Monday | March 30, 2026 |

5,653.43 ಕೋಟಿ ಖರ್ಚು ಮಾಡದ ಆರೋಗ್ಯ ಇಲಾಖೆ; ಶುಚಿ, ಆರೋಗ್ಯ ಕವಚದಲ್ಲೂ ಖರ್ಚಾಗಿಲ್ಲ

Support THE-FILE

spot_img

ಬೆಂಗಳೂರು; ಆರೋಗ್ಯ, ಕುಟುಂಬ ಸೇವೆಗಳು ಮತ್ತು ಆಯುಷ್‌ ಇಲಾಖೆಯು ಕಳೆದ ಮೂರು ವರ್ಷಗಳಲ್ಲಿ ಬಿಡುಗಡೆಯಾಗಿದ್ದ ಒಟ್ಟು ಅನುದಾನದಲ್ಲಿ 5,653.43 ಕೋಟಿ ರುಗಳನ್ನು ವೆಚ್ಚ ಮಾಡದೆಯೇ ಉಳಿಸಿಕೊಂಡಿತ್ತು.

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಳೆದ ಮೂರು ವರ್ಷಗಳಲ್ಲಿ ಮಂಜೂರಾಗಿದ್ದ ಅನುದಾನ, ಬಿಡುಗಡೆಯಾಗಿದ್ದ ಅನುದಾನ, ವೆಚ್ಚ ಮತ್ತು ವೆಚ್ಚ ಮಾಡದೇ ಬಾಕಿ ಉಳಿಸಿಕೊಂಡಿದ್ದ ಮೊತ್ತದ ವಿವರಗಳನ್ನು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಗೆ ನೀಡಿದೆ.

 

2026-27ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಪೂರ್ವಭಾವಿ ಸಭೆಯಲ್ಲಿ ಮಾಹಿತಿ, ಯೋಜನೆಗಳನ್ನು ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಕಳೆದ 3 ವರ್ಷಗಳಲ್ಲಿ ಬಿಡುಗಡೆಯಾಗಿದ್ದ ಒಟ್ಟಾರೆ ಅನುದಾನದಲ್ಲಿ 5,563.43 ಕೋಟಿಯಷ್ಟು ಮೊತ್ತವನ್ನು ಖರ್ಚು ಮಾಡಿರಲಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಗೆ ನೀಡಿರುವ ಮಾಹಿತಿ ಮತ್ತು 2026-27ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಇಲಾಖೆಯು ಬಜೆಟ್ ಪೂರ್ವಭಾವಿ ಸಭೆಗೆ ನೀಡಿರುವ ಮಾಹಿತಿಯ ಅಂಕಿ ಸಂಖ್ಯೆಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಕಳೆದ ಮೂರು ವರ್ಷಗಳಲ್ಲಿ ಇಲಾಖೆಯ ಅಧೀನದಲ್ಲಿನ ನಿಗಮ, ಮಂಡಳಿ, ಪ್ರಾಧಿಕಾರ, ಸಂಸ್ಥೆ, ನಿರ್ದೇಶನಾಲಯ ಮತ್ತು ಆಯುಕ್ತಾಲಯಗಳಿಗೆ ಒದಗಿಸಿದ್ದ ಅನುದಾನವನ್ನು ಒಟ್ಟಾರೆ 37,891.58 ಕೋಟಿ ರು ಗೆ ಪರಿಷ್ಕರಿಸಲಾಗಿತ್ತು. ಈ ಪೈಕಿ 36,116.86 ಕೋಟಿ ರು ಬಿಡುಗಡೆಯಾಗಿದ್ದರೇ ಈ ಪೈಕಿ 32,350.31 ಕೋಟಿ ರುಪಾಯಿ ಖರ್ಚಾಗಿತ್ತು.

 

2022-23ನೇ ಸಾಲಿನಲ್ಲಿ ಆರೋಗ್ಯ ಮತ್ತು ಕುಟುಂಬ ಇಲಾಖೆಯು ತನ್ನ ಅಧೀನದಲ್ಲಿನ ನಿಗಮ, ಮಂಡಳಿ, ಪ್ರಾಧಿಕಾರ, ಸಂಸ್ಥೆ, ನಿರ್ದೇಶನಾಲಯ ಮತ್ತು ಆಯುಕ್ತಾಲಯಗಳಿಗೆ ಒಟ್ಟಾರೆ 9,577.14 ಕೋಟಿ ರುಪಾಯಿ ಅನುದಾನವು ಮಂಜೂರಾಗಿತ್ತು. ನಂತರ ಈ ಅನುದಾನವನ್ನು 11,523.61 ಕೋಟಿ ರುಪಾಯಿಗೆ ಪರಿಷ್ಕರಿಸಲಾಗಿತ್ತು.

 

 

ಈ ಪೈಕಿ 10,886.70 ಕೋಟಿ ರುಪಾಯಿ ಬಿಡುಗಡೆಯಾಗಿತ್ತು. ಇದರಲ್ಲಿ 9,390.10 ಕೋಟಿ ರುಪಾಯಿ ಖರ್ಚು ಮಾಡಿದ್ದರೇ ಖರ್ಚು ಮಾಡಲು 2,133.51 ಕೋಟಿ ರು ಉಳಿಸಿಕೊಂಡಿತ್ತು.

 

 

2023-24ನೇ ಸಾಲಿನಲ್ಲಿ ಇಲಾಖೆಯು ತನ್ನ ಅಧೀನದಲ್ಲಿನ ನಿಗಮ, ಮಂಡಳಿ, ಪ್ರಾಧಿಕಾರ, ಸಂಸ್ಥೆ, ನಿರ್ದೇಶನಾಲಯ ಮತ್ತು ಆಯುಕ್ತಾಲಯಗಳಿಗೆ ಒಟ್ಟಾರೆ 10,504.33 ಕೋಟಿ ರು ಅನುದಾನವು ಮಂಜೂರಾಗಿತ್ತು. ನಂತರ ಈ ಅನುದಾನವನ್ನು 11,322.36 ಕೋಟಿ ರುಪಾಯಿಗೆ ಪರಿಷ್ಕರಿಸಲಾಗಿತ್ತು. ಈ ಪೈಕಿ 10,798.92 ಕೋಟಿ ರುಪಾಯಿ ಬಿಡುಗಡೆಯಾಗಿತ್ತು.

 

 

ಬಿಡುಗಡೆಯಾಗಿದ್ದ ಈ ಅನುದಾನದಲ್ಲಿ 9,788.95 ಕೋಟಿ ರುಪಾಯಿ ಖರ್ಚು ಮಾಡಿದ್ದರೇ, 1,533.41 ಕೋಟಿ ರುಪಾಯಿ ವೆಚ್ಚವಾಗಿರಲಿಲ್ಲ.

 

 

 

2024-25ನೇ ಸಾಲಿನಲ್ಲಿ ಇಲಾಖೆಯು ತನ್ನ ಅಧೀನದಲ್ಲಿನ ನಿಗಮ, ಮಂಡಳಿ, ಪ್ರಾಧಿಕಾರ, ಸಂಸ್ಥೆ, ನಿರ್ದೇಶನಾಲಯ ಮತ್ತು ಆಯುಕ್ತಾಲಯಗಳಿಗೆ ಒಟ್ಟಾರೆ 10,813.48 ಕೋಟಿ ರುಪಾಯಿ ಮಂಜೂರಾಗಿತ್ತು. ಆ ನಂತರ 11,545.27 ಕೋಟಿ ರುಪಾಯಿಗೆ ಪರಿಷ್ಕರಿಸಲಾಗಿತ್ತು. ಈ ಪೈಕಿ 11,397.07 ಕೋಟಿ ರುಪಾಯಿ ಬಿಡುಗಡೆಯಾಗಿತ್ತು.

 

 

ಬಿಡುಗಡೆಯಾಗಿದ್ದ ಈ ಅನುದಾನದಲ್ಲಿ 10,237.68 ಕೋಟಿ ರುಪಾಯಿ ಖರ್ಚು ಮಾಡಲಾಗಿತ್ತು. ಈ ಅವಧಿಯಲ್ಲಿ 1,307.60 ಕೋಟಿ ರುಪಾಯಿ ಖರ್ಚಾಗಿರಲಿಲ್ಲ.

 

 

 

ಇಲಾಖೆಯ ಅಧೀನದಲ್ಲಿನ ನಿಗಮ, ಮಂಡಳಿ, ಪ್ರಾಧಿಕಾರ, ಸಂಸ್ಥೆ, ನಿರ್ದೇಶನಾಲಯ ಮತ್ತು ಆಯುಕ್ತಾಲಯಗಳಿಗೆ ಪರಿಶಿಷ್ಟ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಗಳ ಅಡಿಯಲ್ಲಿ ಒದಗಿಸಿದ್ದ ಅನುದಾನದಲ್ಲಿ ಒಟ್ಟಾರೆ 3,500.34 ಕೋಟಿ ರುಪಾಯಿಗೆ ಪರಿಷ್ಕರಿಸಲಾಗಿತ್ತು. 3,234.17 ಕೋಟಿ ರುಪಾಯಿ ಬಿಡುಗಡೆಯಾಗಿತ್ತು.

 

 

ಈ ಪೈಕಿ 2,933.58 ಕೋಟಿ ರುಪಾಯಿ ಖರ್ಚಾಗಿದ್ದರೇ 566.76 ಕೋಟಿ ರುಪಾಯಿ ವೆಚ್ಚವಾಗಿರಲಿಲ್ಲ.

 

 

 

ಜಿಲ್ಲಾ ವಲಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗಾಗಿ 2,796.41 ಕೋಟಿ ರುಪಾಯಿ ಒದಗಿಸಿತ್ತು. ಬಿಡುಗಡೆಯಾಗಿದ್ದ ಅನುದಾನದಲ್ಲಿ 116.61 ಕೋಟಿ ರುಪಾಯಿಗಳನ್ನು ಖರ್ಚು ಮಾಡಿರಲಿಲ್ಲ.

 

ಆರೋಗ್ಯ ಕವಚದಡಿಯಲ್ಲಿ ಕಳೆದ ಮೂರು ವರ್ಷದಲ್ಲಿ ಒಟ್ಟಾರೆ 420.33 ಕೋಟಿ ರು ಅನುದಾನ ಒದಗಿಸಿತ್ತು. ಇದರಲ್ಲಿ 358.44 ಕೋಟಿ ರುಪಾಯಿ ಬಿಡುಗಡೆಯಾಗಿತ್ತು. 346.4 ಕೋಟಿ ರು ಖರ್ಚಾಗಿತ್ತು. ಇನ್ನೂ 73.93 ಕೋಟಿ ರುಪಾಯಿ ಖರ್ಚಾಗಿರಲಿಲ್ಲ.

 

 

ಶುಚಿ ಯೋಜನೆಗೆ ಬಿಡುಗಡೆಯಾಗದ ನಯಾಪೈಸೆ

 

ಹಾಗೆಯೇ 2022-23ನೇ ಸಾಲಿನ ರಾಜ್ಯ ವಲಯದ ಕಾರ್ಯಕ್ರಮದಡಿಯಲ್ಲಿ ಶುಚಿ ಯೋಜನೆಗೆ ಮಂಜೂರಾಗಿದ್ದ 49.00 ಕೋಟಿ ರುಪಾಯಿ, ಕ್ಯಾನ್ಸರ್ ಪತ್ತೆಗಾಗಿ ಸಂಚಾರಿ ಪ್ರಯೋಗಾಲಯಗಳಿಗಾಗಿ 4.50 ಕೋಟಿ ರುಪಾಯಿ ಮಂಜೂರಾಗಿದ್ದರೂ ನಯಾ ಪೈಸೆಯನ್ನೂ ಬಿಡುಗಡೆ ಮಾಡಿರಲಿಲ್ಲ. ಆಸ್ಪತ್ರೆ ನಿರ್ಮಾಣ, ಉನ್ನತೀಕರಣಕ್ಕೆ 480 ಕೋಟಿ ರುಪಾಯಿ ಅನುದಾನದಲ್ಲಿ 464.91 ಕೋಟಿ ರುಪಾಯಿ ಬಿಡುಗಡೆಯಾಗಿತ್ತು. ಆದರೆ ಈ ಪೈಕಿ 20.16 ಕೋಟಿಯಷ್ಟು ಅನುದಾನವನ್ನು ಖರ್ಚು ಮಾಡದೇ ಬಾಕಿ ಇರಿಸಿಕೊಂಡಿತ್ತು. ಆಶಾ ಕಾರ್ಯಕರ್ತೆಯರುಗಳಿಗೆ ಗೌರವ ಧನ ಪಾವತಿಸಲು 255.14 ಕೋಟಿ ರು ಮಂಜೂರಾಗಿದ್ದ ಅನುದಾನದಲ್ಲಿ 13.78 ಕೋಟಿ ರು ವೆಚ್ಚ ಮಾಡಿರಲಿಲ್ಲ.

 

ಕೇಂದ್ರ ಪುರಸ್ಕೃತ ಅಡಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನಕ್ಕೆ ಕೇಂದ್ರದ ಪಾಲಿನಲ್ಲಿ 1,621.14 ಕೋಟಿ ರುಪಾಯಿಯಲ್ಲಿ 514.69 ಕೋಟಿ ರು ಖರ್ಚಾಗಿರಲಿಲ್ಲ. ಅದೇ ರೀತಿ ರಾಜ್ಯದ ಪಾಲಿನಲ್ಲಿ 125.59 ಕೋಟಿ ರುಪಾಯಿ ವೆಚ್ಚವಾಗಿರಲಿಲ್ಲ. ಆಯುಷ್ಮಾನ್ ಭಾರತ್ ಆರೋಗ್ಯ ಮೂಲ ಸೌಕರ್ಯ ಕಾರ್ಯಕ್ರಮದಲ್ಲಿ ಕೇಂದ್ರದ ಪಾಲಿನಲ್ಲಿ 127.76 ಕೋಟಿ ಮತ್ತು ರಾಜ್ಯದ ಪಾಲಿನಲ್ಲಿ 85.17 ಕೋಟಿ ರುಪಾಯಿ ಖರ್ಚಾಗಿರಲಿಲ್ಲ.

 

ಕೋವಿಡ್‌ 19ರ ಅಡಿಯಲ್ಲಿ ರಾಷ್ಟ್ರೀಯ ಆರೋಗ್ಯ ಆಭಿಯಾನಕ್ಕೆ 597.53 ಕೋಟಿ ರುಪಾಯಿ ಬಿಡುಗಡೆಯಾಗಿದ್ದರೂ ಎರಡು ಲೆಕ್ಕ ಶೀರ್ಷಿಕೆಯಡಿಯಲ್ಲಿ 421.66 ಕೋಟಿ ರು ವೆಚ್ಚವಾಗಿರಲಿಲ್ಲ.

 

 

ಕೆಎಸ್‌ಎಂಎಸ್‌ಸಿಎಲ್‌ ಮೂಲಕ ಡಿಸ್ಪೋಸಬಲ್ ವೈದ್ಯಕೀಯ ಪರಿಕರಗಳ ಖರೀದಿಗೆ 50 ಕೋಟಿ ರು ಅನುದಾನ ಮಂಜೂರಾಗಿತ್ತು. ಆದರೆ ಈ ಅನುದಾನವನ್ನು ಪರಿಷ್ಕರಿಸಿದ್ದ ಹಿಂದಿನ ಬಿಜೆಪಿ ಸರ್ಕಾರವು ಅದನ್ನು 5.70 ಕೋಟಿಗೆ ಪರಿಷ್ಕರಿಸಿತ್ತು. ಆದರೆ ಈ ಅನುದಾನವನ್ನೂ ಖರ್ಚು ಮಾಡಿರಲಿಲ್ಲ. ಪ್ರಾಥಮಿಕ ಆರೋಗ್ಯ ಸೌಲಭ್ಯಗಳನ್ನು ಬಲಪಡಿಸಲು ಹದಿನೈದನೇ ಹಣಕಾಸು ಆಯೋಗದಲ್ಲಿ ಮಂಜೂರಾಗಿದ್ದ 991.32 ಕೋಟಿ ರುಪಾಯಿಯಲ್ಲಿ 788.63 ಕೋಟಿ ರುಪಾಯಿ ಖರ್ಚಾಗಿರಲಿಲ್ಲ.

 

2023-24ನೇ ಸಾಲಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗಾಗಿ 934.12 ಕೋಟಿ ರುಪಾಯಿ ಅನುದಾನವು ಮಂಜೂರಾಗಿತ್ತು. ಈ ಪೈಕಿ 926.40 ಕೋಟಿ ರುಪಾಯಿ ಬಿಡುಗಡೆಯಾಗಿತ್ತು. ಇದರಲ್ಲಿ 898.44 ಕೋಟಿ ರು ಖರ್ಚು ಮಾಡಿದ್ದ ಇಲಾಖೆಯು 35.68 ಕೋಟಿಯನ್ನು ವೆಚ್ಚ ಮಾಡಿರಲಿಲ್ಲ. ಹಾಗೆಯೇ ಭಾ.ಸ ಮಾದರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗಾಗಿ (ಎಂಎನ್‌ಪಿ) ಮಂಜೂರಾಗಿದ್ದ 703.51 ಕೋಟಿ ರುಪಾಯಿ ಪೈಕಿ 704.81 ಕೋಟಿ ರುಪಾಯಿ ಬಿಡುಗಡೆಯಾಗಿತ್ತು.

 

ಇದರಲ್ಲಿ 680.63 ಕೋಟಿ ರುಪಾಯಿ ಖರ್ಚಾಗಿದ್ದರೇ 22.88 ಕೋಟಿ ರುಪಾಯಿ ವೆಚ್ಚವಾಗಿರಲಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗ್ರಾಮಾಂತರ ಕುಟುಂಬ ಕಲ್ಯಾಣ ಕಾರ್ಯಕ್ರಮಗಳಿಗೆ ಬಿಡುಗಡೆಯಾಗಿದ್ದ 161.43 ಕೋಟಿ ರುಪಾಯಿನಲ್ಲಿ 144.73 ಕೋಟಿ ರುಪಾಯಿ ಖರ್ಚು ಮಾಡಿದ್ದ ಇಲಾಖೆಯು 10.91 ಕೋಟಿ ರು ವೆಚ್ಚ ಮಾಡಿರಲಿಲ್ಲ.

 

ಆಶಾ ಕಾರ್ಯಕರ್ತೆಯರ ಗೌರವ ಧನಕ್ಕೆ ಬಿಡುಗಡೆ ಮಾಡಿದ್ದ 255.14 ಕೋಟಿ ರುಪಾಯಿನಲ್ಲಿ 243.85 ಕೋಟಿ ರುಪಾಯಿ ಖರ್ಚು ಮಾಡಿತ್ತು. 11.29 ಕೋಟಿ ರುಪಾಯಿ ಖರ್ಚು ಮಾಡಿರಲಿಲ್ಲ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಕೇಂದ್ರದ ಪಾಲಿನಲ್ಲಿ 264.84 ಕೋಟಿ ಮತ್ತು ರಾಜ್ಯದ ಪಾಲು 117.54 ಕೋಟಿ ರು ಸೇರಿ ಒಟ್ಟಾರೆ 372.38 ಕೋಟಿ ರುಪಾಯಿ ಖರ್ಚೇ ಆಗಿರಲಿಲ್ಲ. ಹಾಗೆಯೇ ಪ್ರಾಥಮಿಕ ಆರೋಗ್ಯ ಸೌಲಬ್ಯಗಳನ್ನು ಬಲಪಡಿಸಲು ಹದಿನೈದನೇ ಹಣಕಾಸು ಆಯೋಗವು ನೀಡಿದ್ದ ಒಟ್ಟು ಅನುದಾನದಲ್ಲಿ 541.36 ಕೋಟಿ ರುಪಾಯಿ ವೆಚ್ಚವಾಗಿರಲಿಲ್ಲ.

 

2024-25ನೇ ಸಾಲಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಿಡುಗಡೆಯಾಗಿದ್ದ 1,051.83 ಕೋಟಿ ರುಪಾಯಿನಲ್ಲಿ 98323 ಕೋಟಿ ರು ಖರ್ಚು ಮಾಡಿದ್ದ ಇಲಾಖೆಯು 68.60 ಕೋಟಿ ರುಪಾಯಿ ವೆಚ್ಚ ಮಾಡಿರಲಿಲ್ಲ.

Hot this week

ಮನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ, ಹಣಕ್ಕೆ ಬೇಡಿಕೆ; ಪಾಟೀಲರ ಆರೋಪ, ಲೋಕಾ ತನಿಖೆಯಿಂದ ಸಾಬೀತು

ಬೆಂಗಳೂರು; ರಾಜೀವ್‌ ಗಾಂಧಿ ವಸತಿ ನಿಗಮದ ವ್ಯಾಪ್ತಿಯಲ್ಲಿ ಹಣ ಕೊಟ್ಟರಷ್ಟೇ ಮನೆಗಳನ್ನು ...

ಕದಂಬೋತ್ಸವ ಸೇರಿ ಸಾಂಸ್ಕೃತಿಕ ಉತ್ಸವಗಳಿಗೆ ಅನುದಾನ; 12.50 ಕೋಟಿ ರು ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಮೈಸೂರು ದಸರಾ ಸೇರಿದಂತೆ ಇನ್ನಿತರೆ ಜಿಲ್ಲಾಮಟ್ಟದ ವಿವಿಧ ಉತ್ಸವಗಳಿಗೆ 2024-25ಮತ್ತು...

ಪ್ರಚೋದನಕಾರಿ ಭಾಷಣ, ಕೋಮು ಗಲಭೆ; 3 ವರ್ಷದಲ್ಲಿ 50 ಪ್ರಕರಣಗಳು ದಾಖಲು, ಪಟ್ಟಿ ಬಹಿರಂಗ

ಬೆಂಗಳೂರು; ರಾಜ್ಯದ  ಕರಾವಳಿ ಭಾಗ ಸೇರಿದಂತೆ ವಿವಿಧೆಡೆ ಪ್ರಚೋದನಾಕಾರಿ ಭಾಷಣ ಮಾಡಿದವರು...

ನರೇಗಾ ವಸತಿ ಕಾಮಗಾರಿಗಳಲ್ಲಿ ಮೋಸದ ಪಾವತಿ; ಚೆಕ್ ಡ್ಯಾಂ ಕಾಮಗಾರಿಯೇ ಇಲ್ಲ, ಆದರೂ ಹಣ ಪಾವತಿ

ಬೆಂಗಳೂರು; 847 ಸಂಖ್ಯೆ ವಸತಿ  ಕಾಮಗಾರಿಗಳಲ್ಲಿ  ಮೋಸದ ಪಾವತಿಗಳಾಗಿರುವುದನ್ನು ಭಾರತದ ಲೆಕ್ಕ...

42,750 ಕೋಟಿ ದೀರ್ಘಾವಧಿ ಸಾಲ, 4,516 ಕೋಟಿ ಆದಾಯ ಕೊರತೆ; ಎಸ್ಕಾಂಗಳ ಆರ್ಥಿಕ ಸ್ಥಿತಿ ಅನಾವರಣ

ಬೆಂಗಳೂರು; ವಿದ್ಯುತ್ ಸರಬರಾಜು ಕಂಪನಿಗಳು ಇದುವರೆಗೆ ಒಟ್ಟಾರೆ 42,750 ಕೋಟಿಗಳಷ್ಟು ದೀರ್ಘಾವಧಿ...

Topics

ಮನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ, ಹಣಕ್ಕೆ ಬೇಡಿಕೆ; ಪಾಟೀಲರ ಆರೋಪ, ಲೋಕಾ ತನಿಖೆಯಿಂದ ಸಾಬೀತು

ಬೆಂಗಳೂರು; ರಾಜೀವ್‌ ಗಾಂಧಿ ವಸತಿ ನಿಗಮದ ವ್ಯಾಪ್ತಿಯಲ್ಲಿ ಹಣ ಕೊಟ್ಟರಷ್ಟೇ ಮನೆಗಳನ್ನು ...

ಕದಂಬೋತ್ಸವ ಸೇರಿ ಸಾಂಸ್ಕೃತಿಕ ಉತ್ಸವಗಳಿಗೆ ಅನುದಾನ; 12.50 ಕೋಟಿ ರು ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಮೈಸೂರು ದಸರಾ ಸೇರಿದಂತೆ ಇನ್ನಿತರೆ ಜಿಲ್ಲಾಮಟ್ಟದ ವಿವಿಧ ಉತ್ಸವಗಳಿಗೆ 2024-25ಮತ್ತು...

ಪ್ರಚೋದನಕಾರಿ ಭಾಷಣ, ಕೋಮು ಗಲಭೆ; 3 ವರ್ಷದಲ್ಲಿ 50 ಪ್ರಕರಣಗಳು ದಾಖಲು, ಪಟ್ಟಿ ಬಹಿರಂಗ

ಬೆಂಗಳೂರು; ರಾಜ್ಯದ  ಕರಾವಳಿ ಭಾಗ ಸೇರಿದಂತೆ ವಿವಿಧೆಡೆ ಪ್ರಚೋದನಾಕಾರಿ ಭಾಷಣ ಮಾಡಿದವರು...

ನರೇಗಾ ವಸತಿ ಕಾಮಗಾರಿಗಳಲ್ಲಿ ಮೋಸದ ಪಾವತಿ; ಚೆಕ್ ಡ್ಯಾಂ ಕಾಮಗಾರಿಯೇ ಇಲ್ಲ, ಆದರೂ ಹಣ ಪಾವತಿ

ಬೆಂಗಳೂರು; 847 ಸಂಖ್ಯೆ ವಸತಿ  ಕಾಮಗಾರಿಗಳಲ್ಲಿ  ಮೋಸದ ಪಾವತಿಗಳಾಗಿರುವುದನ್ನು ಭಾರತದ ಲೆಕ್ಕ...

42,750 ಕೋಟಿ ದೀರ್ಘಾವಧಿ ಸಾಲ, 4,516 ಕೋಟಿ ಆದಾಯ ಕೊರತೆ; ಎಸ್ಕಾಂಗಳ ಆರ್ಥಿಕ ಸ್ಥಿತಿ ಅನಾವರಣ

ಬೆಂಗಳೂರು; ವಿದ್ಯುತ್ ಸರಬರಾಜು ಕಂಪನಿಗಳು ಇದುವರೆಗೆ ಒಟ್ಟಾರೆ 42,750 ಕೋಟಿಗಳಷ್ಟು ದೀರ್ಘಾವಧಿ...

ಹಿಂದುಳಿದ ವರ್ಗ ವಸತಿ ಶಾಲೆ ಕಟ್ಟಡಗಳು ಶಿಥಿಲ; ಕಟ್ಟಡಗಳ ದುರಸ್ತಿಗೂ ಅನುದಾನವಿಲ್ಲ, ‘ಕೈ’ ಎತ್ತಿದ ಸರ್ಕಾರ

ಬೆಂಗಳೂರು;  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ಶಾಲೆಗಳು ಶಿಥಿಲಗೊಂಡಿದ್ದರೂ...

ನರೇಗಾ ಕಾಮಗಾರಿಗಳ ಆರಂಭದ ದಿನಾಂಕವೂ ಇಲ್ಲ, ದತ್ತಾಂಶವೂ ಇಲ್ಲ; 1,007.83 ಕೋಟಿ ರು. ವೆಚ್ಚದ ಕಾಮಗಾರಿಗಳು ಅಪೂರ್ಣ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳ ಪೈಕಿ ಒಂದು ವ‍ರ್ಷಕ್ಕಿಂತಲೂ ಹೆಚ್ಚು...

ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಕುಟುಂಬ ಸದಸ್ಯರ ಉದ್ಯಮ, ಹಣಕಾಸಿನ ವ್ಯವಹಾರ; ಸದನಕ್ಕೆ ಒದಗಿಸಬಹುದೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಖಿಲ ಭಾರತ...

Related Articles

Popular Categories

error: Content is protected !!