ಸಾರಿಗೆ ನಿಗಮಗಳಿಗೆ 4,006.47 ಕೋಟಿ ಬಾಕಿ ಇರಿಸಿದ ಸರ್ಕಾರ; ‘ಶಕ್ತಿ’ ಯೋಜನೆ ಪರಿಣಾಮ?

ಬೆಂಗಳೂರು; ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ದಿನದಿಂದ ನವೆಂಬರ್‍‌ 25ರವರೆಗೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಬೆಂಗಳೂರು ಮಹಾನಗರ, ವಾಯುವ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಿಗೆ ಒಟ್ಟಾರೆ 4,006.47 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದೆ.

 

ಈ ಕುರಿತು ವಿಧಾನಪರಿಷತ್‌ ಸದಸ್ಯ ಗೋವಿಂದರಾಜು ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಸಚಿವ ರಾಮಲಿಂಗಾರೆಡ್ಡಿ ಅವರು ಕರ್ನಾಟಕ ಸಾರಿಗೆ ನಿಗಮಗಳ ಸದ್ಯದ ಆರ್ಥಿಕ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ.

 

ಶಕ್ತಿ ಯೋಜನೆ ಅಡಿಯಲ್ಲಿ ಇದುವರೆಗೆ 650 ಕೋಟಿಯಷ್ಟು ಫಲಾನುಭವಿಗಳು ಪ್ರಯಾಣಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ರಾಮಲಿಂಗಾರೆಡ್ಡಿ ಅವರು ಭರ್ಜರಿ ಪ್ರಚಾರ ಪಡೆದುಕೊಂಡಿದ್ದರು. ಈ ಪ್ರಚಾರದ ಬೆನ್ನಲ್ಲೇ ರಾಮಲಿಂಗಾರೆಡ್ಡಿ ಅವರು ನೀಡಿರುವ ಅಂಕಿ ಅಂಶಗಳು ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಗೆ ಕೈಗನ್ನಡಿಯಾಗಿವೆ.

 

 

ಕರ್ನಾಟಕ ಸಾರಿಗೆ ನಿಗಮಗಳು ಸತತ 5 ವರ್ಷದಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸಿವೆ. ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಸಾರಿಗೆ ನಿಗಮಗಳನ್ನು ಮತ್ತಷ್ಟು ನಷ್ಟಕ್ಕೆ ತಳ್ಳಿವಿಯೇ ವಿನಃ, ನಷ್ಟದ ಸುಳಿಯಿಂದ ಮೇಲೆತ್ತಲು ಸಾಧ್ಯವಾಗಿಲ್ಲ. 2020-21ರಿಂದ 2022-23ರವರೆಗೆ ಅನುಭವಿಸಿದ್ದ ನಷ್ಟಕ್ಕೆ ಹೋಲಿಸಿದರೇ 2023-24ರಲ್ಲಿ ನಷ್ಟದ ಪ್ರಮಾಣವು ತುಸು ಇಳಿಕೆಯಾಗಿದೆ. ಇದನ್ನು ಹೊರತುಪಡಿಸಿದರೇ ಸಾರಿಗೆ ನಿಗಮಗಳನ್ನು ಸಂಪೂರ್ಣವಾಗಿ ನಷ್ಟದ ಸುಳಿಯಿಂದ ಮೇಲೆತ್ತಿಲ್ಲ.

 

ಸಾರಿಗೆ ನಿಗಮಗಳಿಗೆ ಬಿಡುಗಡೆ ಮಾಡಿದ್ದೆಷ್ಟು?

 

ಕೆಎಸ್‌ಆರ್‍‌ಟಿಸಿಗೆ 2023-24ರಲ್ಲಿ 1,211.80 ಕೋಟಿ ರು, ಬಿಎಂಟಿಸಿಗೆ 549.67 ಕೋಟಿ ರು, ವಾಯುವ್ಯ ಕರ್ನಾಟಕ ಸಾರಿಗೆಗೆ 792.22 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಎಕ 646.06 ಕೋಟಿ ರು ಬಿಡುಗಡೆ ಮಾಡಿತ್ತು.

 

 

ಅದೇ ರೀತಿ 2024-25ರಲ್ಲಿ ಕೆಎಸ್‌ಆರ್‍‌ಟಿಸಿಗೆ 1,905.20 ಕೋಟಿ, ಬಿಎಂಟಿಸಿಗೆ 864.59 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 1,232.18 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 1,013.03 ಕೋಟಿ ರು ಬಿಡುಗಡೆ ಮಾಡಿತ್ತು.

 

 

2025-26ನೇ ಸಾಲಿನ ನವೆಂಬ್‌ 25ರ ಅಂತ್ಯಕ್ಕೆ ಕೆಎಸ್‌ಆರ್‍‌ಟಿಸಿಗೆ 1,366.22 ಕೋಟಿ ರು., ಬಿಎಂಟಿಸಿಗೆ 606.04 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 862.74 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 698.62 ಕೋಟಿ ರು ಬಿಡುಗಡೆ ಮಾಡಿದೆ ಎಂದು ಉತ್ತರದಲ್ಲಿ ಅಂಕಿ ಆಂಶಗಳನ್ನು ಒದಗಿಸಿದ್ದಾರೆ.

 

ಈ ಎಲ್ಲಾ ಸಾರಿಗೆ ನಿಗಮಗಳಿಗೆ 2023-24ರಲ್ಲಿ 3,199.75 ಕೋಟಿ, 2024-25ರಲ್ಲಿ 5,015.00 ಕೋಟಿ, 2025-26ರ ನವೆಂಬರ್‍‌ 25ರ ಅಂತ್ಯಕ್ಕೆ 3,534.02 ಕೋಟಿ ಸೇರಿ ಒಟ್ಟಾರೆ 11,748.77 ಕೋಟಿ ರು ಬಿಡುಗಡೆ ಮಾಡಿತ್ತು. ಕೆಎಸ್‌ಆರ್‍‌ಟಿಸಿಯೊಂದಕ್ಕೇ 4,4483.62 ಕೋಟಿ ರು., ಬಿಎಂಟಿಸಿಗೆ 2,020.3 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 2,887.14 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 2,357.71ಕೋಟಿ ರು ಬಿಡುಗಡೆಯಾಗಿತ್ತು.

 

ಬಾಕಿ ಇರಿಸಿದ್ದ ಮೊತ್ತವೆಷ್ಟು?

 

ಇದೇ ವರ್ಷದಲ್ಲಿ ಕೆಎಸ್‌ಆರ್‍‌ಟಿಸಿಗೆ 2023-24ರಲ್ಲಿ 452.62 ಕೋಟಿ, 2024-2=5ರಲ್ಲಿ 495.80 ಕೋಟಿ, 2025-26ರ ನವೆಂಬರ್‍‌ 25ರ ಅಂತ್ಯಕ್ಕೆ 631.73 ಕೋಟಿ ರು ಒಟ್ಟಾರೆ 1,580.15 ಕೋಟಿ ರು ಬಾಕಿ ಉಳಿಸಿಕೊಂಡಿತ್ತು. ಬಿಎಂಟಿಸಿಗೆ 2023-24ರಲ್ಲಿ 205.43 ಕೋಟಿ, 2024-25ರಲ್ಲಿ 194.78 ಕೋಟಿ, 2025-26ರ ನವೆಂಬರ್‍‌ 25ರ ಅಂತ್ಯಕ್ಕೆ 310.6 ಕೋಟಿ ಸೇರಿ ಒಟ್ಟಾರೆ 710.81 ಕೋಟಿ ಬಾಕಿ ಉಳಿಸಿಕೊಂಡಿತ್ತು.

 

ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 2023-24ರಲ್ಲಿ 283.91 ಕೋಟಿ, 2024-25ರಲ್ಲಿ 275.55 ಕೋಟಿ, 2025-26ರ ನವೆಂಬರ್‍‌ ಅಂತ್ಯಕ್ಕೆ 428.64 ಕೋಟಿ ಸೇರಿ ಒಟ್ಟು 988.1 ಕೋಟಿ ಬಾಕಿ ಉಳಿಸಿಕೊಂಡಿತ್ತು. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 2023-24ರಲ್ಲಿ 238.66 ಕೋಟಿ, 2024-25ರಲ್ಲಿ 204.32 ಕೋಟಿ, 2025-26ರಲ್ಲಿ 284.43 ಕೊಟಿ ಸೇರಿ ಒಟ್ಟಾರೆ 727.41 ಕೋಟಿ ರು ಬಾಕಿ ಇತ್ತು.

 

 

ಈ ಎಲ್ಲಾ ನಿಗಮಗಳಿಗೆ 2023-24ರಲ್ಲಿ 1,180.62 ಕೋಟಿ, 2024-25ರಲ್ಲಿ 1,170.45 ಕೋಟಿ, 2025-26ರ ನವೆಂಬರ್‍‌ 25ರ ಅಂತ್ಯಕ್ಕೆ 1,655.40 ಕೋಟಿ ರು ಸೇರಿ ಒಟ್ಟಾರೆ 4,006.47 ಕೋಟಿಯಷ್ಟು ಬಾಕಿ ಉಳಿಸಿಕೊಂಡಿತ್ತು.

 

ನಷ್ಟದ ಸುಳಿಯಲ್ಲಿ ಸಾರಿಗೆ ನಿಗಮಗಳು

 

ಅಲ್ಲದೇ ಕಳೆದ 5 ವರ್ಷದಲ್ಲಿ ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ಸಾರಿಗೆ ನಿಗಮಗಳು ನಷ್ಟದ ಸುಳಿಯಲ್ಲಿ ಸಿಲುಕಿದ್ದವು.

 

2020-21ರಲ್ಲಿ ಕೆಎಸ್‌ಆರ್‍‌ಟಿಸಿ 581.15 ಕೊಟಿ, 2021-22ರಲ್ಲಿ 423.31 ಕೋಟಿ, 2022-23ರಲ್ಲಿ 597.89 ಕೋಟಿ, 2023-24ರಲ್ಲಿ 295.43 ಕೋಟಿ, 2024-25ರಲ್ಲಿ 81.83 ಕೋಟಿ ನಷ್ಟವನ್ನು ಅನುಭವಿಸಿತ್ತು.

 

 

ಅದೇ ರೀತಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು 2020-21ರಲ್ಲಿ 389.08 ಕೋಟಿ, 2021-22ರಲ್ಲಿ 462.58 ಕೋಟಿ, 2022-23ರಲ್ಲಿ 746.15 ಕೋಟಿ, 2023-24ರಲ್ಲಿ 322.48 ಕೋಟಿ, 2024-25ರಲ್ಲಿ 31.11 ಕೋಟಿ ರು ನಷ್ಟವನ್ನು ಅನುಭವಿಸಿತ್ತು.

 

 

ಬಿಎಂಟಿಸಿಯು 2020-21ರಲ್ಲಿ 164.20 ಕೋಟಿ, 2021-22ರಲ್ಲಿ 178.25 ಕೋಟಿ, 2022-23ರಲ್ಲಿ 997.38 ಕೊಟಿ, 2023-24ರಲ್ಲಿ 575.45 ಕೋಟಿ, 2024-25ರಲ್ಲಿ 670.48 ಕೋಟಿ ನಷ್ಟಕ್ಕೀಡಾಗಿತ್ತು. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮವು 2020-21ರಲ್ಲಿ 186.45 ಕೋಟಿ, 2021-22ರಲ್ಲಿ 225.82 ಕೋಟಿ, 2022-23ರಲ್ಲಿ 319.99 ಕೋಟಿ, 2023-24ರಲ್ಲಿ 161.12 ಕೋಟಿ, 2024-25ರಲ್ಲಿ 59.40 ಕೋಟಿ ನಷ್ಟವನ್ನು ಅನುಭವಿಸಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ಸದನಕ್ಕೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

ಈ ನಾಲ್ಕು ಸಾರಿಗೆ ಸಂಸ್ಥೆಗಳು ಹೊಸ ಬಸ್‌ಗಳ ಖರೀದಿದಾಗಿ, ಇಂಧನ ವೆಚ್ಚ, ಸಂಸ್ಥೆಯ ಬಂಡವಾಳ ವೆಚ್ಚಗಳಿಗೆ ಹಾಗೂ ಭವಿಷ್ಯ ನಿಧಿ ಬಾಕಿ ತೀರುವಳಿಗೆ ಸಾಲ ಪಡೆದಿತ್ತು. ಕಳೆದ 5 ವರ್ಷದಲ್ಲಿ ಬಡ್ಡಿ ಪಾವತಿಸಿತ್ತು.

 

 

ಕೆಎಸ್ಆರ್‍‌ಟಿಸಿಯು 2020-21ರಲ್ಲಿ ಮಾಸಿಕ 2.63 ಕೋಟಿ, 2021-22ರಲ್ಲಿ 2.13 ಕೋಟಿ, 2022-23ರಲ್ಲಿ 1.65 ಕೋಟಿ, 2023-24ರಲ್ಲಿ 1.20 ಕೋಟಿ, 2024-25ರಲ್ಲಿ 1.97 ಕೋಟಿ ರು.ಗಳನ್ನು ಪಾವತಿಸಿತ್ತು. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು 2020-21ರಲ್ಲಿ 1.82 ಕೋಟಿ, 2021-22ರಲ್ಲಿ 1.77 ಕೋಟಿ, 2022-23ರಲ್ಲಿ 1.45 ಕೋಟಿ, 2023-24ರಲ್ಲಿ 1.08 ಕೋಟಿ, 2024-25ರಲ್ಲಿ 0.73 ಕೋಟಿಯಷ್ಟು ಬಡ್ಡಿ ಪಾವತಿಸಿದೆ ಎಂದು ಮಾಹಿತಿ ಒದಗಿಸಿದ್ದಾರೆ.

 

 

ಬಿಎಂಟಿಸಿಯೂ 2020-21ರಲ್ಲಿ 4.80 ಕೋಟಿ, 2021-22ರಲ್ಲಿ 5.69 ಕೋಟಿ, 2022-23ರಲ್ಲಿ 4.99 ಕೋಟಿ, 2023-24ರಲ್ಲಿ 4.01 ಕೋಟಿ, 2024-25ರಲ್ಲಿ 2.24 ಕೋಟಿ ಬಡ್ಡಿ ಪಾವತಿಸಿದ್ದರೇ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮವು 2020-21ರಲ್ಲಿ 0.62 ಕೋಟಿ, 2021-22ರಲ್ಲಿ 0.48 ಕೋಟಿ, 2022-23ರಲ್ಲಿ 0.61 ಕೋಟಿ, 2023-24ರಲ್ಲಿ 1.08 ಕೋಟಿ, 2024-25ರಲ್ಲಿ 1.33 ಕೋಟಿಯಷ್ಟು ಬಡ್ಡಿ ಪಾವತಿಸಿದೆ.

 

ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ನವೆಂಬರ್‍‌ 2024ರ ಅಂತ್ಯಕ್ಕೆ ಶಾಸನಬದ್ಧ ಪಾವತಿಯಾದ ಭವಿಷ್ಯ ನಿಧಿ, ಇಂಧನ ಬಾಕಿ ಮೊತ್ತವನ್ನು ಬಾಕಿ ಉಳಿಸಿಕೊಂಡಿತ್ತು. ಈ ಮೊತ್ತವನ್ನು ಪಾವತಿಸಲು ಸರ್ಕಾರದ ಖಾತರಿ, ಗ್ಯಾರಂಟಿಯೊಂದಿಗೆ ಹಣಕಾಸು ಸಂಸ್ಥೆಗಳಿಂದ 2,000 ಕೋಟಿ ರು ಸಾಲ ಪಡೆಯಲು 2024ರ ಡಿಸೆಂಬರ್‍‌ 31ರಂದು ಅನುಮೋದನೆ ನೀಡಲಾಗಿದೆ. ಈ ಸಾಲದ ಮೊತ್ತವನ್ನೂ ಸರ್ಕಾರವೇ ಸಂಪೂರ್ಣವಾಗಿ ಮರು ಪಾವತಿಸಲಿದೆ.

 

ಈ ಸಾಲದ ಮೊತ್ತದ ಪೈಕಿ ಕೆಎಸ್‌ಆರ್‍‌ಟಿಸಿಗೆ 623.80 ಕೋಟಿ, ಬಿಎಂಟಿಸಿಗೆ 589.20 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆಗೆ 646.00 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 141.00 ಕೋಟಿಯಷ್ಟು ಪಾವತಿಸಿತ್ತು.

 

ಅಲ್ಲದೇ 2025-26ನೇ ಸಾಲಿನಲ್ಲಯೂ 2,000 ಕೋಟಿ ರು ಸಾಲದ ಮೊತ್ತದ ಅಸಲು ಮತ್ತು ಬಡ್ಡಿ ಪಾವತಿಗಾಗಿ ನಾಲ್ಕು ಸಾರಿಗೆ ನಿಗಮಗಳಿಗೆ 452.00 ಕೋಟಿ ರು ಅನುದಾನವನ್ನು ಒದಗಿಸಿದೆ. ನಾಲ್ಕು ಸಾರಿಗೆ ನಿಗಮಗಳ ನಗದು ಕೊರತೆಯನ್ನು ನಿಭಾಯಿಸಲು 2023-24ರಲ್ಲಿ ಮತ್ತು 2024-25ರಲ್ಲಿ ನಿಗಮಗಳು ಸರ್ಕಾರಕ್ಎಕ ಪಾವತಿ ಮಾಡಬೇಕಾದ ಮೋಟಾರು ವಾಹನ ತೆರಿಗೆ 581.47 ಕೋಟಿ ಮತ್ತು 637.76 ಕೋಟಿ ಸೇರಿದಂತೆ ಒಟ್ಟಾರೆ 1,219.23 ಕೋಟಿ ರು.ಗಳ ಪಾವತಿಯಿಂದ ವಿನಾಯಿತಿ ನೀಡಿದೆ.

 

 

ಅಲ್ಲದೇ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ 2023ನೇ ಮೇ ತಿಂಗಳ ವರೆಗೆ ಒಟ್ಟು 4,099.38 ಕೋಟಿ ರು ಹೊಣೆಗಾರಿಕೆ ಬಾಕಿ ಇತ್ತು.

 

 

ಈ ಬಾಕಿಯು, ನಿಗಮಗಳ ತೀವ್ರ ಆರ್ಥಿಕ ಹಿನ್ನಡೆಗೆ ಕಾರಣವಾಗಿತ್ತು. ನಿಗಮಗಳು ಇಂದನ ಕಂಪನಿಗಳಿಗೆ ಇಂಧನ ವೆಚ್ಚವನ್ನು, ಭವಿಷ್ಯ ನಿಧಿ ಮತ್ತು ಸರಬರಾಜುದಾರರ ಇತರೆ ಬಿಲ್‌ಗಳನ್ನು ಪಾವತಿಸದೇ ಬಾಕಿ ಇರಿಸಿದ್ದರಿಂದ ನಿಗಮಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿತ್ತು.

 

 

2023ರ ಮೇವರೆಗೆ ಕೆಎಸ್‌ಆffಟಿಸಿಯಲ್ಲಿ 1,211.18 ಕೋಟಿ, ಬಿಎಂಟಿಸಿಯ್ಲಿ 1,383.86 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆಗೆ 1,253.01 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 251.33 ಕೋಟಿ ಸೇರಿ ಒಟ್ಟಾರೆ 4,099.38 ಕೋಟಿಯಷ್ಟು ಹೊಣೆಗಾರಿಕೆ ಇತ್ತು.

 

ಹಾಗೆಯೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಅಧಿಕಾರಿ, ನೌಕರರಿಗೆ ವೇತನ ಪಾವತಿಸಲು ಆಯವ್ಯಯದಲ್ಲಿ ಯಾವುದೇ ಅನುದಾವನ್ನು ಮೀಸಲು ಇರಿಸಿರಲಿಲ್ಲ. ಹಾಗೂ ನಿಗಮಗಳಿಗೆ ಯಾವುದೇ ಅನುದಾನವನ್ನೂ ಸಹ ಬಿಡುಗಡೆ ಮಾಡಿರಲಿಲ್ಲ. ಇದರಿಂದಾಗಿ ನಿಗಮಗಳು ತೀವ್ರ ಒತ್ತಡಕ್ಕೆ ಸಿಲುಕಿದ್ದವು ಎಂದು ವಿವರಿಸಿದ್ದಾರೆ.

 

 

ರಾಜ್ಯ ರಸ್ತೆ ಸಾರಿಗೆ ನಿಗಮಗಳು ರಸ್ತೆ ಸಾರಿಗೆ ನಿಗಮಗಳ ಕಾಯ್ದೆ 1950ರಡಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಗಳಾಗಿವೆ. ರಸ್ತೆ ಸಾರಿಗೆ ನಿಗಮಗಳ ನಿರ್ವಹಣೆ ಮತ್ತು ಸಿಬ್ಬಂದಿಗಳ ವೇತನ ಹಾಗೂ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ನಿಗಮಗಳು ತನ್ನ ಆಂತರಿಕ ಮೂಲಗಳಿಂದಲೇ ಭರಿಸಬೇಕಾಗಿದೆ.

Your generous support will help us remain independent and work without fear.

Latest News

Related Posts