ರೀ ಹಾನಗಲ್‌ ಕುಮಾರೇಶ್ವರ ಹಾಸ್ಪಿಟಲ್‌ ಬಾಗಲಕೋಟೆ 24, 245, ಸೇಂಟ್‌ ಜಾನ್ಸ್‌ ಮೆಡಿಕಲ್‌ ಕಾಲೇಜ್‌ ಹಾಸ್ಪಿಟಲ್‌ 1,75, 964, ಸೇಂಟ್‌ ಮಾರ್ಥಾಸ್‌ ಹಾಸ್ಪಿಟಲ್‌ 6,09, 415, ಸುಬ್ಬಯ್ಯ ಮೆಡಿಕಲ್ ಕಾಲೇಜ್‌ ಹಾಸ್ಪಿಟಲ್‌ ರೀಸರ್ಚ್ ಸೆಂಟರ್‌ 1,750,

 

ದ ಬೆಂಗಳೂರು ಹಾಸ್ಪಿಟಲ್‌ 2, 370, ಟಿಎಚ್‌ಎಸ್‌ ಸೂಪರ್‌ ಸ್ಪೆಷಾಲಿಟಿ ಹಾಸ್ಪಿಟಲ್‌ ತುಮಕೂರು 65, 287, ಯೂನಿಟಿ ಸೆಂಟರ್‌ ಫಾರ್‌ ಅಡ್ವಾನ್ಸ್‌ಡ್‌ ಪೀಡಿಯಾಟ್ರಿಕ್ಸ್ ಕೇರ್‌ 53,000, ವಾತ್ಸಲ್ಯ ಲೈಫ್‌ ಹಾಸ್ಪಿಟಲ್‌ 61, 335, ವೀರಾಪುರ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‌ 8,000, ವಿಶ್ವಾಸ್‌ ಹಾಸ್ಪಿಟಲ್‌ನಿಪ್ಪಾಣಿ 20,000, ವೈದೇಹಿ ಹಾಸ್ಪಿಟಲ್‌ 1, 74, 119 ರು. ಮರು ಪಾವತಿ ಮಾಡಿರುವುದು ಆರ್‌ಟಿಐ ದಾಖಲೆಯಿಂದ ಗೊತ್ತಾಗಿದೆ.

 

 

ಡಿಸೆಂಬರ್‌ ಅಂತ್ಯದವರೆಗೆ ರಾಜ್ಯದಲ್ಲಿ 1,36,160 ಕೋವಿಡ್‌ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 1,17,690 ಸೋಂಕಿತರಿಗೆ ಸರ್ಕಾರದಿಂದ ವೆಚ್ಚ ಭರಿಸಲಾಗಿದೆ. 197 ಪ್ರಕರಣಗಳಲ್ಲಿ ಅಧಿಕ ಶುಲ್ಕ ವಸೂಲಿ ಮಾಡಿರುವ 57 ಖಾಸಗಿ ಆಸ್ಪತ್ರೆಗಳ ವಿರುದ್ಧ ನೇರವಾಗಿ ಮತ್ತು ಇ ಮೇಲ್‌ ಮೂಲಕ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿತ್ತು.

 

ಒಟ್ಟು 246 ಆಸ್ಪತ್ರೆಗಳು 3.54 ಕೋಟಿ ರು. ಅಧಿಕ ಶುಲ್ಕ ವಸೂಲಿ ಮಾಡಿವೆ. ಈ ಪೈಕಿ ರೋಗಿಗಳಿಗೆ ಕೇವಲ 73.28 ಲಕ್ಷ ರು. ಮಾತ್ರ ರೋಗಿಗಳಿಗೆ ಮರು ಪಾವತಿಸಿತ್ತು. 43 ರೋಗಿಗಳಿಗೆ 32,22,352 ರು.ಗಳನ್ನು ಹಣವನ್ನು ಮರು ಪಾವತಿಸಲಾಗಿದೆ. ಅದೇ ರೀತಿ 48 ಆಸ್ಪತ್ರೆಗಳು 58 ರೋಗಿಗಳ ಪೈಕಿ 7 ಆಸ್ಪತ್ರೆಗಳು ರೋಗಿಗಳಿಗೆ 10,42,339 ರು.ಗಳನ್ನು ಮರು ಪಾವತಿಸಿದೆ. 51 ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿಗೆ ಶಿಫಾರಸ್ಸು ಮಾಡಿತ್ತು.

 

238 ರೋಗಿಗಳು ನೇರವಾಗಿ ಸುವರ್ಣ ಆರೋಗ್ಯ ಟ್ರಸ್ಟ್‌ನ ವಿಶೇಷ ವಿಭಾಗಕ್ಕೆ ದೂರು ಸಲ್ಲಿಸಿದ್ದರು. ಇದರ ಅನ್ವಯ 1,460 ಆಸ್ಪತ್ರೆಗಳಿಗೆ ಶೋಕಾಸ್‌ ನೋಟೀಸ್‌ ನೀಡಿದೆ. ಈ ಪೈಕಿ 153 ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು 30,63, 343 ರುಗ.ಳನ್ನು ಮರು ಪಾವತಿಸಿದೆ. ಒಟ್ಟಾರೆ 73,28,034 ರು.ಗಳನ್ನು ಖಾಸಗಿ ಆಸ್ಪತ್ರೆಗಳು ಕೋವಿಡ್‌ ರೋಗಿಗಳಿಗೆ ಮರು ಪಾವತಿಸಿದ್ದವು.

 

ರಾಜ್ಯ ಸರ್ಕಾರವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನವೆಂಬರ್‌ 23 ಅಂತ್ಯಕ್ಕೆ 62,458 ಪ್ರಕರಣಗಳಿಗೆ 203.24 ಕೋಟಿ ರು. ಪಾವತಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಪ್ರಸ್ತಾವನೆ ಸಲ್ಲಿಸಿತ್ತು.
ಇದರಲ್ಲಿ 49,751 ಪ್ರಕರಣಗಳಿಗೆ 166.42 ಕೋಟಿ ರು.ಗಳನ್ನು ಭರಿಸಿರುವ ಸರ್ಕಾರ 12,707 ಪ್ರಕರಣಗಳಿಗೆ ವೆಚ್ಚ ಪಾವತಿಸಲು ಈಗಾಗಲೇ ಅನುಮೋದಿಸಿದೆ. ಹಾಗೆಯೇ 36.82 ಕೋಟಿ ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. 30 ಜಿಲ್ಲೆಗಳಲ್ಲಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿನ ಒಟ್ಟು 26,692 ಪ್ರಕರಣಗಳಿಗೆ 139.89 ಕೋಟಿ ರು.ಗಳನ್ನು ಬಿಡುಗಡೆಗೊಳಿಸಿದೆ ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts