ಬೆಂಗಳೂರು; ಯಾವುದೇ ರಾಜಕೀಯ ಪಕ್ಷ, ಸಿದ್ಧಾಂತ ಅಥವಾ ವ್ಯಕ್ತಿಗೆ ನಿಷ್ಠೆಯನ್ನು ಹೊಂದಿಲ್ಲ ಮತ್ತು ರಾಜಕೀಯೇತರ, ವೃತ್ತಿಪರ ಸಂಶೋಧನಾ ಸಂಸ್ಥೆಯಾಗಿ ಕಾಯನಿರ್ವಹಿಸುತ್ತಿದೆ ಎಂದು ಗ್ರಾಮ್ ಸಂಸ್ಥೆಯು ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಗ್ರಾಮ್ ಸಂಸ್ಥೆ ಮತ್ತು ಅದರ ಸಂಸ್ಥಾಪಕ ಡಾ ಆರ್ ಬಾಲಸುಬ್ರಹ್ಮಣ್ಯಂ ಅವರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿಕೆ ನೀಡಿದ್ದರ ಬೆನ್ನಲ್ಲೇ ಗ್ರಾಮ್ ಸಂಸ್ಥೆಯೂ ಸಹ ಎಕ್ಸ್ ತಾಣದಲ್ಲಿ ತನ್ನ ಹೇಳಿಕೆ ಬಿಡುಗಡೆ ಮಾಡಿದೆ.
ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಗ್ರಾಮ್ , ಸ್ವತಂತ್ರ ಸಂಶೋಧನೆ ಸಂಸ್ಥೆಯಾಗಿದೆ. ಮತ್ತು ಕೆಎಪಿ 2024ಕ್ಕೆ ಸಂಬಂಧಿಸಿದಂತೆ, ಅಧ್ಯಯನ ನಡೆಸುವುದಕ್ಕೆ ಕಟ್ಟುನಿಟ್ಟಾಗಿ ಸೀಮಿತಗೊಳಿಸಿದೆ. ಮತ್ತು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಹೊರಡಿಸಿರುವ ಮತ್ತು ಜಾರಿಗೊಳಿಸಿರುವ ಎಲ್ಲಾ ನಿಯಮ ಮತ್ತು ಮಾನದಂಡಗಳು ಮತ್ತು ಅಧ್ಯಯನ ವಿಧಾನ ಮತ್ತು ಶಿಷ್ಟಾಚಾರಗಳಿಗೆ ಅನುಗಣವಾಗಿಯೇ ಮೌಲ್ಯಮಾಪನ ಮಾಡಲಾಗಿದೆ ಎಂದು ತನ್ನ ಹೇಳಿಕೆಯಲ್ಲಿ ವಿವರಿಸಿದೆ.
ಅಧ್ಯಯನದ ವಿನ್ಯಾಸ, ಕಾರ್ಯಗತಗೊಳಿಸುವಿಕೆ, ಅಧ್ಯಯನದ ಮಾದರಿ ಗಾತ್ರ, ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆಗೆ ಸಂಬಂಧಿಸಿದಂತೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಸಾಮಾಜಿಕ ಸಂಶೋಧನೆಗೆ ನಿಗದಿಪಡಿಸಿರುವ ಶಿಷ್ಟಾಚಾರದ ಅನುಸಾರವಾಗಿಯೇ ನಡೆಸಿದೆ.
‘ಕೆಎಪಿ 2024 ಅಧ್ಯಯನಕ್ಕೆ ಸಂಬಂಧಿಸಿದಂತೆ ನಾವು ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಆಯ್ಕೆಯಾಗಿದ್ದೇವೆ. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ರಚಿಸಿದ್ದ ತಜ್ಞರ ಸಮಿತಿಯಿಂದ ಹೆಚ್ಚಿನ ತಾಂತ್ರಿಕ ಅಂಕಗಳನ್ನು ಗಳಿಸಿದ್ದೇವೆ. ಯಾವುದೇ ಏಜೆನ್ಸಿಗಳು ನಮ್ಮನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಿಲ್ಲ ಅಥವಾ ಆದ್ಯತೆ ನೀಡಿಲ್ಲ. ಈ ಅಧ್ಯಯನವನ್ನು ಕೈಗೊಳ್ಳಲು ಅರ್ಜಿ ಸಲ್ಲಿಸಿದ ಇತರ ಏಜೆನ್ಸಿಗಳೊಂದಿಗೆ ಸ್ಪರ್ಧಿಸುವ ಟೆಂಡರ್ ಮತ್ತು ಆಯ್ಕೆಯ ನಿಗದಿತ ಪ್ರಕ್ರಿಯೆಗಳ ಮೂಲಕ ನಾವು ಆಯ್ಕೆಯಾಗಿದ್ದೇವೆ,’ ಎಂದು ಗ್ರಾಮ್ ತನ್ನ ಹೇಳಿಕೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಈ ಅಧ್ಯಯನ, ಮೌಲ್ಯಮಾಪನ ವರದಿಯನ್ನು 2025ರ ನವೆಂಬರ್ 13ರಂದು ಸಲ್ಲಿಸಲಾಗಿದೆ. 2025ರ ಡಿಸೆಂಬರ್ 1ರಂದು ವರದಿಯ ಇಂಗ್ಲೀಷ್ ಪ್ರತಿಯನ್ನು ನೀಡಲಾಗಿದೆ ಎಂದು ಮಾಹಿತಿ ಒದಗಿಸಿದೆ.
ಡಾ. ಆರ್. ಬಾಲಸುಬ್ರಹ್ಮಣ್ಯನ್ ಅವರೊಂದಿಗಿನ ಗ್ರಾಮ್ ಸಂಬಂಧದ ಬಗ್ಗೆಯೂ ಸಂಸ್ಥೆಯು ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಡಾ. ಆರ್. ಬಾಲಸುಬ್ರಹ್ಮಣ್ಯನ್ ಅವರು ಈ ಸಂಸ್ಥೆಯ ಸ್ಥಾಪಕರು. ಅದರೆ ಹಲವು ವರ್ಷಗಳಿಂದ ಅವರು ಸಂಸ್ಥೆಯಲ್ಲಿ ಯಾವುದೇ ಹುದ್ದೆಯನ್ನು ಯಾವುದೇ ಸಾಮರ್ಥ್ಯದಲ್ಲೂ ಹೊಂದಿಲ್ಲ. ಭಾರತ ಸರ್ಕಾರದ ಸಚಿವ ಸಂಪುಟದ ನೇಮಕಾತಿ ಸಮಿತಿಯು ಡಾ. ಆರ್. ಬಾಲಸುಬ್ರಹ್ಮಣ್ಯನ್ ಅವರನ್ನು ಸಿಬಿಸಿಗೆ ಅಧ್ಯಕ್ಷರನ್ನಾಗಿ ನೇಮಿಸಿದೆ. ಅಲ್ಲದೇ 2022ರ ಮಾರ್ಚ್ 31ರಿಂದಲೇ ಗ್ರಾಮ್‌ನ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಅವರು ಕೆಳಗಿಳಿದಿದ್ದಾರೆ ಎಂದು ವಿವರಿಸಿದೆ.
ಗ್ರಾಮ್‌ನೊಂದಿಗೆ ಪ್ರಸ್ತುತ ಸಂಬಂಧವಿಲ್ಲದ ಇತರ ವ್ಯಕ್ತಿಗಳು ಈ ಅಧ್ಯಯನದಲ್ಲಿ ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಲಾಗುತ್ತಿದೆ. ಆದರೆ ಅದು ಸರಿಯಲ್ಲ. ಗ್ರಾಮ್, ವೃತ್ತಿಪರ ಆಡಳಿತ ಮಂಡಳಿಯ ನೇತೃತ್ವದ ಒಂದು ಸಂಸ್ಥೆಯಾಗಿದೆ. ಸ್ವತಂತ್ರ ಆಡಳಿತ ರಚನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಇದು ಸಮಗ್ರತೆಯಿಂದ ಕೂಡಿರುವ ಸಾಂಸ್ಥಿಕ ಸ್ವರೂಪವಿದೆ. ಕರ್ನಾಟಕ ಸರ್ಕಾರಕ್ಕೆ ಈ ಹಿಂದಿನಿಂದಲೂ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಮೂಲಕ ವಿವಿಧ ಆಧ್ಯಯನ ನಡೆಸಿದೆ. ಮತ್ತು ಇತರ ಇಲಾಖೆಗಳ ಯೋಜನೆಗಳ ಮೌಲ್ಯಮಾಪನವನ್ನೂ ನಡೆಸಿದೆ ಎಂದು ಮಾಹಿತಿ ಒದಗಿಸಿದೆ.

ವಿಶೇಷವೆಂದರೇ 2014ರ ಜೂನ್‌ನಲ್ಲಿ ಅನ್ನ ಭಾಗ್ಯ ಯೋಜನೆಯ ತ್ವರಿತ ಮೌಲ್ಯಮಾಪನ ನಡೆಸಲಾಗಿದೆ. ನವ ಕರ್ನಾಟಕ ವಿಷನ್ 2025ರ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳು, ಆಡಳಿತ, ನೀತಿಗೆ ಸಂಬಂಧಿಸಿದಂತೆ ಗ್ರಾಮ್, ನೆರವು ನೀಡಿದೆ ಎಂದು ವಿವರಿಸಿದೆ.
ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಷನ್ ಆ್ಯಂಡ್ ಎಲೆಕ್ಟೋರಲ್ ಪಾರ್ಟಿಸಿಪೇಷನ್ (ಸ್ವೀಪ್) ಕಾರ್ಯಕ್ರಮದ ಕುರಿತು ಅಧ್ಯಯನ ನಡೆಸಿದ್ದ ಗ್ರಾಮ್ ಸಂಸ್ಥೆಗೆ ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ದಿ ಸಮಿತಿಯ ಹಾಲಿ ಉಪಾಧ್ಯಕ್ಷ ಕಾಂಗ್ರೆಸ್ಸಿನ ಮಾಜಿ ಶಾಸಕ ಡಿ ಆರ್ ಪಾಟೀಲ್ ಅವರೂ ಸಹ ಸಲಹಾ ಸಮಿತಿ ಸದಸ್ಯರಾಗಿದ್ದಾರೆ.
ಗ್ರಾಮ್ ಸಂಸ್ಥೆಯ ಸಲಹಾ ಮಂಡಳಿಯಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಡಿ ಆರ್ ಪಾಟೀಲ್‌ರಿಗೂ ಸ್ಥಾನ
ಇದೇ ಡಾ ಆರ್ ಬಾಲಸುಬ್ರಮಣ್ಯಂ ಅವರು ಸ್ಥಾಪಿಸಿರುವ ಗ್ರಾಮ್ ಎನ್ ಜಿ ಒ ನ ಸಲಹಾ ಸಮಿತಿಯಲ್ಲಿ ಕಾಂಗ್ರೆಸ್ಸಿನ ಮಾಜಿ ಶಾಸಕ ಹಾಗೂ ಹಾಲಿ ರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ದಿ ಸಮಿತಿಯ ಹಾಲಿ ಉಪಾಧ್ಯಕ್ಷ ಡಿ ಆರ್ ಪಾಟೀಲ್ ಅವರು ಗ್ರಾಮ್ ಸಂಸ್ಥೆಯ ಸಲಹಾ ಮಂಡಳಿಯಲ್ಲಿ ಈಗಲೂ ಸದಸ್ಯರಾಗಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಗ್ರಾಸ್‌ರೂಟ್ ರೀಸರ್ಚ್ ಅಂಡ್ ಅಡ್ವೋಕೇಸಿ ಮೂವ್‌ಮೆಂಟ್ ಸಂಸ್ಥೆಯು ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿನ ಕಾಂಗ್ರೆಸ್ ಸರ್ಕಾರದ ಸಹಭಾಗಿತ್ವದಲ್ಲಿ ಹಲವು ಮೌಲ್ಯಮಾಪನ ಮತ್ತು ಅಧ್ಯಯನ ಮಾಡಲು ಅನುಮತಿ ನೀಡಿತ್ತು.
ಸಿದ್ದು ಮೊದಲ ಅವಧಿಯಿಂದಲೂ ‘ಗ್ರಾಮ್’ಗೆ ಅನುಮತಿ; ಹಿತಾಸಕ್ತಿ ಸಂಘರ್ಷ ಆರೋಪದ ಬೆನ್ನಲ್ಲೇ ವರದಿ ಮುನ್ನೆಲೆಗೆ
ಚುನಾವಣೆಗಳಲ್ಲಿ ಬಳಕೆಯಾಗುತ್ತಿರುವ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆ ಮತ್ತು ನಿಖರತೆ ಬಗ್ಗೆ ರಾಜ್ಯದಲ್ಲಿ ಬಹುಪಾಲು ಜನರು ಅಂದರೆ, ಶೇಕಡಾ 83.61ರಷ್ಟು ಮತದಾರರು ವಿಶ್ವಾಸ ಹೊಂದಿದ್ದಾರೆ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿದ್ದ ಅಧ್ಯಯನವು ಹೊರಗೆಡವಿತ್ತು.
ಇವಿಎಂ ನಿಖರತೆ: ಕಲ್ಬುರ್ಗಿಯಲ್ಲಿ ಶೇ. 94.98, ಮೈಸೂರಲ್ಲಿ ಶೇ. 88.59 ರಷ್ಟು ಭರ್ಜರಿ ವಿಶ್ವಾಸಾರ್ಹತೆ
ವಿಶೇಷವೆಂದರೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ತವರು ಜಿಲ್ಲೆ ಕಲ್ಬುರ್ಗಿಯಲ್ಲಿ ಶೇ.94.08ರಷ್ಟು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ವಿಭಾಗದಲ್ಲಿ ಶೇ. 88.59ರಷ್ಟು ಮತದಾರರು, ಇವಿಎಂಗಳ ವಿಶ್ವಾಸಾರ್ಹತೆ ಮತ್ತು ನಿಖರತೆಯ ಕುರಿತು ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.
ಚುನಾವಣೆಗಳಲ್ಲಿ ಹಣಬಲ, ತೋಳ್ಬಲ; ಕಲ್ಬುರ್ಗಿ, ಮೈಸೂರು, ಬೆಳಗಾವಿ, ಬೆಂಗಳೂರಿನಲ್ಲಿ ಪ್ರಭಾವ ಬೀರಿದ್ದೆಷ್ಟು?
ಅಲ್ಲದೇ ಇದೇ ವರದಿಯಲ್ಲಿ ಹಣಬಲ ಮತ್ತು ತೋಳ್ಬಲದ ಕುರಿತು ವಿಶ್ಲೇಷಿಸಿರುವುದನ್ನು ಸ್ಮರಿಸಬಹುದು.









