ಅಕ್ರಮ, ದುರ್ನಡತೆ ಆರೋಪ; 40 ಕೆಎಎಸ್‌ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆಗೆ ಪ್ರಸ್ತಾವ

Photo Credit; TheNewIndianExpress

ಬೆಂಗಳೂರು; ಸಚಿವ ಬಿ ಶ್ರೀರಾಮುಲು ಅವರು ಆರೋಪಿಯಾಗಿರುವ ಲೋಕಾಯುಕ್ತ ಪ್ರಕರಣದಲ್ಲಿ ಇಲಾಖೆ ವಿಚಾರಣೆಗೆ ಗುರಿಯಾಗಿರುವ ಶಶಿಧರ ಬಗಲಿ, ಸೇರಿದಂತೆ ಒಟ್ಟು 40 ಕೆಎಎಸ್‌ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ನಡೆಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಆಡಳಿತ ಇಲಾಖೆಗಳು ಪ್ರಸ್ತಾವವನ್ನು ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

 

2022ರ ಫೆ.15ರಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ಕೃಷ್ಣಬೈರೇಗೌಡ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲಾಖೆ ವಿಚಾರಣೆಗೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಒಟ್ಟು 40 ಕೆಎಎಸ್‌ ಅಧಿಕಾರಿಗಳ ವಿರುದ್ಧ ಪ್ರಸ್ತಾವನೆ ಬಂದಿವೆ ಎಂದು ಪಟ್ಟಿಯನ್ನು ಒದಗಿಸಿದ್ದಾರೆ. ಈ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಇಲಾಖೆ ವಿಚಾರಣೆಗೆ ಗುರಿಯಾಗಿರುವ ಕೆಎಎಸ್‌ ಅಧಿಕಾರಿಗಳ ಪಟ್ಟಿ

 

ಶಶಿಧರ ಬಗಲಿ (5 ವರ್ಷ 4 ತಿಂಗಳು), ಶ್ರೀ ಹರ್ಷ ಶೆಟ್ಟಿ (6 ವರ್ಷ 7ತಿಂಗಳು) ಎಚ್‌ ಎಸ್‌ ಸತೀಶ್‌ ಬಾಬು (6 ವರ್ಷ 7 ತಿಂಗಳು), ಕೆ ಎನ್‌ ಪ್ರವೀಣ್‌ ( 4 ವರ್ಷ 10 ತಿಂಗಳು), ರಾಜಶ್ರೀ ಜೈನಾಪುರ ಮತ್ತು ಇತರರು (3 ವರ್ಷ 7 ತಿಂಗಳು), ನಾಗಹನುಮಯ್ಯ ಜಿ ಎಚ್‌ ಇತರರು (3 ವರ್ಷ 7 ತಿಂಗಳು) ಎ ನವೀನ್‌ ಜೋಸೆಫ್‌ (3 ವರ್ಷ 7 ತಿಂಗಳು), ಡಾ ಎಸ್‌ ಎಸ್‌ ಮಧುಕೇಶ್ವರ್‌ (3 ವರ್ಷ 4 ತಿಂಗಳು), ಹರಿಶಿಲ್ಪ ಜಿ ಆರ್‌ ( 2 ವರ್ಷ 10 ತಿಂಗಳು), ವಿ ಪ್ರಸನ್ನ ( 2 ವರ್ಷ 9 ತಿಂಗಳು), ಡಾ ಜಿ ಸುರೇಶ್‌ (2 ವರ್ಷ 9 ತಿಂಗಳು)  ಡಾ ಜಿ ಸುರೇಶ್‌ ( 1 ವರ್ಷ 3 ತಿಂಗಳು), ಎಲ್‌ ಸಿ ನಾಗರಾಜ್‌ (4 ತಿಂಗಳು), ಎಚ್‌ ಎಸ್‌ ಅರುಣ ಪ್ರಭ (10 ತಿಂಗಳು), ಅಬೀದ್‌ ಗದ್ದಾಳ್‌ (4 ತಿಂಗಳು), ಡಾ ಎಸ್‌ ಎಸ್‌ ಮಧುಕೇಶ್ವರ್‌ (10 ದಿನಗಳು),

ಈ ಪೈಕಿ ಶಶಿಧರ ಬಗಲಿ ಮತ್ತು ಸೋಮನಾಳ ಅವರನ್ನು ಕೈಬಿಟ್ಟು ಹುಲ್ಲೊಳ್ಳಿ ಅವರ ವಿರುದ್ಧ ನಡೆಸಲಾದ ವಿಚಾರಣೆಯಲ್ಲಿ ಸ್ವೀಕೃತವಾಗಿರುವ ವಿಚಾರಣೆ ವರದಿಯು ಇನ್ನೂ ಪರಿಶೀಲನೆ ಹಂತದಲ್ಲೇ ಇದೆ.

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಪಟ್ಟಿ

 

ಡಾ ಬಿ ಆರ್‌ ಹರೀಶ್‌ (10 ದಿನಗಳು), ಎ ಮರಿಗೌಡ ( 9 ವರ್ಷ 9 ತಿಂಗಳು), ಜಿ ಎಸ್‌ ಬಸವರಾಜ್‌ (4 ವರ್ಷ 11 ತಿಂಗಳು), ಆರ್‌ ವೆಂಕಟೇಶ್‌ (ನಿವೃತ್ತ ಕೆಎಎಎಸ್‌) (8 ವರ್ಷ 6 ತಿಂಗಳು), ಸಿ ಮಂಜುನಾಥ್‌, ಎಚ್‌ ಎಸ್‌ ಸತೀಶ್‌ಬಾಬು (3 ವರ್ಷ 7 ತಿಂಗಳು), ಎಂ ಸತೀಶ್‌ಕುಮಾರ್‌ (3 ವರ್ಷ 4 ತಿಂಗಳು), ಜಗದೀಶ್‌ ಕೆ ನಾಯಕ್‌ ( 2 ವರ್ಷ 9 ತಿಂಗಳು), ಪಿ ಎಸ್‌ ಮಂಜುನಾಥ್‌, ಐ ಆರ್‌ ಶಿರಹಟ್ಟಿ ( 3 ವರ್ಷ 7 ತಿಂಗಳು), ಕೆ ರಂಗನಾಥ್‌ (3 ವರ್ಷ 6 ತಿಂಗಳು), ಎ ಬಿ ಬಸವರಾಜು (2 ವರ್ಷ 3 ತಿಂಗಳು), ಪದ್ಮಬಸವಂತಪ್ಪ, ಮೊಹಮ್ಮದ್‌ ಜುಬೇರ (1 ವರ್ಷ), ಪಿ ಜಯಮಾಧವ ( 2ವರ್ಷ 9 ತಿಂಗಳು),

 

ಎನ್‌ ಮಹೇಶ್‌ಬಾಬು (2 ವರ್ಷ 2 ತಿಂಗಳು), ಸಿ ಎಲ್‌ ಆನಂದ್‌ (7 ತಿಂಗಳು), ಎನ್‌ ಚಂದ್ರಶೇಖರ್‌, ಜಿ ಎಸ್‌ ಪ್ರಸನ್ನಕುಮಾರ್‌ ಅಮರೇಶ್‌, ಅಪ್ಪಣ್ಣಗೌಡ, ಕಾಂತರಾಜ್‌. ಸಿ ನಾಗರಾಜು (11 ತಿಂಗಳು), ನಾಗರಾಜ್‌ ಆರ್‌ ಸಿಂಗ್ರೇರ್‌ (10 ತಿಂಗಳು) ವೈ ಎಂ ರಾಮಚಂದ್ರಮೂರ್ತಿ (9 ವರ್ಷ 1 ತಿಂಗಳು), ಎಚ್‌ ರಾಮಾಂಜನೇಯ (8 ವರ್ಷ 5 ತಿಂಗಳು), ಜಿ ಸಿ ಅನಿಲ್‌ಕುಮಾರ್‌ (6 ವರ್ಷ 4 ತಿಂಗಳು), ಮಹಮ್ಮದ್‌ ಖಲೀಮುಲ್ಲಾ, ಎಸ್‌ ಎನ್‌ ಗಂಗಾಧರಯ್ಯ, ಜಿ ವಿ ಸೀನಪ್ಪ, ರಾಧಾಕೃಷ್ಣ, ನಾಗಾನಾಯಕ್‌, ಜಿ ಸಿ ಅನಿಲ್‌ಕುಮಾರ್‌ ( 6 ವರ್ಷ 3 ತಿಂಗಳು), ವಿ ಶಶಿಕಲಾ ಮತ್ತು ಇತರರು (4 ವರ್ಷ 10 ತಿಂಗಳು), ಜಿ ಸಿ ರಾಜಶೇಖರ್‌ (8 ರ್ಷ 8 ತಿಂಗಳು) ಇದ್ದಾರೆ.

 

ಶಿಸ್ತುಕ್ರಮ ಪ್ರಾರಂಭವಾದ ನಂತರದಲ್ಲಿ ಕೆಲವು ಪ್ರಕರಣಗಳಲ್ಲಿ ಅಧಿಕಾರಿ, ನೌಕರರು ಸಂಬಂಧಿಸಿದ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ನ್ಯಾಯಾಲಯಗಳಲ್ಲಿ ಹಾಗೂ ಅಧಿಕಾರಿಗಳ ಪ್ರತಿ ರಕ್ಷಣಾ ಹೇಳಿಕೆ ಸಲ್ಲಿಕೆ, ವಿಚಾರಣೆ ವರದಿ ಸಲ್ಲಿಕೆಯ ನಂತರ ಆಡಳಿತ ಇಲಾಖೆಯ ಸ್ಪಷ್ಟೀಕರಣ, ಅಭಿಪ್ರಾಯ ಕೋರಿರುವ ಕೆಲವು ಪ್ರಕರಣಗಳಲ್ಲಿ ಆಡಳಿತ ಇಲಾಖೆಯು ಸಂಬಂಧಿಸಿದ ಕ್ಷೇತ್ರ ಇಲಾಖೆಗಳಿಂದ ಮಾಹಿತಿ, ಅಭಿಪ್ರಾಯ ಪಡೆಯುವುದರಲ್ಲಿಯೇ ಕಾಲಹರಣ ಮಾಡಲಾಗುತ್ತಿದೆ. ವರದಿ ನೀಡಬೇಕಾದ ಕೆಲವು ಪ್ರಕರಣಗಳಲ್ಲಿ ಆಡಳಿತಾತ್ಮಕವಾಗಿ ಪತ್ರ ವ್ಯವಹಾರ ಆಗುವುದರಿಂದ ಕಾಲಮಿತಿ ಅನ್ವಯ ಕ್ರಮ ಕೈಗೊಳ್ಳಲು ಸಾಧ್ಯವಾಗಿರುವುದಿಲ್ಲ ಎಂದು ತಿಳಿದು ಬಂದಿದೆ.

 

ಕಾಲಮಿತಿಯೊಳಗೆ ವಿಚಾರಣೆ ತನಿಖೆಗಳನ್ನು ಪೂರೈಸಲು ಯಾವುದೇ ಉದ್ದೇಶಪೂರ್ವಕವಾಗಿ ವಿಳಂಬವಾಗಿರುವುದಿಲ್ಲ. ವಿಳಂಬವನ್ನು ತಡೆಗಟ್ಟುವ ಸಂಬಂಧ ನಿಯಮಿತವಾಗಿ ವಿವಿದ ಹಂತಗಳಲ್ಲಿ ಪರಿಶೀಲನೆ ಮಾಡಿ ತ್ವರಿತಗತಿಯಲ್ಲಿ ಪ್ರಕರಣಗಳ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಅವರು ಉತ್ತರಿಸಿದ್ದಾರೆ.

 

ವಿವಿಧ ರೀತಿಯ ಅಕ್ರಮ, ದುರ್ನಡತೆ ಎಸಗಿರುವ ಆರೋಪಗಳಡಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹಾಲಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌, ನಿವೃತ್ತ ಐಎಎಸ್‌ ಅಧಿಕಾರಿ ಕೆ ಶಿವರಾಂ ಸೇರಿದಂತೆ 8 ಮಂದಿ ಐಎಎಸ್‌, ಹೇಮಂತ್‌ ನಿಂಬಾಳ್ಕರ್‌ ಸೇರಿದಂತೆ 5 ಮಂದಿ ಐಪಿಎಸ್‌, 9 ಮಂದಿ ಐಎಫ್‌ಎಸ್‌ ಅಧಿಕಾರಿಗಳ ವಿರುದ್ಧವೂ ಇಲಾಖೆ ವಿಚಾರಣೆ ನಡೆಸುವ ಪ್ರಸ್ತಾವವೂ ನೆನೆಗುದಿಗೆ ಬಿದ್ದಿದೆ.

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ಅವರ ವಿರುದ್ಧ ವಿಚಾರಣೆಗೆ ಸಂಬಂಧಿಸಿದಂತೆ 2019ರ ಅಕ್ಟೋಬರ್‌ 25ರಂದು ದೋಷಾರೋಪಣೆ ಪಟ್ಟಿಯನ್ನು ಜಾರಿಗೊಳಿಸಲಾಗಿದೆ. ಈ ಪ್ರಕರಣವು ಎರಡು ವರ್ಷಕ್ಕೂ ಮೇಲ್ಪಟ್ಟಿದೆಯಲ್ಲದೆ ಗರಿಷ್ಠ ಕಾಲಮಿತಿಯನ್ನು ಮೀರಿದೆ. ಆದರೂ ವಿಚಾರಣೆ ಪ್ರಕರಣದಲ್ಲಿ ಕಳೆದ 2 ವರ್ಷದಿಂದಲೂ ಯಾವುದೇ ತೀರ್ಮಾನ ಕೈಗೊಳ್ಳದೆಯೇ ವಿಳಂಬ ಎಸಗಿರುವುದು ಪಟ್ಟಿಯಿಂದ ಮೇಲ್ನೋಟಕ್ಕೆ ಕಂಡು ಬಂದಿದೆ.

SUPPORT THE FILE

Latest News

Related Posts