137 ತಾಲೂಕುಗಳಲ್ಲಿ ಕೋವಿಡ್‌ ನಿಯಂತ್ರಣದಲ್ಲಿಲ್ಲ, 44 ತಾಲೂಕುಗಳಲ್ಲಿ ಶೇ.20ಕ್ಕಿಂತಲೂ ಹೆಚ್ಚಿನ ದರ

ಬೆಂಗಳೂರು; ರಾಜ್ಯದ ಹಲವೆಡೆ ಕೋವಿಡ್‌ 19 ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿನಿಧಿಸುವ ಶಿಕಾರಿಪುರ ತಾಲೂಕು ಸೇರಿದಂತೆ ರಾಜ್ಯದ ಒಟ್ಟು 137 ತಾಲೂಕುಗಳಲ್ಲಿ ಶೇ. 5ರಿಂದ 30ರವರೆಗೆ ಖಚಿತ ಪ್ರಕರಣಗಳ ದರವಿದೆ.

ಇದೇ ಜೂನ್‌ 14ರಂದು ಕೊನೆಗೊಳ್ಳುವ ಲಾಕ್‌ಡೌನ್‌ ಅವಧಿಯನ್ನು ವಿಸ್ತರಿಸಬೇಕೇ ಬೇಡವೇ ಎಂಬ ಬಗ್ಗೆ ರಾಜ್ಯ ಸರ್ಕಾರವು ಜಿಲ್ಲಾಧಿಕಾರಿಗಳೊಂದಿಗೆ ನಾಳೆ ಸಭೆ ನಡೆಸಲು ಮುಂದಾಗಿರುವ ಹೊತ್ತಿನಲ್ಲೇ 137 ತಾಲೂಕುಗಳು ರಾಜ್ಯದ 137 ತಾಲೂಕುಗಳಲ್ಲಿ ಖಚಿತ ಪ್ರಕರಣಗಳ ದರವು ಶೇ.5ರೊಳಗಿನ ವ್ಯಾಪ್ತಿಯೊಳಗೆ ಬಂದಿಲ್ಲ ಎಂಬ ಮಾಹಿತಿಯು ಮುನ್ನೆಲೆಗೆ ಬಂದಿದೆ

ಜೂನ್‌ 5ಕ್ಕೆ ಕೊನೆಗೊಂಡಂತೆ ಖಚಿತ ಪ್ರಕರಣಗಳ ದರದ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪಟ್ಟಿಯನ್ನು ಸಿದ್ಧಪಡಿಸಿದೆ. ಈ ಪಟ್ಟಿಯ ಪ್ರಕಾರ 43 ತಾಲೂಕುಗಳಲ್ಲಿ ಶೇ.5ರಿಂದ 10ರವರೆಗೆ ಖಚಿತ ಪ್ರಕರಣಗಳ ದರವಿದೆ. ಅದೇ ರೀತಿ ಶೇ.10ರಿಂದ 15ರವರೆಗೆ 35 ತಾಲೂಕುಗಳು, ಶೇ.15ರಿಂದ 20ರವರೆಗೆ 24 ತಾಲೂಕುಗಳು, ಶೇ.20ರಿಂದ 25ರವರೆಗೆ 20 ತಾಲೂಕು, ಶೇ.25ರಿಂದ 30ರವರೆಗೆ 6, ಮತ್ತು 9 ತಾಲೂಕುಗಳಲ್ಲಿ ಶೇ.30ಕ್ಕಿಂತ ಹೆಚ್ಚಿನ ದರವಿರುವುದು ಪಟ್ಟಿಯಿಂದ ತಿಳಿದು ಬಂದಿದೆ. ಈ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಮೇ 31ಕ್ಕೆ ಕೊನೆಗೊಂಡಂತೆ 25 ತಾಲೂಕುಗಳಲ್ಲಿ ಶೇ.30ಕ್ಕಿಂತಲೂ ಹೆಚ್ಚಿನ ದರವಿದ್ದರೆ ಜೂನ್‌ 5 ಕೊನೆಗೊಂಡಂತೆ 9 ತಾಲೂಕುಗಳಲ್ಲಿ ಮಾತ್ರ ಶೇ.30ಕ್ಕಿಂತಲೂ ಹೆಚ್ಚಿನ ದರವಿದೆ. ರಾಯಭಾಗ (ಬೆಳಗಾವಿ) ದೊಡ್ಡಬಳ್ಳಾಪುರ ( ಬೆಂಗಳೂರು ಗ್ರಾಮಾಂತರ ), ಎನ್‌ ಆರ್‌ ಪುರ (ಚಿಕ್ಕಮಗಳೂರು), ಚನ್ನಗಿರಿ, ಹರಿಹರ, ಹೊನ್ನಾಳಿ (ದಾವಣಗೆರೆ) ಶಿವಮೊಗ್ಗ, ಭದ್ರಾವತಿ (ಶಿವಮೊಗ್ಗ) ತಾಲೂಕಿನಲ್ಲಿ ಶೇ.30ಕ್ಕಿಂತಲೂ ಹೆಚ್ಚಿನ ದರವಿರುವುದು ಪಟ್ಟಿಯಿಂದ ಗೊತ್ತಾಗಿದೆ.

ಉತ್ತರ ಕನ್ನಡ, ಕೋಲಾರ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಹಾಸನ, ಮಂಡ್ಯ, ವಿಜಯಪುರ, ಯಾದಗಿರಿ, ಚಿಕ್ಕಮಗಳೂರು, ರಾಮನಗರ, ಮತ್ತು ಮೈಸೂರು ಜಿಲ್ಲೆಯ ಒಟ್ಟು 25 ತಾಲೂಕುಗಳಲ್ಲಿ ಮೇ 31ಕ್ಕೆ ಕೊನೆಗೊಂಡಂತೆ ಕೋವಿಡ್‌ 19 ಸೋಂಕಿನ ಖಚಿತ ಪ್ರಕರಣಗಳ ದರವು ಶೇ.30ಕ್ಕಿಂತಲೂ ಹೆಚ್ಚಿತ್ತು.

ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿನಿಧಿಸುವ ಶಿಕಾರಿಪುರ ತಾಲೂಕು ಸೇರಿದಂತೆ ಒಟ್ಟು 6 ತಾಲೂಕುಗಳಲ್ಲಿ ಕೋವಿಡ್‌ ಖಚಿತಪಟ್ಟ ಪ್ರಕರಣಗಳ ದರವು ಶೇ.25ರಿಂದ ಶೇ.30ರವರೆಗಿದೆ. ಉಳಿದಂತೆ ಯಳಂದೂರು (ಚಾಮರಾಜನಗರ), ಕೊಪ್ಪ (ಚಿಕ್ಕಮಗಳೂರು) ಮೊಳಕಾಲ್ಮೂರು (ಚಿತ್ರದುರ್ಗ), ಸುಳ್ಯ , ಪುತ್ತೂರು (ದಕ್ಷಿಣ ಕನ್ನಡ) ತಾಲೂಕು ಈ ಪಟ್ಟಿಯಲ್ಲಿವೆ.

ಶೇ.20ರಿಂದ 25ವರೆಗಿನ ತಾಲೂಕುಗಳ ಪಟ್ಟಿ

ಚಿಕ್ಕೋಡಿ (ಬೆಳಗಾವಿ), ಹೊಸಕೋಟೆ (ಬೆಂಗಳೂರು ಗ್ರಾಮಾಂತರ), ಚಾಮರಾಜನಗರ, ಗುಂಡ್ಲುಪೇಟೆ (ಚಾಮರಾಜನಗರ), ಚಿಕ್ಕಮಗಳೂರು, ಹಿರಿಯೂರು (ಚಿತ್ರದುರ್ಗ), ದಾವಣಗೆರೆ, ಅರಕಲಗೂಡು (ಹಾಸನ), ಮುಳಬಾಗಲು (ಕೋಲಾರ), ಮದ್ದೂರು, ಮಂಡ್ಯ,ಕೃಷ್ಣರಾಜಪೇಟೆ (ಮಂಡ್ಯ), ಹುಣಸೂರು (ಮೈಸೂರು), ಹೊಸನಗರ (ಶಿವಮೊಗ್ಗ) ತಾಲೂಕಿನಲ್ಲಿ ಕೋವಿಡ್‌ ಖಚಿತಪಟ್ಟ ಪ್ರಕರಣಗಳ ದರವು ಶೇ.20ರಿಂದ 25ರವರೆಗಿದೆ.

ಶೇ.15ರಿಂದ 20

ಬೆಳಗಾವಿ, ಹನೂರು, ಕೊಳ್ಳೇಗಾಲ, ಶೃಂಗೇರಿ, ಹೊಸದುರ್ಗ, ಮಂಗಳೂರು, ಬೆಳ್ತಂಗಡಿ, ಜಗಳೂರು, ಧಾರವಾಡ, ಹೊಳೆನರಸೀಪುರ, ಮಡಿಕೇರಿ, ಸೋಮವಾರಪೇಟೆ, ಕೆಜಿಎಫ್‌, ಕೋಲಾರ, ಶ್ರೀನಿವಾಸಪುರ, ಯಲ್ಬುರ್ಗಾ, ಮಳವಳ್ಳಿ, ಶ್ರೀರಂಗಪಟ್ಟಣ, ಮೈಸೂರು, ತೀರ್ಥಹಳ್ಳಿ, ಸೊರಬ, ಶಿರಾ, ತುಮಕೂರು, ಅಂಕೋಲಾ ತಾಲೂಕಿನಲ್ಲಿ ಕೋವಿಡ್‌ ಖಚಿತಪಟ್ಟ ಪ್ರಕರಣಗಳ ದರವು ಶೇ.15ರಿಂದ 20ರವರೆಗಿದೆ.

ಶೇ.10ರಿಂದ 15

ಮುಧೋಳ, ಬಾಗಲಕೋಟೆ, ಬಳ್ಳಾರಿ, ಕೂಡ್ಲಿಗಿ, ಹೊಸಪೇಟೆ, ಅಥಣಿ, ಗೋಕಾಕ್‌, ಹುಕ್ಕೇರಿ, ನೆಲಮಂಗಲ, ಚಿಂತಾಮಣಿ ಹೊಳಲ್ಕೆರೆ, ಬಂಟ್ವಾಳ, ಹುಬ್ಬಳ್ಳಿ, ಮುಂಡರಗಿ, ಹಾಸನ, ಅರಸಿಕೆರೆ, ಮಾಲೂರು, ಗಂಗಾವತಿ, ಕೆ ಆರ್‌ ನಗರ, ಪಿರಿಯಾಪಟ್ಟಣ, ಎಚ್‌ ಡಿ ಕೋಟೆ, ಸಿಂಧನೂರು, ಸಶಾಗರ, ತುರುವೆಕೆರೆ, ಕೊರಟಗೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ಮಧುಗಿರಿ, ಕುಂದಾಪುರ, ಉಡುಪಿ, ಕಾರವಾರ, ಹೊನ್ನಾವರ, ಬಸವನ ಬಾಗೇವಾಡಿ,ಇಂಡಿ

ಶೇ.5ರಿಂದ 10

ಜಮಖಂಡಿ, ಹುನಗುಂದ, ಬಾದಾಮಿ, ಹಗರಿಬೊಮ್ಮನಹಳ್ಳಿ, ಸಂಡೂರು, ಹಡಗಲಿ, ಹರಪನಹಳ್ಳಿ, ಖಾನಾಪುರ, ಸೌದತ್ತಿ, ರಾಮದುರ್ಗ, ದೇವನಹಳ್ಳಿ, ಆನೇಕಲ್‌, ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ, ಚಳ್ಳಕೆರೆ, ನವಲಗುಂದ, ಕುಂದಗೋಳ, ರೋಣ, ಗದಗ್‌, ಶಿರಹಟ್ಟಿ, ಬೇಲೂರು, ಸಕಲೇಶಪುರ, ಚನ್ನರಾಯಪಟ್ಟಣ, ವಿರಾಜಪೇಟೆ, ಕೊಪ್ಪಳ, ಕುಷ್ಟಗಿ, ಟಿ ನರಸೀಪುರ, ನಂಜನಗೂಡು, ಮಾನ್ವಿ, ಲಿಂಗಸುಗೂರು, ಕನಕಪುರ, ಕುಣಿಗಲ್‌, ಪಾವಗಡ, ಸಿದ್ದಾಪುರ, ಮುಂಡಗೋಡ, ಹಳಿಯಾಳ, ಭಾಲ್ಕಿ, ವಿಜಯಪುರ, ಸಿಂಧಗಿ, ಮುದ್ದೇಬಿಹಾಳ.

ಲಾಕ್‌ಡೌನ್‌ ಜಾರಿಗೊಳಿಸಿದ ದಿನದಿಂದ ಈವರೆವಿಗೆ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಹಲವು ಸಚಿವರು ಪ್ರತಿಪಾದಿಸುತ್ತಿದ್ದಾರಾದರೂ ಒಟ್ಟಾರೆ 137 ತಾಲೂಕುಗಳಲ್ಲಿ ಕೋವಿಡ್‌ ಸೋಂಕಿನ ಖಚಿತ ಪ್ರಕರಣಗಳ ದರ ಶೇ.5ಕ್ಕೆ ಇಳಿದಿಲ್ಲ ಎಂಬುದು ಲಾಕ್‌ಡೌನ್‌ ಮಾರ್ಗಸೂಚಿಗಳು ಪರಿಣಾಮಕಾರಿಯಾಗಿ ಪಾಲನೆಯಾಗಿಲ್ಲ ಎಂಬುದಕ್ಕೆ ಕೈಗನ್ನಡಿಯಾಗಿದೆ.

the fil favicon

SUPPORT THE FILE

Latest News

Related Posts