ಬೆಂಗಳೂರು; ನಿಗದಿತ ಕಾಲಾವಧಿಯೊಳಗೆ ಆಸ್ತಿ ದಾಯಿತ್ವ ಪಟ್ಟಿ ಸಲ್ಲಿಸಬೇಕು ಎಂದು ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಸೂಚಿಸಿದ್ದರೂ ಸಹ 6 ಸಚಿವರು ಸೇರಿದಂತೆ ಒಟ್ಟಾರೆ 94 ಮಂದಿ ಶಾಸಕರು 2024-25ನೇ ಸಾಲಿಗೆ ಸಂಬಂಧಿಸಿದ ಆಸ್ತಿ ವಿವರಗಳನ್ನು ಸಲ್ಲಿಸಿಯೇ ಇಲ್ಲ. ಲೋಕಾಯುಕ್ತ ಸಂಸ್ಥೆಯು ಈ ಎಲ್ಲಾ ಸಚಿವರು, ಶಾಸಕರಿಗೆ ಪ್ರತ್ಯೇಕವಾಗಿ ಜಾರಿಗೊಳಿಸಿದ್ದ ನೋಟೀಸ್‌ನ್ನು ಸಚಿವರು ಸೇರಿದಂತೆ ಶಾಸಕರು ಕಸದ ಬುಟ್ಟಿ ಎಸೆದಿರುವುದು ಬಹಿರಂಗವಾಗಿದೆ.
ಆಸ್ತಿ ವಿವರ ಪಟ್ಟಿ ಸಲ್ಲಿಸದೇ ಇರುವ ಸಚಿವರು ಮತ್ತು ಶಾಸಕರ ಪಟ್ಟಿಯನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಯು 2025ರ ನವೆಂಬರ್ 4ರಂದು ಬಿಡುಗಡೆಗೊಳಿಸಿದೆ. ಈ ಪಟ್ಟಿಯು ದಿ ಫೈಲ್ ಗೆ ಲಭ್ಯವಾಗಿದೆ.
ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಅಧಿನಿಯಮ ಕಲಂ 22 (1)ರ ಕಲಂ ಉಪ ಕಲಂ (1)ರ ಪ್ರಕಾರ ಸರ್ಕಾರಿ ನೌಕರನಲ್ಲದ ಪ್ರತಿಯೊಬ್ಬ ಸಾರ್ವಜನಿಕ ನೌಕರನು 30ನೇ ಜೂನ್‌ಗಿಂತ ಮುಂಚಿತವಾಗಿ ಪ್ರತಿ ರ್ಷವೂ ತನ್ನ ಮತ್ತು ತನ್ನ ಕುಟುಂಬದ ಆಸ್ತಿ ಮತ್ತು ದಾಯಿತ್ವಗಳ ವಿವರಣಾ ಪಟ್ಟಿಯನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಬೇಕು.
ಅಧಿನಿಯಮದಲ್ಲಿ ನಿಗದಿಪಡಿಸಿರುವಂತೆ ಆಸ್ತಿ ಮತ್ತು ದಾಯಿತ್ವಗಳ ವಿವರಣಾ ಪಟ್ಟಿ ಸಲ್ಲಿಸದಿರುವಿಕೆಯ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ಲೋಕಾಯುಕ್ತರು ವರದಿ ಮಾಡಬೇಕು. ಸಂಬಂಧಪಟ್ಟ ಸಾರ್ವಜನಿಕ ನೌಕರನಿಗೆ ಅಧಿನಿಯಮದ ಕಲಂ 22(1)ರಲ್ಲಿರುವಂಗೆ ವರದಿಯನ್ನು ಕಳಿಸಲಾಗಿತ್ತು. ಈ ವರದಿಯನ್ನು ಕಳಿಸಿದ ಎರಡು ತಿಂಗಳೊಳಗೆ ಸಂಬಂಧಪಟ್ಟ ಸಾರ್ವಜನಿಕ ನೌಕರರು ಅಧಿನಿಯಮ ಕಲಂ 22(2)ನ್ನು ಪಾಲಿಸುವಲ್ಲಿ ವಿಫಲನಾದಲ್ಲಿ ಲೋಕಾಯುಕ್ತರು ಅಂತಹ ತಪ್ಪಿತಸ್ಥ ಸಾರ್ವಜನಿಕ ನೌಕರರ ಹೆಸರುಗಳನ್ನು ರಾಜ್ಯದಲ್ಲಿ ಪ್ರಚಲಿತವಾಗಿರುವ ಮೂರು ವೃತ್ತಿಪತ್ರಿಕೆಗಳಲ್ಲಿ ಪ್ರಕಟಿಸಲಿದೆ.

ಸಾರ್ವಜನಿಕ ನೌಕರ ಎಂಬ ವ್ಯಾಖ್ಯಾನದ ಅಡಿಯಲ್ಲಿ ವಿದಾನಸಭಾ ಮತ್ತು ವಿಧಾನ ಪರಿಷತ್ ಎಲ್ಲಾ ಸದಸ್ಯರೂ ಸೇರಿರುತ್ತಾರೆ. ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿರುವ 2025ರ ಆಗಸ್ಟ್ 28ರಂದೇ ವರದಿಯನ್ನು ಸಚಿವರು, ಶಾಸಕರಿಗೆ ಜಾರಿಯಾಗಿತ್ತು. ಆಧರೂ ಸಹ ಆಸ್ತಿ ಮತ್ತು ದಾಯಿತ್ವದ ವಿವರಣಾ ಪಟ್ಟಿಯನ್ನು ಸಲ್ಲಿಸುವಲ್ಲಿ ವಿಫಲರಾಗಿರುವುದು ಪಟ್ಟಿಯಿಂದ ತಿಳಿದು ಬಂದಿದೆ.
ಆಸ್ತಿ ಮತ್ತು ದಾಯಿತ್ವ ವಿವರಗಳನ್ನು ಸಲ್ಲಿಸದೇ ಇರುವ ಸಚಿವರ ಪಟ್ಟಿ
ಕೆ ಹೆಚ್ ಮುನಿಯಪ್ಪ, ದಿನೇಶ್ ಗುಂಡೂರಾವ್, ಬಿ ಝಡ್ ಜಮೀರ್ ಅಹಮದ್ ಖಾನ್, ರಹೀಂ ಖಾನ್, ಕೆ ವೆಂಕಟೇಶ್, ಕೆ ಎನ್ ರಾಜಣ್ಣ

ವಿಧಾನಸಭೆ ಸದಸ್ಯರ ಪಟ್ಟಿ
ಲಕ್ಷ್ಮಣ ಸವದಿ, ಅಶೋಕ್ ಮಹಾದೇವಪ್ಪ ಪಟ್ಟಣ, ಹೆಚ್ ವಾಯ್ ಮೇಟಿ, ವಿಜಯಾನಂದ ಕಾಶಪ್ಪನವರ, ಕಟಕದೊಂಡ ವಿಠಲ ದೊಂಡಿಬಾ, ಎಂ ವೈ ಪಾಟೀಲ್, ಅಲ್ಲಮ ಪ್ರಭು ಪಾಟೀಲ್, ಕನೀಝ್ ಫಾತಿಮಾ, ಶರಣು ಸಲಗರ, ಸಿದ್ದಪಾಟೀಲ, ಬಸನಗೌಡ ತುರವಿಹಾಳ, ಜಿ ಜನಾರ್ದನ ರೆಡ್ಡಿ, ಬಸವರಾಜ ರಾಯರೆಡ್ಡಿ, ಕೆ ರಾಘವೇಂದ್ರ ಹಿಟ್ನಾಳ್, ಗುರುಪಾದಗೌಡ ಸಂಗನಗೌಡ ಪಾಟೀಲ್, ಎನ್ ಹೆಚ್ ಕೋನರೆಡ್ಡಿ, ವಿನಯ ಕುಲಕರ್ಣಿ, ಸತೀಶ್ ಸೈಲ್, ದಿನಕರ್ ಕೇಶವ್ ಶೆಟ್ಟಿ, ಬಸವರಾಜ ನೀಲಪ್ಪ ಶಿವಣ್ಣನವರ್, ಜೆ ಎನ್ ಗಣೇಶ್, ಎನ್ ವೈ ಗೋಪಾಲಕೃಷ್ಣ, ಎಂ ಚಂದ್ರಪ್ಪ, ಲತಾ ಮಲ್ಲಿಕಾರ್ಜುನ, ಕೆ ಎಸ್ ಬಸವಂತಪ್ಪ,

ಶಾರದಾ ಪೂರ್ಯನಾಯಕ್, ಬಿ ಕೆ ಸಂಗಮೇಶ್ವರ್, ಟಿ ಡಿ ರಾಜೇಗೌಡ, ನಯನಾ ಮೋಟಮ್ಮ, ಜಿ ಹೆಚ್ ಶ್ರೀನಿವಾಸ್, ಆನಂಧ್ ಕೆ ಎಸ್, ಸಿ ಬಿ ಸುರೇಶ್ ಬಾಭು, ಡಾ ಹೆಚ್ ಡಿ ರಂಗನಾಥ್, ಬಿ ಸುರೇಶ್ ಗೌಡ, ಹೆಚ್ ವಿ ವೆಂಕಟೇಶ್, ಕೆ ಹೆಚ್ ಪುಟ್ಟಸ್ವಾಮಿಗೌಡ, ಎಸ್ ಎನ್ ಸುಬ್ಬಾರೆಡ್ಡಿ, ಬಿ ಎನ್ ರವಿಕುಮಾರ್, ಜಿ ಕೆ ವೆಂಕಟಶಿವರೆಡ್ಡಿ, ಸಮೃದ್ಧಿ ವಿ ಮಂಜುನಾಥ್, ರೂಪಕಲಾ ಎಂ, ಕೆ ವೈ ನಂಜೇಗೌಡ, ಕೆ ಗೋಪಾಲಯ್ಯ, ಎ ಸಿ ಶ್ರೀನಿವಾಸ, ಎನ್ ಎ ಹ್ಯಾರೀಸ್, ಬಿ ಶಿವಣ್ಣ, ಶ್ರೀನಿವಾಸಯ್ಯ ಎನ್, ಹೆಚ್ ಸಿ ಬಾಲಕೃಷ್ಣ,

ಸಿ ಪಿ ಯೋಗೇಶ್ವರ, ಉದಯ ಕೆ ಎಂ, ದರ್ಶನ ಪುಟ್ಟಣ್ಣಯ್ಯ, ರವಿಕುಮಾರ್ ಗಣಿಗ, ಎ ಬಿ ರಮೇಶ್ ಬಂಡಿಸಿದ್ದೇಗೌಡ, ಸಿ ಎನ್ ಬಾಲಕೃಷ್ಣ, ಹೆಚ್ ಕೆ ಸುರೇಶ್, ಹೆಚ್ ಡಿ ರೇವಣ್ಣ, ಎ ಮಂಜು, ಸಿಮೆಂಟ್ ಮಂಜು, ಡಾ ಭರತ್ ಶೆಟ್ಟಿ ವೈ, ಭಾಗೀರಥಿ ಮುರುಳ್ಯ, ರವಿಶಂಕರ್ ಡಿ , ಅನಿಲ್ ಚಿಕ್ಕಮಾದು, ಕೆ ಹರೀಶ್ ಗೌಡ, ಎಂ ಆರ್ ಮಂಜುನಾಥ್, ಎ ಆರ್ ಕೃಷ್ಣಮೂರ್ತಿ, ಸಿ ಪುಟ್ಟರಂಗಶೆಟ್ಟಿ ಅವರು ಆಸ್ತಿ ದಾಯಿತ್ವ ಪಟ್ಟಿಯನ್ನು ಸಲ್ಲಿಸದೇ ಇರುವುದು ಪಟ್ಟಿಯಿಂದ ಗೊತ್ತಾಗಿದೆ.

ವಿಧಾನ ಪರಿಷತ್ ಸದಸ್ಯರ ಪಟ್ಟಿ
ಸಲೀಂ ಅಹ್ಮದ್, ಎಚ್ ವಿಶ್ವನಾಥ್ , ಕೆ ಅಬ್ದುಲ್ ಜಬ್ಬಾರ್, ಎಂ ಎಲ್ ಅನಿಲ್ ಕುಮಾರ್, ಬಸನಗೌಡ ಬಾದರ್ಲಿ, ಗೋವಿಂದರಾಜು, ಐವನ್ ಡಿಸೋಜಾ, ಟಿ ಎನ್ ಜವರಾಯಿಗೌಡ, ಸಿ ಎನ್ ಮಂಜೇಗೌಡ, ಡಾ ಎಂ ಜಿ ಮುಳೆ, ಎಂ ಟಿ ಬಿ ನಾಗರಾಜು, ನಸೀರ್ ಅಹ್ಮದ್, ಕೆ ಎಸ್ ನವೀನ್,

ಪ್ರದೀಪ್ ಶೆಟ್ಟರ್, ಪಿ ಹೆಚ್ ಪೂಜಾರ್, ರಾಜೇಂದ್ರ ರಾಜಣ್ಣ, ರಾಮೋಜಿಗೌಡ, ಶಶಿಲ್ ಜಿ ನಮೋಶಿ, ಎಸ್ ವಿ ಸಂಕನೂರ, ಸುನೀಲ್ ವಲ್ಯಾಪೂರ್, ಸುನೀಲ್ ಗೌಡ ಪಾಟೀಲ್, ಶರವಣ ಟಿ ಎ, ವೈ ಎಂ ಸತೀಶ್, ಸೂರಜ್ ರೇವಣ್ಣ, ಹೆಚ್ ಪಿ ಸುಧಾಮ ದಾಸ್, ತಿಪ್ಪಣ್ಣಪ್ಪ ಕಮಕನೂರ, ಡಾ ಡಿ ತಿಮ್ಮಯ್ಯ, ಕೆ ವಿವೇಕಾನಂದ ಅವರು ಆಸ್ತಿ ವಿವರಗಳನ್ನು ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ.

ಸಚಿವ ಡಿ ಸುಧಾಕರ್ ಅವರು ಆಸ್ತಿ ದಾಯಿತ್ವ ಪಟ್ಟಿ ಸಲ್ಲಿಸಿದ್ದಾರೆ. ಅದೇ ರೀತಿ ಬಿ ಎಂ ನಾಗರಾಜು, ಎಂ ಟಿ ಕೃಷ್ಣಪ್ಪ, ಪಠಾಣ್ ಯಾಸೀರ್ ಅಹ್ಮದ್ ಖಾನ್, ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಅವರು ನಿಗದಿತ ಕಾಲಾವಧಿ ಮುಗಿದ ನಂತರ ಆಸ್ತಿ ವಿವರ ಸಲ್ಲಿಸಿದ್ದಾರೆ.









