ಕೋವಿಡ್ ಲಸಿಕೆ ಅಭಿಯಾನ ಜಾಹೀರಾತು; 3ತಿಂಗಳಲ್ಲಿ 2.77 ಕೋಟಿ ವೆಚ್ಚವಾದರೂ ಮುಟ್ಟದ ಗುರಿ

ಬೆಂಗಳೂರು; ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಿ 9 ತಿಂಗಳು ಕಳೆದಿದೆ. ಈ ಮಧ್ಯೆ ಏಪ್ರಿಲ್‌, ಮೇ ಮತ್ತು ಜೂನ್‌ ತಿಂಗಳಲ್ಲಿ ಸ್ವಯಂ ಪ್ರೇರಿತ ಲಸಿಕೆ, ಲಸಿಕಾಕರಣ, ಲಸಿಕೆ ಕಾರ್ಯ ಸ್ಥಗಿತ ಹೆಸರಿನಲ್ಲಿ ರಾಜ್ಯಮಟ್ಟದ ದಿನ ಪತ್ರಿಕೆಗಳಿಗೆ ನೀಡಿದ್ದ ಜಾಹೀರಾತಿಗೆ 1.42 ಕೋಟಿ ರು. ಮತ್ತು 18 ರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ವಿತರಣೆ ಕುರಿತು ಮುಖ್ಯಮಂತ್ರಿಗಳು 2021ರ ಜೂನ್‌ ತಿಂಗಳಲ್ಲಿ ಟಿ ವಿ ಚಾನಲ್‌ಗಳಲ್ಲಿ ಮನವಿ ಮಾಡಿದ್ದ 45 ಸೆಕೆಂಡ್‌ ಅವಧಿಯ ಜಾಹೀರಾತಿಗೆ 1.35 ಕೋಟಿ ಸೇರಿ ದಿನಪತ್ರಿಕೆ ಮತ್ತು ಟಿ ವಿ ಚಾನಲ್‌ಗಳಿಗೆ ನೀಡಿದ್ದ ಜಾಹೀರಾತಿಗೆ ಒಟ್ಟು 2.77 ಕೋಟಿ ರು. ವೆಚ್ಚ ಮಾಡಿದೆ. ಆದರೂ ಲಸಿಕಾಕರಣ ಇನ್ನೂ ತನ್ನ ಗುರಿಯನ್ನು ತಲುಪಿಲ್ಲ.

ಲಸಿಕೆ ಅಭಿಯಾನ ಜನವರಿಯಲ್ಲಿಯೇ ಆರಂಭವಾಗಿದ್ದರೂ 2021ರ ಏಪ್ರಿಲ್‌ 9ರಿಂದ ದಿನಪತ್ರಿಕೆಗಳಿಗೆ ನಿರಂತರವಾಗಿ ಜಾಹೀರಾತು ನೀಡಿದೆ. ದಿನಪತ್ರಿಕೆಗಳಿಗೆ ನೀಡಿರುವ ಜಾಹೀರಾತು ವಿವರ ಮತ್ತು ವೆಚ್ಚದ ಮಾಹಿತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.
ಟೈಮ್ಸ್‌ ಅಫ್‌ ಇಂಡಿಯಾ, ಪ್ರಜಾವಾಣಿ, ವಿಜಯಕರ್ನಾಟಕ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ಡೆಕ್ಕನ್‌ ಹೆರಾಲ್ಡ್‌, ಇಂಡಿಯನ್‌ ಎಕ್ಸ್‌ಪ್ರೆಸ್‌, ಹೊಸದಿಗಂತ ಸೇರಿದಂತೆ ರಾಜ್ಯ ಮಟ್ಟದ ಹಲವು ದಿನಪತ್ರಿಕೆಗಳಿಗೆ ಭರಪೂರ ಜಾಹೀರಾತು ನೀಡಿದೆ.

ಸ್ವಯಂ ಪ್ರೇರಿತವಾಗಿ ಕೋವಿಡ್‌ ಲಸಿಕೆ ಪಡೆಯುವ ಕುರಿತು 2021ರ ಏಪ್ರಿಲ್‌ 9 ಮತ್ತು 11ರಂದು ನೀಡಲಾಗಿದ್ದ ಜಾಹೀರಾತಿಗೆ ಒಟ್ಟು 15.22 ಲಕ್ಷ ರು. ವೆಚ್ಚವಾಗಿದೆ. ಏಪ್ರಿಲ್‌ 9 ರಂದು ಟೈಮ್ಸ್‌ ಆಫ್‌ ಇಂಡಿಯಾ, ಡೆಕ್ಕನ್‌ ಹೆರಾಲ್ಡ್‌, ಪ್ರಜಾವಾಣಿ, ಉದಯವಾಣಿ, ಸಂಯುಕ್ತ ಕರ್ನಾಟಕ, ವಿಶ್ವವಾಣಿ ದಿನಪತ್ರಿಕೆಗೆ ಎಂಸಿ ಅಂಡ್‌ ಎ ಮೂಲಕ 3,09,041 ರು., ಇಂಡಿಯನ್‌ ಎಕ್ಸ್‌ಪ್ಪ್ರೆಸ್‌, ದಿ ಹಿಂದೂ, ವಿಜಯಕರ್ನಾಟಕ, ವಿಜಯವಾಣಿ, ಕನ್ನಡಪ್ರಭ, ಹೊಸದಿಗಂತಕ್ಕೆ ಅಡ್ವಿಟ್‌ ಏಜೆನ್ಸಿ ಮೂಲಕ 3,37,989 ರು. ಪಾವತಿಸಿರುವುದು ತಿಳಿದು ಬಂದಿದೆ.

ಅದೇ ರೀತಿ ಏಪ್ರಿಲ್‌ 11ರಂದು ಕೋವಿಡ್‌ 19 ರ ಲಸಿಕಾ ಅಭಿಯಾನದ ಕುರಿತು ಡೆಕ್ಕನ್‌ ಹೆರಾಲ್ಡ್‌, ಪ್ರಜಾವಾಣಿ, ವಿಶ್ವವಾಣಿ, ಉದಯವಾಣಿ, ದಿ ಹಿಂದೂಗೆ ಎಂಸಿ ಅಂಡ್‌ ಎ ಮೂಲಕ 4,53,956 ರು., ಹಾಗೆಯೇ ಇಂಡಿಯನ್‌ ಎಕ್ಸ್‌ಪ್ರೆಸ್‌, ಕನ್ನಡಪ್ರಭ, ಹೊಸದಿಗಂತ, ಸಂಜೆವಾಣಿ, ಸಂಯುಕ್ತ ಕರ್ನಾಟಕ, ಈ ಸಂಜೆಗೆ ಅಡ್ವಿಟ್‌ ಏಜೆನ್ಸಿ ಮೂಲಕ 199,064 ರು., ವಿಜಯ ಕರ್ನಾಟಕ, ವಿಜಯವಾಣಿ, ಟೈಮ್ಸ್‌ ಆಫ್‌ ಇಂಡಿಯಾಕ್ಕೆ ಝೇಂಕಾರ್‌ ಏಜೆನ್ಸಿ ಮೂ 2,22,121 ರು., ಮೊತ್ತದ ಜಾಹೀರಾತು ನೀಡಲಾಗಿದೆ.

ಕೋವಿಡ್ 19ರ ಲಸಿಕಾ ಅಭಿಯಾನದ ಕುರಿತು 2021 ಏಪ್ರಿಲ್‌ 12 ಮತ್ತು 13ರಂದು ನೀಡಲಾಗಿದ್ದ ಜಾಹೀರಾತಿಗೆ 10.73 ಲಕ್ಷ ರು. ವೆಚ್ಚ ಮಾಡಿದೆ. ಏಪ್ರಿಲ್‌ 12ರಂದು ಕನ್ನಡ ಪ್ರಭ, ಇಂಡಿಯನ್‌ ಎಕ್ಸ್‌ಪ್ರೆಸ್‌, ಉದಯವಾಣಿ, ಡೆಕ್ಕನ್‌ ಹೆರಾಲ್ಡ್‌, ಸಂಜೆವಾಣಿ, ಈ ಸಂಜೆ ಗೆ ಯಕ್ಷಿ ಏಜೆನ್ಸಿ ಮೂಲಕ 2,05,300 ರು., ಪ್ರಜಾವಾಣಿ, ವಿಶ್ವವಾಣಿ, ಸಂಯುಕ್ತ ಕರ್ನಾಟಕ, ಹೊಸ ದಿಗಂತ, ದಿ ಹಿಂದೂಗೆ ಕವಿತಾ ಏಜೆನ್ಸಿ ಮೂಲಕ 2,27,012 ರು. ಜಾಹೀರಾತಿಗೆ ವೆಚ್ಚ ಮಾಡಿರುವುದು ಗೊತ್ತಾಗಿದೆ.

ಏಪ್ರಿಲ್‌ 13ರಂದು ಕನ್ನಡಪ್ರಭ, ಇಂಡಿಯನ್‌ ಎಕ್ಸ್‌ಪ್ರೆಸ್‌, ಹೊಸದಿಗಂತ, ಸಂಯುಕ್ತ ಕರ್ನಾಟಕ, ಸಂಜೆ ವಾಣಿ, ಗೆ ಸ್ಪೆಕ್ಟ್ರಂ ಏಜೆನ್ಸಿ ಮೂಲಕ 1,98,324 ರು., ಎಂಸಿ ಅಂಡ್‌ ಎ ಮೂಲಕ ಈ ಸಂಜೆ, ಪ್ರಜಾವಾಣಿ, ವಿಶ್ವವಾಣಿ, ಡೆಕ್ಕನ್‌ ಹೆರಾಲ್ಡ್‌, ಉದಯವಾಣಿ, ದಿ ಹಿಂದೂ ಗೆ ಜಾಹೀರಾತು ನೀಡಲಾಗಿದೆ ಎಂದು ಹೇಳಿರುವ ಸರ್ಕಾರವು ಇದಕ್ಕೆ ಎಷ್ಟು ಮೊತ್ತವನ್ನು ಪಾವತಿಸಲಾಗಿದೆ ಎಂಬ ಮಾಹಿತಿ ಒದಗಿಸಿಲ್ಲ. ಅದೇ ದಿನದಂದು ವಿಜಯಕರ್ನಾಟಕ, ವಿಜಯವಾಣಿ, ಟೈಮ್ಸ್‌ ಅಫ್‌ ಇಂಡಿಯಾಕ್ಕೆ ಅಡ್ವರ್ಟೋ ಏಜೆನ್ಸಿ ಮೂಲಕ 2,34,882 ರು. ಮೊತ್ತದ ಜಾಹೀರಾತು ನೀಡಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಏಪ್ರಿಲ್‌ 29ರಂದು ನೀಡಲಾಗಿದ್ದ ಕೋವಿಡ್‌ 19 ಸಹಾಯವಾಣಿ ಮತ್ತು 3ನೇ ಹಂತದ ಲಸಿಕಾಕರಣದ ಜಾಹೀರಾತು ನೀಡಿರುವ ಸರ್ಕಾರವು ಇಂಡಿಯನ್‌ ಎಕ್ಸ್‌ಪ್ರೆಸ್‌, ದಿ ಹಿಂದೂ, ಟೈಮ್ಸ್‌ ಆಫ್‌ ಇಂಡಿಯಾ, ವಿಜಯಕರ್ನಾಟಕ, ವಿಜಯವಾಣಿಗೆ ಅಡ್ವಿಟ್‌ ಏಜೆನ್ಸಿ ಮೂಲಕ 5,98,884 ರು., ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ಡೆಕ್ಕನ್‌ ಹೆರಾಲ್ಡ್‌, ಈ ಸಂಜೆಗೆ ಕವಿತಾ ಏಜೆನ್ಸಿ ಮೂಲಕ 2,16,115 ರು., ಉದಯವಾಣಿ, ಹೊಸದಿಗಂತ, ವಿಶ್ವವಾಣಿ, ಸಂಜೆವಾಣಿಗೆ ಆವಂತಿ ಏಜೆನ್ಸಿ ಮೂಲಕ 2,34,356 ರು. ಸೇರಿ ಒಟ್ಟು 10.49 ಲಕ್ಷ ರು. ಪಾವತಿಸಿದೆ.

2021ರ ಮೇ 13ರಂದು ನೀಡಲಾಗಿದ್ದ ಕೋವಿಡ್‌ 19 ಸಂಬಂಧ 18ರಿಂದ 44 ವರ್ಷ ವಯೋಮಾನದವರಿಗೆ ಲಸಿಕಾಕರಣ ತಾತ್ಕಾಲಿಕ ಸ್ಥಗಿತ ಕುರಿತು ನೀಡಿದ್ದ ಜಾಹೀರಾತಿಗೆ 10.76 ಲಕ್ಷ ರು. ವೆಚ್ಚ ಮಾಡಲಾಗಿದೆ. ಟೈಮ್ಸ್‌ ಆಫ್‌ ಇಂಡಿಯಾ, ವಿಜಯವಾಣಿ, ವಿಜಯಕರ್ನಾಟಕ, ಸಂಜೆವಾಣಿ, ಈ ಸಂಜೆಗೆ ಅಡ್ವಿಟ್‌ ಏಜೆನ್ಸಿ ಮೂಲಕ 4,64,094 ರು., ಇಂಡಿಯನ್‌ ಎಕ್ಸ್‌ಪ್ರೆಸ್‌, ಡೆಕ್ಕನ್‌ ಹೆರಾಲ್ಡ್‌, ಪ್ರಜಾವಾಣಿಗೆ ಆಕಾರ್‌ ಏಜೆನ್ಸಿ ಮೂಲಕ 2,12,741 ರು., ಉದಯವಾಣಿ, ಸಂಯುಕ್ತ ಕರ್ನಾಟಕ, ಹೊಸದಿಗಂತಕ್ಕೆ ಝೇಂಕಾರ್ ಏಜೆನ್ಸಿ ಮೂಲಕ 2,02,581 ರು., ದಿ ಹಿಂದೂ, ಕನ್ನಡಪ್ರಭ, ವಿಶ್ವವಾಣಿಗೆ ಕವಿತಾ ಏಜೆನ್ಸಿ ಮೂಲಕ 1,97,499 ರು. ಮೊತ್ತದ ಜಾಹೀರಾತು ನೀಡಲಾಗಿದೆ.

ದೇಶಾದ್ಯಂತ ಉಚಿತ ಲಸಿಕಾ ವಿತರಣೆ ಕುರಿತು 2021ರ ಜೂನ್‌ 21ರಂದು ನೀಡಲಾಗಿದ್ದ ಜಾಹೀರಾತಿಗೆ 95.62 ಲಕ್ಷ ರು. ವೆಚ್ಚವಾಗಿತ್ತು. ಆದರೆ ವಿಧಾನಪರಿಷತ್‌ ಸದಸ್ಯ ಕೆ ಹರೀಶ್‌ಕುಮಾರ್‌ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೂನ್‌ 21ರಂದು ನೀಡಿದ್ದ ಉಚಿತ ಲಸಿಕಾ ವಿತರಣೆ ಕುರಿತ ಜಾಹೀರಾತಿಗೆ 89, 74, 689 ರು. ಎಂದು ಉತ್ತರಿಸಿದ್ದಾರೆ. ಇದರಲ್ಲಿ 5,88,000 ರು. ವ್ಯತ್ಯಾಸ ಕಂಡು ಬಂದಿದೆ.

ವಿಜಯಕರ್ನಾಟಕ, ಉದಯವಾಣಿ, ವಾರ್ತಾಭಾರತಿ, ಇಂಡಿಯನ್‌ ಎಕ್ಸ್‌ಪ್ರೆಸ್‌, ನವಭಾರತ್ ಟೈಮ್ಸ್‌, ದೆಹಲಿ ವಾರ್ತೆಗೆ ಎಂಸಿ ಅಂಡ್‌ ಎ ಮೂಲಕ 23,48,831 ರು., ವಿಜಯವಾಣಿ, ಹೊಸದಿಗಂತಕ್ಕೆ ಅಡ್ವಿಟ್‌ ಏಜೆನ್ಸಿ ಮೂಲಕ 12,26,936 ರು., ದೈನಿಕ್‌ ಭಾಸ್ಕರ್‌, ಹಿಂದೂಸ್ತಾನ್‌ ಆಜ್‌ ಸಮಾಚಾರ್‌, ದಕ್ಷಿಣ್‌ ಭಾರತ್‌, ಸಂಯುಕ್ತ ಕರ್ನಾಟಕಕ್ಕೆ ಸ್ವ್ಯಾನ್‌ ಏಜೆನ್ಸಿ ಮೂಲಕ 15,22,553 ರು. ನೀಡಲಾಗಿದೆ.

ಅಮರ್‌ ಉಜಾಲ, ಇಂಡಿಯನ್‌ ಎಕ್ಸ್‌ಪ್ರೆಸ್‌, ಬಿಸಿನೆಸ್‌ ಸ್ಟ್ರ್ಯಾಂಡರ್ಡ್‌, ದಿ ಹಿಂದೂ ಗೆ ಆಕಾರ್‌ ಏಜೆನ್ಸಿ ಮೂಲಕ 8,94,324 ರು., ಟೈಮ್ಸ್‌ ಆಫ್‌ ಇಂಡಿಯಾಕ್ಕೆ ಝೇಂಕಾರ್‌ ಏಜೆನ್ಸಿ ಮೂಲಕ 8,94,324 ರು., ದೈನಿಕ್‌ ಜಾಗರಣ್‌ಗೆ ಶ್ರೇಷ್ಠ ಏಜೆನ್ಸಿ ಮೂಲಕ 5,13,889 ರು., ವಿಶ್ವವಾಣಿಗೆ ಜಗದಾಳೆ ಏಜೆನ್ಸಿ ಮೂಲಕ 3,61,640 ರು., ಡೆಕ್ಕನ್‌ ಹೆರಾಲ್ಡ್‌ಗೆ ದಿಶಾ ಏಜೆನ್ಸಿ ಮೂಲಕ 3,25,757 ರು., ಕನ್ನಡಪ್ರಭಕ್ಕೆ ಎಂಐಎ ಮೂಲಕ 3,56,076 ರು., ಪ್ರಜಾವಾಣಿಗೆ ಕವಿತಾ ಏಜೆನ್ಸಿ ಮೂಲಕ 6,71,125 ರು., ರಾಜಸ್ಥಾನ್‌ ಪತ್ರಿಕೆಗೆ ಯಕ್ಷಿ ಏಜೆನ್ಸಿ ಮೂಲಕ 1,73,077 ರು., ಸಂಜೆವಾಣಿ ಮತ್ತು ಈ ಸಂಜೆಗೆ ಸ್ಪೆಕ್ಟ್ರಂ ಮೂಲಕ 4,66,200 ರು. ವೆಚ್ಚ ಮಾಡಲಾಗಿದೆ.

ಹಾಗೆಯೇ ರಾಜ್ಯಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ವಿತರಣೆ ಕುರಿತು ಮುಖ್ಯಮಂತ್ರಿಗಳು 45 ಸೆಕೆಂಡ್‌ ಅವಧಿಯ ಮನವಿ ಮಾಡುವ ಜಾಹೀರಾತನ್ನು ಜೂನ್‌ 21ರಿಂದ 23ರವರೆಗೆ ಪ್ರಸಾರ ಮಾಡಿದ್ದ ಟಿ ವಿ ಚಾನಲ್‌ಗಳಿಗೆ 1,35,38,164 ರು. ವೆಚ್ಚ ಮಾಡಿದೆ.
ಟಿ ವಿ 9 , ಬಿ ಟಿ ವಿಗೆ 14, 95, 296 ರು., ಪ್ರಜಾ ಟಿ ವಿ, ಪವರ್‌ ಟಿ ವಿ ಗೆ 7,24,284 ರು., ಪಬ್ಲಿಕ್‌ ಟಿ ವಿ, ನ್ಯೂಸ್‌ 18, ಸುವರ್ಣ ನ್ಯೂಸ್‌, ನ್ಯೂಸ್‌ ಫಸ್ಟ್‌, ದಿಗ್ವಿಜಯ, ರಾಜ್‌ ನ್ಯೂಸ್‌, ಟಿ ವಿ 5 ಗೆ ಒಟ್ಟು 34, 46, 190 ರು. ಮೊತ್ತದ ಜಾಹೀರಾತನ್ನು ಬಿಡುಗಡೆ ಮಾಡಿತ್ತು. 45 ಸೆಕೆಂಡ್‌ ಅವಧಿಯ ಜಾಹೀರಾತನ್ನು 2021ರ ಜೂನ್‌ 21ರಿಂದ ಜೂನ್‌ 23ರವರೆಗೆ ಪ್ರಸಾರ ಮಾಡಲಾಗಿತ್ತು.

ಅದೇ ರೀತಿ ನ್ಯೂಸ್‌ 18 ಇಂಡಿಯಾ, ಸಿಎನ್‌ಎನ್‌ ನ್ಯೂಸ್‌ 18, ಸಿಎನ್‌ಬಿಸಿ ಆವಾಸ್‌ ಚಾನಲ್‌ಗೆ 18,68, 908 ರು., ನ್ಯೂಸ್‌ ಎಕ್ಸ್‌, ಇಂಡಿಯಾ ನ್ಯೂಸ್‌, ಇಂಡಿಯಾ ನ್ಯೂಸ್‌ ರೀಜನಲ್‌ಗೆ 16,99, 412 ರು., ಎಬಿಪಿ ನ್ಯೂಸ್‌ಗೆ 12, 74, 400 ರು., ಇಂಡಿಯಾ ಟುಡೆಗೆ 1,85,266 ರು, ತೇಜ್‌ ಗೆ 4,28, 836 ರು., ಆಜ್‌ತಕ್‌ಗೆ 16, 39, 197 ರು., ಟೈಮ್ಸ್‌ ನೌ, ಟೈಮ್ಸ್‌ ನೌ ವರ್ಲ್ಡ್‌, ಮಿರರ್‌ ನೌ, ಎಟಿನೌಗೆ 7,33, 417 ರು., ರಿಪಬ್ಲಿಕ್‌ ಟಿ ವಿ ಗೆ 42,958 ರು. ಮೊತ್ತದ ಜಾಹೀರಾತನ್ನು ಬಿಡುಗಡೆ ಮಾಡಿತ್ತು. ಈ ಜಾಹೀರಾತು ಜೂನ್‌ 21ರಿಂದ 23ರವರೆಗೆ ಪ್ರಸಾರವಾಗಿತ್ತು.

ಕೋವಿಡ್‌ ಲಸಿಕಾಕರಣ ಅಭಿಯಾನದತ್ತ ಗಮನಸೆಳೆಯಲು ಸರ್ಕಾರವು 1.42 ಕೋಟಿ ರು ಗಳನ್ನು ಜಾಹೀರಾತಿಗೆ ಖರ್ಚು ಮಾಡಿದ್ದರೂ ಲಸಿಕೆ ಪಡೆದುಕೊಂಡ ನಾಗರಿಕರ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಮೊದಲ ಡೋಸ್‌ನ ಅವಧಿ ಪೂರ್ಣಗೊಂಡಿದ್ದರೂ 2ನೇ ಡೋಸ್‌ ಪಡೆಯಲು ಆಸಕ್ತಿ ವಹಿಸುತ್ತಿಲ್ಲ. ಕೋವಿಡ್‌ ವಾರ್‌ ರೂಂ ಮಾಹಿತಿ ಪ್ರಕಾರ ರಾಜ್ಯದ 15 ಜಿಲ್ಲೆಗಳು ಲಸಿಕೆ ವಿತರಣೆಯಲ್ಲಿ ಹಿಂದುಳಿದಿವೆ.

SUPPORT THE FILE

Latest News

Related Posts