ಹೂಡಿಕೆ; ರೋಡ್‌ ಶೋ, ವಿದೇಶ ಪ್ರವಾಸ, ಜಾಹೀರಾತು ಸೇರಿ 74.99 ಕೋಟಿ ವೆಚ್ಚ

photo credit; murugesh r nirani twitter account

ಬೆಂಗಳೂರು; ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಬೆಂಗಳೂರಿನಲ್ಲಿ ನವೆಂಬರ್‌ 2ರಿಂದ 4ರವರೆಗೆ ಆಯೋಜಿಸಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ರೋಡ್‌, ಶೋ, ನಾಡಗೀತೆ ಗಾಯನ, ಜಾಹೀರಾತು, ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಚಾರ ಸಭೆ, ಹೋಟೆಲ್‌ ವಾಸ್ತವ್ಯ, ಮೂಲಸೌಕರ್ಯ ಪ್ರಚಾರ ಫಲಕ, ವಿದೇಶ ಪ್ರವಾಸ ಸೇರಿದಂತೆ ಇನ್ನಿತರೆ ಬಾಬ್ತುಗಳಿಗೆ ಒಟ್ಟಾರೆ 74.99 ಕೋಟಿ ರು. ಖರ್ಚಾಗಿರುವುದು ಆರ್‌ಟಿಐನಿಂದ ಬಹಿರಂಗವಾಗಿದೆ.

 

ಬೆಳಗಾವಿಯ ಸಾಮಾಜಿಕ ಹೋರಾಟಗಾರ ಮತ್ತು ವಕೀಲರಾದ ಭೀಮನಗೌಡ ಪರಗೊಂಡ ಎಂಬುವರಿಗೆ ಇನ್ವೆಸ್ಟ್‌ ಕರ್ನಾಟಕ ಫೋರಂ ಸಂಸ್ಥೆಯು ನೀಡಿರುವ ಆರ್‌ಟಿಐ ಮಾಹಿತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಜಾಹೀರಾತು ಮತ್ತು ಮಾಧ್ಯಮ ಪ್ರಚಾರಕ್ಕೆ 10.58 ಕೋಟಿ ರು, ಸಾಕ್ಷ್ಯಚಿತ್ರಗಳು, ಜಾಹೀರಾತುಗಳ ವಿನ್ಯಾಸಕ್ಕೆ 4.02 ಕೋಟಿ ರು., ಅಂತರಾಷ್ಟ್ರೀಯ ಪ್ರಚಾರ ಸಭೆಗಳಿಗೆ 3,27,91,178 ರು., ಮತ್ತು ರಾಷ್ಟ್ರೀಯ ಪ್ರಚಾರ ಸಭೆಗೆ 1,28,11,962 ರು. ಸೇರಿ ಒಟ್ಟು 4,56,03,140 ರು. ಖರ್ಚಾಗಿರುವುದು ಆರ್‌ಟಿಐನಿಂದ ತಿಳಿದು ಬಂದಿದೆ.

 

ಮಾಹಿತಿ ಹಕ್ಕಿನಡಿಯಲ್ಲಿ ನೀಡಿರುವ ಪ್ರತಿ

 

ವೆಚ್ಚದ ವಿವರ

 

ಜಾಗದ ಬಾಡಿಗೆ (ಬೆಂಗಳೂರು ಅರಮನೆ ಆವರಣ) 1.27 ಕೋಟಿ ರು., ಅಂತರಾಷ್ಟ್ರೀಯ ಪ್ರಚಾರ ಸಭೆಗಳಿಗೆ 3.27 ಕೋಟಿ, ರಾಷ್ಟ್ರೀಯ ಪ್ರಚಾರ ಸಭೆಗಳಿಗೆ 1.28 ಕೋಟಿ, ಕರ್ಟನ್ ರೈಸರ್‌, ಇತರೆ ಸಮಾವೇಶ ಪೂರ್ವ ಪ್ರವರ್ಧನಾ ಕಾರ್ಯಕ್ರಮಗಳಿಗೆ 64.38 ಲಕ್ಷ ರು., ಜಾಹೀರಾತು ಹಾಗೂ ಮಾಧ್ಯಮ ಪ್ರಚಾರ 10.52 ಕೋಟಿ, ಸಾಕ್ಷ್ಯಚಿತ್ರಗಳು, ಜಾಹೀರಾತುಗಳ ವಿನ್ಯಾಸಕ್ಕೆ 4.02 ಕೋಟಿ ರು., ಸಮಾವೇಶ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಮಾವೇಶ ಆಯೋಜನೆ ಸೇವೆಗಳಿಗೆ 50.68 ಕೋಟಿ ರು. ವೆಚ್ಚವಾಗಿದೆ.

 

ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 34.92 ಲಕ್ಷ ರು., ಊಟ ಮತ್ತು ಉಪಹಾರ ಸೇವೆಗಳಿಗೆ 2.02 ಕೋಟಿ ರು., ಗಣ್ಯರಿಗೆ ಮತ್ತ ಸ್ಪೀಕರ್‌ಗಳಿಗೆ ವಾಸ್ತವ್ಯ ಮತ್ತು ಸಾರಿಗೆ ವ್ಯವಸ್ಥೆಗೆ 64.52 ಲಕ್ಷ ರು., ಸ್ಮರಣಿಕೆಗಳು, ಮುದ್ರಣ ಮತ್ತು ಲೆಖನ ಸಾಮಗ್ರಿಗಳೀಗೆ 22.27 ಲಕ್ಷ ರು., ಅಂಚೆ, ಕೊರಿಯರ್‌ ಆಡಿಟ್‌ ಫೀಗೆ 4.72 ಲಕ್ಷ ರು. ಖರ್ಚಾಗಿದೆ.

 

ದಿನಪತ್ರಿಕೆಗಳ ಜಾಹೀರಾತಿಗೆ 4.83 ಕೋಟಿ

 

ದಿನಪತ್ರಿಕೆಗಳಲ್ಲಿ ಜಾಹೀರಾತಿಗೆ 4.83 ಕೋಟಿ ರು., ಡಿಜಿಟಲ್‌ ಮಾಧ್ಯಮಗಳಲ್ಲಿ ಪ್ರಚಾರಕ್ಕೆ 1.59. ಕೋಟಿ ರು., ದೂರದರ್ಶನ ಚಾನಲ್‌ಗಳಲ್ಲಿ ಜಾಹೀರಾತಿಗೆ 77.52 ಲಕ್ಷ ರು., ವಿಮಾನ ನಿಲ್ದಾಣಗಳ ಪ್ರಚಾರ ಫಲಕಗಳಲ್ಲಿ ಜಾಹೀರಾತುಗಳಿಗೆ 2.90 ಕೋಟಿ ರು., ಹೊರಾಂಗಣ ಪ್ರಚಾರ ಫಲಕಗಳಲ್ಲಿ ಜಾಹೀರಾತುಗಳಿಗೆ 34.85 ಲಕ್ಷ ರು., ಎಫ್‌ಎಂ ರೇಡಿಯೋ ಚಾನಲ್‌ಗಳಲ್ಲಿ ಜಾಹೀರಾತಿಗೆ 4.95 ಲಕ್ಷ ರು., ಸಣ್ಣ ಪತ್ರಿಕೆ (10 ಸಣ್ಣಪತ್ರಿಕೆಗಳು)ಗಳಲ್ಲಿ ಜಾಹೀರಾತಿಗೆ 2.50 ಲಕ್ಷ ರು. ಸೇರಿ ಒಟ್ಟು 10.52 ಕೋಟಿ ರು. ಪಾವತಿಸಲಾಗಿದೆ.

 

ವಿವಿಧ ಸೇವೆಗಳಿಗೆ ಸಂಬಂಧಿಸಿದಂತೆ ಎಂಸಿಎಗೆ 15.65 ಕೋಟಿ ರು., ಸಮಾವೇಶ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಮಾವೇಶ ಆಯೋಜನೆ ಸೇವೆಗಳಿಗೆ ಬೆನೆಟ್‌ ಕೋಲ್ಮನ್‌ ಅಂಡ್‌ ಕಂಪನಿ ಲಿಮಿಟೆಡ್‌ ಮುಂಬೈಗೆ 50,50,00,000 ರು., ಸಮಾವೇಶದಲ್ಲಿಊಟ ಮತ್ತು ಉಪಹಾರ ಸೇವೆಗಳನ್ನು ಒದಗಿಸಿದ ಹೋಟೆಲ್‌ ವೆಸ್ಟೆಂಡ್‌ ಗೆ 1.88 ಕೋಟಿ ರು., ಕಾಮತ್‌ ಪೆಲೆಟ್‌ ಕಾರ್ನರ್‌ ಗೆ 14.23 ಲಕ್ಷ ರು., ನೀಡಲಾಗಿದೆ.

 

ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳ ನೇರ ಪ್ರಸಾರ ಮಾಡಿದ ಬೆಂಗಳೂರು ದೂರದರ್ಶನಕ್ಕೆ 5.60 ಲಕ್ಷ ರು., ದೇಶಿಯ ಮತ್ತು ವಿದೇಶ ವಿಮಾನಯಾನ ಟಿಕೆಟ್‌ಗಳನ್ನು ಒದಗಿಸಿದ ಮೈಲ್ಸ್‌ ಅಫ್‌ ಸ್ಟೈಲ್ಸ್‌ ಬೆಂಗಳೂರು ಇವರಿಗೆ 1.78 ಕೋಟಿ ರು., ಟ್ರಾನ್ಸ್‌ ಸ್ಕ್ರೇವೇಸ್‌ ಟೂರ್ಸ್‌ ಅಂಡ್‌ ಟ್ರಾವೆಲ್ಸ್‌ಗೆ 1.12 ಲಕ್ಷ ರು., ಸಮಾವೇಶಕ್ಕೆ ಸಂಬಂಧಪಟ್ಟ ವಿಶೇ‍ ಸಂಚಿಕೆ ಹೊರತಂದ ಸಣ್ಣ ಕೈಗಾರಿಕೆ ವಾರ್ತೆಗೆ 4.50 ಲಕ್ಷ ರು. ವೆಚ್ಚವಾಗಿರುವುದು ಆರ್‌ಟಿಐನಿಂದ ಗೊತ್ತಾಗಿದೆ.

 

 

ನಾಡಗೀತೆ ಗಾಯನಕ್ಕೆ ಮೃತ್ಯುಂಜಯ ದೊಡ್ಡವಾಡ ಎಂಬುವರಿಗೆ 30,000 ರು., ರಿಕ್ಕಿ ಕೇಜ್‌ ಅವರಿಗೆ (ಲೈವ್‌ ಕಾನ್ಸರ್ಟ್‌)ಗೆ 13,57,000 ರು., ವಸುಂಧರ ದಾಸ್‌ (ಡ್ರಂಜಾಮ್‌) 7.67 ಲಕ್ಷ ರು., ಕರ್ನಾಟಕ ಮಹಿಳಾ ಯಕ್ಷಗಾನ ತಂಡಕ್ಕೆ 1.80 ಲಕ್ಷ ರು., ಸಿರಿಕಲಾ ಮೇಳಕ್ಕೆ (ಯಕ್ಷಗಾನ) 40,000 ರು., ಚಂದ್ರಕುಮಾರ್‌ ಎ ಎಸ್‌ (ಡೊಳ್ಳು ಕುಣಿತ) 40,000 ರು., ಕಾಂತರಾಜ್‌ ಹೆಚ್‌ (ಕಹಳೆ ವಾದನ) 40,000 ರು., ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡ್ರರ್ನ್ ಆರ್ಟ್ಸ್‌ (ಆರ್ಟ್ಸ್‌ ಎಕ್ಸಿಬಿಷನ್‌) 4,42,411 ರು., ಕರ್ನಾಟಕ ಚಿತ್ರಕಲಾ ಪರಿಷತ್‌ (ಕರಕುಶಲ ಮತ್ತು ಕೈಮಗ್ಗ ಪ್ರದರ್ಶನ) 5,95,900 ರು. ಖರ್ಚಾಗಿದೆ.

 

ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆಗೆ (ಟೆಂಡರ್‌ ಪ್ರಕ್ರಿಯೆಯ ಫೆಸಿಲಿಟೇಷನ್‌ ಸೇವೆ) 9,73,500 ರು., ಹೋಟೆಲ್‌ ಜೆ ಡಬ್ಲ್ಯೂ ಮ್ಯಾರಿಯೇಟ್‌ (ಕಾನ್‌ಕ್ಲೇವ್‌ ಹಾಲ್‌ ಬಾಡಿಗೆ ಮತ್ತು ಊಟಕ್ಕೆ ) 3,77,600 ರು., ಭಾರತೀಯ ರಾಯಭಾರ ಕಚೇರಿಗಳ ಮೂಲಕ ವಿದೇಶ ಪ್ರವಾಸದಲ್ಲಿ ರಾಜ್ಯದ ನಿಯೋಗಕ್ಕೆ ವಸತಿ ಮತ್ತು ಸಾರಿಗೆ ವ್ಯವಸ್ಥೆ ಹಾಗೂ ಸಭೆಗಳ ಆಯೋಜನೆಗೆ 1.83 ಕೋಟಿ ರು., ರೋಡ್‌ ಶೋಗಳಿಗೆ ವಿದೇಶ ಪ್ರವಾಸ ಕೈಗೊಂಡ ರಾಜ್ಯ ನಿಯೋಗದ ಸದಸ್ಯರಿಗೆ ತುಟ್ಟಿಭತ್ಯೆಗೆ 15,11,200 ರು., ಹೋಪ್‌ ರೀಚ್‌ ಮೀಡಿಯಾಕ್ಕೆ (ಭಾಷಾಂತರ ಮತ್ತು ಮುದ್ರಣ) 1,80,540, ಇಂಡೋ ಫ್ರೆಂಚ್‌ ಛೇಂಬರ್‌ ಅಫ್‌ ಕಾಮರ್ಸ್ ಇಂಡಸ್ಟ್ರಿ ಬೆಂಗಳೂರು (ಭಾಷಾಂತರ) 29,049 ರು., ಕರ್ನಾಟಕ ಭವನ ನವದೆಹಲಿ (ವಾಸ್ತವ್ಯ) 7,695 ರು., ವೆಚ್ಚವಾಗಿದೆ.

 

ರೋಡ್‌ ಶೋಗಳಿಗೆ 72.87 ಲಕ್ಷ ವೆಚ್ಚ

 

ಹೋಟೆಲ್ ಲೀಲಾ ಪ್ಯಾಲೇಸ್‌ ನವದೆಹಲಿ (ರೋಡ್‌ ಶೋ, ಹಾಲ್‌ ಬಾಡಿಗೆ,ಊಟ ಮತ್ತು ವಾಸ್ತವ್ಯ) 12,11,148ರು., ಫಿಕ್ಕಿ ಮುಖಾಂತರ (ದೆಹಲಿ ರೋಡ್‌ ಶೋ ವೆಚ್ಚ) 11,28,699 ರು., ಹೋಟೆಲ್ ತಾಜ್‌ ಕೃಷ್ಣ ಮತ್ತು ತಾಜ್‌ ಡೆಕ್ಕನ್‌ ಹೈದರಾಬಾದ್‌ (ರೋಡ್‌ ಶೋ, ಹಾಲ್‌ ಬಾಡಿಗೆ, ಊಟ ಮತ್ತು ವಾಸ್ತವ್ಯ) 17,77, 276 ರು., ಅಸೋಚಾಮ್‌ ಮುಖಾಂತರ (ಹೈದರಾಬಾದ್‌ ರೋಡ್‌ ಶೋ ವೆಚ್ಚ) 7,95,808 ರು., ಹೋಟೆಲ್‌ ಟ್ರೈಡೆಂಟ್‌ ಮುಂಬೈ (ರೋಡ್‌ ಶೋ, ಹಾಲ್‌ ಬಾಡಿಗೆ ಊಟ ಮತ್ತು ವಾಸ್ತವ್ಯಕ್ಕೆ ) 15,46,826 ರು., ಸಿಐಐ ಮುಖಾಂತರ ಮುಂಬೈ ರೋಡ್‌ ಶೋ ವೆಚ್ಚಕ್ಕೆ 8,27,399 ರು, ಪಾವತಿಸಲಾಗಿದೆ.

 

ನೇಚರ್‌ ಇನ್‌ ಫೋಕಸ್‌ ಬೆಂಗಳೂರಿಗೆ 3,54,000 ರು., ಚನ್ನಪ್ಪ ಅಂಡ್‌ ಅಸೋಸಿಯೇಟ್ಸ್‌ ಗೆ 4,72,000ರು., ಭಗವಾನ್‌ ಮಹಾವೀರ್‌ ಅಂಡ್‌ ಟೂರ್ಸ್‌ ಅಂಡ್‌ ಟ್ರಾವೆಲ್ಸ್‌ಗೆ (ಸಮಾವೇಶಕ್ಕೆ ವಾಹನಗಳ ಸೇವೆ) 2,75,124 ರು., ಮೈನಿ ಮೆಟರಿಲಿಯ್ಸ್‌ ಮೂವ್‌ಮೆಂಟ್‌ ಪ್ರೈ ಲಿ., (ಸಮಾವೇಶ ಆವರಣದಲ್ಲಿ ಬಗ್ಗಿಗಳ ಸೇವೆ) 3,37,480 ರು., ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಸಮಾವೇಶಕ್ಕೆ ಸಾರಿಗೆ ವ್ಯವಸ್ಥೆ) 2,12,000 ರು. ನೀಡಲಾಗಿದೆ.

 

ಹೋಟೆಲ್‌ ತಾಜ್‌ ವೆಸ್ಟೆಂಡ್‌ ಬೆಂಗಳೂರು (ಹಾಲ್‌ ಬಾಡಿಗೆ,ಊಟ ಮತ್ತು ಗಣ್ಯರಿಗೆ ವಾಸ್ತವ್ಯ) 11,20,616 ರು., ಹೋಟೆಲ್‌ ಶಾಂಗ್ರಿಲಾ ಬೆಂಗಳೂರು (ಗಣ್ಯರಿಗೆ ವಾಸ್ತವ್ಯ) 67,183 ರು., ಹೋಟೆಲ್‌ ಲಲಿತ್‌ ಅಶೋಕ್‌ (ಗಣ್ಯರಿಗೆ ವಾಸ್ತವ್ಯ) 72,279ರು., ಹೋಟೆಲ್‌ ಐಟಿಸಿ ಗಾರ್ಡೇನಿಯಾ (ಕರ್ಟನ್‌ ರೈಸರ್‌ ಹಾಲ್‌, ಬಾಡಿಗೆ ಮತ್ತು ಊಟ) 9,18,530 ರು., ವಾಸಂತಿ ಹರಿಪ್ರಕಾಶ್‌ ಅವರಿಗೆ (ಎಂ ಸಿ ಚಾರ್ಜ್ಸ್‌ ), 92,000 ರು., ಬಹುರೂಪಿ ಬುಕ್‌ ಹಬ್‌ ಬೆಂಗಳೂರು 5,015 ರು.,  ವೆಚ್ಚವಾಗಿದೆ.

 

‘ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹೆಸರಲ್ಲಿ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ಮಂತ್ರಿಗಳು ಸಾರ್ವಜನಿಕ ಬೊಕ್ಕಸ ಖಾಲಿ ಮಾಡಿದ್ದಾರೆ. ಸಮಾಜ ಕಲ್ಯಾಣ ಚಟುವಟಿಕೆಗಳಿಗೆ ನೀಡುವ ಅನುದಾನ ಕಡಿತ ಮಾಡಿ ಬಂಡವಾಳಶಾಹಿಗಳಿಗೆ ರತ್ನ ಗಂಬಳಿ ಹಾಸಿದೆ. ರೈತರನ್ನು ಬೀದಿಗೆ ತಳ್ಳಿ, ಇನ್ನಷ್ಟು ಜನರನ್ನು ಬಡತನಕ್ಕೆ ತರಳುವ ಹುನ್ನಾರ ಇದರ ಹಿಂದಿದೆ. ಈ ಸಮಾವೇಶದ ಹೆಸರಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ದೃಡೀಕೃತ ದಾಖಲೆಗಳನ್ನು ಪಡೆದು ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ,’ ಎಂದು ಸಾಮಾಜಿಕ ಹೋರಾಟಗಾರ ಹಾಗೂ ವಕೀಲ ಭೀಮನಗೌಡ ಪರಗೊಂಡ ಅವರು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದ್ದಾರೆ.

 

9.87 ಲಕ್ಷ ಕೋಟಿ ರೂ. ಮೌಲ್ಯದ ಹೂಡಿಕೆ ಶೇ.80 ಕ್ಕಿಂತ ಹೆಚ್ಚು ಬಂಡವಾಳ ಹೂಡಿಕೆಗಳು ಬೆಂಗಳೂರಿನ ಆಚೆ ಆಗುತ್ತಿದೆ. 6 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ – 2022 ಅದ್ಭುತ ಯಶಸ್ಸನ್ನು ಕಂಡಿದೆ. ಇದು ಕರ್ನಾಟಕದ ಮತ್ತಷ್ಟು ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ ಎಂದು ಕೈಗಾರಿಕೆ ಸಚಿವ ಮುರುಗೇಶ್‌ ಆರ್‌ ನಿರಾಣಿ ಅವರು ಹೆಮ್ಮೆಯಿಂದ ಬೀಗಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts