ಕೋವಿಡ್‌; 14.52 ಲಕ್ಷ ಕಟ್ಟಡ ಕಾರ್ಮಿಕರ ಪೈಕಿ ನಾಲ್ವರಿಗಷ್ಟೇ 8.16 ಲಕ್ಷ ಪರಿಹಾರ

ಬೆಂಗಳೂರು; ಕೋವಿಡ್‌ 19ರ ಎರಡನೇ ಅಲೆಯ ವಿಶೇಷ ಪ್ಯಾಕೇಜ್‌ಗೆ ರಾಜ್ಯದಾದ್ಯಂತ ನೋಂದಣಿಯಾಗಿರುವ ಒಟ್ಟು ಕಟ್ಟಡ ಕಾರ್ಮಿಕರ ಪೈಕಿ 14.52 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕೋವಿಡ್‌ನಿಂದ ಮೃತಪಟ್ಟಿದ್ದ ಕಟ್ಟಡ ಕಾರ್ಮಿಕರಲ್ಲಿ ಕೇವಲ 4 ಮಂದಿಗೆ ಮಾತ್ರ ಅನುಗ್ರಹ ರಾಶಿ ಮತ್ತು ಅಂತ್ಯಕ್ರಿಯೆ ವೆಚ್ಚದಡಿಯಲ್ಲಿ 8.16 ಲಕ್ಷ ರು. ಗಳನ್ನು ಭರಿಸಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಡಾ ಅಜಯ್‌ ಧರ್ಮಸಿಂಗ್‌ ಸೇರಿದಂತೆ ಇನ್ನಿತರ ಶಾಸಕರು ಕೋವಿಡ್‌ ವಿಶೇಷ ಪ್ಯಾಕೇಜ್‌ ಪರಿಹಾರ ಕುರಿತು ಉತ್ತರಿಸಿರುವ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಅವರು ಮೃತ ಕಾರ್ಮಿಕರ ಅವಲಂಬಿತರನ್ನು ಹೊರತುಪಡಿಸಿ ವಿಶೇಷ ಪ್ಯಾಕೇಜ್‌ ಅಡಿಯಲ್ಲಿ ಎಷ್ಟು ಮಂದಿ ಕಾರ್ಮಿಕರಿಗೆ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ ಎಂಬ ಮಾಹಿತಿಯನ್ನು ಒದಗಿಸಿಲ್ಲ.

2021ರ ಏಪ್ರಿಲ್‌ 2ರ ನಂತರ ನೋಂದಾಯಿತ ಕಟ್ಟಡ ಕಾರ್ಮಿಕರು ಕೋವಿಡ್‌ನಿಂದ ಮೃತಪಟ್ಟಿದ್ದರೆ ಅವರಿಗೆ 54, 000 ರು. ಬದಲಿಗೆ 2.04 ಲಕ್ಷ ರು.ಗಳನ್ನು ಅನುಗ್ರಹ ರಾಶಿ ಮತ್ತು ಅಂತ್ಯಕ್ರಿಯೆ ವೆಚ್ಚವನ್ನು ನೀಡಲು ಆದೇಶ ಹೊರಡಿಸಿತ್ತು. ನೋಂದಾಯಿತ ಕಟ್ಟಡ ಕಾರ್ಮಿಕರ ಪೈಕಿ ಒಟ್ಟು 14.52 ಲಕ್ಷ ಮಂದಿ ಕೋವಿಡ್‌ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಸಚಿವ ಹೆಬ್ಬಾರ್‌ ಅವರು ಉತ್ತರ ಒದಗಿಸಿದ್ದಾರೆ.


ಕೋವಿಡ್‌ 19ರ ವಿಶೇಷ ಪ್ಯಾಕೇಜ್‌ ಅಡಿಯಲ್ಲಿ ಬೆಳಗಾವಿಯಲ್ಲಿ 1,51,032, ಬೆಂಗಳೂರು ನಗರ 1,47,631, ಕಲ್ಬುರ್ಗಿಯಲ್ಲಿ 1,23,276, ಮೈಸೂರಿನಲ್ಲಿ 1,02,344 ಕಟ್ಟಡ ಕಾರ್ಮಿಕರು ನೆರವು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಕೋವಿಡ್‌ ಪರಿಹಾರ ವಿತರಣೆಗೆ ಮೀಸಲಿಟ್ಟಿರುವ 400 ಕೋಟಿ ರು. ಅನುದಾನದಲ್ಲಿ ಈವರೆವಿಗೆ 100 ಕೋಟಿ ರು ಬಿಡುಗಡೆಯಾಗಿದೆ. ಇನ್ನು ರಾಜ್ಯದಲ್ಲಿ 2021ರ ಡಿಸೆಂಬರ್‌ 7ರವರೆಗೆ ಒಟ್ಟು 38,174 ಕೋವಿಡ್‌ 19 ನಿಂದ ಮೃತಪಟ್ಟಿದ್ದಾರೆ. ಕೋವಿಡ್‌ ಪರಿಹಾರಕ್ಕಾಗಿ ರಾಜ್ಯದಾದ್ಯಂತ ಒಟ್ಟು 17,098 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 10,289 ಬಿಪಿಎಲ್‌ ಕುಟುಂಬಗಳ ಅರ್ಜಿಗಳು ಸರ್ಕಾರದ ಹಂತದಲ್ಲಿ ಸ್ವೀಕೃತವಾಗಿವೆ ಎಂದು ಸಚಿವ ಆರ್‌ ಅಶೋಕ್‌ ಅವರು ಉತ್ತರ ಒದಗಿಸಿದ್ದಾರೆ.

ಇದರಲ್ಲಿ ಜಿಲ್ಲಾಧಿಕಾರಿಗಳು 8,424 ಅರ್ಜಿಗಳನ್ನು ಅನುಮೋದಿಸಿದ್ದಾರೆ. ಎಪಿಎಲ್‌ ಕುಟುಂಬಗಳದ್ದು 6,809 ಅರ್ಜಿಗಳಿವೆ. ಇದರಲ್ಲಿ ಜಿಲ್ಲಾಧಿಕಾರಿಗಳು 5,243 ಅರ್ಜಿಗಳನ್ನು ಅನುಮೋದಿಸಿದ್ದಾರೆ. ಎಪಿಎಲ್‌ ಮತ್ತು ಬಿಪಿಎಲ್‌ ಅರ್ಜಿಗಳ ಪೈಕಿ ಜಿಲ್ಲಾಧಿಕಾರಿಗಳು 13,667 ಅರ್ಜಿಗಳನ್ನು ಅನುಮೋದಿಸಿದ್ದಾರೆ.

ಅದೇ ರೀತಿ ಕೇಂದ್ರ ಸರ್ಕಾರದ ಪರಿಹಾರದ ವ್ಯಾಪ್ತಿಗೊಳಪಟ್ಟ 11,438 ಪ್ರಕರಣಗಳಲ್ಲಿ 50,000 ರು. ಪಾವತಿಸಲಾಗಿದೆ. ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿಯೇ ಅತಿ ಹೆಚ್ಚು ಎಂದರೆ 1,751 ಪ್ರಕರಣಗಳಲ್ಲಿ 50,000 ರು. ಪರಿಹಾರ ಪಾವತಿಸಲಾಗಿದೆ.

ರಾಜ್ಯ ಸರ್ಕಾರವು ಬಿಪಿಎಲ್‌ ಕುಟುಂಬಗಳಿಗೆ ಘೋಷಿಸಿರುವ 1.00 ಲಕ್ಷ ಪರಿಹಾರಕ್ಕಾಗಿ ಒಟ್ಟು 9,080 ಅರ್ಜಿಗಳ ಸ್ವೀಕೃತವಾಗಿವೆ. ಪರಿಶೀಲನಾ ಕಾರ್ಯ ಮುಗಿದ ನಂತರ 6,736 ಫಲಾನುಭವಿಗಳಿಗೆ 1.00 ಲಕ್ಷ ಪರಿಹಾರವನ್ನು ಚೆಕ್‌ ಮೂಲಕ ವಿತರಿಸಲು ಜಿಲ್ಲಾಧಿಕಾರಿಗಳ ಹಂತದಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ಸದನಕ್ಕೆ ಮಾಹಿತಿ ಒದಗಿಸಿದೆ.

the fil favicon

SUPPORT THE FILE

Latest News

Related Posts