ಆರ್‍‌ಸಿಬಿ ಸಂಭ್ರಮಾಚರಣೆ ಅನುಮತಿಗೆ ನಿರಾಕರಿಸಿ ದೂರು ನೀಡಿದ್ದ ಇನ್ಸ್‌ಪೆಕ್ಟರ್‍‌ ಅಮಾನತು; ಕರ್ತವ್ಯ ಪಾಲನೆಗೆ ಶಿಕ್ಷೆ?

ಬೆಂಗಳೂರು; ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಗೆ ಪೊಲೀಸ್‌ ಇನ್ಸ್‌ಪೆಕ್ಟರ್‍‌ ಗಿರೀಶ್‌ ಅವರು ಅನುಮತಿ ನಿರಾಕರಿಸಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‍‌ ಗಿರೀಶ್‌ ಅವರನ್ನೂ ಸಹ ಅಮಾನತುಗೊಳಿಸಿರುವುದು ಪೊಲೀಸ್‌ ಇಲಾಖೆಯಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ.

 

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ, ಡಿಎನ್‌ಎ ಮತ್ತು ಆರ್‍‌ಸಿಬಿ ಪ್ರಾಂಚೈಸಿ ಅವರು ಸಂಭ್ರಮಾಚರಣೆ ನಡೆಸಲು ಒತ್ತಡ ಹೇರಿದ್ದರು. ಆದರೆ  ಪೊಲೀಸ್‌ ಇನ್ಸ್‌ಪೆಕ್ಟರ್‍‌  ಅವರು ಮಣಿದಿರಲಿಲ್ಲ. ಪೊಲೀಸರ ಅನುಮತಿ ಇಲ್ಲದೇ ಕಾರ್ಯಕ್ರಮ ಆಯೋಜಿಸಿದ್ದರಿಂದಾಗಿಯೇ ಭಾರೀ ಪ್ರಮಾಣದಲ್ಲಿ  ಅಸ್ತವ್ಯಸ್ತ ಉಂಟಾಗಿತ್ತು. ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತಕ್ಕೆ  11 ಮಂದಿ ಸಾವನ್ನಪ್ಪಿದ್ದರು. ಈ ಘಟನೆಯಿಂದಾಗಿ ಸರ್ಕಾರದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವೂ ಸಹ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಳ್ಳುತ್ತಿದ್ದಂತೆ ಸರ್ಕಾರವು ಪೊಲೀಸ್‌ ಆಯುಕ್ತ ಬಿ ದಯಾನಂದ್‌ ಸೇರಿದಂತೆ ಹಲವರನ್ನು ಅಮಾನತುಗೊಳಿಸಿತು. ಇದೇ ಪಟ್ಟಿಯಲ್ಲಿ  ಪೊಲೀಸ್‌ ಇನ್ಸ್‌ಪೆಕ್ಟರ್‍‌ ಗಿರೀಶ್‌ ಅವರೂ ಸಹ ಇದ್ದಾರೆ.

 

ಈ ದುರಂತಕ್ಕೆ ಯಾರೆಲ್ಲಾ ಕಾರಣರು ಎಂದು ಎ ಕೆ ಗಿರೀಶ್‌ ಅವರೇ  ಠಾಣೆಯಲ್ಲಿ ದೂರು ನೀಡಿದ್ದರು.

 

 

ಇಡೀ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್‍‌ ಅವರು ಠಾಣೆಯಲ್ಲಿ ದೂರು ನೀಡಿದ್ದರು. ಮತ್ತು ಈ ದೂರನ್ನಾಧರಿಸಿ ಎಫ್‌ಐಆರ್‍‌ ಕೂಡ ದಾಖಲಾಗಿತ್ತು. ಈ ಬೆಳವಣಿಗೆ ಆದ ಕೆಲವೇ ಗಂಟೆಗಳಲ್ಲಿ ಎ ಕೆ ಗಿರೀಶ್‌ ಅವರನ್ನೂ ಅಮಾನತುಗೊಳಿಸಲಾಗಿದೆ. ಈ ಸಂಬಂಧ  ಇಲಾಖೆಯಲ್ಲಿಯೇ ದೊಡ್ಡ ಮಟ್ಟದ ಆಕ್ಷೇಪಗಳು ಕೇಳಿ ಬಂದಿವೆ.

 

 

 

ಇನ್ಸ್‌ಪೆಕ್ಟರ್‍‌ ಮನವರಿಕೆಗೆ ಒಪ್ಪದ ಆಡಳಿತ ಮಂಡಳಿ

 

ಆರ್‍‌ಸಿಬಿ ಸಂಭ್ರಮಾಚರಣೆಗೆ ಸೂಕ್ತ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಬೇಕಾಗಿದೆ. ಇದರಿಂದ ಸಾರ್ವಜನಿಕ ಸಂಚಾರಕ್ಕೆ ಅಡಚಣೆಯುಂಟಾಗಲಿದೆ. ಸಂಭ್ರಮಾಚರಣೆಗೆ ಅವಕಾಶ ನೀಡಲಾಗದು ಎಂದು ಪೊಲೀಸ್‌ ಇನ್ಸ್‌ಪೆಕ್ಟರ್‍‌ ಅವರು ಅನುಮತಿಯನ್ನು ನಿರಾಕರಿಸಿದ್ದರು. ಆದರೂ ಸಹ ಸಂಭ್ರಮಾಚರಣೆಯನ್ನು ಮಾಡಲೇಬೇಕು ಎಂದು ಆಯೋಜಕರಾದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ, ಡಿಎನ್‌ಎ, ಆರ್‍‌ಸಿಬಿ ಪ್ರಾಂಚೈಸಿ ಅವರು ಒತ್ತಾಯ ಮಾಡಿದ್ದರು ಎಂದು ಎಫ್‌ಐಆರ್‍‌ನಲ್ಲಿ ವಿವರಿಸಿದೆ.

 

ಎಫ್‌ಐಆರ್‍‌ನಲ್ಲೇನಿದೆ?

 

ಆರ್‍‌ಸಿಬಿ ತಂಡ ಗೆದ್ದರೇ ಅಭಿಮಾನಿಗಳು ರಾತ್ರಿಯಿಡೀ ಸಂಭ್ರಮವನ್ನು ಆಚರಿಸುವರಿದ್ದು ಇದಕ್ಕೆ ಸೂಕ್ತ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಬೇಕಾಗಿರುತ್ತದೆ. 2025ರ ಜೂನ್ 4ರಂದು ಮತ್ತೆ ನೀವು ತಿಳಿಸಿದ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದರೆ ಲಕ್ಷಾಂತರ ಅಭಿಮಾನಿಗಳು ಸೇರುವವರಿದ್ದಾರೆ. ಇದರಿಂದ ಸಾರ್ವಜನಿಕ ಸಂಚಾರಕ್ಕೆ ಅಡಚಣೆಯುಂಟಾಗಿ, ಸೂಕ್ತ ಬಂದ್‌ಬಸ್ತ್‌ ವ್ಯವಸ್ಥೆಯನ್ನು ಮಾಡಿಕೊಳ್ಳಲು ಕಾಲವವಕಾಶ ಬೇಕಾಗಿರುತ್ತದೆ. ಈ ಕುರಿತು ಕಾಯಕ್ರಮ ಆಯೋಜಕರಾದ ಕೆಎಸ್‌ಸಿಎ ಅಡಳಿತ ಮಂಡಳಿಯವರಿಗೆ ಮನವರಿಕೆ ಮಾಡಲಾಯಿತು.

 

 

 

ಅನುಮತಿಯನ್ನು ನೀಡಲು ನಿರಾಕರಿಸಲಾಯಿತು. ಆದರೂ ಸಹ ಅವರು ನನ್ನ ಸಲಹೆಗೆ ಒಪ್ಪಲಿಲ್ಲ. ಕೆಎಸ್‌ಸಿಎ, ಡಿಎನ್‌ಎ ಮತ್ತು ಆರ್‍‌ಸಿಬಿ ಪ್ರಾಂಚೈಸಿಯವರು ಸಮಾನ ಉದ್ದೇಶದಿಂದ 2025ರ ಜೂನ್‌ 4ರಂದು ಸಂಜೆ ಕಾರ್ಯಕ್ರಮವನ್ನು ಮಾಡಲೇಬೇಕಾಗುತ್ತದೆ ಎಂದು ಒತ್ತಾಯ ಮಾಡಿರುತ್ತಾರೆ ಎಂದು ಪೊಲೀಸ್‌ ಇನ್ಸ್‌ಪೆಕ್ಟರ್‍‌ ಅವರು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

2025ರ ಜೂನ್‌ 4ರಂದು ಬೆಳಿಗ್ಗೆಯಿಂದಲೇ ಆರ್‍‌ಸಿಬಿ ಪ್ರಾಂಚೈಸಿರವರ ಅಧಿಕೃತ ಟ್ವಿಟರ್‍‌ ಖಾತೆ ಹಾಗೂ ಸಾಮಜಿಕ ಜಾಲತಾಣಗಳಲ್ಲಿ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸಕ್ಷಮ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಬೆಂಗಳೂರು ನಗರದಲ್ಲಿ ಆರ್‍‌ಸಿಬಿ ತಂಡದ ವಿಜಯೋತ್ಸವದ ಬಗ್ಗೆ ಮತ್ತು ವಿಕ್ಟರಿ ಪೆರೇಡ್‌ ನಡೆಸುವ ಬಗ್ಗೆ ಸಾರ್ವಜನಿಕರು ಅಭಿಮಾನಿಗಳು ಸೇರಬೇಕೆಂದು ಏಕಪಕ್ಷೀಯವಾಗಿ ನಿರ್ಧಾರ ಮಾಡಿದರು.

 

ಈ ಸಂಬಂಧ ಟ್ವೀಟ್‌ ಮಾಡುವ ಮೂಲಕ ಮಾಹಿತಿಯನ್ನು ಬಿತ್ತರಿಸಿದರು. ಅಭಿಮಾನಿಗಳನ್ನು ಮತ್ತು ಸಾರ್ವಜನಿಕರನ್ನು ಒಂದು ಕಡೆ ಸೇರುವಂತೆ ಆಹ್ವಾನಿಸಿರುತ್ತಾರೆ. ಈ ಮಾಹಿತಿಯು ಇತರೆ ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರವಾಗಿರುತ್ತದೆ. ಇದರಿಂದ ಲಕ್ಷಾಂತರ ಜನ ಸೇರುವ ಸಂಭವ ಇರುತ್ತದೆ ಎಂದು ಅರಿತುಕೊಂಡು ಮುನ್ನೆಚ್ಚರಿಕೆ ದೃಷ್ಟಿಯಿಂದ ಬಂದೋಬಸ್ತ್‌ ಮಾಡಿಕೊಳ್ಳುವುದು ಸೂಕ್ತವೆಂದು ಮೇಲಾಧಿಕಾರಿಗಳಿಗೆ ಕೋರಿರುತ್ತೇನೆ ಎಂದು ಪೊಲೀಸ್‌ ಇನ್ಸ್‌ಪೆಕ್ಟರ್‍‌ ಅವರು ದೂರಿನಲ್ಲಿ ತಿಳಿಸಿರುವುದು ಗೊತ್ತಾಗಿದೆ.

 

ಈ ಪ್ರಕರಣದ ಕುರಿತು ತನಿಖೆ ನಡೆಸಲು ತೀರ್ಮಾನಿಸಿರುವ ಸರ್ಕಾರವು ನ್ಯಾಯಮೂರ್ತಿ ಮೈಕಲ್‌ ಕುನ್ಹಾ ಅವರ ನೇತೃತ್ವದ ಏಕ ಸದಸ್ಯ ಸಮಿತಿಯನ್ನು ನೇಮಿಸಿದೆ.

Your generous support will help us remain independent and work without fear.

Latest News

Related Posts