ಮೀಸಲಾತಿ ದುರ್ಬಳಕೆಗೆ ತಡೆ; ಸರ್ಕಾರಿ ಸೌಲಭ್ಯಕ್ಕೆ ಸ್ಥಿರ-ಚರಾಸ್ತಿ ವಿವರ ಸ್ವಯಂ ಘೋಷಣೆಗೆ ಶಿಫಾರಸ್ಸು

ಬೆಂಗಳೂರು; ಮೀಸಲಾತಿ ಸೌಲಭ್ಯದಡಿಯಲ್ಲಿ ಸರ್ಕಾರಿ ಯೋಜನೆಗಳ ಸೌಲಭ್ಯಗಳು ಅರ್ಹರಿಗೆ ಸಿಗದಂತೆ ದುರ್ಬಳಕೆ ಮಾಡಿಕೊಂಡು ಸೌಲಭ್ಯಗಳನ್ನು ಪಡೆಯುತ್ತಿದ್ದ ಅನರ್ಹ ಫಲಾನುಭವಿಗಳನ್ನು ಮಟ್ಟಹಾಕುವ ಭಾಗವಾಗಿಯೇ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅರ್ಜಿದಾರನು ಸ್ಥಿರ ಮತ್ತು ಚರಾಸ್ತಿ ವಿವರಗಳನ್ನು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗ(2)ವು ಮೊದಲನೇ ವರದಿಯಲ್ಲಿ ಶಿಫಾರಸ್ಸು ಮಾಡಿದೆ.

ಪ್ರಸ್ತುತ ಅಸ್ತಿತ್ವದಲ್ಲಿರುವ ಆಡಳಿತ ಮತ್ತು ಆಡಳಿತ ವ್ಯವಸ್ಥೆಗಳನ್ನು ಮತ್ತೊಮ್ಮೆ ಸಮಗ್ರವಾಗಿ ಮೌಲ್ಯಮಾಪನ ಮಾಡುವ ಉದ್ದೇಶದಿಂದ ಮತ್ತು ಮುಂಬರುವ ದಶಕಗಳಲ್ಲಿ ಸೂಕ್ತವಾದ ಹೊಸ ಆಡಳಿತ, ಆಡಳಿತ ವ್ಯವಸ್ಥೆಯನ್ನು ರಚಿಸಲು ಶಿಫಾರಸ್ಸು ಮಾಡಲು ಮಾಜಿ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅಧ್ಯಕ್ಷತೆಯಲ್ಲಿರುವ ಕರ್ನಾಟಕ ಆಡಳಿತ ಸುಧಾರಣಾ ಆಯೋಗ(2)ವು ಮೊದಲನೇ ವರದಿಯಲ್ಲಿ ಸ್ವಯಂ ಘೋಷಣಾ ಪ್ರಮಾಣ ಪತ್ರ ಸಲ್ಲಿಕೆ ಕುರಿತು ಶಿಫಾರಸ್ಸು ಮಾಡಿದೆ. ಈ ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಅನರ್ಹ ಫಲಾನುಭವಿಗಳು ಮೀಸಲಾತಿ ಸೌಲಭ್ಯವನ್ನು ಪಡೆಯಲಾರರೆಂಬ ಅಂಶವನ್ನು ಖಾತ್ರಿಪಡಿಸುವುದೇ ಅಲ್ಲದೆ ಅರ್ಹತಾ ಪಟ್ಟಿಯಲ್ಲಿ ಅನರ್ಹ ಫಲಾನುಭವಿಗಳು ತಮ್ಮ ಆದಾಯವನ್ನು ತಪ್ಪಾಗಿ ಘೋಷಣೆ ಮಾಡಿ ಅರ್ಹತೆಯನ್ನು ಕ್ಲೇಮು ಮಾಡುವ ಅನರ್ಹರಿಂದ ಅತಿ ಕೆಳಹಂತಕ್ಕೆ ತಳ್ಳಿ ಹಾಕಲ್ಪಟ್ಟಿರುವ ಮೀಸಲಾತಿ/ಇತರ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾದ ಅರ್ಹ ಫಲಾನುಭವಿಗಳು ಸಹ ಎಲ್ಲಾ ಸೌಲಭ್ಯಗಳನ್ನು ಪಡೆಬಹುದಾದ ಉಭಯ ಉದ್ದೇಶಗಳನ್ನು ಈಡೇರಿಸುತ್ತದೆ,’ ಎಂದು ಸ್ವಯಂ ಘೋಷಣಾ ಪ್ರಮಾಣ ಪತ್ರ ಸಲ್ಲಿಕೆಯನ್ನು ಆಯೋಗವು ಸಮರ್ಥಿಸಿಕೊಂಡಿದೆ.

ಆದಾಯ ಪ್ರಮಾಣಪತ್ರವನ್ನು ವಿತರಿಸಲು ಅನುಸರಿಸುವ ವಿಧಿವಿಧಾನಗಳು ಸರ್ಕಾರದ ಸೌಲಭ್ಯಗಳನ್ನು ಅನರ್ಹ ವ್ಯಕ್ತಿಗಳು ಪಡೆಯುವುದನ್ನು ನಿರ್ಬಂಧಿಸುವ ಉದ್ದೇಶಕ್ಕಾಗಿ ಹೆಚ್ಚಿನ ನಿರ್ದಿಷ್ಟ ಮಾರ್ಗಸೂಚಿಗಳ ಅಗತ್ಯವಿರುತ್ತದೆ. ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ಅರ್ಜಿದಾರನಿಗೆ ಎಲ್ಲಾ ವಿವಗಳನ್ನೂ ಒಳಗೊಂಡ ಸ್ವಯಂ ಘೋಷಣೆಯನ್ನು ಸಲ್ಲಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಅರ್ಜಿದಾರನಿಂದ ಸ್ವಯಂ ಘೋಷಣೆಗಾಗಿ ನಮೂನೆ ನಿಗದಿಪಡಿಸಬೇಕು. ಇದನ್ನು ಪರಿಗಣಿಸಬಹುದು ಮತ್ತು ಈ ನಮೂನೆಯನ್ನು ಯಾವುದೇ ಉದ್ದೇಶಕ್ಕಾಗಿ ಆದಾಯವನ್ನು ಪ್ರಮಾಣೀಕರಿಸುವ ಸಂದರ್ಭದಲ್ಲಿ ನಿಗದಿಪಡಿಸಿ ಸೂಕ್ತ ಸರ್ಕಾರದ ಆದೇಶ ಹೊರಡಿಸಬಹುದು ಎಂದು ಶಿಫಾರಸ್ಸು ಮಾಡಿದೆ.

ಆದಾಯ, ಜಾತಿ ಮತ್ತು ಆದಾಯ, ಕೆನೆಪದರವಲ್ಲದ, ಆರ್ಥಿಕ ದುರ್ಬಲ ವರ್ಗ, ಸಾಮಾಜಿಕ ಭದ್ರತಾ ಪಿಂಚಣಿ ಸೇರಿದಂತೆ ಇನ್ನಿತರೆ ಫಲಾನುಭವಿ ಆಧಾರಿತ ಯೋಜನೆಗಳಿಗೆ ಅರ್ಹತೆ ಪಡೆದುಕೊಳ್ಳಲು ಸ್ಥಿರ ಮತ್ತು ಚರಾಸ್ತಿ ವಿವರಗಳನ್ನೂ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವ ವೇಳೆಯಲ್ಲಿ ಅರ್ಜಿದಾರರು ಸ್ವಯಂ ಘೋಷಣೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಶಿಫಾರಸ್ಸು ಮಾಡಿರುವ ಆಯೋಗವು ಇದಕ್ಕಾಗಿ ಸ್ವಯಂ ಘೋಷಣಾ ಪ್ರಮಾಣ ಪತ್ರದ ನಮೂನೆ ಮಾದರಿಯನ್ನೂ ವರದಿಯಲ್ಲಿ ಶಿಫಾರಸ್ಸು ಮಾಡಿದೆ.

‘ಆದಾಯ, ಜಾತಿ ಹಾಗೂ ಆದಾಯ, ಕೆನೆಪದರಕ್ಕೆ ಸೇರದ ಸಮುದಾಯ, ಆರ್ಥಿಕವಾಗಿ ದುರ್ಬಲ ವರ್ಗದ ಫಲಾನುಭವಿ ಆಧಾರಿತ ಯೋಜನೆಗಳಿಗೆ ಹಾಗೂ ಇತ್ಯಾದಿಗಳೀಗಾಗಿ ಆದಾಯವನ್ನು ನಿರ್ಧರಣೆ ಮಾಡುವ ಮತ್ತು ಪ್ರಮಾಣೀಕರಿಸುವ ಪ್ರಸ್ತುತ ವಿಧಾನವು ತಾತ್ಕಾಲಿಕವಾಗಿದೆ. ಬಹುತೇಕ ಅವುಗಳು ಅರ್ಜಿದಾರನು ಕೋರಿದಂತಹ ಆಧಾಯ ಮಿತಿಯನ್ನು ಅವಲಂಬಿಸಿರುತ್ತದೆ. ಮತ್ತು ಒಂದು ಹೆಚ್ಚುವರಿ ಎಚ್ಚರಿಕೆಯಾಗಿ ಕಂದಾಯಾಧಿಕಾರಿಗಳು ಪ್ರಮಾಣೀಕರಿಸಿದ/ನೋಟರಿಯಿಂದ ಪಡೆದ ಪ್ರಮಾಣ ಪತ್ರಗಳನ್ನು ಒಟ್ಟು ಆದಾಯದ ಸ್ವಯಂ ಘೋಷಣಾ ಪತ್ರಗಳನ್ನು ಪಡೆಯುತ್ತಾರೆ. ಆಧರೆ ಅಂತಹ ಪ್ರಮಾಣ ಪತ್ರವನ್ನು ಪಡೆಯುವಂತಹ ಯಾವುದೇ ನಿಗದಿತ ನಮೂನೆ ಇರುವುದಿಲ್ಲ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಯಾವುದೇ ಕುಟುಂಬದ ಆದಾಯ ನಿರ್ಧರಣೆಯ ವಿಷಯವು ಎಲ್ಲಾ ಸಂಭವನೀಯ ಮೂಲಗಳಿಂದ ಗಳಿಸುವ ಆದಾಯದ ಆಧಾರದ ಮೇಲಿರತಕ್ಕದ್ದೇ ಹೊರತು ರಾಜಸ್ವ ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರು ಸ್ಥಳ ಪರಿಶೀಲನೆಯನ್ನು ಅನುಸರಿಸುವ ವಿಧಾನದಿಂದಲ್ಲ. ಸಾಧ್ಯವಾದ ಎಲ್ಲಾ ಮೂಲಗಳ ಆದಾಯ ಮತ್ತು ಅವರಿಂದ ಸ್ವೀಕರಿಸಲಾದ ಆದಾಯವು ಅರ್ಜಿದಾರನ ಮೇಲೆ ಪೂರ್ಣ ಮತ್ತು ನಿಖರ ಮಾಹಿತಿಯನ್ನು ನೀಡುವ ಹೊಣೆಗಾರಿಕೆಯು ವರ್ಗಾವಣೆ ಆಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

‘ಈ ತಂತ್ರಾಂಶವನ್ನು ಆಧಾರ್‌ ಕಾರ್ಡ್‌, ವಯಸ್ಸಿನ ವಿವರಗಳು, ವಿಳಾಸ ಇತ್ಯಾದಿಗಳಂತಹ ಲಭ್ಯ ಮಾಹಿತಿಯನ್ನು ಪಡೆಯುವ ಸಲುವಾಗಿ ವಿವಿಧ ದತ್ತಾಂಶಗಳಿಂದ ಸಮಗ್ರೀಕರಣಗೊಳಿಸತಕ್ಕದ್ದು. ಹೊಂದಿರುವ ಭೂ ಹಿಡುವಳಿಯ ವಿವರಗಳನ್ನು ಭೂಮಿ/ಫ್ರೂಟ್ಸ್‌ ದತ್ತಾಂಶಗಳಿಂದ, ವಾಹನಗಳ ವಿವರಗಳನ್ನು ವಾಣಿಜ್ಯ ತೆರಿಗೆ ಇಲಾಖೆಯಿಂದ ಪಾವತಿ ಮಾಡಲಾದ ಜಿಎಸ್‌ಟಿ ವಿವರವನ್ನು, ಬ್ಯಾಂಕ್‌ಗಳು ಒದಗಿಸಲು ಒಪ್ಪಿದಲ್ಲಿ ಬ್ಯಾಂಕ್‌ಗಳ ವಿವರಗಳನ್ನು, ಒಂದು ವೇಳೆ ರಾಜ್ಯ ಸರ್ಕಾರಿ ನೌಕರನಾಗಿದ್ದಲ್ಲಿ ವೇತನದ ವಿವರಗಳನ್ನು ಎಚ್‌ಆರ್‌ಎಂಎಸ್‌ ಮೂಲಕ ಮತ್ತು ಪಿಂಚಣಿ ಕುರಿತಾದ ಮಾಹಿತಿಯನ್ನು ಆರ್ಥಿಕ ಇಲಾಖೆಯಿಂದ ಪಡೆಯಬಹುದು. ಒಂದು ವೇಳೆ ಈ ದತ್ತಾಂಶಗಳನ್ನು ತತ್‌ಕ್ಷಣ ಜೋಡಣೆ ಮಾಡದಿದ್ದಲ್ಲಿ ಅಂತಹ ಮಾಹಿತಿಯನ್ನು ಸ್ವಯಂ ಘೋಷಣೆಯಾಗಿ ಪಡೆಯಬೇಕು,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಸ್ವಯಂ ಘೋಷಣೆ ಪತ್ರದ ನಮೂನೆಯಲ್ಲೇನಿದೆ?

ಅರ್ಜಿದಾರರ ಹೆಸರು, ಪಡಿತರ ಚೀಟಿ ಸಂಖ್ಯೆ, ಪಾನ್‌ ಕಾರ್ಡ್‌ ಸಂಖ್ಯೆ, ಕುಟುಂಬ ಸದಸ್ಯರ ಹೆಸರುಗಳು, ಅರ್ಜಿದಾರನ ಉದ್ಯೋಗ, ಕೃಷಿ ಭೂಮಿ ವಿವರ( ಖುಷ್ಕಿ, ತರಿ, ಭಾಗಾಯ್ತು, ಪ್ಲಾಂಟೇಷನ್‌, ವಾಸದ ಕಟ್ಟಡಗಳು , ವಾಣಿಜ್ಯ ಕಟ್ಟಡಗಳ ವಿವರ, (ಖಾತ ಸಂಖ್ಯೆ, ವಿಸ್ತೀರ್ಣ, ಆದಾಯ) ವಿಧಿಸಿರುವ ವಾರ್ಷಿಕ ಆಸ್ತಿ ತೆರಿಗೆ, ಕುಟುಂಬದ ಚರ ಆಸ್ತಿಯ ವಿವರ (ಪ್ರಯಾಣಿಕರ ಸಾಗಾಣಿಕೆ ವಾಹನ, ಸರಕು ಸಾಗಾಣಿಕೆ ವಾಹನ), ಬ್ಯಾಂಕ್/ ಸಹಕಾರ ಸಂಘಗಳ ಹೂಡಿಕೆಗಳು/ ಖಾತೆಗಳ ಮೇಲಿನ ಬಡ್ಡಿ ಆದಾಯ, ಸ್ಥಿರಾಸ್ತಿ, (ಕೃಷಿ, ಬಾಡಿಗೆ ಇತ್ಯಾದಿ) ಮೂಲದಿಂದ ಒಟ್ಟು ವಾರ್ಷಿಕ ಆದಾಯ, ಉದ್ಯೋಗ/ಸ್ವಯಂ ಉದ್ಯೋಗದಿಂದ ಆದಾಯ, ಚರ ಆಸ್ತಿಗಳಿಂದ ಆದಾಯ, ಕಳೆದ 3 ಸಾಲುಗಳಲ್ಲಿ ಆದಾಯ ತೆರಿಗೆ ರಿಟರ್ನ್ ವಿವರ ಒಳಗೊಂಡಿದೆ.

ಒಟ್ಟು ಆದಾಯವನ್ನು ಮಾತ್ರ ವರದಿ ಮಾಡಿದಲ್ಲಿ ಆದಾಯದ ಅನೇಕ ಅಂಶಗಳು ತಪ್ಪಬಹುದು ಅಥವಾ ಎಣಿಕೆಗೆ ಬಾರದಿರಬಹುದು. ಕಂದಾಯ ಇಲಾಖೆಗೆ ಅದರ ಸೀಮಿತ ಸಂಖ್ಯೆಯ ಸಿಬ್ಬಂದಿ, ಸಮಯಾಭಾವ ಮತ್ತು ಸಂಪನ್ಮೂಲಗಳ ಕಾರಣದಿಂದಾಗಿ ಎಲ್ಲಾ ವಿಧಗಳ ಆದಾಯಗಳನ್ನು ನಿರ್ಣಯಿಸಲು ಮತ್ತು ವರದಿಯನ್ನು ಸಲ್ಲಿಸಲು ಆದಾಯ ತೆರಿಗೆ ಇಲಾಖೆಗೆ ಸಾಧ್ಯವಾಗದಿರಬಹುದು. ಕಂದಾಯ ಇಲಾಖೆಗೆ ಸ್ವಯಂ ಘೋಷಣೆಯಾಗಿ ಒಂದು ಸಮಗ್ರ ವರದಿ ನೀಡಲು ಕಾರ್ಯಸಾಧ್ಯವಾಗುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.

ಯಾವುದೇ ಕುಟುಂಬದ ಆದಾಯ ನಿರ್ಧರಣೆಯ ವಿಷಯವು ಎಲ್ಲಾ ಸಂಭವನೀಯ ಮೂಲಗಳಿಂದ ಗಳಿಸುವ ಆದಾಯದ ಆಧಾರದ ಮೇಲಿರತಕ್ಕದ್ದೇ ಹೊರತು ರಾಜಸ್ವ ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರು ಸ್ಥಳ ಪರಿಶೀಲನೆಯನ್ನು ಅನುಸರಿಸುವ ವಿಧಾನದಿಂದಲ್ಲ. ಸಾಧ್ಯವಾದ ಎಲ್ಲಾ ಮೂಲಗಳ ಆದಾಯ ಮತ್ತು ಅವರಿಂದ ಸ್ವೀಕರಿಸಲಾದ ಆದಾಯವು ಅರ್ಜಿದಾರನ ಮೇಲೆ ಪೂರ್ಣ ಮತ್ತು ನಿಖರ ಮಾಹಿತಿಯನ್ನು ನೀಡುವ ಹೊಣೆಗಾರಿಕೆಯು ವರ್ಗಾವಣೆ ಆಗುತ್ತದೆ ಎಂದು ವರದಿ ಹೇಳಿದೆ.

the fil favicon

SUPPORT THE FILE

Latest News

Related Posts