ಕಾಯ್ದೆ ತಿದ್ದುಪಡಿ; 618 ಕೋಟಿ ಆದಾಯ ಗಳಿಸುತ್ತಿದ್ದ ಎಪಿಎಂಸಿಗಳಲ್ಲೀಗ 152.15 ಕೋಟಿಗೆ ಕುಸಿತ

Photo Credit;thehansindia

ಬೆಂಗಳೂರು; ಎಪಿಎಂಸಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತರುವ ಪೂರ್ವದ 2 ವರ್ಷದ ಮೊದಲು ಮಾರುಕಟ್ಟೆ ಮತ್ತು ಬಳಕೆದಾರರ ಶುಲ್ಕ ರೂಪದಲ್ಲಿ 618.21 ಕೋಟಿ ಸಂಗ್ರಹಿಸುತ್ತಿದ್ದ ಎಪಿಎಂಸಿಗಳು ಕಾಯ್ದೆಗೆ ತಿದ್ದುಪಡಿ ತಂದ ನಂತರದ ವರ್ಷಗಳಲ್ಲಿ 152.15 ಕೋಟಿ ರು. ಕುಸಿತ ಕಂಡಿದೆ.

 

ಕೇಂದ್ರ ಸರ್ಕಾರವು ಎಪಿಎಂಸಿ ಕಾಯ್ದೆಯನ್ನು ವಾಪಸ್‌ ಪಡೆದುಕೊಂಡರೂ ರಾಜ್ಯದಲ್ಲಿ ಕಾಯ್ದೆ ಏಕೆ ವಾಪಸ್‌ ಪಡೆದಿಲ್ಲ, ವರ್ಷಕ್ಕೆ 600 ಕೋಟಿ ರು ಆದಾಯ ಗಳಿಸುತ್ತಿದ್ದ ರಾಜ್ಯದ ಎಪಿಎಂಸಿಗಳು ಇಂದು ಆದಾಯವಿಲ್ಲದೇ ಶಾಶ್ವತವಾಗಿ ಬಾಗಿಲು ಮುಚ್ಚಲು ಸಿದ್ಧವಾಗಿವೆ. ಇದಕ್ಕೆ ಹೊಣೆ ಯಾರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ ಬೆನ್ನಲ್ಲೇ ಎಪಿಎಂಸಿಗಳ ಮೂರು ವರ್ಷಗಳ ಆದಾಯದ ವಿವರಗಳು ಮುನ್ನೆಲೆಗೆ ಬಂದಿವೆ.

 

ಆದಾಯದಲ್ಲಿ ಇಳಿಕೆಯಾಗಿರುವ ಕಾರಣ ಎಪಿಎಂಸಿಗಳಲ್ಲಿ ಮೂಲಭೂತ ಸೌಲಭ್ಯ, ಆಯ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಮೂಲಭೂತ ಸೌಲಭ್ಯ, ಪರಿಶಿಷ್ಟ ಹಮಾಲರಿಗೆ ವಸತಿ ಸೌಕರ್ಯ ಕಲ್ಪಿಸಲು ಒಟ್ಟಾರೆ 509.63 ಕೋಟಿ ರು ಒದಗಿಸಬೇಕು ಎಂದು ಬೇಡಿಕೆ ಸಲ್ಲಿಸಿತ್ತು.

 

2019-20, 2020-21 ಮತ್ತು 2021-22ಕ್ಕೆ ಹೋಲಿಸಿದರೆ ರಾಜ್ಯದ 162 ಎಪಿಎಂಸಿಗಳ ಆದಾಯದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. 2019-20ಕ್ಕೆ ಹೋಲಿಸಿದರೆ 466.06 ಕೋಟಿ ಕಡಿಮೆಯಾಗಿದ್ದರೆ 2020-21ಕ್ಕೆ ಹೋಲಿಸಿದರೆ 142.7 ಕೋಟಿ ರು. ಇಳಿಕೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಆದಾಯ ಇಳಿಕೆಯಾಗಿರುವುದು ಎಪಿಎಂಸಿಗಳು ದೈನಂದಿನ ಆಡಳಿತ ಮತ್ತು ಚಟುವಟಿಕೆಗಳ ನಿರ್ವಹಣೆಗೂ ಕಷ್ಟಪಡಬೇಕಾದ ಸ್ಥಿತಿ ಬರಲಿದೆ ಎಂಬುದು ಅಂಕಿ ಅಂಶಗಳಿಂದಲೇ ಮೇಲ್ನೋಟಕ್ಕೆ ಕಂಡು ಬಂದಿದೆ.

 

2019-20 ರಲ್ಲಿ ಮಾರುಕಟ್ಟೆ ಶುಲ್ಕದ ರೂಪದಲ್ಲಿ ರಾಜ್ಯದ 162 ಎಪಿಎಂಸಿಗಳಲ್ಲಿ 561.70 ಕೋಟಿ ಆದಾಯ ಗಳಿಸಿತ್ತು. ಬಳಕೆದಾರರ ಶುಲ್ಕದ ರೂಪದಲ್ಲಿ 56.50 ಕೋಟಿ ಸೇರಿ ಒಟ್ಟಾರೆ 618.21 ಕೋಟಿ ರು. ಶುಲ್ಕ ಸಂಗ್ರಹಿಸಿತ್ತು.

 

2020-21ರಲ್ಲಿ ಮಾರುಕಟ್ಟೆ ಶುಲ್ಕ 264.60 ಕೋಟಿ ರು , 30.24 ಕೋಟಿ ರು. ಬಳಕೆದಾರರ ಶುಲ್ಕದ ರೂಪದಲ್ಲಿ ಗಳಿಸಿತ್ತು. 2021-22ರಲ್ಲಿ (ಜನವರಿ 2022ರ ಅಂತ್ಯಕ್ಕೆ) ಮಾರುಕಟ್ಟೆ ಶುಲ್ಕ 121.37 ಕೋಟಿ, ಬಳಕೆದಾರರ ಶುಲ್ಕದ ರೂಪದಲ್ಲಿ 30.77 ಕೋಟಿ ಸಂಗ್ರಹಿಸಿದೆ.

 

ಬೆಂಗಳೂರು ಎಪಿಎಂಸಿಯಲ್ಲಿ 2019-20ರಲ್ಲಿ ಮಾರುಕಟ್ಟೆ ಶುಲ್ಕವೆಂದು 39.81 ಕೋಟಿ ರು., ಬಳಕೆದಾರರ ಶುಲ್ಕವೆಂದು 20.70 ಕೋಟಿ ರು., 2020-21ರಲ್ಲಿ 17.75 ಕೋಟಿ ರು.(ಮಾ.ಶು), 8.51 ಕೋಟಿ ರು (ಬ.ಶು), 2021-22ರಲ್ಲಿ 8.30 ಕೋಟಿ ರು., (ಮಾ.ಶು), 7.45 ಕೋಟಿ ರು. (ಬ.ಶು) ವಸೂಲಾಗಿದೆ. ಹಾಗೆಯೇ ಬೆಂಗಳೂರು ಹಣ್ಣು ತರಕಾರಿ ಮಾರುಕಟ್ಟೆ ಎಪಿಎಂಸಿಯಲ್ಲಿ 2019-20ರಲ್ಲಿ ಮಾರುಕಟ್ಟೆ ಶುಲ್ಕ 11.88 ಲಕ್ಷ ರು., 8.76 ಕೋಟಿ ರು. ಬಳಕೆದಾರರ ಶುಲ್ಕ ಸಂಗ್ರಹವಾಗಿದೆ. 2020-21ರಲ್ಲಿ 3.13 ಲಕ್ಷ (ಮಾ.ಶು), 5.07 ಕೋಟಿ ರು., (ಬ.ಶು), 2021-22ರಲ್ಲಿ 5.85 ಲಕ್ಷ (ಮಾ.ಶು), 7.47 ಕೋಟಿ ರು. (ಬ.ಶು) ವಸೂಲಾಗಿದೆ.

 

ದಾವಣಗೆರೆ ಎಪಿಎಂಸಿಯಲ್ಲಿ 2019-20ರಲ್ಲಿ ಮಾರುಕಟ್ಟೆ ಶುಲ್ಕವೆಂದು 12.92 ಕೋಟಿ ರು, 78.06 ಲಕ್ಷ ರು, ಬಳಕೆದಾರರ ಶುಲ್ಕ, 2020-21ರಲ್ಲಿ 5.73 ಕೋಟಿ ರು (ಮಾ.ಶು), 61.85 ಲಕ್ಷ (ಬ.ಶು), 2021-22ರಲ್ಲಿ 1.99 ಕೋಟಿ ರು., (ಮಾ.ಶು), 51.60 ಲಕ್ಷ (ಬ.ಶು) ವಸೂಲಾಗಿದೆ.

 

ಶಿವಮೊಗ್ಗ ಎಪಿಎಂಸಿಯಲ್ಲಿ 2019-20ರಲ್ಲಿ ಮಾರುಕಟ್ಟೆ ಶುಲ್ಕವೆಂದು 33.65 ಕೋಟಿ ರು., ಬಳಕೆದಾರರ ಶುಲ್ಕವೆಂದು 13.79 ಲಕ್ಷ, 2020-21ರಲ್ಲಿ 11.96 ಕೋಟಿ (ಮಾ.ಶು), 8.16 ಲಕ್ಷ (ಬ.ಶು), 2021-22ರಲ್ಲಿ 7.83 ಕೋಟಿ ರು., (ಮಾ.ಶು), 7.28 ಲಕ್ಷ (ಬ.ಶು) ವಸೂಲಾಗಿದೆ. ಮೈಸೂರು ಎಪಿಎಂಸಿಯಲ್ಲಿ 2019-20ರಲ್ಲಿ ಮಾರುಕಟ್ಟೆ ಶುಲ್ಕವೆಂದು 8.16 ಕೋಟಿ ರು., ಬಳಕೆದಾರರ ಶುಲ್ಕವೆಂದು 2.53 ಕೋಟಿ ರು., , 2020-21ರಲ್ಲಿ 6.18. ಕೋಟಿ (ಮಾ.ಶು), 3.06 ಕೋಟಿ (ಬ.ಶು), 2021-22ರಲ್ಲಿ 1.66 ಕೋಟಿ ರು., (ಮಾ.ಶು), 96.66 ಲಕ್ಷ ( ಬ.ಶು) ಸಂಗ್ರಹವಾಗಿದೆ.

 

ತುಮಕೂರು ಎಪಿಎಂಸಿಯಲ್ಲಿ 2019-20ರಲ್ಲಿ ಮಾರುಕಟ್ಟೆ ಶುಲ್ಕವೆಂದು 9.97 ಕೋಟಿ , ಬಳಕೆದಾರರ ಶುಲ್ಕವೆಂದು 49.96 ಲಕ್ಷ ರು., 2020-21ರಲ್ಲಿ 4.18 ಕೋಟಿ ರು., (ಮಾ.ಶು), 34.82 ಲಕ್ಷ (ಬ.ಶು), 2021-22ರಲ್ಲಿ 1.24 ಕೋಟಿ ರು., (ಮಾ.ಶು), 16.22 ಲಕ್ಷ (ಬ.ಶು) ವಸೂಲಾಗಿದೆ. ಮಂಡ್ಯ ಎಪಿಎಂಸಿಯಲ್ಲಿ 2019-20ರಲ್ಲಿ ಮಾರುಕಟ್ಟೆ ಶುಲ್ಕವೆಂದು 4.23.ಕೋಟಿ ರು., 2020-21ರಲ್ಲಿ 2.08 ಕೋಟಿ ರು., , 2021-22ರಲ್ಲಿ 1.56 ಕೋಟಿ ರು., ಬಳಕೆದಾರರ ಶುಲ್ಕವೆಂದು 4.14 ಲಕ್ಷ ರು. ಸಂಗ್ರಹವಾಗಿದೆ.

 

ಹಾಸನ ಎಪಿಎಂಸಿಯಲ್ಲಿ 2019-20ರಲ್ಲಿ ಮಾರುಕಟ್ಟೆ ಶುಲ್ಕವೆಂದು 8.18 ಕೋಟಿ ರು., 1.51 ಕೋಟಿ ರು. ಬಳಕೆದಾರರ ಶುಲ್ಕದ ರೂಪದಲ್ಲಿ ಸಂಗ್ರಹವಾಗಿದೆ. 2020-21ರಲ್ಲಿ 2.12 ಕೋಟಿ ರು., (ಮಾ.ಶು), 76.85 ಲಕ್ಷ (ಬ.ಶು), 2021-22ರಲ್ಲಿ 25.49 ಲಕ್ಷ (ಮಾ.ಶು), 61.81 ಲಕ್ಷ (ಬ.ಶು) ವಸೂಲಾಗಿದೆ. ಚಿಕ್ಕಮಗಳೂರು ಎಪಿಎಂಸಿಯಲ್ಲಿ 2019-20ರಲ್ಲಿ 2.85 ಕೋಟಿ ರು., 33.65 ಲಕ್ಷ ರು. ಬಳಕೆದಾರರ ಶುಲ್ಕದ ರೂಪದಲ್ಲಿ ವಸೂಲಾಗಿದೆ. 2020-21ರಲ್ಲಿ 75.24 ಲಕ್ಷ ರು. (ಮಾ.ಶು), 28.87 ಲಕ್ಷ (ಬ.ಶು), 2021-22ರಲ್ಲಿ 4.44 ಲಕ್ಷ (ಮಾ.ಶು), 17.76 ಲಕ್ಷ (ಬ.ಶು) ಸಂಗ್ರಹವಾಗಿದೆ.

 

 

ಬೆಳಗಾವಿ ಎಪಿಎಂಸಿಯಲ್ಲಿ 2019-20ರಲ್ಲಿ ಮಾರುಕಟ್ಟೆ ಶುಲ್ಕವೆಂದು 3.83 ಕೋಟಿ ರು., 3.47 ಕೋಟಿ ರು., ಬಳಕೆದಾರರ ಶುಲ್ಕದ ರೂಪದಲ್ಲಿ ಸಂಗ್ರಹವಾಗಿದೆ. 2020-21ರಲ್ಲಿ 1.33 ಕೋಟಿ (ಮಾ.ಶು), 1.63 ಕೋಟಿ ರು., (ಬ.ಶು), 2021-22ರಲ್ಲಿ 1.10 ಕೋಟಿ (ಮಾ.ಶು), 2.46 ಕೋಟಿ ರು. (ಬ.ಶು) ವಸೂಲಾಗಿದೆ.

 

ಕಲ್ಬುರ್ಗಿಯ ಎಪಿಎಂಸಿಯಲ್ಲಿ 2019-20ರಲ್ಲಿ ಮಾರುಕಟ್ಟೆ ಶುಲ್ಕವೆಂದು 8.57 ಕೋಟಿ ರು., 2020-21ರಲ್ಲಿ 5.94 ಕೋಟಿ ರು., (ಮಾ.ಶು) 10.85 ಲಕ್ಷ (ಬ.ಶು), 2021-22ರಲ್ಲಿ 3.10 ಕೋಟಿ ರು., (ಮಾ.ಶು), 15.47 ಲಕ್ಷ (ಬ.ಶು) ಸಂಗ್ರಹವಾಗಿದೆ. ಬಳ್ಳಾರಿ ಎಪಿಎಂಸಿಯಲ್ಲಿ 2019-20ರಲ್ಲಿ ಮಾರುಕಟ್ಟೆ ಶುಲ್ಕ 12.01 ಕೋಟಿ ರು., , 11.91 ಲಕ್ಷ ರು. ಬಳಕೆದಾರರ ಶುಲ್ಕವೆಂದು ಸಂಗ್ರಹವಾಗಿದೆ. 2020-21ರಲ್ಲಿ 5.25 ಕೋಟಿ (ಮಾ.ಶು), 7.75 ಲಕ್ಷ (ಬ.ಶು), 2021-22ರಲ್ಲಿ 1.66 ಕೋಟಿ ರು., (ಮಾ.ಶು), 11.27 ಲಕ್ಷ (ಬ.ಶು) ವಸೂಲಾಗಿದೆ. ರಾಯಚೂರು ಎಪಿಎಂಸಿಯಲ್ಲಿ 2019-20ರಲ್ಲಿ ಮಾರುಕಟ್ಟೆ ಶುಲ್ಕವೆಂದು 18.19 ಕೋಟಿ ರು., 2020-21ರಲ್ಲಿ 6.50 ಕೋಟಿ ರು., ಬಳಕೆದಾರರ ಶುಲ್ಕವೆಂದು 7.88 ಲಕ್ಷ ರು., 2021-22ರಲ್ಲಿ 2.66 ಕೋಟಿ (ಮಾ.ಶು), 6.47 ಲಕ್ಷ (ಬ.ಶು) ವಸೂಲಾಗಿದೆ.

 

ಮಂಗಳೂರು ಎಪಿಎಂಸಿಯಲ್ಲಿ 2019-20ರಲ್ಲಿ 12.11 ಕೋಟಿ ರು. ಮಾರುಕಟ್ಟೆ ಶುಲ್ಕ ಸಂಗ್ರಹವಾಗಿದ್ದರೆ ಈ ಅವಧಿಯಲ್ಲಿ ಬಳಕೆದಾರರ ಶುಲ್ಕ ಶೂನ್ಯವೆಂದು ತೋರಿಸಲಾಗಿದೆ. 2020-21ರಲ್ಲಿ ಮಾರುಕಟ್ಟೆ ಶುಲ್ಕವೆಂದು 5.38 ಕೋಟಿ ವಸೂಲಾಗಿದ್ದರೆ ಈ ಅವಧಿಯಲ್ಲಿಯೂ ಬಳಕೆದಾರರ ಶುಲ್ಕ ಶೂನ್ಯವೆಂದು ಹೇಳಲಾಗಿದೆ. ಅದೇ ರೀತಿ 2021-22ರ ಜನವರಿ ಅಂತ್ಯಕ್ಕೆ 3. 32 ಕೋಟಿ ರು., ಮಾರುಕಟ್ಟೆ ಶುಲ್ಕ ಮತ್ತು 27.73 ಲಕ್ಷ ರು. ಬಳಕೆದಾರರ ಶುಲ್ಕ ವಸೂಲಾಗಿದೆ.

 

ಸುಳ್ಯದಲ್ಲಿ 2019-20ರಲ್ಲಿ 296.15 ಲಕ್ಷ ಮಾರುಕಟ್ಟೆ ಶುಲ್ಕ ಸಂಗ್ರಹವಾಗಿದ್ದರೆ 2020-21ರಲ್ಲಿ 2.64 ಕೋಟಿ ರು., 2021-22ರಲ್ಲಿ 49.28 ಲಕ್ಷ ರು. ಸಂಗ್ರಹಿಸಲಾಗಿದೆ. ಈ ಮೂರು ವರ್ಷಗಳಲ್ಲಿ ಬಳಕೆದಾರರ ಶುಲ್ಕ ಶೂನ್ಯವೆಂದು ವರದಿ ಮಾಡಿದೆ. ಅದೇ ರೀತಿ ಬಂಟ್ವಾಳದಲ್ಲಿ 2019-20ರಲ್ಲಿ ಮಾರುಕಟ್ಟೆ ಶುಲ್ಕದ ರೂಪದಲ್ಲಿ 4.22 ಕೋಟಿ ರು., 2020-21ರಲ್ಲಿ 3.52 ಕೋಟಿ ರು., 2021-22ರಲ್ಲಿ 1.94 ಕೋಟಿ ರು ವಸೂಲಾಗಿದೆ. ಈ ಅವಧಿಯಲ್ಲಿ ಬಳಕೆದಾರರ ಶುಲ್ಕ ಶೂನ್ಯವೆಂದು ಹೇಳಿದೆ.

 

ಬೆಳ್ತಂಗಡಿಯಲ್ಲಿ 2019-20ರಲ್ಲಿ ಮಾರುಕಟ್ಟೆ ಶುಲ್ಕ 2.84 ಕೋಟಿ ರು., 2020-21ರಲ್ಲಿ 2.19 ಕೋಟಿ ರು., ರು., 2021-22ರಲ್ಲಿ 72.02 ಲಕ್ಷ ರು., ಉಡುಪಿಯಲ್ಲಿ 2019-20ರಲ್ಲಿ 2.16. ಕೋಟಿ ರು., ಬಳಕೆದಾರರ ಶುಲ್ಕ 16.95 ಲಕ್ಷ ರು., 2020-21ರಲ್ಲಿ ಮಾರುಕಟ್ಟೆ ಶುಲ್ಕ 41.92 ಲಕ್ಷ ರು., ಬಳಕೆದಾರರ ಶುಲ್ಕ 26.99 ಲಕ್ಷ ರು., 2021-22ರಲ್ಲಿ 1.08 ಲಕ್ಷ, ಬಳಕೆದಾರರ ಶುಲ್ಕ 36.52 ಲಕ್ಷ ರು. ವಸೂಲಾಗಿದೆ.

 

ಕಾರ್ಕಳದಲ್ಲಿ 2019-20ರಲ್ಲಿ 4.83 ಕೋಟಿ ರು., 2020-21ರಲ್ಲಿ 1.20 ಕೋಟಿ ರು., , 2021-22ರಲ್ಲಿ 29.34 ಲಕ್ಷ ರು. ಮಾರುಕಟ್ಟೆ ಶುಲ್ಕ ವಸೂಲಾಗಿದೆ. ಈ ಮೂರೂ ವರ್ಷದಲ್ಲಿ ಬಳಕೆದಾರರ ಶುಲ್ಕ ಶೂನ್ಯವೆಂದು ವರದಿ ಮಾಡಿದೆ. ಕುಂದಾಪುರದಲ್ಲಿ 2019-20ರಲ್ಲಿ ಮಾರುಕಟ್ಟೆ ಶುಲ್ಕವೆಂದು 2.70 ಕೋಟಿ ರು., ಬಳಕೆದಾರರ ಶುಲ್ಕವೆಂದು 10.93 ಲಕ್ಷ ರು., 2020-21ರಲ್ಲಿ ಮಾರುಕಟ್ಟೆ ಶುಲ್ಕ 80.48 ಲಕ್ಷ, ಬಳಕೆದಾರರ ಶುಲ್ಕವೆಂದು 4.62 ಲಕ್ಷ, 2021-22ರಲ್ಲಿ 40.06 ಲಕ್ಷ ರು. ಮಾರುಕಟ್ಟೆ ಶುಲ್ಕ, ಬಳಕೆದಾರರ ಶುಲ್ಕ 3.58 ಲಕ್ಷ ರು. ವಸೂಲಾಗಿದೆ.

 

ಎಪಿಎಂಸಿಗಳ ವಿಶೇಷ ಯೋಜನೆಗಳಿಗೆ ಆರ್ಥಿಕ ನೆರವು ಸೇರಿದಂತೆ ಹಾಲಿ ಕಾರ್ಯಕ್ರಮಗಳು ಮತ್ತು ಮುಂದುವರೆಸುವ ಯೋಜನೆಗಳಿಗೆ ಸಹಕಾರ ಸಂಘಗಳ ನಿಬಂಧಕರ ಕಚೇರಿಯು ಒಟ್ಟು 2022-23ನೇ ಸಾಲಿನ ಆಯವ್ಯಯದಲ್ಲಿ 2,830.50 ಕೋಟಿ ರು. ಅಂದಾಜನ್ನು ಪ್ರಸ್ತಾಪಿಸಿದೆ. ಅದೇ ರೀತಿ ಹೊಸ ಯೋಜನೆಗಳಿಗೆ 1,058 ಕೋಟಿ ರು. ಪ್ರಸ್ತಾಪಿಸಿರುವುದನ್ನು ಸ್ಮರಿಸಬಹುದು.

 

‘ಪ್ರಸ್ತುತ ಮಾರುಕಟ್ಟೆ ಸಮಿತಿಗಳ ಆದಾಯವು ಗಣನೀಯವಾಗಿ ಕಡಿಮೆ ಆಗಿರುವುರಿಂದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕಷ್ಟಸಾಧ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ 2022-23ನೇ ಸಾಲಿಗೆ 10.00 ಕೋಟಿ ರು. ಆಯವ್ಯಯಕ್ಕೆ ಬೇಡಿಕೆ ಸಲ್ಲಿಸಿದೆ,’ ಎಂದು ಪ್ರಸ್ತಾವನೆಯಲ್ಲಿ ವಿವರಿಸಿದೆ.

 

ಅದೇ ರೀತಿ ಎಪಿಎಂಸಿಗಳ ವಿಶೇಷ ಯೋಜನೆಗಳಿಗೆ ಆರ್ಥಿಕ ನೆರವಿಗೆ ಕೋರಿರುವ ಸಹಕಾರ ಇಲಾಖೆಯು ನಿರ್ಮಾಣ ಉಪ ಯೋಜನೆಗಳಿಗೆ 300.00 ಕೋಟಿ ರು., ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ 157.31 ಕೋಟಿ, ಗಿರಿಜನ ಉಪ ಯೋಜನೆಯಡಿಯಲ್ಲಿ 42.32 ಕೋಟಿ ರು. ಆಯವ್ಯಯಕ್ಕೆ ಬೇಡಿಕೆ ಸಲ್ಲಿಸಿರುವುದು ಪಟ್ಟಿಯಿಂದ ಗೊತ್ತಾಗಿದೆ.

 

2021-22ನೇ ಸಾಲಿನಲ್ಲಿ ವಿಶೇಷ ಅಭಿವೃದ್ದಿ ಯೋಜನೆ, ನಿರ್ಮಾಣ ಉಪ ಯೋಜನೆ, ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ಉಪ ಯೋಜನೆಗಳಿಗೆ ಆಯವ್ಯಯದಲ್ಲಿ ಹಂಚಿಕೆ ಮಾಡಿರಲಿಲ್ಲ. ಹೀಗಾಗಿ 2022-23ನೇ ಸಾಲಿಗೆ ಎಪಿಎಂಸಿಗಳ ವಿಶೇಷ ಯೋಜನೆಗಳಿಗೆ ಒಟ್ಟಾರೆ 509.63 ಕೋಟಿ ರು. ಬೇಡಿಕೆ ಸಲ್ಲಿಸಿದೆ.

the fil favicon

SUPPORT THE FILE

Latest News

Related Posts