ಲಾಕ್‌ಡೌನ್‌ ಸಂಕಷ್ಟ; ಪರಿಶಿಷ್ಟ ಜಾತಿಯವರಲ್ಲಿ 3 ಪಟ್ಟು ಉದ್ಯೋಗ ನಷ್ಟ

ಬೆಂಗಳೂರು; ದೇಶದಾದ್ಯಂತ ಲಾಕ್‌ಡೌನ್‌ ನಂತರ ಉದ್ಯೋಗ ಕಳೆದುಕೊಂಡಿರುವ ಅಂದಾಜು 100-120 ದಶಲಕ್ಷದ ಪೈಕಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೂಡಿದ್ದಾರೆ ಎಂದು ಅಶೋಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕಿ ಅಶ್ವಿನಿ ದೇಶಪಾಂಡೆ ಅವರು ನಡೆಸಿರುವ ಸಂಶೋಧನೆ ಹೊರಗೆಡವಿದೆ.

ಆರ್ಥಿಕವಾಗಿ ದುರ್ಬಲ ವರ್ಗಗಳು ಮಾತ್ರವಲ್ಲದೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರ ಉದ್ಯೋಗದ ಮೇಲೆ ಲಾಕ್‌ಡೌನ್‌ ಹೆಚ್ಚಿನ ಪರಿಣಾಮ ಬೀರಿದೆ ಎಂದು ಇಂಡಿಯಾ ಸ್ಪೆಂಡ್‌ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚಿಸಿದ್ದಾರೆ.

ಲಾಕ್‌ಡೌನ್ ಪರಿಣಾಮಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗುಂಪುಗಳ ಮೇಲೆ ಪ್ರಭಾವ ಬೀರಿದೆ ಎಂದು ಹೇಳಿರುವ ಅವರು ಮೇಲ್ವರ್ಗಗಳಲ್ಲಿ ಕಂಡು ಬಂದಿರುವ ಉದ್ಯೋಗ ನಷ್ಟಕ್ಕಿಂತ ಈ ವರ್ಗಗಳಲ್ಲಿ ಮೂರುಪಟ್ಟು ಹೆಚ್ಚು ನಷ್ಟವಾಗಿದೆ ಎಂದು ಅಧ್ಯಯನ ಮೂಲಕ ವಿವರಿಸಿದ್ದಾರೆ.

ಶಿಕ್ಷಣ, ಉದ್ಯೋಗ, ಬಾಲ್ಯದ ಆರೋಗ್ಯ ಸೂಚಕಗಳನ್ನಾಧರಿಸಿ ಉದ್ಯೋಗ ನಷ್ಟದ ಕುರಿತು ಸಂಶೋಧನೆ ಮಾಡಿರುವ ಅಶ್ವಿನಿ ದೇಶಪಾಂಡೆ ಅವರು ದೈನಂದಿನ ಮತ್ತು ವೇತನದ ಉದ್ಯೋಗಗಳು ಯಾವುದೇ ಸುರಕ್ಷತೆಯಿಲ್ಲದೇ ಅನಿಶ್ಚತೆಯಿಂದ ಕೂಡಿವೆ. ಶಿಕ್ಷಣದಲ್ಲಿ ಮೇಲ್ಜಾತಿಗಳಿಗೆ ಹೆಚ್ಚಿನ ಪ್ರವೇಶ ಇರುವ ಕಾರಣ ಉದ್ಯೋಗಗಳಲ್ಲಿ ಸುರಕ್ಷಿತವನ್ನು ಹೊಂದಿದ್ದಾರೆ. ಹೀಗಾಗಿ ಲಾಕ್‌ಡೌನ್‌ನಿಂದ ಮತ್ತು ಆ ನಂತರದ ಆರ್ಥಿಕ ಆಘಾತಗಳಿಗೆ ಕಡಿಮೆ ಗುರಿಯಾಗಿದ್ದಾರೆ ಎಂಬುದನ್ನು ಅಧ್ಯಯನ ಮೂಲಕ ಬೆಳಕಿಗೆ ತಂದಿದ್ದಾರೆ.

12 ವರ್ಷಗಳಿಗಿಂತ ಹೆಚ್ಚು ಶಾಲಾ ಶಿಕ್ಷಣವನ್ನು ಹೊಂದಿರುವ ವ್ಯಕ್ತಿಗಳ ಪಾಲು ಮೇಲ್ಜಾತಿಗಳಲ್ಲಿ ಶೇ.37ರಷ್ಟಿದ್ದರೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ.17ರಷ್ಟಿದೆ. ಮೇಲ್ಜಾತಿಗಳು ಶಿಕ್ಷಣಕ್ಕೆ ಹೆಚ್ಚಿನ ಪ್ರವೇಶವನ್ನು ಹೊಂದಿರುವುದರಿಂದಲೇ ಉದ್ಯೋಗಗಳಲ್ಲಿ ಹೆಚ್ಚಿನ ಸುರಕ್ಷತೆ ಹೊಂದಿದ್ದಾರೆ.

ಹೀಗಾಗಿ ಲಾಕ್‌ಡೌನ್‌ನಿಂದ ಸಂಭವಿಸಿರುವ ಆರ್ಥಿಕ ಆಘಾತಗಳು ಈ ವರ್ಗಗಳ ಮೇಲೆ ದೊಡ್ಡಮಟ್ಟದಲ್ಲಿ ಪರಿಣಾಮ ಬೀರುವುದಿಲ್ಲ. ಒಂದು ವೇಳೆ ಪರಿಣಾಮ ಬೀರಿದ್ದರೆ ಕಡಿಮೆ ಪ್ರಮಾಣದಲ್ಲಿವೆ ಎಂದು ಅಧ್ಯಯನ ವರದಿಯಲ್ಲಿ ಹೇಳಿದ್ದಾರೆ.

the fil favicon

SUPPORT THE FILE

Latest News

Related Posts