ಬೆಂಗಳೂರು; ಹೊಸ ಕಲ್ಲಿದ್ದಲು ನೀತಿ ದೋಷಪೂರಿತವಾಗಿದೆ ಮತ್ತು ಇದು ಹಗರಣಕ್ಕೆ ದಾರಿ ಮಾಡಿಕೊಡಲಿದೆ ಎಂದು 2015ರಲ್ಲಿಯೇ ಕೇಂದ್ರ ಸಚಿವರು ಎಚ್ಚರಿಸಿದ್ದರೂ ಸಹ ಅದನ್ನು ನಿರ್ಲಕ್ಷ್ಯಿಸಲಾಗಿತ್ತು. ಈ ಕುರಿತು ಸಚಿವರಿಬ್ಬರೂ ಬರೆದಿದ್ದ ಆಂತರಿಕ ಪತ್ರವನ್ನು ಸಂಸತ್ ಮತ್ತು ಸಾರ್ವಜನಿಕವಾಗಿ ಬಹಿರಂಗಪಡಿಸಿರಲಿಲ್ಲ.
ಸರ್ಕಾರದ ನಿರ್ಲಕ್ಷ್ಯ ಮತ್ತು ಸಚಿವರಿಬ್ಬರು ತಮ್ಮ ಆಂತರಿಕ ಪತ್ರಗಳಲ್ಲಿ ವ್ಯಕ್ತಪಡಿಸಿದ್ದ ಕಳಕಳಿಗೆ ಸ್ಪಂದಿಸದ ಪರಿಣಾಮ ಹಗರಣಕ್ಕೆ ಹೇಗೆ ದಾರಿಮಾಡಿಕೊಟ್ಟಿದೆ ಎಂದು ‘ರಿಪೋರ್ಟರ್ಸ್ ಕಲೆಕ್ಟೀವ್’ನ ತನಿಖಾ ತಂಡ ದಾಖಲೆಗಳ ಸಹಿತ ಬಹಿರಂಗಗೊಳಿಸಿದೆ.
ರಿಪೋರ್ಟರ್ಸ್ ಕಲೆಕ್ಟಿವ್‌ನ ತನಿಖಾ ತಂಡದ ವಿಸ್ತೃತ ತನಿಖಾ ವರದಿಯನ್ನು ‘ ದಿ ಫೈಲ್’ ಕೂಡ ಸಹಭಾಗಿತ್ವದಡಿಯಲ್ಲಿ ಪ್ರಕಟಿಸುತ್ತಿದೆ.
ಬಿಜೆಪಿ ನಾಯಕರಾದ ಆರ್.ಕೆ.ಸಿಂಗ್ ಮತ್ತು ರಾಜೀವ್ ಚಂದ್ರಶೇಖರ್ ಅವರ ಮುಂದಾಲೋಚನೆಯುಳ್ಳ ಎಚ್ಚರಿಕೆ ನಡುವೆಯೂ ಕೇಂದ್ರ ಸರ್ಕಾರ ದೋಷಪೂರಿತ ಕಲ್ಲಿದ್ದಲು ಹರಾಜಿನೊಂದಿಗೆ ಮುಂದಡಿಯಿಟ್ಟಿತು.
ಆಂತರಿಕ ಪತ್ರಗಳಲ್ಲಿ ಇಬ್ಬರೂ ಸಂಸದರು ಹೊಸ ಕಲ್ಲಿದ್ದಲು ನೀತಿಗಳಲ್ಲಿನ ಲೋಪಗಳನ್ನು ಎತ್ತಿ ತೋರಿಸಿದರು. ಮುಂದಿನ ದಿನಗಳಲ್ಲಿ ಹಗರಣ ಆಗಬಹುದೆಂದು ಎಚ್ಚರಿಸಿದ್ದರು. ಅವರು ನೀಡಿದ ಎಚ್ಚರಿಕೆ ಭವಿಷ್ಯವಾಣಿ ಇದ್ದಂತಿತ್ತು.
ಫೆಬ್ರವರಿ 8ರಂದು ಭಾರತದ ಆರ್ಥಿಕತೆಯ ಕುರಿತು ಶ್ವೇತಪತ್ರವನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಳುವಳಿಯಾಗಿ ಬಂದ ಅವ್ಯವಸ್ಥಿತವಾದ ಆರ್ಥಿಕತೆಯನ್ನು ಹೇಗೆ ಸರಿಪಡಿಸಿತು ಎಂಬುದನ್ನು ಪ್ರಸ್ತುತಪಡಿಸಲಾಗಿತ್ತು. ಈ ಶ್ವೇತಪತ್ರದಲ್ಲಿ ಯುಪಿಎ ಅವಧಿಯಲ್ಲಿ ಹೇಗೆ 1.86 ಲಕ್ಷ ಕೋಟಿ ರೂ. ಮೌಲ್ಯದ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡಲಾಯಿತು ಎಂಬುದರ ಕುರಿತು ವಿವರಗಳು ಇತ್ತು.
ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯಲ್ಲಿ ಮೋದಿ ಸರ್ಕಾರ “ಹೇಗೆ ದೇಶವನ್ನು ಕತ್ತಲಿನಿಂದ ಬೆಳಕಿಗೆ” ತಂದಿತು ಎಂಬುದನ್ನು ವಿವರಿಸಿತ್ತು. ಕಲ್ಲಿದ್ದಲು ಕ್ಷೇತ್ರದಲ್ಲಿ ಸುಧಾರಣೆಗಳನ್ನು ಮಾಡುವ ಮೂಲಕ ನಿಕ್ಷೇಪಗಳನ್ನು ಹಂಚಿಕೆ ಮಾಡುವುದರಲ್ಲಿ ಹೇಗೆ ಪಾರದರ್ಶಕತೆ ಕಾಪಾಡಿಕೊಳ್ಳಲಾಗಿತ್ತು ಎಂದು ಹೇಳಿದೆ. 2014ರಲ್ಲಿ ಕಲ್ಲಿದ್ದಲು ಹಗರಣ ದೇಶವನ್ನು ಬೆಚ್ಚಿ ಬೀಳುವಂತೆ ಮಾಡಿತ್ತು ಎಂದು ಶ್ವೇತಪತ್ರ ವಿವರಿಸಿತ್ತು.
2015ರಲ್ಲಿ ಮೋದಿ ನೇತೃತ್ವ ಸರ್ಕಾರ ಹೊಸ ಕಲ್ಲಿದ್ದಲು ಹರಾಜನ್ನು ಕೈಗೊಂಡಿತು. 200ಕ್ಕೂ ಹೆಚ್ಚು ನಿಕ್ಷೇಪಗಳನ್ನು ಹಂಚಿಕೆ ಮಾಡಿತು. ಇದರ ಬೆಲೆ ಲಕ್ಷ ಕೋಟಿಗಳಾಗಿದ್ದು 41 ಲಕ್ಷ ಕೋಟಿ ಟನ್‌ಗಳಷ್ಟು ಕಲ್ಲಿದ್ದಲನ್ನು ಹರಾಜು ಹಾಕಲಾಯಿತು ಎಂದು ಶ್ವೇತಪತ್ರದಲ್ಲಿ ಹೇಳಲಾಗಿದೆ.
ಈ ಶ್ವೇತಪತ್ರಕ್ಕೆ ವಿರುದ್ಧವಾದ ಮಾಹಿತಿಯು ರಿಪೋರ್ಟರ್‍ಸ್ ಕಲೆಕ್ಟಿವ್‌ಗೆ ಲಭ್ಯವಾಗಿದೆ. ಅದರಂತೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಲಾಗಿತ್ತು. ಹೊಸ ಕಲ್ಲಿದ್ದಲು ನೀತಿ ಹೇಗೆ ದೋಷಪೂರಿತವಾಗಿದೆ ಮತ್ತು ಅದರಿಂದ ಹಗರಣಗಳಿಗೆ ಕಾರಣವಾಗಲಿದೆ ಎಂದು ಮೋದಿ ಸಂಪುಟದ ಇಬ್ಬರು ಸಚಿವರು ಮೊದಲೇ ಹೇಳಿದ್ದರು.
ಅವರು ಹೀಗೆ ಎಚ್ಚರಿಕೆ ನೀಡಿದ್ದಾರೆ. ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿಕೆ ಮಾಡುವ ‘ಕರಡು ‘ದೋಷಪೂರಿತ’ವಾಗಿದ್ದು ಖಾಸಗಿ ಕಂಪನಿಗಳು ಹರಾಜಿಗೆ ಬರಲಿವೆ. ದೇಶದ ಸಂಪತ್ತಿನಲ್ಲಿ ಭಾರಿ ಹಣವನ್ನು ಸಂಪನ್ನನೂಲವನ್ನು ಲೂಟಿ ಮಾಡಲಿದ್ದಾರೆ ಎಂದು ಎಚ್ಚರಿಸಿದ್ದರು.
ಅವರ ಈ ಮುಂದಾಲೋಚನೆಯನ್ನು ಈ ಹಿಂದಿನ ಹಣಕಾಸು ಸಚಿವರಾಗಿದ್ದ ಅರುಣ್‌ಜೇಟ್ಲಿ ಅವರಿಗೆ ತಿಳಿಸಲಾಗಿತ್ತು. ಆಗಿನ ಕಲ್ಲಿದ್ದಲು ಸಚಿವರಾದ ಪಿಯುಷ್ ಗೋಯೆಲ್ ಅವರಿಗೂ ತಿಳಿಸಲಾಗಿತ್ತು. ಸಂಸತ್ ಸದಸ್ಯರೊಬ್ಬರು ಈ ಕುರಿತು ಪ್ರಧಾನ ಮಂತ್ರಿ ಮೋದಿ ಅವರ ಗಮನಕ್ಕೂ ತಂದಿದ್ದರು.
ಸರ್ಕಾರ ಅವರ ಸಲಹೆಗೆ ಮಾನ್ಯತೆ ನೀಡಲಿಲ್ಲ. ಬದಲಿಗೆ ಹೊಸ ಕಲ್ಲಿದ್ದಲು ನೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದರಲ್ಲಿ ಸಾರ್ವಜನಿಕ ಹಿತ ಅಡಗಿದೆ ಮಾತ್ರವಲ್ಲದೆ ಪಾರದರ್ಶಕವಾಗಿದೆ ಎಂದು ಹೇಳಿದರು. ಈ ನೀತಿ ಅಡಿಯಲ್ಲಿ ನೂರಾರು ನಿಕ್ಷೇಪಗಳನ್ನು ಹರಾಜು ಹಾಕಿದರು.
ಒಂದು ವರ್ಷದ ನಂತರ 2016ರ ಜುಲೈ ವೇಳೆಗೆ ಇಬ್ಬರೂ ಸಂಸದರು ಹೇಳಿದ್ದು ಸರಿ ಎಂದು ಸಾಬೀತಾಯಿತು. ಸರ್ಕಾರದ ಆಡಿಟರ್, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಸಂಸತ್ತಿನಲ್ಲಿ ತಮ್ಮ ಟಿಪ್ಪಣಿಯನ್ನು ಮಂಡಿಸಿ ಈ ನೀತಿ ಹೇಗೆ ಅಸ್ಪಷ್ಟ ಮತ್ತು ಸಂದೇಹಾತ್ಮಕವಾಗಿದೆ ಎಂಬುದನ್ನು ಸಾಕ್ಷಿ ಸಮೇತ ತಿಳಿಸಿದರು. ಹೇಗೆ ಸಂಚು ರೂಪಿಸಲಾಗಿದೆ ಎಂಬುದನ್ನು ನಿರೂಪಿಸಿದರು. ಖಾಸಗಿ ಕಂಪನಿಗಳು ನಿಕ್ಷೇಪಗಳನ್ನು ಪಡೆಯಲು ಹರಾಜಿನಲ್ಲಿ ತಮಗಿಷ್ಟ ಬಂದ ಹಾಗೆ ರಿಗ್ಗಿಂಗ್ ಮಾಡಿದ್ದಾರೆ ಎಂಬುದನ್ನೂ ವಿವರಿಸಿದೆ.
ಈ ಇಬ್ಬರೂ ಸಚಿವರು ಸರ್ಕಾರಕ್ಕೆ ಆಂತರಿಕ ಪತ್ರವನ್ನು ಬರೆದಿದ್ದಾರೆ. ಆದರೆ ಎಂದೂ ಸಹ ಸಂಸತ್ತಿನಲ್ಲಿ ಈ ಬಗ್ಗೆ ಹೇಳಿಲ್ಲ ಮತ್ತು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಬಿಜೆಪಿಯ ಇಬ್ಬರೂ ಕೇಂದ್ರ ಸಚಿವರಲ್ಲಿ ಆರ್.ಕೆ.ಸಿಂಗ್ ವಿದ್ಯುತ್ ಸಚಿವರಾಗಿದ್ದರೆ ಮತ್ತು ರಾಜೀವ್ ಚಂದ್ರಶೇಖರ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದಾರೆ.
2015ರಲ್ಲಿ ನಡೆದ ಎರಡು ಹರಾಜು ಪ್ರಕ್ರಿಯೆಗಳಲ್ಲಿ (ಇದನ್ನು ಸಿಎಜಿ ಪರಿಶೀಲನೆ ಮಾಡಿದೆ) ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಗೆ ಸಿದ್ಧವಾಗಿರುವ ನಿಕ್ಷೇಪಗಳಾಗಿವೆ. ಇವುಗಳನ್ನು ಖಾಸಗಿ ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ. ಈಗಾಗಲೇ ಸಿದ್ದವಾಗಿರುವ ಗಣಿಗಳನ್ನು ಅತಿ ಶೀಘ್ರದಲ್ಲಿ ಮೈನಿಂಗ್ ಮಾಡಬಹುದಾಗಿದೆ. ಇದರ ಕಾರ್ಯಾಚರಣೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾಡಬಹುದಾಗಿದೆ. ಇಂತಹ ಗಣಿಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ನಿಕ್ಷೇಪಗಳನ್ನು ಖಾಸಗಿಯವರು ಪಡೆದಿದ್ದಾರೆ.
ಖಾಸಗಿ ಕಂಪನಿಗಳು ಹರಾಜು ಪ್ರಕ್ರಿಯೆಯನ್ನು ಹೇಗೆ ರಿಗ್ ಮಾಡಿದವು ಎಂಬುದನ್ನು ಕಲೆಕ್ಟೀವ್ ಇತ್ತೀಚೆಗಷ್ಟೆ ಬಹಿರಂಗಗೊಳಿಸಿತ್ತು. ನಂತರ ಸರ್ಕಾರ ಉಳಿದ ನಿಕ್ಷೇಪಗಳ ಹರಾಜನ್ನು ಬಿಗಿಗೊಳಿಸಲಿಲ್ಲ. ಮತ್ತು 2020ರಲ್ಲಿ ಸಂಪೂಣವಾಗಿ ಪುನರ್‍ರಚಿಸಿತು. ಆದರೆ ಆ ವೇಳೆಗಾಗಲೆ ಎಲ್ಲವನ್ನೂ ಲೂಟಿ ಮಾಡಲಾಗಿತ್ತು.
ಇಬ್ಬರು ಸಚಿವರು ಕೇಂದ್ರ ಸರ್ಕಾರಕ್ಕೆ ಬರೆದ ಪತ್ರಗಳು ಮೊಟ್ಟಮೊದಲ ಬಾರಿಗೆ ಕಲೆಕ್ಟಿವ್ ಪ್ರಕಟಿಸಿತ್ತು. ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಇದೇ ಮೊದಲ ಬಾರಿಗೆ ಗಂಭೀರ ಎಚ್ಚರಿಕೆಯನ್ನು ನೀಡಿರುವುದು ಇದೇ ಮೊದಲು. ಅದರಲ್ಲೂ ಸಂಸದರು ಮೊದಲ ಬಾರಿಗೆ ಎಚ್ಚರಿಸಿದ್ದಾರೆ. ಈ ಸಂಸದರ ಎಚ್ಚರಿಕೆಗಳು ಸರಿಯಾಗಿದೆ. ಸುಪ್ರೀ ಕೋರ್ಟ್ ಸಹ ಈ ನಿಟ್ಟಿನಲ್ಲಿ ಹೇಳಿದ್ದು ನಿಕ್ಷೇಪ ಹರಾಜು ರಾಷ್ಟ್ರೀಯ ಹಿತಸಕ್ತಿಯನ್ನು ಹೊಂದಿರಬೇಕು ಎಂದಿದೆ.
ಸರ್ಕಾರ ಹರಾಜು ಮೂಲಕ ನಿಕ್ಷೇಪಗಳನ್ನು ಹಂಚಲು ಬಯಸಿತ್ತು. ಆದರೆ ಹರಾಜು ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪದೋಷಗಳಿದ್ದವು.
“ದಿ ಕಲೆಕ್ಟಿವ್” ರಾಜೀವ್ ಚಂದ್ರಶೇಖರ್, ಆರ್‍ಕೆ ಸಿಂಗ್ ಮತ್ತು ಕಲ್ಲಿದ್ದಲು ಸಚಿವಾಲಯಕ್ಕೆ ಸವಿವರವಾದ ಪತ್ರಗಳನ್ನು ಕಳಿಸಿದೆ. ಸಚಿವಾಲಯದ ಪತ್ರ ದೊರೆತ ನಂತರ ಸವಿವರವಾದ ವರದಿಯನ್ನು ಮಾಡಲಾಗುವುದು.
ಬಿಜೆಪಿಗೆ ಕೊನೆ ಅವಕಾಶ
2014ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ತೀರ್ಪಿನ ಮೂಲಕ 204 ನಿಕ್ಷೇಪಗಳ ಹರಾಜನ್ನು ರದ್ದುಗೊಳಿಸಿತು. ಈ ಕಲ್ಲಿದ್ದಲು ನಿಕ್ಷೇಪಗಳನ್ನು 1993 ಮತ್ತು 2011ರ ನಡುವೆ ಮಾಡಿದ್ದಾಗಿದ್ದು ಅಕ್ರಮದಿಂದ ಕೂಡಿತ್ತು ಎಂದು ಹೇಳಿದೆ.
ಈ ಅವಧಿಯಲ್ಲಿ ಸರ್ಕಾರ ಅಧಿಕಾರಿಗಳನ್ನು ಒಳಗೊಂಡಿದ್ದ “ಸ್ಕ್ರೀನಿಂಗ್ ಕಮಿಟಿ” ಮೂಲಕ ನಿಕ್ಷೇಪಗಳನ್ನು ಹಂಚಿಕೆ ಮಾಡಿತ್ತು. ಸೂಕ್ತ ಖರೀದಿದಾರರನ್ನು ಆಯ್ಕೆ ಮಾಡಲು ಯಾವುದೇ ರೀತಿಯ ಹರಾಜುಗಳನ್ನು ಕೈಗೊಂಡಿರಲಿಲ್ಲ. ಆಗ ಸಿಎಜಿ ಲೆಕ್ಕ ಮಾಡಿ ಬೊಕ್ಕಸಕ್ಕೆ 1.86 ಲಕ್ಷ ಕೋಟಿ ನಷ್ಟವಾಗಿದೆ ಎಂದು ಹೇಳಿದೆ.
ಹಗರಣದ ಕುರಿತು ಸಿಎಜಿ 2012ರಲ್ಲಿ ಮೊದಲ ಬಾರಿಗೆ ಬಹಿರಂಗಪಡಿಸಿದಾಗ ಬಿಜೆಪಿ ವಿರೋಧ ಪಕ್ಷದಲ್ಲಿ ಇತ್ತು. ಇದು ಅತಿದೊಡ್ಡ ಹಗರಣವಾಗಿದ್ದು ಯುಪಿಎ-2ಗೆ ಭಾರಿ ಶಾಕ್ ನೀಡಿತ್ತು. ಇದನ್ನು ಬಿಜೆಪಿ ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿಕೊಂಡಿತು. ಬಿಜೆಪಿ ಇದರಿಂದ ಲಾಭ ಪಡೆಯುವುದಕ್ಕೋಸ್ಕರ ತನ್ನ 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಷಯವನ್ನು ಅಳವಡಿಸಿತ್ತು. ಮೂರು ತಿಂಗಳ ನಂತರ ಬಿಜೆಪಿ ಅಧಿಕಾರಕ್ಕೆ ಬಂದಿತು. ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ತೀರ್ಪ ಹೊರಬಂದಿತು.
ಹೊಸ ಸರ್ಕಾರ ಶೀಘ್ರದಲ್ಲಿಯೇ ನಿಕ್ಷೇಪಗಳ ಹರಾಜಿಗೆ ಹೊಸ ನೀತಿಯನ್ನು ರೂಪಿಸಿತು. ಸುಪ್ರೀಂ ಕೋರ್ಟ್ ತೀರ್ಪಿನ ಸರಿ ಸುಮಾರು 2 ತಿಂಗಳ ನಂತರ ಅಂದರೆ 2014ರ ಅಕ್ಟೋಬರ್‍ನಲ್ಲಿ ಕೇಂದ್ರ ಸರ್ಕಾರ ತನ್ನ ಮೊದಲ ಸುಗ್ರೀವಾಜ್ಞೆ ಹೊರಡಿಸಿ ಅದು ಕಲ್ಲಿದ್ದಲು ಕ್ಷೇತ್ರವನ್ನು ಹೊಸದಾಗಿ ರೂಪಿಸುವಂತಿತ್ತು. 2014ರ ಡಿಸೆಂಬರ್‍ನಲ್ಲಿ ಮೊದಲ ಸುಗ್ರೀವಾಜ್ಞೆಯನ್ನು ಪುನರ್ ರೂಪಿಸುವಂತೆ ಎರಡನೇ ಸುಗ್ರೀವಾಜ್ಞೆ ಹೊರಡಿಸಿತು. ಮತ್ತು 2015ರ ಫೆಬ್ರವರಿಯಲ್ಲಿ ಕೋಲ್ ಮೈನ್ಸ್ ಸ್ಪೆಷಲ್ ಪ್ರಾವಿನ್ಸ್ ಆಕ್ಟ್ ಜಾರಿಗೆ ತರಲಾಯಿತು.
ಬಿಜೆಪಿ ಈಗ ಕಲ್ಲಿದ್ದಲು ನಿಕ್ಷೇಪಗಳನ್ನು ಹರಾಜು ಮಾಡುತ್ತಿದೆ. ಈ ಹೊಸ ಹರಾಜು ಪ್ರಕ್ರಿಯೆ ಲೋಪದಿಂದ ಕೂಡಿದೆ ಎಂದು ಆರ್.ಕೆ.ಸಿಂಗ್ ಮತ್ತು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಸಿಂಗ್ ಅವರ ಆರಂಭಿಕ ಎಚ್ಚರಿಕೆ
2014ರ ಡಿಸೆಂಬರ್‍ನಲ್ಲಿ ಎರಡನೇ ಸುಗ್ರೀವಾಜ್ಞೆ ಹೊರಡಿಸುವ ಕೆಲ ಸಮಯದ ಮೊದಲು ಬಿಹಾರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಆರ್.ಕೆ.ಸಿಂಗ್ ಅವರು ಪ್ರಸ್ತಾವಿತ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದವರಲ್ಲಿ ಮೊದಲಿಗರು. ಐಎಎಸ್ ಅಧಿಕಾರಿಯಾಗಿದ್ದ ಸಿಂಗ್ ಬಿಹಾರದ ಗೃಹ ಇಲಾಖೆ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಮೊದಲ ಬಾರಿಗೆ 2014ರಲ್ಲಿ ಬಿಜೆಪಿ ಟಿಕೆಟ್ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ದರು.
ಈ ವಿಷಯವನ್ನು ಮೊದಲಿಗೆ ಸಂಸತ್ತಿನಲ್ಲಿ ಮಾತನಾಡಲು ಬಯಸಿದ್ದರು. ನಂತರ ತನ್ನ ಎಚ್ಚರಿಕೆಯನ್ನು ಸರ್ಕಾರರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದರು.
“ಕಲ್ಲಿದ್ದಲು ಕುರಿತ ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಈ ಪತ್ರ ಬರೆಯುತ್ತಿದ್ದೇನೆ. ಇದನ್ನು ಸಂಸತ್ತಿನಲ್ಲಿ ಪ್ರಶ್ನಿಸುವುದಕ್ಕಿಂತಲೂ ಉತ್ತಮ ಎಂದು ಭಾವಿಸಿದ್ದೇನೆ” ಎಂದು ಆರಂಭಿಸುವುದರೊಂದಿಗೆ ಆಗಿನ ಹಣಕಾಸು ಸಚಿವ ಅರುಣ್‌ಜೇಟ್ಲಿಗೆ ಪತ್ರ ಬರೆದಿದ್ದಾರೆ.
” ಮಿತಿಗೊಳಿಸಿದ ಈ ಕಲ್ಲಿದ್ದಲು ನಿಕ್ಷೇಪಗಳು ಖಾಸಗಿ ವಿದ್ಯುತ್ ಕಂಪನಿಗಳಿಗಾ, ಸಿಮೆಂಟ್ ಕಂಪನಿಗಳಿಗಾ ಮತ್ತು ಕಲ್ಲಿದ್ದಲು ಕಂಪನಿಗಳಿಗಾ, ಇವುಗಳಲ್ಲಿ ಕೇವಲ ಈ ಕಂಪನಿಗಳು ಮಾತ್ರವೇ ಹರಾಜಿನಲ್ಲಿ ಪಾಲ್ಗೊಳ್ಳುತ್ತವೆಯೇ, ಅತ್ಯಂತ ಕಡಿಮೆ ಬೆಲೆಯಲ್ಲಿ ಹರಾಜು ಮಾಡಲಾಗುತ್ತಿದೆಯೇ ಎಂದು ಅವರು ಕೇಳಿದ್ದರು.
ಅವರು ಪ್ರಸ್ತಾಪಿಸುತ್ತಿರುವುದೇನೆಂದರೆ ಹೊಸ ಕಾನೂನು ಕಲ್ಲಿದ್ದಲು ನಿಕ್ಷೇಪಗಳನ್ನು ಪ್ರತ್ಯೇಕಿಸದೆಯೇ, ಕಲ್ಲಿದ್ದಲನ್ನು ವಿದ್ಯುತ್ ಉತ್ಪಾದನೆ, ಸಿಮೆಂಟ್ ತಯಾರಿಕೆ, ಉಕ್ಕಿನ ಸ್ಥಾವರಗಳನ್ನು ನಡೆಸಲಿಕ್ಕಾಗಿಯೇ. ಈ ಕಂಪನಿಗಳು ಮಾತ್ರವೇ ಹರಾಜಿನಲ್ಲಿ ಪಾಲ್ಗೋಳ್ಳುತ್ತಿವೆಯೇ ಎಂದು ಕೇಳಿದ್ದರು.
ಸಿಂಗ್ ಎಚ್ಚರಿಕೆ ದೂರದೃಷ್ಟಿಯದು
ಹರಾಜು ಆರಂಭವಾದ ನಂತರ ಸಿಎಜಿ ಹೇಳಿದಂತೆ ಸರ್ಕಾರ ನಾಲ್ಕು ಕಲ್ಲಿದ್ದಲು ನಿಕ್ಷೇಪಗಳಿಗೆ ಬಿಡ್‌ಗಳನ್ನು ರದ್ದುಪಡಿಸಿತು. 2017ರ ಜುಲೈನಲ್ಲಿ ಈ ಕುರಿತು ಸಂಸತ್ತಿನಲ್ಲಿ ಉತ್ತರ ನೀಡಿದ ಕಲ್ಲಿದ್ದಲು ಸಚಿವ ಪಿಯುಷ್ ಗೋಯಲ್ ಹರಾಜುಗಳು ನ್ಯಾಯಬದ್ಧವಾಗಿ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.
“ಕಾರ್ಟೆಲೇಷನ್‌ಗೆ ಸಂಬಂಧಿಸಿದಂತೆ ನಾಲ್ಕು ದೂರುಗಳು ಬಂದವು. ಅಂತಿಮ ಹರಾಜು ನಡೆದ ನಾಲ್ಕು ಮುಕ್ತಾಯ ಬಿಡ್‌ಗಳಲ್ಲಿ ನಾಲ್ಕು ನಿಕ್ಷೇಪಗಳ ದರಗಳು ನ್ಯಾಯಬದ್ಧ ಬೆಲೆಯನ್ನು ತಂದುಕೊಡಲಿಲ್ಲ. ಆ ನಾಲ್ಕು ಬಿಡ್‌ಗಳೆಂದರೆ ಗಾರೇ ಪಲ್ಮಾ 4/2 ಮತ್ತು 4/3, ಗಾರಾ ಪಲ್ಮಾ 4/1 ಮತ್ತು ತಾರಾ. ಹೀಗಾಗಿ ಸರ್ಕಾರ ಈ ಬಿಡ್‌ಗಳನ್ನು ಅನುಮೋದಿಸಲಿಲ್ಲ.”
ಮೊದಲ ಸುತ್ತಿನ ಹರಾಜು ನಡೆದ ಒಂದು ವರ್ಷದ ನಂತರ ಕನಿಷ್ಠ ಎಂಟು ನಿಕ್ಷೇಪಗಳ ಹರಾಜಿನಲ್ಲಿ ಒಳಸಂಚು ನಡೆದಿದೆ ಎಂದು ಸಿಎಜಿ ಹೇಳಿತು. ಸರ್ಕಾರ ಬೊಕ್ಕಸಕ್ಕೆ ನ್ಯಾಯಬದ್ಧ ದರ ಸಿಗುವುದಿಲ್ಲ ಎಂದು ಹೇಳಿತು. ಪಿಯುಷ್ ಗೋಯಲ್ ಸಂಸತ್ತಿನಲ್ಲಿ ಪ್ರಸ್ತಾಪಿಸಿದ ನಾಲ್ಕು ನಿಕ್ಷೇಪಗಳಲ್ಲಿ ಈ ಹನ್ನೊಂದು ನಿಕ್ಷೇಪಗಳು ಇರಲಿಲ್ಲ. “ಅಲಾಟ್‌ಮೆಂಟ್” ಮತ್ತು “ಲಿಮಿಟೆಡ್ ಟೆಂಡರ್’ ಪರಿಕಲ್ಪನೆ ಅತ್ಯಂತ ಅಪಾಯಕಾರಿ. ಇದು ಹಗರಣಗಳಿಗೆ ದಾರಿ ಮಾಡಿಕೊಡಲಿದೆ ಎಂದು ಸಿಂಗ್ ಹೇಳಿದ್ದಾರೆ.
“ಲಿಮಿಟೆಡ್ ಟೆಂಡರ್” ಎಂಬುದು ಕಲ್ಲಿದ್ದಲು ನಿಕ್ಷೇಪಕ್ಕೆ ಟೆಂಡರ್ ಸಲ್ಲಿಸುವ ಕಂಪನಿಗೆ ನಿಯಮಗಳನ್ನು ಹೇರಿದರೆ, “ಅಲಾಟ್‌ಮೆಂಟ್” ಎಂಬುದು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಹಳೆಯ ನಿಯಮಗಳಿಗೆ ಸಂಬಂಧಿಸಿದ್ದಾಗಿದೆ. ಹೊಸ ಆಡಳಿತ ಸರ್ಕಾರದ ಕಂಪನಿಗಳಿಗೆ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚುವುದರ ಕುರಿತ ಪ್ರಸ್ತಾವನೆಯಾಗಿದೆ. ಸಿಂಗ್ ಅವರು ಈ ಕುರಿತು ಎಚ್ಚರಿಕೆ ನೀಡಿದ್ದರು.
ಅದಾನಿ ಗ್ರೂಪ್ ಅತಿಹೆಚ್ಚಿನ ಸಂಖ್ಯೆಯ ಒಪ್ಪಂದಗಳನ್ನು ಮಾಡಿಕೊಂಡಿತು. 2020ರ ಮಾಚ್Fನಲ್ಲಿ ಪ್ರಧಾನ ಮಂತ್ರಿಗಳ ಕಚೇರಿ( ಪಿಎಂಒ) ಮೂಲಕವಾಗಿಯೇ ಅತಿ ಹೆಚ್ಚಿನ ಒಪ್ಪಂದಗಳನ್ನು ಅದಾನಿ ಕಂಪನಿ ಮಾಡಿಕೊಂಡಿತು. ಸಿಂಗ್ ಅವರು ಹೇಳಿದ ಹೇಳಿಕೆಗಳಿಗೆ ಯಾರೂ ಕಿವಿಗೊಡಲಿಲ್ಲ.
ರಾಜೀವ್ ಚಂದ್ರಶೇಖರ್ ಎಚ್ಚರಿಕೆ
2015ರ ಫೆಬ್ರವರಿಯಲ್ಲಿ ಹೊಸ ಕಲ್ಲಿದ್ದಲು ಕಾನೂನು ರೂಪಿಸುವ ಹಲವು ವಾರಗಳ ಅಂತರದಲ್ಲಿ ರಾಜೀವ್ ಚಂದ್ರಶೇಖರ್ ಇಂತದೇ ಪತ್ರವನ್ನು ಪಿಯುಷ್ ಗೋಯಲ್‌ಗೆ ಬರೆದಿದ್ದರು.
” ಹೊಸ ಕಲ್ಲಿದ್ದಲು ಸುಗ್ರೀವಾಜ್ಞೆಗಳು ಸಂಪೂರ್ಣವಾಗಿ ಅಸ್ಪಷ್ಟವಾಗಿವೆ ಎಂದು ಇತ್ತೀಚೆಗೆ ಹೈಕೋರ್ಟ್ ಹೇಳಿದೆ ಎಂದು ರಾಜೀವ್ ಚಂದ್ರಶೇಖರ್ ಪತ್ರದಲ್ಲಿ ಬರೆದಿದ್ದರು. ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಕಂಪನಿಗಳ ಕುರಿತಾಗಿ ಅವರು ಹೇಳಿದ್ದರು. ಈ ಎರಡೂ ಕಂಪನಿಗಳ ಒಪ್ಪಂದಗಳು ಸರ್ಕಾರದ ನಿರ್ಧಾರದ ವಿರುದ್ಧವಾಗಿದೆ” ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದರು. ಈ ಕುರಿತು ಹೈಕೋರ್ಟ್ ಕೂಡ ಪ್ರಶ್ನಿಸಿತ್ತು.
ನೀವು ಸ್ಮರಿಸುವುದಾದಲ್ಲಿ ಈ ಹಿಂದೆಯೂ ನಾನು ಗಣಿಗಾರಿಕೆ ಕುರಿತಂತೆ ನಿಮ್ಮೊಂದಿಗೆ ನನ್ನ ಅನಿಸಿಕೆಗಳನ್ನು ಹಂಚಿಕೊಂಡಿದ್ದೆ. ಈ ಕುರಿತ ಮಸೂದೆಯನ್ನು ರಾಜ್ಯ ಸಭೆಯಲ್ಲಿ ಮಂಡಿಸಿದಾಗ ನನ್ನ ಅನಿಸಿಕೆಗಳನ್ನು ನಾನು ಹೇಳಿದ್ದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಆದರೆ ನನ್ನ ಅನಿಸಿಕೆಗಳನ್ನು ನೀವು ನಿರ್ಲಕ್ಷಿಸಿದಿರಿ ಎಂದಿದ್ದರು.
ರಾಜೀವ್ ಚಂದ್ರಶೇಖರ್ ಕರ್ನಾಟಕದಿಂದ ಆಯ್ಕೆಯಾಗಿರುವ ರಾಜ್ಯ ಸಭಾ ಸ್ವತಂತ್ರ ಸಂಸದರಾಗಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಅವರು ಬಹಿರಂಗವಾಗಿಯೇ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದರು. 2016ರ ಸೆಪ್ಟೆಂಬರ್‍ನಲ್ಲಿ ಅವರು ಕೇರಳ ಎನ್‌ಡಿಎ ಮುಖ್ಯಸ್ಥರಾಗಿ ಜವಾಬ್ದಾರಿ ವಹಿಸಿಕೊಂಡರು. ನಂತರ ಅವರು ಬಿಜೆಪಿಯ ರಾಷ್ಟ್ರೀಯ ವಕ್ತಾರರಾದರು. ನಂತರ 2021ರಲ್ಲಿ ಮೋದಿ ಸಂಪುಟದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವರಾದರು.
ತಾನು ಬರೆದಿರುವ ಪತ್ರದಲ್ಲಿ ರಾಜೀವ್ ಚಂದ್ರಶೇಖರ್ ಅವರು ಗೋಯಲ್ ಅವರಿಗೆ ಈ ಹಿಂದಿನ ಸರ್ಕಾರದಲ್ಲಿ ನಡೆದಿದ್ದ 2ಜಿ, ಕಲ್ಲಿದ್ದಲು, ಐರನ್ ಮತ್ತು ಓರ್ ಸೇರಿದಂತೆ ಹಲವು ಹಗರಣಗಳನ್ನು ಜ್ಞಾಪಿಸಿದ್ದಾರೆ.
ಕಲ್ಲಿದ್ದಲು ಹಂಚಿಕೆ ಕುರಿತು ಕರಡು ವರದಿಯನ್ನು ಹೇಗೆ ಲೋಪದಿಂದ ಕೂಡಿರುವಂತೆ ಬರೆದಿದ್ದಾರೆ ಎಂಬುದನ್ನು ಅವರು ಮತ್ತೊಮ್ಮೆ ಜ್ಞಾಪಿಸಿದ್ದಾರೆ. ಕರಡು ಬರೆಯುವ ಮೂಲದಲ್ಲಿಯೇ ಮೋದಿ ಅವರ ಸರ್ಕಾರದ ನೈಸರ್ಗಿಕ ಸಂಪನ್ಮೂಲಗಳ ಕುರಿತ ನೀತಿಯನ್ನು ಹೇಳುತ್ತದೆ.
ರಾಜೀವ್ ಚಂದ್ರಶೇಖರ್ ಅವರು ಗೋಯಲ್ ಅವರಿಗೆ ಪುನರ್ ಸ್ಮರಿಸುವಂತೆ ಹೇಳಿದ್ದು ಇಬ್ಬರೂ ಸಹ ಕಲ್ಲಿದ್ದಲು ಕ್ಷೇತ್ರದಲ್ಲಿ ಸ್ವತಂತ್ರ ನಿಯಂತ್ರಣ ಇಲ್ಲದಿರುವ ಕುರಿತು ಮಾತುಕತೆ ನಡೆಸಿದ್ದಾರೆ.
ಕಲ್ಲಿದ್ದಲು ಸಚಿವಾಲಯದ ಸಮರ್ಥನೆ
2015ರ ಸೆಪ್ಟೆಂಬರ್‍ನಲ್ಲಿ ಪಿಯುಷ್ ಗೋಯಲ್ ಎರಡು ಪತ್ರಗಳಿಗೆ ಉತ್ತರಿಸಿದ್ದಾರೆ. ಇಷ್ಟೊತ್ತಿಗಾಗಲೆ ಮೊದಲ ಹಂತದ ಹರಾಜು ಮುಗಿದಿತ್ತು.
ಆರ್.ಕೆ.ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಹೇಗೆ ಎರಡು ಹಂತದ ಹರಾಜು ನಡೆಯುತ್ತದೆ ಎಂಬುದನ್ನು ಅವರು ವಿವರಿಸಿದ್ದರು. ಮೊದಲನೆಯದು ಟೆಕ್ನಿಕಲ್ ರೌಂಡ್ ಎಂದು ಕರೆಯಲಾಗುವುದು. ಇಲ್ಲಿ ಟಾಪ್ ಐದು ಬಿಡ್ಡರ್‍ಗಳನ್ನು ಆಯ್ಕೆ ಮಾಡಲಾಗುವುದು. ಅಥವಾ ಶೇ.50ರಷ್ಟು ಬಿಡ್ಡರ್‍ಗಳನ್ನು ಆಯ್ಕೆ ಮಾಡಲಾಗುವುದು. ಇದರಲ್ಲಿ ಯಾರು ಅತಿ ಹೆಚ್ಚಿನ ಬಿಡ್ ಸಲ್ಲಿಸಿದ್ದರೆ ಅವರನ್ನು ಆಯ್ಕೆ ಮಾಡಲಾಗುವುದು. ಇಲ್ಲಿ ಆಯ್ಕೆಯಾದ ನಂತರ ಹಣಕಾಸು ಸುತ್ತು ನಡೆಯಲಿದೆ. ಇಲ್ಲಿ ಗರಿಷ್ಠ ಬಿಡ್ಡರ್ ಯಾರಿದ್ದರೆ ಅವರು ನಿಕ್ಷೇಪವನ್ನು ಪಡೆಯಲಿದ್ದಾರೆ.
ಕಾರ್ಟೆಲ್ ಸ್ಥಾಪನೆ ಮತ್ತು ಕಡಿಮೆ ದರಕ್ಕೆ ಬಿಡ್ ಸಲ್ಲಿಸುವ ಸಾಧ್ಯತೆಗಳು ಇಲ್ಲಿ ಇರುವುದಿಲ್ಲ ಎಂದು ಪಿಯುಷ್ ಗೋಯಲ್ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ರಾಜೀವ್ ಚಂದ್ರಶೇಖರ್‍ಗೆ ಬರೆದಿರುವ ಉತ್ತರದಲ್ಲಿ ಗೋಯಲ್ ಅವರು ಹರಾಜು ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆದಿವೆ ಎಂದು ಹೇಳಿದ್ದಾರೆ. ಗೋಯಲ್ ಹೇಳಿಕೊಂಡ ಮತ್ತು ಸರ್ಕಾರ ಹೇಳಿದಂತೆ ಪಾರದರ್ಶಕತೆ ಇರಲಿಲ್ಲ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ.
ಅನುವಾದ; ಜಿ ಆರ್ ಮುರಳಿ ಕೃಷ್ಣ