Wednesday | March 25, 2026 |

ಕೋವಿಡ್‌ 3ನೇ ಅಲೆ; ಆಕ್ಸಿಜನ್‌ ಘಟಕ ಖರೀದಿಗೆ ಪಿಎಂ ಕೇರ್ಸ್‌ ಫಂಡ್‌ನಿಂದ ಅನುದಾನ ಕೋರದ ಸರ್ಕಾರ

Support THE-FILE

spot_img

ಬೆಂಗಳೂರು; ಕೋವಿಡ್‌ ಮೂರನೇ ಅಲೆ ಎದುರಿಸಲು 140 ಕೋಟಿ ರು. ಮೊತ್ತದಲ್ಲಿ ಆಕ್ಸಿಜನ್‌ ಜನರೇಟರ್‌ ಯುನಿಟ್‌ಗಳ ಖರೀದಿದಾಗಿ ಪಿಎಂ ಕೇರ್ಸ್‌ ಫಂಡ್‌ ಅಡಿಯಲ್ಲಿ ಅನುದಾನ ಕೋರದ ಆರೋಗ್ಯ ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯು ಆರ್ಥಿಕ ಇಲಾಖೆಯನ್ನು ಕೋರಿರುವುದು ಇದೀಗ ಬಹಿರಂಗವಾಗಿದೆ.

 

ಕೋವಿಡ್‌ ಮೂರನೇ ಅಲೆಯ ನಿರ್ವಹಣೆಗೆ ಪೂರ್ವ ಸಿದ್ಧತೆಗೆ ಮಾಡಿಕೊಳ್ಳುವ ಸಲುವಾಗಿ ಒಟ್ಟಾರೆ ಕೋರಿದ್ದ 1,595 ಕೋಟಿ ರು.ಗಳಿಗೆ ಪಟ್ಟಿ ತಯಾರಿಸಿ ಅನುಮೋದನೆಗೆ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿಯೇ ನರ್ಸಿಂಗ್‌, ಎಎಚ್‌ಎಸ್‌ ಮತ್ತು ಫಿಸಿಯೋತೆರಪಿ ಕಾಲೇಜುಗಳನ್ನು ತೆರೆಯಲು ಅನುಮತಿ ಕೋರಿದ್ದ ಸಂಗತಿಯು ಇದೀಗ ಹೊರಬಿದ್ದಿದೆ.

 

ಕೋವಿಡ್‌ ಮೂರನೇ ಅಲೆ ಪೂರ್ವ ಸಿದ್ಧತೆಗಾಗಿ ವೈದ್ಯಕೀಯ ಮತ್ತು ಆರೋಗ್ಯ, ಕುಟಂಬ ಕಲ್ಯಾಣ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆ ಮತ್ತು ಈ ಸಂಬಂಧ ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಆರ್ಥಿಕ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ. ಸಚಿವ ಸುಧಾಕರ್‌ ಅಧ್ಯಕ್ಷತೆಯಲ್ಲಿ ಹಲವು ಸುತ್ತಿನ ಸಭೆಗಳ ನಡೆದ ನಂತರ ಆರ್ಥಿಕ ಇಲಾಖೆಗೆ ಪ್ರಸ್ತಾವನೆ  ಸಲ್ಲಿಕೆಯಾಗಿತ್ತು.

 

ಅಕ್ಸಿಜನ್‌ ಜನರೇಟರ್‌ ಯುನಿಟ್‌ಗಳನ್ನು 140.00 ಕೋಟಿ ರು.ಗಳ ಅನುದಾನ ಕೋರಿಕೆ ಪೈಕಿ 100 ಕೋಟಿ ರು. ಅನುದಾನ ನೀಡಲು ಆರ್ಥಿಕ ಇಲಾಖೆಯು ಸಹಮತಿಸಿತ್ತಾದರೂ ಇವುಗಳನ್ನು ಪಿಎಂ ಕೇರ್ಸ್‌ , ಸಿಎಸ್‌ಆರ್‌ ಫಂಡ್‌ನ ಮೂಲಕ ಪಡೆದುಕೊಳ್ಳಬೇಕು ಎಂದು ಆರ್ಥಿಕ ಇಲಾಖೆಯ (ವೆಚ್ಚ-5) ಅಧೀನ ಕಾರ್ಯದರ್ಶಿ ರವಿಚಂದ್ರನ್‌ ಅವರು ಅಭಿಪ್ರಾಯಿಸಿದ್ದರು ಎಂಬುದು ಇಲಾಖೆಯ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಅರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯದ ಪ್ರತಿ

 

ನರ್ಸಿಂಗ್‌, ಎಎಚ್ಎಸ್‌ ಮತ್ತು ಫಿಸಿಯೋತೆರೆಪಿ ಕಾಲೇಜು ಸ್ಥಾಪನೆಗಾಗಿ ಇಲಾಖೆಯು ಒಟ್ಟು 31.00 ಕೋಟಿ ರು.ಗಳ ಅನುದಾನ ಕೋರಿಕೆಯೂ ಒಳಗೊಂಡಿತ್ತು. ಆದರೆ ಆರ್ಥಿಕ ಇಲಾಖೆಯು ಕೋವಿಡ್‌ 19ರ ಮೂರನೇ ಅಲೆಯ ತಯಾರಿಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಇದನ್ನು ತಳ್ಳಿ ಹಾಕಿತ್ತು.

 

ಮೈಕ್ರೋಮೈಸಿಸ್‌ ಉಪಕರಣಗಳನ್ನು ಈಗಾಗಲೇ 12.28 ಕೋಟಿ ಮೊತ್ತದಲ್ಲಿ ಖರೀದಿಸಿದ್ದರೂ ಇಲಾಖೆಯು ಮತ್ತೊಮ್ಮೆ 17.00 ಕೋಟಿ ರು. ಮೊತ್ತದ ಅನುದಾನ ಕೋರಿತ್ತು. ಆದರೂ ಆರ್ಥಿಕ ಇಲಾಖೆಯು ಪರಿಗಣಿಸಿರುವುದು ಆರ್‌ಟಿಐ ದಾಖಲೆಯಿಂದ ತಿಳಿದು ಬಂದಿದೆ.

 

19 ಜಿಲ್ಲಾಸ್ಪತ್ರೆ ಮತ್ತು 40 ತಾಲೂಕು ಆಸ್ಪತ್ರೆಗಳ ಕಟ್ಟಡ ಕಾಮಗಾರಿಗೆ 857 ಕೋಟಿ (ವೈದ್ಯಕೀಯ ಶಿಕ್ಷಣ ಇಲಾಖೆ 217.00 ಕೋಟಿ, ಆರೋಗ್ಯ ಇಲಾಖೆ 640 ಕೋಟಿ) , ಈ ಆಸ್ಪತ್ರೆಗಳಿಗೆ ಉಪಕರಣ ಖರೀದಿಗೆ 236.44 ಕೋಟಿ, ,ಮಾನವ ಸಂಪನ್ಮೂಲಕ್ಕಾಗಿ ಆರೋಗ್ಯ ಇಲಾಖೆಯು ಕೋರಿದ್ದ 300 ಕೋಟಿ ಅನುದಾನ ಪೈಕಿ 200 ಕೋಟಿ ರು.ಗಳ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ಆರಂಭದಲ್ಲಿ ಸಹಮತಿ ವ್ಯಕ್ತಪಡಿಸಿತ್ತಾದರೂ ಕಟ್ಟಡ ಕಾಮಗಾರಿ ದೀರ್ಘಾವಧಿ ಯೋಜನೆಯಾಗಿದ್ದರಿಂದ ಒಟ್ಟು 857 ಕೋಟಿ ರು. ಕೋರಿಕೆ ಪ್ರಸ್ತಾಪವನ್ನು ಪರಿಗಣಿಸಿಲ್ಲ.

 

ಹಾಗೆಯೇ ಬಜೆಟ್‌ನಲ್ಲಿ ಒದಗಿಸಿದ್ದ ಅನುದಾನವನ್ನು ಮಾನವ ಸಂಪನ್ಮೂಲ ಮತ್ತು ಇತರೆ ಬಾಬ್ತುಗಳಿಗೆ ಖರ್ಚು ಮಾಡಲು ಸೂಚಿಸಿತ್ತಲ್ಲದೆ ವಾಸ್ತವ ವೆಚ್ಚಗಳಿಗೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಬಹುದು ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯಿಸಿತ್ತು.

 

ಅದೇ ರೀತಿ ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಎಲ್ಲಾ ವೈದ್ಯಕೀಯ ಕಾಲೇಜುಗಳ ಹಾಸಿಗೆ ಸಾಮರ್ಥ್ಯದ ಪಿಐಸಿಯು, ಎನ್‌ಐಸಿಯು, ಎಚ್‌ಡಿಯು, ಮಾನವ ಸಂಪನ್ಮೂಲ, ವೈದ್ಯಕೀಯ ಉಪಕರಣ, ಪರಿಕರ ಮತ್ತು ಕಾಮಗಾರಿಗೆ ಇಲಾಖೆಯು 1,594.57 ಕೋಟಿ ರು. ಅನುದಾನ ಕೋರಿಕೆ ಪೈಕಿ ಆರ್ಥಿಕ ಇಲಾಖೆಯು 422.71 ಕೋಟಿ ರು.ಬಿಡುಗಡೆಗೆ ಸಹಮತಿಸಿತ್ತು.

 

ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ 1,280 ಹಾಸಿಗೆಗಳಿಗೆ ಪಿಐಸಿಯು, ಎನ್‌ಐಸಿಯು, ಎಚ್‌ಡಿಯು ಅಳವಡಿಸುವ ಸಲುವಾಗಿ 197.18 ಕೋಟಿ ರು., ವೈದ್ಯಕೀಯ ಕಾಲೇಜುಗಳಲ್ಲಿ ಪರೀಕ್ಷೆಗಳನ್ನು ಬಲವರ್ಧನೆಗೊಳಿಸಲು ಉಪಕರಣ ಖರೀದಿಸಲು 228.46 ಕೋಟಿ ರು. ಪೈಕಿ 153.31 ಕೋಟಿ ರು. ಬಿಡುಗಡೆಗೆ ಒಪ್ಪಿಗೆ ದೊರೆತಿತ್ತು.

 

ಹಾಗೆಯೇ ಆಕ್ಸಿಜನ್‌ ಬೆಡ್‌ಗಳಿಗಾಗಿ 2.50 ಕೋಟಿ, ಮಾನವ ಸಂಪನ್ಮೂಲಕ್ಕಾಗಿ 76.37 ಕೋಟಿ, ತಾತ್ಕಾಲಿಕವಾಗಿ ಸ್ಟೆಬಲೇಷನ್‌ ಘಟಕ ನಿರ್ಮಾಣಕ್ಕೆ 18 ಕೋಟಿ, ವೈದ್ಯಕೀಯ ಕಾಲೇಜು, ಸಂಸ್ಥೆಗಳ ತರಬೇತಿ ವೆಚ್ಚಕ್ಕೆ 1.30 ಕೋಟಿ, ಮೈಕ್ರೋಮೈಸಿಸ್‌ ಉಪಕರಣ ಖರೀದಿಗೆ 17.09 ಕೋಟಿ, ಪಿಪಿಇ ಕಿಟ್‌, ಎನ್‌ 95 ಮಾಸ್ಕ್‌ ಇತ್ಯಾದಿ ಉಪಕರಣಗಳ ಖರೀದಿಗೆ 571.77 ಕೋಟಿ, ಕಟ್ಟಡ ಕಾಮಗಾರಿಗೆ 5.40 ಕೋಟಿ, ನರ್ಸಿಂಗ್‌, ಎಎಚ್‌ಎಸ್‌ ಮತ್ತ ಫಿಜಿಯೋತೆರಪಿ ಕಾಲೇಜುಗಳ ಸ್ಥಾಪನೆಗೆ 31.00 ಕೋಟಿ, ಎಸ್‌ಎಬಿವಿ ವೈದ್ಯಕೀಯ ಕಾಲೇಜನ್ನು ಮೇಲ್ದರ್ಜೆಗೇರಿಸಲು 315.00 ಕೋಟಿ, ಕಾರವಾರದಲ್ಲಿ ಸೂಪರ್‌ ಸ್ಪೆಷಾಲಿಟಿ ಯುನಿಟ್‌ ಸ್ಥಾಪಿಸಲು 130 ಕೋಟಿ ಸೇರಿದಂತೆ ಒಟ್ಟು 1,594.57 ಕೋಟಿ ರು.ಗಳ ಅನುದಾನಕ್ಕೆ ಕೋರಿಕೆ ಸಲ್ಲಿಸಿತ್ತು.

 

 

ಈ ಪೈಕಿ ಆರ್ಥಿಕ ಇಲಾಖೆಯು 422.71 ಕೋಟಿ ರು., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 1,176.71 ಕೋಟಿ ಸೇರಿದಂತೆ ಒಟ್ಟಾರೆ 1,599.42 ಕೋಟಿ ರು. ಬಿಡುಗಡೆಗೆ ಕೋರಿಕೆ ಸಲ್ಲಿಸಿತ್ತು ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ.

Hot this week

ನರೇಗಾ ಕಾಮಗಾರಿಗಳ ಆರಂಭದ ದಿನಾಂಕವೂ ಇಲ್ಲ, ದತ್ತಾಂಶವೂ ಇಲ್ಲ; 1,007.83 ಕೋಟಿ ರು. ವೆಚ್ಚದ ಕಾಮಗಾರಿಗಳು ಅಪೂರ್ಣ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳ ಪೈಕಿ ಒಂದು ವ‍ರ್ಷಕ್ಕಿಂತಲೂ ಹೆಚ್ಚು...

ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಕುಟುಂಬ ಸದಸ್ಯರ ಉದ್ಯಮ, ಹಣಕಾಸಿನ ವ್ಯವಹಾರ; ಸದನಕ್ಕೆ ಒದಗಿಸಬಹುದೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಖಿಲ ಭಾರತ...

ನರೇಗಾ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಿಯಮ ಉಲ್ಲಂಘನೆ; 86.67 ಕೋಟಿ ರು ಅಕ್ರಮ ಪತ್ತೆ ಹಚ್ಚಿದ ಸಿಎಜಿ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಮಾನವ ಸಂಪನ್ಮೂಲ ಬಳಕೆಗಾಗಿ ಮಾಡಿಕೊಂಡಿದ್ದ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಡೆದಿದ್ದ...

ಮೋಸದ ವಹಿವಾಟು, ಹೆಚ್ಚಿನ ಪಾವತಿ, ಅಕ್ರಮ ವೆಚ್ಚ; ನರೇಗಾದ ಮತ್ತೊಂದು ಮುಖ ಬಯಲು ಮಾಡಿದ ಸಿಎಜಿ

ಬೆಂಗಳೂರು; ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡಿದ್ದ ಕಾಮಗಾರಿಗಳು...

ಗೃಹಜ್ಯೋತಿ; 23,823.06 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ, ಎಸ್ಕಾಂಗಳಿಗೆ 631.75 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಳಿಸಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರವು...

Topics

ನರೇಗಾ ಕಾಮಗಾರಿಗಳ ಆರಂಭದ ದಿನಾಂಕವೂ ಇಲ್ಲ, ದತ್ತಾಂಶವೂ ಇಲ್ಲ; 1,007.83 ಕೋಟಿ ರು. ವೆಚ್ಚದ ಕಾಮಗಾರಿಗಳು ಅಪೂರ್ಣ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳ ಪೈಕಿ ಒಂದು ವ‍ರ್ಷಕ್ಕಿಂತಲೂ ಹೆಚ್ಚು...

ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಕುಟುಂಬ ಸದಸ್ಯರ ಉದ್ಯಮ, ಹಣಕಾಸಿನ ವ್ಯವಹಾರ; ಸದನಕ್ಕೆ ಒದಗಿಸಬಹುದೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಖಿಲ ಭಾರತ...

ನರೇಗಾ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಿಯಮ ಉಲ್ಲಂಘನೆ; 86.67 ಕೋಟಿ ರು ಅಕ್ರಮ ಪತ್ತೆ ಹಚ್ಚಿದ ಸಿಎಜಿ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಮಾನವ ಸಂಪನ್ಮೂಲ ಬಳಕೆಗಾಗಿ ಮಾಡಿಕೊಂಡಿದ್ದ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಡೆದಿದ್ದ...

ಮೋಸದ ವಹಿವಾಟು, ಹೆಚ್ಚಿನ ಪಾವತಿ, ಅಕ್ರಮ ವೆಚ್ಚ; ನರೇಗಾದ ಮತ್ತೊಂದು ಮುಖ ಬಯಲು ಮಾಡಿದ ಸಿಎಜಿ

ಬೆಂಗಳೂರು; ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡಿದ್ದ ಕಾಮಗಾರಿಗಳು...

ಗೃಹಜ್ಯೋತಿ; 23,823.06 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ, ಎಸ್ಕಾಂಗಳಿಗೆ 631.75 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಳಿಸಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರವು...

ವಿನಾಶಕಾರಿ ಭೂ ಕುಸಿತ; ಕೊಡಗು ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದಲ್ಲಿ ಸಭೆಯೇ ನಡೆದಿಲ್ಲ, ಪುರಾವೆಯೂ ಇಲ್ಲ

ಬೆಂಗಳೂರು; ಕೊಡಗಿನಲ್ಲಿ 2018-19ನೇ ಸಾಲಿನಲ್ಲಿ  ಭಾರೀ ಪ್ರಮಾಣದ ವಿನಾಶಕಾರಿ ಭೂ ಕುಸಿತಗಳಾಗಿದ್ದರೂ ...

ಭೂ ಸ್ವಾಧೀನ, ಪರಿಹಾರದಲ್ಲಿ ಅಕ್ರಮ; ಬಿಸ್ವಾಸ್ ವರದಿ ಮೂಲೆಗುಂಪು, 29.96 ಕೋಟಿ ನಷ್ಟ ಪ್ರಕರಣಕ್ಕೆ ಕ್ಲೀನ್ ಚಿಟ್

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಾಬೀತಾಗಿದ್ದ  ಬೆಳಗಾವಿ ಜಿಲ್ಲೆ ಹುಕ್ಕೇರಿ...

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

Related Articles

Popular Categories

error: Content is protected !!