ಬೆಂಗಳೂರು; ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿನ ವೈದ್ಯಕೀಯ ಕಾಲೇಜುಗಳ ಸಂಯೋಜನೆ, ನವೀಕರಣದಲ್ಲಿಯೂ ಹಲವು ಲೋಪಗಳನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.
2023-24ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯಲ್ಲಿ ವಿಶ್ವವಿದ್ಯಾಲಯದ ಕಾಲೇಜುಗಳ ಸಂಯೋಜನೆ,ನವೀಕರಣದಲ್ಲಿನ ಲೋಪಗಳನ್ನು ವಿವರಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿನ ಆರ್ಥಿಕ ಅಶಿಸ್ತಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸಚಿವ ಡಾ ಶರಣ ಪ್ರಕಾಶ ಪಾಟೀಲ್ ಅವರು ಯಾವುದೇ ಕ್ರಮ ಜರುಗಿಸಿಲ್ಲ.
ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

42.03 ಕೋಟಿ ಸಂಯೋಜನೆ ಶುಲ್ಕ, ಪೂರಕ ದಾಖಲೆಗಳೇ ಇಲ್ಲ
2023-24ನೇ ಸಾಲಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಒಟ್ಟಾರೆ 42,03,54,809 ರುಗ.ಳನ್ನು ಸಂಯೋಜನಾ ಶುಲ್ಕವನ್ನು ಪಡೆದಿದೆ. ಈ ಸಂಬಂಧ ಹೊಸ ಸಂಯೋಜನೆ, ನವೀಕರಣಕ್ಕೆ ಸಂಬಂಧಿಸಿದ ಶುಲ್ಕವಾಗಿತ್ತು. ಆದರೆ ಹೊಸ ಸಂಯೋಜನೆಗೆ ಸಂಬಂಧಿಸಿದಂತೆ 2023-24ನೇ ಸಾಲಿನಲ್ಲಿ ಎಷ್ಟು ಅರ್ಜಿಗಳನ್ನು ಸ್ವೀಕರಿಸಲಾಗಿದೆ, ಅನುಮೋದಿಸಿರುವ ಸಂಖ್ಯೆಗಳೆಷ್ಟು ಹಾಗೂ ತಿರಸ್ಕೃತಗೊಂಡಿರುವ ಸಂಖ್ಯೆಗಳೆಷ್ಟು ಎಂಬುದರ ಬಗ್ಗೆ ಪೂರಕ ದಾಖಲೆಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.

ಈ 42,03,54,809 ರು.ಗಳು ವಿವಿಧ ನಿಕಾಯಗಳಿಗೆ ಸಂಬಂಧಿಸಿವೆ. ಆದರೆ ಪ್ರತ್ಯೇಕ ನಿಕಾಯಕ್ಕೆ ಸಂಬಂಧಿಸಿದಂತೆ ಲೆಕ್ಕಚಾರದ ತಃಖ್ತೆ ತಯಾರಿಸಿ ನಿರ್ವಹಿಸಬೇಕು. ಈ ರೀತಿಯ ಮಾರ್ಗಸೂಚಿಯನ್ನು ಪ್ರತೀ ಲೆಕ್ಕ ಪರಿಶೋಧನೆಯಲ್ಲಿಯೂ ಮೌಖಿಕವಾಗಿ ಮತ್ತು ಲೆಕ್ಕ ವಿಚಾರಣೆ ಪತ್ರಗಳಲ್ಲಿಯೂ ತಿಳಿಸಲಾಗಿತ್ತು.
ಆದರೂ ಸಹ ಯಾವುದೇ ದಾಖಲಾತಿಗಳನ್ನು ಸಂಬಂಧಪಟ್ಟ ಶಾಖೆಯವರು ನಿರ್ವಹಿಸಿಲ್ಲ. ಇದು ಉದಾಸೀನತೆಯಾಗಿದೆ. ಈ ಕಾರಣಗಳಿಂದ ಪ್ರತಿ ವರ್ಷವು ವಿಶ್ವವಿದ್ಯಾಲಯದಿಂದ ನೀಡುತ್ತಿರುವ ಸಂಯೋಜನೆಯು ನಿಖರವಾಗಿದೆಯೇ ಇಲ್ಲವೇ ಎಂಬ ಬಗ್ಗೆ ಖಾತರಿಪಡಿಸಲು ಲೆಕ್ಕ ಪರಿಶೋಧನೆಗೆ ಸಾಧ್ಯವಾಗಿಲ್ಲ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಅಭಿಪ್ರಾಯಿಸಿರುವುದು ಗೊತ್ತಾಗಿದೆ.
ಅಲ್ಲದೆ 2023-24ನೇ ಸಾಲಿನಲ್ಲಿ ಮಾನ್ಯತೆ, ಸಂಯೋಜನೆ ಶುಲ್ಕಕ್ಕೆ ಸಂಬಂಧಿಸಿದಂತೆ ವಾರ್ಷಿಕ ಲೆಕ್ಕಪತ್ರಗಳ ಅನ್ವಯ 42,03,54,809 ರು.ಗಳು ಸ್ವೀಕೃತಿಯಾಗಿದೆ ಎಂದು ನಮೂದಿಸಲಾಗಿದೆ. ವಿವಿಧ ನಿಕಾಯಗಳು ಪ್ರತ್ಯೇಕವಾಗಿ ನೀಡಲಾದ ಕಡತಗಳು ಮತ್ತು ಬೇಡಿಕೆ ಸಂಗ್ರಹಣೆ, ಬಾಕಿ ಶುಲ್ಕ ತಃಖ್ತೆಯ ವಿವರಗಳನ್ನು ವಿಭಾಗದಿಂದ ಒದಗಿಸಲಾಘದ ಕಡತಗಳನ್ನು, ಚಲನ್‌ಗಳನ್ಉ ಪರಿಶೀಲಿಸಲಾಗಿದೆ. ಇದರ ಪ್ರಕಾರ ಸಂಯೋಜನೆ ಶುಲ್ಕ ಒಟ್ಟು 35,52,23,162 ರು.ಗಳು ಸ್ವೀಕೃತವಾಗಿರುವುದನ್ನು ಲೆಕ್ಕ ಪರಿಶೋಧನೆ ವೇಳೆಯಲ್ಲಿ ಕಂಡು ಹಿಡಿದಿದೆ.
ವಾರ್ಷಿಕ ಲೆಕ್ಕಪತ್ರಗಳ ಸಂಯೋಜನಾ ಶುಲ್ಕಕ್ಕೂ ವಿಭಾಗದಿಂದ ಒದಗಿಸಿದ ಕಡತಗಳ ಅನ್ವಯ ಸಂಗ್ರಹವಾಗಿರುವ ಮೊತ್ತಕ್ಕೂ 6,51,31,647 ರು ವ್ಯತ್ಯಾಸವಿದೆ. ಈ ಬಗ್ಗೆ ಲೆಕ್ಕಪತ್ರ ವಿಚಾರಣೆ ನೋಟೀಸ್ ಕೂಡ ನೀಡಲಾಗಿತ್ತು.

ಪ್ರವೇಶಾತಿ ಶುಲ್ಕಕ್ಕೆ ಸಂಬಂಧಿಸಿದ ಬೇಡಿಕೆ ಸಂಗ್ರಹಣೆ ಹಾಗೂ ಬಾಕಿ ಶುಲ್ಕ ತಃಖ್ತೆಯಲ್ಲಿನ ಮೊತ್ತಕ್ಕೂ ವಿಶ್ವವಿದ್ಯಾಲಯದ ವಾರ್ಷಿಕ ಲೆಕ್ಕಪತ್ರದಲ್ಲಿ ನಮೂದಿಸಿರುವ 42,03,54,809 ರು ಗಳ ಮೊತ್ತಕ್ಕೂ ವ್ಯತ್ಯಾಸ ಕಂಡು ಬಂದಿದೆ.

ಇದಲ್ಲದೇ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿನ 1,043 ಕಾಲೇಜುಗಳ ಪೈಕಿ 147 ವೈದ್ಯಕೀಯ ಕಾಲೇಜುಗಳಿಂದ ಒಟ್ಟಾರೆ 3,24,725 ರು.ಗಳನ್ನು ಹೆಚ್ಚುವರಿಯಾಗಿ ಸಂಗ್ರಹಿಸಿತ್ತು. ಹಾಗೆಯೇ ಕೆಲವು ಫಾರ್ಮಸಿ, ನರ್ಸಿಂಗ್ ಕಾಲೇಜುಗಳು ಸಂಯೋಜನೆ ಶುಲ್ಕದಲ್ಲಿಯೇ ಕಡಿಮೆ ಪಾವತಿಸಿತ್ತು. ಇದರ ಒಟ್ಟುಮೊತ್ತ 17,72,116 ರು.ಗಳಷ್ಟಿತ್ತು. ಈ ಬಾಕಿ ಶುಲ್ಕದ ಮೊತ್ತದ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ. ಇಷ್ಟೂ ಮೊತ್ತವನ್ನು ವಸೂಲು ಮಾಡಬೇಕು ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಸೂಚಿಸಿರುವುದು ಗೊತ್ತಾಗಿದೆ.
ಸಂಯೋಜನೆ ಶುಲ್ಕ ಮತ್ತು ಸಂಯೋಜನೆ ನವೀಕರಣ ಶುಲ್ಕ 42,03,54,809 ರುಗ.ಳಿಗೆ ಸರಕು ಸೇವಾ ತೆರಿಗೆ ಕಾಯ್ದೆ 2017ರ ಸೆಕ್ಷನ್ 2(105) ಮತ್ತು ಸೆಕ್ಷನ್ 9(1)ರಂತೆ ಶೇ.18ರಷ್ಟು ಜಿಎಸ್‌ಟಿ ಮೊತ್ತವಾಗಿ 7,56,63,866 ರು.ಗಳನ್ನು ಸಂಬಂಧಪಟ್ಟ ಕಾಲೇಜು, ಸಂಸ್ಥೆಗಳಿಂದ ವಸೂಲಿ ಮಾಡಿ ವಾಣಿಜ್ಯ ತೆರಿಗೆ ಇಲಾಖೆತಗೆ ಜಮೆ ಮಾಡಬೇಕಿತ್ತು. ಆದರೆ ಈ ಮೊತ್ತವನ್ನು ವಸೂಲು ಮಾಡಿಲ್ಲ.
ಹೀಗಾಗಿ ಜಿಎಸ್‌ಟಿ ಮೊತ್ತವಾಗಿರುವ 7,56,63,866 ರುಗ.ಳನ್ನು ಸಂಬಂಧಿಸಿದ ಕಾಲೇಜುಗಳಿಂದ ವಸೂಲು ಮಾಡಿ ವಾಣಿಜ್ಯ ತೆರಿಗೆ ಇಲಾಖೆಗೆ ಜಮೆ ಮಾಡುವವರೆಗೂ ಈ ಮೊತ್ತವನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿಟ್ಟಿರುವುದು ತಿಳಿದು ಬಂದಿದೆ.
ಹಾಗೆಯೇ ವಿಶ್ವವಿದ್ಯಾಲಯ ವಿವಿಧ ನಿಕಾಯಗಳ ಪ್ರವೇಶಾತಿ ಶುಲ್ಕ, ಸ್ವೀಕೃತಿ ತಃಖ್ತೆಯಲ್ಲಿನ ಮೊತ್ತಕ್ಕೂ ವಾರ್ಷಿಕ ಲೆಕ್ಕ ಪತ್ರದಲ್ಲಿ ನಮೂದಿಸಿರುವ ಮೊತ್ತಕ್ಕೂ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ 28,91,95,027 ರು.ಗಳನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿಟ್ಟಿದ್ದಾರೆ.

ಇದರಲ್ಲಿ ನೋಂದಣಿ ಶುಲ್ಕ, ದಾಖಲಾತಿ ಶುಲ್ಕ, ವಿದ್ಯಾರ್ಥಿಗಳ ಕ್ಷೇಮ ನಿಧಿ, ಕ್ರೀಡಾ ಶುಲ್ಕ, ಆಡಳಿತಾತ್ಮಕ ವೆಚ್ಚ, ಅರ್ಹತಾ ಶುಲ್ಕ, ಕೆಇಎ ಸ್ವೀಕೃತಿಗಳು, ತಡವಾಗಿ ಪ್ರವೇಶಾತಿ ಆದ ಪ್ರಕರಣಗಳಲ್ಲಿ ವಸೂಲಾಗಿರುವ ದಂಡ, ವಾರ್ಷಿಕ ಶುಲ್ಕವು 83,22,16,951 ರು ಇತ್ತು ಎಂದು ವಾರ್ಷಿಕ ಲೆಕ್ಕಪತ್ರಗಳಲ್ಲಿ ನಮೂದಿಸಿತ್ತು. ಆದರೆ ವಿವಿಧ ನಿಕಾಯಗಳು ನೀಡಿದ್ದ ತಃಖ್ತೆಯ ಪ್ರಕಾರ ಈ ಮೊತ್ತವು 54,30,21,924 ರು ಇತ್ತು. ಇದರಲ್ಲಿ ಒಟ್ಟಾರೆ 28,91,95,027 ರು ವ್ಯತ್ಯಾಸವಿದೆ.

ಅಲ್ಲದೇ ಫಾರ್ಮಸಿ ವಿಭಾಗದ ಪ್ರವೇಶಾತಿ ಶುಲ್ಕದ ಸ್ವೀಕೃತಿ ತಃಖ್ತೆ ಪ್ರಕಾರ ಕಾಲೇಜುಗಳಿಂದ ಹಾಗೂ ಕೆಇಎಯಿಂದ ಬಾಕಿಯಿರುವ 3,17,600 ರುಗಳ ವಸೂಲಾತಿ ಕೂಡ ಮಾಡಿಲ್ಲ. ಈ ಬಗ್ಗೆ ಲೆಕ್ಕ ಪತ್ರ ವಿಚಾರಣೆ ನೋಟೀಸ್ ಕೂಡ ನೀಡಿತ್ತು. ಆದರೆ ವಿಶ್ವವಿದ್ಯಾಲಯವು ಬೇಡಿಕೆ ಸಂಗ್ರಹಣೆ ಹಾಗೂ ಬಾಕಿ ಶುಲ್ಕದ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ. ಹೀಗಾಗಿ ಈ ಮೊತ್ತವು ವಿಶ್ವವಿದ್ಯಾಲಯದ ನಿಧಿಗೆ ಜಮೆ ಆಗುವವರೆಗೂ 3,17,600 ರು.ಗಳನ್ನು ವಸೂಲಾತಿಗೆ ಇಟ್ಟಿದೆ.

ಅಲೈಡ್ ಹೆಲ್ತ್ ಸೈನ್ಸ್ ವಿಭಾಗದ ಅನುಮೋದನಾ ಶುಲ್ಕವೂ ಬಾಕಿ ಇದೆ. ಇದರ ಮೊತ್ತ 10,04,530 ರಷ್ಟಿದೆ. 2023-24ನೇ ಸಾಲಿನಲ್ಲಿ ಅಲೈಡ್ ಹೆಲ್ತ್ ಸೈನ್ಸ್ ವಿಭಾಗದ ಅನುಮೋದನೆ ಶುಲ್ಕದ ಸ್ವೀಕೃತಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನೆಗೆ ಕಡತಗಳನ್ನು ಒದಗಿಸಿತ್ತು. ಇದರ ಪ್ರಕಾರ ವಿವಿಧ ಕಾಲೇಜುಗಳಿಂದ ಶುಲ್ಕ ವಸೂಲಿಸಿ ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡಿರುವ ವಿವರಗಳು ಲೆಕ್ಕ ಪರಿಶೋಧನೆಗೆ ಒದಗಿಸಿದ್ದ ಮಾಹಿತಿಯಲ್ಲಿ ಇರಲಿಲ್ಲ. ಹೀಗಾಗಿ ಈ ಮೊತ್ತವನ್ನೂ ವಸೂಲಿ ಮಾಡಲು ಸೂಚಿಸಿದೆ.

ಸಂಕರ ಕಾಲೇಜಿನಿಂದ 1,05,950 ರು ಬೇಡಿಕೆ ಇತ್ತು. ಈ ಪೈಕಿ 46,850 ರು ಸಂಗ್ರಹಿಸಲಾಗಿತ್ತು. ಇನ್ನೂ 59,100 ರು ಬಾಕಿ ಇತ್ತು. ಪ್ರೆಸ್ಟೀಜ್ ಮೆಡಿಕಲ್ ಹೆಲ್ತ್ ಸೈನ್ಸ್‌ಸ್‌ನಿಂದ 70,800 ರು ಬೇಡಿಕೆ ಇತ್ತು. ಈ ಪೈಕಿ 62,000 ರು ಸಂಗ್ರಹವಾಗಿತ್ತು. ಇನ್ನೂ 8,800 ರು ಬಾಕಿ ಇತ್ತು. ಶ್ರೀ ಭವಾನಿ ಇನ್ಸಿಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್‌ನಿಂದ 74,190 ರು ಬೇಡಿಕೆ ಇತ್ತು. ಈ ಪೈಕಿ70,540 ರು ಸಂಗ್ರಹಿಸಲಾಗಿತ್ತು. ಇನ್ನೂ 3,650 ರು ಬಾಕಿ ಇತ್ತು.

ಬಿಜಿಎಸ್ ಅಲೈಡ್ ಹೆಲ್ತ್ ಸೈನ್ಸ್ ನಿಂದ 2,30,000 ರು ಬೇಡಿಕೆ ಇತ್ತು. ಈ ಪೈಕಿ ನಯಾ ಪೈಸೆಯನ್ನೂ ಸಂಗ್ರಹಿಸಿರಲಿಲ್ಲ. ಹೀಗಾಗಿ 2,30,000 ರು ಬಾಕಿ ಇತ್ತು. ಸೇಂಟ್ ಜಾನ್ ಮೆಡಿಕಲ್ ಕಾಲೇಜಿನಿಂದ 6,94,050 ರು ಬೇಡಿಕೆ ಇತ್ತು. ಇದರಲ್ಲಿ 92,700 ರು ಮಾತ್ರ ಸಂಗ್ರಹಿಸಿತ್ತು. ಇನ್ನೂ 6,01,350 ರು ಬಾಕಿ ಇತ್ತು. ಜ್ಯುಪಿಟರ್ ಇನ್ಸಿಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನಿಂದ 2,94,750 ರು ಬೇಡಿಕೆ ಇತ್ತು. ಈ ಪೈಕಿ 2,62,400 ರು ಸಂಗ್ರಹವಾಗಿತ್ತು. 32,350 ಗಳಿಂದ ಅನುಮೋದನೆ ಶುಲ್ಕ ಬಾಕಿ ಇರುವುದು ಗೊತ್ತಾಗಿದೆ.
ಒಟ್ಟಾರೆ ಈ ಕಾಲೇಜುಗಳಿಂದ 14,69,740 ರು ಬೇಡಿಕೆ ಇತ್ತು. ಈ ಪೈಕಿ 5,34,490 ರು ಸಂಗ್ರಹವಾಗಿತ್ತು. ಇನ್ನೂ 9,35,250 ರು ಬಾಕಿ ಇತ್ತು ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಹಾಗೆಯೇ ಶ್ರೀ ಗುರು ಇನ್ಸಿಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನಿಂದ 1,90,150 ರು ಬೇಡಿಕೆ ಇತ್ತು. ಈ ಪೈಕಿ 1,86,750 ರು ಸಂಗ್ರಹಿಸಲಾಗಿತ್ತು. ಬಾಕಿ 3,400 ರು ಇತ್ತು. ಗೌತಮ್ ಇನ್ಸಿಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್‌ನಿಂದ 2,16,700 ರು ಬೇಡಿಕೆ ಇತ್ತಾದರೂ ಈ ಪೈಕಿ 2,14,000 ರು ಸಂಗ್ರಹಿಸಿತ್ತು. ಇನ್ನೂ 2,700 ರು ಬಾಕಿ ಇತ್ತು. ಕ್ರಿಶ್ಚಿಯನ್ ಇನ್ಸಿಟಿಟ್ಯೂಟ್ ಆಫ್ ಅಲೈಡ್ ಸೈನ್ಸ್‌ನಿಂದ 99,400 ರು ಬೇಡಿಕೆ ಇತ್ತು. ಈ ಪೈಕಿ 76,800 ರು ಸಂಗ್ರಹವಾಗಿತ್ತು. ಇನ್ನೂ 22,600 ರು ಬಾಕಿ ಇತ್ತು.

ಅಲ್ಲಮಪ್ರಭು ಕಾಲೇಜ್ ಆಫ್ ಅಲೈಡ್ ಸೈನ್ಸ್ 47,400 ಬೇಡಿಕೆ ಇತ್ತು. ಈ ಪೈಕಿ 38,400 ರು ಸಂಗ್ರಹವಾಗಿತ್ತು. ಇನ್ನೂ 9,000 ರು ಬಾಕಿ ಇತ್ತು. ಸೋಫಿಯಾ ಕಾಲೇಜ್ ಆಫ್ ಅಲೈಡ್ ಸೈನ್ಸ್ ಕಾಲೇಜಿನಿಂದ 1,21,600 ರು ಬೇಡಿಕೆ ಇತ್ತು. ಈ ಪೈಕಿ 99,750 ರು ಸಂಗ್ರಹಿಸಲಾಗಿತ್ತು. ಇನ್ನೂ 21,850 ರು ಬಾಕಿ ಇತ್ತು.
ಸಂಜಯ್ ಗಾಂಧಿ ಇನ್ಸಿಟಿಟ್ಯೂಟ್ ಅಫ್ ಟ್ರಾಮಾ ಅಂಡ್ ಆರ್ಥೋಪೆಡಿಕ್ಸ್ ನಿಂದ 75,250 ರು ಬೇಡಿಕೆ ಇತ್ತು. ಈ ಪೈಕಿ 65,520 ರು ಸಂಗ್ರಹವಾಗಿತ್ತು. ಇನ್ನೂ 9,730 ರು ಬಾಕಿ ಇತ್ತು. ಈ ಕಾಲೇಜುಗಳಿಂದ ಒಟ್ಟಾರೆ 7,50,500 ರು ಬೇಡಿಕೆ ಇತ್ತು. 6,81,220 ರು ಸಂಗ್ರಹವಾಗಿತ್ತು. ಇನ್ನು 69,280 ರು ಬಾಕಿ ಇತ್ತು. ಒಟ್ಟಾರೆ ಈ ಎಲ್ಲಾ ಕಾಲೇಜುಗಳಿಂದ 10,04,530 ರು ಬಾಕಿ ವಸೂಲು ಮಾಡಬೇಕಿತ್ತು.
ರಾಮನಗರದಲ್ಲಿ 400 ಕೋಟಿ ಅನುತ್ಪಾದಕ ವೆಚ್ಚ; ಟೆಂಡರ್ ಪೂರ್ವ ಪರಿಶೀಲನಾ ಸಮಿತಿ ಅಭಿಪ್ರಾಯ ಬದಿಗೊತ್ತಿದ್ದೇಕೆ?
ರಾಮನಗರದ ಅರ್ಚಕರ ಹಳ್ಳಿಯಲ್ಲಿನ ಕ್ಯಾಂಪಸ್‌ನಲ್ಲಿ 400 ಕೋಟಿ ರು ಮಾಡಿದ್ದ ವೆಚ್ಚವು ಫಲಪ್ರದವಾಗಿರಲಿಲ್ಲ.
442.03 ಕೋಟಿ ರು ಮೌಲ್ಯದ ಸ್ಥಿರಾಸ್ತಿ; ಭೌತಿಕ ಆಸ್ತಿಗಳ ವಿವರಗಳನ್ನೇ ಲೆಕ್ಕಪರಿಶೋಧನೆಗೆ ಒದಗಿಸದ ವಿವಿ
442.03 ಕೋಟಿ ರು ಮೌಲ್ಯದ ಸ್ಥಿರಾಸ್ತಿ ಹೊಂದಿರುವ ವಿಶ್ವವಿದ್ಯಾಲಯವು ಭೌತಿಕ ಆಸ್ತಿಗಳ ವಿವರಗಳನ್ನೇ ಲೆಕ್ಕ ಪರಿಶೋಧನೆಗೆ ಒದಗಿಸಿರಲಿಲ್ಲ.
ಅಂದಾಜು ಮೊತ್ತ ಮೀರಿ ವೆಚ್ಚ, ವಿವಿಧ ಶುಲ್ಕ, ಬಡ್ಡಿ ನಿರ್ವಹಣೆಯಲ್ಲಿ ಲೋಪ; ಬೇಜವಾಬ್ದಾರಿ ಬಯಲು
ಅಂದಾಜು ಮೊತ್ತ ಮೀರಿ ವೆಚ್ಚ ಮಾಡಿದ್ದ ವಿಶ್ವವಿದ್ಯಾಲಯವು ವಿವಿಧ ಶುಲ್ಕ ಮತ್ತು ಬಡ್ಡಿ ನಿರ್ವಹಣೆಯಲ್ಲಿ ಲೋಪ ಎಸಗಿತ್ತು.









