ವಕ್ಫ್‌ ಆಸ್ತಿ; ಉಪಲೋಕಾಯುಕ್ತರ ತನಿಖಾ ವರದಿ ಕುರಿತು ಜಂಟಿ ಸಂಸದಿಯ ಸಮಿತಿ ಗಮನಸೆಳೆದ ಲಹರ್‍‌ ಸಿಂಗ್‌

ಬೆಂಗಳೂರು; ವಕ್ಫ್‌ ಆಸ್ತಿಗಳ ದುರ್ಬಳಕೆ, ದುರುಪಯೋಗ ಮತ್ತು ವಕ್ಫ್‌ ಮಂಡಳಿಯ ದುರಾಡಳಿತ ಕುರಿತು ಉಪ ಲೋಕಾಯುಕ್ತರಾಗಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್‌ ಆನಂದ್‌ ಅವರು ನೀಡಿದ್ದ ತನಿಖಾ ವರದಿಯಲ್ಲಿನ ಬಹುಮುಖ್ಯ ಅಂಶಗಳು, ಸಂಗತಿಗಳ ಕುರಿತಾಗಿ ರಾಜ್ಯಸಭೆ ಸದಸ್ಯ ಲಹರ್‍‌ ಸಿಂಗ್‌ ಸಿರೋಯಾ ಅವರು ವಕ್ಫ್ ತಿದ್ದುಪಡಿ ಕಾನೂನು ಕುರಿತಾಗಿ ರಚಿಸಿರುವ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರಾದ ಜಗದಾಂಬಿಕ ಪಾಲ್ ಅವರ ಗಮನ ಸೆಳೆದಿದ್ದಾರೆ.

 

ಈ ಕುರಿತು ಸಮಿತಿಗೆ ಲಿಖಿತ ಪತ್ರವನ್ನು ಬರೆದಿದ್ದಾರೆ. ಮತ್ತು ಈ ಸಂಬಂಧ ‘ದಿ ಫೈಲ್‌’ ದಾಖಲೆ ಸಹಿತ ಪ್ರಕಟಿಸಿದ್ದ ವರದಿಗಳಲ್ಲಿನ ದಾಖಲೆಗಳನ್ನೂ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

 

ರೈತರ ಸ್ವಾಧೀನದಲ್ಲಿದ್ದ ಆಸ್ತಿ, ಜಮೀನುಗಳನ್ನು ವಕ್ಫ್‌ ಆಸ್ತಿ ಎಂದು ನಮೂದಿಸಿದ್ದು ರಾಜಕೀಯ ವಲಯದಲ್ಲಿ ಸಂಚಲನ ಉಂಟು ಮಾಡಿತ್ತು. ಅಲ್ಲದೇ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದ್ದ ಪ್ರತಿಪಕ್ಷ ಬಿಜೆಪಿಯು ಕಾಂಗ್ರೆಸ್‌ ಮೇಲೆ ಮುಗಿಬಿದ್ದಿತ್ತು. ಈ ಬೆಳವಣಿಗೆ ನಡುವೆಯೇ ರಾಜ್ಯಸಭೆ ಸದಸ್ಯ ಲಹರ್‍‌ ಸಿಂಗ್‌ ಸಿರೋಯಾ ಅವರು ವಕ್ಫ್ ತಿದ್ದುಪಡಿ ಕಾನೂನು ಕುರಿತಾಗಿ ರಚಿಸಿರುವ ಜಂಟಿ ಸಂಸದೀಯ ಸಮಿತಿಗೆ ಬರೆದಿರುವ ಪತ್ರವು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

 

‘ಉಪ ಲೋಕಾಯುಕ್ತರ ತನಿಖಾ ವರದಿಯು ಸರ್ಕಾರದ ದಾಖಲೆ ಅಥವಾ ಸಾರ್ವಜನಿಕ ವಲಯದಲ್ಲಿಲ್ಲ. ಈ ವರದಿಯನ್ನು ಉದ್ದೇಶಪೂರ್ವಕವಾಗಿ ಕಣ್ಮರೆಯಾಗುವಂತೆ ಮಾಡಲಾಗಿದೆ,’ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

‘ವೈಯಕ್ತಿಕ ಹಿತಾಸಕ್ತಿ, ಶೋಕಿ, ಹುಚ್ಚಾಟ’ದಿಂದ ವಕ್ಫ್‌ ಆಸ್ತಿ ದುರ್ಬಳಕೆ; ಮುಚ್ಚಿಟ್ಟಿದ್ದ ಲೋಕಾ ತನಿಖಾ ವರದಿ ಬಹಿರಂಗ

 

ವಕ್ಫ್ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸತ್ ಸಮಿತಿಯ ಅಧ್ಯಕ್ಷರಾದ ಜಗದಂಬಿಕಾ ಪಾಲ್ ಅವರು ನ್ಯಾ.ಆನಂದ್ ಅವರು ನೀಡಿರುವ ವರದಿಯನ್ನು ಪರಿಗಣಿಸಿ, ಇದನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದರೆ ಇದರಿಂದ ಸಾಕಷ್ಟು ಮಾಹಿತಿ, ಹಾಗೂ ಒತ್ತುವರಿದಾರ ಹೆಸರುಗಳನ್ನೂ ಪತ್ತೆ ಮಾಡಬಹುದು ಎಂದು ಲಹರ್‍‌ ಸಿಂಗ್‌ ಅವರು ಗಮನ ಸೆಳೆದಿದ್ದಾರೆ.

 

ಅಪಾರ ಪ್ರಮಾಣದಲ್ಲಿ ವಕ್ಫ್‌ ಆಸ್ತಿ ಅತಿಕ್ರಮಣ; ಉಪ ಲೋಕಾಯುಕ್ತರಿಗೂ ದಾಖಲೆಗಳನ್ನು ನೀಡಿರಲಿಲ್ಲ

 

ಪತ್ರದಲ್ಲೇನಿದೆ?

 

2016 ರಲ್ಲಿ ಅಂದಿನ ಉಪ ಲೋಕಾಯುಕ್ತರಾಗಿದ್ದ ನ್ಯಾ.ಆನಂದ್ ಅವರು ವಕ್ಫ್ ಆಸ್ತಿಗಳ ದುರುಪಯೋಗದ ಕುರಿತಂತೆ ನೀಡಿದ್ದ ತನಿಖಾ ವರದಿಯು ವಿವರವಾಗಿದೆ. ವಕ್ಫ್ ಆಸ್ತಿಗಳ ದುರ್ಬಳಕೆ, ಕಾನೂನು ಬಾಹಿರವಾಗಿ ಒಳಗುತ್ತಿಗೆ ನೀಡುವುದು ಹಾಗೂ ವಕ್ಫ್ ಆಸ್ತಿಗಳ ಒತ್ತುವರಿಯ ಕುರಿತು ದಾಖಲೆ ಸಮೇತ ವರದಿಯನ್ನು ನೀಡಿತ್ತು. ಬೇಲಿಯೇ ಎದ್ದು ಹೊಲ ಮೇಯ್ದಂತೆ, ವಕ್ಫ್ ಆಸ್ತಿಯನ್ನು ರಕ್ಷಿಸಬೇಕಾಗಿದ್ದ ವಕ್ಫ್ ಸಂಸ್ಥೆಯೇ ಇದರ ದುರ್ಬಳಕೆ ಮಾಡಿರುವುದನ್ನು ಉಪ ಲೋಕಾಯುಕ್ತರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು ಎಂದು ಪತ್ರದಲ್ಲಿ ಲಹರ್‍‌ ಸಿಂಗ್‌ ಅವರು ವಿವರಿಸಿರುವುದು ಗೊತ್ತಾಗಿದೆ.

 

ಮುಸ್ಲಿಮೀನ್ ಸಂಸ್ಥೆಗೆ ವಕ್ಫ್‌ ಆಸ್ತಿ ಗುತ್ತಿಗೆ; ಮಂಡಳಿಯ ಮಂಜೂರಾತಿಯಿಲ್ಲ, ಅನುಮೋದನೆಯೂ ಇಲ್ಲ

 

‘ಉಪ ಲೋಕಾಯುಕ್ತರ ವರದಿಯನ್ನು ನಾನು ಪರಾಮರ್ಶಿಸಿದ್ದೇನೆ ಹಾಗೂ ಸದರಿ ವರದಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ. ಉಪ ಲೋಕಾಯುಕ್ತರು ನೀಡಿದ ವರದಿಯು ಎಲ್ಲೂ ಲಭ್ಯ ಇಲ್ಲದೆ ಇರುವುದು ಹಾಗೂ ಸರ್ಕಾರ ಈ ವರದಿಯನ್ನು ಮುಚ್ಚಿಟ್ಟಿರುವುದು ಸಾಕಷ್ಟು ಸಂಶಯಕ್ಕೆ ಕಾರಣವಾಗಿದೆ,’ ಎಂದು ಪತ್ರದಲ್ಲಿ ಗಮನ ಸೆಳೆದಿರುವುದು ತಿಳಿದು ಬಂದಿದೆ.

 

 

ವರದಿಯಲ್ಲಿ ಸ್ಪಷ್ಟವಾಗಿ ವಕ್ಫ್ ನ ಆಡಳಿತ ಮಂಡಳಿ/ಮುತಾವಳಿ/ಸಜ್ಜಾದ [ಮುತಾವಲಿ ಅಂದರೆ ವಕ್ಫ್ ಆಸ್ತಿಗಳನ್ನು ನಿರ್ವಹಿಸುವ ವ್ಯಕ್ತಿ] ಇವರುಗಳೇ ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿಕೊಳ್ಳಲು ಬಿಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಉಪ ಲೋಕಾಯುಕ್ತರು ಅಂದು ವಕ್ಫ್ ಆಸ್ತಿಗಳ ದುರ್ಬಳಕೆ, ಒತ್ತುವರಿ, ಮಾಡುವುದರ ಕುರಿತು ನೀಡಿದ ವರದಿಯನ್ನು 2016 ರಲ್ಲಿದ್ದ ಕಾಂಗ್ರೆಸ್ ಸರ್ಕಾರ ವರದಿ ಕೊಟ್ಟ ದಿನವೇ ವಕ್ಫ್ ಆಸ್ತಿಗಳ ಕುರಿತಂತೆ ರಚಿಸಿದ್ದ ವಿಚಾರಣಾ ಆಯೋಗದ ಸರ್ಕಾರಿ ಆದೇಶವನ್ನು ರದ್ದುಗೊಳಿಸಿತ್ತು .

 

ವಕ್ಫ್‌ ಆಸ್ತಿ; ಗುತ್ತಿಗೆ ನವೀಕರಣವೂ ಇಲ್ಲ, ವಕ್ಫ್‌ ಮಂಡಳಿಗೆ ಬಾಡಿಗೆ ಹಣವೂ ಇಲ್ಲ, ತನ್ವೀರ್‌ ಸೇಠ್‌ ಹೆಸರು ಉಲ್ಲೇಖ

 

‘ಸರ್ಕಾರಿ ಆದೇಶವನ್ನು ರದ್ದುಗೊಳಿಸಿದ ಕಾರಣ 2012 ರಲ್ಲಿ ವಕ್ಫ್ ಆಸ್ತಿಗಳ ದುರ್ಬಳಕೆ ಕುರಿತಂತೆ ರಚಿಸಿದ್ದ ವಿಚಾರಣಾ ಆಯೋಗದ ವರದಿ ಹಲ್ಲಿಲ್ಲದ ಹಾವಂತಾಯಿತು. ಉಪಲೋಕಾಯುಕ್ತರು ಕೊಟ್ಟ ವರದಿಯ ದಿನವೇ ಹಠಾತ್ತಾಗಿ ವಿಚಾರಣಾ ಆಯೋಗದ ಸರ್ಕಾರಿ ಆದೇಶವನ್ನು ರದ್ದುಗೊಳಿಸಿದ್ದೇಕೆ ಎಂಬುದಕ್ಕೆ ಸರ್ಕಾರದ ಬಳಿ ಯಾವುದೇ ಉತ್ತರವಿಲ್ಲ,’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

 

ಪಟ್ಟಭದ್ರರ, ಒತ್ತುವರಿದಾರ ಹಿತಾಸಕ್ತಿಗೆ ಸರ್ಕಾರ ಮಣೆ ಹಾಕಿದೆಯೇ, ಯಾರನ್ನು ರಕ್ಷಿಸಲು ಸರ್ಕಾರಿ ಆದೇಶವನ್ನು ಹಿಂಪಡೆಯಲಾಯಿತು ಎಂಬುದಕ್ಕೆ ಯಾವುದೇ ಉತ್ತರವಿಲ್ಲ. ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿದ್ದ ಸಿದ್ದರಾಮಯ್ಯನವರ ಸ್ನೇಹಿತರನ್ನು, ಆಪ್ತರ ಹೆಸರು ಬಹಿರಂಗವಾಗುತ್ತದೆ ಎಂಬ ಭಯದಿಂದ ಸರ್ಕಾರದ ಆದೇಶವನ್ನು ರದ್ದುಗೊಳಿಸಲಾಯಿತೇ ಎಂದು ಪತ್ರದಲ್ಲಿ ಪ್ರಶ್ನಿಸಿರುವುದು ಗೊತ್ತಾಗಿದೆ.

 

ವಕ್ಫ್‌ ಆಸ್ತಿ ಅಡಮಾನ; ನೋಂದಾಯಿತವಾಗದ ಡೀಡ್ ನೀಡಿ 10 ಕೋಟಿ ಸಾಲ ಎತ್ತಿದ ಟ್ರಸ್ಟ್, ಕಣ್ಮುಚ್ಚಿ ಕುಳಿತ ಮಂಡಳಿ

 

ಭೂಮಾಲೀಕರ, ರೈತರ ಭೂಮಿಗೆ ನೋಟೀಸನ್ನು ನೀಡುತ್ತಿರುವ ಕಾಂಗ್ರೆಸ್ ಸರ್ಕಾರ, ಪ್ರಭಾವಿಗಳು, ಶ್ರೀಮಂತರು, ಆಪ್ತರ ರಕ್ಷಿಸಲು ಸರ್ಕಾರದ ಆದೇಶವನ್ನೇ ರದ್ದುಗೊಳಿಸಿದರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

 

ಹಜ್ರತ್‌ ಖ್ವಾಜಾ ಬಂದೇ ನವಾಜ್‌ ವಕ್ಫ್‌ ಆಸ್ತಿ ಮಾರಾಟ; ಭೂ ನ್ಯಾಯಾಧೀಕರಣ ಆದೇಶ ಪ್ರಶ್ನಿಸದ ವಕ್ಫ್ ಮಂಡಳಿ

ಉಪ ಲೋಕಾಯುಕ್ತರು ನೀಡಿರುವ ವರದಿಯಲ್ಲಿ ಸಾಕಷ್ಟು ಗಂಭೀರವಾದ ವಿಷಯಗಳು ಒಳಗೊಂಡಿವೆ. ಈ ವರದಿಯಲ್ಲಿ ವಕ್ಫ್ ಆಸ್ತಿಗಳ ಜಿಲ್ಲಾವಾರು ಒತ್ತುವರಿಯನ್ನು ಆಯಾ ಜಿಲ್ಲಾಧಿಕಾರಿಗಳು ಸಲ್ಲಿಸಿದ್ದಾರೆ. ಬೆಂಗಳೂರು ನಗರ, ಕಲ್ಬುರ್ಗಿ, ಮೈಸೂರಿನ ಜಿಲ್ಲಾವಾರು ವರದಿಗಳು ವಕ್ಫ್ ಒತ್ತುವರಿ ಕುರಿತಂತೆ ಸಾಕಷ್ಟು ಸ್ಫೋಟಕ ಮಾಹಿತಿಯನ್ನು ನೀಡುತ್ತದೆ.

 

8.34 ಎಕರೆ ವಕ್ಫ್‌ ಆಸ್ತಿ ಹಕ್ಕು; ಕಮರುಲ್ ಇಸ್ಲಾಂ, ದಸ್ತಗಿರ್‍‌ಗೆ ರಿಯಾಯಿತಿ, ತನಿಖೆ ಅಗತ್ಯವೆಂದ ಉಪ ಲೋಕಾಯುಕ್ತ

 

‘ವಕ್ಫ್ ಆಸ್ತಿಯನ್ನು ಹೇಗೆ ದುರ್ಬಳಕೆ ಮಾಡಿಕೊಂಡಿದ್ದಾರೆ, ಕೆಲ ರಾಜಕೀಯ ನಾಯಕರು ಅವರ ಸಂಬಂಧಿಗಳ ವಿವರವನ್ನು ಈ ವರದಿಯಲ್ಲಿ ದಾಖಲಿಸಲಾಗಿದೆ. ಈ ವರದಿಯನ್ನು ತಾವು ಪರಿಗಣನೆಗೆ ತೆಗೆದುಕೊಂಡಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ರಚಿಸಲಾಗಿರುವ ಜಂಟಿ ಸಂಸತ್ ಸಮಿತಿಗೆ ಸಾಕಷ್ಟು ಮಾಹಿತಿ ಸಿಗುತ್ತದೆ ಹಾಗೂ ಇದರಿಂದ ನಿಮ್ಮ ಸಮಿತಿಯು ನಿರ್ಧಾರಗಳನ್ನು ಕೈಗೊಳ್ಳಲು ಸಾಕಷ್ಟು ಅನುಕೂಲವಾಗುತ್ತದೆ,’ ಎಂದು ಪ್ರಸ್ತಾವಿಸಿರುವುದು ಗೊತ್ತಾಗಿದೆ.

SUPPORT THE FILE

Latest News

Related Posts