ಹನಿ ನೀರಾವರಿ ಸಬ್ಸಿಡಿಯಲ್ಲಿ ಗೋಲ್ಮಾಲ್‌, ಸಹಾಯ ಧನದಲ್ಲೂ ಅಕ್ರಮ; ಬಹುಕೋಟಿ ಲೂಟಿ!

ಬೆಂಗಳೂರು; ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸಲು ನೀಡಿದ್ದ ಕೋಟ್ಯಂತರ ರುಪಾಯಿ ಸಬ್ಸಿಡಿ ಮೊತ್ತವನ್ನು ತೋಟಗಾರಿಕೆ ಅಧಿಕಾರಿಗಳೇ ಲಪಟಾಯಿಸಿರುವ ಪ್ರಕರಣಗಳು ಒಂದೊಂದಾಗಿ ಬಹಿರಂಗವಾಗುತ್ತಿವೆ.

 

ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಸಂಬಂಧ ಯಾವೊಬ್ಬ ಅಧಿಕಾರಿಯ ಮೇಲೂ ಇದುವರೆಗೂ ಶಿಸ್ತಿನ ಕ್ರಮ ಕೈಗೊಂಡಿಲ್ಲ. ಈ ಸಂಬಂಧ ಪರಿಶೀಲನೆ, ತಪಾಸಣೆ ವರದಿಗಳು  ಸಲ್ಲಿಕೆಯಾಗಿವೆ. ಆದರೆ ಈ ಯಾವ ವರದಿಗಳತ್ತಲೂ ತೋಟಗಾರಿಕೆ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ ಅವರು ಕಣ್ಣೆತ್ತಿಯೂ ನೋಡಿಲ್ಲ!

 

ತೋಟಗಾರಿಕೆ ಇಲಾಖೆಯ ಯಾದಗಿರಿ ಜಿಲ್ಲೆಯ ಉಪ ನಿರ್ದೇಶಕ ಶರಣಬಸಪ್ಪ ಭೋಗಿ ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿ ವಿಜಯರಾಣಿ ಅವರ ವಿರುದ್ಧದ ದೂರು ಸಲ್ಲಿಕೆಯಾಗಿತ್ತು. ಈ ಬಗ್ಗೆ ಹಲವು ದೂರುಗಳು ದಾಖಲಾಗಿದ್ದರ ಹಿನ್ನೆಲೆಯಲ್ಲಿ ಕಲ್ಬುರ್ಗಿ ವಿಭಾಗದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು 2025ರ ಮೇ 8ಮತ್ತು 9ರಂದು ತೋಟಗಾರಿಕೆ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು. ಒಟ್ಟಾರೆ 29 ರೈತರ ಜಮೀನುಗಳಲ್ಲಿ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ.

 

ತಪಾಸಣೆ ವೇಳೆ ರೈತರ ಜಮೀನು ಮತ್ತು ಅವರಿಗೆ ಮಂಜೂರಾಗಿರುವ ಸಬ್ಸಿಡಿ ಮೊತ್ತಕ್ಕೆ ಸಂಬಂಧಿಸಿದಂತೆ ಭೌತಿಕ ಕಡತಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೇ ನೇರವಾಗಿ ರೈತರ ಜಮೀನುಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಹಲವು ಅಕ್ರಮಗಳು, ಲೋಪಗಳು ಕಂಡು ಬಂದಿವೆ. ಈ ವರದಿಯನ್ನು ತೋಟಗಾರಿಕೆ ಇಲಾಖೆಯ ನಿರ್ದೇಶಕರಿಗೆ 2025ರ ಮೇ ತಿಂಗಳಿನಲ್ಲಿ ಸಲ್ಲಿಸಿದ್ದಾರೆ.

 

ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಸರ್ಕಾರಕ್ಕೆ ಸಲ್ಲಿಸಿರುವ ಪರಿಶೀಲನಾ ವರದಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಜಂಟಿ ನಿರ್ದೇಶಕರು ನೀಡಿರುವ ಪರಿಶೀಲನಾ ವರದಿಯ ಪ್ರತಿ

 

ಪರಿಶೀಲನಾ ವರದಿಯಲ್ಲೇನಿದೆ?

 

ಹನಿ ನೀರಾವರಿ ಅಳವಡಿಕೆ ಮಾಡಿಕೊಂಡಿರುವ ಫಲಾನುಭವಿ ರೈತರ ಜಮೀನುಗಳಲ್ಲಿ ತಪಾಸಣೆ ಮತ್ತು ಪರಿಶೀಲನೆ ನಡೆಸಿದ್ದ ಜಂಟಿ ನಿರ್ದೇಶಕರು, ಯೋಜನೆಯ ಅನುಷ್ಠಾನದಲ್ಲಿ ಆಗಿರುವ ಹಲವು ಲೋಪಗಳನ್ನು ಬಯಲಿಗೆಳೆದಿರುವುದು ವರದಿಯಿಂದ ಗೊತ್ತಾಗಿದೆ.

 

ಫಲಾನುಭವಿ ರೈತರುಗಳ ಜಮೀನುಗಳಲ್ಲಿ ಮೈನ್‌ ಲೈನ್‌ ಹಾಗೂ ಸಬ್‌ ಲೈನ್‌ಗಳನ್ನು ನೆಲದಲ್ಲಿ ಹೂತಿರುವುದಿಲ್ಲ. ಒಂದಕ್ಕಿಂತ ಹೆಚ್ಚಿನ ಸರ್ವೆನಂಬರ್‍‌ ಇದ್ದಾಗ ಪ್ರೀ ಮತ್ತು ಪೋಸ್ಟ್‌ ಇನ್ಸ್‌ಪೆಕ್ಷನ್‌ ಛಾಯಾಚಿತ್ರಗಳನ್ನು ಒಂದೇ ಸರ್ವೆ ನಂಬರ್‍‌ನಲ್ಲಿ ಸೆರೆ ಹಿಡಿದಿದ್ದಾರೆ. ಸರ್ವೆ ನಂಬರ್‍‌ಗಳನ್ನು ದಿಶಾಂಕ್‌ ಅಫ್‌ನಲ್ಲಿ ಪ್ರೀ ಇನ್‌ಸ್ಪೆಕ್ಷನ್‌ ಸಮಯದಲ್ಲಿ ಪರಿಶೀಲನೆ ಮಾಡಿಲ್ಲ.

 

ಒಂದಕ್ಕಿಂತ ಹೆಚ್ಚಿನ ಸರ್ವೆ ನಂಬರ್‍‌ಗಳು ಇದ್ದಾಗ ಒಂದು ತಾಕಿನಲ್ಲಿ ಮಾತ್ರ ಹನಿ ನೀರಾವರಿ ಘಟಕ ಅಳವಡಿಸಲಾಗಿದೆ. ಉಳಿದ ಸರ್ವೆ ನಂಬರ್‍‌ಗಳಿಗೆ ಹನಿ ನೀರಾವರಿ ಘಟಕ ಅಳವಡಿಸಿಲ್ಲ. ಆದರೂ ಸಹಾಯ ಧನಕ್ಕೆ ಉಳಿದ ಸರ್ವೆ ನಂಬರ್‍‌ಗಳನ್ನೂ ಪರಿಗಣಿಸಿರುವುದನ್ನು ಪರಿಶೀಲನೆ ವೇಳೆ ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.

 

ಅದೇ ರೀತಿ ಸಬ್ಸಿಡಿ ಮಂಜೂರಾತಿಗೆ ಸಂಬಂಧಿಸಿದಂತೆ ಜಂಟಿ ನಿರ್ದೇಶಕರು ಭೌತಿಕ ಕಡತಗಳನ್ನೂ ಪರಿಶೀಲನೆ ಮಾಡಿದ್ದಾರೆ. ಫಲಾನುಭವಿ ರೈತರ ಎಲ್ಲಾ ನಮೂನೆಗಳು ಅಪೂರ್ಣವಾಗಿ ಭರ್ತಿ ಮಾಡಲಾಗಿದೆ. ಮಾರ್ಗಸೂಚಿಗಳ ಅನ್ವಯ ನಿಗದಿಪಡಿಸಿದ ದಾಖಲಾತಿಗಳಲ್ಲಿ ಅಧಿಕಾರಿ ಹಾಗೂ ರೈತರ ಸಹಿಯೇ ಇಲ್ಲ. ಆದರೂ ಸಹ ಸಬ್ಸಿಡಿಗೆ ಮಂಜೂರಾತಿ ನೀಡಿರುವುದನ್ನು ಪರಿಶೀಲನೆ ವೇಳೆ ಜಂಟಿ ನಿರ್ದೇಶಕರು ಬಯಲು ಮಾಡಿರುವುದು ಗೊತ್ತಾಗಿದೆ.

 

ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿನ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯ ಬ್ಯಾಂಕಿನ ವಿವರಗಳಿಗೆ ತಾಳೆಯಾಗಿಲ್ಲ. ರೈತರ ಎನ್ಒಸಿಯಲ್ಲಿ ಬಿಲ್‌ನ ಒಟ್ಟು ಮೊತ್ತ, ರೈತರ ವಂತಿಕೆಯ ಸಹಾಯಧನದ ಮೊತ್ತ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಿಲ್ಲ. ಹಾಗೆಯೇ ಈ ಮಾಹಿತಿಗೆ ಸಹಾಯಕ ತೋಟಗಾರಿಕೆ ನಿರ್ದೇಶಕರ ಸಹಿ ಕೂಡ ಇರಲಿಲ್ಲ.

 

ಅದೇ ರೀತಿ ಹನಿ ನೀರಾವರಿ ವಿನ್ಯಾಸ ಅಪೂರ್ಣವಾಗಿತ್ತು. ಈ ವಿನ್ಯಾಸಕ್ಕೂ ಸಹ ಯಾವುದೇ ಅಧಿಕಾರಿಯ ಸಹಿ ಇರಲಿಲ್ಲ. ಕೃಷಿ ಇಲಾಖೆಯಿಂದ ನೀಡಲಾದ ಎನ್‌ಒಸಿ ಮೇಲೆ ದಿನಾಂಕ ನಮೂದಿಸಿಲ್ಲ. ಹಾಗೂ ಈ ದಾಖಲಾತಿಯು, ಮಾರ್ಗಸೂಚಿಯಲ್ಲಿ ತಿಳಿಸಿದ ನಿಗದಿತ ನಮೂನೆಯಲ್ಲಿ ಇರಲಿಲ್ಲ ಎಂಬುದು ಪರಿಶೀಲನೆ ವೇಳೆ ಕಂಡು ಬಂದಿರುವುದು ವರದಿಯಿಂದ ತಿಳಿದು ಬಂದಿದೆ.

 

 

ಅಲ್ಲದೇ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತಾಂತ್ರಿಕ ಸಹಾಯಕರು ಹಾಗೂ ಅನುಷ್ಠಾನ ಅಧಿಕಾರಿಗಳು ಮಾರ್ಗಸೂಚಿಗಳ ಅನ್ವಯ ಕಡತ ಹಾಗೂ ತಾಕು ಪರಿಶೀಲನೆ ಸರಿಯಾಗಿ ಮಾಡಿಲ್ಲ ಎಂಬುದನ್ನು ಜಂಟಿ ನಿರ್ದೇಶಕರು ಪರಿಶೀಲನೆ ವೇಳೆ ಪತ್ತೆ ಹಚ್ಚಿರುವುದು ವರದಿಯಿಂದ ಗೊತ್ತಾಗಿದೆ.

 

ಭೌತಿಕ ತಪಾಸಣೆಯಲ್ಲಿ ಕಂಡು ಬಂದಿದ್ದೇನು?

 

ಅಜಲಪೂರದ ತಾಯಮ್ಮ ಎಂಬುವರು ಸರ್ವೆ ನಂಬರ್‍‌ 80, 179, 366,367ರಲ್ಲಿ ಅಭಿವೃದ್ಧಿ ಪಡಿಸಿದ್ದ 1 ಎಕರೆ 7 ಗುಂಟೆಯಲ್ಲಿ ಕಲ್ಲಂಗಡಿಯನ್ನು ಹನಿ ನೀರಾವರಿ ಅಡಿಯಲ್ಲಿ ಬೆಳೆದಿದ್ದಾರೆ. ಆದರೆ ಸರ್ವೆ ನಂಬರ್‍‌ 80ರಲ್ಲಿ ಹನಿ ನೀರಾವರಿ ಘಟಕದ ಮೈನ್‌ ಲೈನ್‌ ಮತ್ತು ಸಬ್‌ ಲೈನ್‌ ಹಾಗೂ ಲ್ಯಾಟ್ರಲ್‌ ಗಳನ್ನು ಒಂದು ಗಿಡದ ಕೆಳಗಡೆ ಹಾಕಲಾಗಿತ್ತು. ಸರ್ವೆ ನಂಬರ್‍‌ 179, 366, 367 ಗಳು ಸರ್ವೆ ನಂಬರ್‍‌ 80ರಿಂದ ಬಹಳ ದೂರು ಇತ್ತು. ಅಲ್ಲದೇ ಹನಿ ನೀರಾವರಿ ಪದ್ಧತಿ ಅಳವಡಿಕೆಯ ಯಾವುದೇ ಕುರುಹುಗಳು ಅಲ್ಲಿ ಸಿಕ್ಕಿರಲಿಲ್ಲ ಎಂದು ಪರಿಶೀಲನೆ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಯಲಸತ್ತಿ ಗ್ರಾಮದ ಸರ್ವೆ ನಂಬರ್‍‌ 460, 146, 147ರಲ್ಲಿ ಮಲ್ಲಮ್ಮ ಎಂಬುವರು 1 ಕೆರೆ 10 ಗುಂಟೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಕಲ್ಲಂಗಡಿಯನ್ನು ಹನಿ ನೀರಾವರಿ ಅಳವಡಿಕೆ ಮಾಡಲಾಗಿದೆ ಎಂದು ಸಬ್ಸಿಡಿ ಪಡೆದಿದ್ದಾರೆ. ಆದರೆ ಈ ಜಮೀನಿನಲ್ಲಿ ಟೇಕ್‌ ಅಪ್‌ ಮಾತ್ರ ಇತ್ತೇ ವಿನಃ ಲ್ಯಾಟ್ರಲ್‌ ಇರಲಿಲ್ಲ. ಸರ್ವೆ ನಂಬರ್‍‌ 146 ಮತ್ತು 147 ಗಳು ಸರ್ವೆ ನಂಬರ್‍‌ 469 ರಿಂದ ಬಹಳ ದೂರ ಇದೆ. ಹನಿ ನೀರಾವರಿ ಪದ್ಧತಿ ಅಳವಡಿಕೆಯ ಯಾವುದೇ ಕುರುಹುಗಳು ಸಿಕ್ಕಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

 

ಇದೇ ಯಲಸತ್ತಿ ಗ್ರಾಮದ ಮಲ್ಲಮ್ಮ ಎಂಬ ಮತ್ತೊಬ್ಬ ಫಲಾನುಭವಿಯು ಸರ್ವೆ ನಂಬರ್ 147, 489/6, 489/10, 146ರಲ್ಲಿ 1 ಎಕರೆ 40 ಗುಂಟೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆಯನ್ನು ಹನಿ ನೀರಾವರಿ ಪದ್ಧತಿ ಅಳವಡಿಕೆ ಮಾಡಿದ್ದಾರೆ ಎಂದು ದಾಖಲೆ ಸೃಷ್ಟಿಸಲಾಗಿತ್ತು. ಆದರೆ ವಾಸ್ತವದಲ್ಲಿ ದಿಶಾಂಕ್ ಆಪ್‌ನಲ್ಲಿ ಸವೆf ನಂಬರ್‍‌ 489/2 ಎಂದು ತೋರಿಸುತ್ತದೆ. ಈ ಜಮೀನಿನಲ್ಲಿಯೂ ಟೇಕ್‌ ಅಪ್‌ ಮಾತ್ರ ಇತ್ತೇ ವಿನಃ ಲ್ಯಾಟ್ರಲ್‌ ಇರಲಿಲ್ಲ. ಸರ್ವೆ ನಂಬರ್‍‌ 147, 489/6, 489/10, 146 ರ ಜಮೀನುಗಳು ಬಹಳ ದೂರ ಇವೆ. ಇಲ್ಲಿಯೂ ಸಹ ಹನಿ ನೀರಾವರಿ ಪದ್ಧತಿ ಅಳವಡಿಕೆಯ ಯಾವುದೇ ಕುರುಹು ದೊರೆತಿಲ್ಲ.

 

ಗುಂಜನೂರು ಗ್ರಾಮದ ನಿಂಗಾರೆಡ್ಡಿ ಎಂಬುವರು ಸರ್ವೆ ನಂಬರ್‍‌ 172ರಲ್ಲಿ 0.80 ಗುಂಟೆಯಲ್ಲಿ ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿ ಕಲ್ಲಂಗಡಿಯನ್ನು ಬೆಳೆದಿದ್ದಾರೆ. ಈ ಜಮೀನಿನಲ್ಲಿಯೂ ಟೇಕ್‌ ಅಪ್‌ ಮಾತ್ರ ಇತ್ತು. ಲ್ಯಾಟ್ರಲ್‌ ಇರುವುದಿಲ್ಲ. ರೈತರ ತಾಕಿಗೆ ಭೇಟಿ ನೀಡಿದಾಗ ದಿಶಾಂಕ ಆಪ್‌ನಲ್ಲಿ ಸರ್ವೆ ನಂಬರ್‍‌ 91/1 ಎಂದು ತೋರಿಸುತ್ತದೆ. ಗುಂಜುನೂರು ಗ್ರಾಮದ ಶಂಕರ ಎಂಬುವರು ಸರ್ವೆ ನಂಬರ್‍‌ 290ರಲ್ಲಿ ಅಭಿವೃದ್ಧಿಪಡಿಸಿದ ಜಮೀನಿನಲ್ಲಿಯೂ ಸಹ ಟೇಕ್‌ ಅಪ್‌ ಮಾತ್ರ ಇದೆ. ಲ್ಯಾಟ್ರಲ್‌ ಇರುವುದಿಲ್ಲ. ಈ ರೈತರ ತಾಕಿಗೆ ಭೇಟಿ ನೀಡಿದಾಗ ದಿಶಾಂಕ ಆಫ್‌ನಲ್ಲಿ ಸರ್ವೆ ನಂಬರ್‍‌ 90 ಎಂದು ತೋರಿಸುತ್ತಿದೆ ಎಂದು ವರದಿ ನೀಡಿರುವುದು ಗೊತ್ತಾಗಿದೆ.

 

ಇದೇ ಗುಂಜನೂರು ಗ್ರಾಮದ ತಿಪ್ಪಾ ಎಂಬುವರ ಸರ್ವೆ ನಂಬರ್‍‌ 64ರಲ್ಲಿಯೂ ಹನಿ ನೀರಾವರಿ ಘಟಕದ ಮೈನ್‌ ಲೈನ್‌, ಸಬ್‌ ಲೈನ್‌, ಟಟೇಕ್‌ ಅಪ್‌ ಹಾಗೂ ಲ್ಯಾಟ್ರಲ್‌ ಗಳನ್ನು ಒಂದ ಗಿಡದ ಕೆಳಗಡೆ ಹಾಕಲಾಗಿತ್ತು. ಈ ರೈತರ ತಾಕಿಗೆ ಭೇಟಿ ನೀಡಿದಾಗ ದಿಶಾಂಕ ಆಪ್‌ನಲ್ಲಿ ಸರ್ವೆ ನಂಬರ್‍‌ 46 ಎಂದು ತೋರಿಸುತ್ತದೆ. ಸರ್ವೆ ನಂಬರ್‍‌ 33, 32ರಲ್ಲಿ ಹನಿ ನೀರಾವರಿ  ಪದ್ಧತಿ ಅಳವಡಿಕೆಯ ಯಾವುದೇ ಕುರುಹುಗಳು ದೊರೆತಿಲ್ಲ.

 

 

ತಿಪ್ಪಯ್ಯ ಎಂಬುವರು ಸರ್ವೆ ನಂಬರ್‍‌ 2 ಮತ್ತು 3/2ರಲ್ಲಿ ಮೆಣಸಿನಕಾಯಿ ಬೆಳೆದಿರುವ ಪ್ರದೇಶದಲ್ಲಿಯೂ ಹನಿ ನೀರಾವರಿ ಘಟಕದ ಮೈನ್‌ ಲೈನ್‌, ಸಬ್‌ ಲೈನ್‌ ಟೇಕ್‌ ಅಪ್‌ ಹಾಗೂ ಲ್ಯಾಟ್ರಲ್‌ ಗಳನ್ನು ಒಂದು ಗಿಡದ ಕೆಳಗಡೆ ಹಾಕಲಾಗಿತ್ತು. ಹಣಮಂತ ಎಂಬುವರು ರೈತರ ತಾಕಿನಲ್ಲಿಯೂ ದಿಶಾಂಕ ಆಪ್‌ನಲ್ಲಿ ಸರ್ವೆ ನಂಬರ್‍‌ 268/2 ಬದಲಾಗಿ ಸರ್ವೆ ನಂಬರ್‍‌ 92 ಎಂದು ತೋರಿಸುತ್ತದೆ. ಸರ್ವೆ ನಂಬರ್‍‌ 268/2 ಗೆ ಸಂಬಂಧಿಸಿದಂತೆ ಹನಿ ನೀರಾವರಿ ಘಟಕದ ಮೈನ್‌ ಲೈನ್‌, ಸಬ್‌ ಲೈನ್‌, ಟೇಕ್‌ ಅಪ್‌ ಹಾಗೂ ಲ್ಯಾಟ್ರೆಲ್‌ಗಳನ್ನು ಒಂದು ಗಿಡದ ಕೆಳಗೆ ಹಾಕಲಾಗಿತ್ತು.

 

ಗುಂಜನೂರಿನ ಬಸವರಾಜ ಎಂಬ ರೈತ ಸರ್ವೆ ನಂಬರ್ 172,173, 175ರಲ್ಲಿ ಅಭಿವೃದ್ಧಿ ಪಡಿಸಿದ್ದ 1 ಎಕರೆ 2 ಗುಂಟೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಗೆ ಹನಿ ನೀರಾವರಿ ಘಟಕ ಅಳವಡಿಸಿದ್ದರು. ಆದರೆ ಪ್ರಸ್ತುತ ನುಗ್ಗೆ ಬೆಳೆಗೆ ಹನಿ ನೀರಾವರಿ ಘಟಕ ಅಳವಡಿಸಿದ್ದಾರೆ. ಸಾಬವ್ವ ಎಂಬುವರು ಸರ್ವೆ ನಂಬರ್‍‌ 268/2ರ ಸ್ಥಳ ಪರಿಶೀಲನೆ ಸಮಯದಲ್ಲಿ ನನ್ನ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿಯನ್ನು ಯಾರೂ ಅಳವಡಿಕೆ ಮಾಡಿಲ್ಲ. ನನಗೆ ಈವರೆಗೆ ಯಾವುದೇ ಡ್ರಿಪ್‌ ಸಹಾಯಧನ ತೆಗೆದುಕೊಂಡಿಲ್ಲ ಎಂದು ಜಂಟಿ ನಿರ್ದೇಶಕರ ಎದುರು ಹೇಳಿಕೆ ನೀಡಿದ್ದಾರೆ.

 

ರೈತರ ಸಹಿ ಇಲ್ಲ, ಅಧಿಕಾರಿಯ ಸಹಿಯೂ ಇಲ್ಲ, ತಾಳೆಯಾಗದ ಆರ್‍‌ಟಿಜಿಎಸ್‌

 

ಗುಂಜನೂರಿನ ರಘುನಾಥ ರೆಡ್ಡಿ ಎಂಬುವರು ಸರ್ವೆ ನಂಬರ್‍‌ 4/2ರಲ್ಲಿ 1.20 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆಗೆ ಸಂಬಂಧಿಸಿದಂತೆ ಕಡತಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿನ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯ ಬ್ಯಾಂಕಿನ ವಿವರಗಳು ತಾಳೆಯಾಗುತ್ತಿಲ್ಲ. ರೈತರ ಎನ್‌ಒಸಿಯಲ್ಲಿ ಬಿಲ್‌ ಒಟ್ಟು ಮೊತ್ತ, ರೈತರ ವಂತಿಕೆಯ ಸಹಾಯ ಧನದ ಮೊತ್ತ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಿರುವುದಿಲ್ಲ. ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಸಹಿಯೂ ಇರಲಿಲ್ಲ.

 

ಅಲ್ಲದೇ ಹನಿ ನೀರಾವರಿ ವಿನ್ಯಾಸ ಅಪೂರ್ಣವಾಗಿತ್ತು. ಯಾವುದೇ ಅಧಿಕಾರಿಯ ಸಹಿಯೂ ಸಹ ಈ ವಿನ್ಯಾಸಕ್ಕೆ ಇರಲಿಲ್ಲ. ಛಾಪಾ ಕಾಗದದ ಮೇಲೆ ರೈತರ ಸಹಿಯೂ ಇರಲಿಲ್ಲ. ಈ ರೈತರು 2020-21ನೇ ಸಾಲಿನಲ್ಲಿಯೇ ಹನಿ ನೀರಾವರಿ ಸಹಾಯ ಧನ ಪಡೆದಿದ್ದರು. ಆದರೂ 2023-2024ನೇ ಸಾಲಿನಲ್ಲಿ ಎಕ್ಸ್‌ಟೆನ್ಷನ್‌ ಪ್ಲಾಟ್‌ ಎಂದು ಪರಿಗಣಿಸದೇ ಸ್ಕ್ರೀನ್‌ ಫಿಲ್ಟರ್‍‌ ವೆಂಚುರಿ, ಬೈ ಪಾಸ್‌ ಅಸೆಂಬ್ಲಿಗೆ ಸಹಾಯ ಧನ ಪಾವತಿಸಿರುವುದನ್ನು ಪರಿಶೀಲನೆ ವೇಳೆ ಪತ್ತೆ ಹಚ್ಚಿರುವುದು ವರದಿಯಿಂದ ಗೊತ್ತಾಗಿದೆ.

 

ಗುಂಜನೂರಿನ ತಿಪ್ಪ್ಯಾ ಎಂಬ ರೈತರ ಜಮೀನಿಗೂ ಸಂಬಂಧಿಸಿದಂತೆ ಹಲವು ಲೋಪಗಳು ಬಯಲಾಗಿವೆ. ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯು ಬ್ಯಾಂಕ್‌ನ ವಿವರಗಳೊಂದಿಗೆ ತಾಳೆಯಾಗುತ್ತಿಲ್ಲ. ರೈತರ ಎನ್‌ಒಸಿಯಲ್ಲಿ ಬಿಲ್‌ನ ಒಟ್ಟು ಮೊತ್ತ, ರೈತರ ವಂತಿಕೆಯ ಸಹಾಯಧನದ ಮೊತ್ತ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಿಲ್ಲ ಎಂಬುದನ್ನು ಕಡತದ ಪರಿಶೀಲನೆಯಿಂದ ಬಯಲು ಮಾಡಿರುವುದು ತಿಳಿದು ಬಂದಿದೆ.

 

 

ಅಲ್ಲದೇ ಇದಕ್ಕೆ ರೈತರ ಸಹಿಯೂ ಇರಲಿಲ್ಲ. ಹನಿ ನೀರಾವರಿ ವಿನ್ಯಾಸವೂ ಅಪೂರ್ಣವಾಗಿದೆ. ಯಾವುದೇ ಅಧಿಕಾರಿಯು ಸಹಿಯೂ ಇಲ್ಲ. ಛಾಪಾ ಕಾಗದದ ಮೇಲೆ ರೈತರ ಸಹಿ ಇರಲಿಲ್ಲ. ಎರಡು ಸರ್ವೆ ನಂಬರ್‍‌ಗಳ ಮಧ್ಯೆ ಬಹಳ ಅಂತರವಿದೆ. ನೀರಿನ ಮೂಲ ಪ್ರಮಾಣ ಪತ್ರದಲ್ಲಿ ಯಾವ ಸರ್ವೆ ನಂಬರ್‍‌ನಲ್ಲಿ ನೀರಿನ ಮೂಲ ಇದೆ ಎಂದು ಸ್ಪಷ್ಟವಾಗಿ ನಮೂದಿಸಿಲ್ಲ. ಮಣ್ಣು ಮತ್ತು ನೀರು ಪರೀಕ್ಷೆ ಪ್ರಮಾಣ ಪತ್ರಕ್ಕೆ ಎರಡು ಸರ್ವೆ ನಂಬರ್‍‌ ಗೆ ಒಂದೇ ಇರುವುದನ್ನು ಪತ್ತೆ ಹಚ್ಚಿರುವುದು ಗೊತ್ತಾಗಿದೆ.

 

ಮಲ್ಲಮ್ಮ ಎಂಬುವರ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯು ಬ್ಯಾಂಕ್‌ನ ವಿವರಗಳೊಂದಿಗೆ ತಾಳೆಯಾಗುತ್ತಿಲ್ಲ. ರೈತರ ಎನ್‌ಒಸಿಯಲ್ಲಿ ಬಿಲ್‌ನ ಒಟ್ಟು ಮೊತ್ತ, ರೈತರ ವಂತಿಕೆಯ ಸಹಾಯಧನದ ಮೊತ್ತ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಿಲ್ಲ. ಅಲ್ಲದೇ ಇದಕ್ಕೆ ರೈತರ ಸಹಿಯೂ ಇರುವುದಿಲ್ಲ. ಹನಿ ನೀರಾವರಿ ವಿನ್ಯಾಸವೂ ಅಪೂರ್ಣವಾಗಿದೆ. ಯಾವುದೇ ಅಧಿಕಾರಿಯು ಸಹಿಯೂ ಇಲ್ಲ. ಛಾಪಾ ಕಾಗದದ ಮೇಲೆ ರೈತರ ಸಹಿ ಇಲ್ಲ. ಎರಡು ಸರ್ವೆ ನಂಬರ್‍‌ಗಳ ಮಧ್ಯೆ ಬಹಳ ಅಂತರವಿದೆ. ನೀರಿನ ಮೂಲ ಪ್ರಮಾಣ ಪತ್ರದಲ್ಲಿ ಯಾಔ ಸರ್ವೆ ನಂಬರ್‍‌ನಲ್ಲಿ ನೀರಿನ ಮೂಲ ಇದೆ ಎಂದು ಸ್ಪಷ್ಟವಾಗಿ ನಮೂದಿಸಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಹಣಮ್ಯ ಎಂಬುವರ ಜಮೀನಿನಲ್ಲಿಯೂ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯು ಬ್ಯಾಂಕ್‌ನ ವಿವರಗಳೊಂದಿಗೆ ತಾಳೆಯಾಗುತ್ತಿಲ್ಲ.

 

 

ರೈತರ ಎನ್‌ಒಸಿಯಲ್ಲಿ ಬಿಲ್‌ನ ಒಟ್ಟು ಮೊತ್ತ, ರೈತರ ವಂತಿಕೆಯ ಸಹಾಯಧನದ ಮೊತ್ತ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಿಲ್ಲ. ಅಲ್ಲದೇ ಇದಕ್ಕೆ ರೈತರ ಸಹಿಯೂ ಇರುವುದಿಲ್ಲ. ಹನಿ ನೀರಾವರಿ ವಿನ್ಯಾಸವೂ ಅಪೂರ್ಣವಾಗಿದೆ. ಯಾವುದೇ ಅಧಿಕಾರಿಯು ಸಹಿಯೂ ಇಲ್ಲ. ಛಾಪಾ ಕಾಗದದ ಮೇಲೆ ರೈತರ ಸಹಿ ಇಲ್ಲ. ಎರಡು ಸರ್ವೆ ನಂಬರ್‍‌ಗಳ ಮಧ್ಯೆ ಬಹಳ ಅಂತರವಿದೆ. ನೀರಿನ ಮೂಲ ಪ್ರಮಾಣ ಪತ್ರದಲ್ಲಿ ಸರ್ವೆ ನಂಬರ್‍‌ 479ರ ನೀರಿನ ಮೂಲ ಪ್ರಮಾಣ ಪತ್ರ ಲಗತ್ತಿಸಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

 

ಚಿನ್ನಾಕರ ಗ್ರಾಮದ ಮಲ್ಲಮ್ಮ ಎಂಬುವರ ಜಮೀನಿನಲ್ಲಿ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯು ಬ್ಯಾಂಕ್‌ನ ವಿವರಗಳೊಂದಿಗೆ ತಾಳೆಯಾಗುತ್ತಿಲ್ಲ. ರೈತರ ಎನ್‌ಒಸಿಯಲ್ಲಿ ಬಿಲ್‌ನ ಒಟ್ಟು ಮೊತ್ತ, ರೈತರ ವಂತಿಕೆಯ ಸಹಾಯಧನದ ಮೊತ್ತ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಿಲ್ಲ. ಅಲ್ಲದೇ ಇದಕ್ಕೆ ರೈತರ ಸಹಿಯೂ ಇರುವುದಿಲ್ಲ.

 

ಹನಿ ನೀರಾವರಿ ವಿನ್ಯಾಸವೂ ಅಪೂರ್ಣವಾಗಿದೆ. ಯಾವುದೇ ಅಧಿಕಾರಿಯ ಸಹಿ ಇಲ್ಲ. ಛಾಪಾ ಕಾಗದದ ಮೇಲೆ ರೈತರ ಸಹಿ ಇಲ್ಲ. ಸಹಾಯಕ ತೋಟಗಾರಿಕೆ ನಿರ್ದೇಶಕರು ಭರ್ತಿ ಮಾಡಬೇಕಾದ ನಮೂನೆ 3ರಲ್ಲಿ ಸಹಿ ಇಲ್ಲ. ಮಣ್ಣು ಮತ್ತು ನೀರು ಪರೀಕ್ಷೆ ಪ್ರಮಾಣ ಪತ್ರಕ್ಕೆ ಎರಡು ಸರ್ವೆ ನಂಬರ್‍‌ಗೆ ಒಂದೇ ನಂಬರ್‍‌ ಇರುವುದನ್ನು ಪತ್ತೆ ಹಚ್ಚಿರುವುದು ತಿಳಿದು ಬಂದಿದೆ.

 

ಗುಂಜನೂರಿನ ತಿಪ್ಪಯ್ಯ ಎಂಬುವರ ಜಮೀನಿನಲ್ಲಿಯೂ ಸಹ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯು ಬ್ಯಾಂಕ್‌ನ ವಿವರಗಳೊಂದಿಗೆ ತಾಳೆಯಾಗುತ್ತಿಲ್ಲ. ರೈತರ ಎನ್‌ಒಸಿಯಲ್ಲಿ ಬಿಲ್‌ನ ಒಟ್ಟು ಮೊತ್ತ, ರೈತರ ವಂತಿಕೆಯ ಸಹಾಯಧನದ ಮೊತ್ತ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಿಲ್ಲ. ಅಲ್ಲದೇ ಇದಕ್ಕೆ ರೈತರ ಸಹಿಯೂ ಇರುವುದಿಲ್ಲ. ಹನಿ ನೀರಾವರಿ ವಿನ್ಯಾಸವೂ ಅಪೂರ್ಣವಾಗಿದೆ. ಯಾವುದೇ ಅಧಿಕಾರಿಯು ಸಹಿಯೂ ಇರಲಿಲ್ಲ.

 

ಛಾಪಾ ಕಾಗದದ ಮೇಲೆ ರೈತರ ಸಹಿ ಇರಲಿಲ್ಲ. ಎರಡು ಸರ್ವೆ ನಂಬರ್‍‌ಗಳ ಮಧ್ಯೆ ಬಹಳ ಅಂತರವಿತ್ತು. ನೀರಿನ ಮೂಲ ಪ್ರಮಾಣ ಪತ್ರದಲ್ಲಿ ಯಾವ ಸರ್ವೆ ನಂಬರ್‍‌ನಲ್ಲಿ ನೀರಿನ ಮೂಲ ಇದೆ ಎಂದು ಸ್ಪಷ್ಟವಾಗಿ ನಮೂದಿಸಿಲ್ಲ. ಮಣ್ಣು ಮತ್ತು ನೀರು ಪರೀಕ್ಷೆ ಪ್ರಮಾಣ ಪತ್ರಕ್ಕೆ ಎರಡು ಸರ್ವೆ ನಂಬರ್‍‌ ಗೆ ಒಂದೇ ಇದೆ. ಕಾರ್ಯಾದೇಶ ಹಾಗೂ ಇತರೆ ದಾಖಲಾತಿಗಳು ತಿಪ್ಪಯ್ಯ ತಂದೆ ಯಂಕಪ್ಪ ಹೆಸರಿನಲ್ಲಿದೆ. ಟ್ಯಾಕ್ಸ್‌ ಇನ್‌ವಾಯ್ಸ್‌ ಮಾತ್ರ ದಂತಾಪುರದ ತಿಮ್ಮಾರೆಡ್ಡಿ ಹೆಸರಿನಲ್ಲಿರುವುದನ್ನು ಪತ್ತೆ ಹಚ್ಚಿರುವುದು ಗೊತ್ತಾಗಿದೆ.

 

ಗಂಜನೂರಿನ ಲಕ್ಷ್ಮಣ ಎಂಬುವರ ಜಮೀನಿನಲ್ಲಿ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯು ಬ್ಯಾಂಕ್‌ನ ವಿವರಗಳೊಂದಿಗೆ ತಾಳೆಯಾಗುತ್ತಿಲ್ಲ. ರೈತರ ಎನ್‌ಒಸಿಯಲ್ಲಿ ಬಿಲ್‌ನ ಒಟ್ಟು ಮೊತ್ತ, ರೈತರ ವಂತಿಕೆಯ ಸಹಾಯಧನದ ಮೊತ್ತ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಿಲ್ಲ. ಅಲ್ಲದೇ ಇದಕ್ಕೆ ರೈತರ ಸಹಿಯೂ ಇರುವುದಿಲ್ಲ. ಹನಿ ನೀರಾವರಿ ವಿನ್ಯಾಸವೂ ಅಪೂರ್ಣವಾಗಿದೆ.

 

 

ಯಾವುದೇ ಅಧಿಕಾರಿಯು ಸಹಿಯೂ ಇರಲಿಲ್ಲ. ಛಾಪಾ ಕಾಗದದ ಮೇಲೆ ರೈತರ ಸಹಿ ಇಲ್ಲ. ಎರಡು ಸರ್ವೆ ನಂಬರ್‍‌ಗಳ ಮಧ್ಯೆ ಬಹಳ ಅಂತರವಿದೆ. ನೀರಿನ ಮೂಲ ಪ್ರಮಾಣ ಪತ್ರದಲ್ಲಿ ಯಾವ ಸರ್ವೆ ನಂಬರ್‍‌ನಲ್ಲಿ ನೀರಿನ ಮೂಲ ಇದೆ ಎಂದು ಸ್ಪಷ್ಟವಾಗಿ ನಮೂದಿಸಿಲ್ಲ. ಮಣ್ಣು ಮತ್ತು ನೀರು ಪರೀಕ್ಷೆ ಪ್ರಮಾಣ ಪತ್ರಕ್ಕೆ ಎರಡು ಸರ್ವೆ ನಂಬರ್‍‌ ಗೆ ಒಂದೇ ಇದೆ.

 

ಮಲ್ಲಪ್ಪ ಎಂಬುವರ ಜಮೀನಿನಲ್ಲಿಯೂ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯು ಬ್ಯಾಂಕ್‌ನ ವಿವರಗಳೊಂದಿಗೆ ತಾಳೆಯಾಗಿಲ್ಲ. ರೈತರ ಎನ್‌ಒಸಿಯಲ್ಲಿ ಬಿಲ್‌ನ ಒಟ್ಟು ಮೊತ್ತ, ರೈತರ ವಂತಿಕೆಯ ಸಹಾಯಧನದ ಮೊತ್ತ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಿಲ್ಲ. ಅಲ್ಲದೇ ಇದಕ್ಕೆ ರೈತರ ಸಹಿಯೂ ಇರುವುದಿಲ್ಲ. ಹನಿ ನೀರಾವರಿ ವಿನ್ಯಾಸವೂ ಅಪೂರ್ಣವಾಗಿದೆ.

 

ಯಾವುದೇ ಅಧಿಕಾರಿಯು ಸಹಿಯೂ ಇರಲಿಲ್ಲ. ಛಾಪಾ ಕಾಗದದ ಮೇಲೆ ರೈತರ ಸಹಿ ಇಲ್ಲ. ಎರಡು ಸರ್ವೆ ನಂಬರ್‍‌ಗಳ ಮಧ್ಯೆ ಬಹಳ ಅಂತರವಿದೆ. ನೀರಿನ ಮೂಲ ಪ್ರಮಾಣ ಪತ್ರದಲ್ಲಿ ಯಾಔ ಸರ್ವೆ ನಂಬರ್‍‌ನಲ್ಲಿ ನೀರಿನ ಮೂಲ ಇದೆ ಎಂದು ಸ್ಪಷ್ಟವಾಗಿ ನಮೂದಿಸಿಲ್ಲ. ಮಣ್ಣು ಮತ್ತು  ನೀರು ಪರೀಕ್ಷೆ ಪ್ರಮಾಣ ಪತ್ರಕ್ಕೆ ಎರಡು ಸರ್ವೆ ನಂಬರ್‍‌ ಗೆ ಒಂದೇ ಇರುವುದನ್ನು ಬಯಲು ಮಾಡಿರುವುದು ಗೊತ್ತಾಗಿದೆ.

 

ಲಕ್ಷ್ಮಿ ಎಂಬುವರ ಜಮೀನಿನಲ್ಲಿ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯು ಬ್ಯಾಂಕ್‌ನ ವಿವರಗಳೊಂದಿಗೆ ತಾಳೆಯಾಗುತ್ತಿಲ್ಲ. ರೈತರ ಎನ್‌ಒಸಿಯಲ್ಲಿ ಬಿಲ್‌ನ ಒಟ್ಟು ಮೊತ್ತ, ರೈತರ ವಂತಿಕೆಯ ಸಹಾಯಧನದ ಮೊತ್ತ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಿಲ್ಲ. ಅಲ್ಲದೇ ಇದಕ್ಕೆ ರೈತರ ಸಹಿಯೂ ಇರುವುದಿಲ್ಲ. ಹನಿ ನೀರಾವರಿ ವಿನ್ಯಾಸವೂ ಅಪೂರ್ಣವಾಗಿದೆ.

 

ಯಾವುದೇ ಅಧಿಕಾರಿಯು ಸಹಿಯೂ ಇರಲಿಲ್ಲ. ಛಾಪಾ ಕಾಗದದ ಮೇಲೆ ರೈತರ ಸಹಿ ಇಲ್ಲ. ಎರಡು ಸರ್ವೆ ನಂಬರ್‍‌ಗಳ ಮಧ್ಯೆ ಬಹಳ ಅಂತರವಿತ್ತು. ನೀರಿನ ಮೂಲ ಪ್ರಮಾಣ ಪತ್ರದಲ್ಲಿ ಯಾವ ಸರ್ವೆ ನಂಬರ್‍‌ನಲ್ಲಿ ನೀರಿನ ಮೂಲ ಇದೆ ಎಂದು ಸ್ಪಷ್ಟವಾಗಿ ನಮೂದಿಸಿರಲಿಲ್ಲ. ಮಣ್ಣು ಮತ್ತು ನೀರು ಪರೀಕ್ಷೆ ಪ್ರಮಾಣ ಪತ್ರಕ್ಕೆ ಎರಡು ಸರ್ವೆ ನಂಬರ್‍‌ ಗೆ ಒಂದೇ ಇದೆ. ನೀರಿನ ಮೂಲದ ಪ್ರಮಾಣ ಪತ್ರ ಇರಲಿಲ್ಲ.

 

 

ಚಿನ್ನಾಕಾರ ಗ್ರಾಮದ ನಾಗಯ್ಯ ಎಂಬುವರ ಜಮೀನಿಗೆ ಸಂಬಂಧಿಸಿದಂತೆ ರೈತರ ಬ್ಯಾಂಕ್‌ನ ಪಾಸ್‌ ಬುಕ್‌ ಪ್ರತಿ ಲಗತ್ತಿಸಿಲ್ಲ. ಡೆಲಿವರಿ ಚಲನ್‌ ಖಾಲಿ ಇದೆ. ಹನಿ ನೀರಾವರಿ ವಿನ್ಯಾಸ ಅಪೂರ್ಣವಾಗಿದೆ. ಯಾವುದೇ ಅಧಿಕಾರಿಯ ಸಹಿ ಇಲ್ಲ. ಗುಂಜನೂರಿನ ರಾಜಪ್ಪ ಎಂಬುವರ ಜಮೀನಿಗೆ ಸಂಬಂಧಿಸಿದಂತೆ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯು ಇರಲಿಲ್ಲ.

 

ರೈತರ ಬ್ಯಾಂಕ್‌ನ ಪಾಸ್‌ ಬುಕ್‌ ಪ್ರತಿ ಲಗತ್ತಿಸಿರಲಿಲ್ಲ. ಇ-ವೇ ಬಿಲ್‌ ಲಗತ್ತಿಸಿಲ್ಲ. ಹನಿ ನೀರಾವರಿ ವಿನ್ಯಾಸವೂ ಅಪೂರ್ಣವಾಗಿದೆ. ಯಾವುದೇ ಅಧಿಕಾರಿಯು ಸಹಿಯೂ ಇಲ್ಲ. ಛಾಪಾ ಕಾಗದದ ಮೇಲೆ ರೈತರ ಸಹಿ ಇಲ್ಲ. ನೀರಿನ ಮೂಲದ ಪ್ರಮಾಣ ಪತ್ರ ಇರಲಿಲ್ಲ. ನಸಲವಾಯಿ ಗ್ರಾಮದ ವೆಂಕಟೇಶ್ ಎಂಬುವರ ಜಮೀನಿನಲ್ಲಿಯೂ ರೈತರ ವಂತಿಕೆ ಪಾವತಿಸಿದ ಕುರಿತು ಕಡತದಲ್ಲಿ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿ ಇರುವುದಿಲ್ಲ. ಇ ವೇ ಬಿಲ್‌ ಲಗತ್ತಿಸಿಲ್ಲ. ಹನಿ ನೀರಾವರಿ ವಿನ್ಯಾಸ ಅಪೂರ್ಣವಾಗಿದೆ. ಯಾವುದೇ ಅಧಿಕಾರಿಯ ಸಹಿ ಇರಲಿಲ್ಲ.

 

ಮಿನಾಸ್ಪೂರ ಗ್ರಾಮದ ಸಣ್ಣ ನರಸಪ್ಪ ಜಮೀನಿಗೆ ಸಂಬಂಧಿಸಿದಂತೆ ರೈತರ ವಂತಿಕೆ ಪಾವತಿಸಿದ ಕುರಿತು ಕಡತದಲ್ಲಿ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿ ಇರುವುದಿಲ್ಲ. ಇ ವೇ ಬಿಲ್‌ ಲಗತ್ತಿಸಿಲ್ಲ. ಹನಿ ನೀರಾವರಿ ವಿನ್ಯಾಸ ಅಪೂರ್ಣವಾಗಿದೆ. ಯಾವುದೇ ಅಧಿಕಾರಿಯ ಸಹಿ ಇಲ್ಲ. ನಾರಾಯಣಪುರದ ಬಸವರಾಜ ಎಂಬುವರ ಜಮೀನಿಗೆ ಸಂಬಂಧಿಸಿದಂತೆ ರೈತರ ವಂತಿಕೆ ಪಾವತಿಸಿದ ಕುರಿತು ಕಡತದಲ್ಲಿ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿ ಇರಲಿಲ್ಲ. ಇ- ವೇ ಬಿಲ್‌ ಲಗತ್ತಿಸಿಲ್ಲ. ಹನಿ ನೀರಾವರಿ ವಿನ್ಯಾಸ ಅಪೂರ್ಣವಾಗಿತ್ತು. ಯಾವುದೇ ಅಧಿಕಾರಿಯ ಸಹಿ ಇರಲಿಲ್ಲ. ಛಾಪಾ ಕಾಗದದ ಮೇಲೂ ರೈತರ ಸಹಿ ಇರಲಿಲ್ಲ.

 

 

ಗುಂಜನೂರು ಗ್ರಾಮದ ಸಿದ್ದನಾಯಕ ಫಲಾನುಭವಿಯ ಸರ್ವೆ ನಂಬರ್‍‌ 47, 53, 39ರ ಜಮೀನಿಗೆ ಸಂಬಂಧಿಸಿದಂತೆ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿನ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯ ಬ್ಯಾಂಕಿನ ವಿವರಗಳು ತಾಳೆಯಾಗಿಲ್ಲ. ಹನಿ ನೀರಾವರಿ ವಿನ್ಯಾಸವೂ ಅಪೂರ್ಣವಾಗಿತ್ತು. ಯಾವುದೇ ಅಧಿಕಾರಿಯ ಸಹಿ ಇರುವುದಿಲ್ಲ. ಕಡತದಲ್ಲಿ ಪಹಣಿ, ಲಾವಣಿ ಮತ್ತು ನೀರು ಬಳಕೆ ಪ್ರಮಾಣ ಪತ್ರ ಲಗತ್ತಿಸಿರಲಿಲ್ಲ.

 

ಧರ್ಮಪುರ ಗ್ರಾಮದ ಶಂಕರ ಎಂಬುವರ ಜಮೀನಿನಲ್ಲಿಯೂ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿನ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯ ಬ್ಯಾಂಕ್‌ನ ವಿವರಗಳು ತಾಳೆಯಾಗುತ್ತಿಲ್ಲ. ಹನಿನೀರಾವರಿ ವಿನ್ಯಾಸವೂ ಅಪೂರ್ಣವಾಗಿತ್ತು. ಯಾವುದೇ ಅಧಿಕಾರಿಯ ಸಹಿ ಇರಲಿಲ್ಲ. ರೈತರ ಎನ್‌ಒಸಿಯಲ್ಲಿ ಬಿಲ್‌ನ ಒಟ್ಟು ಮೊತ್ತ, ರೈತರ ವಂತಿಕೆಯ ಸಹಾಯಧನ ಮೊತ್ತ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಿರಲಿಲ್ಲ.

 

ಚಲ್ಲೇರು ಗ್ರಾಮದ ಚಂದ್ರಪ್ಪ ಎಂಬುವರ ಜಮೀನಿನಲ್ಲಿ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿನ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯ ಬ್ಯಾಂಕ್‌ನ ವಿವರಗಳು ತಾಳೆಯಾಗಿಲ್ಲ. ಹನಿನೀರಾವರಿ ವಿನ್ಯಾಸವೂ ಅಪೂರ್ಣವಾಗಿತ್ತು. ಯಾವುದೇ ಅಧಿಕಾರಿಯ ಸಹಿ ಇರಲಿಲ್ಲ. ರೈತರ ಎನ್‌ಒಸಿಯಲ್ಲಿ ಬಿಲ್‌ನ ಒಟ್ಟು ಮೊತ್ತ, ರೈತರ ವಂತಿಕೆಯ ಸಹಾಯಧನ ಮೊತ್ತ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಿರಲಿಲ್ಲ.

 

ಚಿನ್ನಾಕಾರ್‍‌ ಗ್ರಾಮದ ಫಾತಿಮಾ ಎಂಬುವರ ಜಮೀನಿನಲ್ಲಿ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿನ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯ ಬ್ಯಾಂಕ್‌ನ ವಿವರಗಳು ತಾಳೆಯಾಗಿಲ್ಲ. ಹನಿನೀರಾವರಿ ವಿನ್ಯಾಸವೂ ಅಪೂರ್ಣವಾಗಿದೆ. ಯಾವುದೇ ಅಧಿಕಾರಿಯ ಸಹಿ ಇರಲಿಲ್ಲ. ರೈತರ ಎನ್‌ಒಸಿಯಲ್ಲಿ ಬಿಲ್‌ನ ಒಟ್ಟು ಮೊತ್ತ, ರೈತರ ವಂತಿಕೆಯ ಸಹಾಯಧನ ಮೊತ್ತ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಿರಲಿಲ್ಲ ಎಂದು ಪರಿಶೀಲನೆ ವೇಳೆ ಬಯಲು ಮಾಡಿರುವುದು ಗೊತ್ತಾಗಿದೆ.

 

ಗುಂಜನೂರು ಗ್ರಾಮದ ಕಾಳಪ್ಪ ಎಂಬುವರ ಜಮೀನಿನಲ್ಲಿ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿನ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯ ಬ್ಯಾಂಕ್‌ನ ವಿವರಗಳು ತಾಳೆಯಾಗುತ್ತಿಲ್ಲ. ಹನಿನೀರಾವರಿ ವಿನ್ಯಾಸವೂ ಅಪೂರ್ಣವಾಗಿದೆ. ಛಾಪಾ ಕಾಗದ ಲಗತ್ತಿಸಿಲ್ಲ. ಗುಂಜನೂರಿನ ಲಕ್ಷ್ಮಮ್ಮ ಎಂಬುವರ ಜಮೀನಿಗೆ ಸಂಬಂಧಿಸಿದಂತೆ ರೈತರ ಬ್ಯಾಂಕ್‌ ಪಾಸ್‌ ಬುಕ್‌ ಲಗತ್ತಿಸಿಲ್ಲ. ಹನಿ ನೀರಾವರಿ ವಿನ್ಯಾಸವು ಅಪೂರ್ಣವಾಗಿದೆ. ಯಾವುದೇ ಅಧಿಕಾರಿಯ ಸಹಿ ಇರುವುದಿಲ್ಲ. ರೈತರ ಎನ್‌ಒಸಿಯಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಸಹಿ ಇರಲಿಲ್ಲ.

 

 

ಗುಂಜನೂರಿನ ಮತ್ತೊಬ್ಬ ಲಕ್ಷ್ಮಮ್ಮ ಎಂಬುವರ ಪ್ರಕರಣದಲ್ಲಿಯೂ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿನ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯ ಬ್ಯಾಂಕ್‌ನ ವಿವರಗಳು ತಾಳೆಯಾಗಿಲ್ಲ. ಹನಿ ನೀರಾವರಿ ವಿನ್ಯಾಸವೂ ಅಪೂರ್ಣವಾಗಿತ್ತು. ಯಾವುದೇ ಅಧಿಕಾರಿಯ ಸಹಿ ಇಲ್ಲ. ರೈತರ ಎನ್‌ಒಸಿಯಲ್ಲಿ ಬಿಲ್‌ನ ಒಟ್ಟು ಮೊತ್ತ, ರೈತರ ವಂತಿಕೆಯ ಸಹಾಯಧನ ಮೊತ್ತ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಿರಲಿಲ್ಲ.

 

ಸಿದ್ದಾಪುರ ಗ್ರಾಮದ ನಾಗಪ್ಪ ಎಂಬುವರ ಜಮೀನಿನಲ್ಲಿಯೂ ಸಹ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿನ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯ ಬ್ಯಾಂಕ್‌ನ ವಿವರಗಳು ತಾಳೆಯಾಗುತ್ತಿಲ್ಲ. ಹನಿನೀರಾವರಿ ವಿನ್ಯಾಸವೂ ಅಪೂರ್ಣವಾಗಿದೆ. ಯಾವುದೇ ಅಧಿಕಾರಿಯ ಸಹಿ ಇಲ್ಲ. ಛಾಪಾ ಕಾಗದದ ಮೇಲೆ ರೈತರ ಸಹಿ ಇರಲಿಲ್ಲ. ಸಂಕಲಾಪುರದ ಖಾಜನಗೌಡರ ಜಮೀನಿನಲ್ಲಿಯೂ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿ ಮತ್ತು ರೈತರ ಪಾಸ್‌ ಬುಕ್‌ ಲಗತ್ತಿಸಿಲ್ಲ. ಹನಿ ನೀರಾವರಿ ವಿನ್ಯಾಸವೂ ಅಪೂರ್ಣವಾಗಿದೆ. ಯಾವುದೇ ಅಧಿಕಾರಿಯ ಸಹಿ ಇರಲಿಲ್ಲ.

 

 

ಅನಪೂರದ ರಾಮಚಂದ್ರಪ್ಪ ಎಂಬುವರ ಜಮೀನಿನಲ್ಲಿಯೂ ಹನಿ ನೀರಾವರಿ ವಿನ್ಯಾಸವು ಅಪೂರ್ಣವಾಗಿದೆ. ಯಾವುದೇ ಅಧಿಕಾರಿಯ ಸಹಿ ಇರುವುದಿಲ್ಲ. ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿ ಲಗತ್ತಿಸಿಲ್ಲ. ತೋರಣತಿಪ್ಪ ಗ್ರಾಮದ ಗುಂಡಮ್ಮ ಎಂಬುವರ ಜಮೀನಿನಲ್ಲಿಯೂ ಸಹ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿನ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯ ಬ್ಯಾಂಕ್‌ನ ವಿವರಗಳು ತಾಳೆಯಾಗುತ್ತಿಲ್ಲ. ಹನಿ ನೀರಾವರಿ ವಿನ್ಯಾಸವು ಅಪೂರ್ಣವಾಗಿದ್ದು ಯಾವುದೇ ಅಧಿಕಾರಿಯ ಸಹಿ ಕೂಡ ಇರಲಿಲ್ಲ.

 

ಯಲಸತ್ತಿ ಗ್ರಾಮದ ಸಿದ್ರಾಮಪ್ಪ ಅವರ ಪ್ರಕರಣದಲ್ಲಿಯೂ ಸಹ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯ ಬ್ಯಾಂಕ್‌ನ ವಿವರಗಳು ತಾಳೆಯಾಗುತ್ತಿಲ್ಲ. ಹನಿ ನೀರಾವರಿ ವಿನ್ಯಾಸವು ಅಪೂರ್ಣವಾಗಿದ್ದು ಯಾವುದೇ ಅಧಿಕಾರಿಯ ಸಹಿ ಇರುವುದಿಲ್ಲ. ಅದೇ ರೀತಿ ಇದೇ ಗ್ರಾಮದ ಮಾಣಿಕಮ್ಮ ಎಂಬುವರ ಜಮೀನಿನಲ್ಲಿಯೂ ಸಹ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿನ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಿಜಿಎಸ್‌ ಮಾಡಿದ ನಕಲು ಪ್ರತಿಯ ಬ್ಯಾಂಕ್‌ನ ವಿವರಗಳು ತಾಳೆಯಾಗುತ್ತಿಲ್ಲ. ಹನಿ ನೀರಾವರಿ ವಿನ್ಯಾಸವು ಅಪೂರ್ಣವಾಗಿದ್ದು ಯಾವುದೇ ಅಧಿಕಾರಿಯ ಸಹಿ ಇರಲಿಲ್ಲ.

 

ಅಜಲಾಪುರದ ಸೈನಜಾಬೇಗಂ ಅವರ ಜಮೀನಿನಲ್ಲಿಯೂ ಸಹ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿನ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಜಿಎಸ್‌ ಮಾಡಿದ ನಕಲು ಪ್ರತಿಯ ಬ್ಯಾಂಕ್‌ನ ವಿವರಗಳು ತಾಳೆಯಾಗಿಲ್ಲ. ಹನಿ ನೀರಾವರಿ ವಿನ್ಯಾಸವು ಅಪೂರ್ಣವಾಗಿತ್ತು. ಯಾವುದೇ ಅಧಿಕಾರಿಯ ಸಹಿ ಇಲ್ಲ. ರೈತರ ಎನ್‌ಒಸಿಯಲ್ಲಿ ಬಿಲ್‌ನ ಒಟ್ಟುಮೊತ್ತ ರೈತರ ವಂತಿಕೆಯ ಸಹಾಯಧನ ಮೊತ್ತ ಹಾಗೂ ಇತರೆ ಮಾಹಿತಿಯನ್ನು ಭರ್ತಿ ಮಾಡಿರಲಿಲ್ಲ.

 

 

ಗುಂಜನೂರಿನ ನರಸಪ್ಪ ಎಂಬುವರ ಜಮೀನಿನ ಪ್ರಕರಣದಲ್ಲಿಯೂ ಸಹ ರೈತರ ವಂತಿಕೆ ಕಂಪನಿಗೆ ಪಾವತಿಸಿದ ಕುರಿತು ಕಡತದಲ್ಲಿನ ರೈತರ ಪಾಸ್‌ ಬುಕ್‌ ವಿವರ ಹಾಗೂ ಆರ್‍‌ಟಜಿಎಸ್‌ ಮಾಡಿದ ನಕಲು ಪ್ರತಿಯ ಬ್ಯಾಂಕ್‌ನ ವಿವರಗಳು ತಾಳೆಯಾಗುತ್ತಿಲ್ಲ. ಹನಿ ನೀರಾವರಿ ವಿನ್ಯಾಸವು ಅಪೂರ್ಣವಾಗಿದೆ. ಯಾವುದೇ ಅಧಿಕಾರಿಯ ಸಹಿ ಇರಲಿಲ್ಲ ಎಂಬುದನ್ನು ಪರಿಶೀಲನೆ ವೇಳೆ ಜಂಟಿ ನಿರ್ದೇಶಕರು ಬಯಲು ಮಾಡಿರುವುದು ವರದಿಯಿಂದ ಗೊತ್ತಾಗಿದೆ.

Your generous support will help us remain independent and work without fear.

Latest News

Related Posts