ಅಧಿಕಾರ ಲಾಲಸೆ, ಪಕ್ಷದೊಳಗಿನ ಉದ್ವಿಗ್ನತೆ, ಈಡೇರದ ಭರವಸೆ; ಆಡಳಿತದಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ

ಬೆಂಗಳೂರು;  ಕಾಂಗ್ರೆಸ್‌ ಸರ್ಕಾರವು ಜಾರಿಗೊಳಿಸಿರುವ 5 ಗ್ಯಾರಂಟಿ ಯೋಜನೆಗಳಿಗೆ ಮಾಡುತ್ತಿರುವ 50,000 ಕೋಟಿಗೂ ಹೆಚ್ಚಿನ ವೆಚ್ಚವು ರಾಜ್ಯವನ್ನು ಗಮನಾರ್ಹ ಆದಾಯ ಕೊರತೆಗೆ ತಳ್ಳುತ್ತಿದೆ. ಇದು ಅಪಾಯಕಾರಿ ವ್ಯವಹಾರಿಕತೆಯನ್ನು ಸೃಷ್ಟಿಸಿದೆ. ಅಲ್ಲದೇ ಈ ಗ್ಯಾರಂಟಿ ಹೊರತುಪಡಿಸಿ ಒಟ್ಟು 7 ಪ್ರಮುಖ ಕ್ಷೇತ್ರಗಳಲ್ಲಿ ನೀಡಿದ್ದ 129 ಭರವಸೆಗಳಲ್ಲಿ ಕೇವಲ 4 ಮಾತ್ರ ಈಡೇರಿಸಿದೆ ಎಂದು   ಬೆಂಗಳೂರಿನ ಸಿವಿಕ್‌ ಸಂಸ್ಥೆಯ ವರದಿಯು ಬಹಿರಂಗಗೊಳಿಸಿದೆ.

 

ಹಾಗೆಯೇ ಅಧಿಕಾರ ಲಾಲಸೆ ಮತ್ತು ಜನರ ಸಬಲೀಕರಣದ ನಡುವೆ ಸಿಲುಕಿರುವ  ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಡಳಿತವು ನರಳುತ್ತಿದೆ. ಪಕ್ಷದೊಳಗಿನ ನಿರಂತರ ಉದ್ವಿಗ್ನತೆಯ ಬೆಳವಣಿಗೆಗಳು ಸರ್ಕಾರದ ಸಾಮರ್ಥ್ಯವನ್ನು ಕ್ಷೀಣಿಸುತ್ತವೆ. ನಾಗರಿಕ ಹಿತವನ್ನು ಮನಸ್ಸಿನಲ್ಲಿಟ್ಟುಕೊಂಡು ಆಡಳಿತವನ್ನು ಒದಗಿಸುವಲ್ಲಿ ಕಾಂಗ್ರೆಸ್‌ ಸರ್ಕಾರವು ವಿಫಲವಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಿದೆ.

 

ಮುಖ್ಯಮಂತ್ರಿ ಗಾದಿಗಾಗಿ ಕಾಂಗ್ರೆಸ್‌ ಪಕ್ಷದೊಳಗೆ ಕ್ಷಿಪ್ರಗತಿಯ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಸಿವಿಕ್‌ ಸಂಸ್ಥೆಯು ಬಿಡುಗಡೆ ಮಾಡಿರುವ 2 ವರ್ಷದ ನಮ್ಮ ಸರ್ಕಾರ ನಮ್ಮ ರಿಪೋರ್ಟ್‌ ಕಾರ್ಡ್‌ ಮುನ್ನೆಲೆಗೆ ಬಂದಿದೆ.

 

ಇಂದು ಮಧ್ಯಾಹ್ನ ಬೆಂಗಳೂರು ನಗರದಲ್ಲಿ ಸಿವಿಕ್‌ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿಯು ರಾಜ್ಯ ಕಾಂಗ್ರೆಸ್‌ ಸರ್ಕಾರದ ಎರಡೂವರೆ ವರ್ಷದ ಆಡಳಿತವನ್ನು ಒರೆಗೆ ಹಚ್ಚಿದೆ.

 

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

 

ಕಾಣೆಯಾಗಿದೆಯೇ ಆರ್‍‌ಡಿಪಿಆರ್‍‌?

 

ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಚುನಾವಣೆಗಳಲ್ಲಿನ ಅನಿರ್ದಿಷ್ಟವಾಗಿ ಆಗಿರುವ  ವಿಳಂಬವು ಸುಮಾರು 19,000 ಕೋಟಿ ರು ಅನುದಾನ ಸ್ಥಗಿತಗೊಳಿಸಲು ಕಾರಣವಾಗಿದೆ. ಇದು ಸ್ಥಳೀಯ ಅಭಿವೃದ್ಧಿ ಕುಂಠಿತಗೊಳಿಸಿದೆ.  2023-24ರ ವಿಕೇಂದ್ರೀಕರಣದ ಸೂಚ್ಯಂಕ, ಕಲ್ಯಾಣ ಮತ್ತು ಪ್ರಗತಿ ಪಥದಂತಹ ಪ್ರಮುಖ ಗ್ರಾಮೀಣ ರಸ್ತೆ ಯೋಜನೆಗಳಲ್ಲಿ ಕರ್ನಾಟಕ ಅಗ್ರ ಶ್ರೇಯಾಂಕ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತಿದ್ದರೂ ಸ್ಥಳೀಯ ಆಡಳಿತವನ್ನು ಸಬಲೀಕರಣಗೊಳಿಸುವಲ್ಲಿ ವ್ಯವಸ್ಥಿತ ವೈಫಲ್ಯದಿಂದ ಈ ನಿರೂಪಣೆ ವಿರುದ್ಧವಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಿರುವುದು ಗೊತ್ತಾಗಿದೆ.

 

 

 

 

ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಚುನಾವಣೆಗಳಲ್ಲಿನ ಅನಿರ್ದಿಷ್ಟ ವಿಳಂಬವು ಸುಮಾರು 19,000 ಕೋಟಿ ರು ಅನುದಾನ ಸ್ಥಗಿತಗೊಳಿಸಿದೆ. ಇದು ಸ್ಥಳೀಯ ಅಭಿವೃದ್ಧಿ ಕುಂಠಿತಗೊಳಿಸಿದೆ. ಇದಲ್ಲದೇ ಗ್ರಾಮ ಪಂಚಾಯತ್ಗಳು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಅಧಿಕಾರಶಾಹಿ ಅನುಮತಿಯಿಲ್ಲದೇ ತಮ್ಮ ಸ್ವಂತ ಆದಾಯವನ್ನು ಮುಕ್ತವಾಗಿ ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ. ಕೆಐಎಡಿಬಿನಂತಹ ಇತರ ರಾಜ್ಯ ಸಂಸ್ಥೆಗಳಿಂದ ಬಾಕಿ ಹಣವನ್ನು ನಿರಾಕರಿಸಲಾಗಿದೆ.

 

ಮೂಲಭೂತ ಸೇರಿದಂತೆ ನಿರ್ಣಾಯಕ ಕಾರ್ಯಾಚರಣೆಯ ವೈಫಲ್ಯಗಳಿಂದ ಕೂಡಿದೆ, ಇದು ಅಗತ್ಯ ಗ್ರಾಮೀಣ ಸೇವೆಗಳಿಗೆ ಪಾರ್ಶ್ವವಾಯು ಹೊಡೆಸಿದೆ. ಮತ್ತು ಕಾರ್ಮಿಕರ ಪಾವತಿಗಳನ್ನು ವಿಳಂಬಗೊಳಿಸುತ್ತದೆ. ಸರ್ಕಾರದ ಮೆಚ್ಚುಗೆ ಪಡೆದ ಟಾಪ್‌ ಡೌನ್‌ ಉಪಕ್ರಮಗಳು ಹೀಗೆ ತೂತಾದ ಸ್ಥಳೀಯ ಆಡಳಿತ ರಚನೆಯಿಂದ ದುರ್ಬಲಗೊಂಡಿದೆ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಕಾಂಗ್ರೆಸ್‌ ಸರ್ಕಾರವು ಎರಡು ವಿರೋಧಾತ್ಮಕ ಪ್ರಚೋದನೆಗಳ ನಡುವೆ ಸಿಲುಕಿರುವಂತೆ ತೋರುತ್ತಿದೆ. ಒಂದೆಡೆ ಜನಪ್ರಿಯ ಜನಾದೇಶವನ್ನು ಪಡೆಯಲು ಮತ್ತು ಅದನ್ನು  ಉಳಿಸಿಕೊಳ್ಳಲು ಐದು ಗ್ಯಾರಂಟಿ  ಭರವಸೆಗಳನ್ನು ಘೋಷಿಸಿದೆ. ಈ ಗ್ಯಾರಂಟಿಗಳನ್ನು  ಉಳಿಸಿಕೊಳ್ಳಲು ಶ್ರಮಿಸುತ್ತಿದೆ. ಮತ್ತೊಂದೆಡೆ ಅದು ನವ ಉದಾರವಾದಿ ಕಾರ್ಯಸೂಚಿಯನ್ನು ತೀವ್ರಗೊಳಿಸುವುದರತ್ತ ವಿಸ್ತರಿಸುತ್ತಿದೆ. ಇದರಲ್ಲಿ ಅದು ಹಣ ಸಂಗ್ರಹಕ್ಕೆ ಅನುವು ಮಾಡಿಕೊಡುವ ಊಹಾತ್ಮಕ ಮತ್ತು ಹೊರತೆಗೆಯುವ ನೀತಿಗಳನ್ನು ಬೆಂಬಲಿಸುತ್ತದೆ. ಅದರ ಮೃದು -ಹಿಂದುತ್ವ ನಿಲುವುಗಳು,  ರಾಜ್ಯ ಮತ್ತು ಸಮಾಜದ ಜಾತ್ಯತೀತತೆಯನ್ನು ಖಚಿತಪಡಿಸಿಕೊಳ್ಳುವ ಅದರ ಹಕ್ಕುಗಳನ್ನು ಸುಳ್ಳು ಮಾಡುತ್ತದೆ ಎಂದು ಹೇಳಿದೆ.

 

ಆಡಳಿತ ವಿಫಲವಾಗಿದೆಯೇ?

 

‘ಹೆಚ್ಚು ನಿರ್ದಿಷ್ಟವಾಗಿ ಮಸೂದೆಗಳು, ಕಾಯ್ದೆಗಳು ಮತ್ತು ನೀತಿಗಳು ಅದರ ಉದಾತ್ತ ಘೋಷಣೆಗಳು ಸಾಕಷ್ಟು ಮತ್ತು ಸೂಕ್ತವಾದ ಆಡಳಿತ ಸುಧಾರಣೆಗಳಿಂದ ಬೆಂಬಲಿತವಾಗಿಲ್ಲ. ಪಕ್ಷದೊಳಗಿನ ನಿರಂತರ ಉದ್ವಿಗ್ನತೆಯ ಸುದ್ದಿಗಳು ಸಾರ್ವಜನಿಕರಿಗೆ ಭರವಸೆ ಸಂಕೇತವನ್ನು ಕಳಿಸುವ ಸರ್ಕಾರದ ಸಾಮರ್ಥ್ಯವನ್ನು ಮತ್ತಷ್ಟು ಕ್ಷೀಣಿಸುತ್ತಿದೆ. ಇದರ ಪರಿಣಾಮವಾಗಿ ಪ್ರಜಾಪ್ರಭುತ್ವ ಮತ್ತು ಜನರಿಗೆ ಜವಾಬ್ದಾರಿಯುತ ಮತ್ತು ತನ್ನ ನಾಗರೀಕರ ಹಿತವನ್ನು ಮನಸ್ಸಿನಲ್ಲಿಟ್ಟುಕೊಂಡು ಆಡಳಿತ ಒದಗಿಸಲು ವಿಫಲವಾಗಿದೆ,’ ಎಂದು ವಿವರಿಸಿರುವುದು ವರದಿಯಿಂದ ಗೊತ್ತಾಗಿದೆ.

 

 

ಕರ್ನಾಟಕ ಖಾತರಿ ಯೋಜನೆಗಳಿಗೆ 50,000 ಕೋಟಿ ರು ಗೂ ಹೆಚ್ಚು ವೆಚ್ಚವಾಗುತ್ತಿದೆ. ಇದು ರಾಜ್ಯವನ್ನು ಗಮನಾರ್ಹ ಆದಾಯ ಕೊರತೆಗೆ ತಳ್ಳಲಿದೆ. ಈ ಯೋಜನೆಗಳು ಅಪಾಯಕಾರಿ ವ್ಯವಹಾರಿಕತೆಯನ್ನು ಸೃಷ್ಟಿಸುತ್ತವೆ ಎಂದು ವರದಿಯಲ್ಲಿ ವಿಶ್ಲೇಷಿಸಿರುವುದು ತಿಳಿದು ಬಂದಿದೆ.

 

ನೀಡಿದ್ದ  ಭರವಸೆಗಳೆಷ್ಟು, ಈಡೇರಿಸಿರುವುದೆಷ್ಟು?

 

8 ಪ್ರಮುಖ ಕ್ಷೇತ್ರಗಳಲ್ಲಿ ಒಟ್ಟು 134 ಭರವಸೆಗಳ ಸ್ಥಿತಿಯನ್ನು ಪರಿಶೀಲಿಸಲಾಗಿದೆ. ಸಾರ್ವತ್ರಿಕ ಆರೋಗ್ಯ, ಶಾಲೆ, ಉನ್ನತ ಶಿಕ್ಷಣ, ಪರಿಸರ, ಬೆಂಗಳೂರು, ಕಾರ್ಮಿಕ, ಆಡಳಿತ ಮತ್ತು 5 ಗ್ಯಾರಂಟಿ ಯೋಜನೆಗಳು ಸೇರಿದಂತೆ 10 ಪ್ರಮುಖ ಕ್ಷೇತ್ರಗಳು ಮತ್ತು 5 ಗ್ಯಾರಂಟಿ ಯೋಜನೆಗಳು ಸೇರಿದಂತೆ 10 ಪ್ರಮುಖ ಕ್ಷೇತ್ರಗಳಲ್ಲಿ ಸರ್ಕಾರವು ತೆಗೆದುಕೊಂಡಿರುವ ಕ್ರಮಗಳ ಕುರಿತು ವಿಸ್ತಾರವಾದ ಕ್ಷೇತ್ರವಾರು ವಿಶ್ಲೇಷಣೆ ಮಾಡಿದೆ.

 

 

134 ಭರವಸೆಗಳ ಪೈಕಿ ಇದುವರೆಗೆ ಕೇವಲ ಶೇ.6.7ರಷ್ಟು ಮಾತ್ರ ಈಡೇರಿಸಿದೆ. ಗಣಿಗಾರಿಕೆ, ಅರಣ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಒಟ್ಟು 8 ಭರವಸೆ ನೀಡಲಾಗಿತ್ತು. ಈ ಪೈಕಿ ಒಂದನ್ನೂ ಈಡೇರಿಸಿಲ್ಲ. 4 ಭರವಸೆಗಳು ಇನ್ನೂ ಪ್ರಗತಿಯಲ್ಲಿವೆ. ಇನ್ನು 4 ಭರವಸೆಗಳು ಇನ್ನೂ ಆರಂಭವಾಗಿಯೇ ಇಲ್ಲ.

 

ಶಿಕ್ಷಣದಲ್ಲಿ ಒಟ್ಟು 22 ಭರವಸೆಗಳನ್ನು ನೀಡಲಾಗಿತ್ತು. ಈ ಪೈಕಿ ಕೇವಲ ಒಂದು ಭರವಸೆಯನ್ನಷ್ಟೇ ಈಡೇರಿಸಿದೆ. ಇನ್ನೂ 8 ಭರವಸೆಗಳು ಪ್ರಗತಿಯಲ್ಲಿದೆ. 12 ಭರವಸೆಗಳಿಗೆ ಇನ್ನೂ ಚಾಲನೆಯೇ ದೊರೆತಿಲ್ಲ. ಒಂದು ಭರವಸೆಯು ವಿಫಲವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಒಟ್ಟು 14  ಭರವಸೆಗಳನ್ನು ನೀಡಲಾಗಿತ್ತು. ಈ ಪೈಕಿ ಒಂದನ್ನೂ ಈಡೇರಿಸಿಲ್ಲ. 5 ಭರವಸೆಗಳು ಪ್ರಗತಿಯಲ್ಲಿದೆ. 9 ಭರವಸೆಗಳಿಗೆ ಚಾಲನೆಯೇ ಸಿಕ್ಕಿಲ್ಲ.

 

 

ನಮ್ಮ ಬೆಂಗಳೂರಿಗೆ ಸಂಬಂಧಿಸಿದಂತೆ ಒಟ್ಟು 46 ಭರವಸೆಗಳನ್ನು ನೀಡಿತ್ತು. ಈ ಪೈಕಿ ಕೇವಲ 2 ಭರವಸೆಗಳನ್ನಷ್ಟೇ ಈಡೇರಿಸಿದೆ. 19 ಭರವಸೆಗಳು ಪ್ರಗತಿಯಲ್ಲಿದೆ. 24 ಭರವಸೆಗಳನ್ನು ಈಡೇರಿಸಿಲ್ಲ. ಒಂದು ಭರವಸೆ ವಿಫಲವಾಗಿದೆ.

 

ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಒಟ್ಟು 10 ಭರವಸೆ ನೀಡಿತ್ತು. ಈ ಪೈಕಿ ಒಂದನ್ನೂ ಈಡೇರಿಸಿಲ್ಲ. 3 ಭರವಸೆಗಳು ಪ್ರಗತಿಯಲ್ಲಿದೆ. 7 ಭರವಸೆಗಳಿಗೆ ಚಾಲನೆಯೇ ದೊರೆತಿಲ್ಲ. ಆಡಳಿತ ವಿಭಾಗಕ್ಕೆ ಸಂಬಂಧಿಸಿದಂತೆ 14 ಭರವಸೆ ನೀಡಲಾಗಿತ್ತು. ಒಂದೂ ಸಹ ಈಡೇರಿಲ್ಲ.  5 ಭರವಸೆಗಳುಗಳು ಪ್ರಗತಿಯಲ್ಲಿದೆ. ಇನ್ನೂ 9 ಭರವಸೆಗಳಿಗೆ ಚಾಲನೆಯೇ ದೊರೆತಿಲ್ಲ.

 

 

ಅಸಂಘಟಿತ ಕಾರ್ಮಿಕರು ಮತ್ತು ಇತರೆ ವಿಭಾಗಳಿಗೆ ಸಂಬಂಧಿಸಿದಂತೆ ಅಂದರೆ ಬೀದಿ ಬದಿ ಮಾರಾಟಗಾರರು, ಚಾಲಕರು, ಗಿಗ್‌ ಮತ್ತು ಅಸಂಘಟಿತ ಕಾರ್ಮಿಕರು, ಪೌರ ಕಾರ್ಮಿಕರು, ಕಾರ್ಮಿಕ ವರ್ಗಕ್ಕೆ ಸಂಬಂಧಿಸಿದಂತೆ ಒಟ್ಟು 15 ಭರವಸೆ ನೀಡಲಾಗಿತ್ತು. ಈ ಪೈಕಿ ಕೇವಲ ಒಂದೇ ಒಂದು ಭರವಸೆಯನ್ನಷ್ಟೇ ಈಡೇರಿಸಿದೆ. 6 ಭರವಸೆಗಳಿಗೆ ಪ್ರಗತಿಯಲ್ಲಿದೆ. ಇನ್ನೂ 8 ಭರವಸೆಗಳಿಗೆ ಚಾಲನೆಯೇ ಸಿಕ್ಕಿಲ್ಲ.

 

ಒಟ್ಟಾರೆ 134 ಭರವಸೆಗಳ ಪೈಕಿ ಕೇವಲ 9ನ್ನು ಮಾತ್ರ ಈಡೇರಿಸಲಾಗಿದೆ. ಇನ್ನೂ 50 ಭರವಸೆಗಳು ಪ್ರಗತಿಯಲ್ಲಿವೆ. 73 ಭರವಸೆಗಳಿಗೆ ಚಾಲನೆಯೇ ಸಿಕ್ಕಿಲ್ಲ. 2 ಭರವಸೆಗಳು ವಿಫಲವಾಗಿವೆ. ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿ ಇತರೆ 7 ಪ್ರಮುಖ ಕ್ಷೇತ್ರಗಳಲ್ಲಿ ನೀಡಿದ 129 ಭರವಸೆಗಳಲ್ಲಿ 4 ಮಾತ್ರ ಈಡೇರಿದೆ. ಗ್ಯಾರಂಟಿಯೂ ಸೇರಿದಂತೆ ಕೇವಲ ಶೇ. 3.1ರಷ್ಟು ಮಾತ್ರ ಈಡೇರಿರುವುದು ವರದಿಯಿಂದ ಗೊತ್ತಾಗಿದೆ.

 

ಆರೋಗ್ಯ ಮತ್ತು ಆಡಳಿತ ಕ್ಷೇತ್ರಗಳಲ್ಲಿ ತಲಾ ಶೇ.64.3ರಷ್ಟು ಭರವಸೆಗಳು ಆರಂಭವಾಗಿಯೇ ಇಲ್ಲ. ಗಣಿಗಾರಿಕೆ, ಪರಿಸರ ಮತ್ತು ಅರಣ್ಯಗಳು ಶೆ. 50ರಷ್ಟು ಪ್ರಗತಿ ಸಾಧಿಸಿವೆ. ಪ್ರಣಾಳಿಕೆಯ ಭರವಸೆಗಳ ಹೊರತಾಗಿಯೂ 62,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಭರ್ತಿಯಾಗದೇ ಹಾಗೇ  ಉಳಿದಿವೆ. ಶಿಕ್ಷಣದ ಮೇಲಿನ ವೆಚ್ಚವು ಒಟ್ಟು ಖರ್ಚಿನ ಶೇ. 10.8ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ತುಂಬಾ ಕಡಿಮೆಯಾಗಿದೆ.

 

 

ಕೃಷಿ ಕ್ಷೇತ್ರದಲ್ಲಿ ಸರ್ಕಾರದ ಕಾರ್ಯಕ್ಷಮತೆಯ ವಿಶ್ಲೇಷಣೆಯು ಗಮನಾರ್ಹ ನೀತಿ ದ್ವಂದ್ವತೆಯನ್ನು ಎತ್ತಿ ತೋರಿಸುತ್ತದೆ ಎಂದಿರುವ ಸಿವಿಕ್‌ ವಿಶ್ಲೇಷಣೆಯು ಸರ್ಕಾರದ ಭೂ ಕಬಳಿಕೆ ನೀತಿಗಳಿಂದ ರೈತರ ಪ್ರಯತ್ನಗಳು ದುರ್ಬಲಗೊಳಿಸಿವೆ. ಕೈಗಾರಿಕೆ ಯೋಜನೆಗಳಿಗಾಗಿ 1,700 ಎಕರೆಗಳಿಗೂ ಹೆಚ್ಚು ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಭೂ ಸ್ವಾಧೀನಕ್ಕೆ ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ ಇಷ್ಟವಿಲ್ಲ. ಕಾರ್ಪೋರೇಟ್‌ ಮಾಲೀಕತ್ವಕ್ಕೆ ಅನುಕೂಲಕರವಾದ ಹಿಂದಿನ ಭೂ ಸುಧಾರಣೆ ತಿದ್ದುಪಡಿಗಳನ್ನು ಹಿಂಪಡೆಯುವಲ್ಲಿ ವಿಫಲವಾಗಿದೆ ಎಂದು ವಿವರಿಸಿದೆ.

 

 

ಸಾರ್ವತ್ರಿಕ ಆರೋಗ್ಯ ರಕ್ಷಣೆ ವಿಚಾರದಲ್ಲಿ ಕರ್ನಾಟಕದ ಜನರು ವಾಸ್ತವದಿಂದ ಬಹುದೂರವಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಕೆದಾರರ ಶುಲ್ಕ ಭರಿಸಲು ಸಹ ಕಷ್ಟವನ್ನು ಎದುರಿಸುತ್ತಿದ್ದಾರೆ. ರಾಜ್ಯ ಆರೋಗ್ಯ ವಿಮಾ ರಕ್ಷಣೆಯ ನಿರಾಕರಿಸಲಾಗುತ್ತಿದೆ. ಖಾಸಗಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳನ್ನು ದುರ್ಬಲಗೊಳಿಸಿದಂತಾಗಿದೆ ಎಂದು ಹೇಳಿದೆ.

Your generous support will help us remain independent and work without fear.

Latest News

Related Posts