Sunday | March 29, 2026 |

ಭೂ ಕಬಳಿಕೆ ಪ್ರಕರಣಗಳಿಗೆ ಸಿಗದ ತಾರ್ಕಿಕ ಅಂತ್ಯ; ಸರ್ಕಾರ ನೀಡಿದ್ದ ಭರವಸೆಗಳನ್ನೇ ಮುಕ್ತಾಯಗೊಳಿಸಿದ ಸಮಿತಿ

Support THE-FILE

spot_img

ಬೆಂಗಳೂರು; ಬೆಂಗಳೂರು ನಗರ ಜಿಲ್ಲೆ, ರಾಮನಗರ, ಹೊಸಕೋಟೆ ಮತ್ತು ಹೊರಭಾಗಗಳಲ್ಲಿ ಸಾವಿರಾರು ಕೋಟಿ ರು. ಬೆಲೆ ಬಾಳುವ ಕಂದಾಯ ಭೂಮಿ ಕಬಳಿಕೆ ಮಾಡಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯು ಇನ್ನೂ ತಾರ್ಕಿಕ ಅಂತ್ಯಕ್ಕೆ ತಲುಪಿಲ್ಲ. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು 21 ವರ್ಷಗಳ ಹಿಂದೆ ಸರ್ಕಾರವು ನೀಡಿದ್ದ ಭರವಸೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ಆದರೂ ವಿಧಾನಮಂಡಲದ ಸರ್ಕಾರಿ ಭರವಸೆಗಳ ಸಮಿತಿಯು ಈ ಎಲ್ಲಾ ಭರವಸೆಗಳನ್ನು ಮುಕ್ತಾಯಗೊಳಿಸಿದೆ.

 

ಕಂದಾಯ ಭೂಮಿ ಕಬಳಿಕೆ ಪ್ರಕರಣಗಳ ಸಂಬಂಧ ವಿ ಸೋಮಣ್ಣ, ಆರಗ ಜ್ಞಾನೇಂದ್ರ, ಎಂ ಟಿ ಬಿ ನಾಗರಾಜ್‌ ಮತ್ತು ಆರ್‌ ರೋಶನ್‌ ಬೇಗ್‌ ಅವರು 21 ವರ್ಷಗಳ ಹಿಂದೆ (1998, 2002, 2003 ಮತ್ತು 2005ರಲ್ಲಿ ) ಕೇಳಿದ್ದ ಚುಕ್ಕೆ ರಹಿತ ಪ್ರಶ್ನೆಗಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು.

 

ಈ ಕುರಿತು ಸರ್ಕಾರಿ ಭರವಸೆಗಳ ಸಮಿತಿಯು ಅಂದಿನಿಂದಲೂ ಕಾಯ್ದಿರಿಸುತ್ತಿತ್ತು. ಆದರೀಗ ಈ ಎಲ್ಲಾ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ನೀಡಿರುವ ಲಿಖಿತ ಮತ್ತು ಮೌಖಿಕ ಹೇಳಿಕೆಯನ್ನು ಆಧರಿಸಿ ಉಡುಪಿ ಶಾಸಕ ಕೆ ರಘುಪತಿ ಭಟ್‌ ಅಧ್ಯಕ್ಷತೆಯಲ್ಲಿರುವ ಸರ್ಕಾರಿ ಭರವಸೆಗಳ ಸಮಿತಿಯು ಈ ಎಲ್ಲಾ ಭರವಸೆಗಳನ್ನೂ ಮುಕ್ತಾಯಗೊಳಿಸಿದೆ. ಈ ಕುರಿತು 2022ರ ಮಾರ್ಚ್‌ 21ರಂದು ನಡೆದ ಅಧಿವೇಶನದಲ್ಲಿ ಸರ್ಕಾರಿ ಭರವಸೆಗಳ ಸಮಿತಿಯ ಹನ್ನೆರಡನೇ ವರದಿಯನ್ನು ಮಂಡಿಸಿದೆ. ಈ ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಆದರೆ ವಾಸ್ತವದಲ್ಲಿ ಕಂದಾಯ ಭೂಮಿ ಕಬಳಿಕೆ ಪ್ರಕರಣಗಳ ಕುರಿತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನೇನೂ ಕೈಗೊಂಡಿಲ್ಲ. ಅಲ್ಲದೆ ಕಬಳಿಕೆ ಅಗಿರುವ ಭೂಮಿಯನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರದ ವಶಕ್ಕೆ ಪಡೆದಿಲ್ಲ. ಆದರೂ ಅಧಿಕಾರಿಗಳು ನೀಡಿದ್ದ ಲಿಖಿತ ವಿವರಣೆಯನ್ನೇ ಆಧಾರವಾಗಿಟ್ಟುಕೊಂಡು ಎಲ್ಲಾ ಭರವಸೆಗಳನ್ನೂ ಮುಕ್ತಾಯಗೊಳಿಸಿರುವುದು ಅಚ್ಚರಿ ಮೂಡಿಸಿದೆ.

 

ಬೆಂಗಳೂರು ನಗರದ ಸುತ್ತಮುತ್ತ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಜಮೀನನ್ನು ಅನಧಿಕೃತವಾಗಿ ಕಬಳಿಸಲಾಗಿತ್ತು. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ ಇದ್ದ 1,22,918 ಎಕರೆ ಸರ್ಕಾರಿ ಜಮೀನಿನ ಪೈಕಿ 33, 877 ಎಕರೆ ಜಮೀನು ಒತ್ತುವರಿಯಾಗಿತ್ತು. ಈ ಕುರಿತು ಎ ಟಿ ರಾಮಸ್ವಾಮಿ ಅಧ್ಯಕ್ಷತೆಯ ಜಂಟಿ ಸದನ ಸಮಿತಿ ವರದಿ ನೀಡಿತ್ತು.

 

ಸರ್ಕಾರಿ ಭರವಸೆಗಳ ಸಮಿತಿ ನೀಡಿರುವ ವರದಿ ಪ್ರತಿ

 

ವರದಿ ನೀಡಿದ ನಂತರ ಒತ್ತುವರಿ ತೆರವುಗೊಳಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದ ಸರ್ಕಾರವು 2021ರ ಜೂನ್‌ ಅಂತ್ಯಕ್ಕೆ 16, 193.25 ಎಕರೆ ಜಮೀನನಷ್ಟೇ ಒತ್ತುವರಿಯಿಂದ ತೆರವುಗೊಳಿಸಿದೆ. ಇನ್ನೂ 17, 684 ಎಕರೆಯನ್ನು ಒತ್ತುವರಿಯಿಂದ ತೆರವುಗೊಳಿಸಲು ಬಾಕಿ ಇದೆ ಎಂಬುದು ಭರವಸೆ ಸಮಿತಿಯು ನೀಡಿರುವ 12ನೇ ವರದಿಯಿಂದ ತಿಳಿದು ಬಂದಿದೆ.

 

ಸರ್ಕಾರಿ ಜಮೀನುಗಳ ತೆರವಿಗಾಗಿ ರಾಜ್ಯ ಸರ್ಕಾರವು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ರಚಿಸಿದೆ. ಭೂ ಒತ್ತುವರಿಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಲನ್ನು ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆಯೇ ವಿನಃ ಭೂ ಕಬಳಿಕೆ ಅವಧಿಯಲ್ಲಿ ಕರ್ತವ್ಯಲೋಪವೆಸಗಿದ್ದ ಐಎಎಸ್‌, ಕೆಎಎಸ್‌ ಸೇರಿದಂತೆ ಇನ್ನಿತರೆ ವೃಂದದ ಅಧಿಕಾರಿಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಹೀಗಾಗಿ ಭರವಸೆ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೂ ಶಾಸಕ ಕೆ ರಘುಪತಿ ಭಟ್‌ ಅಧ್ಯಕ್ಷತೆಯ ಸರ್ಕಾರಿ ಭರವಸೆಗಳ ಸಮಿತಿಯು ಹಿಂದಿನ ಭರವಸೆಗಳನ್ನು ಮುಕ್ತಾಯಗೊಳಿಸಿದೆ.

 

‘ಖಾಸಗಿ ಬಡಾವಣೆ ಮಾಡಲು ಭೂ ಒತ್ತುವರಿಯಾಗಿರುವುದು ಅಥವಾ ಅನಧಿಕೃತ ಮಳಿಗೆ ತೆರೆಯಲಾಗಿದ್ದರೆ ಅಂತಹವುಗಳನ್ನು ನಿರ್ದಾಕ್ಷ್ಯಿಣ್ಯವಾಗಿ ತೆರವು ಮಾಡಲಾಗುವುದು. ಶೇ. 50ರಷ್ಟು ಅಕ್ರಮ ಭೂ ಒತ್ತುವರಿ ತೆರವು ಮಾಡಲಾಗಿದೆಯೆಂದು ಇಲಾಖಾಧಿಕಾರಿಗಳು ಸಮಿತಿಗೆ ಲಿಖಿತ ಮತ್ತು ಮೌಖಿಕವಾಗಿ ತಿಳಿಸಿದ್ದನ್ನು ಸಮಿತಿಯು ಚರ್ಚಿಸಿದೆ. ಬಾಕಿ ಇರುವ ಅಕ್ರಮ ಭೂ ಒತ್ತುವರಿಯನ್ನು ಕಾಲಮಿತಿಯೊಳಗೆ ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿ ಈ ಎಲ್ಲಾ ಭರವಸೆಗಳನ್ನು 2021ರ ಸೆ.9ರ 2ರಂದು ಮುಕ್ತಾಯಗೊಳಿಸಿತು,’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಮೂಲ ದಾಖಲೆಗಳಿಲ್ಲದೆಯೇ ಜೆರಾಕ್ಸ್‌ ಪ್ರತಿ ಆಧಾರದ ಮೇಲೆ ಹಕ್ಕು ದಾಖಲೆ ಮಾಡಿದ್ದ ಪ್ರಕರಣಗಳನ್ನು ಹೊರಗೆಳೆದಿದ್ದ ಆರ್‌ ಅಶೋಕ್‌, ನಕಲಿ ದಾಖಲೆಗಳ ಆಧರಿಸಿಯೇ  ಜಾಲ ಹೋಬಳಿಯ 15 ಎಕರೆ ಜಮೀನು ಪರಭಾರೆ ಆಗಿದ್ದನ್ನು ಬಯಲು ಮಾಡಿದ್ದರು.

 

ರಾಮನಗರ ತಾಲೂಕು ಬಿಡದಿ ಹೋಬಳಿಯಲ್ಲಿ ಖಾಸಗಿ ಸಂಸ್ಥೆಗಳು ಸರ್ಕಾರಕ್ಕೆ ಮೋಸ ಮಾಡಿ 28 ಎಕರೆ 34 ಗುಂಟೆ ವಿಸ್ತೀರ್ಣದ ಜಮೀನು ವಶಪಡಿಸಿಕೊಂಡಿದ್ದ ಪ್ರಕರಣಗಳ ಬಗ್ಗೆ ಮತ್ತೊಬ್ಬ ಹಾಲಿ ಸಚಿವ ಜಗದೀಶ್‌ ಶೆಟ್ಟರ್‌ ಅವರು 2003ರ ಆಗಸ್ಟ್‌ 4ರಂದು ಚುಕ್ಕೆ ರಹಿತ ಪ್ರಶ್ನೆ(ಸಂಖ್ಯೆ5227)ಯನ್ನು ಸದನದಲ್ಲಿ ಮಂಡಿಸಿದ್ದರು.

 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ, ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು 2014ರ ಜನವರಿ 1ರಂದು ಆದೇಶಿಸಿತ್ತು. ಆದರೆ ಅಧಿಕಾರಿಗಳು ಭೌತಿಕವಾಗಿ ವಶಕ್ಕೆ ಪಡೆಯದೆಯೇ ದಾಖಲೆಗಳಲ್ಲಿ ಮಾತ್ರ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ನಮೂದಿಸಿದ್ದರು.

 

ಅದೇ ರೀತಿ ವಿ ಸೋಮಣ್ಣ, ಆರ್‌ ಅಶೋಕ್‌ ಮತ್ತು ಅರಗ ಜ್ಞಾನೇಂದ್ರ ಜಂಟಿಯಾಗಿ ಬೆಂಗಳೂರು ನಗರದ ಸುತ್ತಮುತ್ತ ಭೂ ಕಬಳಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ 2005ರ ಜುಲೈ 4ರಂದು ಚುಕ್ಕೆ ರಹಿತ ಪ್ರಶ್ನೆಯನ್ನು ( ಸಂಖ್ಯೆ 4001-4003-4223-4313) ಸದನದಲ್ಲಿ ಮಂಡಿಸಿದ್ದರು. ಬೆಂಗಳೂರು ನಗರ ಸುತ್ತಮುತ್ತ ನಡೆದಿರುವ ಭೂ ಕಬಳಿಕೆಯಲ್ಲಿ ಶಾಮೀಲಾದ ಸುಮಾರು 79 ಅಧಿಕಾರಿಗಳ ವಿರುದ್ಧ  ಇಲಾಖೆ ವಿಚಾರಣೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಸದನದಲ್ಲಿ ಆರೋಪಿಸಿದ್ದರು.

Hot this week

ಮನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ, ಹಣಕ್ಕೆ ಬೇಡಿಕೆ; ಪಾಟೀಲರ ಆರೋಪ, ಲೋಕಾ ತನಿಖೆಯಿಂದ ಸಾಬೀತು

ಬೆಂಗಳೂರು; ರಾಜೀವ್‌ ಗಾಂಧಿ ವಸತಿ ನಿಗಮದ ವ್ಯಾಪ್ತಿಯಲ್ಲಿ ಹಣ ಕೊಟ್ಟರಷ್ಟೇ ಮನೆಗಳನ್ನು ...

ಕದಂಬೋತ್ಸವ ಸೇರಿ ಸಾಂಸ್ಕೃತಿಕ ಉತ್ಸವಗಳಿಗೆ ಅನುದಾನ; 12.50 ಕೋಟಿ ರು ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಮೈಸೂರು ದಸರಾ ಸೇರಿದಂತೆ ಇನ್ನಿತರೆ ಜಿಲ್ಲಾಮಟ್ಟದ ವಿವಿಧ ಉತ್ಸವಗಳಿಗೆ 2024-25ಮತ್ತು...

ಪ್ರಚೋದನಕಾರಿ ಭಾಷಣ, ಕೋಮು ಗಲಭೆ; 3 ವರ್ಷದಲ್ಲಿ 50 ಪ್ರಕರಣಗಳು ದಾಖಲು, ಪಟ್ಟಿ ಬಹಿರಂಗ

ಬೆಂಗಳೂರು; ರಾಜ್ಯದ  ಕರಾವಳಿ ಭಾಗ ಸೇರಿದಂತೆ ವಿವಿಧೆಡೆ ಪ್ರಚೋದನಾಕಾರಿ ಭಾಷಣ ಮಾಡಿದವರು...

ನರೇಗಾ ವಸತಿ ಕಾಮಗಾರಿಗಳಲ್ಲಿ ಮೋಸದ ಪಾವತಿ; ಚೆಕ್ ಡ್ಯಾಂ ಕಾಮಗಾರಿಯೇ ಇಲ್ಲ, ಆದರೂ ಹಣ ಪಾವತಿ

ಬೆಂಗಳೂರು; 847 ಸಂಖ್ಯೆ ವಸತಿ  ಕಾಮಗಾರಿಗಳಲ್ಲಿ  ಮೋಸದ ಪಾವತಿಗಳಾಗಿರುವುದನ್ನು ಭಾರತದ ಲೆಕ್ಕ...

42,750 ಕೋಟಿ ದೀರ್ಘಾವಧಿ ಸಾಲ, 4,516 ಕೋಟಿ ಆದಾಯ ಕೊರತೆ; ಎಸ್ಕಾಂಗಳ ಆರ್ಥಿಕ ಸ್ಥಿತಿ ಅನಾವರಣ

ಬೆಂಗಳೂರು; ವಿದ್ಯುತ್ ಸರಬರಾಜು ಕಂಪನಿಗಳು ಇದುವರೆಗೆ ಒಟ್ಟಾರೆ 42,750 ಕೋಟಿಗಳಷ್ಟು ದೀರ್ಘಾವಧಿ...

Topics

ಮನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ, ಹಣಕ್ಕೆ ಬೇಡಿಕೆ; ಪಾಟೀಲರ ಆರೋಪ, ಲೋಕಾ ತನಿಖೆಯಿಂದ ಸಾಬೀತು

ಬೆಂಗಳೂರು; ರಾಜೀವ್‌ ಗಾಂಧಿ ವಸತಿ ನಿಗಮದ ವ್ಯಾಪ್ತಿಯಲ್ಲಿ ಹಣ ಕೊಟ್ಟರಷ್ಟೇ ಮನೆಗಳನ್ನು ...

ಕದಂಬೋತ್ಸವ ಸೇರಿ ಸಾಂಸ್ಕೃತಿಕ ಉತ್ಸವಗಳಿಗೆ ಅನುದಾನ; 12.50 ಕೋಟಿ ರು ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಮೈಸೂರು ದಸರಾ ಸೇರಿದಂತೆ ಇನ್ನಿತರೆ ಜಿಲ್ಲಾಮಟ್ಟದ ವಿವಿಧ ಉತ್ಸವಗಳಿಗೆ 2024-25ಮತ್ತು...

ಪ್ರಚೋದನಕಾರಿ ಭಾಷಣ, ಕೋಮು ಗಲಭೆ; 3 ವರ್ಷದಲ್ಲಿ 50 ಪ್ರಕರಣಗಳು ದಾಖಲು, ಪಟ್ಟಿ ಬಹಿರಂಗ

ಬೆಂಗಳೂರು; ರಾಜ್ಯದ  ಕರಾವಳಿ ಭಾಗ ಸೇರಿದಂತೆ ವಿವಿಧೆಡೆ ಪ್ರಚೋದನಾಕಾರಿ ಭಾಷಣ ಮಾಡಿದವರು...

ನರೇಗಾ ವಸತಿ ಕಾಮಗಾರಿಗಳಲ್ಲಿ ಮೋಸದ ಪಾವತಿ; ಚೆಕ್ ಡ್ಯಾಂ ಕಾಮಗಾರಿಯೇ ಇಲ್ಲ, ಆದರೂ ಹಣ ಪಾವತಿ

ಬೆಂಗಳೂರು; 847 ಸಂಖ್ಯೆ ವಸತಿ  ಕಾಮಗಾರಿಗಳಲ್ಲಿ  ಮೋಸದ ಪಾವತಿಗಳಾಗಿರುವುದನ್ನು ಭಾರತದ ಲೆಕ್ಕ...

42,750 ಕೋಟಿ ದೀರ್ಘಾವಧಿ ಸಾಲ, 4,516 ಕೋಟಿ ಆದಾಯ ಕೊರತೆ; ಎಸ್ಕಾಂಗಳ ಆರ್ಥಿಕ ಸ್ಥಿತಿ ಅನಾವರಣ

ಬೆಂಗಳೂರು; ವಿದ್ಯುತ್ ಸರಬರಾಜು ಕಂಪನಿಗಳು ಇದುವರೆಗೆ ಒಟ್ಟಾರೆ 42,750 ಕೋಟಿಗಳಷ್ಟು ದೀರ್ಘಾವಧಿ...

ಹಿಂದುಳಿದ ವರ್ಗ ವಸತಿ ಶಾಲೆ ಕಟ್ಟಡಗಳು ಶಿಥಿಲ; ಕಟ್ಟಡಗಳ ದುರಸ್ತಿಗೂ ಅನುದಾನವಿಲ್ಲ, ‘ಕೈ’ ಎತ್ತಿದ ಸರ್ಕಾರ

ಬೆಂಗಳೂರು;  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ಶಾಲೆಗಳು ಶಿಥಿಲಗೊಂಡಿದ್ದರೂ...

ನರೇಗಾ ಕಾಮಗಾರಿಗಳ ಆರಂಭದ ದಿನಾಂಕವೂ ಇಲ್ಲ, ದತ್ತಾಂಶವೂ ಇಲ್ಲ; 1,007.83 ಕೋಟಿ ರು. ವೆಚ್ಚದ ಕಾಮಗಾರಿಗಳು ಅಪೂರ್ಣ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳ ಪೈಕಿ ಒಂದು ವ‍ರ್ಷಕ್ಕಿಂತಲೂ ಹೆಚ್ಚು...

ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಕುಟುಂಬ ಸದಸ್ಯರ ಉದ್ಯಮ, ಹಣಕಾಸಿನ ವ್ಯವಹಾರ; ಸದನಕ್ಕೆ ಒದಗಿಸಬಹುದೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಖಿಲ ಭಾರತ...

Related Articles

Popular Categories

error: Content is protected !!