ಪಿಎಸ್‌ಐ ನೇಮಕ ಹಗರಣದ ಇನ್ನೊಂದು ಮುಖ; ಸಂಬಂಧಿಕರಿಗೆ 30 ಲಕ್ಷ, ಉಳಿದವರಿಗೆ 50 ಲಕ್ಷ ನಿಗದಿ

photo credit;vijayakarnataka

ಬೆಂಗಳೂರು; ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿಯಲ್ಲಿ ಅಕ್ರಮಕೂಟ ರಚಿಸಿಕೊಂಡಿದ್ದವರು ಸಂಬಂಧಿಕರನ್ನೂ ಬಿಡದೇ ಹಣ ವಸೂಲಿ ಮಾಡಿದ್ದರು ಎಂಬ ಸಂಗತಿಯನ್ನು ದೋಷಾರೋಪಣೆ ಪಟ್ಟಿಯನ್ನು ಬಹಿರಂಗೊಳಿಸಿದೆ.

 

ತನ್ನ ಸಂಬಂಧಿಕರು ಎಂಬ ಕಾರಣಕ್ಕಾಗಿ ಆರೋಪಿ ರುದ್ರಗೌಡ ಪಾಟೀಲ್ ಎಂಬಾತ ಒಟ್ಟು ಮೊತ್ತದಲ್ಲಿ 20 ಲಕ್ಷ ರು.ಗಳನ್ನು ಕಡಿಮೆ ಮಾಡಿದ್ದ ಎಂಬ ಅಂಶವು ದೋಷಾರೋಪಣೆ ಪಟ್ಟಿಯಲ್ಲಿ ಹೇಳಲಾಗಿದೆ. ಸಿಐಡಿ ಅಧಿಕಾರಿಗಳು ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಸಂತ ನರಿಬೋಳ ಅವರ ಮೂಲಕ ಆರೋಪಿ ರುದ್ರಗೌಡ ಪಾಟೀಲ್‌ ಅವರನ್ನು ಭೇಟಿ ಮಾಡಿದ್ದ ಆಕಾಂಕ್ಷಿಯೊಬ್ಬರು ಪಿಎಸ್ಐ ಹುದ್ದೆಗೆ ಆಯ್ಕೆ ಮಾಡಲು ಸಹಾಯ ಕೋರಿದ್ದರು. ‘ಅಣ್ಣಾ ನಾನು ಪಿಎಎಸ್‌ಐ ಪರೀಕ್ಷೆಗೆ ಅರ್ಜಿ ಹಾಕಿದ್ದೇನೆ. ಏನಾದರೂ ಮಾಢಿ ನಾನು ಪಿಎಸ್‌ಐ ಹುದ್ದೆಗೆ ಆಯ್ಕೆಯಾಗುವಂತೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಕ್ಕೆ ಬೇರೆ ಕ್ಯಾಂಡಿಡೇಟ್‌ಗಳಿಂದ 50 ಲಕ್ಷ ರು. ಪಡೆದುಕೊಳ್ಳುತ್ತೇನೆ. ಸಂಬಂಧಿಕರಿದ್ದೀರಿ, ನೀವು 30 ಲಕ್ಷ ಕೊಡಿ ಸಾಕು. ಬೇರೆ ಯಾವುದಾದರೂಈ ಕ್ಯಾಂಡಿಡೇಟ್‌ಗಳಿದ್ದಲ್ಲಿ ಕಳುಹಿಸಿಕೊಡಿ ಎಂದು,’ ಎಂದು ರುದ್ರಗೌಡ ಪಾಟೀಲ್‌ ಹೇಳಿದ್ದ ಎಂಬುದನ್ನು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

 

 

ವ್ಯವಹಾರ ಕುದುರಿದ ನಂತರ ಪರೀಕ್ಷೆ ಕೇಂದ್ರದಲ್ಲಿ ಸಿಗುವ ನೆರವಿನ ಕುರಿತು ವಿಸ್ತೃತವಾಗಿ ಆರೋಪಿ ರುದ್ರಗೌಡ ಪಾಟೀಲ್‌ ವಿವರಿಸಿದ್ದ. ‘ ನಿಮಗೆ ನಾವು ಒಂದು ಚಿಕ್ಕ ಬ್ಲ್ಯೂಟೂತ್‌ ಡಿವೈಸ್‌ ಕೊಡುತ್ತೇವೆ. ಅದನ್ನು ಪರೀಕ್ಷೆ ನಡೆಯುವ ದಿನ ಕಿವಿಯಲ್ಲಿ ಹಾಕಿಕೊಳ್ಳಿ. ನಾವು ನಿಮಗೆ ಕರೆ ಮಾಡಿ ನಿಮ್ಮ ಪ್ರಶ್ನೆಪತ್ರಿಕೆಯಲ್ಲಿ ಬಂದಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳುತ್ತೇವೆ. ಅದನ್ನು ಕೇಳಿಸಿಕೊಂಡು ನೀವು ಉತ್ತರಗಳನ್ನು ಬರೆದರೆ ಸಾಕು ಪಿಎಸ್‌ಐ ಹುದ್ದೆಗೆ ಆಯ್ಕೆಯಾಗುವುದು ಖಚಿತ ಮತ್ತು ನಿಮಗೆ ಕರೆ ಮಾಡಿ ಉತ್ತರಗಳನ್ನು  ಹೇಳುವುದಕ್ಕಾಗಿ ನಮಗೆ ಒಂದು ಮೊಬೈಲ್‌ ಫೋನ್‌ ಒದಗಿಸಬೇಕು,’ ಎಂಬ ಬೇಡಿಕೆಯನ್ನೂ ಇರಿಸಿದ್ದ ಎಂಬ ಸಂಗತಿ ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.

 

ಅದರಂತೆ 2021 ಅಕ್ಟೋಬರ್‌ 3ರಂದು ನಡೆದಿದ್ದ ಪಿಎಸ್‌ಐ ಪರೀಕ್ಷೆ ದಿನ ಆರೋಪಿ ಮತ್ತು ಉತ್ತರಿಸುವ ತಂಡವು ಸೇರಿಕೊಂಡು 9901283143 ಮೊಬೈಲ್‌ ಸಂಖ್ಯೆ ಫೋನ್‌ನಿಂದ 7338633121ಗೆ ಕರೆ ಮಾಡಿಸಿ ಬ್ಲೂಟೂತ್‌ ಡಿವೈಎಸ್‌ ಮೂಲಕ ಪ್ರಶ್ನೆಪತ್ರಿಕೆಗಳಿಲ್ಲಿನ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳಿದ್ದನ್ನು ಕೇಳಿಸಿಕೊಂಡು ಉತ್ತರಗಳನ್ನು ಬರೆದು ಎನ್‌ ವಿ ಸುನೀಲ್‌ ಎಂಬಾತ ಆಯ್ಕೆಗೊಂಡಿದ್ದ ಎಂಬುದು ತಿಳಿದು ಬಂದಿದೆ.

SUPPORT THE FILE

Latest News

Related Posts