62 ಕೋಟಿ ದುರುಪಯೋಗ; ಮರು ಲೆಕ್ಕ ಪರಿಶೋಧನೆ ವರದಿ ಬಿಡುಗಡೆಗೆ ಮೀನಮೇಷ

ಬೆಂಗಳೂರು; ಶಿವಮೊಗ್ಗ ಕೇಂದ್ರ ಸಹಕಾರ ಬ್ಯಾಂಕ್‌ (ಡಿಸಿಸಿ)ನಲ್ಲಿ ನಡೆದಿದೆ ಎನ್ನಲಾದ 62.77 ಕೋಟಿ ರು. ದುರುಪಯೋಗವೂ ಸೇರಿದಂತೆ ಇನ್ನಿತರೆ ಅವ್ಯವಹಾರ ಪ್ರಕರಣ ಕುರಿತು ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಿರ್ದೇಶಕರು ಮರು ಲೆಕ್ಕ ಪರಿಶೋಧನೆ ಪೂರ್ಣ ವರದಿ ಸಲ್ಲಿಸದಿರುವುದು ಇದೀಗ ಬಹಿರಂಗವಾಗಿದೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರ ಪ್ರಕರಣವು ಗಂಭೀರವಾಗಿದ್ದರೂ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಿರ್ದೇಶಕರು ಮರು ಲೆಕ್ಕ ಪರಶೋಧನೆ ವರದಿ ಸಲ್ಲಿಸುವಲ್ಲಿ ಮಾಡುತ್ತಿರುವ ವಿಳಂಬವು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
2011-12ರಿಂದ 2013-14ನೇ ಸಾಲಿನ ಪರಿಶೋಧಿತ ಲೆಕ್ಕಪತ್ರಗಳನ್ನು ಮರು ಲೆಕ್ಕ ಪರಿಶೋಧನೆ ನಡೆಸುವ ಸಂಬಂಧ ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ 2021ರ ನವೆಂಬರ್‌ 9ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಬ್ಯಾಂಕ್‌ನ ಮರು ಲೆಕ್ಕ ಪರಿಶೋಧನೆಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯವು ನೀಇಡರುವ ತಡೆಯಾಜ್ಞೆಯನ್ನು ತೆರವುಗೊಳಿಸಿ ಮರು ಲೆಕ್ಕ ಪರಿಶೋಧನೆ ವರದಿಯ ಪೂರ್ಣ ವರದಿಯನ್ನು ಬಿಡುಗಡೆಗೊಳಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಹಲವು ಬಾರಿ ಸೂಚಿಸಲಾಗಿದೆ. ಆದರೂ ಈ ವಿಷಯದಲ್ಲಿ ನಿರೀಕ್ಷಿತ ಬೆಳವಣಿಗೆಗಳು ಆಗಿರುವುದಿಲ್ಲ. ಇದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಹಾಗಾಗಿ ವಿಷಯದ ಗಂಭೀರತೆ ಮನಗಂಡು ವೈಯಕ್ತಿಕ ಗಮನಹರಿಸಿ ತುರ್ತು ಕ್ರಮ ತೆಗೆದುಕೊಂಡು ಕೈಗೊಂಡ ಕ್ರಮದ ವರದಿಯನ್ನು ಅತಿ ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕು,’ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ನಿರ್ದೇಶಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಬ್ಯಾಂಕ್‌ನಲ್ಲಿ ನಡೆದಿರುವ ಹಗರಣದ ವಿವರ

ಬ್ಯಾಂಕ್‌ನನಗರ ಶಾಖೆಯಲ್ಲಿನ ನಗದು ಶಿಲ್ಕಿನಲ್ಲಿ 1,79,20,235.58 ರು. ಕೊರತೆ ಕಂಡು ಬಂದಿತ್ತು. ನಗದು ಶಿಲ್ಕಿನಲ್ಲಿನ ಈ ಕೊರತೆಗೆ ಕಾರಣರಾಗಿದ್ದ ಶಾಖಾ ವ್ಯವಸ್ಥಾಪಕರಾದ ಬಿ ಶೋಭಾ, ನಗದು ಗುಮಾಸ್ತ ವಿ ರವೀಂದ್ರ ವಿರುದ್ಧ 2014ರಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ.

ಈ ಶಾಖೆಯಲ್ಲಿ ಒಟ್ಟು 34 ವ್ಯಕ್ತಿಗಳ ಹೆಸರಿನಲ್ಲಿ 785 ಖಾತೆಗಳಿಂದ 62,77,63,560 ರು ದುರುಪಯೋಗವಾಗಿತ್ತು. ಇದು ಬಂಗಾರ ಆಭರಣಗಳ ಸಾಲದ ಅಡಿಯಲ್ಲಿ ಅಡುವು ಮಾಡಿದ್ದ ಆಭರಣಗಳನ್ನು ಪರಿಶೀಲಿಸಿದ್ದ ವೇಳೆಯಲ್ಲಿ ಹಣ ದುರುಪಯೋಗವಾಗಿರುವುದು ತಿಳಿದು ಬಂದಿತ್ತು.


ಈ ಪೈಕಿ ನಕಲಿ ಬಂಗಾರ ಆಭರಣಗಳನ್ನು ಅಡವಿಟ್ಟ ಪ್ರಕರಣಗಳಲ್ಲಿ 40,57,83,762 ರು., ಭಾಗಶಃ ಬಂಗಾರವಿರುವ ಆಭರಣಗಳನಬ್ನು ಅಡವಿಟ್ಟ ಪ್ರಕರಣಗಳಲ್ಲಿ 5,05,85,641 ರು., ಆಭರಣಗಳನ್ನು ಅಡವಿಡದೇ ಸಾಲ ನೀಡಿದ್ದ ಪ್ರಕರಣಗಳಲ್ಲಿ 17,13,94,157 ರು. ದುರುಪಯೋಗವಾಗಿತ್ತು. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿದೆ.

ನಕಲಿ ಬಂಗಾರದ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದ 34 ಗ್ರಾಹಕರಗಳ ವಿರುದ್ಧ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 70 ರಡಿಯಲ್ಲಿ ಬೆಂಗಳೂರು ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರು ನ್ಯಾಯಾಲಯಗಳಲ್ಲಿ ಪ್ರತ್ಯೇಕ ದಾವೆ ಹೂಡಿದ್ದಾರೆ. ಇದರಲ್ಲಿ 17 ಪ್ರಕರಣಗಳು ಸಿವಮೊಗ್ಗ ಜಿಲ್ಲಾ ಸಹಕಾರ ಸಂಘಗಳ ನಿಬಂಧಕರಿಗೆ ವಹಿಸಲಾಗಿದೆ.

ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರು 34 ವ್ಯಕ್ತಿಗಳನ್ನು ಸಿಐಡಿ ಪೊಲೀಸರು ವಿಚಾರಣೆ ನಡೆಸಿದ್ದರು. ಸಿಐಡಿ ಕೋರಿಕೆಯಂತೆ ಶಿವಮೊಗ್ಗ ನಗರ ಶಾಖೆಗೆ ಸಂಬಂಧಿಸಿದಂತೆ 2011-12ನೇ ಸಾಲಿನಿಂದ 2014ನೇ ಸಾಲಿನ ಸೆಪ್ಟಂಬರ್‌ವರೆಗಿನ ಲೆಕ್ಕಪತ್ರಗಳನ್ನು ವಿಶೇಷ ಲೆಕ್ಕ ಪರಿಶೋಧನೆಗೆ ಒಳಪಡಿಸಿ ಅದರ ವರದಿ ಆಧರಿಸಿ 2015ರ ಆಗಸ್ಟ್‌ 21ರಂದು ಶಿವಮೊಗ್ಗ ನ್ಯಾಯಾಲಯಕ್ಕೆ ಅಂತಿಮ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು.

ಇದರಲ್ಲಿ ಬ್ಯಾಂಕ್‌ನ ಅಧ್ಯಕ್ಷರಾದ ಆರ್‌ ಎಂ ಮಂಜುನಾಥಗೌಡ, ಸಿಬ್ಬಂದಿ ಎನ್‌ ಜೆ ನಾಗಭೂಷಣ, ಎಚ್‌ ಗೀತಾ, ಎನ್‌ ಮಾಲತೇಶ ಇವರ ವಿರುದ್ಧದ ಆರೋಪಗಳು ಸಾಬೀತಾದ ಕಾರಣ ಆರೋಪ ಪಟ್ಟಿಯಿಂದ ಕೈಬಿಡಲಾಗಿತ್ತು.

the fil favicon

SUPPORT THE FILE

Latest News

Related Posts