Thursday | October 22, 2026 |

ಎಲೆಕ್ಟ್ರಿಕ್‌ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆಗೆ 10 ತಿಂಗಳಾದರೂ ಸಿಗದ ಭೂಮಿ; ವಿಳಂಬದಿಂದ ಕೈ ತಪ್ಪಿ ಹೋಗಲಿದೆಯೇ ಕೇಂದ್ರ?

ಬೆಂಗಳೂರು; ಮಂಡ್ಯ ಜಿಲ್ಲೆಯಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ ಹಾಗೂ ಎಲೆಕ್ಟ್ರಿಕ್‌ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಕಳೆದ 10 ತಿಂಗಳಾದರೂ ಭೂಮಿ ಮಂಜೂರಾಗಿಲ್ಲ.

ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆ ಮತ್ತು ಉದ್ಯೋಗ ಸೃಜನೆಗೆ ಸಾವಿರಾರು ಎಕರೆ ಭೂಮಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿಕೆ ನೀಡಿದ್ದರ ಬೆನ್ನಲ್ಲೇ ಈ ಸಂಬಂಧ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆಗೆ ಜಮೀನು ಇದುವರೆಗೂ ಲಭ್ಯವಾಗಿಲ್ಲ ಎಂಬ ಸಂಗತಿಯನ್ನು  ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರಿಗೆ 2026ರ ಅಕ್ಟೋಬರ್‍‌ 22ರಂದು ಪತ್ರ ಮುಖೇನ ಗಮನಸೆಳೆದಿದ್ದಾರೆ.

ರಾಜ್ಯದಲ್ಲಿ ಸ್ಟಿಂಗ್‌ ಆಪರೇಷನ್‌ ಕುರಿತು ಕಳೆದ ಅನೇಕ ದಿನಗಳಿಂದಲೂ ಎಚ್‌ ಡಿ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್ ನಡುವೆ ಜಟಾಪಟಿ ನಡೆಯುತ್ತಿದೆ. ಈ ಮಧ್ಯೆ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರು ರಾಜ್ಯದ ಕೈಗಾರಿಕೆ ಅಭಿವೃದ್ಧಿಗೆ ಕೊಟ್ಟಿರುವ ಕೊಡುಗೆ ಏನು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಆದಿಯಾಗಿ ಕಾಂಗ್ರೆಸ್‌ ಸರ್ಕಾರದ ಸಚಿವರುಗಳು ಪ್ರಶ್ನಿಸುತ್ತಲೇ ಬಂದಿದ್ದಾರೆ. ಈ ಬೆಳವಣಿಗೆ ನಡುವೆಯೇ ಹೆಚ್‌ ಡಿಕ ಕುಮಾರಸ್ವಾಮಿ ಅವರು 2026ರ ಅಕ್ಟೋಬರ್‍‌ 22ರಂದು ಬರೆದಿರುವ ನಾಲ್ಕು ಪುಟಗಳ  ಪತ್ರವು ಮಹತ್ವ ಪಡೆದುಕೊಂಡಿದೆ.

ಮಂಡ್ಯ ಜಿಲ್ಲೆಯಲ್ಲಿ ಆಟೋಮೇಟಿವ್ ರಿಸರ್ಚ್‌ ಅಸೋಸಿಯೇಷನ್‌ ಆಫ್‌ ಇಂಡಿಯಾವು  ನಿರ್ಮಾಣ  ಮತ್ತು ಮೂಲ ಸೌಕರ್ಯಗಳ ಉಪಕರಣಗಳ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಪ್ರಸ್ತಾವಿಸಿತ್ತು. ಈ ಕೇಂದ್ರ ಸ್ಥಾಪನೆಗೆ ಜಮೀನು ಮಂಜೂರು ಮಾಡುವ ಸಂಬಂಧ ಅಧಿಕಾರಿಗಳೊಂದಿಗೆ  ಹಲವು ಬಾರಿ ಚರ್ಚೆಗಳು ನಡೆದಿವೆ. ಆದರೆ 10 ತಿಂಗಳಾದರೂ ಈ ಕೇಂದ್ರಕ್ಕೆ ಜಮೀನು ಮಂಜೂರಾಗಿಲ್ಲ. ರಾಜ್ಯ ಸರ್ಕಾರವು ಈ ವಿಚಾರದಲ್ಲಿ ವಿಳಂಬ ತೋರುತ್ತಿದೆ ಎಂದು ಹೆಚ್‌ ಡಿ ಕುಮಾರಸ್ವಾಮಿ ಅವರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವುದು ಗೊತ್ತಾಗಿದೆ.

ಹೆಚ್‌ ಡಿ ಕೆ ಪತ್ರದಲ್ಲೇನಿದೆ?

ಕಳೆದ 10  ತಿಂಗಳಿನಿಂದಲೂ ನಿರಂತರವಾಗಿ ಈ ಬಗ್ಗೆ ರಾಜ್ಯ ಸರ್ಕಾರದಿಂದ ಸಕಾರಾತ್ಮಕ ನಿರ್ಧಾರದ ನಿರೀಕ್ಷೆಯಲ್ಲಿದ್ದೇವೆ. ಸ್ಥಳ ಪರಿಶೀಲನೆ, ತಾಂತ್ರಿಕ ಮೌಲ್ಯಮಾಪನ ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಗೆ ಸಭೆ  ನಡೆಸಲಾಗಿದೆ. ಈ ಪ್ರಕ್ರಿಯೆಯನ್ನು ಸಕ್ರೀಯಗೊಳಿಸಲು ಮುಂದುವರೆಸಲಾಗುತ್ತಿದೆ. ಇಷ್ಟೆಲ್ಲಾ  ನಿರಂತರ ಪ್ರಯತ್ನಗಳ ಹೊರತಾಗಿಯೂ ಸೂಕ್ತ ಭೂಮಿ ಮಂಜೂರು ಮಾಡುವ ವಿಷಯವು ಜಿಲ್ಲಾಡಳಿತ ಮತ್ತು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿ ಇನ್ನು ಭೂಮಿ ಮಂಜೂರಾತಿ ಇತ್ಯರ್ಥಗೊಂಡಿಲ್ಲ ಎಂದು ವಿವರಿಸಿರುವುದು  ಪತ್ರದಿಂದ ತಿಳಿದು ಬಂದಿದೆ.

ನಿರ್ಮಾಣ ಮತ್ತು ಮೂಲ ಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ ಹಾಗೂ ಎಲೆಕ್ಟ್ರಿಕ್‌ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆಗಾಗಿ ಜಾಗ ಗುರುತಿಲು ಅಟೋಮೇಟಿವ್‌ ರೀಸರ್ಚ್ ಅಸೋಸಿಯೇಷನ್‌ ಇಂಡಿಯಾವು ನಿರಂತರವಾಗಿ ಪ್ರಯತ್ನಗಳನ್ನು ತ್ವರಿತಗತಿಯಲ್ಲಿ ನಡೆಸುತ್ತಿದೆ. 2016ರ ಮಾರ್ಚ್‌ 16ರಂದೇ ಸಂಸ್ಥೆಯ ತಂಡವು ಮಂಡ್ಯ ತಾಲೂಕಿನ ಬಸರಾಳು, ಮಂಡ್ಯ ಸಕ್ಕರೆ ಕಾರ್ಖಾನೆ, ಕೆ ಆರ್ ಪೇಟೆ ಕೈಗಾರಿಕೆ ವಲಯದಲ್ಲಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಇದಾದ ನಂತರ ಭೂಮಿ ಮಂಜೂರಾತಿಗಾಗಿ ಮಂಡ್ಯ ಜಿಲ್ಲಾಧಿಕಾರಿಗಳನ್ನೂ ಭೇಟಿಯಾಗಿ ವಿಸ್ತೃತವಾಗಿ ಚರ್ಚಿಸಿದೆ ಎಂದು ಮಾಹಿತಿ ಒದಗಿಸಿರುವುದು ಪತ್ರದಿಂದ ಗೊತ್ತಾಗಿದೆ.

 

 

ಅಲ್ಲದೇ 2026ರ ಮಾರ್ಚ್‌ 17ರಂದು ಸಹ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜತೆ ಸಭೆ ಕೂಡ ನಡೆದಿದೆ. ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ ತಾಂತ್ರಿಕ ಅಗತ್ಯಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದೆ. ಅದೇ ರೀಗತಿ 2026ರ ಏಪ್ರಿಲ್‌ 13ರಂದು ವಿಧಾನಸೌಧದಲ್ಲಿ ಸಚಿವ ಎಂ ಬಿ ಪಾಟೀಲ್‌ ಅವರೊಂದಿಗೂ ಚರ್ಚಿಸಲಾಗಿದೆ. ತಾಂತ್ರಿಕ ಮೌಲ್ಯಮಾಪನಕ್ಕಾಗಿ ಬಸರಾಳು, ಹೆಗ್ಗಡತಿಹಳ್ಳಿ, ಯಲೆಚಾಕನಹಳ್ಳಿಯಲ್ಲಿ ಗುರುತಿಸಿರುವ ಭೂಮಿಯ ವಿವರಗಳನ್ನು  2026ರ ಮೇ 6 ಮತ್ತು ಮೇ 18ರಂದು ಭೇಟಿ  ನೀಡಿ ಪರಿಶೀಲಿಸಿದೆ.

ಅದೇ ರೀತಿ ಬಸರಾಳುವಿನಲ್ಲಿರುವ ಸುಮಾರು 100 ಎಕರೆ ಜಾಗವು ರಸ್ತೆ ಸಂಪರ್ಕ ಸುಧಾರಣೆಗೆ ಒಳಪಟ್ಟು ಸಿಐಇ ಪರೀಕ್ಷಾ ಕೇಂದ್ರಕ್ಕೆ ಸೂಕ್ತವಾಗಬಹುದು ಎಂದು ಸಭೆಯಲ್ಲಿ ತೀರ್ಮಾನಿಸಿತ್ತು. ಆದರೆ ಎಲೆಕ್ಟ್ರಿಕ್‌ ವಾಹನ ಪರೀಕ್ಷಾ ಕೇಂದ್ರಕ್ಕೆ ಹೆಚ್ಚುವರಿಯಾಗಿ 60 ಎಕರೆ ಭೂಮಿ ಅಗತ್ಯವಿದೆ. ಎರಡೂ ಸೌಲಭ್ಯಗಳನ್ನು ಒಟ್ಟಾಗಿ ಸ್ಥಾಪಿಸಲು ಯಲೆಚಾಕನಹಳ್ಳಿಯಲ್ಲಿ ಭೂಮಿಯನ್ನೂ ಸಹ ಪರ್ಯಾಯ ಸ್ಥಳವನ್ನಾಗಿ ಪರಿಶೀಲಿಸಲಾಗಿದೆ. ಇಲ್ಲಿ ದೀರ್ಘ ಪರೀಕ್ಷಾ ಹಾದಿ ಮತ್ತು ಪಕ್ಕದಲ್ಲೇ ಕೈಗಾರಿಕೆ ಕೇಂದ್ರವನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯೂ ಇದೆ. ಆದರೂ ಸಹ ಈ ಆಯ್ಕೆಯು ಮುಖ್ಯವಾಗಿ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ರಸ್ತೆ ಸಂಪರ್ಕವನ್ನು ಅಭಿವೃದ್ಧಿಪಡಿಸುವುದು ಮುಂತಾದ ಸವಾಲುಗಳು ಮತ್ತು ಅಡಚಣೆಗಳನ್ನು ಒಳಗೊಂಡಿವೆ ಎಂದು ವಿವರಿಸಿರುವುದು ಪತ್ರದಿಂದ ಗೊತ್ತಾಗಿದೆ.

ಇಷ್ಟೆಲ್ಲಾ ಪ್ರಯತ್ನಗಳು ಮತ್ತು ಕಾರ್ಯಸಾಧ್ಯವಾದ ಕ್ರಮಗಳ ಗುರುತಿಸುವಿಕೆ ಹೊರತಾಗಿಯೂ ರಾಜ್ಯ ಸರ್ಕಾರ ಮತ್ತು ಮಂಡ್ಯ ಜಿಲ್ಲಾಡಳಿತದಿಂದ ಭೂಮಿ ಮಂಜೂರಾತಿ ಆಗದೇ ಇನ್ನೂ ಬಾಕಿ ಉಳಿದಿದೆ. ಈ ಕೇಂದ್ರ ಸ್ಥಾಪನೆಯಿಂದ ಕರ್ನಾಟಕದಲ್ಲಿ ಸುಧಾರಿತ ಪರೀಕ್ಷೆ, ಮೌಲ್ಯಮಾಪನ ಮತ್ತು ಉತ್ಪಾದನೆಗೆ ಸಂಬಂಧಿಸಿದ ಸಂಶೋಧನೆಗಾಗಿ ಬಲವಾದ ಪರಿಸರ ವ್ಯವಸ್ಥೆ ನಿರ್ಮಿಸಲು ಸಹಾಯವಾಗುತ್ತದೆ ಎಂದು ಗಮನಸೆಳೆದಿರುವುದು ಪತ್ರದಿಂದ ತಿಳಿದು ಬಂದಿದೆ.

 

 

 

‘ರಾಜ್ಯ ಸರ್ಕಾರದೊಂದಿಗೆ ಸುಮಾರು 10 ತಿಂಗಳುಗಳ ಕಾಲ ಅನೇಕ ಸಭೆಗಳನ್ನು ನಡೆಸಿ ಚರ್ಚಿಸಿ ಹಾಗೂ ಪತ್ರ ವ್ಯವಹಾರಗಳನ್ನು ನಡೆಸಿದರೂ ಸಹ ಸಾರ್ವಜನಿಕ ಉಪಯೋಗದ ಯೋಜನೆಗಳಿಗೆ ಮೂಲಭೂತ ಅಗತ್ಯವಾದ ಭೂಮಿಯನ್ನು ಮಂಜೂರು ಮಾಡುವ ರಾಜ್ಯ ಸರ್ಕಾರದ ಹಾಗೂ ಮಂಡ್ಯ ಜಿಲ್ಲಾಡಳಿತದ ನಿರ್ಧಾರಕ್ಕಾಗಿ ಇಂತಹ ಪ್ರಮುಖ ಯೋಜನೆಯು ಕಾಯುತ್ತಿರುವುದು ದುರದೃಷ್ಟಕರ ಸಂಗತಿ,’ ಎಂದು ಹೆಚ್‌ ಡಿ ಕುಮಾರಸ್ವಾಮಿ ಅವರು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ರಾಷ್ಟ್ರದಲ್ಲಿ ಇಂತಹ ಕೇಂದ್ರಗಳು ಬೆರಳಿಣಿಕೆಯ್ಟು ಮಾತ್ರ ಇವೆ. ಮಹಾರಾಷ್ಟ್ರದ ಪುಣೆ ಆಟೋಮೇಟಿವ್ ರೀಸರ್ಚ್‌ ಅಸೋಸಿಯೇಷನ್ ಆಫ್‌ ಇಂಡಿಯಾ, ಹರಿಯಾಣದ ಮಾನೇಸರ್‍‌, ಚೆನ್ನೈನಲ್ಲಿ ಗ್ಲೋಬಲ್‌ ಆಟೋಮ್ಯಾಟೀವ್ ರೀಸರ್ಚ್‌ ಸೆಂಟರ್‍‌, ಕಾಶ್ಮೀರದಲ್ಲಿರುವ ರಾಷ್ಟ್ರೀಯ ಆಟೋಮೋಟೀವ್‌ ಟೆಸ್ಟ್‌, ಕೇಂದ್ರಗಳು ಕಾರ್ಯಾಚರಿಸುತ್ತಿವೆ.

 

 

ಈ ಕೇಂದ್ರಗಳ ಕೊಡುಗೆಯಿಂದಾಗಿ ಹರಿಯಾಣ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳು ಆಟೋಮೊಬೈಲ್‌ ಕ್ಷೇತ್ರದಲ್ಲಿ ಮುಂಚೂಣಿ ರಾಜ್ಯಗಳಾಗಿ ಬೆಳೆದಿವೆ. ಹೀಗಾಗಿ ಇಂತಹ ಪ್ರತಿಷ್ಠಿತ ಕೇಂದ್ರಗಳು ಕರ್ನಾಟಕ ರಾಜ್ಯಕ್ಕೆ ಅಗತ್ಯವಾಗಿ ಬೇಕಾಗಿದೆ. ಯಾವುದೇ ಕಾರಣಕ್ಕೂ ಎಆರ್‍‌ಐಐ ಪರೀಕ್ಷಾ ಕೇಂದ್ರವನ್ನು ಕರ್ನಾಟಕ ಕಳೆದುಕೊಳ್ಳಬಾರದು ಎಂದು ಹೆಚ್‌ ಡಿ ಕುಮಾರಸ್ವಾಮಿ ಅವರು ಕಳಕಳಿ ವ್ಯಕ್ತಪಡಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

 

‘ಬೆಂಗಳೂರಿನ ಪ್ರದೇಶ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ 2026ರ ಸೆ.28ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ಕೈಗಾರಿಕೆ ಸ್ಥಾಪನೆ ಮತ್ತು ಉದ್ಯೋಗ ಸೃಜನೆಗೆ ಬೇಕಿದ್ದರೆ ಸಾವಿರಾರು ಎಕರೆ ಭೂಮಿ  ನೀಡಲಾಗುವುದು ಎಂದು ತಾವು ಹೇಳಿರುತ್ತೀರಿ. ತಮ್ಮ ಈ ಹೇಳಿಕೆಯು ಕೈಗಾರಿಕೆ ಅಭಿವೃದ್ದಿಗೆ ಪೂರಕವಾಗಿದೆ ಎಂದು ನಾನು ಭಾವಿಸಿದ್ದೇನೆ. ಆದರೂ ಪ್ರಸ್ತಾಪಿತ ಯೋಜನೆಗೆ ಇಲ್ಲಿಯವರೆಗೆ ರಾಜ್ಯ ಸರ್ಕಾರದಿಂದ ಭೂ ಮಂಜೂರಾತಿಯಲ್ಲಿ ವಿಳಂಬವಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ,’ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

‘ಅಮೇರಿಕಾ ಕಂಪನಿಯೇ ಪ್ರಸ್ತಾವ ಸಲ್ಲಿಸಲಿ’; ಎಚ್‌ಡಿಕೆ ಹೇಳಿಕೆ ಬೆನ್ನಲ್ಲೇ ಮುನ್ನೆಲೆಗೆ ಬಂದ ಸರ್ಕಾರದ ನಿಲುವು

 

ಅಮೇರಿಕಾ ಕಂಪನಿಯೂ ಸಹ ಮಂಡ್ಯದಲ್ಲಿ ಕೈಗಾರಿಕೆ ಆರಂಭಿಸಲು ಮುಂದಾಗಿತ್ತು. ಆದರೆ ಈ ವಿಚಾರವು ರಾಜಕೀಯ ಕಾರಣಗಳಿಗಾಗಿ ಜಟಾಪಟಿ ನಡೆದಿತ್ತು. ಈ ಕುರಿತು ದಿ ಫೈಲ್‌ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

Hot this week

ಆರ್‍‌ಎಸ್‌ಎಸ್‌ ಪಥಸಂಚಲನ; ‘ಅರ್ಜಿ ಸಲ್ಲಿಸಿ, ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಅನುಮತಿ ದೊರೆಯುವವರೆಗೆ ಕಾಯಿರಿ’ ಎಂದ ಗೃಹ ಸಚಿವ

ಬೆಂಗಳೂರು; ವಿಜಯದಶಮಿಯ ಅಂಗವಾಗಿ 2026ರ ಅಕ್ಟೋಬರ್‍‌ 25ರಂದು ರಾಷ್ಟ್ರೀಯ ಸ್ವಯಂ ಸೇವಕ...

ಕಾರ್ಯಾದೇಶ ಪಡೆದರೂ ಕಾಮಗಾರಿ ನಡೆಸದ ಗುತ್ತಿಗೆದಾರರು; ಅಂದಾಜು ವೆಚ್ಚದಲ್ಲಿ ಏರಿಕೆ, ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ

ಬೆಂಗಳೂರು;  ಸರ್ಕಾರದ ವಿವಿಧ ಇಲಾಖೆಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಇತರೆ...

ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ ಟೆಂಡರ್‍‌ನಲ್ಲಿ ಅಕ್ರಮ ಆರೋಪ; 9 ಕೋಟಿ ಮೊತ್ತದ ಟೆಂಡರ್ ಸಲ್ಲಿಕೆಗೆ 9 ದಿನವಷ್ಟೇ ಕಾಲಾವಕಾಶ ನೀಡಿದ್ದೇಕೆ?

ಬೆಂಗಳೂರು; ಉನ್ನತ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಯಾದ ವಿದ್ಯಾರ್ಥಿ ಸಹಾಯ ಹಸ್ತ...
Please Scan to make Your Contribution

Topics

ಕಾರ್ಯಾದೇಶ ಪಡೆದರೂ ಕಾಮಗಾರಿ ನಡೆಸದ ಗುತ್ತಿಗೆದಾರರು; ಅಂದಾಜು ವೆಚ್ಚದಲ್ಲಿ ಏರಿಕೆ, ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ

ಬೆಂಗಳೂರು;  ಸರ್ಕಾರದ ವಿವಿಧ ಇಲಾಖೆಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಇತರೆ...

ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಯಿಂದ ನಿಯಮ, ಕಾಯ್ದೆ ಉಲ್ಲಂಘನೆ ಆರೋಪ; ಆಡಳಿತಾಧಿಕಾರಿ ನೇಮಕಕ್ಕೆ ಮುಂದಾದ ಸರ್ಕಾರ, ಇದು ಖಾಸಗಿ ಸಂಸ್ಥೆಯೋ ಸಾರ್ವಜನಿಕ ಸಂಸ್ಥೆಯೋ?

ಬೆಂಗಳೂರು; ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮರಿಮಲ್ಲಪ್ಪ ವಿದ್ಯಾ ಸಂಸ್ಥೆಯು ಕಾಲೇಜು, ...

ಅಪೆಕ್ಸ್ ಬ್ಯಾಂಕ್‌ನಲ್ಲಿ 1,000 ಕೋಟಿ ಹಗರಣ; ಹೈಕೋರ್ಟ್‌ನಲ್ಲಿ ಪಿಐಎಲ್‌, ಸರ್ಕಾರಕ್ಕೆ ಎದುರಾಗಲಿದೆಯೇ ಸಂಕಷ್ಟ?

ಬೆಂಗಳೂರು; ಕೃಷಿಗೆ ಸಂಬಂಧಿಸದ ಉದ್ದೇಶಗಳಿಗಾಗಿ ಸಾಲ ಮಂಜೂರಾತಿ,  ಈಗಾಗಲೇ ಅನುತ್ಪಾದಕ ಆಸ್ತಿಗಳೆಂದು (Non-Performing...

Related Articles

Popular Categories

error: Content is protected !!