ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ಸೇರಿದಂತೆ ರಾಜ್ಯದಲ್ಲಿ 2023 ರಿಂದ 2025ನೇ ಜುಲೈ ಅಂತ್ಯದವರೆಗೆ ಒಟ್ಟು 10,510 ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ನಡೆದ ಪ್ರಕರಣಗಳು ದಾಖಲಾಗಿವೆ.
ಶಾಸಕ ಗುರುರಾಜ ಶೆಟ್ಟಿ ಗಂಟಿ ಹೊಳೆ ಅವರು ವಿಧಾನಸಭೆಯಲ್ಲಿ ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಈ ಅಂಕಿ ಅಂಶಗಳನ್ನು ಒದಗಿಸಿದ್ದಾರೆ.
ಶಿವಮೊಗ್ಗದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ಒಟ್ಟು 589 ಪ್ರಕರಣಗಳು ನಡೆದಿದ್ದರೆ, ಮಾಜಿ ಸಂಸದ ಪ್ರಜ್ವಲ್ ರೇವಣ್ಣರ ಅತ್ಯಾಚಾರ ಪ್ರಕರಣದಿಂದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಹಾಸನ ಜಿಲ್ಲೆಯಲ್ಲಿಯೂ ಅತಿ ಹೆಚ್ಚಿನ ಪ್ರಕರಣಗಳು ನಡೆದಿವೆ. ಈ ಜಿಲ್ಲೆಯಲ್ಲಿ ಒಟ್ಟು 420 ಪ್ರಕರಣಗಳು ದಾಖಲಾಗಿರುವುದು ಈ ಉತ್ತರದಿಂದ ಬಹಿರಂಗಗೊಂಡಿದೆ.
ಮೈಸೂರು ಮಾತ್ರವಲ್ಲದೇ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರು ಜಿಲ್ಲೆಯಲ್ಲಿಯೂ ಕಳೆದ 3 ವರ್ಷಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದು ತಿಳಿದು ಬಂದಿದೆ.
2023ರಲ್ಲಿ ಮೈಸೂರಿನಲ್ಲಿ 158, 2024ರಲ್ಲಿ 139, 2025ರ ಜುಲೈ ಅಂತ್ಯದವರೆಗೆ ಮೈಸೂರು ನಗರದಲ್ಲಿ 39, ಮೈಸೂರು ಜಿಲ್ಲೆಯಲ್ಲಿ 99 ಪ್ರಕರಣಗಳು ದಾಖಲಾಗಿರುವುದು ಗೊತ್ತಾಗಿದೆ. ಒಟ್ಟಾರೆ ರಾಜ್ಯದಲ್ಲಿ 2023ನೇ ಸಾಲಿನಿಂದ 2025ನೇ ಜುಲೈ 31ರ ಅಂತ್ಯದವರೆಗೆ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಸಂಬಂಧ ದಾಖಲಾದ ಪ್ರಕರಣಗಳ ಸಂಖ್ಯೆ 10,510 ರಷ್ಟಿರುವುದು ಗೊತ್ತಾಗಿದೆ.
ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರಿನಲ್ಲಿ 2023ರಿಂದ 2025ರ ಜುಲೈ ಅಂತ್ಯದವರೆಗೆ ಒಟ್ಟಾರೆ 483 ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.
2023ರಲ್ಲಿ ಒಟ್ಟು 3,902, 2024ರಲ್ಲಿಲ 4,064, 2025ರ ಜುಲೈ ವರೆಗೆ 2,544 ಪ್ರಕರಣಗಳು ದಾಖಲಾಗಿವೆ . ಅದೇ ರೀತಿ ಏಪ್ರಿಲ್ 2025ರಿಂದ ಜೂನ್ ಅಂತ್ಯದವರೆಗೆ 3 ತಿಂಗಳ ಅವಧಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಸಂಬಂಧ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 1,104.
2023ರಲ್ಲಿ ಒಟ್ಟು 3,902 ಪ್ರಕರಣಗಳು ದಾಖಲಾಗಿವೆ. 2024ರಲ್ಲಿ 4,064, 2025 ಜುಲೈನಲ್ಲಿ 2,544 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 2023ರಲ್ಲಿ 3,882 ಪ್ರಕರಣಗಳು ಇತ್ಯರ್ಥ ಅಥವಾ ಮುಕ್ತಾಯವಾಗಿವೆ. 2024ರಲ್ಲಿ 4,026, 2025ರ ಜುಲೈನವರೆಗೆ 1,927 ಪ್ರಕರಣಗಳು ಇತ್ಯರ್ಥ ಅಥವಾ ಮುಕ್ತಾಯವಾಗಿವೆ ಎಂದು ಗೃಹ ಸಚಿವರು ಉತ್ತರದಲ್ಲಿ ವಿವರಿಸಿದ್ದಾರೆ.
ಈ ಪೈಕಿ 2023ರಲ್ಲಿ 126 ಪ್ರಕರಣಗಳಲ್ಲಿ ಶಿಕ್ಷೆಯಾಗಿವೆ. 2024ರಲ್ಲಿ 36 ಪ್ರಕರಣಗಳಲ್ಲಿ ಶಿಕ್ಷೆಯಾಗಿವೆ. 2023ರಲ್ಲಿ 2,048 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. 2024ರಲ್ಲಿ 3,081 ಮತ್ತು 2025ರ ಜುಲೈನವರೆಗೆ 1,556 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
ಬೆಂಗಳೂರು ನಗರದಲ್ಲೇ 2023ರಲ್ಲಿ ಅತೀ ಹೆಚ್ಚು ಎಂದರೇ 627, 2024ರಲ್ಲಿ 638, 2025ರಲ್ಲಿ 319 ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಬೆಂಗಳೂರು ನಗರದಲ್ಲಿ ಕಳೆದ 3 ತಿಂಗಳಿನಲ್ಲಿ 138 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ರಾಜ್ಯದಲ್ಲಿಈ ಮೂರು ತಿಂಗಳಲ್ಲಿ 1,104 ಪೋಕ್ಸೋ ಪ್ರಕರಣಗಳೂ ದಾಖಲಾಗಿವೆ.
ಇನ್ನುಳಿದಂತೆ 2023ರಲ್ಲಿ ಬೆಂಗಳೂರು ದಕ್ಷಿಣದಲ್ಲಿ 119, ಬೆಳಗಾವಿಯಲ್ಲಿ 117, ಚಿಕ್ಕಬಳ್ಗ್ಳಾಪುರದಲ್ಲಿ 169, ಚಿಕ್ಕಮಗಳೂರಿನಲ್ಲಿ 111, ಚಿತ್ರದುರ್ಗದಲ್ಲಿ 131, ದಾವಣಗೆರೆಯಲ್ಲಿ 108, ಹಾಸನದಲ್ಲಿ 168, ಕೋಲಾರದಲ್ಲಿ 120, ಮಂಡ್ಯದಲ್ಲಿ 140, ಮೈಸೂರಿನಲ್ಲಿ 158, ಶಿವಮೊಗ್ಗದಲ್ಲಿ 211, ವಿಜಯನಗರದಲ್ಲಿ 119, ವಿಜಯಪುರದಲ್ಲಿ 100 ಪ್ರಕರಣ ಸೇರಿದಂತೆ 3,902 ಪೋಕ್ಸೋ ಪ್ರಕರಣಗಳು ದಾಖಲಾಗಿವೆ.
2024ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 136, ಬೆಂಗಳೂರು ನಗರದಲ್ಲಿ 638, ಬೆಂಗಳೂರು ದಕ್ಷಿಣದಲ್ಲಿ 113, ಚಿಕ್ಕಬಳ್ಳಾಪುರದಲ್ಲಿ 190, ಚಿಕ್ಕಮಗಳೂರು 122, ಚಿಕ್ಕಬಳ್ಳಾಪುರ 190, ಚಿತ್ರದುರ್ಗ 150, ದಾವಣಗೆರೆ 110, ಹಾಸನ 157, ಹಾವೇರಿಯಲ್ಲಿ 125, ಕೋಲಾರ 105, ಮಂಡ್ಯ 151, ಮೈಸೂರಿನಲ್ಲಿ 139, ಶಿವಮೊಗ್ಗದಲ್ಲಿ 227, ತುಮಕೂರು 175, ವಿಜಯಪುರ 100, ಸೇರಿ 4,064 ಪೋಕ್ಸೋ ಪ್ರಕರಣಗಳು ದಾಖಲಾಗಿವೆ.
2025ರಲ್ಲಿ ಬೆಂಗಳೂರಿನಲ್ಲಿ 319, ಬೆಳಗಾವಿಯಲ್ಲಿ 100, ಚಿಕ್ಕಬಳ್ಳಾಪುರ 113, ಚಿತ್ರದುರ್ಗ 100, ಮೈಸೂರು ನಗರದಲ್ಲಿ 39, ಮೈಸೂರು ಜಿಲ್ಲೆ 99 ಶಿವಮೊಗ್ಗದಲ್ಲಿ 131, ತುಕಕೂರಿನಲ್ಲಿ 114, ಸೇರಿ 2,544 ಪೋಕ್ಸೋ ಪ್ರಕರಣಗಳು ವರದಿಯಾಗಿವೆ.
2025ರ ಏಪ್ರಿಲ್ ನಿಂದ ಜೂನ್ ವರೆಗೆ ಬೆಂಗಳುರು ನಗರಲದಲ್ಲಿ 138, ಮೈಸೂರು ನಗರದಲ್ಲಿ 19, ಮೈಸೂರು ಜಿಲ್ಲೆಯಲ್ಲಿ 35 ಪ್ರಕರಣಗಳು ದಾಖಲಾಗಿವೆ. ಮಂಡ್ಯದಲ್ಲಿ 34, ಮಂಗಳೂರು ನಗರದಲ್ಲಿ 20, ದಾವಣಗೆರೆಯಲ್ಲಿ 26, ಚಿತ್ರದುರ್ಗದಲ್ಲಿ 47, ಹಾಸನದಲ್ಲಿ 33 ಚಿಕ್ಕಮಗಲೂರಿನಲ್ಲಿ 40ಚಿಕ್ಕಬಳ್ಳಾಪುರದಲ್ಲಿ 50 ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.
ಐದು ವರ್ಷಗಳಲ್ಲಿ 14,074 ಮಂದಿ ಬಂಧನ
ಬಿಜೆಪಿ ಸರ್ಕಾರದ ಅವಧಿ ಸೇರಿದಂತೆ ಹಿಂದಿನ 5 ವರ್ಷಗಳಲ್ಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 14,074 ಮಂದಿಯನ್ನು ಬಂಧಿಸಲಾಗಿತ್ತು. ಈ ಪೈಕಿ ಬಿಜೆಪಿ ಸರ್ಕಾರದ 2 ವರ್ಷದ ಅವಧಿಯಲ್ಲಿಯೂ 8,909 ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿತ್ತು.
2022ರ ಡಿಸೆಂಬರ್ 26ರಂದು ವಿಧಾನಪರಿಷತ್ತಿನಲ್ಲಿ ಸದಸ್ಯ ಪಿ ಆರ್ ರಮೇಶ್ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರ ಒದಗಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತರ ಪೈಕಿ ಒಟ್ಟು 73 ಮಂದಿ ಕಳೆದ 5 ವರ್ಷದಲ್ಲಿ ಸಾವಿಗೀಡಾಗಿದ್ದಾರೆ ಎಂಬ ಅಂಕಿ ಅಂಶಗಳನ್ನು ನೀಡಿದ್ದರು.
ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ 6,125 ಆರೋಪಿಗಳನ್ನು ಬಂಧಿಸಲಾಗಿತ್ತು.
‘ಅತ್ಯಾಚಾರ ಪ್ರಕರಣಗಳಲ್ಲಿ ರಾಜ್ಯದಲ್ಲಿ ಪೋಕ್ಸೋ ಕಾಯ್ದೆಯ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗಿದೆ. ಪೋಕ್ಸೋ ಕಾಯ್ದೆಯ ಬಗ್ಗೆ ಹೆಚ್ಚಿನ ಅರಿವು ಸಾರ್ವಜನಿಕರಲ್ಲಿದೆ. ಅತ್ಯಾಚಾರ ಪ್ರಕರಣಗಳು, ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಿನ ಪ್ರಮಾಣದ ನೊಂದವರು ಮುಕ್ತವಾಗಿ, ಭಯ ಭೀತಿಯಿಲ್ಲದೇ ಪೊಲೀಸ್ ಠಾಣೆಗೆ ಬಂದು ದೂರುಗಳನ್ನುದಾಖಲಿಸುತ್ತಿದ್ದಾರೆ. ಹೀಗಾಗಿ ಅತ್ಯಾಚಾರ/ಮಕ್ಕಳ ಮೇಲಿನ ಪ್ರತಿ ಲೈಂಗಿಕ ದೌರ್ಜನ್ಯ ಪ್ರಕರಣವು ಬೆಳಕಿಗೆ ಬರುವ ಮೂಲಕ ಪ್ರಕರಣಗಳು ದಾಖಲಾಗುತ್ತಿವೆ, ‘ ಎಂದು ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಉತ್ತರದಲ್ಲಿ ವಿವರಣೆ ನೀಡಿದ್ದರು.

2018ರಲ್ಲಿ 16 ಮಂದಿ ಸಾವಿಗೀಡಾಗಿದ್ದರೇ 2,430 ಆರೋಪಿಗಳನ್ನು ಬಂಧಿಸಲಾಗಿದೆ. 2019ರಲ್ಲಿ 14 ಮಂದಿ ಸಂತ್ರಸ್ತರು ಸಾವಿಗೀಡಾಗಿದ್ದು, ಈ ಪ್ರಕರಣಗಳಲ್ಲಿ 2,735 ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. 2020ರಲ್ಲಿ 13 ಮಂದಿ ಸಾವಿಗೀಡಾಗಿದ್ದರೇ 2,627 ಆರೋಪಿಗಳು ಬಂಧನದಲ್ಲಿದ್ದರು.
2021ರಲ್ಲಿ 20 ಮಂದಿ ಸಾವಿಗೀಡಾಗಿದ್ದರೇ 3,498 ಆರೋಪಿಗಳು ಬಂಧನಕ್ಕೊಳಪಡಿಸಲಾಗಿದೆ. 2022ರ ನವೆಂಬರ್ 30ರವರೆಗೆ ಒಟ್ಟು 10 ಮಂದಿ ಸಾವಿಗೀಡಾಗಿದ್ದು, ಈ ಪ್ರಕರಣಗಳಲ್ಲಿ ಒಟ್ಟು 2,784 ಮಂದಿ ಆರೋಪಿಗಳನ್ನು ಬಂಧಿಸಿರುವುದು ಸಚಿವರಾಗಿದ್ದ ಆರಗ ಜ್ಞಾನೇಂದ್ರ ಅವರು ಒದಗಿಸಿದ್ದರು.
ಜಿಲ್ಲಾವಾರು ಪಟ್ಟಿ ಇಲ್ಲಿದೆ
ಬೆಂಗಳೂರು ನಗರ ಘಟಕವೊಂದರಲ್ಲೇ ಕಳೆದ 5 ವರ್ಷಗಳಲ್ಲಿ 2,214 ಆರೋಪಿಗಳನ್ನು ಅತ್ಯಾಚಾರ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ 714, ಶಿವಮೊಗ್ಗದಲ್ಲಿ 703, ಮಂಡ್ಯದಲ್ಲಿ 676 ಆರೋಪಿಗಳು ಬಂಧಿಸಲಾಗಿತ್ತು. 2018ರಲ್ಲಿ ಬೆಂಗಳೂರು ನಗರದಲ್ಲಿ 461, ಮಂಡ್ಯದಲ್ಲಿ 138, ಬೆಳಗಾವಿ ಜಿಲ್ಲೆಯಲ್ಲಿ 135, ಶಿವಮೊಗ್ಗದಲ್ಲಿ 131, ಹಾಸನದಲ್ಲಿ 116 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.
2019ರಲ್ಲಿ ಬೆಂಗಳೂರು ನಗರದಲ್ಲಿ 441, ಮಂಡ್ಯದಲ್ಲಿ 152, ಬೆಳಗಾವಿಯಲ್ಲಿ 142, ಶಿವಮೊಗ್ಗದಲ್ಲಿ 126, ಚಿಕ್ಕಬಳ್ಳಾಪುರದಲ್ಲಿ 119 ಆರೋಪಿಗಳನ್ನು ಬಂಧಿಸಲಾಗಿತ್ತು. 2020ರಲ್ಲಿ ಬೆಂಗಳೂರು ನಗರದಲ್ಲಿ 378, ಚಿಕ್ಕಬಳ್ಳಾಪುರದಲ್ಲಿ 160, ಮಂಡ್ಯದಲ್ಲಿ 140, ಹಾಸನದಲ್ಲಿ 126, ಶಿವಮೊಗ್ಗದಲ್ಲಿ 118 ಮಂದಿ ಆರೋಪಿಗಳು ಬಂಧನಕ್ಕೊಳಗಾಗಿದ್ದರು.
2021ರಲ್ಲಿ ಬೆಂಗಳೂರು ನಗರದಲ್ಲಿ 467, ಚಿಕ್ಕಬಳ್ಳಾಪುರದಲ್ಲಿ 195, ಚಿಕ್ಕಮಗಳೂರು ಜಿಲ್ಲೆಯಲ್ಲಿ 189, ಹಾಸನದಲ್ಲಿ 185, ದಾವಣಗೆರೆಯಲ್ಲಿ 155,
ಶಿವಮೊಗ್ಗದಲ್ಲಿ 149 , ತುಮಕೂರು ಜಿಲ್ಲೆಯಲ್ಲಿ 146, ಮಂಡ್ಯದಲ್ಲಿ 145 ಆರೋಪಿಗಳನ್ನು ಬಂಧಿಸಲಾಗಿದೆ. 2022ರಲ್ಲಿ ಬೆಂಗಳೂರು ನಗರದಲ್ಲಿ 467, ಶಿವಮೊಗ್ಗದಲ್ಲಿ 179, ಬೆಳಗಾವಿಯಲ್ಲಿ 147, ಹಾಸನದಲ್ಲಿ 136, ಚಿಕ್ಕಬಳ್ಳಾಪುರದಲ್ಲಿ 123 ಮಂದಿ ಆರೋಪಿಗಳನ್ನು ಬಂಧಿಸಿದ್ದನ್ನು ಸ್ಮರಿಸಬಹುದು.