ಬೆಂಗಳೂರು; ರಾಜ್ಯದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 56ಕ್ಕೂ ಹೆಚ್ಚು ಕೆಎಎಸ್ ಅಧಿಕಾರಿಗಳೂ ಸೇರಿದಂತೆ ಒಟ್ಟಾರೆ 69 ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ನಡೆಯುತ್ತಿವೆ. ಬಹುತೇಕ ಪ್ರಕರಣಗಳು 10-15 ವರ್ಷದಿಂದಲೂ ಬಾಕಿ ಇವೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಈವರೆಗೆ ಅಧಿಕಾರಿ, ನೌಕರರ ವಿರುದ್ಧ ಪ್ರಾಸಿಕ್ಯೂಷನ್ ಮಂಜೂರಾತಿಗೆ ಅನುಮತಿ ಕೇಳಿ ಲೋಕಾಯುಕ್ತದಿಂದ ಬಂದ ಪ್ರಸ್ತಾವಗಳ ಸಮಗ್ರ ಮಾಹಿತಿ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ನಿರ್ದೇಶನ ನೀಡಿದ್ದರು. ಇದರ ಬೆನ್ನಲ್ಲೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸೇವೆಗಳು -ಸಿ ಶಾಖೆಯು ಮುಖ್ಯ ಕಾರ್ಯದರ್ಶಿಗೆ ಕೆಎಎಸ್ ಅಧಿಕಾರಿಗಳ ಪಟ್ಟಿಯನ್ನು (ಸಂ; ಸಿಆಸುಇ 02 ಕೆಇವಿ 2023) ಸಲ್ಲಿಸಿದೆ. ಇದರ ಸಮಗ್ರ ಪಟ್ಟಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕೆಎಎಸ್ ಅಧಿಕಾರಿಗಳ ವಿರುದ್ಧದ ಬಹುತೇಕ ಪ್ರಕರಣಗಳಲ್ಲಿ ಹಲವು ವರ್ಷಗಳ ಹಿಂದೆಯೇ ವಿಚಾರಣೆ ಅಧಿಕಾರಿಯನ್ನು ನೇಮಿಸಿದ್ದರೂ ಸಹ ಇದುವರೆಗೂ ವಿಚಾರಣೆ ವರದಿ ಸರ್ಕಾರಕ್ಕೆ ಸ್ವೀಕೃತವಾಗಿಲ್ಲ. ಹಾಗೆಯೇ ಅಧಿಕಾರಿಗಳಿಗೆ ಕಾರಣ ಕೇಳುವ ನೋಟೀಸ್ ನೀಡುವುದರಲ್ಲೇ ಕಾಲಹರಣ ಮಾಡಿದೆ. ಅದೇ ರೀತಿ ಹಲವು ಪ್ರಕರಣಗಳಲ್ಲಿ ಕೆಎಎಸ್ ಅಧಿಕಾರಿಗಳನ್ನು ವಿಚಾರಣೆಯಿಂದ ಕೈ ಬಿಟ್ಟು ಕೆಳ ಹಂತದ ಅಧಿಕಾರಿಗಳ ವಿರುದ್ಧ ವಿಚಾರಣೆ ಮುಂದುವರೆಸಿರುವುದು ಸಹ ಗೊತ್ತಾಗಿದೆ.
ಇನ್ನೂ ಕೆಲವು ಅಧಿಕಾರಿಗಳು ವಿಚಾರಣೆಯನ್ನು ಪ್ರಶ್ನಿಸಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಮತ್ತು ಇನ್ನಿತರೆ ಸಕ್ಷಮ ಪ್ರಾಧಿಕಾರಗಳಲ್ಲಿ ತಡೆಯಾಜ್ಞೆ ಸಲ್ಲಿಸಿದ್ದಾರೆ. ಈ ತಡೆಯಾಜ್ಞೆ ಮತ್ತು ಮೇಲ್ಮನವಿಗಳನ್ನು ಇಲಾಖೆಯು ಪ್ರಶ್ನಿಸಿಲ್ಲ ಮತ್ತು ತೆರವುಗೊಳಿಸಲು ಯಾವುದೇ ಕ್ರಮ ಜರುಗಿಸಿಲ್ಲ.
ನಿಯಮ 11ರಡಿಯಲ್ಲಿ ಒಟ್ಟು69, ನಿಯಮ 12 (3) ರಡಿಯಲ್ಲಿ 7 ಅಧಿಕಾರಿಗಳ ವಿರುದ್ಧದ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ಬಾಕಿ ಇರುವುದು ತಿಳಿದು ಬಂದಿದೆ. ಹಾಗೆಯೇ ಒಂದಕ್ಕಿಂತ ಹೆಚ್ಚು ಅಪರಾಧಗಳಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿರುವ ಪ್ರಕರಣಗಳಲ್ಲಿ ಹಲವು ಅಧಿಕಾರಿಗಳ ವಿರುದ್ಧವೂ ವಿಚಾರಣೆ ಬಾಕಿ ಇವೆ.
ಹಲವು ಪ್ರಕರಣಗಳಲ್ಲಿ ಕೆಎಟಿ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ್ದರೂ ಆಪಾದಿತ ಅಧಿಕಾರಿಗಳ ವಿರುದ್ಧ ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲ. ಬದಲಿಗೆ ಈ ಆದೇಶವನ್ನೂ ರಿಟ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಕೆಲವೊಂದಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿವೆ.
ರಾಜಕೀಯ ಪ್ರಭಾವ ಬೀರದ ಅಧಿಕಾರಿಗಳಿಗಷ್ಟೇ ಶಿಸ್ತು ಕ್ರಮ ಜರುಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜಕೀಯ ಮತ್ತಿತರ ಪ್ರಭಾವ ಹೊಂದಿರುವ ಅಧಿಕಾರಿಗಳ ವಿರುದ್ಧದ ಲೋಕಾಯುಕ್ತ ವಿಚಾರಣೆಯ ಶಿಫಾರಸ್ಸುಗಳನ್ನು ಸಚಿವ ಸಂಪುಟವೇ ತಿರಸ್ಕರಿಸಿರುವುದು ಗೊತ್ತಾಗಿದೆ.
ಅಧಿಕಾರಿಗಳ ಸಮಗ್ರ ಪಟ್ಟಿ
ನಿಯಮ 11 ರಡಿ ಇಸ್ಮಾಯಿಲ್ ಸಾಹೇಬ್, ಶ್ರೀಹರ್ಷ ಶೆಟ್ಟಿ, ಹೆಚ್ ಎಸ್ ಸತೀಶ್ ಬಾಬು, ಜಿ ಹೆಚ್ ನಾಗಹನುಮಯ್ಯ, ಎ ನವೀನ್ ಜೋಸೆಫ್, ಡಾ ಜಿ ಸುರೇಶ್, ಎಲ್ ಸಿ ನಾಗರಾಜ್, ಹೆಚ್ ವಿ ಗಿರೀಶ್, ಡಾ ಬಿ ಆರ್ ಹರೀಶ್, ಗಿರೀಶ್ ನಂದನ್, ಹೆಚ್ ವಿ ಗಿರೀಶ್, ಡಾ ಮಂಜುನಾಥ್ ವಿ, ಟಿ ಜಿ ಗುರುಪ್ರಸಾದ್, ಡಾ ಎಂ ಜಿ ಶಿವಣ್ಣ, ದಯಾನಂದ ಪಾಟೀಲ್, ಮಲ್ಲೇಶ್ ಎಂ ತಂಗಾ, ಉಮೇಶ್ ಜೆ, ಶಿವಾನಂದ ಪಿ ಸಾಗರ, ಟಿ ಸಿ ಹಾದಿಮನಿ, ಬಾಳಪ್ಪ ಹಂದಿಗುಂದ, ಡಾ ಎನ್ ಸಿ ವೆಂಕಟರಾಜು, ಎಸ್ ಎಸ್ ಸಂಪಗಾವಿ, ಅರುಣ ಪ್ರಭಾ, ತೇಜಸ್ ಕುಮಾರ್, ಡಾ ಕಾಂತರಾಜ್, ಎ ಮರೀಗೌಡ, ಆರ್ ವೆಂಕಟೇಶ್, ಪಿ ಎಸ್ ಮಂಜುನಾಥ್, ಕೆ ರಂಗನಾಥ್, ಎ ಬಿ ಬಸವರಾಜು, ಪಿ ಜಯ ಮಾಧವ, ಸಿ ಎಲ್ ಆನಂದ್, ಸಿ ನಾಗರಾಜು, ಕುಸುಮಾಕುಮಾರಿ, ಶಂಕರ ವಣಿಕ್ಯಾಳ, ಎಂ ಎಸ್ ಎನ್ ಬಾಬು, ಅಮರೇಶ್ ಹೆಚ್, ಬಿ ಮಲ್ಲಿಕಾರ್ಜುನ, ಎಲಿಷಾ ಆಂಡ್ರೂಸ್, ಕೆ ಎಂ ಸುರೇಶ್ ಕುಮಾರ್ ಸಿದ್ದಲಿಂಗರೆಡ್ಡಿ, ವೈ ಎಂ ರಾಮಚಂದ್ರ ಮೂರ್ತಿ, ಹೆಚ್ ರಾಮಾಂಜನೇಯ, ಜಿ ಸಿ ಅನಿಲ್ ಕುಮಾರ್, ಮಹಮ್ಮದ್ ಖಲೀಮುಲ್ಲಾ, ವಿ ಶಶಿಕಲಾ, ಜಿ ಸಿ ರಾಜಶೇಖರ್, ಸಿ ನಾಗಯ್ಯ, ಅತೀಕ್ ಅಹ್ಮದ್, ಎಸ್ ಪಿ ಕುಲಕರ್ಣಿ, ನಾಗಾ ನಾಯಕ್ ಅವರ ವಿರುದ್ಧ ವಿಚಾರಣೆ ಬಾಕಿ ಇರುವುದು ಪಟ್ಟಿಯಿಂದ ತಿಳಿದು ಬಂದಿದೆ.
ನಿಯಮ 12 ರಡಿ ಹೆಚ್ ಎಸ್ ಅರುಣ ಪ್ರಭ, ಜಿ ಆರ್ ಹರಿಶಿಲ್ಪ, ಭೀಮಾ ನಾಯ್ಕ್, ಹೆಚ್ ಕೊಟ್ರೇಶ್, ರವಿಕುಮಾರ್, ವೀಣಾ ಆರ್, ಬಿ ಬಸಂತಿ, ಉಮೇಶ್ ಚಂದ್ರ ಸೇರಿದಂತೆ ಇನ್ನಿತರರ ವಿರುದ್ಧ ವಿಚಾರಣೆ ಪ್ರಾರಂಭವಾಗಿವೆ.
ಅದೇ ರೀತಿ 12(3) ಅಡಿಯಲ್ಲಿ ಟಿ ಜವರೇಗೌಡ, ಎಸ್ ಎನ್ ರುದ್ರೇಶ್, ಶೋಭಿತ, ಬಿ ಕೆ ಮಮತ, ಹೆಚ್ ಎಲ್ ನಾಗರಾಜ್, ಕುಸುಮಕುಮಾರಿ ಅವರ ವಿರುದ್ಧದ ವಿಚಾರಣೆ ಆರಂಭವಾಗಿದೆ. ಈ ಎಲ್ಲಾ ಅಧಿಕಾರಿಗಳ ವಿರುದ್ಧ ಕಂದಾಯ ಇಲಾಖೆಯ ಅಭಿಪ್ರಾಯವನ್ನು ಕೋರಿದೆ. ಕಳೆದ ಮೂರ್ನಾಲ್ಕು ವರ್ಷಗಳಾದರೂ ಈ ಅಧಿಕಾರಿಗಳ ವಿರುದ್ಧ ಕಂದಾಯ ಇಲಾಖೆಯು ಇನ್ನೂ ಅಭಿಪ್ರಾಯ ನೀಡಿಲ್ಲ ಎಂದು ಗೊತ್ತಾಗಿದೆ.
ಲೋಕಾಯುಕ್ತ ಪ್ರಕರಣದಲ್ಲಿ ಇಲಾಖೆ ವಿಚಾರಣೆಗೆ ಗುರಿಯಾಗಿರುವ ಶಶಿಧರ ಬಗಲಿ, ಸೇರಿದಂತೆ ಒಟ್ಟು 40 ಕೆಎಎಸ್ ಅಧಿಕಾರಿಗಳ ವಿರುದ್ಧ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಇಲಾಖೆ ವಿಚಾರಣೆ ನಡೆಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಆಡಳಿತ ಇಲಾಖೆಗಳು ಪ್ರಸ್ತಾವವನ್ನು ಸಲ್ಲಿಸಿತ್ತು.
2022ರ ಫೆ.15ರಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ಕೃಷ್ಣಬೈರೇಗೌಡ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲಾಖೆ ವಿಚಾರಣೆಗೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಒಟ್ಟು 40 ಕೆಎಎಸ್ ಅಧಿಕಾರಿಗಳ ವಿರುದ್ಧ ಪ್ರಸ್ತಾವನೆ ಬಂದಿವೆ ಎಂದು ಪಟ್ಟಿಯನ್ನು ಒದಗಿಸಿದ್ದರು.
ಇಲಾಖೆ ವಿಚಾರಣೆಗೆ ಗುರಿಯಾಗಿರುವ ಕೆಎಎಸ್ ಅಧಿಕಾರಿಗಳ ಪಟ್ಟಿ
ಶಶಿಧರ ಬಗಲಿ (5 ವರ್ಷ 4 ತಿಂಗಳು), ಶ್ರೀ ಹರ್ಷ ಶೆಟ್ಟಿ (6 ವರ್ಷ 7ತಿಂಗಳು) ಎಚ್ ಎಸ್ ಸತೀಶ್ ಬಾಬು (6 ವರ್ಷ 7 ತಿಂಗಳು), ಕೆ ಎನ್ ಪ್ರವೀಣ್ ( 4 ವರ್ಷ 10 ತಿಂಗಳು), ರಾಜಶ್ರೀ ಜೈನಾಪುರ ಮತ್ತು ಇತರರು (3 ವರ್ಷ 7 ತಿಂಗಳು), ನಾಗಹನುಮಯ್ಯ ಜಿ ಎಚ್ ಇತರರು (3 ವರ್ಷ 7 ತಿಂಗಳು) ಎ ನವೀನ್ ಜೋಸೆಫ್ (3 ವರ್ಷ 7 ತಿಂಗಳು), ಡಾ ಎಸ್ ಎಸ್ ಮಧುಕೇಶ್ವರ್ (3 ವರ್ಷ 4 ತಿಂಗಳು), ಹರಿಶಿಲ್ಪ ಜಿ ಆರ್ ( 2 ವರ್ಷ 10 ತಿಂಗಳು), ವಿ ಪ್ರಸನ್ನ ( 2 ವರ್ಷ 9 ತಿಂಗಳು), ಡಾ ಜಿ ಸುರೇಶ್ (2 ವರ್ಷ 9 ತಿಂಗಳು) ಡಾ ಜಿ ಸುರೇಶ್ ( 1 ವರ್ಷ 3 ತಿಂಗಳು), ಎಲ್ ಸಿ ನಾಗರಾಜ್ (4 ತಿಂಗಳು), ಎಚ್ ಎಸ್ ಅರುಣ ಪ್ರಭ (10 ತಿಂಗಳು), ಅಬೀದ್ ಗದ್ದಾಳ್ (4 ತಿಂಗಳು), ಡಾ ಎಸ್ ಎಸ್ ಮಧುಕೇಶ್ವರ್ (10 ದಿನಗಳು),
ಈ ಪೈಕಿ ಶಶಿಧರ ಬಗಲಿ ಮತ್ತು ಸೋಮನಾಳ ಅವರನ್ನು ಕೈಬಿಟ್ಟು ಹುಲ್ಲೊಳ್ಳಿ ಅವರ ವಿರುದ್ಧ ನಡೆಸಲಾದ ವಿಚಾರಣೆಯಲ್ಲಿ ಸ್ವೀಕೃತವಾಗಿರುವ ವಿಚಾರಣೆ ವರದಿಯು ಇನ್ನೂ ಪರಿಶೀಲನೆ ಹಂತದಲ್ಲಿದ್ದವು.
ಡಾ ಬಿ ಆರ್ ಹರೀಶ್ (10 ದಿನಗಳು), ಎ ಮರಿಗೌಡ ( 9 ವರ್ಷ 9 ತಿಂಗಳು), ಜಿ ಎಸ್ ಬಸವರಾಜ್ (4 ವರ್ಷ 11 ತಿಂಗಳು), ಆರ್ ವೆಂಕಟೇಶ್ (ನಿವೃತ್ತ ಕೆಎಎಎಸ್) (8 ವರ್ಷ 6 ತಿಂಗಳು), ಸಿ ಮಂಜುನಾಥ್, ಎಚ್ ಎಸ್ ಸತೀಶ್‌ಬಾಬು (3 ವರ್ಷ 7 ತಿಂಗಳು), ಎಂ ಸತೀಶ್‌ಕುಮಾರ್ (3 ವರ್ಷ 4 ತಿಂಗಳು), ಜಗದೀಶ್ ಕೆ ನಾಯಕ್ ( 2 ವರ್ಷ 9 ತಿಂಗಳು), ಪಿ ಎಸ್ ಮಂಜುನಾಥ್, ಐ ಆರ್ ಶಿರಹಟ್ಟಿ ( 3 ವರ್ಷ 7 ತಿಂಗಳು), ಕೆ ರಂಗನಾಥ್ (3 ವರ್ಷ 6 ತಿಂಗಳು), ಎ ಬಿ ಬಸವರಾಜು (2 ವರ್ಷ 3 ತಿಂಗಳು), ಪದ್ಮಬಸವಂತಪ್ಪ, ಮೊಹಮ್ಮದ್ ಜುಬೇರ (1 ವರ್ಷ), ಪಿ ಜಯಮಾಧವ ( 2ವರ್ಷ 9 ತಿಂಗಳು),
ಎನ್ ಮಹೇಶ್‌ಬಾಬು (2 ವರ್ಷ 2 ತಿಂಗಳು), ಸಿ ಎಲ್ ಆನಂದ್ (7 ತಿಂಗಳು), ಎನ್ ಚಂದ್ರಶೇಖರ್, ಜಿ ಎಸ್ ಪ್ರಸನ್ನಕುಮಾರ್ ಅಮರೇಶ್, ಅಪ್ಪಣ್ಣಗೌಡ, ಕಾಂತರಾಜ್. ಸಿ ನಾಗರಾಜು (11 ತಿಂಗಳು), ನಾಗರಾಜ್ ಆರ್ ಸಿಂಗ್ರೇರ್ (10 ತಿಂಗಳು) ವೈ ಎಂ ರಾಮಚಂದ್ರಮೂರ್ತಿ (9 ವರ್ಷ 1 ತಿಂಗಳು), ಎಚ್ ರಾಮಾಂಜನೇಯ (8 ವರ್ಷ 5 ತಿಂಗಳು), ಜಿ ಸಿ ಅನಿಲ್‌ಕುಮಾರ್ (6 ವರ್ಷ 4 ತಿಂಗಳು), ಮಹಮ್ಮದ್ ಖಲೀಮುಲ್ಲಾ, ಎಸ್ ಎನ್ ಗಂಗಾಧರಯ್ಯ, ಜಿ ವಿ ಸೀನಪ್ಪ, ರಾಧಾಕೃಷ್ಣ, ನಾಗಾನಾಯಕ್, ಜಿ ಸಿ ಅನಿಲ್‌ಕುಮಾರ್ ( 6 ವರ್ಷ 3 ತಿಂಗಳು), ವಿ ಶಶಿಕಲಾ ಮತ್ತು ಇತರರು (4 ವರ್ಷ 10 ತಿಂಗಳು), ಜಿ ಸಿ ರಾಜಶೇಖರ್ (8 ರ್ಷ 8 ತಿಂಗಳು) ಇದ್ದರು.
‘ಶಿಸ್ತುಕ್ರಮ ಪ್ರಾರಂಭವಾದ ನಂತರದಲ್ಲಿ ಕೆಲವು ಪ್ರಕರಣಗಳಲ್ಲಿ ಅಧಿಕಾರಿ, ನೌಕರರು ಸಂಬಂಧಿಸಿದ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ನ್ಯಾಯಾಲಯಗಳಲ್ಲಿ ಹಾಗೂ ಅಧಿಕಾರಿಗಳ ಪ್ರತಿ ರಕ್ಷಣಾ ಹೇಳಿಕೆ ಸಲ್ಲಿಕೆ, ವಿಚಾರಣೆ ವರದಿ ಸಲ್ಲಿಕೆಯ ನಂತರ ಆಡಳಿತ ಇಲಾಖೆಯ ಸ್ಪಷ್ಟೀಕರಣ, ಅಭಿಪ್ರಾಯ ಕೋರಿರುವ ಕೆಲವು ಪ್ರಕರಣಗಳಲ್ಲಿ ಆಡಳಿತ ಇಲಾಖೆಯು ಸಂಬಂಧಿಸಿದ ಕ್ಷೇತ್ರ ಇಲಾಖೆಗಳಿಂದ ಮಾಹಿತಿ, ಅಭಿಪ್ರಾಯ ಪಡೆಯುವುದರಲ್ಲಿಯೇ ಕಾಲಹರಣ ಮಾಡಲಾಗುತ್ತಿದೆ,’ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಅಕ್ರಮ, ದುರ್ನಡತೆ ಆರೋಪ; 40 ಕೆಎಎಸ್ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆಗೆ ಪ್ರಸ್ತಾವ
ಕಾಲಮಿತಿಯೊಳಗೆ ವಿಚಾರಣೆ ತನಿಖೆಗಳನ್ನು ಪೂರೈಸಲು ಯಾವುದೇ ಉದ್ದೇಶಪೂರ್ವಕವಾಗಿ ವಿಳಂಬವಾಗಿರುವುದಿಲ್ಲ. ವಿಳಂಬವನ್ನು ತಡೆಗಟ್ಟುವ ಸಂಬಂಧ ನಿಯಮಿತವಾಗಿ ವಿವಿದ ಹಂತಗಳಲ್ಲಿ ಪರಿಶೀಲನೆ ಮಾಡಿ ತ್ವರಿತಗತಿಯಲ್ಲಿ ಪ್ರಕರಣಗಳ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಅವರು ಉತ್ತರಿಸಿದ್ದನ್ನು ಸ್ಮರಿಸಬಹುದು.