ಎಸ್‌ ಎಸ್‌ ಮಾಲ್‌ ; ಭಾರೀ ವಿದ್ಯುತ್‌ ವಾಹಕಗಳಿದ್ದರೂ ವಿನ್ಯಾಸದ ಅನುಮೋದನೆಗೆ ಪತ್ರ

ಬೆಂಗಳೂರು; ಶಾಮನೂರು ಶಿವಶಂಕರಪ್ಪ ಪುತ್ರ ಎಸ್‌ ಎಸ್‌ ಗಣೇಶ್‌ ಮಾಲೀಕತ್ವದ ಎಸ್‌ ಎಸ್‌ ಮಾಲ್‌ಗಾಗಿ ಏಕ ನಿವೇಶನ ವಿನ್ಯಾಸ ಮಂಜೂರಾತಿ ವೇಳೆಯಲ್ಲಿ ಬೆಸ್ಕಾಂ ಅಧಿಕಾರಿಗಳು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರೊಂದಿಗೆ ಶಾಮೀಲಾಗಿದ್ದರು!

ಶಾಬನೂರು ಗ್ರಾಮದ ಸರ್ವೆ ನಂಬರ್‌ 73/1, 74/1, 76/1,2ರ ಪ್ರದೇಶಕ್ಕೆ ಅಂತಿಮ ಕೈಗಾರಿಕೆ ಏಕ ನಿವೇಶನದಲ್ಲಿ ಭಾರೀ ವಿದ್ಯುತ್‌ ವಾಹಕಗಳಿದ್ದರೂ ಅನುಮೋದನೆ ನೀಡಲಾಗಿತ್ತು. ಅಲ್ಲದೆ ಈ ಪ್ರದೇಶಕ್ಕೆ ಏಕ ನಿವೇಶನ ವಿನ್ಯಾಸ ನೀಡುವಾಗ ವಿನ್ಯಾಸದಲ್ಲಿ ವಿನ್ಯಾಸದಲ್ಲಿ ಭಾರೀ ವಿದ್ಯುತ್‌ ವಾಹಕವನ್ನು ಸೂಚಿಸದೇ ವಿನ್ಯಾಸವನ್ನು ಮಂಜೂರು ಮಾಡಬೇಕು ಎಂದು ಖುದ್ದು ಎಸ್‌ ಎಸ್‌ ಗಣೇಶ್‌ ಅವರು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಯುಕ್ತರ ಮೇಲೆ ಪತ್ರ ಮುಖೇನ ಒತ್ತಡ ಹೇರಿದ್ದರು!

ಗಣೇಶ್‌ ಬರೆದಿದ್ದ ಪತ್ರದಲ್ಲೇನಿತ್ತು?

ಸದರಿ ಜಮೀನಿನಲ್ಲಿ ಉತ್ತರ ಭಾಗದಲ್ಲಿರುವ ಭಾರೀ ವಿದ್ಯುತ್‌ ವಾಹಕವನ್ನು ಸ್ಥಳಾಂತರಿಸುವ ಸಂಬಂಧ ಹರಿಹರ ತಾಲೂಕು ಗುತ್ತೂರ್‌ನಲ್ಲಿರುವ ಬೆಸ್ಕಾಂ ಸಬ್‌ ಸ್ಟೇಷನ್‌ ಅಧಿಕಾರಿಗಳು ಈಗಾಗಲೇ ಸ್ಥಳ ತನಿಖೆ ಮಾಡಿ ಅಳತೆ ಕ್ರಮ ವಹಿಸುತ್ತಿದ್ದಾರೆ. ಆದ್ದರಿಂದ ಸದರಿ ಜಮೀನಿಗೆ ಅಂತಿಮ ಕೈಗಾರಿಕಾ ಏಕ ನಿವೇಶನ ವಿನ್ಯಾಸ ನೀಡುವಾಗ ವಿನ್ಯಾಸದಲ್ಲಿ ಭಾರೀ ವಿದ್ಯುತ್‌ ವಾಹಕವನ್ನು ಸೂಚಿಸದೇ ವಿನ್ಯಾಸವನ್ನು ಮಂಜೂರಾತಿ ನೀಡಬೇಕು,’ ಎಂದು ಎಸ್‌ ಎಸ್‌ ಗಣೇಶ್‌ ಅವರು 2014ರ ಆಗಸ್ಟ್‌ 20ರಂದು ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದ್ದರು. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಅಲ್ಲದೆ ಇದೇ ಜಾಗದಲ್ಲಿದ್ದ ಭಾರೀ ವಿದ್ಯುತ್‌ ವಾಹಕಗಳ ಕಂಬಗಳನ್ನು ಹೊಂದಿದ್ದ ರಸ್ತೆ ಕಬಳಿಸಲು ನೆರವಾದ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಕೆಯಾಗಿದ್ದರೂ ಆಗಿನ ಜಿಲ್ಲಾಧಿಕಾರಿ ಎಸ್‌ ಟಿ ಅಂಜನ್‌ಕುಮಾರ್‌ ಮತ್ತು ಪಾಲಿಕೆ ಆಯುಕ್ತರು ಒಂದೇ ಕ್ರಮ ಜರುಗಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಎಸ್‌ ಎಸ್‌ ಗಣೇಶ್ ಅವರು 9 ನಿವೇಶನಗಳನ್ನು ಖರೀದಿಸಿ ಅವುಗಳನ್ನು ಕಾನೂನು ಪ್ರಕಾರ ಏಕ ನಿವೇಶನ ಮಾಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರಾದರೂ ಹೈಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಈ ಸಂಬಂಧ ಎಸ್‌ ಎಸ್‌ ಗಣೇಶ್‌ ಅವರೇ ಕಾಲಾವಕಾಶ ಕೇಳಿದ್ದರು. ಒತ್ತುವರಿ ಆಗಿದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದರು. ಅಲ್ಲದೆ ಕಾಲಾವಕಾಶ ಪೂರ್ಣಗೊಂಡ ನಂತರ ಈವರೆವಿಗೂ ಒತ್ತುವರಿಯನ್ನು ತೆರವುಗೊಂಡಿಲ್ಲ.

ರಸ್ತೆಗಳು ಅನುಪಯುಕ್ತವಾಗಿವೆ ಮತ್ತು ಯಾವುದೇ ಅಭಿವೃದ್ಧಿ ಆಗಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಶಾಮನೂರು ಶಿವಶಂಕರಪ್ಪ ಪುತ್ರ ಎಸ್‌ ಎಸ್‌ ಗಣೇಶ್‌ ಮಾಲೀಕತ್ವದ ಎಸ್‌ ಎಸ್‌ ಮಾಲ್‌ಗಾಗಿ ವಸತಿ ವಿನ್ಯಾಸದಲ್ಲಿನ ನಿವೇಶನಗಳನ್ನು ಒಂದುಗೂಡಿಸಲು ದಾವಣಗೆರೆ ಮಹಾನಗರಪಾಲಿಕೆಯ ಹಿಂದಿನ ಆಯಕ್ತರು ಕೈಗಾರಿಕೆ ಉಪಯೋಗಕ್ಕೆ ಪರಿವರ್ತಿಸಲು ಅನುಮತಿ ನೀಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts