ಬೆಂಗಳೂರು; ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಪರೀಕ್ಷಾ ಶುಲ್ಕ ಸ್ವೀಕೃತಿಗೆ ಸಂಬಂಧಿಸಿದಂತೆ ಗಣಕೀಕೃತ ವಿಭಾಗವು ನೀಡಿದ್ದ ತಃಖ್ತೆಯಲ್ಲಿನ ಮೊತ್ತಕ್ಕೂ ವಾರ್ಷಿಕ ಲೆಕ್ಕಪತ್ರದಲ್ಲಿ ನಮೂದಿಸಿರುವ ಮೊತ್ತಕ್ಕೂ ಹಾಗೂ ಬ್ಯಾಂಕ್ ಖಾತೆಗಳ ಸ್ವೀಕೃತಿಗೂ ವ್ಯತ್ಯಾಸವಿದೆ. ಅಲ್ಲದೇ ಪರೀಕ್ಷಾ ಶುಲ್ಕದಲ್ಲಿ ಕಡಿಮೆ ಪಾವತಿಸಿರುವುದನ್ನೂ ಲೆಕ್ಕಪರಿಶೋಧಕರು ಪತ್ತೆ ಹಚ್ಚಿದ್ದಾರೆ.
2023-24ನೇ ಸಾಲಿಗೆ ಸಂಬಂಧಿಸಿದಂತೆ ಪೂರ್ಣಗೊಂಡಿರುವ ಲೆಕ್ಕ ಪರಿಶೋಧನೆ ವರದಿಯು, ವಿಶ್ವವಿದ್ಯಾಲಯದ ಆರ್ಥಿಕ ಅಶಿಸ್ತಿನ ಮುಖವನ್ನು ತೆರೆದಿಟ್ಟಿದೆ. ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ವಾರ್ಷಿಕ ಲೆಕ್ಕಪತ್ರಕ್ಕೆ ಸಂಬಂಧಿಸಿದಂತೆ ಈ ಸಂಬಂಧ ಲೆಕ್ಕಪರಿಶೋಧಕರು ವಿಶ್ವವಿದ್ಯಾಲಯಕ್ಕೆ 2024ರ ಅಕ್ಟೋಬರ್ 3ರಂದು ಲೆಕ್ಕಪತ್ರ ವಿಚಾರಣೆ ನೋಟೀಸ್ ಜಾರಿಗೊಳಿಸಿತ್ತು. ವಿಶ್ವವಿದ್ಯಾಲಯದ ಗಣಕೀಕೃತ ಹಾಗೂ ವಿದ್ಯಾರ್ಥಿ ಕಲ್ಯಾಣ ವಿಭಾಗವು ಪರೀಕ್ಷಾ ಶುಲ್ಕಕ್ಕೆ ಸಂಬಂಧಿಸಿದಂತೆ 32,14,10,260 ರು ಮೊತ್ತವಿತ್ತು. ವಿಶ್ವವಿದ್ಯಾಲಯದ ವಾರ್ಷಿಕ ಲೆಕ್ಕಪತ್ರದಲ್ಲಿ ಶೀರ್ಷಿಕೆವಾರು ನಮೂದಿಸಿದ್ದ 116.64,61,585 ರು ಮೊತ್ತಕ್ಕೂ ವ್ಯತ್ಯಾಸ ಕಂಡು ಬಂದಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವುದು ಗೊತ್ತಾಗಿದೆ.

ಗಣಕೀಕೃತ ಹಾಗೂ ವಿದ್ಯಾರ್ಥಿ ಕಲ್ಯಾಣ ವಿಭಾಗವು ಒದಗಿಸಿದ್ದ ಪರೀಕ್ಷಾ ಶುಲ್ಕದ ಸ್ವೀಕೃತಿ ತಃಖ್ತೆಯ ಮೊತ್ತಕ್ಕಿಂತ ವಾರ್ಷಿಕ ಲೆಕ್ಕಪತ್ರದಲ್ಲಿ ಸ್ವೀಕೃತಿ ಮೊತ್ತವನ್ನು ಕಡಿಮೆ ತೋರಿಸಿತ್ತು. ವಾರ್ಷಿಕ ಲೆಕ್ಕಪತ್ರದ ಪ್ರಕಾರ ಪರೀಕ್ಷಾ ಶುಲ್ಕವು 100,63,72,980 ರು ಇತ್ತು. ಗಣಕೀಕೃತ ಹಾಗೂ ವಿದ್ಯಾರ್ಥಿ ಕಲ್ಯಾಣ ವಿಭಾಗವು 1,26, 03, 850 ರು ಇತ್ತು. ಅಂಕಪಟ್ಟಿ ಶುಲ್ಕಕ್ಕೆ ಸಂಬಂಧಿಸಿದಂತೆ ವಾರ್ಷಿಕ ಲೆಕ್ಕಪತ್ರದ ಪ್ರಕಾರ 17,13,800 ರು ಇತ್ತು.
ಆದರೆ ವಿದ್ಯಾರ್ಥಿ ಕಲ್ಯಾಣ ವಿಭಾಗವು ಮಾಹಿತಿಯನ್ನೇ ಒದಗಿಸಿರಲಿಲ್ಲ. ತಡವಾಗಿ ಪರೀಕ್ಷಾ ಶುಲ್ಕ ವನ್ನು ಜಮೆ ಮಾಡಿದ್ದಕ್ಕೆ ವಿಧಿಸಿದ್ದ ದಂಡದ ಮೊತ್ತವು ವಾರ್ಷಿಕ ಲೆಕ್ಕಪತ್ರದ ಪ್ರಕಾರ 57,88, 920 ರು ಇತ್ತು. ವಿದ್ಯಾರ್ಥಿ ಕಲ್ಯಾಣ ವಿಭಾಗವು ಒದಗಿಸಿದ್ದ ಮಾಹಿತಿ ಪ್ರಕಾರ 63,58,900ರು ಇತ್ತು. ಅಂಕಗಳ ಮರು ಎಣಿಕೆ, ಉತ್ತರ ಪತ್ರಿಕೆಗಳ ನಕಲು ಪ್ರತಿ ಒದಗಿಸಲು 22,33,600 ರು ಇತ್ತು. ವಿದ್ಯಾರ್ಥಿ ಕ್ಷೇಮ ಕಲ್ಯಾಣ ನಿಧಿ ವಿಭಾಗವು ಯಾವುದೇ ಮಾಹಿತಿಯನ್ನು ಒದಗಿಸಿರಲಿಲ್ಲ.
ವಾರ್ಷಿಕ ಲೆಕ್ಕಪತ್ರದಲ್ಲಿ ನಮೂದಿಸಿದ್ದ ಪ್ರಕಾರ ಟ್ರಾನ್ಸ್‌ಸ್ಕ್ರಿಪ್ಟ್ ಶುಲ್ಕದ ಹೆಸರಿನಲ್ಲಿ 4,47,42, 700 ರು ಇತ್ತು. ಈ ಸಂಬಂಧವೂ ವಿದ್ಯಾರ್ಥಿ ಕ್ಷೇಮ ಕಲ್ಯಾಣ ನಿಧಿ ವಿಭಾಗವು ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ದಂಡಕ್ಕೆ ಸಂಬಂಧಿಸಿದಂತೆ ವಾರ್ಷಿಕ ಲೆಕ್ಕಪತ್ರದಲ್ಲಿ ಯಾವುದೇ ಮೊತ್ತವನ್ನು ನಮೂದಿಸಿರಲಿಲ್ಲ. ಆದರೆ ವಿದ್ಯಾರ್ಥಿ ಕ್ಷೇಮ ಕಲ್ಯಾಣ ವಿಭಾಗವು 63,58, 900 ರು ಲೆಕ್ಕ ಕೊಟ್ಟಿತ್ತು.
ಅರ್ಜಿ ಶುಲ್ಕಕ್ಕೆ ಸಂಬಂಧಿಸಿದಂತೆ ವಾರ್ಷಿಕ ಲೆಕ್ಕಪತ್ರದ ಪ್ರಕಾರ 41,08, 305 ರು ಇತ್ತು. ವಿದ್ಯಾರ್ಥಿ ಕಲ್ಯಾಣ ವಿಭಾಗದ ಮಾಹಿತಿ ಪ್ರಕಾರ 2,22, 82, 200 ರು ಇತ್ತು. ವಾರ್ಷಿಕ ಲೆಕ್ಕಪತ್ರದ ಪ್ರಕಾರ ಘಟಿಕೋತ್ಸವ ಶುಲ್ಕವು 16,000 ರು ಇತ್ತು. ಆದರೆ ವಿದ್ಯಾರ್ಥಿ ಕಲ್ಯಾಣ ವಿಭಾಗದ ಪ್ರಕಾರ 13,79,88,000 ರು ಇತ್ತು. ಎನ್‌ಒಸಿ ಶುಲ್ಕವು 12,80,000 ರು ಇತ್ತು. ವಲಸೆ ಪ್ರಮಾಣ ಪತ್ರ ಶುಲ್ಕವು 8,96,6000 ರು ಇತ್ತು. ಈ ಎರಡೂ ವಿಭಾಗಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಕಲ್ಯಾಣ ವಿಭಾಗವು ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.
ಅರ್ಹತಾ ಶುಲ್ಕವು ವಾರ್ಷಿಕ ಲೆಕ್ಕಪತ್ರದ ಪ್ರಕಾರ 5,97,85,000 ರು ಇತ್ತು. ವಿದ್ಯಾರ್ಥಿ ಕಲ್ಯಾಣ ವಿಭಾಗವು ಯಾವುದೇ ಲೆಕ್ಕವನ್ನು ಕೊಟ್ಟಿರಲಿಲ್ಲ. ವಿಷಯ ಶುಲ್ಕವು 13,57,07, 000 ರು ಇತ್ತು. ಪುನರಾವರ್ತಿತ ವಿದ್ಯಾರ್ಥಿಗಳ ಅರ್ಜಿ ಶುಲ್ಕವು 1,14,411 ರು ಇತ್ತು. ಹೆಸರು ಬದಲಾವಣೆಗೆ 12,78,3,080 ರು ಇತ್ತು. ಪರೀಕ್ಷಾ ಶುಲ್ಕದ ಹೆಚ್ಚುವರಿ ಶುಲ್ಕವು 12,85,2,700 ರು ಇತ್ತು. ಒಟ್ಟಾರೆ ವಾರ್ಷಿಕ ಲೆಕ್ಕ ಪತ್ರದ ಪ್ರಕಾರ 116,64,61, 585 ರು ಇತ್ತು. ಆದರೆ ವಿದ್ಯಾರ್ಥಿ ಕ್ಷೇಮ ಕಲ್ಯಾಣ ವಿಭಾಗದ ಪ್ರಕಾರ 32,14,10, 261 ರು ಇತ್ತು.

ಪರೀಕ್ಷಾ ಶುಲ್ಕ ಸ್ವೀಕೃತಿ ಕುರಿತಂತೆ ನಿಖರವಾದ ವರ್ಗೀಕರಣ ದಾಖಲಾತಿ ಲೆಕ್ಕಪತ್ರಗಳಲ್ಲಿ ಕೈಗೊಳ್ಳದ ಕಾರಣ ಲೆಕ್ಕ ಪರಿಶೋಧನೆಗೆ ಯಾವ ಮೊತ್ತವನ್ನು ಪರಿಗಣಿಸಬೇಕು, ರಾಜಸ್ವ ಸ್ವೀಕೃತಿ ಮೇಲಿನ ಸೂಕ್ತ ನಿಯಂತ್ರಣ ಹಾಗೂ ಈ ಮೇಲಿನ ವ್ಯತ್ಯಾಸಗಳ ಕುರಿತು ಸ್ಪಷ್ಟೀಕರಣವನ್ನು ಲೆಕ್ಕ ಪರಿಶೋಧನೆಗೆ ಒದಗಿಸಬೇಕು ಎಂದು 2024ರ ನವೆಂಬರ್ 12ರಂದು ವಿಚಾರಣೆ ನೋಟೀಸ್ ಕಳಿಸಿತ್ತು.
ಈ ಸಂಬಂಧ ಲೆಕ್ಕ ಸಮನ್ವಯಗೊಳಿಸಿ ಲೆಕ್ಕ ಪರಿಶೋಧನೆಗೆ ವಿವರಗಳನ್ನು ಹಾಜರುಪಡಿಸಲಾಗುವುದು ಎಂದು ವಿಶ್ವವಿದ್ಯಾಲಯವು ತಿಳಿಸಿರುವುದು ವರದಿಯಿಂದ ಗೊತ್ತಾಗಿದೆ.
ರಾಮನಗರದ ಅರ್ಚಕರಹಳ್ಳಿಯಲ್ಲಿ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯು ನೀಡಿದ್ದ ಶಿಫಾರಸ್ಸನ್ನು ವಿಶ್ವವಿದ್ಯಾಲಯವು ಪರಿಗಣಿಸಿರಲಿಲ್ಲ.
ರಾಮನಗರದಲ್ಲಿ 400 ಕೋಟಿ ಅನುತ್ಪಾದಕ ವೆಚ್ಚ; ಟೆಂಡರ್ ಪೂರ್ವ ಪರಿಶೀಲನಾ ಸಮಿತಿ ಅಭಿಪ್ರಾಯ ಬದಿಗೊತ್ತಿದ್ದೇಕೆ?
442 ಕೋಟಿ ರು ಮೌಲ್ಯದ ಸ್ಥಿರಾಸ್ತಿಹ ಹೊಂದಿರುವ ವಿಶ್ವವಿದ್ಯಾಲಯವು ಭೌತಿಕ ಆಸ್ತಿಯ ಮಾಹಿತಿಯನ್ನು ಲೆಕ್ಕ ಪರಿಶೋಧಕರಿಗೆ ಒದಗಿಸಿರಲಿಲ್ಲ.
442.03 ಕೋಟಿ ರು ಮೌಲ್ಯದ ಸ್ಥಿರಾಸ್ತಿ; ಭೌತಿಕ ಆಸ್ತಿಗಳ ವಿವರಗಳನ್ನೇ ಲೆಕ್ಕಪರಿಶೋಧನೆಗೆ ಒದಗಿಸದ ವಿವಿ
ವಿಶ್ವವಿದ್ಯಾಲಯವು ಅಂದಾಜು ಮೊತ್ತವನ್ನು ಮೀರಿ ವೆಚ್ಚ ಮಾಡಿತ್ತು.
ಅಂದಾಜು ಮೊತ್ತ ಮೀರಿ ವೆಚ್ಚ, ವಿವಿಧ ಶುಲ್ಕ, ಬಡ್ಡಿ ನಿರ್ವಹಣೆಯಲ್ಲಿ ಲೋಪ; ಬೇಜವಾಬ್ದಾರಿ ಬಯಲು
ವಿಶ್ವವಿದ್ಯಾಲಯವು ಸಂಗ್ರಹಿಸಿದ್ದ ಸಂಯೋಜನೆ ಶುಲ್ಕದಲ್ಲೂ ವ್ಯತ್ಯಾಸ ಕಂಡು ಬಂದಿತ್ತು.
ಸಂಯೋಜನೆ ಶುಲ್ಕ; 42.03 ಕೋಟಿ ಸಂಗ್ರಹ, 6.51 ಕೋಟಿ ರು ವ್ಯತ್ಯಾಸ, ವಿವಿ ಬಳಿ ಪೂರಕ ದಾಖಲೆಗಳೇ ಇಲ್ಲ
ವಿಶ್ವವಿದ್ಯಾಲಯದಲ್ಲಿ ಆರ್ಥಿಕ ಅಶಿಸ್ತು ಕಂಡು ಬಂದಿರುವ ಲೆಕ್ಕ ಪರಿಶೋಧನೆ ವರದಿಯು ಬಯಲು ಮಾಡಿದ್ದರೂ ಸಹ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಅವರು ಯಾವುದೇ ಕ್ರಮ ವಹಿಸಿಲ್ಲ ಎಂದು ತಿಳಿದು ಬಂದಿದೆ.









