Friday | May 1, 2026 |

ನೇಕಾರರಿಗೆ 10 ಹೆಚ್‌ಪಿವರೆಗಿನ ಉಚಿತ ವಿದ್ಯುತ್‌; ಸರ್ಕಾರದ ಬೊಕ್ಕಸಕ್ಕೆ 145 ಕೋಟಿ ಹೊರೆ

ಬೆಂಗಳೂರು; ನೇಕಾರರಿಗೆ 10 ಹೆಚ್‌ ಪಿ ವರೆಗೆ ಉಚಿತ ವಿದ್ಯುತ್‌ ಹಾಗೂ 20 ಹೆಚ್‌ ಪಿ ವರೆಗಿನ ಘಟಕಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್‌ ಸೌಲಭ್ಯ ನೀಡಲು ಕೈಗೊಂಡಿರುವ ನಿರ್ಣಯದಿಂದಾಗಿ ಸರ್ಕಾರದ ಬೊಕ್ಕಸಕ್ಕೆ 145 ಕೋಟಿ ರು. ಹೊರೆ ಬೀಳಲಿದೆ.

 

ಅಲ್ಲದೇ 20 ಹೆಚ್‌ ಪಿ ವರೆಗಿನ ಘಟಕಗಳಿಗೆ ವಿದ್ಯುತ್‌ ಶುಲ್ಕ, ನಿಗದಿತ ಶುಲ್ಕ ಹಾಗೂ ಇಂಧನ ಹೊಂದಾಣಿಕ ಶುಲ್ಕ ಎಲ್ಲವನ್ನೂ ಸಂಪೂರ್ಣವಾಗಿ ಉಚಿತ ಮಾಡಿದಲ್ಲಿ 190ರಿಂದ 200 ಕೋಟಿಗಳಷ್ಟು ಸರ್ಕಾರಕ್ಕೆ ಹೊರೆಯಾಗಲಿದೆ ಎಂದು ಅಂದಾಜಿಸಿದೆ.

 

ನೇಕಾರರಿಗೆ 250 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಜಾರಿ ಮಾಡುವ ಮೂಲಕ ಸರಕಾರ ದೀಪಾವಳಿ ಗಿಫ್ಟ್ ನೀಡಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ್‌ ಅವರು ಹೇಳಿಕೆ ನೀಡಿದ್ದರ ಬೆನ್ನಲ್ಲೇ ಇದೀಗ ನೇಕಾರರಿಗೆ ವಿದ್ಯುತ್‌ ಸೌಲಭ್ಯ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯ ನಡವಳಿಗಳು ಮುನ್ನೆಲೆಗೆ ಬಂದಿದೆ.

 

10 ಹೆಚ್‌ ಪಿ ವರೆಗಿನ ವಿದ್ಯುತ್‌ ಸಂಪರ್ಕ ಹೊಂದಿರುವ ಮಗ್ಗ ಮತ್ತು ಮಗ್ಗ ಪೂರ್ವ ಘಟಕಗಳಿಗೆ ಮಾಸಿಕ 250 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಒದಗಿಸುವ ಯೋಜನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಕೈ ಮಗ್ಗ ಮತ್ತು ಜವಳಿ ಇಲಾಖೆಯು ಆರ್ಥಿಕ ಹೊರೆ ಬಗ್ಗೆ ಪ್ರಸ್ತಾಪಿಸಿದೆ. ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಹಿಂದಿನ ಬಿಜೆಪಿ ಸರ್ಕಾರದ ಕಡೆಯ ದಿನದಲ್ಲಿ (17-02-2023) ಮಂಡಿಸಿದ್ದ ಬಜೆಟ್‌ನಲ್ಲಿ 05 ಹೆಚ್‌ ಪಿ ವರೆಗಿನ ವಿದ್ಯುತ್‌ ಸಂಪರ್ಕ ಹೊಂದಿರುವ ಘಟಕಗಳಿಗೆ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ ಉಚಿತ ವಿದ್ಯುತ್‌ ಒದಗಿಸಲಾಗುವುದು ಎಂದು ನಿಗದಿತ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಘೋಷಿಸಿದ್ದರು. ಆದರೆ ಮಾದರಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಜಾರಿಗೊಂಡಿರಲಿಲ್ಲ.

 

2023ರ ಮೇ 29ರಂದು ಕಾಂಗ್ರೆಸ್‌ ಪಕ್ಷವು ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚಿಸಿದ ನಂತರ 10 ಹೆಚ್‌ ಪಿ ವರೆಗಿನ ವಿದ್ಯುತ್‌ ಸಂಪರ್ಕ ಹೊಂದಿರುವ ಮಗ್ಗ ಮತ್ತು ಮಗ್ಗ ಪೂರ್ವ ಘಟಕಗಳಿಗೆಮಾಸಿಕ ಗರಿಷ್ಠ 250 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಒದಗಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿತ್ತು.

 

10 ಹೆಚ್‌ ಪಿ ವರೆಗಿನ ವಿದ್ಯುತ್‌ ಸಂಪರ್ಕ ಹೊಂದಿದ ಘಟಕವು 250 ಯೂನಿಟ್‌ಗಳ ವಿದ್ಯುತ್‌ ಬಳಕೆ ಮಾಡಿದಲ್ಲಿ ವಿದ್ಯುತ್ ಶುಲ್ಕ ಪ್ರತಿ ಯೂನಿಟ್‌ಗೆ 6.10 ರು.ರಂತೆ ಒಟ್ಟು 1,525 ರು, ನಿಗದಿತ ಶುಲ್ಕ ಬಳಕೆ ಮಾಡಿದಲ್ಲಿ 140 ರು.ನಂತೆ ಒಟ್ಟು 1,440 ರು., ಇಂಧನ ಹೊಂದಾಣಿಕೆ ಶುಲ್ಕ ಪ್ರತಿ ಯೂನಿಟ್‌ಗೆ 2.55 ರು.ನಂತೆ 638 ರು. ಹೀಗೆ ಒಟ್ಟು 3,563 ರು ಮತ್ತು ತೆರಿಗೆ 137 ರು. ಸೇರಿ ಪತ್ರಿ ತಿಂಗಳೂ 3,700 ರು.ಗಳಾಗುತ್ತವೆ.

 

ಇದರಲ್ಲಿ ನೇಕಾರರು ವಿದ್ಯುತ್‌ ಶುಲ್ಕ 1.25 ರು.ಗಳಂತೆ 250 ಯೂನಿಟ್‌ಗೆ 312 ರು., ನಿಗದಿ ಶುಲ್ಕ 1,400 ರು. ಇಂಧನ ಹೊಂದಾಣಿಕೆ ಶುಲ್ಕ ಪ್ರತಿ ಯೂನಿಟ್‌ಗೆ 2.55 ರು. ನಂತೆ 638 ರು. ಹೀಗೆ ಒಟ್ಟು ಶುಲ್ಕ 2,350 ರು. ಮತ್ತು ತೆರಿಗೆ ಸೇರಿ ತಿಂಗಳಿಗೆ 2,487 ರು.ಗಳನ್ನು ಪ್ರಸ್ತುತ ಪಾವತಿಸುತ್ತಿದ್ದಾರೆ. ಇದರಲ್ಲಿ ಸುಮಾರು 1,200 ರು.ಗಳನ್ನು ಸರ್ಕಾರದಿಂದ ಭರಿಸಲಾಗುತ್ತಿದೆ ಎಂಬ ಮಾಹಿತಿಯು ನಡವಳಿಯಿಂದ ಗೊತ್ತಾಗಿದೆ.

 

ಇದರಲ್ಲಿ ನಿಗದಿತ ಶುಲ್ಕ ಹೆಚ್ಚಾಗಿರುವುದಲ್ಲದೇ ಪ್ರಸ್ತುತ ವಿಧಿಸಲಾಗುತ್ತಿರುವ ಇಂಧನ ಹೊಂದಾಣಿಕೆ ಶುಲ್ಕದಿಂದ ನೇಕಾರರ ಮೇಲೆ ಹೊರೆ ಹೆಚ್ಚಾಗಿದೆ. ಈ ಎರಡನ್ನೂ ಸರ್ಕಾರವು ಭರಿಸಿದಲ್ಲಿ ಹೊರೆಯಾಗಲಿದೆ ಎಂದು ಮಾಹಿತಿ ಒದಗಿಸಿದ್ದರು. ಅಲ್ಲದೇ ಮೂರು ಮಾದರಿಗಳನ್ನು ಪ್ರಸ್ತುತಪಡಿಸಿದ್ದರು.

 

ಮೊದಲ ಮಾದರಿಯಿಂದ 50 ಕೋಟಿ ಹೆಚ್ಚುವರಿ ಹೊರೆ, 130 ಕೋಟಿ ಅನುದಾನ ಅವಶ್ಯಕತೆ

 

20 ಹೆಚ್‌ ಪಿ ವರೆಗಿನ ಎಲ್ಲಾ ಘಟಕಗಳು ಪ್ರತಿ ತಿಂಗಳೂ ಅಂದಾಜು 1.28 ಕೋಟಿ ಯೂನಿಟ್‌ಗಳನ್ನು ಬಳಕೆ ಮಾಡಿದಲ್ಲಿ ಪ್ರಸ್ತುತ ನೀಡುತ್ತಿರುವ 1.25 ರು. ವಿದ್ಯುತ್ ಸಹಾಯ ಧನ ಮುಂದುವರೆಸಿದಲ್ಲಿ ವಿದ್ಯುತ್‌ ಶುಲ್ಕ ಒಂದು ವರ್ಷಕ್ಕೆ 80.64 ಕೋಟಿ ರು.ಗಳಾಗುತ್ತದೆ. ನಿಗದಿತ ಶುಲ್ಕವು 80 ರು.ನಿಂದ 140ಕ್ಕೆ ಏರಿಕೆಯಾಗಿದ್ದು ಪ್ರತಿ ಹೆಚ್‌ ಪಿ ಸಾಮರ್ಥ್ಯಕ್ಕೆ ಹೆಚ್ಚುವರಿಯಾಗಿರುವ 60 ರು.ಗಳನ್ನು ಸರ್ಕಾರವೇ ಭರಿಸಬೇಕು ಎಂದಾದಲ್ಲಿ ಒಂದು ವರ್ಷಕ್ಕೆ ಸರ್ಕಾರದ ಬೊಕ್ಕಸಕ್ಕೆ 10 ಕೋಟಿ ರು. ಹೆಚ್ಚುವರಿ ಹೊರೆಯಾಗಲಿದೆ ಎಂದು ವಿವರಿಸಲಾಗಿದೆ.

 

ಅದೇ ರೀತಿ ಇಂಧನ ಹೊಂದಾಣಿಕೆ ಶುಲ್ಕವು ತಿಂಗಳಿನಿಂದ ತಿಂಗಳಿಗೆ 0.55 ರಿಂದ 2.55 ವರೆಗೆ ವ್ಯತ್ಯಾಸವಾಗುತ್ತಿದ್ದು ಇದನ್ನು ಸರ್ಕಾರ ಭರಿಸಬೇಕು ಎಂದಾದಲ್ಲಿ ಒಂದು ವರ್ಷಕ್ಕೆ ಸರ್ಕಾರದ ಬೊಕ್ಕಸಕ್ಕೆ 40 ಕೋಟಿ ರು. ಹೆಚ್ಚುವರಿ ಹೊರೆಯಾಗಲಿದೆ. ಈ ಮಾದರಿ ಅನ್ವಯ 130 ಕೋಟಿ ರು.ಗಳ ಅನುದಾನ ಅವಶ್ಯಕತೆ ಇದೆ ಎಂದು ಸಭೆಗೆ ವಿವರಿಸಲಾಗಿತ್ತು ಎಂಬುದು ನಡವಳಿಯಿಂದ ಗೊತ್ತಾಗಿದೆ.

ನೇಕಾರರ ವಿದ್ಯುತ್‌ ಶುಲ್ಕ; ಅಧಿಕಾರಿಗಳ ಲೋಪದಿಂದ ಬಾಕಿ ಉಳಿದಿದೆ 268 ಕೋಟಿ ಬಾಕಿ

 

ಎರಡನೇ ಮಾದರಿಗೆ 142 ಕೋಟಿ ಅನುದಾನ

 

ಬಳಕೆ ಮಾಡಿದ ಮೊದಲ 250 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ ಹಾಗೂ 250 ಯೂನಿಟ್‌ಗಳ ಮೇಲ್ಪಟ್ಟು ಬಳಕೆಯಾದ ಯೂನಿಟ್‌ಗಳವರೆಗೆ ಪ್ರಸ್ತುತ ನೀಡುತ್ತಿರುವ 1.25 ರು. ವಿದ್ಯುತ್‌ ಸಹಾಯಧನದಂತೆ ಮುಂದುವರೆಸಿದರೆ ವಿದ್ಯುತ್‌ ಶುಲ್ಕ ಒಂದು ವರ್ಷಕ್ಕೆ 92.28 ಕೋಟಿ ರು. ಆಗಲಿದೆ. ಈ ಮಾದರಿಯಲ್ಲಿಯೂ ಒಂದು ವರ್ಷಕ್ಕೆ 142 ಕೋಟಿ ರು.ಗಳ ಅನುದಾನ ಅವಶ್ಯಕತೆ ಇದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.

 

ಮೂರನೇ ಮಾದರಿಗೆ 145 ಕೋಟಿ ರು. ಅನುದಾನ

 

10 ಹೆಚ್‌ ಪಿ ವರೆಗಿನ ಘಟಕಗಳಿಗೆ ಉಚಿತ ವಿದ್ಯುತ್‌ (ಶೂನ್ಯ ಬಿಲ್‌) ಹಾಗೂ 10.1ರಿಂದ 20 ಹೆಚ್‌ ಪಿ ವರೆಗಿನ ಘಟಕಗಳಿಗೆ ಪ್ರಸ್ತುತ ನೀಡುತ್ತಿರುವ 1.25 ರು.ನಂತೆ ವಿದ್ಯುತ್‌ ಸಹಾಯಧನದಂತೆ ಮುಂದುವರೆಸಿದಲ್ಲಿ ವಿದ್ಯುತ್‌ ಶುಲ್ಕ ಒಂದು ವರ್ಷಕ್ಕೆ 97.65 ಕೋಟಿ ರುಗಳಷ್ಟಾಗುತ್ತದೆ. ಇದರಲ್ಲಿ ಇಂಧನ ಶುಲ್ಕ 78 ಕೋಟಿ ರು., ರಿಯಾಯಿತಿ ದರದಲ್ಲಿ ಭರಿಸಬೇಕಾದ ಇಂಧನ ಶುಲ್ಕ 19.65 ಕೋಟಿ ರು.ಸೇರಿದೆ.

 

10 ಹೆಚ್‌ಪಿ ವರೆಗಿನ ಘಟಕಗಳ ನಿಗದಿತ ಶುಲ್ಕ ಪ್ರತಿ ಹೆಚ್‌ ಪಿ ಸಾಮರ್ಥ್ಯಕ್ಕೆ 140 ರು.ನಂತೆ ಒಂದು ವರ್ಷಕ್ಕೆ 16.80ಕೋಟಿ ರು., ಇಂಧನ ಹೊಂದಾಣಿಕೆ ಶುಲ್ಕ 2.55 ರು.ನಂತೆ ಒಂದು ವರ್ಷಕ್ಕೆ 30.60 ಕೋಟಿ ರು. ಸರ್ಕಾರವು ಭರಿಸಬೇಕು. ಈ ಮಾದರಿ ಜಾರಿಗೆ ತಂದಲ್ಲಿ ಸರ್ಕಾರದ ಬೊಕ್ಕಸಕ್ಕೆ 145 ಕೋಟಿ ರು. ಹೊರೆಯಾಗುತ್ತದೆ ಎಂದು ಅಂಕಿ ಅಂಶಗಳನ್ನು ಮುಂದಿಟ್ಟಿದ್ದರು ಎಂಬುದು ಗೊತ್ತಾಗಿದೆ.

Hot this week

ಬಿಡಿಎ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ ನೇಮಕದಲ್ಲಿ ಡಿಸಿಎಂ ಮೇಲುಗೈ, ಜಾರಕಿಹೊಳಿ ಮೌನ; ಕೆಟ್ಟ ಪೂರ್ವ ನಿದರ್ಶನಕ್ಕೆ ನಾಂದಿ ಹಾಡಿದ ಸಿಎಂ

ಬೆಂಗಳೂರು;  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿರುವ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ...

ಕಲ್ಬುರ್ಗಿ ಡಿಸಿಸಿ ಬ್ಯಾಂಕ್‌ನಲ್ಲಿ ಬಹು ಕೋಟಿ ಅಕ್ರಮ; ತನಿಖೆಗೆ ಮುಂದಾಗದ ಸರ್ಕಾರ, ತೆವಳುತ್ತಿದೆ ಕಡತ

ಬೆಂಗಳೂರು;  ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಗಳ...

ಬಿಡಿಎ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ ನೇಮಕಕ್ಕೆ ಒತ್ತಡ; ವಿವಾದಕ್ಕೆ ದಾರಿಯಾದ ಡಿಸಿಎಂ ಟಿಪ್ಪಣಿ, ನಿಯಮ ಉಲ್ಲಂಘನೆ?

ಬೆಂಗಳೂರು; ಬಿಬಿಎಂಪಿ ವೃಂದಕ್ಕೆ ಸೇರಿರುವ ಮುಖ್ಯ ಇಂಜಿನಿಯರ್  ಪ್ರವೀಣ್ ಲಿಂಗಯ್ಯ ಅವರನ್ನು...

ಆಧಾರ್ ಕಾರ್ಡ್‌ಗಿಂತಲೂ ಶಕ್ತಿ ಸ್ಮಾರ್ಟ್‌ ದುಬಾರಿ, ಎಸ್‌ಪಿವಿ ರಚನೆಯಾದರೂ ಸಿಗದ ಕಾರ್ಡ್‌; 185 ಕೋಟಿ ವೆಚ್ಚ ಭರಿಸುವವರಾರು?

ಬೆಂಗಳೂರು; ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ  ಸೌಲಭ್ಯ ಕಲ್ಪಿಸುವ 'ಶಕ್ತಿ'...

Topics

ಬಿಡಿಎ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ ನೇಮಕದಲ್ಲಿ ಡಿಸಿಎಂ ಮೇಲುಗೈ, ಜಾರಕಿಹೊಳಿ ಮೌನ; ಕೆಟ್ಟ ಪೂರ್ವ ನಿದರ್ಶನಕ್ಕೆ ನಾಂದಿ ಹಾಡಿದ ಸಿಎಂ

ಬೆಂಗಳೂರು;  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿರುವ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ...

ಕಲ್ಬುರ್ಗಿ ಡಿಸಿಸಿ ಬ್ಯಾಂಕ್‌ನಲ್ಲಿ ಬಹು ಕೋಟಿ ಅಕ್ರಮ; ತನಿಖೆಗೆ ಮುಂದಾಗದ ಸರ್ಕಾರ, ತೆವಳುತ್ತಿದೆ ಕಡತ

ಬೆಂಗಳೂರು;  ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಗಳ...

ಬಿಡಿಎ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ ನೇಮಕಕ್ಕೆ ಒತ್ತಡ; ವಿವಾದಕ್ಕೆ ದಾರಿಯಾದ ಡಿಸಿಎಂ ಟಿಪ್ಪಣಿ, ನಿಯಮ ಉಲ್ಲಂಘನೆ?

ಬೆಂಗಳೂರು; ಬಿಬಿಎಂಪಿ ವೃಂದಕ್ಕೆ ಸೇರಿರುವ ಮುಖ್ಯ ಇಂಜಿನಿಯರ್  ಪ್ರವೀಣ್ ಲಿಂಗಯ್ಯ ಅವರನ್ನು...

ಆಧಾರ್ ಕಾರ್ಡ್‌ಗಿಂತಲೂ ಶಕ್ತಿ ಸ್ಮಾರ್ಟ್‌ ದುಬಾರಿ, ಎಸ್‌ಪಿವಿ ರಚನೆಯಾದರೂ ಸಿಗದ ಕಾರ್ಡ್‌; 185 ಕೋಟಿ ವೆಚ್ಚ ಭರಿಸುವವರಾರು?

ಬೆಂಗಳೂರು; ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ  ಸೌಲಭ್ಯ ಕಲ್ಪಿಸುವ 'ಶಕ್ತಿ'...

ಟೆಲಿಕಾಂ ಕಂಪನಿಯಿಂದ ವಿಧಾನಸೌಧ ಟರೇಸ್‌ ಅನಧಿಕೃತ ಬಳಕೆ; ವಸೂಲಾಗದ ನೆಲಬಾಡಿಗೆ, ನಿಯಮ ಉಲ್ಲಂಘಿಸಿದ್ದರೂ ಕ್ರಮವಿಲ್ಲ

ಬೆಂಗಳೂರು; ಟೆಲಿಕಾಂ ಮೂಲಸೌಕರ್ಯ ಕಂಪನಿಗಳಲ್ಲಿ ಖ್ಯಾತಿ ಹೊಂದಿರುವ ಆಂಧ್ರ ಪ್ರದೇಶ ಮೂಲದ...

ನೀಟ್‌, ಕೆ-ಸಿಇಟಿ ತರಬೇತಿ; ಅಲ್ಪಸಂಖ್ಯಾತರ ಇಲಾಖೆಯಲ್ಲಿ ಟೆಂಡರ್ ನಿಯಮ ಉಲ್ಲಂಘನೆ, ನಿಯಮಬಾಹಿರ ಚಟುವಟಿಕೆ, ಸರ್ಕಾರಕ್ಕೆ ಲೀಗಲ್ ನೋಟೀಸ್‌

ಬೆಂಗಳೂರು; ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಸತಿ ಕಾಲೇಜು ವಿದ್ಯಾರ್ಥಿಗಳಿಗೆ ಆಫ್‌ಲೈನ್ ಮಾದರಿಯಲ್ಲಿ...

ವರ್ಗಾವಣೆ ರದ್ದುಗೊಳಿಸಲು ತಲಾ 20 ಲಕ್ಷಕ್ಕೆ ಬೇಡಿಕೆ ಆರೋಪ; ಟೆಂಡರ್ ಕಮಿಷನ್ ಆಪಾದನೆ ಬೆನ್ನಲ್ಲೇ ಕರೀಗೌಡರ ವಿರುದ್ಧ ದೂರು

ಬೆಂಗಳೂರು; ಒಂದೆಡೆ ಮಂಜೂರಾಗಿರುವ ಹುದ್ದೆಗಳನ್ನು  ಭರ್ತಿ ಮಾಡುತ್ತಿಲ್ಲ, ಶೇ. 40ರಷ್ಟು ಹುದ್ದೆಗಳು...

Related Articles

Popular Categories

error: Content is protected !!