ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ತನ್ನ ಕೊನೆ ದಿನಗಳಲ್ಲಿ ನಗದು ಮತ್ತು ಜಮೆ ರೂಪದಲ್ಲಿ 83,628.63 ಕೋಟಿ ರು ಗಳನ್ನು ರಾಜ್ಯದ ಖಜಾನೆಯಲ್ಲಿ ಇರಿಸಿತ್ತು ಎಂದು ಹಣಕಾಸು ಲೆಕ್ಕದ ಕುರಿತಾಗಿ ಲೆಕ್ಕ ಪರಿಶೋಧನೆ ನಡೆಸಿರುವ ಸಿಎಜಿ ವರದಿಯು ಬಹಿರಂಗಪಡಿಸಿದೆ.
ಈ ಸಂಬಂಧ ಸಿಎಜಿಯು ವಿಧಾನಸಭೆಗೆ 2022-23ನೇ ಸಾಲಿನ ವರದಿಯನ್ನು ಮಂಡಿಸಿದೆ.
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಸರ್ಕಾರದ ಅವಧಿಗೆ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಲು ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲಿಯೇ ಬಿಜೆಪಿ ಸರ್ಕಾರವು ತನ್ನ ಕೊನೇ ದಿನಗಳಲ್ಲಿ ಖಜಾನೆಯಲ್ಲಿ ಉಳಿಸಿದ್ದ ನಗದು ಮತ್ತಿತರ ಹಣಕಾಸು ವಿವರಗಳು ಮುನ್ನಲೆಗೆ ಬಂದಿವೆ.
2022ರ ಮಾರ್ಚ್ ಅಂತ್ಯಕ್ಕೆ 63,412.36 ಕೋಟಿ ನಗದು ಇರಿಸಿಕೊಂಡಿದ್ದ ಹಿಂದಿನ ಸರ್ಕಾರವು ಅದೇ ಅವಧಿಯಲ್ಲಿ ಹೂಡಿಕೆ ಖಾತೆಗಳಲ್ಲಿ 31,973.89 ಕೋಟಿ ನಗದು ಹೊಂದಿತ್ತು. ಇದೇ ವೇಳೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ 1,518.39 ಕೋಟಿ ಠೇವಣಿ ಇರಿಸಿತ್ತು. ಮೀಸಲಿಟ್ಟ ನಿಧಿಯಲ್ಲಿನ ಹೂಡಿಕೆ 29,914.43 ಕೋಟಿ ಇತ್ತು ಎಂದು ವರದಿಯಲ್ಲಿ ದಾಖಲಿಸಿದೆ.
2023ರ ಮಾರ್ಚ್ ಅಂತ್ಯಕ್ಕೆ ನಗದು ಬಾಕಿಯ ಹೂಡಿಕೆ ಖಾತೆಯಲ್ಲಿ 47,919.99 ಕೋಟಿ ರೂ. ಇತ್ತು. ಇತರೆ ಬಂಡವಾಳ ವೆಚ್ಚ 3,83,617.67 ಕೋಟಿ ಇತ್ತು. ಇದೇ ಅವಧಿಯಲ್ಲಿ ಸಾಲಗಳು ಮತ್ತು ಮುಂಗಡಗಳು 38,101.38 ಕೋಟಿ ರು.ನಷ್ಟಿತ್ತು ಎಂದು ವರದಿಯಲ್ಲಿ ಹೇಳಿದೆ.
ಇದೇ ಅವಧಿಯಲ್ಲಿ ಸರ್ಕಾರದ ಋಣಭಾರದ ಕುರಿತು ವಿವರಿಸಿರುವ ವರದಿಯು ಮಾರ್ಚ್ 2023ರ ಮಾರ್ಚ್ 31ರ ಅಂತ್ಯಕ್ಕೆ ಸಾರ್ವಜನಿಕ ಸಾಲವು 4,03, 033.05 ಕೋಟಿ ರು. ಇತ್ತು. 2022ರ ಮಾರ್ಚ್ ಅಂತ್ಯಕ್ಕೆ 3,74, 426,81 ಕೋಟಿ ರು ಇತ್ತು. ಅಂದರೆ ಒಂದೇ ವರ್ಷದಲ್ಲಿ 28,606 ಕೋಟಿ ರು. ಹೆಚ್ಚಿಗೆ ಸಾಲ ಮಾಡಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
2023ರ ಮಾರ್ಚ್ ಅಂತ್ಯಕ್ಕೆ ಕೇಂದ್ರ ಸರ್ಕಾರದಿಂದ ಮುಂಗಡ ಮತ್ತು ಸಾಲದ ರೂಪದಲ್ಲಿ 49,131.16 ಕೋಟಿ ರು. ಪಡೆದಿತ್ತು. ಕೇಂದ್ರ ಪುರಸ್ಕೃತ ಯೋಜನೆಗಳಿಗೆ 5,506.97 ಕೋಟಿ ರು. ಸಾಲ ಪಡೆದಿತ್ತು. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಸರ್ಕಾರವು ಇತರೆ ಸಾಲಗಳ ರೂಪದಲ್ಲಿ 43,622.02 ಕೋಟಿ ರು ಸಾಲ ಎತ್ತಿತ್ತು.
ಬಿಜೆಪಿ ಸರ್ಕಾರದ ಅವಧಿಯ ಬೊಕ್ಕಸದಲ್ಲಿ 24,714.77 ಕೋಟಿ ರು ನಗದು ಬಾಕಿ; ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟಿದೆ?
ಸಾರ್ವಜನಿಕ ಖಾತೆಯಲ್ಲಿ ಋಣಭಾರವು 2023ರ ಮಾರ್ಚ್ ಅಂತ್ಯಕ್ಕೆ 1,69,358.91 ಕೋಟಿ ರು. ಇತ್ತು. ಸಣ್ಣ ಉಳಿತಾಯ ಮತ್ತು ಭವಿಷ್ಯ ನಿಧಿ ಯೋಜನೆಯಲ್ಲಿ 45,736 ಕೋಟಿ ರು. ಹೊಣೆಗಾರಿಕೆ ಇತ್ತು. ಇದೇ ಅವಧಿಯಲ್ಲಿ 60,327.74 ಕೋಟಿ ರು ಮೀಸಲು ನಿಧಿ ಇತ್ತು. ಠೇವಣಿ (ಕೆ) 59,874.35 ಕೋಟಿ ರು ಇತ್ತು. ಇತರೆ ಖಾತೆಗಳಲ್ಲಿ 3,420.65 ಕೋಟಿ ರು. ಹೊಣೆಗಾರಿಕೆ ಇತ್ತು ವರದಿಯಲ್ಲಿ ವಿವರಿಸಿದೆ.
2023ರ ಮಾರ್ಚ್ ಅಂತ್ಯಕ್ಕೆ ರಾಜ್ಯ ಸರ್ಕಾರದ ಆಂತರಿಕ ಸಾಲವು 3,53,893.80 ಕೋಟಿ ರು. ಇತ್ತು. ಹಿಂದಿನ ವರ್ಷ ಅಂದರೇ 2022ರ ಮಾರ್ಚ್ ಅಂತ್ಯಕ್ಕೆ ರಾಜ್ಯ ಸರ್ಕಾರದ ಆಂತರಿಕ ಸಾಲ 3,29,041.81 ಕೋಟಿ ರು. ಇತ್ತು. ಕೇಂದ್ರ ಸರ್ಕಾರದಿಂದ ಸಾಲ ಮತ್ತು ಮುಂಗಡ ರೂಪದಲ್ಲಿ 45,385,00 ಕೋಟಿ ರೂ.ಗಳಿತ್ತು. ಕೇಂದ್ರದ ಇತರೆ ಯೋಜನೆಗಳಿಗೆ ಸಾಲ 38,356 ಕೋಟಿ ನೀಡಿತ್ತು.
ಸಾರ್ವಜನಿಕ ಖಾತೆಯ ಋಣಭಾರ ಖಾತೆಯಲ್ಲಿ 1,31,285.37 ಕೋಟಿ ನೀಡಲಾಗಿತ್ತು. ಮೀಸಲು ನಿಧಿ 53,045.85 ಕೋಟಿ ಇದ್ದರೆ, ಠೇವಣಿಗಳು 33,682.31 ಕೋಟಿ ಇದೆ. ಮತ್ತು ಇತರೆ ಖಾತೆಯಲ್ಲಿ 2,224.32 ಕೋಟಿ ಇತ್ತು ಎಂದು ವರದಿಯಲ್ಲಿ ಹೇಳಿದೆ.
ಮಾರ್ಚ್ 31 2023ಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಋಣಭಾರ ಸಾರ್ವಜನಿಕ ಸಾಲ 4,03,033.05 ಕೋಟಿ ಇತ್ತು. ಕೇಂದ್ರ ಸರ್ಕಾರದಿಂದ ಪಡೆದಿರುವ ಸಾಲಗಳು 49,139.16 ರೂ. ಇತ್ತು. ಕೇಂದ್ರ ಸರ್ಕಾರದ ಯೋಜನೆಗಳಿಗೆ 5,506.97 ಕೋಟಿ ರು ಸಾಲ ನೀಡಿತ್ತು.
ಇದೇ ಅವಧಿಯಲ್ಲಿ ಸಾರ್ವಜನಿಕ ಖಾತೆಯಲ್ಲಿ ಋಣಭಾರ 1,69,358.91 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೀಸಲು ನಿಧಿ 60,327.72 ಕೋಟಿ ರೂ. ಇತ್ತು. ಠೇವಣಿಗಳು 59, 874,35 ಕೋಟಿ ಇತ್ತು. ಇದೇ ಅವಧಿಯಲ್ಲಿ ಬಂಡವಾಳ ವೆಚ್ಚದ ರೂಪದಲ್ಲಿ 3,99,069.27 ಕೋಟಿ ರು. ಇತ್ತು. ಕಂಪನಿಗಳು ಮತ್ತು ನಿಗಮಗಳಲ್ಲಿ ಷೇರು ಹೂಡಿಕೆ 70,657.43 ಕೋಟಿ ಇತ್ತು. ಇತರೆ ಬಂಡವಾಳ ವೆಚ್ಚವು 3,28,411.84 ಕೋಟಿಯಷ್ಟಿತ್ತು.
ಸಾಲ ಮತ್ತು ಮುಂಗಡ 35,329.29 ಕೋಟಿ ಇತ್ತು. ಇದೇ ಸಂದರ್ಭದಲ್ಲಿ ಜಮಾ 1,206.25 ಕೋಟಿ ರೂ. ಇದ್ದರೆ, ಅಧಿಕ ವೆಚ್ಚ 7,188.07 ಕೋಟಿ ರು ಇತ್ತು ಎಂದು ವರದಿಯಲ್ಲಿ ವಿವರಿಸಿದೆ.