ಕೋವಿಡ್‌ ರೋಗಿಗಳಿಂದ ಅಧಿಕ ಶುಲ್ಕ ವಸೂಲಿ ಮಾಡಿದ ಪಟ್ಟಿಯಲ್ಲಿವೆ ಪ್ರಭಾವಿಗಳ ಆಸ್ಪತ್ರೆಗಳು

ಬೆಂಗಳೂರು; ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ, ವಿಧಾನಪರಿಷತ್‌ ಮಾಜಿ ಸದಸ್ಯ ಹಾಗೂ ಮಾಜಿ ಸಚಿವ ಎಂ ಆರ್‌ ಸೀತಾರಾಮ್, ಡಾ ಜಿ ಪರಮೇಶ್ವರ್‌ ಕುಟುಂಬ ಸದಸ್ಯರು ಟ್ರಸ್ಟಿಗಳಾಗಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜು, ಮಾಜಿ ಸಂಸದ ಪ್ರಭಾಕರ್‌ ಕೋರೆ, ಬಿ ಎಂ ಪಾಟೀಲ್‌ ಮೆಡಿಕಲ್ ಕಾಲೇಜು, ಚಿತ್ರದುರ್ಗದ ಬಸವೇಶ್ವರ ಮೆಡಿಕಲ್‌ ಕಾಲೇಜು ಮತ್ತು ಜಗದ್ಗುರು ಶಿವರಾತ್ರೀಶ್ವರ ಮೆಡಿಕಲ್‌ ಕಾಲೇಜು , ಜಸ್ಟೀಸ್‌ ಕೆ ಎಸ್‌ ಹೆಗ್ಡೆ ಮೆಡಿಕಲ್‌ ಕಾಲೇಜು ಸೇರಿದಂತೆ ರಾಜ್ಯದ ಹಲವು ಖಾಸಗಿ ಆಸ್ಪತ್ರೆಗಳು ಕೋವಿಡ್‌ ಸೋಂಕಿತರಿಂದ ಅಧಿಕ ಶುಲ್ಕವನ್ನು ವಸೂಲು ಮಾಡಿವೆ.

ಕೋವಿಡ್‌ ಸಂದರ್ಭದಲ್ಲಿ ನಿಗದಿಗಿಂತ ಅಧಿಕ ಶುಲ್ಕ ವಸೂಲಿ ಮಾಡಿರುವ ಆಸ್ಪತ್ರೆಗಳ ಬಗ್ಗೆ ರೋಗಿಗಳು ಮತ್ತು ಅವರ ಕುಟುಂಬದವರು ಹಾಗೂ ಸಾರ್ವಜನಿಕರ ವಲಯದಲ್ಲಿ ದೂರು ಕೇಳಿ ಬಂದಿದ್ದರ ಬೆನ್ನಲ್ಲೇ ರೋಗಿಗಳಿಂದ ಅಧಿಕ ಶುಲ್ಕ ವಸೂಲಿ ಮಾಡಿರುವ ಆಸ್ಪತ್ರೆಗಳ ಪಟ್ಟಿಯು ಮುನ್ನೆಲೆಗೆ ಬಂದಿದೆ. ಈ ಪಟ್ಟಿಯು ‘ದಿ ಫೈಲ್‌’ ಗೆ ಲಭ್ಯವಾಗಿದೆ.
ಕೋವಿಡ್‌ ಸೋಂಕಿತರಿಂದ ಅಧಿಕ ಶುಲ್ಕ ವಸೂಲು ಮಾಡಿರುವ ಖಾಸಗಿ ಆಸ್ಪತ್ರೆಗಳ ಪಟ್ಟಿ ಇಲ್ಲಿ ಕೊಡಲಾಗಿದೆ.

ಕರಾವಳಿ; ಎ ಜೆ ಹಾಸ್ಪಿಟಲ್‌ ರೀಸರ್ಚ್‌ (ದಕ್ಷಿಣ ಕನ್ನಡ) ಯೇನಪೋವ ಮೆಡಿಕಲ್‌ ಕಾಲೇಜು, ಯೇನಪೋವ ಸ್ಪೆಷಾಲಿಟಿ, ಎ ಜೆ ಹಾಸ್ಪಿಟಲ್‌ ರೀಸರ್ಚ್‌, ಆದರ್ಶ (ಕುಂದಾಪುರ), ಆದರ್ಶ (ಉಡುಪಿ), ಚಿನ್ಮಯ ಮಿಷನ್‌ (ಉಡುಪಿ), ಡಾ ಎನ್‌ ಆರ್‌ ಆಚಾರ್ಯ ಮೆಮೋರಿಯಲ್‌ (ಉಡುಪಿ), ಡಾ ಟಿ ಎಂಎ ಪೈ (ಉಡುಪಿ), ಫಾರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು, ಹೈಟೆಕ್‌ ಮೆಡಿಕೇರ್‌( ಉಡುಪಿ), ಇಂದಿರಾ (ಮಂಗಳೂರು), ಜಸ್ಟೀಸ್‌ಕೆ ಎಸ್‌ ಹೆಗ್ಡೆ ಚಾರಿಟಬಲ್‌ (ದಕ್ಷಿಣ ಕನ್ನಡ), ಕಣಚೂರು ಹಾಸ್ಪಿಟಲ್‌ ರೀಸರ್ಚ್ (ದಕ್ಷಿಣ ಕನ್ನಡ), ಕಸ್ತೂರಾಬಾ (ಉಡುಪಿ), ಕೆ ಕೆ ಆಸ್ಪತ್ರೆ( ದಕ್ಷಿಣ ಕನ್ನಡ), ಕೆಎಂಸಿ ಅತ್ತಾವರ (ದಕ್ಷಿಣ ಕನ್ನಡ), ಕೆವಿಜಿ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ (ದಕ್ಷಿಣ ಕನ್ನಡ), ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಷನ್‌ (ದಕ್ಷಿಣಕನ್ನಡ), ಪ್ರಣವ್‌ (ಉಡುಪಿ), ಶ್ರೀನಿವಾಸ ಇನ್ಸಿಟ್ಯೂಟ್‌ ಅಫ್‌ ಮೆಡಿಕಲ್‌ ಸೈನ್ಸ್‌ (ದಕ್ಷಿಣಕನ್ನಡ), ವಿನಯ (ಉಡುಪಿ) ಆಸ್ಪತ್ರೆ ಸೇರಿದೆ.

ಆರೈಕೆ (ದಾವಣಗೆರೆ), ಎಎಲ್‌ ಅನ್ಸಾರ್‌ (ಮೈಸೂರು) ಅನ್ವಿಕಾ ಮಲ್ಟಿ ಸ್ಪೆಷಾಲಿಟಿ (ಕಲ್ಬುರ್ಗಿ), ಅಶ್ವಿನಿ ಆಯುರ್ವೇದಿಕ್‌ (ತುಮಕೂರು), ಅಶ್ವಿನಿ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜು (ತುಮಕೂರು), ಬಾಗ್ಮರೆ ಆಸ್ಪತ್ರೆ (ವಿಜಯಪುರ), ಬಾಪೂಜಿ (ದಾವಣಗೆರೆ), ಬಸವೇಶ್ವರ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ (ಚಿತ್ರದುರ್ಗ), ಭಾನವಿ (ಮೈಸೂರು), ಭಾರತಿ (ಮೈಸೂರು),ಬಿಎಲ್‌ಡಿಇ ಯೂನಿವರ್ಸಿಟಿ, ಬಿ ಎಂ ಪಾಟೀಲ್‌ ಮೆಡಿಕಲ್‌ ಕಾಲೇಜು (ಬೆಳಗಾವಿ), ಚೌಧುರಿ (ವಿಜಯಪುರ), ಸಿಟಿ ಸೆಂಟ್ರಲ್‌ ಹಾಸ್ಪಿಟಲ್‌ (ಕೊಪ್ಪಳ), ಕೊಲಂಬಿಯಾ ಏಷ್ಯಾ (ಮೈಸೂರು), ಧನ್ವಂತರಿ ಆಸ್ಪತ್ರೆ (ಗುಲ್ಬರ್ಗಾ), ಜಿ ಮಾದೇಗೌಡ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ( ಮಂಡ್ಯ), ಹುಬ್ಬಳ್ಳಿ ಸೂಪರ್‌ ಸ್ಪೆಷಾಲಿಟಿ (ಬೆಳಗಾವಿ), ಜಗದ್ಗುರು ಶಿವರಾತ್ರೀಶ್ವರ (ಮೈಸೂರು), ಜಿಂದಾಲ್‌ ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ (ಬಳ್ಳಾರಿ) ಆಸ್ಪತ್ರೆಯೂ ಅಧಿಕ ಶುಲ್ಕ ವಸೂಲು ಮಾಡಿರುವ ಪಟ್ಟಿಯಲ್ಲಿದೆ.

ಕರ್ನಾಟಕ ಕ್ಯಾನ್ಸರ್‌ ಥೆರಪಿ ರೀಸರ್ಚ್ ಇನ್ಸಿಟಿಟ್ಯುಟ್‌ ( ಧಾರವಾಡ), ಕಿಮ್ಸ್‌ (ಧಾರವಾಡ), ಕೆಎಲ್‌ಇಎಸ್‌ ಪ್ರಭಾರ ಕೋರೆ ಆಸ್ಪತ್ರೆ (ಬೆಳಗಾವಿ), ಕೆ ಎಸ್‌ ಆಸ್ಪತ್ರೆ (ಕೊಪ್ಪಳ), ನಂಜಪ್ಪ (ಶಿವಮೊಗ್ಗ), ನವೋದಯ ಮೆಡಿಕಲ್‌ ಕಾಲೇಜು (ರಾಯಚೂರು), ಆರ್‌ ಎಲ್‌ ಜಾಲಪ್ಪ ಆಸ್ಪತ್ರೆ, ರೀಸರ್ಚ್‌ (ಕೋಲಾರ) ಎಸ್‌ ಎಸ್‌ ಇನ್ಸಿಟಿಟ್ಯೂಟ್ ಆಫ್‌ ಮೆಡಿಕಲ್‌ ಸೈನ್ಸ್‌ (ದಾವಣಗೆರೆ), ಎಸ್‌ಡಿಎಂ ಕಾಲೇಜ್‌ ಆಫ್‌ ಮೆಡಿಕಲ್‌ ಸೈನ್ಸ್‌ (ಬೆಳಗಾವಿ), ಸಿದ್ದಾರ್ಥ ಅಕಾಡೆಮಿ ಆಫ್‌ ಹೈಯರ್‌, ಶಕುಂತಲಾ ಮೆಮೋರಿಯಲ್‌ ಆಸ್ಪತ್ರೆ (ಧಾರವಾಡ), ಶಾಂತಿ (ಬಾಗಲಕೋಟೆ), ಶ್ರೀ ಮಲ್ಲಿಕಾರ್ಜುನ ಮಲ್ಟಿ ಸ್ಪೆಷಾಲಿಟಿ (ಕೊಪ್ಪಳ), ಶ್ರೀದೇವಿ ಇನ್ಸಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ (ತುಮಕೂರು), ಸಿದ್ದಗಂಗಾ ಹಾಸ್ಪಿಟಲ್‌ ರೀಸರ್ಚ್ (ತುಮಕೂರು), ಸ್ಪಂದನ್‌ ಆಸ್ಪತ್ರೆ (ಮೈಸೂರು), ಶ್ರೀ ಸಿದ್ದಗಂಗಾ ಹಾಸ್ಪಿಟಲ್‌ ಪ್ರೈವೈಟ್‌ ಲಿಮಿಟೆಡ್‌, ಎಸ್‌ಎಸ್‌ಎಂ ಮಲ್ಟಿ ಸ್ಪೆಷಾಲಿಟಿ (ಹಾಸನ), ಸುಬ್ಬಯ್ಯ ಮೆಡಿಕಲ್‌ ಕಾಲೇಜು (ಶಿವಮೊಗ್ಗ), ಸುಚಿಯರು ಹೆಲ್ತ್‌ ಕೇರ್‌ (ಧಾರವಾಡ), ಸೂರ್ಯ (ತುಮಕೂರು), ಸುಯೋಗ ಆಸ್ಪತ್ರೆ (ಮೈಸೂರು), ತತ್ವಾದರ್ಶ (ಹುಬ್ಬಳ್ಳಿ), ದಿ ಹರಪನಹಳ್ಳಿ (ಬಳ್ಳಾರಿ) ದಿ ಹಾಸ್ಟಿಲ್‌ ಹೊಸಪೇಟೆ, ದಿ ಹೂವಿನ ಹಡಗಲಿ (ಕಲ್ಬುರ್ಗಿ), ಯಶೋಧ ಆಸ್ಪತ್ರೆ (ವಿಜಯಪುರ)ಯಲ್ಲಿ ನಿಗದಿತ ಶುಲ್ಕಕ್ಕಿಂತಲೂ ಹೆಚ್ಚಿನ ಶುಲ್ಕವನ್ನು ವಸೂಲು ಮಾಡಿವೆ ಎಂಬ ದೂರುಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ಒದಗಿಸಿದೆ.

ಒಟ್ಟು 246 ಆಸ್ಪತ್ರೆಗಳು 3.54 ಕೋಟಿ ರು. ಅಧಿಕ ಶುಲ್ಕ ವಸೂಲಿ ಮಾಡಿವೆ. ಈ ಪೈಕಿ ರೋಗಿಗಳಿಗೆ ಕೇವಲ 73.28 ಲಕ್ಷ ರು. ಮಾತ್ರ ರೋಗಿಗಳಿಗೆ ಮರು ಪಾವತಿಸಿರುವುದು ಪಟ್ಟಿಯಿಂದ ತಿಳಿದು ಬಂದಿದೆ. 43 ರೋಗಿಗಳಿಗೆ 32,22,352 ರು.ಗಳನ್ನು ಹಣವನ್ನು ಮರು ಪಾವತಿಸಲಾಗಿದೆ. ಅದೇ ರೀತಿ 48 ಆಸ್ಪತ್ರೆಗಳು 58 ರೋಗಿಗಳ ಪೈಕಿ 7 ಆಸ್ಪತ್ರೆಗಳು ರೋಗಿಗಳಿಗೆ 10,42,339 ರು.ಗಳನ್ನು ಮರು ಪಾವತಿಸಿದೆ. 51 ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿಗೆ ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.

238 ರೋಗಿಗಳು ನೇರವಾಗಿ ಸುವರ್ಣ ಆರೋಗ್ಯ ಟ್ರಸ್ಟ್‌ನ ವಿಶೇಷ ವಿಭಾಗಕ್ಕೆ ದೂರು ಸಲ್ಲಿಸಿದ್ದರು. ಇದರ ಅನ್ವಯ 1,460 ಆಸ್ಪತ್ರೆಗಳಿಗೆ ಶೋಕಾಸ್‌ ನೋಟೀಸ್‌ ನೀಡಿದೆ. ಈ ಪೈಕಿ 153 ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು 30,63, 343 ರುಗ.ಳನ್ನು ಮರು ಪಾವತಿಸಿದೆ. ಒಟ್ಟಾರೆ 73,28,034 ರು.ಗಳನ್ನು ಖಾಸಗಿ ಆಸ್ಪತ್ರೆಗಳು ಕೋವಿಡ್‌ ರೋಗಿಗಳಿಗೆ ಮರು ಪಾವತಿಸಿವೆ.
ಇದಲ್ಲದೆ ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿಯೂ ಸರ್ಕಾರ ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಅಧಿಕ ಶುಲ್ಕ ವಸೂಲು ಮಾಡಿರುವುದು ಪಟ್ಟಿಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts