ಹಣ ಬಚ್ಚಿಡಲು ಫ್ಲಾಟ್‌ಗಳ ಬಳಕೆ; 4 ಕೋಟಿ ರು. ಬೇನಾಮಿ ಹೂಡಿಕೆ, ಬಾಯ್ಬಿಟ್ಟ 5ನೇ ಆರೋಪಿ

ಬೆಂಗಳೂರು; ನವದೆಹಲಿಯ ಸಫ್ದರ್‍‌ ಜಂಗ್‌ ರಸ್ತೆಯಲ್ಲಿರುವ ಫ್ಲಾಟ್‌ಗಳನ್ನು ಹಣವನ್ನು ಬಚ್ಚಿಡಲು ಮೊದಲ ಆರೋಪಿ ಡಿ ಕೆ ಶಿವಕುಮಾರ್‍‌ ಅವರು ಬಳಸುತ್ತಿದ್ದರು ಎಂಬ ಸಂಗತಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ವಿವರಣೆ ಒದಗಿಸಿದ್ದರು.

 

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಡಿ ಕೆ ಶಿವಕುಮಾರ್‍‌ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‍‌ ದಾಖಲಿಸಿರುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯ ಉಪ ನಿರ್ದೇಶಕರು ನ್ಯಾಯಾಲಯಕ್ಕೆ ಸಲ್ಲಿಸಿರುವ ಸಂಪೂರ್ಣ ವಿವರಗಳು ಮುನ್ನೆಲೆಗೆ ಬಂದಿವೆ.

 

ಈ ಸಂಬಂಧ ‘ದಿ ಫೈಲ್‌’ ಸಮಗ್ರ ಕಡತವನ್ನು ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

‘ನವದೆಹಲಿಯ ಮತ್ತೊಂದು ಮನೆ ನಂ.201 ಸಪ್ದರ್‍‌ಜಂಗ್‌ನಲ್ಲಿ 6,68,84,100 ರು.ಗಳನ್ನು ವಶಕ್ಕೆ ಪಡೆದಿತ್ತು. ನಾಲ್ಕನೇ ಆರೋಪಿ ನೀಡಿದ ಹೇಳಿಕೆ ಅನುಸಾರ ಈ ಬಂಗಲೆಯು ಸುರೇಶ್‌ ಕುಮಾರ್‍‌ ಶರ್ಮ ಅವರಿಗೆ ಸೇರಿದೆ. ಅವರು ಸಾರಿಗೆ ಬಿಸಿನೆಸ್‌ ನಡೆಸುತ್ತಿದ್ದಾರೆ. ಮತ್ತು ಮೂರನೇ ಆರೋಪಿ ಸಹೋದರರಾಗಿದ್ದಾರೆ. ಈ ಮನೆಯನ್ನು ಮೂರನೇ ಆರೋಪಿ ಬಳಕೆ ಮಾಡುತ್ತಿದ್ದರು. ಮತ್ತು ಮೊದಲನೇ ಆರೋಪಿಯು ಹಲವು ವರ್ಷಗಳಿಂದ ಹಣವನ್ನು ಬಚ್ಚಿಡಲು ಈ ಬಂಗಲೆಯನ್ನು ಬಳಸುತ್ತಿದ್ದರು,’ ಎಂದು ವಿವರಿಸಿರುವುದು ಗೊತ್ತಾಗಿದೆ.

 

ಐದನೇ ಆರೋಪಿಯು ಹಲವು ವಿಷಯಗಳನ್ನು ಬಾಯಿ ಬಿಟ್ಟಿದ್ದಾರೆ. ಅದರಲ್ಲಿ ಹಲವು ಕೋಟಿ ರೂ.ಗಳ ಅವ್ಯವಹಾರ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದರಲ್ಲಿ ಬಹುತೇಕ ಹಣವು ಲೆಕ್ಕಕ್ಕಿಲ್ಲ. ಹಾಗೆಯೇ ನಗದು ರೂಪದಲ್ಲಿ ಚಲಾವಣೆಯಾಗಿದೆ ಎಂದು ಐದನೇ ಆರೋಪಿಯು ವಿವರಿಸಿದ್ದಾರೆ.

 

‘ಇದು ಸ್ಪಷ್ಟವಾಗಿ ಮೊದಲ ಆರೋಪಿಯ ನಗದನ್ನು ವಿವಿಧ ರೂಪದಲ್ಲಿ ತಿರುಗಿಸುವ ತಂತ್ರವಾಗಿದೆ. ಮುಂದುವರೆದು ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌ ಆದಾಯ ತೆರಿಗೆ ಇಲಾಖೆಯಿಂದ ತಪ್ಪಿಸಿಕೊಳ್ಳಲು ಎರಡನೇ ಆರೋಪಿಯನ್ನು ಮುಂದು ಮಾಡಿದ್ದಾರೆ,’ ಎಂದು ಹೇಳಿರುವುದು ಗೊತ್ತಾಗಿದೆ.

 

ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌ ಅವರ ಸೂಚನೆಯಂತೆ ನಾಲ್ಕನೇ ಆರೋಪಿಯು ಆಗಿದ್ದಾಂಗ್ಗೆ ಹಣವನ್ನು ಇಟ್ಟಿರುತ್ತಾರೆ. ಈ ಹಣವು ಮೊದಲ ಆರೋಪಿ ಡಿ ಕೆ ಶಿವಕುಮಾರ್‍‌ ಅವರಿಗೆ ಸೇರಿದೆ ಇದನ್ನು ದಾಖಲೆ ರಹಿತ ಖಾತೆಗಳಲ್ಲಿ, ರಿಯಲ್‌ ಎಸ್ಟೇಟ್‌ ಬಿಸಿನೆಸ್‌ನಲ್ಲಿ ಹೂಡಿಕೆ ಮಾಡಲಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆ ನಾಲ್ಕನೇ ಆರೋಪಿಯು ಬಾಯಿಬಿಟ್ಟಿರುವುದು ತಿಳಿದು ಬಂದಿದೆ.

 

ನಾಲ್ಕನೇ ಆರೋಪಿ ಮನೆಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ ಸಂದರ್ಭದಲ್ಲಿ ಸಿಕ್ಕಿದ್ದ 41,03,600 ಲಕ್ಷ ರು.ಗಳನ್ನು ಜಫ್ತಿ ಮಾಡಲಾಗಿತ್ತು. ರಿಯಲ್‌ ಎಸ್ಟೇಟ್‌ನಲ್ಲಿ ಬೇನಾಮಿ ಹೂಡಿಕೆಗೆ ಸಂಬಂಧಿಸಿದಂತೆ ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌, ಅಜಯ್‌ ಖನ್ನಾ ಅವರೊಂದಿಗೆ ವ್ಯವಹಾರ ನಡೆಸಿದ್ದರು. ಈ ಸಂಬಂಧ ಅಜಯ್‌ ಖನ್ನಾ ಅವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಆ ವೇಳೆಯಲ್ಲಿ ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌ 4 ಕೋಟಿ ರು.ಗಳನ್ನು ಬೇನಾಮಿಯಾಗಿ ಹೂಡಿಕೆ ಮಾಡಿದ್ದರು ಎಂದು ಬಹಿರಂಗಪಡಿಸಿದ್ದರು ಎಂಬುದು ಗೊತ್ತಾಗಿದೆ.

 

ಆದರೆ ಅಜಯ್‌ ಖನ್ನ ಜೊತೆಗೆ ಯಾವುದೇ ವ್ಯವಹಾರ ಇಲ್ಲ ಎಂದು ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌ ಹೇಳಿದ್ದರು. ದಿವಂಗತ ಸುರೇಶ್‌ ಶರ್ಮ ಅವರ ಮೂಲಕ 1 ಕೋಟಿ ಮುಂಗಡವಾಗಿ ಪಡೆದಿದ್ದೇನೆ ಎಂದು ಅಜಯ್‌ ಖನ್ನ ಹೇಳಿದ್ದರು. ನಂತರ ಈ ಹಣವನ್ನು ಹಿಂತಿರುಗಿಸಿರುವುದಾಗಿ ಅಜಯ್‌ ಖನ್ನಾ ಹೇಳಿದ್ದರು ಎಂದು ವಿವರಿಸಲಾಗಿದೆ.

the fil favicon

SUPPORT THE FILE

Latest News

Related Posts