ಗ್ರಾಮ್‌ ಸಂಸ್ಥೆಯ ಸಲಹಾ ಮಂಡಳಿಯಲ್ಲಿ ಕಾಂಗ್ರೆಸ್‌ ಮಾಜಿ ಶಾಸಕ ಡಿ ಆರ್‍‌ ಪಾಟೀಲ್‌ರಿಗೂ ಸ್ಥಾನ

ಬೆಂಗಳೂರು;   ಸಿಸ್ಟಮ್ಯಾಟಿಕ್ ವೋಟರ್ಸ್‌ ಎಜುಕೇಷನ್ ಆ್ಯಂಡ್ ಎಲೆಕ್ಟೋರಲ್‌ ಪಾರ್ಟಿಸಿಪೇಷನ್‌ (ಸ್ವೀಪ್‌) ಕಾರ್ಯಕ್ರಮದ ಕುರಿತು ಅಧ್ಯಯನ ನಡೆಸಿದ್ದ ಗ್ರಾಮ್‌ ಸಂಸ್ಥೆಗೆ ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ದಿ ಸಮಿತಿಯ ಹಾಲಿ ಉಪಾಧ್ಯಕ್ಷ ಕಾಂಗ್ರೆಸ್ಸಿನ ಮಾಜಿ ಶಾಸಕ ಡಿ ಆರ್ ಪಾಟೀಲ್‌ ಅವರೂ ಸಹ ಸಲಹಾ ಸಮಿತಿ ಸದಸ್ಯರಾಗಿದ್ದಾರೆ.

 

ಸಿಸ್ಟಮ್ಯಾಟಿಕ್ ವೋಟರ್ಸ್‌ ಎಜುಕೇಷನ್ ಆ್ಯಂಡ್ ಎಲೆಕ್ಟೋರಲ್‌ ಪಾರ್ಟಿಸಿಪೇಷನ್‌ (ಸ್ವೀಪ್‌) ಕಾರ್ಯಕ್ರಮದ ಕುರಿತು ಅಧ್ಯಯನ ನಡೆಸಿದ್ದ  ಗ್ರಾಮ್‌ ಸಂಸ್ಥೆಯು ಕರ್ನಾಟಕ  ಮೌಲ್ಯಮಾಪನ  ಪ್ರಾಧಿಕಾರಕ್ಕೆ ಸಲ್ಲಿಸಿದ್ದ ಮೌಲ್ಯಮಾಪನ ವರದಿಯಲ್ಲಿ ಇವಿಎಂಗಳ ನಿಖರತೆ ಮತ್ತು ವಿಶ್ವಾಸಾರ್ಹತೆ ಕುರಿತು ಉಲ್ಲೇಖವಾಗಿತ್ತು. ಈ ವರದಿಯು ಬಹಿರಂಗವಾಗುತ್ತಿದ್ದಂತೆ ಮುಜುಗರಕ್ಕೆ ಸಿಲುಕಿದ್ದ ಕಾಂಗ್ರೆಸ್‌ ಸರ್ಕಾರವು, ಗ್ರಾಮ್‌ ಸಂಸ್ಥೆಯ ಸಂಸ್ಥಾಪಕರು, ಪ್ರಧಾನ ಮೋದಿ ಅವರಿಗೆ ನಿಕಟವರ್ತಿಗಳು ಎಂದು ಜರಿದಿತ್ತು.

 

ಅಲ್ಲದೇ ‘ಈ  ಸಮೀಕ್ಷೆ ನಡೆಸಿದವರ ಹಿನ್ನೆಲೆಯನ್ನು ಮಾಧ್ಯಮಗಳು ಕೂಡಾ ಪರಿಶೀಲಿಸಿದಂತಿಲ್ಲ. ಈ ಸಮೀಕ್ಷೆಯನ್ನು ಡಾ. ಆರ್. ಬಾಲಸುಬ್ರಮಣ್ಯಂ ಸ್ಥಾಪಿಸಿದ ಗ್ರಾಮ್‌  ಎಂಬ ಎನ್‌ಜಿಒ  ನಡೆಸಿದೆ. ಬಾಲಸುಬ್ರಮಣ್ಯಂ ಅವರು ಪ್ರಸ್ತುತ ಕೇಂದ್ರ ಸರ್ಕಾರ ನೇಮಿಸಿರುವ ಒಂದು ಹುದ್ದೆಯಲ್ಲಿದ್ದಾರೆ. ಇವರು 2024ರಲ್ಲಿ ಪ್ರಧಾನಿ  ಅವರ ಬಗ್ಗೆ ಬರೆದಿರುವ ಪುಸ್ತಕವನ್ನು ನೋಡಿದರೆ ಈ ಮಹಾಶಯರು ಮೋದಿಯವರ ಅಂಧ ಅಭಿಮಾನಿಯಂತೆ ಕಾಣುತ್ತಾರೆ. ಇಂತಹ ಹೊಗಳುಭಟರು ನಡೆಸಿರುವ ಸಮೀಕ್ಷೆಯನ್ನು ಆಧರಿಸಿ ವರದಿಯನ್ನು ಸಿದ್ಧಪಡಿಸಿರುವುದಕ್ಕೆ ಯಾವ ವಿಶ್ವಾಸಾರ್ಹತೆ ಇರಲು ಸಾಧ್ಯ,’ ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು.

 

ಆದರೀಗ ಇದೇ ಡಾ ಆರ್ ಬಾಲಸುಬ್ರಮಣ್ಯಂ ಅವರು ಸ್ಥಾಪಿಸಿರುವ ಗ್ರಾಮ್‌ ಎನ್‌ ಜಿ ಒ ನ ಸಲಹಾ ಸಮಿತಿಯಲ್ಲಿ ಕಾಂಗ್ರೆಸ್ಸಿನ ಮಾಜಿ ಶಾಸಕ ಹಾಗೂ ಹಾಲಿ ರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ದಿ ಸಮಿತಿಯ ಹಾಲಿ ಉಪಾಧ್ಯಕ್ಷ    ಡಿ ಆರ್ ಪಾಟೀಲ್‌ ಅವರು  ಗ್ರಾಮ್‌ ಸಂಸ್ಥೆಯ ಸಲಹಾ ಮಂಡಳಿಯಲ್ಲಿ ಈಗಲೂ ಸದಸ್ಯರಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

 

 

ಡಿ ಆರ್ ಪಾಟೀಲ್‌ ಅವರ ಜತೆಯಲ್ಲಿ ಸುಪ್ರಿಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎನ್ ವೆಂಕಟಾಚಲಯ್ಯ ಅವರು ಸಹ ಇದೇ ಗ್ರಾಮ್‌ ಸಂಸ್ಥೆಯ ಸಲಹಾ ಸಮಿತಿಯಲ್ಲಿ ಸದಸ್ಯರಾಗಿದ್ದಾರೆ. ಈ ಇಬ್ಬರ ಸೇವೆ ಕುರಿತು ಗ್ರಾಮ್‌ ಸಂಸ್ಥೆಯ ಅಧಿಕೃತ ಜಾಲತಾಣದಲ್ಲಿ ವಿವರಗಳನ್ನು ಪ್ರಕಟಿಸಿದೆ.

 

 

ಈ ಗ್ರಾಮ್‌ ಸಂಸ್ಥೆಯು ಸಾರ್ವಜನಿಕ ನೀತಿ ನಿರೂಪಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಭಿವೃದ್ಧಿ ವಿಚಾರಗಳು, ರಾಜಕೀಯ ವಿಜ್ಞಾನ, ಫಲಾನುಭವಿಗಳ ಆಧರಿತ ಯೋಜನೆಗಳು, ಸಾಮಾಜಿಕ ಚಟುವಟಿಕೆ, ಸಾರ್ವಜನಿಕ ಆರೋಗ್ಯ, ಶಿಕ್ಷಣ, ಅಭಿವೃದ್ಧಿ ಅರ್ಥಶಾಸ್ತ್ರ, ದತ್ತಾಂಶಗಳ ವಿಶ್ಲೇಷಣೆ, ಮಾನವ ಅಭಿವೃದ್ಧಿ ಮತ್ತು ನಿರ್ವಹಣೆಯಂತಹ ಹಲವು ಮಹತ್ವದ ವಿಷಯಗಳ ಕುರಿತು ಅಧ್ಯಯನ, ಮೌಲ್ಯಮಾಪನ ನಡೆಸುತ್ತಿದೆ. ಈ ಸಂಸ್ಥೆಯಲ್ಲಿ ವಿಜ್ಞಾನಿಗಳು, ನ್ಯಾಯಾಂಗ ತಜ್ಞರು, ಮತ್ತು ಹಲವು ವಿಷಯಗಳ ವಿಷಯ ತಜ್ಞರು ಸಹ ಕಾರ್ಯನಿರ್ವಹಿಸುತ್ತಿದ್ದಾರೆ.

 

ಅಲ್ಲದೇ ಈ ಸಂಸ್ಥೆಯು ಕಾಂಗ್ರೆಸ್‌ ಆಡಳಿತ ಇರುವ ತೆಲಂಗಾಣ ಸೇರಿದಂತೆ ಹಲವು ರಾಜ್ಯ ಸರ್ಕಾರದ ನೆರವು ಮತ್ತು ಪಾಲುದಾರಿಕೆಯಲ್ಲಿಯೂ ಹಲವು ಯೋಜನೆಗಳನ್ನು ಅಧ್ಯಯನ ನಡೆಸಿದೆ.

 

 

ಇವಿಎಂಗಳ ವಿಶ್ವಾಸಾರ್ಹತೆ ಮತ್ತು ನಿಖರತೆ ಕುರಿತು ವರದಿ ನೀಡಿರುವ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯು ಹಿತಾಸಕ್ತಿ ಸಂಘರ್ಷ ಆರೋಪ ಮಾಡಿರುವ ಬೆನ್ನಲ್ಲೇ ಇದೇ ಗ್ರಾಸ್‌ರೂಟ್‌ ರೀಸರ್ಚ್‌ ಅಂಡ್‌ ಅಡ್ವೋಕೇಸಿ ಮೂವ್‌ಮೆಂಟ್‌ ಸಂಸ್ಥೆಯು ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿನ  ಕಾಂಗ್ರೆಸ್‌ ಸರ್ಕಾರದ ಸಹಭಾಗಿತ್ವದಲ್ಲಿ ಹಲವು ಮೌಲ್ಯಮಾಪನ ಮತ್ತು ಅಧ್ಯಯನ ಮಾಡಲು ಅನುಮತಿ ನೀಡಿತ್ತು.

 

ಸಿದ್ದು ಮೊದಲ ಅವಧಿಯಿಂದಲೂ ‘ಗ್ರಾಮ್‌’ಗೆ ಅನುಮತಿ; ಹಿತಾಸಕ್ತಿ ಸಂಘರ್ಷ ಆರೋಪದ ಬೆನ್ನಲ್ಲೇ ವರದಿ ಮುನ್ನೆಲೆಗೆ

 

ಚುನಾವಣೆಗಳಲ್ಲಿ ಬಳಕೆಯಾಗುತ್ತಿರುವ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆ ಮತ್ತು ನಿಖರತೆ ಬಗ್ಗೆ ರಾಜ್ಯದಲ್ಲಿ ಬಹುಪಾಲು ಜನರು ಅಂದರೆ, ಶೇಕಡಾ 83.61ರಷ್ಟು ಮತದಾರರು ವಿಶ್ವಾಸ ಹೊಂದಿದ್ದಾರೆ  ಎಂದು  ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿದ್ದ ಅಧ್ಯಯನವು  ಹೊರಗೆಡವಿತ್ತು.

 

ಇವಿಎಂ ನಿಖರತೆ: ಕಲ್ಬುರ್ಗಿಯಲ್ಲಿ ಶೇ. 94.98, ಮೈಸೂರಲ್ಲಿ ಶೇ. 88.59 ರಷ್ಟು ಭರ್ಜರಿ ವಿಶ್ವಾಸಾರ್ಹತೆ

 

ವಿಶೇಷವೆಂದರೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ತವರು ಜಿಲ್ಲೆ ಕಲ್ಬುರ್ಗಿಯಲ್ಲಿ ಶೇ.94.08ರಷ್ಟು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ವಿಭಾಗದಲ್ಲಿ ಶೇ. 88.59ರಷ್ಟು ಮತದಾರರು, ಇವಿಎಂಗಳ ವಿಶ್ವಾಸಾರ್ಹತೆ ಮತ್ತು  ನಿಖರತೆಯ ಕುರಿತು ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.

 

ಚುನಾವಣೆಗಳಲ್ಲಿ ಹಣಬಲ, ತೋಳ್ಬಲ; ಕಲ್ಬುರ್ಗಿ, ಮೈಸೂರು, ಬೆಳಗಾವಿ, ಬೆಂಗಳೂರಿನಲ್ಲಿ ಪ್ರಭಾವ ಬೀರಿದ್ದೆಷ್ಟು?

 

ಅಲ್ಲದೇ ಇದೇ ವರದಿಯಲ್ಲಿ ಹಣಬಲ ಮತ್ತು ತೋಳ್ಬಲದ ಕುರಿತು ವಿಶ್ಲೇಷಿಸಿರುವುದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts