Monday | March 23, 2026 |

ದುಪ್ಪಟ್ಟು ದರದಲ್ಲಿ ವಿಟಮಿನ್‌ ಸಿ ಮಾತ್ರೆ ಖರೀದಿ!; ಟೆಂಡರ್‍‌ ಮರುಪರಿಶೀಲಿಸದ ಇಲಾಖೆ, ಭ್ರಷ್ಟಾಚಾರಕ್ಕೆ ದಾರಿ?

Support THE-FILE

spot_img

ಬೆಂಗಳೂರು; 44 ಕೋಟಿ ರು ವೆಚ್ಚದಲ್ಲಿ ವಿಟಮಿನ್‌ ಸಿ (ಜಗಿಯುವ) ಮಾತ್ರೆಗಳನ್ನು ದುಪ್ಪಟ್ಟು ದರದಲ್ಲಿ  ಖರೀದಿಸಲು ಮುಂದಾಗಿರುವ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು  ಆರ್ಥಿಕ ನಷ್ಟಕ್ಕೆ ದಾರಿಮಾಡಿಕೊಟ್ಟಿದ್ದರೂ ಸರ್ಕಾರವು ಗಮನಹರಿಸಿಲ್ಲ. ಈ ಸಂಬಂಧ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಬರೆದಿದ್ದ ಪತ್ರವನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ.

 

ಈ ಪ್ರಕರಣದಲ್ಲಿ ಕ್ರಮಕೈಗೊಳ್ಳಬೇಕಿದ್ದ ಅಧಿಕಾರಿವರ್ಗವು ಲೋಪಗಳಿಂದ ಕೂಡಿರುವ ಸಿಂಗಲ್‌ ಟೆಂಡರ್‍‌ನ್ನು ಇದುವರೆಗೂ ರದ್ದುಗೊಳಿಸಿಲ್ಲ. ಬದಲಿಗೆ ಇದೇ ಟೆಂಡರ್‍‌ನ್ನು ಅಂತಿಮಗೊಳಿಸಲು ಅಧಿಕಾರಿವರ್ಗವೇ ಹುನ್ನಾರ ನಡೆಸಿದೆ  ಎಂದು ಗೊತ್ತಾಗಿದೆ. ಕ್ರಮ ಕೈಗೊಳ್ಳದೇ ಇರುವ ಅಧಿಕಾರಿವರ್ಗದ ನಡೆಯು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಂತಾಗಿದೆ

 

ಈ ಕುರಿತು  ‘ದಿ ಫೈಲ್‌’ ದಾಖಲೆ ಸಹಿತ  ವರದಿ ಪ್ರಕಟಿಸಿದ್ದ ಬೆನ್ನಲ್ಲೇ  ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿತ್ತು.  ವಕೀಲ ಪ್ರಶಾಂತ್‌ ಮೆಥಾಲ್‌ ಎಂಬುವರು ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ 2024ರ ಜುಲೈ 17ರಂದು ದೂರು ಸಲ್ಲಿಸಿದ್ದರು.  ಈ ದೂರನ್ನಾಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಸಚಿವ ದಿನೇಶ್‌ ಗುಂಡೂರಾವ್‌ ಅವರು ಅಧಿಕಾರಿಗಳಿಗೆ 2024ರ ಜುಲೈ 24ರಂದು  ನಿರ್ದೇಶಿಸಿದ್ದರು.

 

ಈ ನಿರ್ದೇಶನದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಆಯುಕ್ತರಿಗೆ 2024ರ ಆಗಸ್ಟ್‌ 12ರಂದು ಪತ್ರವೊಂದನ್ನು ಬರೆದಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

 

 

 

 

‘ಈ ದೂರನ್ನಾಧರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು,’ ಎಂದು 2024ರ ಆಗಸ್ಟ್‌ 12ರಂದು ಇಲಾಖೆಯ ಅಯುಕ್ತರು ಮತ್ತು ಕೆಎಸ್‌ಎಂಎಸ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಿರುವುದು ಗೊತ್ತಾಗಿದೆ.

 

ಪ್ರಕರಣದ ಹಿನ್ನೆಲೆ

 

ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಿಮಿನ್‌ ಸಿ (ಜಗಿಯುವ) ಮಾತ್ರೆಗಳನ್ನು 44.00 ಕೋಟಿ ರು. ವೆಚ್ಚದಲ್ಲಿ ಖರೀದಿಸಲು ಮುಂದಾಗಿರುವ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ನಿರ್ದಿಷ್ಟ ಕಂಪನಿಗೇ ಅವಕಾಶ ಕಲ್ಪಿಸಲು ಮರು ಟೆಂಡರ್‌ ಕರೆಯದೇ ಸಿಂಗಲ್‌ ಟೆಂಡರ್‌ ನಡೆಸಿತ್ತು.

 

ಬಜಾಜ್ ಹೆಲ್ತ್‌ ಕೇರ್‌ ಲಿಮಿಟೆಡ್‌ ಕಂಪನಿಗಷ್ಟೇ ಸರಿ ಹೊಂದುವಂತೆ ಟೆಂಡರ್‌ ಷರತ್ತುಗಳನ್ನು ರೂಪಿಸಲಾಗಿತ್ತು.  ಈ ಟೆಂಡರ್‌ನಲ್ಲಿ ಅಂದಾಜು ಬೆಲೆಯನ್ನು ಹೆಚ್ಚಿಸುವ ಮೂಲಕ ದರವನ್ನೂ ಹೆಚ್ಚಳಗೊಳಿಸಿತ್ತು.  ಅಲ್ಲದೇ ಈ ಕಂಪನಿಯು ನಮೂದಿಸಿರುವ ದರವನ್ನು ಕೆಎಸ್‌ಎಂಎಸ್‌ಸಿಎಲ್‌, ನೆರೆರಾಜ್ಯಗಳ ದರದೊಂದಿಗೆ ಹೋಲಿಸಿರಲಿಲ್ಲ. ದರಗಳ ಕುರಿತು ಸಚಿವ ದಿನೇಶ್‌ ಗುಂಡೂರಾವ್‌ ಅವರನ್ನೂ  ನಿಗಮದ ಅಧಿಕಾರಿಗಳು ಕತ್ತಲಲ್ಲಿ ಇರಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

 

ಟೆಂಡರ್‌ನಲ್ಲಿ ಭಾಗವಹಿಸುವ ಕಂಪನಿಗಳು/ ಸರಬರಾಜು ಸಂಸ್ಥೆಗಳು ಔಷಧ ಉತ್ಪನ್ನಗಳ ಮಾದರಿಗಳನ್ನು ಸಲ್ಲಿಸುವ ಷರತ್ತನ್ನು ತೆಗೆದು ಹಾಕಿರುವ ಕಾರಣ ವಿಟಮಿನ್‌ ಸಿ ಮಾತ್ರೆಗಳನ್ನು ಬಿಡ್‌ದಾರರಿಂದ ಮಾದರಿಯನ್ನೂ ಸಹ ತೆಗೆದುಕೊಂಡಿಲ್ಲ. ಹೀಗಾಗಿ ಇಡೀ ಪ್ರಕ್ರಿಯೆಯು ನಿರ್ದಿಷ್ಟ ಕಂಪನಿ/ಸರಬರಾಜು ಸಂಸ್ಥೆಯ ಜತೆ ಪೂರ್ವ ನಿರ್ಧರಿತ ಒಪ್ಪಂದ ಮಾಡಿಕೊಂಡಿತ್ತು.

 

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ವಿಟಮಿನ್ ಸಿ ಜಗಿಯಬಹುದಾದ (500 ಮಿ ಗ್ರಾಂ) 66,90,68,400 ಪ್ರಮಾಣದಲ್ಲಿ ಮಾತ್ರೆಗಳನ್ನು ಖರೀದಿಸಲು 2024ರ ಜನವರಿ 12ರಂದು ಟೆಂಡರ್ ಆಹ್ವಾನಿಸಿತ್ತು.

 

ನಂತರ ಟೆಂಡರ್‌ ಅವಧಿಯನ್ನು 5 ಬಾರಿ ವಿಸ್ತರಿಸಲಾಗಿತ್ತು. ಬಜಾಜ್‌ ಹೆಲ್ತ್‌ ಕೇರ್‌ ಹೊರತುಪಡಿಸಿ ಬೇರೆ ಯಾವ ಕಂಪನಿಗಳು ಭಾಗವಹಿಸಿರಲಿಲ್ಲ.

 

ಇಂತಹ ಸಂದರ್ಭದಲ್ಲಿ ಟೆಂಡರ್‌ ಷರತ್ತುಗಳನ್ನು ಸಡಿಲಗೊಳಿಸಿ ಮರು ಟೆಂಡರ್‌ ಕರೆಯಬೇಕಾಗಿತ್ತು. ಆದರೆ ನಿಗಮವು ಈ ಪ್ರಕ್ರಿಯೆಯನ್ನು ಮಾಡಿಲ್ಲ. ಹೀಗಾಗಿ ಸಿಂಗಲ್‌ ಟೆಂಡರ್‌ ಆಗಿತ್ತು.

ವಿಟಮಿನ್‌ ಸಿ ಮಾತ್ರೆ ಖರೀದಿಗೆ ಸಿಂಗಲ್‌ ಟೆಂಡರ್‍‌; ದುಪ್ಪಟ್ಟು ದರ, ಬಹು ಕೋಟಿ ನಷ್ಟ?

ಬಜಾಜ್‌ ಹೆಲ್ತ್‌ ಕೇರ್‌ ಕಂಪನಿಯು ಪ್ರತಿ ಯೂನಿಟ್‌ಗೆ 69 ರು.ನಂತೆ ಅಂದಾಜು ದರವನ್ನು ನಮೂದಿಸಿದೆ. ಕೇರಳ ಮೆಡಿಕಲ್‌ ಸರ್ವಿಸ್‌ ಕಾರ್ಪೋರೇಷನ್‌ ಲಿಮಿಟೆಡ್‌ನಲ್ಲಿ ಭಾಗವಹಿಸಿದ್ದ ಟೆಂಡರ್‌ನಲ್ಲೂ ಇದೇ ಕಂಪನಿಯು ವಿಟಮಿನ್‌ ಸಿ ಪ್ರತಿ ಮಾತ್ರೆಗೆ 43 ಪೈಸೆಯಂತೆ  100  ಮಾತ್ರೆಗಳ ಘಟಕವೊಂದಕ್ಕೆ 42.56 ರು.ಗಳನ್ನು (ಎಲ್ಲಾ ತೆರಿಗೆಗಳನ್ನೂ ಒಳಗೊಂಡಂತೆ) ದರ ನಮೂದಿಸಿತ್ತು.

 

ಇದರ ಪ್ರಕಾರ ಕರ್ನಾಟಕದಲ್ಲಿ ಈ ಕಂಪನಿಯು ನಮೂದಿಸಿರುವ ದರವನ್ನು ಕೇರಳದಲ್ಲಿ ನಮೂದಿಸಿರುವ ದರಕ್ಕೆ ಹೋಲಿಸಿದರೆ ಪ್ರತಿ ಯೂನಿಟ್‌ಗೆ 26.44 ರು ವ್ಯತ್ಯಾಸವಿದೆ. ಇದು ರಾಜ್ಯದ ಬೊಕ್ಕಸಕ್ಕೆ ಅಂದಾಜು 17.69 ಕೋಟಿಯಷ್ಟು ನಷ್ಟವಾಗಲಿದೆ ಎಂದು ಹೇಳಲಾಗಿತ್ತು.

 

ಇನ್ನು ಇದೇ ವಿಟಮಿನ್‌ ಸಿ ಮಾತ್ರೆ (500 ಮಿ ಗ್ರಾಂ)ಗಳಿಗೆ ಉತ್ತರ ಪ್ರದೇಶ ಸೇರಿದಂತೆ ಇನ್ನಿತರೆ ರಾಜ್ಯಗಳಲ್ಲಿರುವ ದರಗಳೊಂದಿಗೆ ಹೋಲಿಸಿ ನೋಡಿದರೂ ಅಪಾರ ಪ್ರಮಾಣದಲ್ಲಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗುವ ಸಾಧ್ಯತೆಗಳೇ ಹೆಚ್ಚಿದ್ದವು.

 

ಉತ್ತರ ಪ್ರದೇಶದಲ್ಲಿ ಇದೇ ಮಾತ್ರೆಗೆ 29 ಪೈಸೆ ಇದೆ. ಈ ದರವು ಕರ್ನಾಟಕದ ದರಕ್ಕಿಂತ ಪ್ರತಿ ಯೂನಿಟ್‌ ಗೆ 40.00  ರು.ನಷ್ಟು ಕಡಿಮೆ ಇದೆ. ಇದರ ಪ್ರಕಾರ ರಾಜ್ಯದ ಬೊಕ್ಕಸಕ್ಕೆ ಅಂದಾಜು 26.76 ಕೋಟಿಯಷ್ಟು ನಷ್ಟವಾಗಲಿದೆ ಎಂದು ಹೇಳಲಾಗಿತ್ತು.

 

ರಾಜಸ್ಥಾನದಲ್ಲಿ ಇದೇ ಮಾತ್ರೆಯ  ದರವು ಪ್ರತಿ ಯೂನಿಟ್‌ಗೆ 41.93 ರು.ನಷ್ಟಿದೆ. ಕರ್ನಾಟಕದಲ್ಲಿ ಅನುಮೋದಿಸಿರುವ ದರಕ್ಕೆ ಹೋಲಿಸಿದರೆ ಪ್ರತಿ ಯೂನಿಟ್‌ಗೆ 27.03 ರು.ನಷ್ಟು ಕಡಿಮೆ ಇದೆ. ಇದರ ಪ್ರಕಾರ 18.11 ಕೋಟಿಯಷ್ಟು ನಷ್ಟವಾಗಲಿದೆ ಎಂದು ಗೊತ್ತಾಗಿದೆ.

ಒರಿಸ್ಸಾದಲ್ಲಿ ಇದರ ದರವು ಪ್ರತಿ ಯೂನಿಟ್‌ಗೆ 39 ರು ಇದೆ. ಈ ದರವು ಕರ್ನಾಟಕದ ದರಕ್ಕಿಂತ ಪ್ರತಿ ಯೂನಿಟ್‌ಗೆ 30 ರೂ.ಗಳಷ್ಟು ಕಡಿಮೆಯಾಗಿದೆ. ಇದರ ಪ್ರಕಾರ ಬೊಕ್ಕಸಕ್ಕೆ 20.07 ಕೋಟಿಯಷ್ಟು ನಷ್ಟವಾಗಲಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಇದರ ದರವು ಪ್ರತಿ ಯೂನಿಟ್‌ಗೆ 47 ರು. ಇದೆ. ಈ ದರವು ಕರ್ನಾಟಕದ ದರಕ್ಕೆ ಹೋಲಿಸಿದರೆ 20 ರು ಕಡಿಮೆಯಾಗಿದೆ. ಇದರ ಪ್ರಕಾರ 14.71 ಕೋಟಿ ರು ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಲಿದೆ.

ವಿಶೇಷವೆಂದರೇ ವಿಟಮಿನ್‌ ಸಿ 500 ಮಿ. ಗ್ರಾಂ ಮಾತ್ರೆಯನ್ನೂ ಒಳಗೊಂಡಂತೆ ಇನ್ನಿತರೆ ಔಷಧ ಸಾಮಗ್ರಿಗಳ ಖರೀದಿಗೆ 2023ರ ಮೇ 25ರಂದು ನಿಗಮವು ಟೆಂಡರ್‌ ಕರೆದಿತ್ತು. ಆ ವೇಳೆಯಲ್ಲಿ ಇದೇ ಮಾತ್ರೆಗೆ ಪ್ರತಿ ಯೂನಿಟ್‌ಗೆ ಅಂದಾಜು 52.25 ರು.ಗಳನ್ನು ನಿಗದಿಪಡಿಸಿತ್ತು. 8 ತಿಂಗಳ ನಂತರ ಮತ್ತೊಮ್ಮೆ ಕರೆದಿದ್ದ ಟೆಂಡರ್‌ನಲ್ಲಿ ಇದೇ ಮಾತ್ರೆಗೆ ಪ್ರತಿ ಯೂನಿಟ್‌ಗೆ 67.00 ರು.ಗಳನ್ನು ನಮೂದಿಸಿತ್ತು. ಈ ಅವಧಿಯಲ್ಲಿ 14.75 ರು. ವ್ಯತ್ಯಾಸವಿತ್ತು.

 

ಇನ್ನು ಬಿಡ್‌ದಾರರು ಇಎಂಡಿ ಮೊತ್ತವನ್ನು ಬ್ಯಾಂಕ್‌ ಗ್ಯಾರಂಟಿ ಮತ್ತು ಆನ್‌ಲೈನ್‌ ಮೂಲಕ ಪಾವತಿಸಬಹುದು ಎಂದು ಟೆಂಡರ್‌ನಲ್ಲಿ ಹೇಳಲಾಗಿದೆ. ಆದರೆ ವಾಸ್ತವದಲ್ಲಿ ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಆನ್‌ಲೈನ್‌ ವ್ಯವಸ್ಥೆಗಷ್ಟೇ ಅವಕಾಶ ಕಲ್ಪಿಸಿ ಬ್ಯಾಂಕ್‌ ಗ್ಯಾರಂಟಿ ಅವಕಾಶ ನೀಡಿಲ್ಲ. ಇದರಿಂದ ಸ್ಪರ್ಧಾತ್ಮಕತೆಗೆ ಅವಕಾಶವಿಲ್ಲದಂತಾಗುತ್ತದೆ.

 

ಇದಕ್ಕೆ ಸಂಬಂಧಿಸಿದಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಹಣಕಾಸಿನ ಬಿಡ್‌ನ್ನಷ್ಟೇ ತೆರೆಯಲಾಗಿದೆ. ಇನ್ನೂ ಈ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಅಂದಾಜು ಮೊತ್ತ ಮತ್ತು ತಾಂತ್ರಿಕ ನಿರ್ದಿಷ್ಟತೆಯನ್ನು ತಾಂತ್ರಿಕ ಸಮಿತಿಯು ನಿರ್ಧರಿಸುತ್ತದೆ. ರೇಟ್‌ ಕಾಂಟ್ರಾಕ್ಟ್‌ ಪದ್ಧತಿಯು ನಮ್ಮ ರಾಜ್ಯದಲ್ಲಿ ಇಲ್ಲ. ನಮ್ಮ ರಾಜ್ಯದಲ್ಲಿ ಕೆಟಿಪಿಪಿ ಕಾಯ್ದೆ ಮಾತ್ರ ಚಾಲ್ತಿಯಲ್ಲಿದೆ. ಹೀಗಾಗಿ ದರಗಳಲ್ಲಿ ಭಿನ್ನತೆ ಇರಬಹುದು ಎಂದು ಪ್ರತಿಕ್ರಿಯೆ ನೀಡಿದ್ದನ್ನು ಸ್ಮರಿಸಬಹುದು.

Hot this week

ಭೂ ಸ್ವಾಧೀನ, ಪರಿಹಾರದಲ್ಲಿ ಅಕ್ರಮ; ಬಿಸ್ವಾಸ್ ವರದಿ ಮೂಲೆಗುಂಪು, 29.96 ಕೋಟಿ ನಷ್ಟ ಪ್ರಕರಣಕ್ಕೆ ಕ್ಲೀನ್ ಚಿಟ್

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಾಬೀತಾಗಿದ್ದ  ಬೆಳಗಾವಿ ಜಿಲ್ಲೆ ಹುಕ್ಕೇರಿ...

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

Topics

ಭೂ ಸ್ವಾಧೀನ, ಪರಿಹಾರದಲ್ಲಿ ಅಕ್ರಮ; ಬಿಸ್ವಾಸ್ ವರದಿ ಮೂಲೆಗುಂಪು, 29.96 ಕೋಟಿ ನಷ್ಟ ಪ್ರಕರಣಕ್ಕೆ ಕ್ಲೀನ್ ಚಿಟ್

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಾಬೀತಾಗಿದ್ದ  ಬೆಳಗಾವಿ ಜಿಲ್ಲೆ ಹುಕ್ಕೇರಿ...

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

ರೋಹಿತ್ ವೇಮುಲ ಕಾಯ್ದೆ; ವ್ಯಾಖ್ಯಾನಗಳು ಅಸ್ಪಷ್ಟ, ಕಾನೂನು ಬಲವಿಲ್ಲ, ವಿಧೇಯಕವೇ ಅಪೂರ್ಣ

ಬೆಂಗಳೂರು; ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು...

ಗ್ರಾಮಠಾಣ ಜಮೀನು ಅದಲು-ಬದಲು; ಆರ್ಥಿಕ ಇಲಾಖೆ ಆಕ್ಷೇಪ ಬದಿಗೊತ್ತಿ ಎಂ ಆರ್ ಸೀತಾರಾಂ ಕುಟುಂಬದ ಬೆನ್ನಿಗೆ ನಿಂತ ಸರ್ಕಾರ

ಬೆಂಗಳೂರು; ಸರ್ಕಾರಿ ಭೂಮಿಗೆ ರಸ್ತೆಯ ಸಂಪರ್ಕ ಹೊಂದಿಲ್ಲದಿರುವ, ರಸ್ತೆ ಸಂಪರ್ಕ ಕಲ್ಪಿಸದೇ...

Related Articles

Popular Categories

error: Content is protected !!