ಬಾಲ ಗರ್ಭಿಣಿಯರ ಸಂಖ್ಯೆಯಲ್ಲಿ ಹೆಚ್ಚಳ; 3 ವರ್ಷದಲ್ಲಿ 14,641, ಕೇವಲ 7 ತಿಂಗಳಲ್ಲಿ 2,164 ಪ್ರಕರಣ ದಾಖಲು

ಬೆಂಗಳೂರು; ತುಮಕೂರು, ಬೆಳಗಾವಿ, ಯಾದಗಿರಿ, ವಿಜಯನಗರ, ಬೆಂಗಳೂರು ನಗರ  ಜಿಲ್ಲೆ ಸೇರಿದಂತೆ ರಾಜ್ಯದ 35 ಸ್ಥಳಗಳಲ್ಲಿ ಕಳೆದ 3 ವರ್ಷದಲ್ಲಿ 14,641 ಮತ್ತು   7 ತಿಂಗಳಲ್ಲಿ  2,164 ಸಂಖ್ಯೆಯ 18 ವರ್ಷದ ಕೆಳಗಿನ ಅಪ್ರಾಪ್ತ ಹೆಣ್ಣು ಮಕ್ಕಳು ಗರ್ಭವತಿಯಾಗಿದ್ದಾರೆ ಎಂದು ಸರ್ಕಾರವು ಅಧಿಕೃತವಾಗಿ ಬಹಿರಂಗಪಡಿಸಿದೆ. ಸರ್ಕಾರವೇ  ಬಹಿರಂಗಪಡಿಸಿರುವ ಈ ಮಾಹಿತಿಯು ಪಾಲಕರಲ್ಲಿ ಕಳವಳಕ್ಕೆ ಕಾರಣವಾಗಿದೆ.

 

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ ಟಿ ರವಿ ಮತ್ತಿತರರು ಕೇಳಿದ್ದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್‍‌ ಅವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.

 

 

ಲಕ್ಷ್ಮಿ ಹೆಬ್ಬಾಳಕರ್ ಅವರ ತವರು ಜಿಲ್ಲೆ ಬೆಳಗಾವಿಯಲ್ಲಿ 119, ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರಿನಲ್ಲಿ 218, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ ಝಡ್‌ ಜಮೀರ್‍‌ ಅಹ್ಮದ್‌ ಖಾನ್‌ ಉಸ್ತುವಾರಿ ಜಿಲ್ಲೆಯಾಗಿರುವ ವಿಜಯನಗರದಲ್ಲಿ 332 ಪ್ರಕರಣಗಳು ದಾಖಲಾಗಿರುವುದು ಉತ್ತರದಿಂದ ತಿಳಿದು ಬಂದಿದೆ.

 

ಪ್ರಾತಿನಿಧಿ ಚಿತ್ರ- ಚಾಟ್‌ ಜಿಪಿಟಿ

 

ಆರ್‍‌ಸಿಹೆಚ್‌ ಪೋರ್ಟಲ್‌ನಲ್ಲಿದೆ ಅಂಕಿ ಅಂಶ

 

ಆರ್‍‌ಸಿಹೆಚ್‌ ಪೋರ್ಟಲ್‌ ಪ್ರಕಾರ 2023-24ರಲ್ಲಿ 8,666, 2024-25ರಲ್ಲಿ 4,746, 2025-26ನೇ ಸಾಲಿನ ಅಕ್ಟೋಬರ್ ಅಂತ್ಯಕ್ಕೆ  1,226 ಪ್ರಕರಣ ಸೇರಿ ಒಟ್ಟಾರೆ 14,641 ಪ್ರಕರಣಗಳು ದಾಖಲಾಗಿವೆ.

 

 

 

ಕಳೆದ 2 ವರ್ಷದಲ್ಲಿ 14ರಿಂದ 18 ರ್ಷದೊಳಗಿನ ಬಾಲ ಗರ್ಭಿಣಿಯರ ಸಂಖ್ಯೆಯು 5,969ರಷ್ಟಿದೆ. 2024-25ರಲ್ಲಿ 4,746, 2025-26ರ ಅಕ್ಟೋಬರ್‍‌ ಅಂತ್ಯಕ್ಕೆ 1,229ರಷ್ಟಿದೆ. ಈ ಪೈಕಿ ಬೆಂಗಳೂರು ನಗರ, ರಾಯಚೂರು, ವಿಜಯಪುರ, ತುಮಕೂರು ಮತ್ತು ಬಳ್ಳಾರಿಯಲ್ಲಿಯೇ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಸರ್ಕಾರವೇ ಅಧಿಕೃತವಾಗಿ ಸದನಕ್ಕೆ ಉತ್ತರಿಸಿದೆ.

 

 

 

ಅಲ್ಲದೇ 2025ರ ಏಪ್ರಿಲ್‌ ನಿಂದ ಆಗಸ್ಟ್ ವರೆಗೆ   14ರಿಂದ 15 ವಯಸ್ಸಿನ 32 ಮಕ್ಕಳು, 15 ರಿಂದ 16 ವಯಸ್ಸಿನ 90, 16ರಿಂದ 17 ವಯಸ್ಸಿನ 226, 17ರಿಂದ 18 ವಯಸ್ಸಿನ 1,107 ಮತ್ತು 18ರಿಂದ 19ರ ವಯಸ್ಸಿನ 1,455 ಮಕ್ಕಳು ಬಾಲ ಗರ್ಭಿಣಿಯರಾಗಿದ್ದಾರೆ ಎಂದು ಸರ್ಕಾರವು ಉತ್ತರ ಒದಗಿಸಿದೆ.

 

 

 

 

2025ರ ಏಪ್ರಿಲ್‌ನಿಂದ ಅಕ್ಟೋಬರ್ ಅವಧಿಯೊಳಗೇ 18 ವರ್ಷದೊಳಗಿನ 2,164 ಮಕ್ಕಳು  ಗರ್ಭವತಿಯಾಗಿದ್ದಾರೆ. ಬಾಗಲಕೋಟೆಯಲ್ಲಿ 17, ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದಲ್ಲಿ 98, ಬೆಂಗಳೂರು ಗ್ರಾಮಾಂತರದಲ್ಲಿ 56, ಬೆಳಗಾವಿಯಲ್ಲಿ 119, ಬಳ್ಳಾರಿಯಲ್ಲಿ 93, ಬೀದರ್‍‌ನಲ್ಲಿ 62, ಚಿಕ್ಕಬಳ್ಳಾಪುರದಲ್ಲಿ 27, ಚಿಕ್ಕಮಗಳೂರಿನಲ್ಲಿ 37, ವಿಜಯಪುರದಲ್ಲಿ 17, ಚಾಮರಾಜನಗರದಲ್ಲಿ 14, ಚಿತ್ರದುರ್ಗದಲ್ಲಿ 78, ದಾವಣಗೆರೆಯಲ್ಲಿ 33 ಪ್ರಕರಣಗಳು ದಾಖಲಾಗಿವೆ.

 

ಧಾರವಾಡದಲ್ಲಿ 7, ಗದಗ್‌ನಲ್ಲಿ 3, ಕಲ್ಬುರ್ಗಿಯಲ್ಲಿ 92, ಹಾಸನದಲ್ಲಿ 81, ಹಾವೇರಿಯಲ್ಲಿ 21, ಉತ್ತರ ಕನ್ನಡದಲ್ಲಿ 11, ಕೊಡಗಿನಲ್ಲಿ 23, ಕೋಲಾರದಲ್ಲಿ 28, ಕೊಪ್ಪಳದಲ್ಲಿ 76, ಮಂಡ್ಯದಲ್ಲಿ 33, ದಕ್ಷಿಣ ಕನ್ನಡದಲ್ಲಿ 16, ಮೈಸೂರಿನಲ್ಲಿ 84, ರಾಯಚೂರಿನಲ್ಲಿ 142, ಬೆಂಗಳೂರು ದಕ್ಷಿಣದಲ್ಲಿ 21, ಶಿವಮೊಗ್ಗದಲ್ಲಿ 40, ತುಮಕೂರಿನಲ್ಲಿ 218, ಉಡುಪಿಯಲ್ಲಿ 6, ಯಾದಗಿರಿಯಲ್ಲಿ 279, ವಿಜಯನಗರದಲ್ಲಿ 332 ಇದ್ದಾರೆ ಎಂದು ಉತ್ತರದಲ್ಲಿ ಅಂಕಿ ಅಂಶ ಒದಗಿಸಿರುವುದು ಗೊತ್ತಾಗಿದೆ.

 

 

 

ರಾಜ್ಯದಲ್ಲಿ ಕಳೆದ 3 ವರ್ಷದ ಅವಧಿಯಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಗರ್ಭದಾರಣೆಗೆ ಸಂಬಂಧಿಸಿದಂತೆ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಒಟ್ಟಾರೆ 2,320 ಪ್ರಕರಣಗಳು ಬಂದಿವೆ. ಕಳೆದ 10 ತಿಂಗಳಲ್ಲಿ (2025ರ ಜನವರಿಯಿಂದ ಅಕ್ಟೋಬರ್‍‌ವರೆಗೆ ) 749 ಪ್ರಕರಣಗಳು ಬಂದಿವೆ.

 

2023-24ರಲ್ಲಿ ಪ್ರಕರಣಗಳ ಪಟ್ಟಿ

 

ಬಾಗಲಕೋಟೆಯಲ್ಲಿ 2022-23ರಲ್ಲಿ  ಕೇವಲ 4 ಪ್ರಕರಣಗಳಿದ್ದವು. 2023-24ರಲ್ಲಿ 12, ಬೆಂಗಳೂರು ಕೇಂದ್ರದಲ್ಲಿ 1, ಬೆಂಗಳೂರು ಉತ್ತರದಲ್ಲಿ 2, ಬೆಂಗಳೂರು ದಕ್ಷಿಣದಲ್ಲಿ 52, ಬೆಂಗಳೂರು ಪೂರ್ವ ಮತ್ತು ಪಶ್ಚಿಮದಲ್ಲಿ ಶೂನ್ಯ, ಬೆಂಗಳೂರು ಗ್ರಾಮಾಂತರದಲ್ಲಿ 10,

 

ಬೆಳಗಾವಿಯಲ್ಲಿ 7, ಬೀದರ್‍‌ನಲ್ಲಿ 5, ಬಳ್ಳಾರಿಯಲ್ಲಿ 9, ವಿಜಯಪುರದಲ್ಲಿ 3, ಚಾಮರಾಜನಗರದಲ್ಲಿ 25, ಚಿಕ್ಕಬಳ್ಳಾಪುರದಲ್ಲಿ 31,

 

 

ಚಿಕ್ಕಮಗಳೂರಿನಲ್ಲಿ 51, ಚಿತ್ರದುರ್ಗದಲ್ಲಿ 43, ದಕ್ಷಿಣ ಕನ್ನಡದಲ್ಲಿ 15, ದಾವಣಗೆರೆಯಲ್ಲಿ 12, ಧಾರವಾಡದಲ್ಲಿ 1, ಗದಗ್‌ನಲ್ಲಿ19,

 

 

ಕಲ್ಬುರ್ಗಿಯಲ್ಲಿ 1, ಹಾಸನದಲ್ಲಿ  3, ಹಾವೇರಿಯಲ್ಲಿ 37, ಕೊಡಗಿನಲ್ಲಿ ಶೂನ್ಯ, ಕೋಲಾರದಲ್ಲಿ 61, ಕೊಪ್ಪಳದಲ್ಲಿ 66

 

 

ಮಂಡ್ಯದಲ್ಲಿ 20, ಮೈಸೂರಿನಲ್ಲಿ 14, ರಾಯಚೂರಿನಲ್ಲಿ 4, ರಾಮನಗರದಲ್ಲಿ 24, ಶಿವಮೊಗ್ಗದಲ್ಲಿ 52, ತುಮಕೂರಿನಲ್ಲಿ 35,

 

 

ಉಡುಪಿಯಲ್ಲಿ 24, ಉತ್ತರ ಕನ್ನಡದಲ್ಲಿ 17, ಯಾದಗಿರಿಯಲ್ಲಿ 4, ವಿಜಯನಗರದಲ್ಲಿ 49 ಸೇರಿ ಒಟ್ಟಾರೆ 709 ಪ್ರಕರಣಗಳು ಇದ್ದವು.

 

 

2024-25ನೇ ಸಾಲಿನ ಪಟ್ಟಿ

 

ಬಾಗಲಕೋಟೆಯಲ್ಲಿ 12, ಬೆಂಗಳೂರು ಕೇಂದ್ರದಲ್ಲಿ 3, ಬೆಂಗಳೂರು ಉತ್ತರದಲ್ಲಿ 2, ಬೆಂಗಳೂರು ದಕ್ಷಿಣದಲ್ಲಿ 14, ಬೆಂಗಳೂರು ಪೂರ್ವ 1 ಮತ್ತು ಪಶ್ಚಿಮದಲ್ಲಿ 8,

 

 

ಬೆಂಗಳೂರು ಗ್ರಾಮಾಂತರದಲ್ಲಿ 17, ಬೆಳಗಾವಿಯಲ್ಲಿ 20, ಬೀದರ್‍‌ನಲ್ಲಿ 12, ಬಳ್ಳಾರಿಯಲ್ಲಿ 11, ವಿಜಯಪುರದಲ್ಲಿ 35, ಚಾಮರಾಜನಗರದಲ್ಲಿ 32,

 

 

ಚಿಕ್ಕಬಳ್ಳಾಪುರದಲ್ಲಿ 40, ಚಿಕ್ಕಮಗಳೂರಿನಲ್ಲಿ 30, ಚಿತ್ರದುರ್ಗದಲ್ಲಿ 20, ದಕ್ಷಿಣ ಕನ್ನಡದಲ್ಲಿ 15, ದಾವಣಗೆರೆಯಲ್ಲಿ 12, ಧಾರವಾಡದಲ್ಲಿ 1,

 

 

ಗದಗ್‌ನಲ್ಲಿ19, ಕಲ್ಬುರ್ಗಿಯಲ್ಲಿ 15, ಹಾಸನದಲ್ಲಿ  3, ಹಾವೇರಿಯಲ್ಲಿ 37, ಕೊಡಗಿನಲ್ಲಿ ಶೂನ್ಯ, ಕೋಲಾರದಲ್ಲಿ 61,

 

 

ಕೊಪ್ಪಳದಲ್ಲಿ 58, ಮಂಡ್ಯದಲ್ಲಿ 43, ಮೈಸೂರಿನಲ್ಲಿ 25, ರಾಯಚೂರಿನಲ್ಲಿ 5, ರಾಮನಗರದಲ್ಲಿ 8, ಶಿವಮೊಗ್ಗದಲ್ಲಿ

 

 

53, ತುಮಕೂರಿನಲ್ಲಿ 6, ಉಡುಪಿಯಲ್ಲಿ 32, ಉತ್ತರ ಕನ್ನಡದಲ್ಲಿ 55, ಯಾದಗಿರಿಯಲ್ಲಿ 23, ವಿಜಯನಗರದಲ್ಲಿ 18 ಸೇರಿ ಒಟ್ಟಾರೆ 682, ಪ್ರಕರಣಗಳು ಇದ್ದವು.

 

 

2025-26

 

ಬಾಗಲಕೋಟೆಯಲ್ಲಿ 9, ಬೆಂಗಳೂರು ಕೇಂದ್ರದಲ್ಲಿ 1, ಬೆಂಗಳೂರು ಉತ್ತರದಲ್ಲಿ 4, ಬೆಂಗಳೂರು ದಕ್ಷಿಣದಲ್ಲಿ 3, ಬೆಂಗಳೂರು ಪೂರ್ವ 6 ಮತ್ತು ಪಶ್ಚಿಮದಲ್ಲಿ 3,

 

 

ಬೆಂಗಳೂರು ಗ್ರಾಮಾಂತರದಲ್ಲಿ 19, ಬೆಳಗಾವಿಯಲ್ಲಿ 28, ಬೀದರ್‍‌ನಲ್ಲಿ 8, ಬಳ್ಳಾರಿಯಲ್ಲಿ 2, ವಿಜಯಪುರದಲ್ಲಿ 24, ಚಾಮರಾಜನಗರದಲ್ಲಿ 38,

 

 

ಚಿಕ್ಕಬಳ್ಳಾಪುರದಲ್ಲಿ 5, ಚಿಕ್ಕಮಗಳೂರಿನಲ್ಲಿ 9, ಚಿತ್ರದುರ್ಗದಲ್ಲಿ 14, ದಕ್ಷಿಣ ಕನ್ನಡದಲ್ಲಿ 18, ದಾವಣಗೆರೆಯಲ್ಲಿ 9 ಧಾರವಾಡದಲ್ಲಿ 6

 

 

ಗದಗ್ ,9 ಕಲ್ಬುರ್ಗಿಯಲ್ಲಿ 6, ಹಾಸನಸದಲದ್ಲಿ 1, ಹಾವೇರಿಯಲ್ಲಿ 37, ಕೊಡಗಿನಲ್ಲಿ ಶೂನ್ಯ, ಕೋಲಾರದಲ್ಲಿ 61,

 

 

ಕೊಪ್ಪಳದಲ್ಲಿ 66, ಮಂಡ್ಯದಲ್ಲಿ 15 ಮೈಸೂರಿನಲ್ಲಿ 24, ರಾಯಚೂರಿನಲ್ಲಿ18, ರಾಮನಗರದಲ್ಲಿ 19, ಶಿವಮೊಗ್ಗದಲ್ಲಿ 17,

 

 

ತುಮಕೂರಿನಲ್ಲಿ 7, ಉಡುಪಿಯಲ್ಲಿ 20, ಉತ್ತರ ಕನ್ನಡದಲ್ಲಿ 32, ಯಾದಗಿರಿಯಲ್ಲಿ 27, ವಿಜಯನಗರದಲ್ಲಿ 10 ಸೇರಿ ಒಟ್ಟಾರೆ 5, 221 ಪ್ರಕರಣಗಳು ಇದ್ದವು.

 

ಆದರೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಕಳೆದ ವರ್ಷ ಒದಗಿಸಿದ್ದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 49 ಸಾವಿರ ಬಾಲಕಿಯರು ಗರ್ಭಿಣಿಯರಾಗಿದ್ದರು.

 

ಆರ್‌ಸಿಎಚ್ ದತ್ತಾಂಶದ ಪ್ರಕಾರ 2023 ರ ಜನವರಿ ಮತ್ತು ನವೆಂಬರ್ ನಡುವೆ ಬೆಂಗಳೂರು ನಗರದಲ್ಲಿ 2,815 ಅಪ್ರಾಪ್ತ ವಯಸ್ಸಿನ ಗರ್ಭಧಾರಣೆಯ ಪ್ರಕರಣಗಳು ವರದಿಯಾಗಿದ್ದವು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಈ ಸಂಖ್ಯೆಗಳು ಹೆಚ್ಚು ವರದಿಯಾಗಿದ್ದವು. ಇದರಲ್ಲಿ ಬೀದರ್ (1,143), ಯಾದಗಿರಿ (921), ರಾಯಚೂರು (1,252), ಕೊಪ್ಪಳ (571), ಮತ್ತು ಕಲಬುರ್ಗಿ (1,511). ಮೈಸೂರಿನಲ್ಲಿ 1,370 ಹದಿಹರೆಯದ ಗರ್ಭಧಾರಣೆಗಳು ದಾಖಲಾಗಿದ್ದವು. ಉಡುಪಿಯಲ್ಲಿ ಅತಿ ಕಡಿಮೆ ಅಂದರೆ 44 ಪ್ರಕರಣಗಳು ವರದಿಯಾಗಿದ್ದವು.

 

2020 ರಲ್ಲಿ, 10,101 ಪ್ರಕರಣಗಳು ದಾಖಲಾಗಿದ್ದವು. ಮತ್ತು ನಂತರದ ವರ್ಷದಲ್ಲಿ ಕೋವಿಡ್-ಪ್ರೇರಿತ ಲಾಕ್‌ಡೌನ್ ಹೊರತಾಗಿಯೂ ಪ್ರಕರಣಗಳು 13,159 ಕ್ಕೆ ಏರಿದ್ದವು. ಇದು 2022 ರಲ್ಲಿ 19,561 ಕ್ಕೆ ಏರಿದ್ದರೇ , ನಂತರ ನವೆಂಬರ್ 2023 ರವರೆಗೆ 28,657 ಕ್ಕೆ ತಲುಪಿತ್ತು.

 

ಹುಡುಗಿಯರು 18 ವರ್ಷ ತುಂಬುವ ಮೊದಲೇ ಎರಡನೇ ಬಾರಿಗೆ ಗರ್ಭಿಣಿಯಾಗುವ ನೂರಾರು ಘಟನೆಗಳು ನಡೆದಿವೆ. ಆದರೆ ಆಕೆಯ ವಯಸ್ಸು 19 ವರ್ಷಕ್ಕಿಂತ ಮೇಲ್ಪಟ್ಟಿದೆ ಎಂದು ದಾಖಲಿಸಲಾಗುತ್ತದೆ. ಉದಾಹರಣೆಗೆ, ಮೊದಲ ಗರ್ಭಾವಸ್ಥೆಯಲ್ಲಿ, ವಯಸ್ಸನ್ನು 19 ಎಂದು ಮತ್ತು ಎರಡನೇ ಗರ್ಭಾವಸ್ಥೆಯಲ್ಲಿ, ವಯಸ್ಸನ್ನು 21 ಎಂದು ನಮೂದಿಸಲಾಗುತ್ತದೆ. ಆಕೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿರುತ್ತಾಳೆ. ಇದು ದತ್ತಾಂಶವನ್ನೇ ತಿರುಚಿದಂತೆ,’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರೊಬ್ಬರು.

 

ಕಲ್ಯಾಣ ಕರ್ನಾಟಕ, ಮಂಡ್ಯ ಭಾಗದಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿವೆ. ಹದಿನೆಂಟು ತುಂಬುವ ಮೊದಲೇ ವಿವಾಹ, ಅತ್ಯಾಚಾರ, ಪ್ರೀತಿಯ ನೆಪದಲ್ಲಿ ದೈಹಿಕ ಸಂಪರ್ಕ ಹೀಗೆ ಹಲವಾರು ರೀತಿಯಲ್ಲಿ ಅಪ್ರಾಪ್ತೆಯರು ಗರ್ಭಿಣಿಯರಾಗುತ್ತಿರುವ ಪ್ರಕರಣಗಳು ಬಯಲಾಗುತ್ತಲೇ ಇವೆ.

 

ಕೆಲವೊಂದು ಪ್ರಕರಣಗಳಲ್ಲಿ ಸಂತ್ರಸ್ತೆಯರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಗಳೂ ಬೆಳಕಿಗೆ ಬಂದಿದ್ದವು. ಇಂತಹ ಪ್ರಕರಣಗಳನ್ನು ಮುಚ್ಚಿಟ್ಟ ವಿಚಾರದಲ್ಲಿ ಈಗಾಲೇ 6 – 7 ವೈದ್ಯರ ಮೇಲೆಯೇ ಪ್ರಕರಣ ದಾಖಲಾಗಿತ್ತು. ಅಲ್ಲದೆ ಒಂದೆರಡು ನರ್ಸಿಂಗ್ ಹೋಮ್‌ಗಳನ್ನೇ ಮುಚ್ಚಲಾಗಿತ್ತು.

 

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಪ್ರಾಪ್ತ ಗರ್ಭಿಣಿಯರ ವರದಿಯಾಗಿತ್ತು ಉಡುಪಿಯಲ್ಲಿ ಅತಿ ಕಡಿಮೆ ಇದ್ದವು. ಹೆಚ್ಚಿನ ಜಿಲ್ಲೆಗಳಲ್ಲಿ 1,500-2,000 ಪ್ರಕರಣಗಳು ವರದಿಯಾಗಿದ್ದವು. ಅಪ್ರಾಪ್ತ ವಯಸ್ಸಿನ ಗರ್ಭಧಾರಣೆಗೆ “ಪ್ರೇಮ ಸಂಬಂಧ” ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಹೇಳಿದ್ದರು. ಕೆಲವು ಹೆರಿಗೆಗಳು ಮನೆಯಲ್ಲಿ ನಡೆದಿದ್ದವು., ಅನೇಕ ಸಂದರ್ಭಗಳಲ್ಲಿ ನವಜಾತ ಶಿಶುಗಳು ಸಾವನ್ನಪ್ಪಿದ್ದವು ಎಂದು ನಾಗಣ್ಣ ಗೌಡ ಹೇಳಿಕೆ ನೀಡಿದ್ದರು.

 

ಅಪ್ರಾಪ್ತ ವಯಸ್ಸಿನ ಗರ್ಭಪಾತಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಯೋಗವು ನಿರ್ಧರಿಸಿತ್ತು. ಆದರೆ ಈ ಸಂಬಂಧ ಕೈಗೊಂಡಿದ್ದ ಕಾನೂನು ಕ್ರಮಗಳ ಕುರಿತು ಮಾಹಿತಿಯು ಸಾರ್ವಜನಿಕವಾಗಿ ಲಭ್ಯವಿಲ್ಲ.

Your generous support will help us remain independent and work without fear.

Latest News

Related Posts