ಐಜಿ ಚಂದ್ರಶೇಖರ್‌, ಸತ್ಯವತಿ ಸೇರಿ 64 ಅಧಿಕಾರಿಗಳ ಬಳಿ ಸ್ಥಿರಾಸ್ತಿಯೇ ಇಲ್ಲ

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ ಸತ್ಯವತಿ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ, ಕೇಂದ್ರ ವಲಯದ ಐಜಿಪಿ ಎಂ ಚಂದ್ರಶೇಖರ್‌, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್‌, ಪದವಿಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕಿ ಸ್ನೇಹಲ್‌ ಆರ್‌ ಸೇರಿದಂತೆ ಒಟ್ಟು 64 ಐಎಎಸ್‌, ಐಪಿಎಸ್‌ ಅಧಿಕಾರಿಗಳು ಒಂದೇ ಒಂದು ಸ್ಥಿರಾಸ್ತಿಯನ್ನೂ ಹೊಂದಿಲ್ಲ.

ಕರ್ನಾಟಕ ಶ್ರೇಣಿಯ ಒಟ್ಟು ಐಎಎಸ್‌ ಅಧಿಕಾರಿಗಳ ಪೈಕಿ 198 ಅಧಿಕಾರಿಗಳು ವಾರ್ಷಿಕ ಸ್ಥಿರಾಸ್ತಿಯನ್ನ ಘೋಷಿಸಿದ್ದಾರೆ. ಈ ಪೈಕಿ 36 ಐಎಎಸ್‌ ಅಧಿಕಾರಿಗಳು ತಮ್ಮ ಬಳಿ ಸ್ಥಿರಾಸ್ತಿಯೇ ಇಲ್ಲ ಎಂದು ಘೋಷಿಸಿರುವುದು ತಿಳಿದು ಬಂದಿದೆ. ಕರ್ನಾಟಕ ಲೋಕಸೇವಾ ಆಯೋಗ ಕಾರ್ಯದರ್ಶಿ ಜಿ ಸತ್ಯವತಿ ಅವರು ಸಹ ಈ ಪಟ್ಟಿಯಲ್ಲಿದ್ದಾರೆ.

ಅದೇ ರೀತಿ ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕಿ ಸ್ನೇಹಲ್‌ ಆರ್‌ ಅವರ ಬಳಿಯೂ ಒಂದೇ ಒಂದು ಸ್ಥಿರಾಸ್ತಿ ಇಲ್ಲದಿರುವುದು ಘೋಷಣಾ ಪತ್ರದಿಂದ ತಿಳಿದು ಬಂದಿದೆ.

ಸ್ಥಿರಾಸ್ತಿ ವಿವರಗಳನ್ನು ಸಲ್ಲಿಸಿರುವ 150 ಐಪಿಎಸ್‌ ಅಧಿಕಾರಿಗಳ ಪೈಕಿ 29 ಐಪಿಎಸ್‌ ಅಧಿಕಾರಿಗಳ ಬಳಿಯೂ ಒಂದೇ ಒಂದು ಸ್ಥಿರಾಸ್ತಿಯೂ ಇಲ್ಲ. ಈ ಅಧಿಕಾರಿಗಳು ಸಲ್ಲಿಸಿರುವ ವಾರ್ಷಿಕ ಸ್ಥಿರಾಸ್ತಿ ಘೋಷಣಾ ಪತ್ರಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳು 2021ರ ಜನವರಿ ಅಂತ್ಯಕ್ಕೆ ಸಲ್ಲಿಸಿರುವ ಸ್ಥಿರಾಸ್ತಿ ಘೋಷಣಾ ಪ್ರಮಾಣಪತ್ರಗಳ ಪ್ರಕಾರ 62 ಅಧಿಕಾರಿಗಳ ಪೈಕಿ ಕೆಲ ಅಧಿಕಾರಿಗಳು ಘೋಷಣೆ ಮಾಡುವ ನಮೂನೆಯಲ್ಲಿ ಏನನ್ನೂ ಭರ್ತಿ  ಮಾಡದೆಯೇ ಖಾಲಿ ನಮೂನೆಗಳನ್ನು ಸಿಬ್ಬಂದಿ ಆಡಳಿತ ತರಬೇತಿ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಿರುವುದು ತಿಳಿದು ಬಂದಿದೆ.

ಕಳೆದ 10 ವರ್ಷಗಳಿಂದಲೂ ಅಖಿಲಭಾರತ ಸೇವೆಯಲ್ಲಿರುವ ಹಲವು ಅಧಿಕಾರಿಗಳೂ ತಮ್ಮ ಬಳಿ ಒಂದೇ ಒಂದು ಸ್ಥಿರಾಸ್ತಿಯೂ ಇಲ್ಲ ಎಂದು ಘೋಷಿಸಿರುವುದು ಪಟ್ಟಿಯಿಂದ ಗೊತ್ತಾಗಿದೆ. ಈ ಪಟ್ಟಿಯಲ್ಲಿ ಐಜಿಪಿ ಚಂದ್ರಶೇಖರ್‌ ಕೂಡ ಇದ್ದಾರೆ.

ಐಎಎಸ್‌ಗಳ ಪಟ್ಟಿ

ಡಾ ರಿಚರ್ಡ್‌ ವಿನ್ಸಂಟ್‌ ಡಿ ಸೋಜ (2000)
ಜಿ ಸತ್ಯವತಿ (2004)
ದೀಪಾ ಎಂ (2008) (ನಮೂನೆ ಭರ್ತಿ ಮಾಡಿಲ್ಲ)
ಕೃಷ್ಣ ಬಾಜಪೇಯಿ (2010)
ವೆಂಕಟೇಶ್‌ಕುಮಾರ್ ಆರ್‌ (2010)
ಯಶವಂತ ವಿ (2010)
ಸ್ನೇಹಲ್‌ ಆರ್‌ (2013)
ಬಿ ಫೌಜಿಯಾ ತರನಮ್‌ (2015)
ಶಿಲ್ಪಾ ಶರ್ಮಾ (2015)
ನಿತೀಶ್‌ ಕೆ (2015)
ಆನಂದ್ ಕೆ (2016)
ಜ್ಞಾನೇಂದ್ರಕುಮಾರ್‌ ಗಂಗ್ವಾರ್‌ (2016)
ಮೊಹಮ್ಮದ್‌ ಇಕ್ರಮುಲ್ಲಾ ಶರೀಫ್‌ (2016)
ನಂದಿನಿದೇವಿ (2017)
ನವೀನ್ ಭಟ್‌ (2017)
ಪ್ರಿಯಾಂಗ ಎಂ (2017)
ಶೈಕ್‌ ತನ್ವೀರ್‌ ಆಸೀಫ್‌ (2017)
ಎಸ್‌ ಉಕೇಶ್‌ಕುಮಾರ್‌ (2018)
ಆಕೃತಿ ಬನ್ಸಾಲ್‌ (2018)
ಬಡೋಲೆ ಗಿರೀಶ್‌ ದಿಲೀಪ್ (2018)
ಈಶ್ವರ್‌ಕುಮಾರ್‌ ಖಂಡೂ (2018)
ಗರೀಮಾ ಪನ್ವರ್‌ (2018)
ಗೋಪಾಲಕೃಷ್ಣ ಬಿ (2018)
ರಾಹುಲ್‌ ಶಿಂಧೆ (2018)
ಮೋನಾ ರೋಟ್‌ (2019)
ಪ್ರತೀಕ್‌ ಬಯಾಲ್‌ (2019)
ರಾಹುಲ್‌ ಶರಣಪ್ಪ ಸಂಕನೂರ್‌ (2019)
ರೋಹನ್‌ ಜಗದೀಶ್‌ (2019)
ವರ್ನಿತ್‌ ನೇಗಿ (2019)
ಅಶ್ವಿಜಾ ಬಿ ವಿ (2019)
ಹೇಮಂತ್‌ ಎನ್‌ (2020)
ಲವೀಶ್‌ ಓರ್ಡಿಯಾ (2020)
ರಿಶಿ ಆನಂದ್‌ (2020)
ಶಿಂಧೆ ಅವಿನಾಶ್‌ ಸಂಜೀವನ್‌ (2020)
ಆನಂದ ಪ್ರಕಾಶ ಮೀನಾ
ಮೊಹದ್‌ ಅಲಿ ಆಕ್ರಮ್‌ ಶಾ

ಐಪಿಎಸ್‌ ಅಧಿಕಾರಿಗಳ ಪಟ್ಟಿ

ಎಂ ಚಂದ್ರಶೇಖರ್‌ (1998)
ಶಂತನು ಸಿನ್ಹಾ (2009)
ವರ್ತಿಕಾ ಕಟಿಯಾರ್‌ (2010)
ಜಿ ಸಂಗೀತಾ (2011)
ಟಿ ಶ್ರೀಧರ್‌ (2012)
ರಿಷ್ಯಂತ್‌ ಸಿ ಬಿ (2013)
ಅಬ್ದುಲ್‌ ಅಹದ್‌
ಎಸ್‌ ಗಿರೀಶ್‌
ಡಾ ಅರುಣ್‌ ಕೆ (2014)
ಲಕ್ಷ್ಮಣ ನಿಂಬರಗಿ (2014)
ಅರುಣ್‌ಅಂಗುಶ್‌ಗಿರಿ (2015)
ಲೋಕೇಶ್‌ ಭರಮಪ್ಪ ಜಗಲಾಸರ್‌ (2015)
ಸಿಮಿ ಮರಿಯಮ್‌ ಜಾರ್ಜ್‌ (2015)
ಪಿ ಕೃಷ್ಣಕಾಂತ್‌ (2016)
ಶ್ರೀನಿವಾಸ ಗೌಡ ಆರ್‌ (2016)
ಯತೀಶ್‌ ಎನ್‌ (2016)
ಅಡ್ಡೂರು ಶ್ರೀನಿವಾಸಲು (2017)
ಹರಿರಾಮ್‌ ಶಂಕರ್‌ (2017)
ನಿಖಿಲ್‌ ಬಿ (2017)
ಕನ್ನಿಕಾ ಸಿಕ್ರಿವಾಲ್‌ (2018)
ಪೃಥ್ವಿಕ್ ಶಂಕರ್‌ (2018)
ಸಾಹಿಲ್‌ ಬಾಗ್ಲಾ (2018)
ಶಿವಾಂಶು ರಜಪೂತ್‌ (2019)
ಸಿದ್ಧಾರ್ಥ್ ಗೋಯಲ್‌ (2019)
ಜಿತೇಂದ್ರಕುಮಾರ್‌ ದಯಾಮಾ (2019)
ಕಪಿಲ್‌ ಚೌಧುರಿ (2019)
ಮಿಥುನ್‌ ಎಸ್‌ (2020)
ಕಲಾ ಕೃಷ್ಣಸ್ವಾಮಿ

ಸೇವಾ (ನಡತೆ) ನಿಯಮಗಳು–1968ರ ಪ್ರಕಾರ, ಅಖಿಲ ಭಾರತ ಸೇವೆಯಲ್ಲಿರುವ ಅಧಿಕಾರಿಗಳೆಲ್ಲರೂ ಪ್ರತಿ ವರ್ಷ ತಮ್ಮ ವಾರ್ಷಿಕ ಸ್ಥಿರಾಸ್ತಿಗಳ ವಿವರವನ್ನು ಸರ್ಕಾರಕ್ಕೆ ಸಲ್ಲಿಸಬೇಕು. 2020 ಆಸ್ತಿ ವಿವರವನ್ನು 2021ರ ಜನವರಿ ಅಂತ್ಯದೊಳಗೆ ಸಲ್ಲಿಸಬೇಕು. ಆಸ್ತಿ ವಿವರ ಸಲ್ಲಿಸಲು ಆನ್​ಲೈನ್ ವ್ಯವಸ್ಥೆ ಮಾಡಿದರೂ ಸಹ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬಂದಿದೆ.

ಸ್ಥಿರಾಸ್ತಿ ವಿವರ ಸಲ್ಲಿಕೆ ಮಾಡುವಲ್ಲಿ ಐಪಿಎಸ್ ಅಧಿಕಾರಿಗಳು ಹೆಚ್ಚಿಗೆ ಹಿಂದೇಟು ಹಾಕುತ್ತಿರುವುದು ಮುಂದುವರಿದಿದೆ. ಆಸ್ತಿ ವಿವರ ಸಲ್ಲಿಸದ ಅಧಿಕಾರಿಗಳ ಭಡ್ತಿ ಮತ್ತಿತರ ವೃತ್ತಿ ಸಂಬಂಧಿ ಅಂಶಗಳನ್ನು ತಡೆಹಿಡಿಯಲು ಸರ್ಕಾರಕ್ಕೆ ಅವಕಾಶವಿದೆ. ನಿಯಮಗಳ ಪ್ರಕಾರ, ದೇಶದ ಎಲ್ಲ ನಾಗರಿಕ ಸೇವಾ ಅಧಿಕಾರಿಗಳು ಪ್ರತಿ ವರ್ಷ ತಮ್ಮ ಸ್ಥಿರಾಸ್ತಿ ಹಾಗೂ ತಮ್ಮ ಭೋಗ್ಯದಲ್ಲಿರುವ ವಸ್ತುಗಳ ವಿವರವನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು.

ಅಲ್ಲದೆ ಕೈಯಲ್ಲಿರುವ ನಗದು, ಬ್ಯಾಂಕ್ ಠೇವಣಿ, ಬಾಂಡ್, ಡಿಬೆಂಚರ್, ಷೇರು, ಮ್ಯೂಚುಯಲ್ ಫಂಡ್‌ ಗಳಲ್ಲಿನ ಹೂಡಿಕೆ, ವಿಮೆ, ಫ್ರಾವಿಡೆಂಡ್ ಫಂಟ್, ವೈಯಕ್ತಿಕ ಸಾಲ, ಬೇರೆ ವ್ಯಕ್ತಿಗಳಿಗೆ ನೀಡಿರುವ ಸಾಲ ಮುಂತಾದ ವಿವರಗಳನ್ನು ಸಲ್ಲಿಸಬೇಕು. ಉದ್ಯೋಗಿಗಳು ಹೊಸ ನಿಯಮದಂತೆ ಹೊಂದಿರುವ ವಾಹನ ವಾಹನ ಚಿನ್ನಬೆಳ್ಳಿ ಆಭರಣಗಳು, ಗಟ್ಟಿಗಳ ವಿವರಗಳನ್ನು ಘೋಷಿಸಬೇಕು.

ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳು ಆಯಾ ವರ್ಷದ ಆಸ್ತಿ ವಿವರವನ್ನು ಮುಂದಿನ ವರ್ಷದ ಜನವರಿ ಅಂತ್ಯದೊಳಗೆ ಸಲ್ಲಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅವರಿಗೆ ಬಡ್ತಿ ಹಾಗೂ ಹಿರಿಯ ಹುದ್ದೆಗಳಿಗೆ ನೇಮಕವನ್ನು ತಡೆಯುವ ಸಾಧ್ಯತೆ ಇರುತ್ತದೆ.

the fil favicon

SUPPORT THE FILE

Latest News

Related Posts